Tuesday, December 9, 2025
HomeTech Tips and Tricksಸೋಶಿಯಲ್ ಮೀಡಿಯಾ ಮೇಲೆ ಹೊಸ ನಿಯಂತ್ರಣ

ಸೋಶಿಯಲ್ ಮೀಡಿಯಾ ಮೇಲೆ ಹೊಸ ನಿಯಂತ್ರಣ

ಸೋಶಿಯಲ್ ಮೀಡಿಯಾ ವಿಚಾರದಲ್ಲಿ ಕಠಿಣ ರೂಲ್ಸ್ ತರಲಾಗ್ತಿದೆ. ಇನ್ನ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಾಮೆಂಟ್ ಮಾಡೋರಿಗೆ ಹೆವಿ ದಂಡ ಬೀಳುತ್ತೆ ಧರ್ಮ ಜನಾಂಗ ಭಾಷೆ ಈ ರೀತಿ ವಿಚಾರಗಳ ಮೇಲೆ ಕೆಟ್ಟದಾಗಿ ಕಾಮೆಂಟ್ ಮಾಡೋರು ಜೈಲು ಶಿಕ್ಷೆ ಫೇಸ್ ಮಾಡಬೇಕಾಗುತ್ತೆ ಹಾಗಿದ್ರೆ ಏನಿದು ಸರ್ಕಾರದ ಹೊಸ ಹೆಜ್ಜೆ ಇದರ ಪ್ರಕಾರ ಇನ್ಮುಂದೆ ಯಾವುದೆಲ್ಲ ಅಪರಾಧ ಅನಿಸಿಕೊಳ್ಳುತ್ತೆ ವಾಕ್ ಸ್ವಾತಂತ್ರ್ಯ ಏನಾದ್ರೂ ಉಲ್ಲಂಘನೆ ಆಗುತ್ತಾ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ಏನು ಹೇಳ್ತಿವೆ ಸರ್ಕಾರದ ಸ್ಪಷ್ಟನೆ ಏನು ಎಲ್ಲವನ್ನ ಕ್ವಿಕ್ ಆಗಿ ಅರ್ಥ ಮಾಡಿಕೊಳ್ತಾ ಹೋಗೋಣ.

ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈಯಕ್ತಿಕ ನಿಂದನೆ ಮತ್ತು ದ್ವೇಷ ಭಾಷಣ ವಿಪರೀತವಾಗಿ ಏರಿಕೆಯಾಗಿದೆ ಇದನ್ನ ತಡೆಗಟ್ಟಬೇಕು ಅನ್ನೋ ಉದ್ದೇಶಕ್ಕೆ ರಾಜ್ಯ ಸರ್ಕಾರ ಮಸೂದೆಯನ್ನ ಜಾರಿ ತರೋಕೆ ಮುಂದಾಗಿದೆ. ಈ ಮಸೂದೆ ಹೆಸರು ಕರ್ನಾಟಕ ಹೇಟ್ ಸ್ಪೀಚ್ ಅಂಡ್ ಹೇಟ್ ಕ್ರೈಮ್ಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಆಕ್ಟ್ 2025 ಇದಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ಕೊಟ್ಟಿದೆ. ಇದರ ಪ್ರಕಾರ ನೀವು ಎದುರುಗಡೆ ನಿಂತು ಬಾಯಿಗೆ ಬಂದಂಗೆ ಅಶ್ಲೀಲವಾಗಿ ಬೈದು ಕೆಟ್ಟ ಕೆಟ್ಟದಾಗಿ ಬೈದ್ರೆ ಹೇಗೆ ಅದನ್ನ ಕನ್ಸಿಡರ್ ಮಾಡಲಾಗುತ್ತೋ ಹಂಗೆ ಕನ್ಸಿಡರ್ ಮಾಡಲಾಗುತ್ತೆ ನೀವು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಕೆಟ್ಟ ಕೆಟ್ಟದಾಗಿ ಹಾಕಿದ್ರು ಕೂಡ ಅಪರಾಧ ಅಂತ ಕನ್ಸಿಡರ್ ಮಾಡಲಾಗುತ್ತೆ ಎಮೋಷನಲ್ ಸೈಕಲಾಜಿಕಲ್ ದೈಹಿಕ ಸಮಸ್ಯೆ ಸೋಷಿಯಲ್ ಅಥವಾ ಎಕಾನಾಮಿಕಲ್ ಇದರಲ್ಲಿ ಯಾವುದಾದರೂ ಹಾನಿ ಬೇಕಾದರೂ ಆಗಬಹುದು ಈ ಮಸೂದೆಯಲ್ಲಿ ಮುಖ್ಯವಾಗಿ ಎರಡು ವಿಚಾರದ ಮೇಲೆ ಫೋಕಸ್ ಮಾಡಲಾಗಿದೆ ಒಂದು ದ್ವೇಷ ಅಪರಾಧ ಹೇಟ್ ಕ್ರೈಮ್ಸ್ ಇನ್ನೊಂದು ದ್ವೇಷ ಭಾಷಣ ಹೇಟ್ ಸ್ಪೀಚ್ ಎರಡು ಶಿಕ್ಷೆ ನಿಗತಿಪಡಿಸಲಾಗಿದೆ ಶಿಕ್ಷೆ ಪ್ರಮಾಣದ ಬಗ್ಗೆ ನಿಮಗೆ ಮಾಹಿತಿಯನ್ನ ಕೊಡ್ತೇವೆ ತುಂಬಾ ಇಂಪಾರ್ಟೆಂಟ್ ಇದು ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಹಾಕಬಹುದು ಅನ್ನೋ ವಾತಾವರಣ.

ಈಗ ಯಾವುದೆಲ್ಲ ದ್ವೇಷ ಅಪರಾಧ ಮತ್ತು ಯಾವುದೆಲ್ಲ ದ್ವೇಷ ಭಾಷಣ ಅನಿಸಿಕೊಳ್ಳುತ್ತೆ ಅದನ್ನ ನೋಡ್ತಾ ಹೋಗೋಣ ದ್ವೇಷ ಅಪರಾಧ ಯಾವುದೇ ವ್ಯಕ್ತಿಗೆ ಹಾನಿ ಮಾಡೋ ಅಥವಾ ಹಾನಿಯನ್ನ ಪ್ರಚೋದಿಸುವ ಹಾಗೆ ದ್ವೇಷವನ್ನ ಉತ್ತೇಜಿಸುವ ಹಾಗೆ ಅಥವಾ ದ್ವೇಷವನ್ನ ಹರಡೋ ಹಾಗೆ ಕೆಲಸಗಳಲ್ಲಿ ತೊಳಗಿಸಿಕೊಂಡರೆ ಅದು ದ್ವೇಷ ಅಪರಾಧ ಎನಿಸಿಕೊಳ್ಳುತ್ತೆ ಧರ್ಮದ ಬಗ್ಗೆ ಜನಾಂಗದ ಜಾತಿ ಅಥವಾ ಸಮುದಾಯ ಲಿಂಗ ಲೈಂಗಿಕ ದೃಷ್ಟಿಕೋನ ಹುಟ್ಟಿದ ಸ್ಥಳ ವಾಸಸ್ಥಳ ಭಾಷೆ ಅಂಗವೈಕಲ್ಯ ಬುಡಕಟ್ಟು ಈ ವಿಚಾರದಲ್ಲಿ ವಿಕ್ಟಿಮ್ ಅಥವಾ ಅವರ ಫ್ಯಾಮಿಲಿಗೆ ಹಾನಿಯಾದರೆ ಅದನ್ನ ದ್ವೇಷ ಅಪರಾಧ ಅಂತ ಕನ್ಸಿಡರ್ ಮಾಡಲಾಗುತ್ತೆ ದ್ವೇಷ ಭಾಷಣ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಅಥವಾ ಇನ್ನೊಂದು ಸಮುದಾಯಕ್ಕೆ ಹಾನಿ ಮಾಡಲೇಬೇಕು ಅಂತ ಉದ್ದೇಶಪೂರ್ವಕವಾಗಿ ಏನಾದರೂ ಪ್ರಕಟಿಸುದು ಪಬ್ಲಿಷ್ ಮಾಡೋದು ಹರಡೋದು ಅಥವಾ ಪ್ರತಿಪಾದಿಸುದು ದ್ವೇಷ ಭಾಷಣ ಅನಿಸಿಕೊಳ್ಳುತ್ತೆ ಹೇಟ್ ಸ್ಪೀಚ್ ಅಂತ ಧರ್ಮ ಜನಾಂಗ ಜಾತಿ ತತ್ವ ಸಮುದಾಯ ಲಿಂಗ ಲೈಂಗಿಕ ದೃಷ್ಟಿಕೋನ ಜನ್ಮಸ್ಥಳ ವಾಸಸ್ಥಳ ಭಾಷೆ ಅಂಗವೈಕಲ್ಯ ಬುಡಕಟ್ಟು ಇವುಗಳಲ್ಲಿ ಯಾವುದನ್ನಾದರೂ ಟಾರ್ಗೆಟ್ ಮಾಡಿಕೊಂಡು ಹಾನಿಕಾರಕ ವಿಷಯವನ್ನ ಪ್ರಕಟಿಸುವುದು ಪ್ರಚಾರ ಮಾಡೋದನ್ನ ಹಾಗೆ ದ್ವೇಷ ಹರಡೋ ರೀತಿ ಹೇಳಿಕೆ ಕೊಡೋದನ್ನ ಕೂಡ ದ್ವೇಷ ಭಾಷಣ ಹೇಟ್ ಸ್ಪೀಚ್ ಅಂತ ಕನ್ಸಿಡರ್ ಮಾಡಲಾಗುತ್ತೆ ಇದು ಕೇವಲ ವ್ಯಕ್ತಿಗಳಿಗೆ ಮಾತ್ರ ಅಲ್ಲ ವ್ಯಕ್ತಿಗಳ ಗುಂಪಿಗೆ ಸಂಘ ಸಂಸ್ಥೆಗಳಿಗೆ ಕಂಪನಿಗಳಿಗೆ ಎಲ್ಲರಿಗೂ ಇದು ಅನ್ವಯ ಆಗುತ್ತೆ ಅಲ್ಲಿ ಇಂಚಾರ್ಜ್ ಆಗಿ ಉಸ್ತುವಾರಿಯಾಗಿರು ವ್ಯಕ್ತಿಗಳನ್ನ ಹೊಣೆಗಾರರನ್ನಾಗಿ ಮಾಡಬಹುದು ಸ್ನೇಹಿತರೆ ತುಂಬಾ ಮುಖ್ಯ ಕಳೆದ ಎರಡು ವರ್ಷಗಳಲ್ಲಿ 41 ಕೋಮು ಗಲಬೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2023 ರಲ್ಲಿ ಮೂರು ಹಾಗೂ 2024 ರಲ್ಲಿ 38 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಮದ್ದೂರಲ್ಲಿ ಮತಿಯ ಸಂಘರ್ಷ ನಡೆದಿತ್ತು.

ಕೆಲ ದಿನಗಳ ಹಿಂದೆ ಹನುಮಾನ್ ಜಯಂತಿ ಮೆರವಣಿಗೆ ಟೈಮ್ನಲ್ಲಿ ಶ್ರೀರಂಗಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಕೋಮು ದ್ವೇಷದ ಭಾಷಣ ಮತ್ತು ಹೇಳಿಕೆಗಳು ರಾಜ್ಯದಲ್ಲಿ ಈ ತರದ ಮತೀಯ ಸಂಘರ್ಷಗಳಿಗೆ ಕಾರಣ ಆಗಿವೆ. ಒಂದು ಧರ್ಮ ಜಾತಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿ ಭಾಷಣ ಮಾಡಲಾಗ್ತಿದೆ. ಇದರ ವಿರುದ್ಧ ಒಂದಿಷ್ಟು ಕ್ರಮ ಆಗ್ತಿದೆ ಆದರೂ ಕೂಡ ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಆಗ್ತಿಲ್ಲ ಅನ್ನೋ ಆರೋಪ ಕೂಡ ಇದೆ. ಜೊತೆಗೆ ಕರ್ನಾಟಕದಲ್ಲಿ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶ ಅಂತ ಕರೆಯಲ್ಪಡು ಗುರುತಿಸಲ್ಪಡು ಕರಾವಳಿಯಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ 24 ಪ್ರಕರಣ ದಾಖಲಾಗಿದೆ. ಅಷ್ಟು ಮಾತ್ರ ಅಲ್ಲ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 300 ಕೋಮು ಘರ್ಷಣೆ ಆಗಿದ್ದಾವೆ. ಈ ರೀತಿ ಪ್ರಕರಣಗಳು ಹೆಚ್ಚಾಗ್ತಿರೋದ್ರಿಂದ ಸಮಾಜದಲ್ಲಿ ದ್ವೇಷವನ್ನ ಕಂಟ್ರೋಲ್ ಮಾಡೋ ನಿಟ್ಟಿನಲ್ಲಿ ಮಸೂದೆ ಬಹಳ ಇಂಪಾರ್ಟೆಂಟ್ ಅಂತ ಸರ್ಕಾರ ಹೇಳ್ತಾ ಇದೆ. ಶಿಕ್ಷೆ ಏನೇನು? ಈಗ ಮುಖ್ಯವಾಗಿರೋ ವಿಚಾರಕ್ಕೆ ಬರೋಣ. ಯಾರಾದ್ರೂ ದ್ವೇಷ ಅಪರಾಧ ಕೇಸ್ನಲ್ಲಿ ತಗಲು ಹಾಕೊಂಡ್ರೆ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಅಥವಾ 5000 ರೂಪಾಯವರೆಗೆ ದಂಡ ವಿಧಿಸಬಹುದು ಅಥವಾ ಕೆಲ ಬಾರಿ ಎರಡು ಇರುತ್ತೆ ಈ ಅಪರಾಧಗಳಿಗೆ ಬೇಲ್ ಕೂಡ ಸಿಗಲ್ಲ ಹಾಗೆ ದ್ವೇಷ ಭಾಷಣಕ್ಕೂ ಕೂಡ ಸೇಮ್ ಶಿಕ್ಷೆ ಮತ್ತು ದಂಡ ಇದೆ ಹಾಗೆ ಇದರಲ್ಲೂ ಕೂಡ ಬೇಲ್ ಸಿಗೋದು ಕಷ್ಟ ವಾಕ್ ಸ್ವಾತಂತ್ರ್ಯದ ಕಥೆ ಏನು ಕೆಲವರು ಇದನ್ನ ಮೆನ್ಷನ್ ಮಾಡ್ತಾ ಇದ್ದಾರೆ ನಮ್ಮ ಸಂವಿಧಾನದ ಆರ್ಟಿಕಲ್ 19ಒಎ ನಲ್ಲಿ ಅವಕಾಶ ಕೊಡಲಾಗಿದೆಯಲ್ಲ ವಾಕ್ ಸ್ವಾತಂತ್ರ್ಯ ಅಂತ ಹೇಳಿ ಆದರೆ ವಾಕ್ ಸ್ವಾತಂತ್ ಸ್ವತಂತ್ ಅಂದ್ರೆ ಅಬ್ಸಲ್ಯೂಟ್ ಫ್ರೀಡಮ್ ಅಲ್ಲ ಏನು ಬೇಕಾದ್ರೂ ಮಾತಾಡಬಹುದು ಅಂತ ತೋಚಿದ್ದೆಲ್ಲ ಮಾತಾಡಿ ಇನ್ನೊಬ್ಬರಿಗೆ ನಾನು ಡ್ಯಾಮೇಜ್ ಮಾಡ್ತೀನಿ ಅನ್ನೋ ಹಕ್ಕು ಯಾರಿಗೂ ಇಲ್ಲ ಇಂತ ಅಜಾತರ್ಯ ಆಗಬಾರದು ಅಂತಲೇ ಸಂವಿಧಾನದ 19 ಎರಡನೇ ವಿಧಿಯಲ್ಲಿ ಕೆಲ ನಿರ್ಬಂಧ ಹಾಕೋದಕ್ಕೆ ಸರ್ಕಾರಗಳಿಗೆ ಅವಕಾಶ ಕೊಡಲಾಗಿದೆ.

ಯಾವುದಕ್ಕೆ ನಿರ್ಬಂಧ ಹಾಕಬಹುದು ಅಂತ ನೋಡೋದಾದ್ರೆ ಫಸ್ಟ್ ಭಾರತದ ಸಾರ್ವಭೌಮತೆ ಅಥವಾ ಸಮಗ್ರತೆ ರಾಜ್ಯದ ಭದ್ರತೆ ವಿದೇಶಗಳೊಂದಿಗಿನ ಇದಕ್ಕೆಲ್ಲ ಧಕ್ಕೆ ತರೋ ವಿಚಾರದಲ್ಲಿ ಬಾಯಿಗೆ ಬಂದಂಗೆ ಮಾತಾಡೋ ಹಾಗಿಲ್ಲ ಹಾಗೆ ಸಾರ್ವಜನಿಕ ಸುವ್ಯವಸ್ಥೆ ಸಭ್ಯತೆ ಅಥವಾ ನೈತಿಕತೆ ಕೋರ್ಟ್ ಬಗ್ಗೆ ತಿರಸ್ಕಾರ ಮಾಡೋದು ಮಾನನಷ್ಟ ಮತ್ತು ಅಪರಾಧಕ್ಕೆ ಪ್ರಚೋದನೆ ಇಂತ ವಿಚಾರಗಳಲ್ಲಿ ಮಾತನಾಡೋದನ್ನ ಅಪರಾಧ ಅಂತ ಕನ್ಸಿಡರ್ ಮಾಡಬಹುದು ಸಂಪೂರ್ಣ ವಾಕ್ ಸ್ವಾತಂತ್ರ್ಯ ಇಲ್ಲ ಸುಪ್ರೀಂ ಕೋರ್ಟ್ ಕೂಡ ಇದನ್ನ ಹಲವು ಬಾರಿ ಹೇಳಿದೆ ವಾಕ್ ಸ್ವಾತಂತ್ರಕ್ಕೆ ಸಂಬಂಧಪಟ್ಟಂತೆ ಮೂರು ಬೇರೆ ಬೇರೆ ಕೇಸ್ಗಳನ್ನ ವಿಚಾರಣೆ ಮಾಡೋ ವೇಳೆ ಕೂಡ ಇದನ್ನ ಹೇಳಿದೆ ವಾಕ್ ಸ್ವಾತಂತ್ರ್ಯ ಅನ್ನೋದು 100% ಅಬ್ಸಲ್ಯೂಟ್ ಆಗಿರೋಕ್ಕೆ ಸಾಧ್ಯ ಇಲ್ಲ ಅದರ ಮೇಲೆ ನಿರ್ಬಂಧಗಳನ್ನ ಹಾಕೋ ಅವಶ್ಯಕತೆ ಇದೆ ಅಂತ ಜಸ್ಟಿಸ್ ಬಿವಿ ನಾಗರತ್ನ ಮತ್ತು ಜಸ್ಟಿಸ್ ಕೆ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ ಸುಪ್ರೀಂ ಕೋರ್ಟ್ ಆಡಳಿತ ವಿಪಕ್ಷ ಗಲಾಟೆ ಈ ಬಿಲ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ ಸೈದ್ಧಾಂತಿಕ ವಿಚಾರಗಳಲ್ಲಿ ಏನಾದ್ರೂ ಮಂಡಿಸಿದ್ರು ಕೂಡ ಅದನ್ನು ಇವರು ದ್ವೇಷ ಭಾಷಣ ಅಂತ ಹೇಳಿ ಪೇಂಟ್ ಮಾಡಿ ಆಕ್ಷನ್ ತಗೊಂಡು ಟಾರ್ಗೆಟ್ ಮಾಡೋ ಚಾನ್ಸಸ್ ಇದೆ ಅಂತ ಬಿಜೆಪಿ ಹೇಳ್ತಾ ಇದೆ ಆದರೆ ಗೃಹ ಮಂತ್ರಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ ಬಿಜೆಪಿ ನಾಯಕರನ್ನ ಟಾರ್ಗೆಟ್ ಮಾಡೋ ಉದ್ದೇಶ ನಮಗಿಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದಾರೆ ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರ್ತೀವಾ ಬಿಜೆಪಿ ಯವರು ಬರಲ್ವಾ ಯಾರೇ ಬಂದ್ರು ಕಾಯ್ದೆ ಅದೇ ಇರುತ್ತಲ್ವಾ ಅಂತ ಪರಮೇಶ್ವರ್ ಹೇಳಿದ್ದಾರ.

ಡಿಸೆಂಬರ್ ಎಂಟರಿಂದ ಶುರುವಾಗುವ ಬೆಳಗಾವಿ ಅಧಿವೇಶನದಲ್ಲಿ ಇದು ಮಂಡನೆ ಆಗುತ್ತೆ ಕ್ಯಾಬಿನೆಟ್ ಆಲ್ರೆಡಿ ಅಪ್ರೂವಲ್ ಕೊಟ್ಟಿದೆ ಅದಕ್ಕೆ ಈ ವೇಳೆ ಮಸೂದೆ ಪರ ಮತ್ತು ವಿರೋಧ ಚರ್ಚೆ ಆಗುತ್ತೆ ಬಿಜೆಪಿ ಯವರ ಪ್ರಶ್ನೆಗಳಿಗೂನು ಸರ್ಕಾರ ಉತ್ತರ ಕೊಡೋ ಪ್ರಯತ್ನ ಮಾಡುತ್ತೆ ಈ ಮಸೂದೆ ಜಾರಿಗೆ ಬಂದಮೇಲೆ ಎಷ್ಟರ ಮಟ್ಟಿಗೆ ಸಮಾಜದಲ್ಲಿ ಫಿರಂಗಿ ಬಾಯಿ ಹಿಡ್ಕೊಂಡಿದ್ದಾರಲ್ಲ ಕೆಲವರೆಲ್ಲ ತೋಪು ಬಾಯಿ ಅಲ್ಲ ಅದು ತೋಪು ಹೋಪ್ ತಾರ ಇಟ್ಕೊಂಡಿರ್ತಾರೆ ಹಾರಿಸ್ತಾ ಇರ್ತಾರೆ ಸಿಕ್ಕಾಬಟ್ಟೆ ಅವರ ಬಾಯಿಗಳು ಸ್ವಲ್ಪ ನಿಯಂತ್ರಣಕ್ಕೆ ಬರುತ್ತೆ ಅನ್ನೋದನ್ನ ನೋಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments