Monday, December 8, 2025
HomeStartups and BusinessParle G ಸಾವಿರಾರು ಕೋಟಿ ಲಾಭ ಹೇಗೆ ಮಾಡುತ್ತೆ?

Parle G ಸಾವಿರಾರು ಕೋಟಿ ಲಾಭ ಹೇಗೆ ಮಾಡುತ್ತೆ?

ಭಾರತದಲ್ಲಿ ಒಂದು ಕಾಲ ಇತ್ತು ಆಗ ಕೆಲ ಹಿಂದೂ ಮತ್ತು ಜೈನ ಮತಾವಲಂಬಿ ಜನರು ಬಿಸ್ಕೆಟ್ನ್ನ ತಿನ್ನೋದಕ್ಕೂ ಹೆದುರುತಾ ಇದ್ರು ಪಾರ್ಲೆ ಕಂಪನಿ ಬಿಸ್ಕೆಟ್ನ್ನ ತಯಾರಿಸೋಕೆ ಶುರು ಮಾಡಿ ಹತ್ತತ್ರ ನೂರು ವರ್ಷಗಳಾದರೂ ಈಗಲೂ ಬಿಸ್ಕೆಟ್ ಪ್ಯಾಕೆಟ್ನ ಬೆಲೆ ಹೆಚ್ಚಳ ಮಾಡದೀರಾ ಪ್ರತಿವರ್ಷ ಸಾವಿರಾರು ಕೋಟಿ ಲಾಭ ಮಾಡ್ತಿದೆ ಪಾರ್ಲೆಆಗ್ರೋ ಮಿಸ್ಲರಿ ಇವೆಲ್ಲ ಒಂದೇ ಕಂಪನಿನ ಅನ್ನೋ ಎಷ್ಟೋ ಡೌಟ್ಗಳನ್ನ ತಿಳ್ಕೊಳ್ಳೋಣ. ನಿಮ್ಮ ಸಪೋರ್ಟ್ ಅನ್ನ ಕೊಡಿ ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಬಿಸ್ಕೆಟ್ ಅನ್ನೋದು ಕಬ್ಬಿಣದ ಕಡಲೆಯಾಗಿತ್ತು 19ನೇ ಶತಮಾನದಲ್ಲಿ ಬ್ರಿಟಿಷ್ ಭಾರತದಲ್ಲಿ ಒಂದು ಬಿಸ್ಕೆಟ್ನ ಡಬ್ಬಿ ಬರೋದು ಇದರ ಮೇಲೆ ಹಂಟ್ಲಿ ಅಂಡ್ ಪಾಲ್ಮರ್ಸ್ ಅನ್ನೋ ಹೆಸರು ಇರೋದು ಇದು ತುಂಬಾ ತುಂಬಾ ಕಾಸ್ಟ್ಲಿ ಆಗಿದ್ದ ಬಿಸ್ಕೆಟ್ ಇದನ್ನ ಬರಿ ಬ್ರಿಟಿಷ್ ಅಧಿಕಾರಿಗಳು ಮಾತ್ರ ತಿಂತಾ ಇದ್ರು ದಿನ ಕಳೆದಂತೆ ಈ ಬಿಸ್ಕೆಟ್ ಅನ್ನ ಭಾರತದ ರಾಜ ಮಹಾರಾಜರು ಮತ್ತು ಶ್ರೀಮಂತರು ಖರೀದಿ ಮಾಡಿ ತಿನ್ನೋದಕ್ಕೆ ಶುರು ಮಾಡ್ತಾರೆ ಇದರ ಬೆಲೆ ಅದೆಷ್ಟು ಜಾಸ್ತಿ ಇತ್ತಂದ್ರೆ ಇದನ್ನ ಮಿಡಲ್ ಕ್ಲಾಸ್ ಮತ್ತು ಬಡವರು ಕನಸಲ್ಲೂ ತಿನ್ನೋದಕ್ಕೆ ಹೆದರುತಾ ಇದ್ರು ಆಗ ಶ್ರೀಮಂತರು ಈ ಬಿಸ್ಕೆಟ್ನ್ನ ತಿಂತಿದ್ರು ಸರಿ ಆದರೆ ಈ ಬಿಸ್ಕೆಟ್ ಅನ್ನ ಮನೆಗೆ ತರೋದು ಅಥವಾ ಮನೇಲಿ ಇಡೋದಕ್ಕೆ ಹೆದರುತಾ ಇದ್ರು ಯಾಕಂದ್ರೆ ಈ ಬಿಸ್ಕೆಟ್ನ್ನ ತಯಾರಿಸೋಕೆ ಮೊಟ್ಟೆಯನ್ನ ಬಳಸ್ತಾ ಇದ್ರು ಬಿಸ್ಕೆಟ್ನಲ್ಲಿ ಮೊಟ್ಟೆ ಹಾಕಿರ್ತಾರೆ ಅನ್ನೋ ಕಾರಣಕ್ಕೆ ಕೆಲ ಹಿಂದೂ ಮತ್ತು ಜೈನ ಮತಾವಲಂಬಿ ಜನರು ಬಿಸ್ಕೆಟ್ ಅನ್ನ ಮುಟ್ಟೋದಕ್ಕೂ ಹೆದುರುತ್ತಿದ್ರು ಇದರಿಂದ ಬಿಸ್ಕೆಟ್ ಗಳು ಭಾರತದಲ್ಲಿ ಮುಟ್ಟಲೊಲ್ಲದ ವಸ್ತು ಆಗಿತ್ತು ಈ ಪ್ರಾಬ್ಲಮ್ಗೆ ಸೊಲ್ಯೂಷನ್ ಅನ್ನ ಲಾಲಾ ರಾಧಾ ಮೋಹನ್ ಅನ್ನೋವರು ಕೊಡ್ತಾರೆ ಇವರು 1898 ರಲ್ಲಿ ದೆಹಲಿ ಹಿಂದೂ ಬಿಸ್ಕೆಟ್ ಕಂಪನಿ ಅನ್ನೋ ಒಂದು ಕಂಪನಿನ ಸ್ಥಾಪಿಸುತ್ತಾರೆ ಈ ಬಿಸ್ಕೆಟ್ ಅನ್ನ ಪ್ರತಿಯೊಬ್ಬ ಭಾರತೀಯರು ಖರೀದಿ ಮಾಡಬೇಕಂತ ಇವರು ತಮ್ಮ ಬಿಸ್ಕೆಟ್ಗಳನ್ನ ಬರಿ ಬ್ರಾಹ್ಮಣರು ಮತ್ತು ಮೇಲ್ಜಾತಿಯ ಜನರಿಂದ ತಯಾರಿ ಮಾಡ್ತಾ ಇದ್ರು.

ಈ ಕಂಪನಿ ತಮ್ಮ ಮೊದಲನೇ ವರ್ಷದಲ್ಲಿ ಒಂದು ಅಡ್ವರ್ಟೈಸ್ಮೆಂಟ್ ಅನ್ನ ಕೊಡುತ್ತೆ ಅದರಲ್ಲಿ ಈ ರೀತಿ ಹೇಳುತ್ತೆ ನಮ್ಮ ಬಿಸ್ಕೆಟ್ ಅನ್ನ ಬೇಕಿಂಗ್ ಇಂದ ಹಿಡಿದು ಪ್ಯಾಕಿಂಗ್ ವರೆಗೂ ಮೇಲ್ಜಾತಿಯ ಹಿಂದೂಗಳೇ ತಯಾರಿಸುತ್ತಾರೆ ನಾವು ನಮ್ಮ ಬಿಸ್ಕೆಟ್ನ ತಯಾರಿಕೆಯಲ್ಲಿ ಬರಿ ಹಾಲನ್ನೇ ಬಳಸ್ತೀವಿ ನೀರು ಅಥವಾ ಬೇರೆ ಕೆಮಿಕಲ್ಸ್ ಅನ್ನ ಬಳಸುದಿಲ್ಲ ಅಂತ ಹೇಳುತ್ತೆ ಇದರಿಂದ ಈ ಬಿಸ್ಕೆಟ್ ಅಲ್ಲಿ ಯಾವುದೇ ಮೊಟ್ಟೆ ಬಳಸಿಲ್ಲ ಅಂತ ಪ್ರತಿಯೊಬ್ಬರ ತಿನ್ನೋದಕ್ಕೆ ಶುರು ಮಾಡ್ತಾರೆ ಇದರಿಂದ ಇದರ ಸೇಲ್ಸ್ ಹೆಚ್ಚಾಗಿ ಬೇರೆಯವರು ಇದೇ ತರ ಬಿಸ್ಕೆಟ್ ಅನ್ನ ತಯಾರಿಸೋಕೆ ಶುರು ಮಾಡ್ತಾರೆ ಇದರಿಂದ ಈ ಬಿಸ್ಕೆಟ್ ನ ಒರಿಜಿನಲ್ ಬ್ರಾಂಡ್ ಆದ ಹಿಂದೂ ಬಿಸ್ಕೆಟ್ ಕಂಪನಿಗೆ ನಷ್ಟ ಉಂಟಾಗಿ ಕೊನೆಗೆ ಇದು ಬ್ರಿಟಾನಿಯಾ ಕಂಪನಿ ಜೊತೆ ಮರ್ಜ್ ಆಗುತ್ತೆ ಎಷ್ಟೇ ಬಿಸ್ಕೆಟ್ ಕಂಪನಿಗಳ ಕಾಪಿಸ್ ಬಂದರು ಸಹ ಬಿಸ್ಕೆಟ್ನ ಬೆಲೆ ಕಡಿಮೆ ಆಗಲೇ ಇಲ್ಲ ಇನ್ನು ಬಿಸ್ಕೆಟ್ ಬಡವರಿಗೆ ದೂರದ ಬೆಟ್ಟ ಆಗಸ್ಟ್ 7 1905ರಲ್ಲಿ ಮಹಾತ್ಮಾಗಾಂಧಿ ಅವರ ಮುಂದಾಳತ್ವದಲ್ಲಿ ಸ್ವದೇಶಿ ಚಳುವಳಿ ನಡೆಯುತ್ತೆ ಇದರಿಂದ ಭಾರತೀಯರು ವಿದೇಶಿ ವಸ್ತುಗಳನ್ನ ಬಹಿಷ್ಕರಿಸಿ ನಮ್ಮ ದೇಶದಲ್ಲೇ ತಯಾರಾದ ವಸ್ತುಗಳನ್ನ ಬಳಸೋಕೆ ಆಸಕ್ತಿ ತೋರಿಸ್ತಾರೆ ಇದೇ ಟೈಮಲ್ಲಿ ಭಾರತದಲ್ಲಿ ಎಷ್ಟೋ ಬಿಸಿನೆಸ್ ಮತ್ತು ಇಂಡಸ್ಟ್ರಿಗಳು ಶುರುವಾಗುತ್ತೆ ಇದೇ ಹೊತ್ತಲ್ಲಿ ಗುಜರಾತ್ನ ಒಬ್ಬ ಟೈಲರ್ ಆದ ಮೋಹನ್ಲಾಲ್ ದಯಾಲ್ ಅವರಿಗೆ ನಾನು ಒಂದು ಸ್ವದೇಶಿ ವಸ್ತು ತಯಾರಿಸಿ ದೇಶಸೇವೆ ಮಾಡಬೇಕು ಅನ್ನೋ ಆಸೆ ಹುಟ್ಟುತ್ತೆ ಇದಕ್ಕೆ ಅವರು ತಮ್ಮದೇ ಸ್ವಂತ ಕಾಫಿ ಮತ್ತು ಕ್ಯಾಂಡಿ ಬಿಸಿನೆಸ್ ಅನ್ನ ಮಾಡಬೇಕು ಅಂಕೊತಾರೆ. ಬಿಸಿನೆಸ್ ಐಡಿಯಾ ಏನು ಇತ್ತು ಆದರೆ ಇದನ್ನ ಹೇಗೆ ಮಾಡಬೇಕು ಅನ್ನೋದು ಗೊತ್ತಿರಲಿಲ್ಲ. ಅದಕ್ಕೆ ಇವರು ಇದನ್ನ ಕಲಿಯೋಕೆ ಜರ್ಮನಿಗೆ ಹೋಗಿ ಟಾಫಿ ಮೇಕಿಂಗ್ ಟೆಕ್ನಿಕ್ಸ್ ಅನ್ನ ಕಲಿತು ಹಾಗೆ ಭಾರತಕ್ಕೆ ಬರ್ತಾ ಟಾಫಿ ತಯಾರಿಸೋ ಮಷೀನ್ ಅನ್ನ ತರ್ತಾರೆ. ನಂತರ ಬಾಂಬೆಯ ವಿಲ್ಲೆ ಪಾರ್ಲೆ ಜಾಗದಲ್ಲಿ ಒಂದು ಮುಚ್ಚಿರೋ ಫ್ಯಾಕ್ಟರಿನ ಖರೀದಿ ಮಾಡ್ತಾರೆ.

ಟಾಫಿ ತಯಾರಿಸೋ ಮಿಷಿನ್ ಅನ್ನ ಇಟ್ಟು ಟಾಫಿ ಮತ್ತು ಕ್ಯಾಂಡಿಯ ತಯಾರಿನ ಶುರು ಮಾಡ್ತಾರೆ. ಮೊದಲಿಗೆ ಈ ಫ್ಯಾಕ್ಟರಿಯಲ್ಲಿ ಬರಿ 12 ಜನ ಕೆಲಸ ಮಾಡ್ತಿದ್ರು. ಅವರು ಮೋಹನ್ಲಾಲ್ ದಯಾಲ್ ಅವರ ಕುಟುಂಬಸ್ಥರೇ ಆಗಿದ್ರು. ಫ್ಯಾಕ್ಟರಿಯಲ್ಲಿ ಕೆಲಸ ಏನೋ ಶುರುವಾಗುತ್ತೆ ಆದರೆ ಎಷ್ಟೋ ದಿನಗಳವರೆಗೂ ಈ ಕಂಪನಿಗೆ ಹೆಸರು ಅನ್ನೋದೇ ಇಟ್ಟಿರೋಲ್ಲ. ಎಷ್ಟೋ ದಿನಗಳ ನಂತರ ಈ ಕಂಪನಿಗೆ ಆ ಸ್ಥಳದ ಹೆಸರು ವಿಲ್ಲೆ ಪಾರ್ಲೆಯ ಪಾರ್ಲೆ ಅನ್ನೋ ಹೆಸರನ್ನೇ ಇಡ್ತಾರೆ. ಪಾರ್ಲೆ ಕಂಪನಿಲಿ ಮೊದಲನೆದಾಗಿ ತಯಾರಾದ ಪ್ರಾಡಕ್ಟ್ ಆರೆಂಜ್ ಕ್ಯಾಂಡಿ ಇದು ಅವತ್ತಿಗೆ ತುಂಬಾ ಪಾಪ್ಯುಲರ್ ಆಗಿತ್ತು. ಮೋಹನ್ಲಾಲ್ ಡಯಾಲ್ ಅವರು ಗಮನಿಸಿದ್ದು ಏನಂದ್ರೆ ಈಗಲೂ ಬಡವರು ತಿನ್ನುವಂತಹ ಬಿಸ್ಕೆಟ್ ಯಾವುದು ಮಾರ್ಕೆಟ್ ಅಲ್ಲಿ ಇರಲಿಲ್ಲ. ಮಾರ್ಕೆಟ್ನ ಈ ಗ್ಯಾಪ್ ಅನ್ನ ಪೂರ್ತಿ ಮಾಡೋಕೆ ಮೋಹನ್ಲಾಲ್ ಅವರು 1939 ರಲ್ಲಿ Ple ಕಂಪನಿಯಲ್ಲಿ ಭಾರತದ ಮೊದಲ ಬಿಸ್ಕೆಟ್ ಅನ್ನ ತಯಾರಿಸ್ತಾರೆ. ಇದಕ್ಕೆ Parle ಗ್ಲೋಕೋ ಬಿಸ್ಕೆಟ್ ಅಂತ ಹೆಸರು ಕೊಡ್ತಾರೆ. ಇದು ಬಡವರು ಸಹ ಖರೀದಿ ಮಾಡುವಂತಹ ಬಿಸ್ಕೆಟ್ ಆಗಿತ್ತು. ಈ ಬಿಸ್ಕೆಟ್ ತುಂಬಾ ಫೇಮಸ್ ಆಗುತ್ತೆ. ಇದನ್ನ ಬ್ರಿಟಿಷ್ ಮತ್ತು ಭಾರತದ ಸೈನಿಕರು ಬಳಸುತ್ತಿದ್ದರು. 1947 ರಲ್ಲಿ ಭಾರತಕ್ಕೆ ಸ್ವತಂತ್ರ ಬಂದ ನಂತರ ಭಾರತದಲ್ಲಿ ಗೋಧಿಯ ಅಭಾವ ಉಂಟಾಗುತ್ತೆ. ಇದರಿಂದ ಕೆಲ ಟೈಮ್ ವರೆಗೂ ಪಾರ್ಲೆ ಕಂಪನಿ ಬಿಸ್ಕೆಟ್ ಅನ್ನ ತಯಾರಿಸುವುದನ್ನ ನಿಲ್ಲಿಸುತ್ತೆ. ನಂತರ ಪಾರ್ಲೆ ಕಂಪನಿ ಗೋಧಿ ಬದಲು ಬಾರ್ಲಿನ ಬಳಸಿ ಬಿಸ್ಕೆಟ್ನ್ನ ತಯಾರಿಸುತ್ತೆ.

ಗೋಧಿಯ ಇರುವಿಕೆ ಸಹಜ ಸ್ಥಿತಿಗೆ ಬಂದಾಗ ಮತ್ತೆ ಗೋಧಿನ ಬಳಸಿ ಬಿಸ್ಕೆಟ್ನ್ನ ತಯಾರಿಸೋಕೆ ಶುರು ಮಾಡ್ತಾರೆ. 1960 ರ ವರೆಗೂ ಪಾರ್ಲೆ ಕಂಪನಿಗೆ ಎಲ್ಲಾನೂ ಚೆನ್ನಾಗಿ ನಡೀತಿತ್ತು. ಆದರೆ ಆಗ್ಲೇ ಎಷ್ಟೋ ಕಂಪನಿಗಳು ಗ್ಲುಕೋಸ್ ಬಿಸ್ಕೆಟ್ ಅನ್ನ ತಯಾರಿಸೋಕೆ ಶುರು ಮಾಡ್ತಾರೆ. ಇದರಿಂದ ಕಸ್ಟಮರ್ಗಳು ಒರಿಜಿನಲ್ ಗ್ಲುಕೋಸ್ ಬಿಸ್ಕೆಟ್ ಯಾವುದು ಅಂತಾನೆ ಕನ್ಫ್ಯೂಸ್ ಆಗ್ತಿದ್ರು. ಪಾರ್ಲೆ ಕಂಪನಿಗೆ ಇದರಿಂದ ಸ್ವಲ್ಪ ನಷ್ಟನು ಉಂಟಾಗುತ್ತೆ. ಆಗ್ಲೇ ಪಾರ್ಲೆ ಕಂಪನಿ ತಮ್ಮ ಬ್ರಾಂಡಿಂಗ್ ನಂತ ಗಮನ ಹರಿಸುತ್ತೆ. ಅಲ್ಲಿವರೆಗೂ ನಾರ್ಮಲ್ ಪ್ಯಾಕಿಂಗ್ ಅಲ್ಲಿ ಬರ್ತಿದ್ದ ಪಾರ್ಲೆ ಬಿಸ್ಕೆಟ್ ಗಳು ಈಗಿಂದ ಬಿಳಿ ಮತ್ತು ಹಳದಿಯ ರಾಪರ್ ಮೇಲೆ ಪಾರ್ಲೆ ಹೆಸರಿನ ಬ್ರಾಂಡಿಂಗ್ ಜೊತೆಗೆ ಒಂದು ಪುಟ್ಟ ಹೆಣ್ಣು ಮಗುವಿನ ಫೋಟೋನ ಹಾಕ್ತಾರೆ ಪಾರ್ಲೆಯ ಈ ಬ್ರಾಂಡ್ ಇಮೇಜ್ ಅನ್ನ ತಯಾರಿಸಿದವರು ಮಗನ್ಲಾಲ್ ದಯ್ಯ ಈ ಬ್ರಾಂಡಿಂಗ್ ಇಂದ ಪಾರ್ಲೆ ಬಿಸ್ಕೆಟ್ ಗಳು ಮಕ್ಕಳು ಮತ್ತು ತಂದೆ ತಾಯಿಗೆ ತುಂಬಾ ಇಷ್ಟ ಆಗುತ್ತೆ ಜೊತೆಗೆ ಕಸ್ಟಮರ್ಗೆ ಪಾರ್ಲೇಜಿ ಮತ್ತು ಬೇರೆ ಗ್ಲುಕೋಸ್ ಬಿಸ್ಕೆಟ್ಗಳನ್ನ ಗುರುತಿಸೋಕೆ ಇದು ಸಹಾಯ ಮಾಡುತ್ತೆ 1982 ರಲ್ಲಿ ಪಾರ್ಲೆ ಕಂಪನಿ ತಮ್ಮ ಪಾರ್ಲೆ ಗ್ಲುಕೋಸ್ ಹೆಸರನ್ನ ತೆಗೆದು ಪಾರ್ಲೆ ಜಿ ಅಂತ ಹೆಸರಿಡ್ತಾರೆ. ಇಲ್ಲಿ ಜಿ ಅಂದ್ರೆ ಗ್ಲುಕೋಸ್ ಅಂತ 1998 ರಲ್ಲಿ ಭಾರತದ ಪ್ರಮುಖ ಸೂಪರ್ ಹೀರೋ ಆದ ಶಕ್ತಿಮಾನ್ ನಿಂದಲು ಈ ಕಂಪನಿಗೆ ಪ್ರಮೋಷನ್ ಅನ್ನ ಮಾಡಿಸ್ತಾರೆ. ನಂತರ ಎಷ್ಟೋ ಅಡ್ವರ್ಟೈಸ್ಮೆಂಟ್ ಮತ್ತು ಟ್ಯಾಗ್ ಲೈನ್ ಕೊಟ್ಟು ಪಾರ್ಲೇಜಿ ಹೆಸರನ್ನ ಕಸ್ಟಮರ್ಗಳ ಮೈಂಡ್ ಅಲ್ಲಿಗೆ ರಿಜಿಸ್ಟರ್ ಮಾಡ್ತಾರೆ. ಪಾರ್ಲೆ ಕಂಪನಿಯ ವಿಭಜನೆ ಅರ್ಥ ಆಗಬೇಕು ಅಂದ್ರೆ ನಮಗೆ ಮೋಹನ್ಲಾಲ್ ದಯ ಅವರ ಕುಟುಂಬದ ಪರಿಚಯ ಆಗಬೇಕು ಮೋಹನ್ಲಾಲ್ ದಯ ಅವರಿಗೆ ಐದು ಜನ ಗಂಡು ಮಕ್ಕಳು ಇದರಲ್ಲಿ ಹಿರಿಮಗನಾದ ಜಯಂತಿಲಾಲ್ ಕಂಪನಿಯಿಂದ ಬೇರೆ ಆಗ್ತೀನಿ ಅಂತ ಹೇಳ್ತಾರೆ ಇದರಿಂದ ಮೋಹನ್ಲಾಲ್ ದಯ್ಯ ಅವರು ಜಯಂತಿಲಾಲ್ಗೆ ಕಂಪನಿಯ ಕೆಲ ಭಾಗನ ಕೊಡ್ತಾರೆ.

ಮುಂದೆ ಇದೆ ಪಾರ್ಲೆ ಆಗ್ರೋ ಅನ್ನೋ ಹೆಸರಿಂದ ಶುರುವಾಗುತ್ತೆ ಇದೆ ಪಾರ್ಲೆ ಆಗ್ರೋ ಕಂಪನಿ ಈಗ ಫ್ರೂಟಿ ಬ್ರೇಲಿ ಆಪಸಿಫಿಸ್ ನಂತ ಪ್ರಾಡಕ್ಟ್ ಳನ್ನ ತಯಾರಿಸುತ್ತಿದೆ 1970 ರಲ್ಲಿ ಜಯಂತಿಲಾಲ್ ತಮ್ಮ ಇಬ್ಬರು ಗಂಡು ಮಕ್ಕಳಿಗೆ ತಮ್ಮ ಕಂಪನಿನ ಹಂಚುತ್ತಾರೆ ಇದರಲ್ಲಿ ಪ್ರಕಾಶ್ ಅನ್ನೋರಿಗೆ ಪಾರ್ಲೆ ಆಗ್ರೋ ಕಂಪನಿ ಬಂದರೆ ರಮೇಶ್ ಅನ್ನೋರಿಗೆ ಬಿಸಲರಿ ಕಂಪನಿ ಬರುತ್ತೆ ಹತ್ತತ್ರ 100 ವರ್ಷಗಳ ನಂತರನು ಪಾರ್ಲೆ ಭಾರತದ 40% ಬಿಸ್ಕೆಟ್ ಮಾರ್ಕೆಟ್ ಅನ್ನ ಕ್ಯಾಪ್ಚರ್ ಮಾಡಿದೆ ಇದಕ್ಕೆ ಕಾರಣ ತುಂಬಾ ಹಿಂದಿನಿಂದಲೇ ಪಾರ್ಲೆ ಕಂಪನಿ ರಿಸರ್ಚ್ ಗಳನ್ನ ಮಾಡಿ ಜನರ ಇಷ್ಟ ಕಷ್ಟಗಳನ್ನ ಅರ್ಥ ಮಾಡ್ಕೊತಾ ಬಂದಿದೆ ಇದರಿಂದ ಪಾರ್ಲೆ ಕಂಪನಿ ಜನರ ಇಷ್ಟಕ್ಕೆ ತಕ್ಕಂತೆ ಎಷ್ಟೋ ಪ್ರಾಡಕ್ಟ್ಗಳನ್ನ ತರುತ್ತೆ 1938 ರಲ್ಲಿ ಪಾರ್ಲೆ ಮೊನಾಕೋ 1956 ರಲ್ಲಿ ಪಾರ್ಲೇ ಚೀಸ್ಲಿಂಗ್ಸ್ 1963 ರಲ್ಲಿ ಪಾರ್ಲೆ ಕಿಸ್ಮಿ ಚಾಕ್ಲೇಟ್ 1966ರಲ್ಲಿ ಪಾಪಿನ್ಸ್ ಮಾರ್ಕೆಟ್ಗೆ ತರುತ್ತೆ ಮುಂದೆ ಮೆಲೋಡಿ ಮ್ಯಾಂಗೋ ಬೈಟ್ ಲಂಡನ್ ಡೆರಿ ಕ್ರಾಕ್ ಜಾಕ್ 2020 ಪಾರ್ಲೆ ಮ್ಯಾಜಿಕ್ಸ್ ಮಿಲ್ಕ್ ಬಿಕೀಸ್ ಹೈಡನ್ ಸಿಕ್ ನಂತ ಪ್ರಾಡಕ್ಟ್ಗಳನ್ನ ಮಾರ್ಕೆಟ್ಗೆ ತರುತ್ತೆ 2012ರ ಹೊತ್ತಿಗೆ ಪಾರ್ಲೇಜಿ ಭಾರತದಲ್ಲಿ ಸುಮಾರು 40 ಲಕ್ಷ ಅಂಗಡಿಗಳ ಮುಖಾಂತರ ಕಸ್ಟಮರ್ಗಳಿಗೆ ತಮ್ಮ ಪ್ರಾಡಕ್ಟ್ ಅನ್ನ ಕೊಡ್ತಿದ್ರು. 2013ರ ಡೇಟಾದ ಪ್ರಕಾರ ಪಾರ್ಲೆ ಕಂಪನಿಯ ಟರ್ನ್ಓವರ್ 500 ಕೋಟಿಗಳು ಕೊರೋನ ಟೈಮಲ್ಲಿ ಲಾಕ್ಡೌನ್ ಆದಾಗ ಪಾರ್ಲೆ ಕಂಪನಿಗೆ ಇದರಿಂದ ತುಂಬಾ ಲಾಭ ಆಗುತ್ತೆ ಈಗಲೇ ಪಾರ್ಲೆ ಕಂಪನಿಯ ಟೋಟಲ್ ಟರ್ನ್ಓವರ್ 8000 ಕೋಟಿನ ದಾಟುತ್ತೆ ಒಂದು ಕಾಲದಲ್ಲಿ ಪಾರ್ಲೆ ಬಿಸ್ಕೆಟ್ಗೆ ಬೇಡಿಕೆ ಅದೆಷ್ಟು ಇತ್ತು ಅಂದ್ರೆ ಫ್ಯಾಕ್ಟರಿಲ್ಲಿ ಪಾರ್ಲೆ ಬಿಸ್ಕೆಟ್ ಅನ್ನ ಎಷ್ಟೇ ಯಾರು ಮಾಡಿದ್ರು ಬೇಡಿಕೆಯನ್ನ ಪೂರ್ತಿ ಮಾಡೋಕೆ ಆಗಲ್ಲ ಆಗ ಪಾರ್ಲೆ ಕಂಪನಿ ಲೋಕಲ್ ಬೇಕರಿ ಮತ್ತು ಫ್ಯಾಕ್ಟರಿಗಳಿಗೆ ತಮ್ಮ ಬಿಸ್ಕೆಟ್ನ ಸೀಕ್ರೆಟ್ ಫಾರ್ಮುಲಾನ ಕೊಟ್ಟು ಅವರಹತ್ತರ ಬಿಸ್ಕೆಟ್ ತಯಾರಿಯ ಕಾಂಟ್ರಾಕ್ಟ್ ಅನ್ನ ಮಾಡಿಕೊಳ್ಳುತ್ತೆ.

ಪಾರ್ಲೇ ಕಂಪನಿ ಈ ಟೆಕ್ನಿಕ್ ಇಂದ ತಮ್ಮ ಬೇಡಿಕೆಯನ್ನು ಪೂರ್ತಿ ಮಾಡಿಕೊಳ್ಳುತ್ತೆ ಹಾಗೆ ತಮ್ಮ ಸಪ್ಲೈ ಚೈನ್ ಅನ್ನು ಹೆಚ್ಚಿಸಿಕೊಳ್ಳುತ್ತೆ ಪಾರ್ಲೇಜಿ ಬಿಸ್ಕೆಟ್ ಗೆ ಬಂದ ಬೇಡಿಕೆ ಬೇರೆ ಯಾವುದೇ ಕಂಪನಿಗೆ ಬಂದಿದ್ರು ಕೂಡಲೇ ಆ ಕಂಪನಿ ಬಿಸ್ಕೆಟ್ ಪ್ಯಾಕ್ ನ ಬೆಲೆ ಹೆಚ್ಚಳ ಮಾಡಿ ಭಯಂಕರ ಲಾಭ ಮಾಡ್ಕೊತಿದ್ರು ಆದರೆ ಪಾರ್ಲೇ ಕಂಪನಿ ಹಾಗೆ ಮಾಡಲಿಲ್ಲ ಆರಂಭದಲ್ಲೂ ಪಾರ್ಲೇ ಕಂಪನಿ ಅಗ್ಗದ ಅಂದ್ರೆ ಕಡಿಮೆ ಬೆಲೆಯ ಬಿಸ್ಕೆಟ್ ಆಗಿತ್ತು ಸ್ವತಂತ್ರ ಬಂದ 70 ವರ್ಷದ ನಂತರನು ಈಗಲೂ ಪಾರ್ಲೆ ಕಂಪನಿಯ ಬಿಸ್ಕೆಟ್ ಅಗ್ಗದ ಬಿಸ್ಕೆಟ್ 1999 ರಲ್ಲಿ ಭಾರತದಲ್ಲಿ ಪೆಟ್ರೋಲ್ನ ದರ ಲೀಟರ್ ಗೆ 25 ಇತ್ತು ಆದರೆ ಈಗ 105 ರೂಪಾಯಿ ಆಗಿದೆ ಆದರೆ ಈ 25 ವರ್ಷದಲ್ಲಿ ಪಾರ್ಲೇ ತನ್ನ ಬಿಸ್ಕೆಟ್ನ ಬೆಲೆನ ಏರಿಸಲೇ ಇಲ್ಲ ಆದರೂ ಪಾರ್ಲೆ ಕಂಪನಿ 2022 ರಲ್ಲಿ 256 ಕೋಟಿ ಪ್ರಾಫಿಟ್ ಅನ್ನ ಮಾಡಿದೆ ಪಾರ್ಲೇಜಿ ಬಿಸ್ಕೆಟ್ನ ಬೆಲೆ ಏರ್ತಾ ಇದೆ ಆದರೆ ಇದು ಕಸ್ಟಮರ್ಗಳ ಗಮನಕ್ಕೆ ಬರದೆ ಇರೋ ರೀತಿ ಏರಿಕೆ ಆಗ್ತಾ ಇದೆ ಪಾರ್ಲೆ ಕಂಪನಿಗೂ ಗೊತ್ತು ಕಸ್ಟಮರ್ ತಮ್ಮ ಜೇಬಿಂದ ಎಕ್ಸ್ಟ್ರಾ ಕಾಸನ್ನ ಕೊಡೋಕೆ ಒಪ್ಪಲ್ಲ ಅಂತ ಹಿಂದೆ ಒಂದ್ಸಲ ಪಾರ್ಲೆ ತನ್ನ ಬಿಸ್ಕೆಟ್ನ ಬೆಲೆನ 50 ಪೈಸೆ ಹೆಚ್ಚಿಗೆ ಮಾಡಿದಾಗ ಅವರ ಸೇಲ್ಸ್ ಕಡಿಮೆಯಾಗಿತ್ತು ಇದರಿಂದಲೇ ಪಾರ್ಲೆ ಕಂಪನಿ ತಮ್ಮ ಬಿಸ್ಕೆಟ್ನ ಬೆಲೆನ ಏರಿಸೋದಿಲ್ಲ ಇದರ ಬದಲಾಗಿ ಅವರು ಬಿಸ್ಕೆಟ್ನ ಕ್ವಾಂಟಿಟಿನ ಕಡಿಮೆ ಮಾಡ್ತಾರೆ ಇದನ್ನೇ ಬಿಸಿನೆಸ್ ಭಾಷೆಯಲ್ಲಿ ಶ್ರಿಂಕ್ ಫ್ಲೇಷನ್ ಅಂತ ಕರೀತೀವಿ ಮುಂಚೆನಾ ರೂಪಾಯಿಗೆ 100 ಗ್ರಾಂ ಗಳ ಪಾರ್ಲೇಜಿ ಬಿಸ್ಕೆಟ್ ಬರ್ತಾ ಇತ್ತು ಆದರೆ ಈಗ ಐ ರೂಪಾಯಿ ಕೊಟ್ರು ನಮಗೆ 55ಗ್ರಾಂ ನ ಪಾರ್ಲೇಜಿ ಬಿಸ್ಕೆಟ್ ಸಿಗ್ತಿದೆ. ಇದರಿಂದಲೇ ಪಾರ್ಲೆ ಕಂಪನಿ ಪ್ರತಿವರ್ಷ ಲಾಭನ ಮಾಡ್ತಾ ಇದೆ. ಪಾರ್ಲೇಜಿ ಬಿಸ್ಕೆಟ್ ಗಳು ಬರಿ ಭಾರತದಲ್ಲಷ್ಟೇ ಅಲ್ಲ ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಆಗ್ತಾ ಇದೆ. ಇದರಲ್ಲಿ ಯುಎಸ್ಎ, ಯುಎಈ, ಯುಕೆ, ಕೆನಡ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಲ್ಲಿ ಪಾರ್ಲೇಜಿ ಬಿಸ್ಕೆಟ್ನ ಸೇಲ್ಸ್ ಹೆಚ್ಚಾಗಿದೆ. ಎಷ್ಟೋ ದೇಶಗಳಲ್ಲಿ ಪಾರ್ಲೇಜಿ ತನ್ನ ಸ್ವಂತ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅನ್ನು ಕೂಡ ಇಟ್ಟಿದೆ. ಚೀನಾ ದೇಶದಲ್ಲೂ ಪಾರ್ಲೇಜಿ ಕಂಪನಿಯ ಮಾರಾಟ ಹೆಚ್ಚಿದೆ. ಚೀನಾ ದೇಶದಲ್ಲೂ ಪಾರ್ಲೇಜಿ ಬಿಸ್ಕೆಟ್ ಅನ್ನ ಇಷ್ಟಪಟ್ಟು ತಿನ್ನೋರು ಇದ್ದಾರೆ. ಇದರಿಂದಲೇ ಚೀನಾ ದೇಶದಲ್ಲಿ ಪಾರ್ಲೇಜಿ ಬಿಸ್ಕೆಟ್ ಮೋಸ್ಟ್ ಸೆಲ್ಲಿಂಗ್ ಬಿಸ್ಕೆಟ್ ಗಳಲ್ಲಿ ಒಂದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments