Monday, December 8, 2025
HomeTech Newsಗೂಗಲ್‌ಗೆ ಹೊಸ ಸ್ಪರ್ಧಿ! ಪರ್ಪ್ಲೆಕ್ಸಿಟಿ ಭಾರತದಲ್ಲಿ ಗಮನ ಸೆಳೆಯುತ್ತಿದೆ

ಗೂಗಲ್‌ಗೆ ಹೊಸ ಸ್ಪರ್ಧಿ! ಪರ್ಪ್ಲೆಕ್ಸಿಟಿ ಭಾರತದಲ್ಲಿ ಗಮನ ಸೆಳೆಯುತ್ತಿದೆ

ಕಳೆದ 20 ವರ್ಷಗಳಿಂದ ಪ್ರಪಂಚದಾದ್ಯಂತ ಇಂಟರ್ನೆಟ್ ಅನ್ನ ಏಕಚಕ್ರಾಧಿಪತಿಯಂತೆ ಆಳ್ತಾ ಇರೋದು ಗೂಗಲ್ ಕಂಪನಿ ಗೂಗಲ್ ನ ಈ ಆಧಿಪತ್ಯವನ್ನ ತಪ್ಪಿಸೋಕಂತಲೇ ಮೈಕ್ರಸಾಫ್ಟ್ ಬಿಂಗ್ ಆಲ್ಟಾವಿಸ್ಟ್ ಆದಂತ ಎಷ್ಟೋ ಕಂಪನಿಗಳು ಬಂದು ಗೂಗಲ್ ಎದುರು ನಿಲ್ಲೋಕಾಗದೆ ಸೋತು ಸುಮ್ಮನಾದದ್ವು ಆದರೆ ಇತ್ತೀಚಿಗೆ ಒಬ್ಬ ಭಾರತೀಯನಎಐ ಕಂಪನಿಗೂಗಲ್ ಗೆ ಪ್ರತಿಸ್ಪರ್ಧಿ ಆಗೋದೇ ಅಲ್ದೆಗೂಗಲ್ ನ ಕ್ರೋಮ ಬ್ರೌಸರ್ ನ ಖರೀದಿಗೆ 34 ಮಿಲಿಯನ್ ಡಾ ಆಫರ್ನ್ನ ಮುಂದಿಡುತ್ತೆ ಈ ಕಂಪನಿಯ ಹೆಸರೇ ಪರ್ಪ್ಲೆಕ್ಸಿಟಿ ಇದರ ಸ್ಥಾಪಕ ಅರವಿಂದ್ ಶ್ರೀನಿವಾಸ್ ಪರ್ಪ್ಲೆಕ್ಸಿಟಿ ಕಂಪನಿಯ ಪೊಟೆನ್ಶಿಯಾಲಿಟಿಯನ್ನ ಅರ್ಥ ಮಾಡಿಕೊಂಡು ಕುದ್ದು amazon ಮತ್ತು ಇನ್ವಿಡಿಯಾದಂತ ದೈತ್ಯ ಟೆಕ್ ಕಂಪನಿಯ ಸ್ಥಾಪಕರು ಇದರಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ್ದಾರೆ ಪರ್ಪ್ಲೆಕ್ಸಿಟಿ ಕಂಪನಿ ಅತಿ ಕಡಿಮೆ ಸಮಯದಲ್ಲಿ ನೆಟ್ಟಿಗರನ್ನು ಆಕರ್ಷಿಸಿ ಅವರ ನಂಬಿಕೆಯನ್ನು ಗಿಟ್ಟಿಸಿಕೊಂಡುಗೂಗಲ್ ನ ಪ್ರತಿಸ್ಪರ್ಧಿಯಾಗಿ ಹೇಗೆ ಬೆಳಿತು.

ಅರವಿಂದ್ ಶ್ರೀನಿವಾಸ್ರವರು ಗೂಗಲ್ ಸರ್ಚ್ ಇಂಜಿನ್ ನಲ್ಲಿ ಕೆಲ ಪ್ರಾಬ್ಲಮ್ ಗಳನ್ನ ಹುಡುಕಿ ಅದನ್ನ ಸಾಲ್ವ್ ಮಾಡಿ ಪರ್ಪ್ಲೆಕ್ಸಿಟಿ ಅನ್ನೋ ಬಿಲಿಯನ್ ಡಾಲರ್ ಬಿಸಿನೆಸ್ ನ ಹುಟ್ಟು ಹಾಕಿದ್ರು ಅರವಿಂದ್ ಶ್ರೀನಿವಾಸ್ರವರು ನಮ್ಮ ನಿಮ್ಮಂತೆಯೇ ಮಧ್ಯಮ ವರ್ಗಕ್ಕೆ ಸೇರಿದವರು ತನ್ನ ತಾಯಿಯ ಆಸೆಯನ್ನ ಈಡೇರಿಸೋಕೆ ಅರವಿಂದ್ ಶ್ರೀನಿವಾಸ್ ಐಐಟಿ ಮಡ್ರಾಸ್ನಲ್ಲಿ ಎಂಟ್ರೆನ್ಸ್ ಎಕ್ಸಾಮ್ ಅನ್ನ ಬರೀತಾರೆ ಆದರೆ ಎಂಟ್ರೆನ್ಸ್ ಎಕ್ಸಾಮ್ನಲ್ಲಿ ಕಡಿಮೆ ಮಾರ್ಕ್ಸ್ ಬರೋದ್ರಿಂದ ಅವರಿಗೆ ತಮಗೆ ಇಷ್ಟ ಇದ್ದ ಕಂಪ್ಯೂಟರ್ ಸೈನ್ಸ್ ಸಬ್ಜೆಕ್ಟ್ ಸಿಗೋದಿಲ್ಲ ಬದಲಿಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಬ್ಜೆಕ್ಟ್ ಸಿಗುತ್ತೆ ಇದರಿಂದ ನಿರಾಸೆ ಪಡದೆ ಅರವಿಂದ್ ಶ್ರೀನಿವಾಸ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಲೆ ಫ್ರೀ ಇದ್ದಾಗ ತನ್ನ ಫೇವರೆಟ್ ಸಬ್ಜೆಕ್ಟ್ ಗಳಾದ ಕಂಪ್ಯೂಟರ್ ಸೈನ್ಸ್ ಮಷೀನ್ ಲರ್ನಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ನಾಲೆಡ್ಜ್ ಅನ್ನ ಹೆಚ್ಚಿಸಿಕೊಳ್ಳುತ್ತಾರೆ 2017 ರಲ್ಲಿ ಐಐಟಿ ಮಡ್ರಾಸ್ ನಿಂದ ಗ್ರಾಜುಯೇಟ್ ಆದ ನಂತರ ಅರವಿಂದ್ ಶ್ರೀನಿವಾಸ್ ತನ್ನ ಪ್ಯಾಶನ್ ನಂತೆ ಅಮೆರಿಕಾದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ನಲ್ಲಿ ಪಿಎಚ್ಡಿ ಯನ್ನ ಮುಗಿಸ್ತಾರೆ ಈಗಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟ್ರೆಂಡಿಂಗ್ ನಲ್ಲಿದೆ ಆದರೆ 2017 ರಲ್ಲಿ ಅದರ ಬಗ್ಗೆ ಯಾರು ಗಮನ ಹರಿಸ್ತಾ ಇರಲಿಲ್ಲ.

ಎಐ ಯನ್ನ ಹೇಳಿಕೊಡೋದಕ್ಕೆ ಸರಿಯಾದ ಟೀಚರ್ಗಳು ಇರಲಿಲ್ಲ ಅರವಿಂದ್ ಶ್ರೀನಿವಾಸ್ ಅಂತ ಹೊತ್ತಲ್ಲೇ ಎಐ ಬಗ್ಗೆ ನಾಲೆಡ್ಜ್ ಸಂಪಾದಿಸಿದ್ದು ತಮ್ಮ ಸ್ವಂತ ಎಐ ಸ್ಟಾರ್ಟಪ್ ಗೆ ಬಹಳ ನೆರವಾಗುತ್ತೆ ಅದು ಹೇಗಂದ್ರೆ ಪಿಎಚ್ಡಿ ನಂತರ ಪ್ರಾಕ್ಟಿಕಲ್ ಎಕ್ಸ್ಪೀರಿಯನ್ಸ್ ಗೋಸ್ಕರ ಅರವಿಂದ್ ಶ್ರೀನಿವಾಸ್ ಒಂದು ಹೊಸ ಎಐ ಕಂಪನಿಯಲ್ಲಿ ಇಂಟರ್ನ್ಶಿಪ್ ಗೋಸ್ಕರ ಸೇರಕೊತಾರೆ ಆ ಕಂಪನಿಯ ಹೆಸರು ಓಪನ್ಎಐ ಇವತ್ತು ನಾವೆಲ್ಲ ಬಳಸ್ತಿರುವಂತ ಚಾಟ್ ಜಿಪಿಟಿ ತಯಾರಿಸಿದ್ದು ಇದೆ ಓಪನ್ ಎಐ ಕಂಪನಿ. ಈ ಕಂಪನಿಯಲ್ಲಿ ಇಂಟರ್ನ್ ಆಗಿ ಸೇರಿಕೊಂಡು ಎಐ ಟೂಲ್ಸ್, ಚಾಟ್ ಬೋರ್ಡ್ಸ್ ಜನರೇಟಿವ್ ಎಐ ಮಾಡೆಲ್ ಗಳನ್ನ ಹೇಗೆ ಡೆವಲಪ್ ಮಾಡ್ತಾರೆ ಅನ್ನೋದನ್ನ ತುಂಬಾ ಸ್ಪಷ್ಟವಾಗಿ ಕಲತುಕೊತಾರೆ ಮುಂದೆ ಡೀಪ್ ಮೈಂಡ್ ಅನ್ನೋಎಐ ಕಂಪನಿಯಲ್ಲಿ ಐದು ತಿಂಗಳು ಕೆಲಸ ಮಾಡ್ತಾರೆ. ಈ ಡೀಪ್ ಮೈಂಡ್ ಅನ್ನೋದುಗೂಗಲ್ ಕಂಪನಿಯ ಒಂದು ಸಬ್ಸಿಡರಿ ಕಂಪನಿ. ಮುಂದೆಗೂ ಕಂಪನಿಯಲ್ಲಿ ರಿಸರ್ಚರ್ ಆಗಿ ಒಂದು ವರ್ಷ ಕೆಲಸ ಮಾಡ್ತಾ ಲಾರ್ಜ್ ಸ್ಕೇಲ್ ಎಐ ಅಪ್ಲಿಕೇಶನ್ ತಯಾರಿಸುವುದನ್ನ ಸ್ಪಷ್ಟವಾಗಿ ಕಲಿತಾರೆ. ಇಲ್ಲಿ ನೀವು ಗಮನಿಸಿದ್ರೆ ಇಂಟರ್ನೆಟ್ ಬಿಸಿನೆಸ್ ಮತ್ತು ಎಐ ಫೀಲ್ಡ್ ನ ಟಾಪ್ ಕಂಪನಿಗಳಲ್ಲಿ ಅರವಿಂದ್ ಶ್ರೀನಿವಾಸ್ ಕೆಲಸ ಮಾಡಿದ್ದಾರೆ.

ಅದೇ Google ಮತ್ತು ಓಪನ್ ಎಐ ನಮಗೆಲ್ಲ ಚಾಟ್ ಜಿಪಿಟಿ ಬಗ್ಗೆ 2022 ರಲ್ಲಿ ಗೊತ್ತಾದ್ರೆ ಅರವಿಂದ್ ಶ್ರೀನಿವಾಸ್ ಗೆ ಇದರ ಬಗ್ಗೆ 2019 ರಲ್ಲೇ ಐಡಿಯಾ ಇತ್ತು. ಅರವಿಂದ್ ಶ್ರೀನಿವಾಸ್ ಈ ಕಂಪನಿಗಳಲ್ಲಿ ಕೆಲಸ ಮಾಡ್ತಾ ಗೂಗಲ್ ಸರ್ಚ್ ಇಂಜಿನ್ ಮತ್ತು ಚಾಟ್ ಜಿಪಿಟಿ ಗಳಲ್ಲಿನ ಸಮಸ್ಯೆಯನ್ನ ಪತ್ತೆ ಹಚ್ಚಿ ಅದಕ್ಕೆ ಸೊಲ್ಯೂಷನ್ ಅನ್ನ ಕಂಡುಹಿಡಿದು ಪರ್ಪ್ಲೆಕ್ಸಿಟಿ ಅನ್ನೋ ಕಂಪನಿಯನ್ನ ಹುಟ್ಟು ಹಾಕ್ತಾರೆ. ಈಗ ಅರವಿಂದ್ ಶ್ರೀನಿವಾಸ್ರವರು ಈ ಎರಡು ಕಂಪನಿಗಳಲ್ಲಿನ ಸಮಸ್ಯೆಯನ್ನು ಪತ್ತೆ ಹಚ್ಚಿದ್ದು ಏನು ಮತ್ತು ಅದರ ಸೊಲ್ಯೂಷನ್ ಏನು ಅನ್ನೋದನ್ನ ನೋಡೋಣ. ಈಗ ಅರವಿಂದ್ ಶ್ರೀನಿವಾಸ್ರವರು ಈ ಎರಡರಲ್ಲೂ ಪತ್ತೆ ಹಚ್ಚಿದ ಸಮಸ್ಯೆ ಯಾವುದು ಮತ್ತು ಇದಕ್ಕೆ ಅವರು ಕೊಟ್ಟಂತ ಸೊಲ್ಯೂಷನ್ ಏನು ಅನ್ನೋದನ್ನ ನೋಡೋಣ. ಮೊದಲನೆದಾಗಿ ಸರ್ಚ್ ಇಂಜಿನ್.ಗೂಗಲ್ ಸರ್ಚ್ ಇಂಜಿನ್ ನಲ್ಲಿ ನಾವು ಏನನ್ನೇ ಕೇಳಿದ್ರು ಇದು ನಮಗೆ ಅನೇಕ ವೆಬ್ಸೈಟ್ ಗಳ ಲಿಂಕ್ ಗಳನ್ನ ಕೊಡುತ್ತೆ. ಇಲ್ಲಿ ಕೊಟ್ಟಿರುವಂತಹ ಲಿಂಕ್ ಗಳ ರಾಂಕಿಂಗ್ ನಲ್ಲೂ ಸಹ Google ನ ಬಿಸಿನೆಸ್ ನ ಲಾಭಗಳಿದೆ. ಅದೇನಂದ್ರೆ Google ಕಂಪನಿಗೆ ಯಾವ ಕಂಪನಿ ಹೆಚ್ಚು ಹಣ ಕೊಡುತ್ತೋ ಅವರ ಲಿಂಕ್ ಅಥವಾ ಪ್ರಾಡಕ್ಟ್ ಗಳನ್ನ ಸರ್ಚ್ ಇಂಜಿನ್ ನಲ್ಲಿ ಟಾಪ್ ನಲ್ಲಿ ರಾಂಕ್ ಮಾಡುತ್ತೆ. ಇದರಿಂದಾಗಿ ಈ ಸರ್ಚ್ ರಿಸಲ್ಟ್ಸ್ ನ ಆಥೆಂಟಿಸಿಟಿ ಅನ್ನೋದು ತುಂಬಾ ಕಡಿಮೆ ಇರುತ್ತೆ. ಅಂದರೆ ನಾವು ಕೇಳೋ ಪ್ರಶ್ನೆಗೆ ನಮಗೆ ಸರಿಯಾದ ಉತ್ತರ ಸಿಗೋದು ತುಂಬಾ ಕಡಿಮೆ.

ಮೂರನೆಯದಾಗಿ ನಾವು ಗೂಗಲ್ ನಲ್ಲಿ ಯಾವುದನ್ನ ಹೆಚ್ಚು ಬ್ರೌಸ್ ಮಾಡ್ತೀವಿ ಅಥವಾ ಯಾವ ಪ್ರಾಡಕ್ಟ್ ಅನ್ನ ಹೆಚ್ಚು ಸರ್ಚ್ ಮಾಡ್ತೀವೋ ಅನ್ನೋ ಡೇಟಾ ಅನ್ನ ತಗೊಂಡು ನಮಗೆ ಟಾರ್ಗೆಟೆಡ್ ಅಡ್ವರ್ಟೈಸ್ಮೆಂಟ್ ಅನ್ನ ಮತ್ತೆ ಮತ್ತೆ ಪ್ಲೇ ಮಾಡ್ತದೆ. ಇದರಿಂದ ಪದೇ ಪದೇ ಅದೇ ಪ್ರಾಡಕ್ಟ್ ಅನ್ನ ತೋರಿಸಿ ನಮ್ಮಿಂದ ಆ ಪ್ರಾಡಕ್ಟ್ ಅನ್ನ ಖರೀದಿ ಮಾಡೋ ಹಾಗೆ ಮಾಡುತ್ತೆ. ಇದನ್ನೇ ಟೆಕ್ನಿಕಲ್ ಭಾಷೆಯಲ್ಲಿ ರಿಟಾರ್ಗೆಟಿಂಗ್ ಅಂತ ಕರೀತಾರೆ ಈಗ ಚಾಟ್ ಜಿಪಿಟಿ ನಲ್ಲಿ ಕಂಡುಹಿಡಿದ ಸಮಸ್ಯೆಗಳನ್ನ ನೋಡೋಣ. ಮೊದಲನೇದಾಗಿ ಡೇಟಾ ಸೋರ್ಸ್ ಅಥವಾ ಮಾಹಿತಿಯ ಮೂಲ. 2022 ರಲ್ಲಿ ಚಾಟ್ ಜಿಪಿಟಿ ಲಾಂಚ್ ಆದಾಗ ಚಾಟ್ ಜಿಪಿಟಿ ನಾವು ಕೇಳಿದ ಪ್ರಶ್ನೆಗೆ ಉತ್ತರ ಕೊಡ್ತಾ ಇತ್ತು. ಆದರೆ ಆ ಉತ್ತರನ ಅದು ಯಾವ ಸೋರ್ಸ್ ಇಂದ ಕಲೆಕ್ಟ್ ಮಾಡಿದೆ ಅನ್ನೋದನ್ನ ಕೊಡ್ತಾ ಇರಲಿಲ್ಲ.

ಎರಡನೇದಾಗಿ ಚಾಟ್ ಜಿಪಿಟಿ ತನಗೆ ಯಾವುದರ ಬಗ್ಗೆ ಟ್ರೈನಿಂಗ್ ಕೊಟ್ಟಿದ್ದಾರೋ ಅದರ ಬಗ್ಗೆ ಮಾತ್ರ ಉತ್ತರ ಕೊಡ್ತಾ ಇತ್ತು. ಬೇರೆದರ ಬಗ್ಗೆ ಯೋಚನೆ ಮಾಡಿ ಉತ್ತರ ಕೊಡುವಂತ ಸಾಮರ್ಥ್ಯ ಅದಕ್ಕೆ ಇರಲಿಲ್ಲ. ಇದಕ್ಕೆ ಉದಾಹರಣೆ ಅಂದ್ರೆ 2022 ರಲ್ಲಿ ಚಾಟ್ ಜಿಪಿಟಿ ಲಾಂಚ್ ಆದಾಗ ಇದಕ್ಕೆ ಸೆಪ್ಟೆಂಬರ್ 2021 ನ್ನ ಕಟ್ಆಫ್ ಡೇಟ್ ಅಂತ ನಿಗದಿ ಮಾಡಿದ್ರು. ಇದರಿಂದ ಚಾಟ್ ಜಿಪಿಟಿ ಸೆಪ್ಟೆಂಬರ್ 2021 ಕ್ಕಿಂತ ಮುಂಚೆ ನಡೆದ ಘಟನೆಗಳ ಬಗ್ಗೆ ಮಾತ್ರ ಉತ್ತರವನ್ನ ಕೊಡ್ತಾ ಇತ್ತು. ಈ ಎಲ್ಲಾ ಸಮಸ್ಯೆಗಳಿಗೆ ಸೊಲ್ಯೂಷನ್ ಅನ್ನ ಕಂಡುಹಿಡಿದು ಅರವಿಂದ್ ಶ್ರೀನಿವಾಸ್ 2022 ರಲ್ಲಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಸೇರಿ ತನ್ನ ಸ್ವಂತ ಎಐ ಆನ್ಸರ್ ಇಂಜಿನ್ ಅನ್ನ ಕಂಡುಹಿಡಿತಾರೆ. ಈಗ ಪರ್ಪ್ಲೆಕ್ಸಿಟಿ ಗೂಗಲ್ ಗಿಂತ ಯಾವ ರೀತಿ ಬೆಟರ್ ಅನ್ನೋದನ್ನ ನೋಡೋಣ ಪರ್ಪ್ಲೆಕ್ಸಿಟಿಯಲ್ಲಿ ನಮಗೆ ಸ್ಟ್ರೈಟ್ ಫಾರ್ವರ್ಡ್ ಆನ್ಸರ್ ಸಿಗುತ್ತೆ ಹಾಗೆ ಇದರಲ್ಲಿ ಯಾವುದೇ ಅಡ್ವರ್ಟೈಸ್ಮೆಂಟ್ಸ್ ಆಗಲಿ ಪ್ರಮೋಷನ್ಸ್ ಆಗಲಿ ಕಂಡುಬರೋದಿಲ್ಲ ಪರ್ಪ್ಲೆಕ್ಸಿಟಿನಲ್ಲಿ ನಮಗೆ ಅಪ್ಡೇಟೆಡ್ ಇನ್ಫಾರ್ಮೇಷನ್ ಮತ್ತು ಈ ಇನ್ಫಾರ್ಮೇಷನ್ನ ಸೋರ್ಸ್ ಯಾವುದು ಅನ್ನೋದನ್ನು ತೋರಿಸುತ್ತೆಗೂಗಲ್ ಮತ್ತು ಪರ್ಪ್ಲೆಕ್ಸಿಟಿ ಕಂಪನಿಯ ರೆವಿನ್ಯೂ ಮೋಡ್ಸ್ ಅಂದ್ರೆ ಆದಾಯದ ಹಾದಿ ತುಂಬಾ ಇಂಟರೆಸ್ಟಿಂಗ್ ಆಗಿದೆಗೂಗಲ್ ತನ್ನ ಸರ್ವಿಸ್ ಗಳನ್ನ ಫ್ರೀಯಾಗಿ ಕೊಡುತ್ತೆ ಆದರೆ ತನ್ನ ಸರ್ಚ್ ರಿಸಲ್ಟ್ಸ್ ನಲ್ಲಿ ಅಡ್ವರ್ಟೈಸ್ಮೆಂಟ್ ಅನ್ನ ಪ್ಲೇ ಮಾಡ್ತಾ ಇರುತ್ತೆ. ಇದರಿಂದ ಅದು ಆದಾಯನ ಗಳಿಸುತ್ತೆ. ಮತ್ತೊಂದು ಕಡೆ ಪರ್ಪ್ಲೆಕ್ಸಿಟಿ ತನ್ನ ಸರ್ವಿಸ್ ಗಳಿಗೆ ಚಾರ್ಜ್ ಅನ್ನ ಮಾಡುತ್ತೆ ಆದರೆ ಇದರಲ್ಲಿ ಯಾವುದೇ ಅಡ್ವರ್ಟೈಸ್ಮೆಂಟ್ ಆಗಲಿ ಬರೋದಿಲ್ಲ. ಇಲ್ಲಿ ನಮಗೆ ಆಡ್ ಫ್ರೀ ಕಂಟೆಂಟ್ ಸಿಗುತ್ತೆ ಜೊತೆಗೆ ನಮ್ಮ ಡೇಟಾದ ಪ್ರೈವಸಿ ಪ್ರೊಟೆಕ್ಷನ್ ಆಗಿರುತ್ತೆ. ಈ ಎಲ್ಲಾ ಅಡ್ವಾಂಟೇಜಸ್ ಗಳಿಂದಲೇ ಪರ್ಪ್ಲೆಕ್ಸಿಟಿ ಕಂಪನಿ ಶುರುವಾದ ಮೂರೇ ವರ್ಷಗಳಲ್ಲಿ ಸುಮಾರುಎರಡುವರೆ ಕೋಟಿ ಕಸ್ಟಮರ್ಗಳನ್ನ ತನ್ನದಾಗಿಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments