Thursday, November 20, 2025
HomeStartups and Businessಒಮ್ಮೆ ಟಾಪ್‌ನಲ್ಲಿ, ಈಗ ತೊಂದರೆಯಲ್ಲಿ! | PVR ಸಿನೆಮಾಸ್ ಹೇಗೆ ಕುಸಿಯಿತು?

ಒಮ್ಮೆ ಟಾಪ್‌ನಲ್ಲಿ, ಈಗ ತೊಂದರೆಯಲ್ಲಿ! | PVR ಸಿನೆಮಾಸ್ ಹೇಗೆ ಕುಸಿಯಿತು?

ಕಳೆದ ವರ್ಷವಷ್ಟೇ ತೆರೆಕಂಡ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಕಲ್ಕಿ ಚಿತ್ರವು ಭಾರತದ ನಮ್ಮದೇ ಆದ ಅವೆಂಜರ್ ಮಾದರಿಯ ಸಿನಿಮಾ ಆಗಿತ್ತು ಕಳೆದ ವರ್ಷ ಇದು ಭಾರತದಲ್ಲಿ ಒಟ್ಟು 735 ಕೋಟಿ ರೂಪಾಯಿಗಳನ್ನ ಬಾಚಿದ್ರೆ ವಿಶ್ವದಾದ್ಯಂತ ಸುಮಾರು ಸಾವಿರ ಕೋಟಿಗೂ ಹೆಚ್ಚಿನ ಹಣ ಗಳಿಕೆ ಮಾಡಿತ್ತು. ಕಳೆದ ವರ್ಷ ಈ ಚಲನಚಿತ್ರ ಬಿಡುಗಡೆಯಾದ ಮೊದಲ ದಿನದಂದೆ ಪಿವಿಆರ್ ನ ಶೇರುಗಳು ಶೇಕಡ ಐದರಷ್ಟು ಹೆಚ್ಚಾಗಿದ್ದವು. ಆ ಮೂಲಕ ಈ ಕಲ್ಕಿ ಚಲನಚಿತ್ರವು ಪಿವಿಆರ್ ನ ಇಂದಿನ ಮತ್ತು ನಾಳೆಯ ಸಮಸ್ಯೆಯನ್ನಷ್ಟೇ ಸಾಲ್ವ್ ಮಾಡಿರಬಹುದಾದರೂ ಕ್ರಮೇಣ ಮುಂದೆ ಉಂಟಾಗಬಹುದಾದ ಸಮಸ್ಯೆಯ ಗತಿ ಏನು ಸಾಮಾನ್ಯ ಜನರಿಗೆ ಈ ಪಿವಿಆರ್ ಅನ್ನೋದು ಅದೊಂದು ದೊಡ್ಡ ಮಲ್ಟಿಪ್ಲೆಕ್ಸ್ ನ ಚೈನ್ ಎಂಬ ಅನಿಸಿಕೆ ಇರುತ್ತೆ ಅದು ಈಗ ಐನೆಕ್ಸ್ ಅನ್ನ ಸಹ ಖರೀದಿಸಿದೆ ಆದ್ದರಿಂದ ಅವರಿಗೆ ಸಾಕಷ್ಟು ಹಣ ಹರಿದು ಬರಬಹುದು ಎಂದು ನೀವೆಲ್ಲ ಭಾವಿಸಿರಬಹುದು ಅದೇ ಕಾರಣಕ್ಕೆ ಅವರು ದುಬಾರಿ ಟಿಕೆಟ್ಗಳ ದರವನ್ನ ನಿಗದಿ ಪಡಿಸುತ್ತಾರೆ ಅವರ ಟಿಕೆಟ್ಗಳ ದರ 200 ರಿಂದ 800 ರೂಪಾಯಿಗಳವರೆಗೂ ಇರುತ್ತೆ. ಇದರ ಜೊತೆಗೆ ಅವರು 200 ರೂಪಾಯಿಗೆ ಒಂದು ಮೀಡಿಯಂ ಸೈಜ್ನ ಪಾಪ್ಕಾರ್ನ್ ಕೊಡ್ತಾರೆ. ಆದ್ದರಿಂದ ಅವರಿಗೆ ಸಿಕ್ಕಾಪಟ್ಟೆ ಹಣ ಹಾಗೂ ಉತ್ತಮವಾದ ಲಾಭವೇ ಬರ್ತಿರಬೇಕು.

ಹೀಗೆಲ್ಲ ನಮಗೆ ಅನಿಸೋದು ಸಹಜನೇ. ಆದರೆ ಅಸಲಿ ಕಥೆ ಬೇರೆನೇ ಇದೆ ಕಳೆದ ನಾಲ್ಕು ವರ್ಷಗಳಿಂದ ಅವರು ತೀವ್ರವಾದ ನಷ್ಟದಲ್ಲಿದ್ದಾರೆ ಮತ್ತು ಅವರ ಮೇಲೆ ಕನಿಷ್ಠ 1300 ಕೋಟಿ ರೂಪಾಯಿಗಳ ಸಾಲವಿದೆ ಎನ್ನುವ ಸಂಗತಿ ನಿಮಗೆ ಗೊತ್ತಾ ಈಗೆಲ್ಲ ಓಟಿಟಿಯ ಹಲವು ವೇದಿಕೆಗಳು ಬಂದಿವೆ ಸಣ್ಣ ಪುಟ್ಟ ಚಿತ್ರಗಳು ಜನ ಮನೆಯಲ್ಲೇ ನೋಡ್ತಾರೆ ಇನ್ನು ನಮ್ಮ ಜನ ಸಿನಿಮಾ ಹಾಲ್ಗೆ ಬರುವುದಾದರೆ ಅದು ಪುಷ್ಪ ಕೆಜಿಎಫ್ ಕಲ್ಕಿ ಕಾಂತಾರದ ರೀತಿಯ ದೊಡ್ಡ ಸಿನಿಮಾಗಳಿಗಾಗಿ ಮಾತ್ರ ಅಂತಹ ಸಿನಿಮಾಗಳು ಇತ್ತೀಚಿಗೆ ಕಡಿಮೆ ಸಂಖ್ಯೆಯಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ಮಾತ್ರ ಬರ್ತಾ ಇವೆ ಮತ್ತು ಕೆಲವೊಮ್ಮೆ ಬಡ ಮಿಯಾನ್ ಚೋಟೆ ಮಿಯಾನ್ ತರಹದ ಸಿನಿಮಾಗಳು ಸಹ ಯಶಸ್ವಿಯಾಗದೆ ಸೋಲುತ್ತವೆ ನೀವು ಹೇಳಬಹುದು ಅವರಿಗೆ ಅಲ್ಲಿ ತಾವು ಮಾರುವ ಸ್ನಾಕ್ಸ್ ಹಾಗೂ ಇತರೆ ಆಹಾರದ ಪ್ಯಾಕೆಟ್ಗಳ ಮಾರಾಟದಿಂದ ಲಾಭವಿರುತ್ತೆ ಅಂತ ಆದರೆ ಅದು ಯಾರಾದರೂ ಸಿನಿಮಾ ಹಾಲ್ಗೆ ಬಂದಾಗ ಮಾತ್ರ ಸಾಧ್ಯ ಹಾಗಾದರೆ ಪಿವಿಆರ್ ಗಳು ಇವತ್ತು ಈ ಪರಿಸ್ಥಿತಿಗೆ ಬಂದಿದ್ದಾದರೂ ಹೇಗೆ ಅವುಗಳಿಗಾಗಿರುವ ಹಾಗೂ ಆಗ್ತಾ ಇರುವ ಒಟ್ಟು ನಷ್ಟ ಎಷ್ಟು ಅವು ಎಷ್ಟು ಗಳಿಸುತ್ತವೆ ಈ ನಷ್ಟ ಮತ್ತು ಸಾಲದಿಂದ ಹೊರಬರಲು ಅವು ಈಗ ಯಾವೆಲ್ಲ ಪ್ರಯತ್ನಗಳನ್ನ ನಡೆಸ್ತಾ ಇವೆ ಈ ನಷ್ಟದಿಂದ ಮತ್ತು ಸಾಲದಿಂದ ಹೊರಬರಲು ಅವು ಯಾವಯಾವ ಐದು ಸ್ಟ್ರಾಟರ್ಜಿಗಳನ್ನ ಬಳಸುತ್ತಿವೆ ಈ ನಷ್ಟಗಳಿಂದ ಅವು ನಿಜಕ್ಕೂ ಹೊರಬರಲು ಸಾಧ್ಯವಾಗುತ್ತಾ ಅಥವಾ ಇಲ್ವಾ ಎನ್ನುವ ಹಲವು ಸಂಗತಿಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ ನೀವು ಸಿನಿಮಾ ಪ್ರೇಮಿಯಾಗಿದ್ದರೆ ಈ ಕೇಸ್ ಸ್ಟಡಿಯನ್ನ ಖಂಡಿತವಾಗಿಯೂ ನೋಡಲೇಬೇಕು ಒಂದುವೇಳೆ ನಿಮಗೆ ಶೇರು ಮಾರುಕಟ್ಟೆ ಹಾಗೂ ಅದರ ಹೂಡಿಕೆಯಲ್ಲಿ ಆಸಕ್ತಿ ಇದ್ದರೆ ನೀವು ಈ ಪಿವಿಆರ್ ಗಳ ಮೇಲೆ ಹಣ ಹೂಡಿಕೆ ಮಾಡಬಹುದಾ ಅವುಗಳ ಶೇರುಗಳನ್ನ ನೀವು ನಿಸ್ಸಂದೇಹವಾಗಿ ಖರೀದಿ ಮಾಡಬಹುದಾ ಅವುಗಳ ರೇಟ್ ಹೆಚ್ಚುತ್ತಾ ಅಥವಾ ಇಳಿಯುತ್ತ ಎನ್ನುವ ಬಗ್ಗೆಯೂ ನಿಮಗೆ ತಿಳಿದುಕೊಳ್ಳಲು.

ಪಿವಿಆರ್ ನ ಇತಿಹಾಸದ ಬಗ್ಗೆ ಮಾತನಾಡೋಣ ಪಿವಿಆರ್ ನ ಫುಲ್ ಫಾರ್ಮ್ ತುಂಬಾ ಜನಕ್ಕೆ ಗೊತ್ತಿಲ್ಲ ಪಿವಿಆರ್ ನ ಫುಲ್ ಫಾರ್ಮ್ ಪ್ರಿಯಾ ವಿಲೇಜ್ ರೋಡ್ ಶೋ ಅಂತ ಇದನ್ನ ಅಜಯ್ ಬಿಜಲಿಜಿ ಎನ್ನುವವರು ಮೊದಲು ಪ್ರಾರಂಭಿಸಿದ್ರು ಅವರಿಗೆ ಈ ಮುನ್ನ ದೆಹಲಿಯಲ್ಲಿ ಪ್ರಿಯ ಎನ್ನುವ ಹೆಸರಿನ ಒಂದು ಸಿನಿಮಾ ಥಿಯೇಟರ್ ಇತ್ತು ನಂತರ ಅವರು ಈ ಸಿನಿಮಾ ಹಾಲ್ನಿಂದ ಏನು ಯೂಸ್ ಇಲ್ಲ ಹಾಗಾಗಿ ಒಂದು ಮಲ್ಟಿಪ್ಲೆಕ್ಸ್ ಮಾಡೋಣ ಎಂದು ಡಿಸೈಡ್ ಮಾಡ್ತಾರೆ ಆದ್ದರಿಂದ ಅವರು ವಿಲೇಜ್ ರೋಡ್ ಶೋ ಜೊತೆ ಸೇರಿ ದೇಶದ ಮೊದಲ ಮಲ್ಟಿಪ್ಲೆಕ್ಸ್ ಅನ್ನ ಕಟ್ಟಿದ್ರು ಸ್ವಂತದ ಒಂದು ಮಲ್ಟಿಪ್ಲೆಕ್ಸ್ ಕಟ್ಟಲು ಅವತ್ತು ಅವರು ಅನುಭವಿಸಿದ ಕಷ್ಟ ನಷ್ಟ ಹಾಗೂ ಶ್ರಮ ಅಪಾರವಾದದ್ದು ಈಗ ನಾವು ಈ ಪಿವಿಆರ್ ನ ಆದಾಯ ಹೇಗೆ ಹಾಗೂ ಅದರ ಮೂಲಗಳು ಯಾವುವು ಎಂಬ ಬಗ್ಗೆ ತಿಳಿದುಕೊಳ್ಳೋಣ ಯಾವುದೇ ಸಿನಿಮಾ ಹಾಲ್ ಮುಖ್ಯವಾಗಿ ಐದು ಮೂಲಗಳಿಂದ ತನ್ನ ಆದಾಯ ಗಳಿಸುತ್ತದೆ ಅದರಲ್ಲಿ ಮೊದಲನೆಯದ್ದು ಟಿಕೆಟ್ ಮಾರಾಟ ಈ ಟಿಕೆಟ್ ಮಾರಾಟದ ಸಂಪೂರ್ಣ ಹಣವು ಸಿನಿಮಾ ಹಾಲ್ನ ಜೇಬಿಗೆ ಹೋಗಲ್ಲ ಅದು ಆ ಚಿತ್ರದ ನಿರ್ಮಾಪಕರು ಮತ್ತು ವಿತ್ತರಕರ ನಡುವೆ ಹಂಚಿಕೆಯಾಗುತ್ತದೆ ಮೊದಲ ವಾರದಲ್ಲಿ ಸಂಗ್ರಹಗೊಂಡ ಹಣದಲ್ಲಿ ಶೇಕಡ 50ರಷ್ಟು ವಿತರಕರಿಗೂ ಹಾಗೂ ಶೇಕಡ 50ರಷ್ಟು ಸಿನಿಮಾ ಹಾಲ್ಗೂ ಹೋಗುತ್ತೆ ಎರಡನೇ ವಾರದಲ್ಲಿ ಸಿನಿಮಾ ಹಾಲ್ನ ಪಾಲು 55ರಷ್ಟಇದ್ದರೆ ವಿತರಕರ ಪಾಲು 45ರಷ್ಟುಆಗುತ್ತದೆ ಇನ್ನು ಚಿತ್ರ ತೆರೆಕಂಡ ಮೂರನೇ ವಾರದಲ್ಲಿ ಸಿನಿಮಾ ಹಾಲ್ನ ಪಾಲು 60ರಷ್ಟುಇದ್ದರೆ ವಿತರಕರ ಪಾಲು 40ರಷ್ಟು ಇರುತ್ತದೆ ಅಂದರೆ ಆ ಚಿತ್ರವು ಹೆಚ್ಚಿನ ಸಮಯದವರೆಗೆ ಅಲ್ಲಿ ರನ್ ಆದರೆ ಸಿನಿಮಾ ಹಾಲ್ಗೆ ಹೆಚ್ಚು ಹಣ ಬರುತ್ತದೆ ಎರಡನೆಯದ್ದು ಅಲ್ಲಿ ಸೇಲ್ ಆಗುವ ಸ್ನಾಕ್ಸ್ ಹಾಗು ಕೋಲ್ಡ್ ಡ್ರಿಂಕ್ಸ್ ನಿಂದ ಬರುವ ಹಣ ಸಾಮಾನ್ಯವಾಗಿ ಅವರು 400 500 ರೂಪಾಯಿ ವರೆಗೆ ನೀಡುವ ಪಾಪ್ಕಾರ್ನ್ ಹಾಗೂ ಇತರೆ ಸ್ನಾಕ್ಗಳು ಅವರ ಆದಾಯದ ಎರಡನೇ ಮುಖ್ಯ ಮೂಲವಾಗಿರುತ್ತೆ ಇಲ್ಲೆಲ್ಲ ಕೋಲ್ಡ್ ಡ್ರಿಂಕ್ ಹಾಗೂ ಸಿಗುವ ಇತರೆ ಎಲ್ಲಾ ಫುಡ್ಗಳು ಹಾಗೂ ಬೆವರೇಜ್ಗಳ ಬೆಲೆ ಜಾಸ್ತಿ ಇರುತ್ತೆ ಹಾಗೂ ಅವುಗಳ ಹೆಚ್ಚುವರಿ ಮಾರಾಟವು ಆ ಸಿನಿಮಾ ಹಾಲ್ಗೆ ಹೆಚ್ಚಿನ ಆದಾಯವನ್ನೇ ಸೃಷ್ಟಿಸುತ್ತದೆ.

ಮೂರನೆಯ ಸ್ಥಾನದಲ್ಲಿ ಅಲ್ಲಿ ಪ್ರಸಾರವಾಗುವ ಜಾಹಿರಾತುಗಳು ಬರುತ್ತವೆ ಸಿನಿಮಾ ಹಾಲ್ನಲ್ಲಿ ಪ್ರದರ್ಶಿಸಲಾಗುವ ಜಾಹಿರಾತುಗಳು ಉದಾಹರಣೆಗೆ ಮುಕೇಶನ ತಂಬಾಕು ಜಾಗೃತಿ ವಿಡಿಯೋ ಪ್ರಸಾರವಾದ ನಂತರ ಅಥವಾ ಮೊದಲು ಪ್ರಸಾರವಾಗುವ ಜಾಹಿರಾತುಗಳಿಂದ ಬರುವ ಎಲ್ಲಾ ತರಹದ ಆದಾಯವನ್ನ ಪಿವಿಆರ್ ಮಾತ್ರ ಪಡೆಯುತ್ತೆ ಇಲ್ಲಿ ಜಾಹಿರಾತು ಕೊಡಲು ಬಯಸುವವರು ತಮ್ಮ ಪ್ರಾಡಕ್ಟ್ನ ಪ್ರಮೋಷನ್ಗೆ ಇಂತಿಷ್ಟು ಹಣ ಅಂತ ಆ ಸ್ಕ್ರೀನ್ನ ಓನರ್ಗೆ ನೇರವಾಗಿ ಹಣ ಜಮ ಮಾಡಿರುತ್ತಾರೆ ಹೀಗಾಗಿ ಈ ಹಣದಲ್ಲಿ ಸಿನಿಮಾ ಹಾಲ್ನ ಮಾಲಿಕರು ಯಾರಿಗೂ ಶೇರ್ ಮಾಡುವ ಅಗತ್ಯವಿರುವುದಿಲ್ಲ ಒಟ್ಟನಲ್ಲಿ ಅವರಿಗೆ ಬರುವ ಒಟ್ಟು ಆದಾಯದ ಶೇಕಡ 95ರಷ್ಟು ಗಳಿಕೆಯು ಈ ಮೂರು ಮೂಲಗಳಿಂದಲೇ ಬರುತ್ತೆ ಇನ್ನುಳಿದ ಶೇಕಡ ಐದರಷ್ಟು ಗಳಿಕೆ ಬುಕ್ ಮೈ ಶೋ ಮೂಲಕ ಟಿಕೆಟ್ ಬುಕಿಂಗ್ ಮಾಡಿದಾಗ ಸಿಗುವ ಸಣ್ಣ ಪಾಲಿನಿಂದಲೂ ಅಥವಾ ಅಲ್ಲಿ ಏರ್ಪಡುವಂತಹ ಹುಟ್ಟು ಹಬ್ಬದ ಪಾರ್ಟಿಗಳು ಮತ್ತು ಖಾಸಗಿ ಪ್ರದರ್ಶನಗಳಂತಹ ಖಾಸಗಿ ಕಾರ್ಯಕ್ರಮಗಳಿಂದ ಬರುತ್ತದೆ ಸರಿ ಇಷ್ಟೆಲ್ಲ ರೀತಿಯಲ್ಲಿ ಹಣ ದುಡಿತಾ ಇದ್ದರು ಈಗ ನಷ್ಟದಲ್ಲಿರಲು ಏನು ಕಾರಣ ಅಂತ ನೀವು ಕೇಳಬಹುದು ಯಾವುದೇ ಒಂದು ಪಿವಿಆರ್ ನಷ್ಟದಲ್ಲಿರಲು ಹಲವು ಕಾರಣಗಳಿರುತ್ತವೆ ಆ ಕಾರಣಗಳ ಬಗ್ಗೆ ನಾವಿಲ್ಲಿ ತಿಳಿಯುದಾದರೆ ಅವುಗಳಲ್ಲಿ ಮೊದಲನೆಯದ್ದು ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ಆಗುವ ಅನಿರೀಕ್ಷಿತ ಹಾಗೂ ಅನಿಶ್ಚಿತವಾದ ಪಡತದಿಂದ ಆಗುವ ಭಾರಿ ನಷ್ಟ ಪಿವಿಆರ್ ನಷ್ಟಕ್ಕೆ ಬರಲು ಮುಖ್ಯ ಕಾರಣ ಕೊರೋನಾ ಸಾಂಕ್ರಾಮಿಕ ರೋಗ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಸಿನಿಮಾ ಹಾಲ್ಗಳು ಮೊದಲು ಬಹಳ ಕಾಲದವರೆಗೂ ಮುಚ್ಚಿ ಕೊನೆಯಲ್ಲಿ ತೆರೆದುಕೊಂಡವು 2020ರ ಆರ್ಥಿಕ ವರ್ಷದಲ್ಲಿ ಅವರ ಮಾರಾಟವು 3400 ಕೋಟಿ ರೂಪಾಯಿಗಳಷ್ಟಿತ್ತು ಇದು ಕೊರೋನಾ ಸಮಯದಲ್ಲಿ ಕೇವಲ 280 ಕೋಟಿ ರೂಪಾಯಿಗಳಿಗೆ ದಿಡೀರ್ ಇಳಿಯಿತು. ಅಂದರೆ ಅವರ ವ್ಯವಹಾರದಲ್ಲಿ ಏಕಾಏಕಿ 3000 ಕೋಟಿಗೂ ಹೆಚ್ಚು ನಷ್ಟ ಆಯಿತು. ಎರಡನೇ ಕಾರಣ ಆರ್ಥಿಕ ನಷ್ಟ. 2020 ರಲ್ಲಿ ಅವರ ಲಾಭ 27 ಕೋಟಿ ರೂಪಾಯಿಗಳಿದ್ದರು.

ಕೊರೋನಾ ಬಂದಾಗ ಆ ವರ್ಷ ಅವರ ನಷ್ಟವೇ ಸುಮಾರು 748 ಕೋಟಿ ರೂಪಾಯಿಗಳಾಗಿತ್ತು. ನಂತರದ ವರ್ಷಗಳಲ್ಲಿ ಅವರಿಗೆ 490 ಕೋಟಿ ಮತ್ತು 336 ಕೋಟಿ ರೂಪಾಯಿಗಳ ನಷ್ಟ ಮೇಲಿಂದ ಮೇಲೆ ಉಂಟಾಯಿತು. ಮೂರನೆಯದ್ದು ಸಾಲದ ಹೊರೆ ಕಳೆದ ನಾಲ್ಕು ವರ್ಷಗಳ ನಷ್ಟವನ್ನ ಸರಿದೂಗಿಸಲು ಮತ್ತು ತಮ್ಮೆಲ್ಲ ಕೆಲಸ ಕಾರ್ಯಗಳನ್ನ ಮತ್ತೆ ಸಹಜವಾಗಿ ನಡೆಸಲು ಪಿವಿಆರ್ ಗಳ ಮೇಲೆ ಒಟ್ಟು 1300 ಕೋಟಿ ರೂಪಾಯಿಗಳ ಸಾಲ ಅವರ ತಲೆಯ ಮೇಲೆ ಈಗ ಇದೆ ಇನ್ನು ಮುಂದಿನ ಕಾರಣ ಈ ಓಟಿಟಿಯ ಹಾವಳಿ ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟದಿಂದ ಪಿವಿಆರ್ ಹೊರಬರಲು ಈ ಓಟಿಟಿಗಳು ಬಿಡ್ತಾ ಇಲ್ಲ ಕೊರೋನಾಗೂ ಮೊದಲು ಅವರ ಅಕ್ಯುಪೆನ್ಸಿ ಸುಮಾರು ಶೇಕಡ 36ರಷ್ಟಿತ್ತು ಆದರೆ ಈಗ ಅದು ಕೇವಲ ಶೇಕಡ 25ರಷ್ಟು ಮಾತ್ರವೇ ಉಳಿದಿದೆ ಹಾಗೂ ಇದೆಲ್ಲದರ ಮೇಲೆ ನಾಲ್ಕು ಜನರ ಒಂದು ಸಾಧಾರಣ ಕುಟುಂಬ ಯಾವುದೇ ಸಿನಿಮಾ ನೋಡಲು ಅಲ್ಲಿಗೆ ಹೋದರೆ ಅವರಿಗೆ ಟಿಕೆಟ್ ಮತ್ತು ಸ್ನಾಕ್ ನ ಖರ್ಚಿಗೆ ಕನಿಷ್ಠ 3000 ರೂಪಾಯಿ ಬೇಕು ಅಲ್ಲದೆ ಸಿನಿಮಾಗಳು ಬಿಡುಗಡೆಯಾದ ಮುಂದಿನ ಒಂದೆರಡು ತಿಂಗಳೊಳಗೆ ಅವು ಓಟಿಟಿಗೆ ಬರೋದರಿಂದ ಸಣ್ಣ ಬಜೆಟ್ನ ಸಿನಿಮಾಗಳಿಗೆ ಜನ ಯಾರು ಸಹ ಸಿನಿಮಾ ಹಾಲ್ಗೆ ಹೋಗೋದೇ ಇಲ್ಲ ಈಗೀಗಂತೂ ನಮ್ಮ ಜನ ಸಿನಿಮಾ ಹಾಲ್ಗೆ ಬರುವುದು ದೊಡ್ಡ ಸಿನಿಮಾಗಳು ದೊಡ್ಡ ನಟರಿರುವ ಅಥವಾ ಅದ್ದೂರಿ ವಿಶುವಲ್ ಎಫೆಕ್ಟ್ಸ್ ಇರುವ ಚಿತ್ರಗಳಿಗಾಗಿ ಮಾತ್ರ ಉದಾಹರಣೆಗೆ ಅನಿಮಲ್ ಕಲ್ಕಿ ಜವಾನ್ ಪಠಾನ್ ಕಾಂತಾರ ಹೀಗೆ ಈಗ ನಮ್ಮ ಜನ ಬರಿ ಇಂತಹ ಓವರ್ ಹೈಪೆಡ್ ಚಿತ್ರಗಳನ್ನೇ ನೋಡೋದು ಆದರೆ ರಿಲೀಸ್ ಆಗುವ ಪ್ರತಿ ಚಿತ್ರವು ಸಹ ಹೀಗೆ ಇರಲ್ಲ ಹಾಗಾದರೆ ಬೇರೆ ಚಿತ್ರಗಳು ಬಂದಾಗ ಪಿವಿಆರ್ ಗಳು ಬದುಕೋದು ಹೇಗೆ ಪಿವಿಆರ್ ತನಗಾಗ್ತಾ ಇರುವ ನಷ್ಟದಿಂದ ಹಾಗೂ ಆರ್ಥಿಕ ತೊಂದರೆಯಿಂದ ಮೇಲೆ ಬರಲು ಏನೇನು ತಂತ್ರಗಳನ್ನ ಮಾಡಬಹುದು.

ಪಿವಿಆರ್ ಗಳು ತಮ್ಮ ನಷ್ಟದಿಂದ ಹೊರಬರಲು ಈ ಕೆಳಗಿನ ತಂತ್ರಗಳನ್ನ ಅಳವಡಿಸಲು ಪ್ರಯತ್ನ ಪಡಬಹುದು ಅಂದರೆ ಬಹುಶಃ ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಅವು ನಷ್ಟದಿಂದ ಹೊರಬಂದು ಸಾಲ ತೀರಿಸಲು ಈ ತಂತ್ರಗಳು ಸಹಾಯ ಮಾಡಬಹುದು ಇವುಗಳನ್ನ ನಾವು ಅನಗತ್ಯ ವೆಚ್ಚ ಕಡಿಮೆ ಮಾಡುವ ತಂತ್ರಗಳು ಅಂತ ಕರೆಯಬಹುದು ಅವುಗಳಲ್ಲಿ ಮೊದಲನೆಯದ್ದು ನಾನ್ ಕೋರ್ ಆಸ್ತಿಗಳ ಮಾರಾಟ ನಷ್ಟವನ್ನಉಂಟುಮಾಡುವ ಅಥವಾ ಕಡಿಮೆ ಮೌಲ್ಯದ ಸಿನಿಮಾ ಹಾಲ್ಗಳು ತಮ್ಮ ಕೆಲ ಆಸ್ತಿಗಳನ್ನ ಮಾರಾಟ ಮಾಡಿ ಹಣ ಸಂಗ್ರಹಿಸಿ ಸಾಲ ತೀರಿಸಲು ಪ್ರಯತ್ನಿಸಬಹುದು ಈ ಪಿವಿಆರ್ ದೇಶದ 112 ನಗರಗಳಲ್ಲಿ ಸುಮಾರು 360 ಸಿನಿಮಾ ಹಾಲ್ಗಳನ್ನ ಅಂದರೆ ಒಟ್ಟು 1784 ಸ್ಕ್ರೀನ್ಗಳನ್ನ ನಿರ್ವಹಿಸುತ್ತಿದೆ ಮುಂಬೈ ಪುಣೆ ಒಡೋದರದಲ್ಲಿನ ಕಡಿಮೆ ಜನಸಂದಣಿಯ ಆಸ್ತಿಗಳನ್ನ ಮಾರಾಟ ಮಾಡಿ ಅವು ಸುಮಾರು 300 ರಿಂದ 400 ಕೋಟಿಯ ಹಣದ ನಿರೀಕ್ಷೆಯಲ್ಲಿವೆ ಎರಡನೇ ಕ್ರಮ ಏನೆಂದರೆ ಅದು ನಷ್ಟದಲ್ಲಿರುವ ಯೂನಿಟ್ಗಳನ್ನ ಮುಚ್ಚೋದು ಕಾರ್ಯ ನಿರ್ವಹಿಸದೆ ಇರುವ ು ಮಲ್ಟಿಪ್ಲೆಕ್ಸ್ ಗಳನ್ನ ಅದರಲ್ಲೂ ವಿಶೇಷವಾಗಿ ಹಳೆಯ ಮಾಲ್ಗಳಲ್ಲಿನ ಮಲ್ಟಿಪ್ಲೆಕ್ಸ್ ಗಳನ್ನ ಅವರು ಈಗ ಮುಚ್ಚುತಾ ಇದ್ದಾರೆ ಅದರಂತೆ ಕಳೆದ ವರ್ಷವಾದ 2024 ರಲ್ಲಿ 85 ಸ್ಕ್ರೀನ್ಗಳನ್ನ ಮುಚ್ಚಿದ್ದಾರೆ ಮತ್ತು 2025ರಲ್ಲಿ ಈವರೆಗೂ ಸುಮಾರು 70 ಸ್ಕ್ರೀನ್ಗಳನ್ನ ಮುಚ್ಚಲು ತೀರ್ಮಾನಿಸಲಾಗಿದೆ ಬಾಡಿಗೆ ಮತ್ತು ಆದಾಯ ಹಂಚಿಕೆ ಮರುರಾಜಿ ಮಾಡಿಕೊಳ್ಳುವುದು ಸಹ ಈ ದಿಸೆಯಲ್ಲಿ ನಷ್ಟ ತಪ್ಪಿಸಲು ಒಂದು ಸೂಕ್ತ ನಡೆ ಎನ್ನಬಹುದು ಇಲ್ಲಿ ಬಾಡಿಗೆಯ ವೆಚ್ಚ ವ ಅವರಿಗೆ ದೊಡ್ಡ ಮೇಂಟೆನೆನ್ಸ್ ಖರ್ಚು ಹಾಗಾಗಿ ಬಾಡಿಗೆಯ ಮೊತ್ತವನ್ನ ಕಡಿಮೆ ಮಾಡಲು ಅವರು ಪ್ರಯತ್ನಿಸುತ್ತಾ ಇದ್ದಾರೆ ಅಂದ್ರೆ ಈಗ ಲಾಕ್ ಇನ್ ಅವಧಿ ಮುಗಿದಿರುವಂತಹ ಅವರ ಆಸ್ತಿಗಳ ಬಾಡಿಗೆಯನ್ನ ಕಡಿಮೆ ಮಾಡಲು ಹಾಗೂ ಅವುಗಳನ್ನ ಸ್ಥಿರವಾಗಿಡಲು ಅಥವಾ ರೆವಿನ್ಯೂ ಶೇರಿಂಗ್ನ ರೇಶಿಯೋವನ್ನ ಕಡಿಮೆ ಮಾಡಲು ಅವರು ಯೋಚನೆ ಮಾಡ್ತಾ ಇದ್ದಾರೆ ನಾಲ್ಕನೆಯದ್ದು ಕ್ಯಾಪಿಟಲ್ ಲೈಟ್ ಮಾಡೆಲ್ನ ಜಾರಿ ಹೋಟೆಲ್ ಉದ್ಯಮದಲ್ಲಿರುವಂತೆ ಇವರು ಕ್ಯಾಪಿಟಲ್ ಲೈಟ್ ಮಾದರಿಯ ಕಡೆಗೆ ಹೋಗ್ತಾ ಇದ್ದಾರೆ.

ಸ್ವತಹ ಸಿನಿಮಾದಲ್ಲಿ ದಲ್ಲಿ ಹೆಚ್ಚಿನ ಇನಿಷಿಯಲ್ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಮಾಡೋದಿಲ್ಲ ಬದಲಿಗೆ ಅದನ್ನ ಫ್ರಾಂಚೈಸಿಯ ಮಾದರಿಯಲ್ಲಿ ಬಿಲ್ಡರ್ಗಳು ಅಥವಾ ಹೂಡಿಕೆದಾರರು ಸಿನಿಮಾ ಹಾಲ್ ಅನ್ನ ನಿರ್ಮಿಸುತ್ತಾರೆ ಆದರೆ ಪಿವಿಆರ್ ಅದನ್ನ ರನ್ ಮಾಡುತ್ತೆ ಅದೇ ಸ್ವತಹ ಇಲ್ಲಿ ಟಿಕೆಟ್ ಮಾರುತ್ತೆ ಚಿತ್ರ ಹಾಕುತ್ತೆ ಮತ್ತು ಸ್ನಾಕ್ಸ್ ಸೇಲ್ ಮಾಡುತ್ತೆ ಇದರ ನಂತರ ಅದರಿಂದ ಬಂದಂತ ಆದಾಯವನ್ನ ಹಂಚಿಕೊಳ್ಳಲಾಗುತ್ತೆ ಇನ್ನು ಈ ರೀತಿಯ ಸ್ಟ್ರಾಟರ್ಜಿ ಬಳಸಿ ತಮ್ಮ ಆದಾಯ ಹೆಚ್ಚಿಸುವ ತಂತ್ರಗಳ ಬಗ್ಗೆ ಹೇಳುವುದಾದರೆ ಅದರಲ್ಲಿ ಮೊದಲನೆಯದ್ದು ಹೊಸ ಸ್ಕ್ರೀನ್ಗಳನ್ನಾ ಸ್ಟಾರ್ಟ್ ಮಾಡುವುದು ಅಂದ್ರೆ ಈಗಾಗಲೇ ನಷ್ಟದಲ್ಲಿರುವ 155 ಸ್ಕ್ರೀನ್ಗಳನ್ನ ಮುಚ್ಚಿದ್ದರು ಸಹ 2024 ರಲ್ಲಿ 130 ಹೊಸ ಸ್ಕ್ರೀನ್ಗಳನ್ನ ಮತ್ತು 2025ರಲ್ಲಿ 120 ಹೊಸ ಸ್ಕ್ರೀನ್ಗಳನ್ನ ಅವರು ಅಲ್ಲಲ್ಲಿ ತೆರೆಯುತ್ತಿದ್ದಾರೆ ಅಂದರೆ ಒಟ್ಟು 250 ಹೊಸ ಸ್ಕ್ರೀನ್ಗಳು ಈಗ ತಲೆ ಎತ್ತಲು ರೆಡಿ ಇವೆ ಇವುಗಳಿಂದ ಹೊಸ ರೀತಿಯ ರೆವಿನ್ಯೂ ಹೆಚ್ಚಬಹುದು ಎರಡನೆಯದ್ದು ಸೌತ್ ಇಂಡಿಯನ್ ಸಿನಿಮಾಗಳಿಗೆ ಹಾಗೂ ಅಲ್ಲಿಯ ಸ್ಥಳೀಯ ವೀಕ್ಷಕರಿಗೆ ಹೆಚ್ಚಿನ ಒತ್ತು ಕೊಡುವುದು ಯಾಕಂದರೆ ಚಿತ್ರ ನೋಡುವ ಕ್ರೇಜ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚಿರೋದರಿಂದ ಅವರು ಹೆಚ್ಚಿನ ಹೊಸ ಸ್ಕ್ರೀನ್ಗಳನ್ನ ದಕ್ಷಿಣ ಭಾರತದಲ್ಲಿ ತೆರೆಯುವ ಬಗ್ಗೆ ಪ್ಲಾನ್ ಮಾಡ್ತಾ ಇದ್ದಾರೆ ಕಳೆದ ವರ್ಷ ಕಲ್ಕಿ ಬಿಡುಗಡೆಯಾದ ದಿನವೇ ಅವರು ಹೈದರಾಬಾದ್ನಲ್ಲಿ ನಾಲ್ಕು ಸ್ಕ್ರೀನ್ಗಳ ಹೊಸ ವೇದಿಕೆಯನ್ನ ಉದ್ಘಾಟಿಸಿದ್ದರು ಮೂರನೆಯದ್ದು ಸಬ್ಸ್ಕ್ರಿಪ್ಷನ್ ಕಾರ್ಯಕ್ರಮಗಳನ್ನ ನಡೆಸುವುದು ಈ ಮಲ್ಟಿಪ್ಲೆಕ್ಸ್ ಗಳ ಜನಸಂದಣಿಯನ್ನ ಹೆಚ್ಚಿಸುವ ಸಲುವಾಗಿ ಅವರು ಮಾಸಿಕ ಶುಲ್ಕದೊಂದಿಗೆ ಚಂದಾದಾರಿಕೆಯ ಕಾರ್ಯಕ್ರಮಗಳನ್ನ ಸಹ ಪ್ರಾರಂಭಿಸಿದ್ದಾರೆ ಇದು ಸಹ ಒಂದು ರೀತಿ ಪರೋಕ್ಷವಾಗಿ ಅವರ ರೆವಿನ್ಯೂ ಹೆಚ್ಚಾಗಲು ಕಾರಣವಾಗುತ್ತದೆ ಹಾಗೂ ಐಪಿಎಲ್ ಅಥವಾ ವಿಶ್ವಕಪ್ ನಂತಹ ಅವಧಿಯಲ್ಲಿ ಬಿಗ್ ಸ್ಕ್ರೀನ್ ನಲ್ಲಿ ಪಂದೆಗಳನ್ನ ಪ್ರಸಾರ ಮಾಡುವುದು ಟೈಲರ್ ಸ್ವಿಫ್ಟ್ ಅಥವಾ ಎಆರ್ ರಹಮಾನ್ರಂತಹ ಕಲಾವಿಧರ ಸಂಗೀತ ಕಚೇರಿಗಳನ್ನ ಲೈವ್ ಪ್ರಸಾರ ಮಾಡುವುದು ಹಳೆಯ ಸಿನಿಮಾಗಳ ಉತ್ಸವವನ್ನ ಏರ್ಪಡಿಸುವುದು ಅಂದರೆ ಉದಾಹರಣೆಗೆ ಕೆಲವೊಂದು ಹಳೆಯ ಸಿನಿಮಾಗಳನ್ನ ರೀರಿಲೀಸ್ ಮಾಡುವುದು ಇವೆಲ್ಲ ಸಿನಿಮಾ ಹಾಲ್ಗೆ ಬರುವ ಜನರ ಸಂಖ್ಯೆಯನ್ನ ಹೆಚ್ಚಿಸಲು ಸಹಾಯ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments