Thursday, January 15, 2026
HomeLatest NewsReliance vs Govt ಅಂಬಾನಿ ವಿರುದ್ಧ ಮೋದಿ ಸರ್ಕಾರ: ₹30 ಬಿಲಿಯನ್ ಡಾಲರ್ ದಂಡ?

Reliance vs Govt ಅಂಬಾನಿ ವಿರುದ್ಧ ಮೋದಿ ಸರ್ಕಾರ: ₹30 ಬಿಲಿಯನ್ ಡಾಲರ್ ದಂಡ?

ಇತ್ತೀಚಿಗಷ್ಟೇ ಭಾರತದ ತೈಲ ಕ್ಷೇತ್ರದಲ್ಲಿ ಒಂದು ಹೀನಾಯ ಸ್ಥಿತಿ ಎದುರಾಗಿದೆ ಈ ಕ್ಷೇತ್ರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಕಂಪನಿಗಳು ಈಗ ಅಕ್ಷರಶಹ ಕೈಚಲ್ಲಿ ಕುಳಿತಿವೆ ಸಮುದ್ರದ ಆಳದ ನಿಕ್ಷೇಪಗಳಿಂದ ಅನಿಲವನ್ನ ಹೊರತೆಗೆಯಲು ಸಾಧ್ಯವಾಗದೆ ಕಂಪನಿಗಳು ಸಂಪೂರ್ಣವಾಗಿ ವಿಫಲವಾಗಿದೆ ಎನ್ನಲಾಗ್ತಾ ಇದೆ ಕೃಷ್ಣ ಗೋದಾವರಿ ಜಲನಯನ ಪ್ರದೇಶದ ಕೆಜಿಡಿಸ ಬ್ಲಾಕ್ ನಲ್ಲಿನ ಅನಿಲ ಉತ್ಪಾದನೆ ಕುರಿತು 2016 ರಿಂದಲೂ ನ್ಯಾಯಾಲಯದಲ್ಲಿ ಚರ್ಚೆ ನಡೆಯುತ್ತಲೆ ಇತ್ತು. ಕಳೆದ ನವೆಂಬರ್ ಏಳರಂದು ಇದರ ಅಂತಿಮ ವಾದವು ಮುಕ್ತಾಯಿಗೊಂಡಿದೆ. ವ್ಯಾಪಾರಿಗಳ ಊಹೆಯಂತೆ 2026 ರಲ್ಲಿ ದೇಶದಲ್ಲಿ ತೈಲದ ಭಾರಿ ಕೊರತೆ ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ನಾವು ತೈಲವನ್ನ ಮಿತವಾಗಿ ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಒಟ್ಟಲ್ಲಿ ಹೇಳೋದಾದರೆ ಭಾರತದ ಇಂಧನ ಭವಿಷ್ಯಕ್ಕೆ ಕತ್ತಲು ಕವಿದಂತಿದೆ. ನ್ಯಾಯಾಲಯದಲ್ಲಿ ಅಂತಿಮವಾಗಿ ಹೊರವಿದ್ದ ತೀರ್ಮಾನವಾದರೂ ಏನು ವ್ಯಾಪಾರಿಗಳು ಓಹಿಸಿರುವಂತೆ ತೈಲದ ಕೊರತೆ ಯಾವ ಪ್ರಮಾಣದಲ್ಲಿರಲಿದೆ ಈ ಬಿಕ್ಕಟ್ಟಿನಿಂದ ಭಾರತ ಎಂತಹ ಆರ್ಥಿಕ ಹೊಡತಗಳನ್ನ ಎದುರಿಸಬೇಕಾಗುತ್ತೆ ಇದೆಲ್ಲದರ ಸಂಪೂರ್ಣ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ತೋರಿಸ್ತೀವಿ ನೋಡಿ ಭಾರತದ ಇಂಧನ ಸ್ವಾವಲಂಭನೆಯನ್ನ ಹೆಚ್ಚಿಸುವ ಕನಸಿನೊಂದಿಗೆಡಿಒ ಮತ್ತುಡಿ ಡಿ3 ಎಂಬ ಅತ್ಯಂತ ಪ್ರಮುಖ ಆಳ ಸಮುದ್ರದ ಯೋಜನೆಗಳನ್ನ ಆರಂಭಿಸಲಾಯಿತು ಆದರೆ ಈ ಉನ್ನತ ಮಟ್ಟದ ಯೋಜನೆಯು ಅನಿರೀಕ್ಷಿತವಾಗಿ ನೀರಿನ ಒಳಹರಿವು ಮತ್ತು ಜಲಾಶಯದ ಒತ್ತಡ ಕುಸಿದಂತಹ ತಾಂತ್ರಿಕ ತೊಂದರೆಗಳಿಗೆ ಸಿಲುಕಿತು ಇದು ಕೇವಲ ಉತ್ಪಾದನೆಯಲ್ಲಿ ಅಷ್ಟೇ ಅಲ್ಲದೆ ಯೋಜನಾ ವೆಚ್ಚವನ್ನ ಸರ್ಕಾರದಿಂದ ಮರಳಿ ಪಡೆಯುವ ಪ್ರಕ್ರಿಯೆಯಲ್ಲೂ ದೊಡ್ಡ ವಿವಾದವನ್ನೇ ಸೃಷ್ಟಿಸಿತು ಒಂದು ಕಾಲದಲ್ಲಿ ಈ ಅನಿಲ ನಿಕ್ಷೇಪವು ಭಾರತವನ್ನ ಇಂಧನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಕ್ತಿಯನ್ನಾಗಿ ಮಾಡುತ್ತದೆ ಎಂಬ ದೊಡ್ಡ ನಿರೀಕ್ಷೆ ಇತ್ತು.

ಆದರೆ ರಿಲಯನ್ಸ್ ಮತ್ತು ಸರ್ಕಾರದ ನಡುವಿನ ಇತ್ತೀಚಿನ ಹೇಳಿಕೆಗಳನ್ನ ನೋಡಿದ್ರೆ ಈ ನಿರೀಕ್ಷೆಗಳು ಖುಸಿಯಾಗಿರೋದು ಸ್ಪಷ್ಟವಾಗಿದೆ. ನಿರೀಕ್ಷಿತ ಪ್ರಮಾಣದ ಅನಿಲ ಸಿಗದ ಕಾರಣ ಭಾರತವು ಇಂದು ವಿದೇಶಿ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗಿದೆ. ಸ್ನೇಹಿತರೆ ಈ ವಿವಾದದ ಮೂಲವನ್ನ ಹುಡುಕುತ್ತಾ ಹೋದರೆ ನಾವು 2012 ಕ್ಕೆ ಹೋಗಬೇಕಾಗುತ್ತೆ. ಅಂದು ತೈಲ ಸಚಿವಾಲಯವು ಸಂಸತ್ತಿಗೆ ಒಂದು ಲಿಖಿತ ಹೇಳಿಕೆಯನ್ನ ನೀಡಿತ್ತು. ಅದರ ಪ್ರಕಾರ ಕೆಜಿಡಿಸ ಅನಿಲ್ ನಿಕ್ಷೇಪದ ಕೆಲಸ ಆರಂಭಿಸುವ ಮೊದಲು ರಿಲಯನ್ಸ್ ಸಂಸ್ಥೆಯು ಒಂದು ಅಂದಾಜನ್ನ ನೀಡಿತ್ತು ಅದೆಂದರೆ ಬರಿಡಿಒ ಮತ್ತುಡಿ3 ಕ್ಷೇತ್ರಗಳಿಂದಲೇ ಸುಮಾರು 10.3 ಟ್ರಿಲಿಯನ್ ಘನ ಅಡಿಗಳಷ್ಟು ಅನಿಲವನ್ನ ಹೊರತೆಗೆಯಬಹುದು ಎಂದು ಈ ಅಂಕಿ ಅಂಶ ಇಡೀ ದೇಶದಲ್ಲೇ ಹೊಸ ಭರವಸೆಯನ್ನ ಮೂಡಿಸಿತ್ತು ಆದರೆ ದಿನಗಳು ಕಳೆದಂತೆ ಪರಿಸ್ಥಿತಿ ಬದಲಾಯಿತು ನಿರೀಕ್ಷಿತ ಪ್ರಮಾಣದಲ್ಲಿ ಅನಿಲ ಉತ್ಪಾದನೆಯಾಗದಿದ್ದಾಗ ಕೇಂದ್ರದ ತೈಲ ಸಚಿವಾಲಯ ಕಾನೂನು ಇಲಾಖೆ ಮತ್ತು ಮಾಹಿತಿ ಸಚಿವಾಲಯಗಳು ಈ ಬಗ್ಗೆ ಸ್ಪಷ್ಟನೆ ಕೋರಿದವು ಅಷ್ಟೇ ಯಾಕೆ ಸ್ವತಃ ಪ್ರಧಾನಮಂತ್ರಿ ಕಚೇರಿಯ ವಕ್ತಾರರು ಸಹ ಈ ಕುರಿತು ಮಾಹಿತಿ ನೀಡುವಂತೆ ಹಲವಾರು ವಿನಂತಿಗಳನ್ನ ಮಾಡಿದ ಇದ್ದರು ಆದರೆ ಆಶ್ಚರ್ಯವೇನಂದ್ರೆ ಅಷ್ಟು ದೊಡ್ಡ ಮಟ್ಟದ ಪ್ರಶ್ನೆಗಳಿಗೆ ಮತ್ತು ವಿನಂತಿಗಳಿಗೆ ಎಲ್ಲಿಂದಲೂ ಉತ್ತರ ಸಿಗಲೇ ಇಲ್ಲ ಅಂದು ಹೇಳಿದ ಪ್ರಶ್ನೆಗಳು ಇಂದಿಗೂ ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿವೆ.

ಈ ಕಥೆ ಶುರುವಾಗುವುದು 2000ನೆಯ ಇಸವಿಯಲ್ಲಿ ಭಾರತದ ದಕ್ಷಿಣ ರಾಜ್ಯವಾದ ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ಅಂದರೆ ಬಂಗಾಳ ಕೊಲ್ಲಿಯ ಆಳದಲ್ಲಿ ಅಡಗಿರುವ ಈ ಬೃಹತ್ ಅನಿಲ ನಿಕ್ಷೇಪವನ್ನ ಭಾರತ ಸರ್ಕಾರವು ರಿಲಯನ್ಸ್ ಇಂಡಸ್ಟ್ರೀಸ್ ಗೆ ಹಸ್ತಾಂತರಿಸಿತು ಬಿಲಿಯನೇರ್ ಮುಕೇಶ್ ಅಂಬಾನಿ ಅವರ ನೇತೃತ್ವದಲ್ಲಿ ಉತ್ಪಾದನ ಹಂಚಿಕೆ ಒಪ್ಪಂದ ಅಥವಾ ಪಿಎಸ್ಸಿ ಅಡಿಯಲ್ಲಿ ಈ ಹಕ್ಕುಗಳನ್ನ ನೀಡಲಾಯಿತು ಅಂದಿನಿಂದ ಮುಕೇಶ್ ಅಂಬಾನಿ ಅವರೇ ಈ ಮಹತ್ವಾಕಾಂಕ್ಷೆಯ ಯೋಜನೆಯ ಸೂತ್ರಧಾರಿಯಾದರು ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ 30 ಬಿಲಿಯನ್ ಡಾಲರ್ ಮೊತ್ತದ ಹಕ್ಕು ಇದೆಯಲ್ಲ ಇದು ಭಾರತ ಸರ್ಕಾರವು ಒಂದು ಖಾಸಗಿ ನಿಗಮದೊಂದಿಗೆ ನಡೆಸಿರುವ ಇತಿಹಾಸದ ಅತಿ ದೊಡ್ಡ ವ್ಯವಹಾರಗಳಲ್ಲಿ ಒಂದಾಗಿದೆ ಅಂದ್ರೆ ಇಷ್ಟೊಂದು ನಿರೀಕ್ಷೆ ಇಟ್ಟಕೊಂಡಿದ್ದ ಯೋಜನೆ ಈಗ ಸಂಕಷ್ಟಕ್ಕೆ ಸಿಲುಕಿದೆಡಿಒ ಮತ್ತುಡಿ3 ಕ್ಷೇತ್ರಗಳಲ್ಲಿ ಕಂಪನಿ ಅನುಸರಿಸಿದ ತಂತ್ರಗಳು ಅಥವಾ ತಾಂತ್ರಿಕ ವಿಫಲತೆಗಳಿಂದಾಗಿ ಇಂದು ಯೋಜನೆ ಮುಗ್ಗರಿಸಿದೆ ಇದರಿಂದಾಗಿ ದೇಶಕ್ಕೆ ಬರಬೇಕಿದ್ದ ಬೃಹತ್ ಲಾಭದ ಬದಲು ಬಾರಿ ನಷ್ಟ ಉಂಟಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಈ ಕಥೆಯಲ್ಲಿ ಒಂದು ದೊಡ್ಡ ತಿರುವು ಬರುವುದು 2011ರಲ್ಲಿ ಆಗರಿಲಯನ್ಸ್ ಕಂಪನಿಯು ತಾನು ದೇಶದಾದ್ಯಂತ ಹೊಂದಿದ್ದ 21 ತೈಲ ಮತ್ತು ಅನಿಲ ಉತ್ಪಾದನ ಹಂಚಿಕೆ ಒಪ್ಪಂದಗಳಲ್ಲಿ ಶೇಕಡ 30ರಷ್ಟು ಪಾಲನ್ನ ಬ್ರಿಟಿಷ್ ಪೆಟ್ರೋಲಿಯಂ ಅಥವಾ ಬಿಪಿ ಕಂಪನಿಗೆ ಮಾರಾಟ ಮಾಡ್ತು ಈ ವ್ಯವಹಾರದ ಒಟ್ಟು ಮೌಲ್ಯ ಬರೊಬ್ಬರಿ 7.2 ಬಿಲಿಯನ್ ಡಾಲರ್ ಅಂದರೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಕಂಪನಿಯನ್ನ ರಿಲಯನ್ಸ್ ತನ್ನ ಪಾಲುದಾರನನ್ನಾಗಿ ಮಾಡಿಕೊಂಡಿತ್ತು ನಿಯಮದ ಪ್ರಕಾರ ರಿಲಯನ್ಸ್ ಮತ್ತು ಸರ್ಕಾರದ ನಡುವೆ ಏನೇ ವಿವಾದಗಳು ಬಂದರು ಅದನ್ನ ನ್ಯಾಯಮಂಡಳಿಯ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳಬೇಕು ಈಗ ಎದ್ದಿರುವ ಅಸಲಿ ವಿವಾದವೇನು ಗೊತ್ತಾಡಿಒ ಮತ್ತುಡಿ3 ನಿಕ್ಷೇಪಗಳಿಂದ ಸುಮಾರು 10 ಟ್ರಿಲಿಯನ್ ಘನ ಅಡಿಗಳಷ್ಟು ಅನಿಲ ಸಿಗಬಹುದು ಎಂದುರಿಲಯನ್ಸ್ ಅಂದಾಜಿಸಿತ್ತು ಆದರೆ ವಾಸ್ತವದಲ್ಲಿ ಉತ್ಪಾದನೆ ಆಗಿದ್ದು ಕೇವಲ ಶೇಕಡ 20ರಷ್ಟು ಮಾತ್ರ ಅಂದ್ರೆ ನಿರೀಕ್ಷಿತ ಅನಿಲ ಎಲ್ಲಿ ಹೋಯಿತು ಎಂಬ ಪ್ರಶ್ನೆ ಸರ್ಕಾರವನ್ನ ಕಾಡ್ತಾ ಇದೆ ಸರ್ಕಾರದ ಪರ ವಾದ ಮಾಡುತ್ತಿರುವವರು ಒಂದು ಗಂಭೀರವಾದ ಅಂಶವನ್ನ ಮುಂದಿಟ್ಟಿದ್ದಾರೆರಿಲಯನ್ಸ್ ಮತ್ತು ಬಿಪಿ ಕಂಪನಿಗಳು ಅಂದಾಜಿಸಿದ್ದ ಅನಿಲವನ್ನ ಉತ್ಪಾದಿಸುವಲ್ಲಿ ವಿಫಲವಾಗಿರುವುದರಿಂದ ಆ ಕೊರತೆಯ ಮೌಲ್ಯವನ್ನ ಸರ್ಕಾರಕ್ಕೆ ಪರಿಹಾರವಾಗಿ ಪಾವತಿಸಬೇಕು ಎಂಬ ಅಭಿಪ್ರಾಯ ಈಗ ಬಲವಾಗಿ ಕೇಳಿ ಬರ್ತಾ ಇದೆ ಇದು ಕೇವಲ ತಾಂತ್ರಿಕ ತಪ್ಪೋ ಅಥವಾ ಉದ್ದೇಶ ಪೂರ್ವಕ ವಿಫಲತೆಯೋ ಎಂಬುವುದು ಈಗ ನ್ಯಾಯಮಂಡಳಿಯ ಮುಂದಿರುವ ದೊಡ್ಡ ಪ್ರಶ್ನೆ 2020ರ ಫೆಬ್ರವರಿಯಲ್ಲಿ ರಿಲಯನ್ಸ್ ಸಂಸ್ಥೆಡಿ ಒನ್ ಮತ್ತುಡಿ3 ಕ್ಷೇತ್ರಗಳಲ್ಲಿ ಅನಿಲ ಉತ್ಪಾದನೆಯನ್ನ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಘೋಷಣೆ ಮಾಡ್ತು.

ಈ ಬ್ಲಾಕ್ನಿಂದ ಒಟ್ಟಾರೆ ಮೂರು ಟಿಸಿಎಫ್ ಅನಿಲ ಉತ್ಪಾದನೆಯಾಗಿದೆ ಎಂದು ಕಂಪನಿ ಹೇಳಿಕೊಂಡರುಡಿಒ ಮತ್ತುಡಿ3 ಕ್ಷೇತ್ರಗಳ ನಿಖರ ಉತ್ಪಾದನೆಯನ್ನ ಮಾತ್ರ ಎಲ್ಲಿಯೂ ಬಹಿರಂಗಪಡಿಸಿಲ್ಲ ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ ಲಾಭ ಹಂಚಿಕೊಳ್ಳುವ ಮೊದಲು ಕಂಪನಿಯು ತಾನು ಮಾಡಿದ ವೆಚ್ಚವನ್ನ ಮರಳಿ ಪಡೆಯಲು ಅವಕಾಶ ಇತ್ತು ಆದರೆ ಆರಂಭದಲ್ಲಿ ಸರ್ಕಾರದ ಲಾಭದ ಪಾಲು ಕೇವಲ ಶೇಕಡಹತರಷ್ಟಿತ್ತು ವೆಚ್ಚವೆಲ್ಲ ವಸೂಲಿಯಾದ ನಂತರ ಅದು ಹೆಚ್ಚಾಗಬೇಕಿತ್ತು ಆದರೆ ಅನಿಲ ಉತ್ಪಾದನೆ ನಿರೀಕ್ಷಿತ ಮಟ್ಟಕ್ಕೆ ತಲುಪದಿದ್ದಾಗ ಈ ಲಾಭದ ಹಂಚಿಕೆಯಲ್ಲಿ ವ್ಯತ್ಯಯ ಉಂಟಾಯಿತು ಇದು ತಾಂತ್ರಿಕ ಸಮಸ್ಯೆಯೋ ಅಥವಾ ಲಾಭವನ್ನ ಕಡಿಮೆ ತೋರಿಸುವ ತಂತ್ರವೋ ಎಂಬ ಗೊಂದಲವೇ ಈಗ ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ ಈಗ ಈಗ ನಡೆಯುತ್ತಿರುವ ಮಧ್ಯಸ್ಥಿಕೆ ವಿಚಾರಣೆಯ ಸಮಯದಲ್ಲಿ ಸರ್ಕಾರ ಒಂದು ಗಂಭೀರ ಆರೋಪ ಮಾಡಿದೆರಿಲಯನ್ಸ್ ಕಂಪನಿಯು ಅನಗತ್ಯವಾಗಿ ಮತ್ತು ಆಕ್ರಮಣಕಾರಿ ಉತ್ಪಾದನಾ ವಿಧಾನಗಳನ್ನ ಅನುಸರಿಸುವ ಮೂಲಕ ಅನಿಲ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡಿದೆ ಇದರಿಂದಾಗಿ ನೈಸರ್ಗಿಕ ನಿಕ್ಷೇಪಗಳು ನಷ್ಟವಾಗಿವೆ ಎಂಬುವುದು ಸರ್ಕಾರದ ವಾದ ಈ ಕಾರಣಕ್ಕಾಗಿಯೇ ಸರ್ಕಾರ ಬರೊಬ್ಬರಿ 30 ಬಿಲಿಯನ್ ಡಾಲರ್ ಪರಿಹಾರ ನೀಡಬೇಕು ಅಂತ ಸಮರ್ಥಿಸಿಕೊಳ್ಳುತ್ತಾ ಇದೆ ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ.

ರಿಲಯನ್ಸ್ ತಾನು ಯಾವುದೇ ತಪ್ಪು ಮಾಡಿಲ್ಲ ೆಂದು ಆರಂಭದಲ್ಲಿ ಯೋಜಿಸುದಕ್ಕಿಂತ ಕಡಿಮೆ ಪ್ರಮಾಣದ ಅನಿಲ ಮೂಲಗಳು ಇಲ್ಲಿ ಲಭ್ಯವಿದ್ದವು ಎಂದು ವಾದ ಮಾಡ್ತಾ ಇದೆ ಅಂತಿಮವಾಗಿ ಈ ಅನಿಲ ನಿಕ್ಷೇಪಗಳ ನೈಜ್ಯ ಸ್ಥಿತಿ ಮತ್ತು ಹಂಚಿಕೆಯ ವಿವಾದ ಈಗ ಕಾನೂನು ಸಮರದ ತುತ್ತ ತುದಿಗೆ ಬಂದು ನಿಂತಿದೆ ಸ್ನೇಹಿತರೆ ಈ ಇಡೀ ವಿವಾದದಲ್ಲಿ ಬ್ರಿಟಿಷ್ ಪೆಟ್ರೋಲಿಯಂ ಅಥವಾ ಬಿಪಿ ಕಂಪನಿಯ ಪಾತ್ರ ಅತ್ಯಂತ ದೊಡ್ಡದು ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಈ ಯೋಜನೆಗೆ ಜಾಗತಿಕ ಮಣ್ಣಣೆ ಸಿಕ್ಕಿದ್ದೆ 2011ರಲ್ಲಿ ಬಿಪಿ ಪ್ರವೇಶದ ನಂತರ ಅಂದು ಸುಮಾರು 7.2 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕರಿಲಯನ್ಸ್ನ 21 ತೈಲ ಮತ್ತು ಅನಿಲ ಹಂಚಿಕೆ ಒಪ್ಪಂದಗಳಲ್ಲಿ ಬಿಪಿ ಶೇಕಡ 30ರಷ್ಟು ಪಾಲನ್ನ ಪಡೆದುಕೊಳ್ಳತು ಆಳ ಸಮುದ್ರದ ಅನಿಲ ಉತ್ಪಾದನೆಯಲ್ಲಿ ಬಿಪಿ ಹೊಂದಿರುವ ಜಾಗತಿಕ ಅನುಭವ ಮತ್ತು ತಾಂತ್ರಿಕ ಪರಿಣಿತಿ ಭಾರತದ ಇಂಧನ ಸಮಸ್ಯೆಯನ್ನ ನೀಗಿಸುತ್ತದೆ ಎಂಬ ದೊಡ್ಡ ನಿರೀಕ್ಷೆ ಇತ್ತು ಆದರೆ ವಾಸ್ತವದಲ್ಲಿ ಬಿಪಿ ಸೇರಿಕೊಂಡ ನಂತರವೂಡಿಒ ಮತ್ತುಡಿ3 ಕ್ಷೇತ್ರಗಳ ತಾಂತ್ರಿಕ ಸಮಸ್ಯೆಗಳನ್ನ ಅಥವಾ ಉತ್ಪಾದನ ಕುಸಿತವನ್ನ ತಡೆಯಲು ಸಾಧ್ಯವಾಗಲಿಲ್ಲ ಇಂದು ನಡೆಯುತ್ತಿರುವ ಕಾನ ಕಾನೂನು ಹೋರಾಟದಲ್ಲಿ ಬಿಪಿ ನೇರವಾಗಿ ಮುಂಚೂಣಿಯಲ್ಲಿ ಇಲ್ಲದಿದ್ದರು

ರಿಲಯನ್ಸ್ ಪಾಲುದಾರ ಕಂಪನಿಯಾಗಿ ಸರ್ಕಾರದ ಎಲ್ಲಾ ಆರೋಪಗಳಿಗೆ ಅದು ಕೂಡ ಪರೋಕ್ಷವಾಗಿ ಹೊಣೆಯಾಗಿದೆ ಬ್ರಿಟಿಷರು ಮೊದಲನಿಂದಲೂ ಜಾಣ ಕಿವಿಡರು ಎಂಬ ಮಾತಿದೆ ಹಾಗೆಯೇ ಈ ವಿವಾದದಲ್ಲಿಯೂ ಬ್ರಿಟಿಷ್ ಪೆಟ್ರೋಲಿಯಂ ಕಂಪನಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದೆ ಇದು ಅವರ ಒಂದು ವ್ಯವಹಾರಿಕ ತಂತ್ರವೇ ಆಗಿದ್ದು ಕಾನೂನು ಹೋರಾಟವನ್ನ ರಿಲಯನ್ಸ್ ಮೂಲಕವೇ ಎದುರಿಸಿ ತೀರ್ಪಿಗಾಗಿ ಕಾಯುತ್ತಿದೆ ಬಿಪಿ ಒಂದು ಪ್ರಬಲ ಹೋಡಿಕೆದಾರ ಮತ್ತು ಅಂತರಾಷ್ಟ್ರೀಯ ತಾಂತ್ರಿಕ ಪಾಲುದಾರನಾಗಿದ್ದರು ಸಹ ಕೆಜಿಡಿಸ ಯೋಜನೆಯ ವಿಫಲತೆಯನ್ನ ತಡೆಯಲು ಆ ಕಂಪನಿಗೂ ಸಾಧ್ಯವಾಗಲಿಲ್ಲ ಎಂಬುವುದು ಇಲ್ಲಿ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗ್ತಾ ಇರುವ ವಿಚಾರ ಈ ಮಧ್ಯಸ್ಥಿಕೆ ವಿವಾದವು ಭಾರತದ ಇಂಧನ ಕ್ಷೇತ್ರದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನ ಬೀರಲಿದೆ ಕೆಜಿಡಿಸ ಕ್ಷೇತ್ರದಿಂದ ನಿರೀಕ್ಷಿತ ಅನಿಲ ಸಿಗದಿರುವುದು ದೇಶದ ಒಟ್ಟು ನೈಸರ್ಗಿಕ ಅನಿಲ ಉತ್ಪಾದನೆಯನ್ನೇ ಕುಗ್ಗಿಸಿದೆ ಆರಂಭದಲ್ಲಿ ದಿನಕ್ಕೆ 80 ಮಿಲಿಯನ್ ಸ್ಟ್ಯಾಂಡರ್ಡ್ಸ್ ಕ್ಯೂಬಿಕ್ ಮೀಟರ್ ಅನಿಲದ ನಿರೀಕ್ಷೆ ಇತ್ತು ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ವಾಸ್ತವದ ಉತ್ಪಾದನೆ ಅದರ ಒಂದು ಸಣ್ಣ ಭಾಗಕ್ಕೆ ಸೀಮಿತವಾಯಿತು ಇದರ ನೇರ ಹೊಡೆತ ನಮ್ಮ ವಿದ್ಯುತ್ ಉತ್ಪಾದನೆ ರಸಗೊಬ್ಬರ ಕೈಗಾರಿಕೆ ಹಾಗೂ ನಗರ ಅನಿಲ ವಿತರಣ ವ್ಯವಸ್ಥೆಗಳ ಮೇಲೆ ಬಿತ್ತು ದೇಶೀಯ ಉತ್ಪಾದನೆ ಕುಸಿದ ಕಾರಣ ಭಾರತವು ಅನಿವಾರ್ಯವಾಗಿ ದುಬಾರಿ ಬೆಲೆಯ ಎಲ್ಪಿಜಿ ಆಮದಿನ ಮೇಲೆ ಅವಲಂಬಿತವಾಯಿತು ಇದು ನಮ್ಮ ವಿದೇಶಿ ವಿನಿಮಯದ ಮೇಲೆ ಭಾರಿ ಒತ್ತಡ ಹೇರಿದ್ದಲ್ಲದೆ ಸರ್ಕಾರಕ್ಕೆ ಬರಬೇಕಿದ್ದ ಲಾಭದ ಪಾಲು ಕೂಡ ಗಣನೀಯವಾಗಿ ಕಡಿಮೆಯಾಯಿತು ಸರ್ಕಾರವು ಈಗ ಕೇಳುತ್ತಿರುವ 30 ಬಿಲಿಯನ್ ಡಾಲರ್ ಪರಿಹಾರವೇ ನಮಗಾಗಿರುವ ನಷ್ಟದ ತೀವ್ರತೆಯನ್ನ ಎತ್ತಿ ತೋರಿಸುತ್ತಿದೆ.

ನಾವು ಸೂಕ್ಷ್ಮವಾಗಿ ಗಮನಿಸಿದರೆ ಭಾರತವು 2030ರ ವೇಳೆಗೆ ತನ್ನ ಒಟ್ಟು ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನ ಶೇಕಡ 15ಕ್ಕೆ ಹೆಚ್ಚಿಸುವ ಗುರಿ ಇಟ್ಟಕೊಂಡಿದೆ ಆದರೆ ಕೆಜಿಡಿಸ ನಂತಹ ಬೃಹತ್ ಯೋಜನೆಗಳು ವಿಫಲವಾಗಿದ್ದರಿಂದ ಈ ಗುರಿ ತಲುಪುವುದು ಈಗ ಕಷ್ಟದಹ ಹಾದಿಯಾಗಿದೆ ಇದರಿಂದಾಗಿ ಭಾರತವು ಇಂದಿಗೂ ತೈಲ ಮತ್ತು ಅನಿಲಕ್ಕಾಗಿ ವಿದೇಶಿ ಆಮದಿನ ಮೇಲೆಯೇ ಅವಲಂಬಿತರಾಗಿರಬೇಕಾದ ಅನಿವಾರ್ಯತೆ ಮುಂದುವರೆಯಲಿದೆ ಅಷ್ಟೇ ಅಲ್ಲದೆ ಈ ವಿವಾದವು ಹಳೆಯ ಉತ್ಪಾದನ ಹಂಚಿಕೆ ಒಪ್ಪಂದ ಮಾದರಿಯ ಮೇಲಿನ ವಿಶ್ವಾಸವನ್ನೇ ಕುಂದಿಸಿದೆ ಇದರ ಪರಿಣಾಮವಾಗಿಯೇ ಸರ್ಕಾರವು ಮುಂದೆ ರೆವಿನ್ಯೂ ಶೇರಿಂಗ್ ಮಾಡೆಲ್ ಮತ್ತು ಹೈಡ್ರೋಕಾರ್ಬನ್ ಎಕ್ಸ್ಪ್ಲೋರೇಷನ್ ಅಂಡ್ ಲೈಸೆನ್ಸಿಂಗ್ ಪಾಲಿಸಿ ಎಂಬ ಹೊಸ ನೀತಿಗಳನ್ನ ಜಾರಿಗೆ ತರಬೇಕಾಯಿತು ಹೀಗೆ ಇಂಧನ ಕ್ಷೇತ್ರದಲ್ಲಿನ ಒಂದು ವಿಫಲತೆಯು ಇಡೀ ದೇಶದ ಆರ್ಥಿಕತೆಯ ಮೇಲೆ ಸುದೀರ್ಘ ಪರಿಣಾಮ ಬೀರಿದೆ. ನಿಮ್ಮ ಪ್ರಕಾರ ಭಾರತವು ಮುಂಬರುವ ದಿನಗಳಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಯಾವ ರೀತಿಯ ತಂತ್ರಗಳನ್ನ ಅಳವಡಿಸಿಕೊಳ್ಳಬೇಕು ಈ ಬಿಕ್ಕಟ್ಟಿನಿಂದ ಹೊರಬರಲು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಚ್ಚಿನ ಒತ್ತು ನೀಡಬೇಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments