ಭಾರತದಲ್ಲಿ ಒಂದು ರೀತಿ ಕೆಲಸಕ್ಕೆ ಸೇರುವುದೆಂದರೆ ಜೀತಕ್ಕೆ ಸೇರಿದಂತೆ ಕನಿಷ್ಠ ಎಂಟು ಗಂಟೆ ಕೆಲಸ ಮಾಡಿಸಿಕೊಳ್ಳಬೇಕಾದ ಕಂಪನಿಗಳು ಸಂಸ್ಥೆಗಳು ಉದ್ಯೋಗಿಗಳನ್ನ ಗುಲಾಮರಂತೆ ನಡೆಸಿಕೊಳ್ಳುವುದೇ ಹೆಚ್ಚು ಆದರೆ ನಮ್ಮಲ್ಲಿ ಆಗಾಗ ಉದ್ಯೋಗ ಹಾಗೂ ವಯಕ್ತಿಕ ಜೀವನವನ್ನ ಸಮತೋಲನಗೊಳಿಸುವ ಚರ್ಚೆಗಳು ನಡೀತಾನೆ ಇರುತ್ತವೆ ಮುಂದುವರೆದ ದೇಶಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೆಲಸ ಹಾಗೂ ವಯಕ್ತಿಕ ಬದುಕಿನ ಹೊಂದಾಣಿಕೆಯ ಸಮತೋಲನ ಅತ್ಯಂತ ಉಚ್ಚಮಟ್ಟದಲ್ಲಿರುತ್ತದೆ ನೀವೇನಾದರೂ ಬೆಳಗ್ಗೆ 9:00 ಗಂಟೆಯಿಂದ ಸಂಜೆಆು ಗಂಟೆವರೆಗೆ ಕೆಲಸ ಮಾಡ್ತಿದ್ದೀರಿ ಅಂದ್ರೆ ಸಂಜೆಆು ಗಂಟೆಯ ಬಳಿಕ ಪರಿಪೂರ್ಣ ಸಮಯ ನಿಮ್ಮದೇ ಕೆಲಸದ ಜಂಜಾಟ ಫೋನ್ ಕರೆ ಇಮೇಲ್ ರಿಪ್ಲೈ ಇವ್ಯಾವು ಇರೋದಿಲ್ಲ ಅದು ಸಂಪೂರ್ಣವಾಗಿ ನಿಮ್ಮ ವಯಕ್ತಿಕ ಬದುಕಿಗೆ ಮೀಸಲು ಆದರೆ ನಮ್ಮಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಸನ್ನಿವೇಶ ಇತ್ತೀಚಿಗೆ ಕೆಲ ತಿಂಗಳುಗಳ ಹಿಂದೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿಗಳು ನೀಡಿದ್ದ ಹೇಳಿಕೆ ನಮ್ಮಲ್ಲಿನ ವರ್ಕ್ ಸಂಸ್ಕೃತಿ ಹೇಗಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳುತ್ತೆ ನಮ್ಮಲ್ಲಿ ಕೆಲಸ ಅಂದರೆ ಬದುಕು ಅನ್ನುವ ಮಟ್ಟಿಗೆ ಕೆಲಸದೊತ್ತಡವನ್ನ ತಲೆಮೇಲೆ ಹೇರಲಾಗಿದೆ ಕಾರ್ಪೊರೇಟ್ ಕಂಪನಿಗಳಿಂದ ಹಿಡಿದು ಮಾರ್ಕೆಟಿಂಗ್ ಉತ್ಪಾದನಾ ವಲಯ ಮೀಡಿಯಾ ಸೇರಿದಂತೆ ಎಲ್ಲರ ಕಥೆಯು ಇದೆಕೆಲ ಕೆಲ ಕಂಪನಿಗಳಂತೂ ಮನೆಗೆ ಹೋದ ಮೇಲು ಪುರಸೊತ್ತು ಕೊಡದೆ ಕರೆಯಲ್ಲೋ ಅಥವಾ ಆನ್ಲೈನ್ ನಲ್ಲೋ ಸಮಸ್ಯೆಯನ್ನ ತಲೆಮೇಲೆ ಹೊರಿಸುತ್ತವೆ ಹೀಗೆ ಕೆಲಸದ ಸಂಸ್ಕೃತಿ ಬಗ್ಗೆ ನಮ್ಮಲ್ಲಿ ವಿಲಕ್ಷಣ ವಿಪರೀತಗಳಿವೆ ಈ ಅತಿಯಾದ ಹೊರೆಯಿಂದ ಉದ್ಯೋಗಿಗಳ ಮಾನಸಿಕ ದೈಹಿಕ ಕ್ಷಮತೆ ಹದಗೆಟ್ಟು ಬದುಕೆ ಜಿಗುಪ್ಸೆ ತರಿಸುತ್ತದೆ ಹೀಗೆ ಕೆಲಸದ ಮೇಲಿನ ಈ ಅನಗತ್ಯ ಹೊರೆ ಕಲ್ಪನೆಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ರೈಟ್ ಟು ಡಿಸ್ಕನೆಕ್ಟ್ ಬಿಲ್ 2025 25 ಎನ್ನುವ ಖಾಸಗಿ ಮಸೂದೆಯನ್ನ ಮಂಡಿಸಲಾಗಿದೆ ಕೆಲಸದ ಅವಧಿಯ ಬಳಿಕ ಉದ್ಯೋಗಿಗಳನ್ನ ಪ್ರತ್ಯಕ್ಷವಾಗಿ ಆಗಲಿ ಅಥವಾ ಪರೋಕ್ಷವಾಗಿ ಆಗಲಿ ಪೀಡಿಸುವಂತಿಲ್ಲ ಎನ್ನುವ ನಿಯಮಗಳನ್ನ ಈ ವಿಧೇಯಕದಲ್ಲಿ ಸೇರಿಸಲಾಗಿದೆ ಹಾಗಾದರೆ ಈ ವಿಧೇಯಕದಲ್ಲಿರುವ ಪ್ರಮುಖ ಅಂಶಗಳೇನು ಈ ಖಾಸಗಿ ಮಸೂದೆಯನ್ನ ಮಂಡಿಸಿದ್ದು ಯಾರು ಈ ವಿಧೇಯಕಕ್ಕೆ ಅಂಗೀಕಾರ ಸಿಗುತ್ತಾ.
ಒಂದು ವೇಳೆ ಈ ಮಸೂದೆ ಕಾಯ್ದೆ ಆದರೆ ಭಾರತದಂತಹ ದೇಶದಲ್ಲಿ ಇದರ ಅನುಷ್ಠಾನ ನಿಜಕ್ಕೂ ಸಾಧ್ಯವಾ ಎಲ್ಲಾ ಅಂಶಗಳನ್ನ ಇಂದಿನ ರೈಟ್ ಟು ಡಿಸ್ಕನೆಕ್ಟ್ ಬಿಲ್ 2025 ಎನ್ನುವ ಈ ಖಾಸಗಿ ವಿಧೇಯಕವನ್ನ ಎನ್ಸಿಪಿ ನಾಯಕಿ ಲೋಕಸಭಾ ಸದಸ್ಯೆ ಸುಪ್ರಿಯ ಸುಳೆ ಅವರು ಮಂಡಿಸಿದ್ದಾರೆ ತಮಗೆಲ್ಲ ತಿಳಿದಿರುವ ಹಾಗೆ ಸುಪ್ರಿಯ ಅವರು ಮಹಾರಾಷ್ಟ್ರದವರು ರಾಷ್ಟ್ರ ನಾಯಕ ಶರದ್ ಪವಾರ್ ಅವರ ಮಗಳು ಎನ್ಸಿಪಿ ಶರದ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ತಮ್ಮ ಹರಿತ ವಾಗ್ಜರಿ ಸಾಂಪ್ರದಾಯಿಕ ಗಂಭೀರ ನಡೆ ಮೂಲಕ ಲೋಕಸಭೆಯಲ್ಲಿ ಗಮನ ಸೆಳಿಯುತ್ತಾರೆ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿರುವ ಸುಪ್ರಿಯ ಈ ಖಾಸಗಿ ಮಸೂದೆಯನ್ನ ತಂದಿದ್ದಾರೆ ಅಂದಹಾಗೆ ಇದು ಸರ್ಕಾರಿ ಬಿಲ್ ಅಲ್ಲ ಬದಲಾಗಿ ಸಂಸದ್ ಸದಸ್ಯರು ತರಬಹುದಾದ ಖಾಸಗಿ ವಿಧೇಯಕ ಆಡಲಿತ ಪಕ್ಷವಿರಲಿ ಅಥವಾ ವಿಪಕ್ಷಗಳ ಸದಸ್ಯರೇ ಇರಲಿ ಮಂತ್ರಿಗಳ ಹೊರತಾಗಿ ಇತರರು ಮಂಡಿಸಬಹುದಾದ ಮಸೂದೆಗಳನ್ನ ಖಾಸಗಿ ವಿಧೇಯಕ ಅಂತ ಕರೆಯಲಾಗುತ್ತೆ ಇವುಗಳು ಸದನದಲ್ಲಿ ಅಂಗೀಕಾರವಾಗುವುದು ತುಸು ಕಷ್ಟದ ವಿಷಯ ಸದ್ಯ ನಡೆಯುತ್ತಿರುವ ಸಂಸತ್ನ ಚಳಿಗಾಲ ಅಧಿವೇಶನದಲ್ಲಿ ಇದನ್ನ ಮಂಡಿಸಲಾಗಿದೆ ಸುಪ್ರಿಯ ಸುಳೆ ಇದನ್ನ ಮಂಡನೆ ಮಾಡಿದ್ದಾರೆ ಅಂದಹಾಗೆ ಈ ಮಸೂದೆಯು ಉದ್ಯೋಗಿಗಳಿಗೆ ಅಧಿಕೃತ ಕಚೇರಿ ಸಮಯದ ನಂತರ ಕೆಲಸದಿಂದ ಸಂಪರ್ಕ ಕಡಿತಗೊಳಿಸುವ ಕಾನೂನುಬದ್ದ ಹಕ್ಕನ್ನ ನೀಡಲು ಪ್ರಯತ್ನಿಸುತ್ತದೆ ಅಂದರೆ ಉದ್ಯೋಗಿಗಳಿಗೆ ಅಧಿಕೃತ ಕೆಲಸದ ಸಮಯದ ನಂತರ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಹಾಗೂ ಈಮೇಲ್ ಗಳಿಂದ ಸಂಪರ್ಕ ಕಡಿತಗೊಳಿಸುವ ಕಾನೂನುಬದ್ದ ಹಕ್ಕನ್ನ ನೀಡಲು ಅನುವು ಮಾಡಿಕೊಡುತ್ತದೆ ಹೀಗಾಗಿಯೇ ಇದನ್ನ ರೈಟ್ ಟು ಡಿಸ್ಕನೆಕ್ಟ್ ಬಿಲ್ ಅಂತ ಹೆಸರಿಸಲಾಗಿದೆ ಕೆಲಸದ ಸ್ಥಳದಿಂದ ಹೊರಬಿದ್ದ ಬಳಿಕ ಆ ಸಮಯ ಸಂಪೂರ್ಣವಾಗಿ ಉದ್ಯೋಗಿಗಳಿಗೆ ಸಿಗುವಂತೆ ಮಾಡುವುದೇ.
ಈ ಖಾಸಗಿ ಮಸೂದೆಯ ಉದ್ದೇಶ ಸಾರ್ವತ್ಿಕ ರಜೆ ಸಿಎಲ್ ಎಸ್ಎಲ್ಇಎಲ್ ಮುಂತಾದ ರಜೆಗಳ ಸಂದರ್ಭದಲ್ಲಿ ಪರೋಕ್ಷವಾಗಿ ನೀಡುವ ಕೆಲಸದ ಜಂಜಾಟ ಕಾರ್ಯ ಒತ್ತಡಕ್ಕೆ ಬ್ರೇಕ್ ಹಾಕುವ ಅಂಶಗಳು ಈ ವಿಧೇಯಕದಲ್ಲಿವೆ ಕೆಲಸ ಹಾಗೂ ವಯಕ್ತಿಕ ಜೀವನವನ್ನ ಸಮತೋಲನಗೊಳಿಸುವುದೇ ಈ ಮಸೂದೆಯ ಮುಖ್ಯ ಅಜೆಂಡಾ ಆಗಿದೆ ಇದನ್ನ ಇನ್ನಷ್ಟು ಸೂಕ್ಷ್ಮವಾಗಿ ಹೇಳಬೇಕು ಅಂದ್ರೆ ಈಗಿರುವ ಸ್ಥಿತಿಯಲ್ಲಿ ಡಿಜಿಟಲ್ ಸಂವಹನ ನಿರಂತರ ಸಂಪರ್ಕ ಮತ್ತು ದೂರಸ್ಥ ಕೆಲಸದಿಂದಾಗಿ ವೃತ್ತಿಪರ ಬೇಡಿಕೆಗಳು ಮತ್ತು ವೈಕ್ತಿಕ ಸಮಯದ ಬಗ್ಗೆ ಈ ಮಸೂದೆಯು ಸ್ಪಷ್ಟ ಮತ್ತು ಅನುಷ್ಠಾನ ಯೋಗ್ಯ ಅಂಶಗಳನ್ನ ಗುರುತಿಸುವ ಗುರಿ ಹೊಂದಿದೆ ಸ್ನೇಹಿತರೆ ಇದ್ದಕ್ಕಿದ್ದಂತೆ ಈ ಮಸೂದೆ ಮಂಡಿಸಬೇಕಾದ ಅನಿವಾರ್ಯತೆ ಹೀಗೆ ೇನು ಎನ್ನುವುದು ಹಲವರ ಪ್ರಶ್ನೆ ಆಗಿರಬಹುದು ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವರ್ಕಿಂಗ್ ಕಲ್ಚರ್ ಬಗ್ಗೆನಾನಾ ತರಹದ ಚರ್ಚೆಗಳು ನಡೆಯುತ್ತಿದೆ ಅದರಲ್ಲೂ ಆಲ್ವೇಸ್ ಆನ್ ವರ್ಕ್ ಕಲ್ಚರ್ ಎನ್ನುವುದು ಈಗ ಉದ್ಯೋಗದಾತರ ಕಡ್ಡಾಯ ನೀತಿ ಎನ್ನುವಂತಾಗಿದೆ ಕೊರೋನಾ ಸಾಂಕ್ರಾಮಿಕ ಬಳಿಕ ಕೆಲಸದ ವಿಧಾನಗಳೇ ಬದಲಾಗಿವೆ ಅಂದರೆ ವರ್ಕ್ ಫ್ರಮ್ ಹೋಮ್ ಬಂದಾಗಿನಿಂದ ಕೆಲಸದ ರೀತಿ ರಿವಾಜುಗಳು ಅದರ ಸಂಪೂರ್ಣ ಚಿತ್ರಣವೇ ಬದಲಾಗಿದೆ ಈ ಹೈಬ್ರಿಡ್ ನೀತಿಯಿಂದಾಗಿ ಡಿಜಿಟಲ್ ಕಾರ್ಯಭಾರದ ಸರಣ ತೆಯಿಂದಾಗಿ ಇದು ಮತ್ತಷ್ಟು ಹೆಚ್ಚಳವಾಗಿದೆ ಕೆಲಸದ ಅವಧಿಗೆ ಮಿತಿಯೇ ಇಲ್ಲ ನಿಮ್ಮ ಲಾಗಿನ್ ಅವಧಿ ಮುಗಿದ ಬಳಿಕವು ನೀವು ಕಚೇರಿಯೊಂದಿಗೆ ಕನೆಕ್ಟ್ ಇರಬೇಕಾದ ಅನಿವಾರ್ಯತೆ ಸೃಷ್ಟಿಸುತ್ತಾ ಇದೆ ಅಂದರೆ ಟೆಲಿಪ್ರೆಷರ್ ಹೇರಲಾಗ್ತಾ ಇದೆ ಕರೆಗಳು ಮತ್ತು ಇಮೇಲ್ ಗಳಿಗೆ ಪ್ರತಿಕ್ರಿಯಿಸುವ ಈ ನಿರಂತರ ಪ್ರಚೋದನೆಯನ್ನೇ ಟೆಲಿಫ್ರೆಜರ್ ಅಂತ ಕರೆಯಲಾಗುತ್ತೆ.
ಐಟಿ ವಲಯ ಫೈನಾನ್ಸ್ ವಲಯ ಮಾರ್ಕೆಟಿಂಗ್ ಕ್ಷೇತ್ರ ಸೇವಾ ಕ್ಷೇತ್ರಗಳು ಅಂದರೆ ಮೀಡಿಯಾ ಸಹಿತ ಸೇವಾ ಕಂಪನಿಗಳ ಉದ್ಯೋಗಿಗಳು ಇದರ ಬಲ್ಲಿ ಪಶುಗಳ ಾಗುತ್ತಿದ್ದಾರೆ ಕೆಲಸದ ಅವಧಿ ಮುಗಿದ ಬಳಿಕ ಸಂಪರ್ಕದಲ್ಲಿರುವಂತೆ ಒತ್ತಡ ತತಕ್ಷಣವೇ ಸ್ಪಂದಿಸಲು ಆದೇಶ ಒಂದುವೇಳೆ ಕರೆ ಸ್ವೀಕರಿಸದಿದ್ದರೆ ಮಾನಸಿಕ ಕಿರಿಕಿರಿ ಉಂಟುಮಾಡುವ ಮೂಲಕ ಉದ್ಯೋಗಿಗಳನ್ನ ಬಿಡಿಸಲಾಗುತ್ತಿದೆ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಈ ವಿಧೇಯಕವನ್ನ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸ್ನೇಹಿತರೆ ಇದು ಕೇವಲ ಕಾರ್ಯಭಾರದ ಒತ್ತಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲು ಪರಿಣಾಮ ಬೀರುತ್ತಿದೆ. ನಿರಂತರ ಕೆಲಸದ ಅಭ್ಯಾಸಗಳು ನಿದ್ರೆಯ ಕೊರತೆ, ಭಾವನಾತ್ಮಕ ಬಳಲಿಕೆ ಮತ್ತು ಇನ್ಫೋ ಒಬೆಸಿಟಿಗೆ ಕಾರಣವಾಗ್ತಿದೆ. ಅಂದಹಾಗೆ ಇನ್ಫೋ ಒಬೆಸಿಟಿ ಅಂದ್ರೆ ಇದೊಂದು ರೀತಿ ಮಾಹಿತಿಗಳ ಓವರ್ಲೋಡ್ ಸ್ಥಿತಿಯನ್ನ ಸೂಚಿಸುತ್ತೆ. ಇದು ನಿಮ್ಮ ಮಾನಸಿಕ ಆರೋಗ್ಯವನ್ನ ಏರುಪೇರು ಮಾಡುತ್ತೆ. ಇದಲ್ಲದೆ ಡಿಜಿಟಲ್ ವರ್ಕ್ ಸೈಕಲ್ ಉದ್ಯೋಗಿಗಳು ಕೌಟುಂಬಿಕವಾಗಿ ಬೆರೆಯೋದನ್ನೇ ತಪ್ಪಿಸ್ತಾ ಇದೆ ಇದರಿಂದ ವಿಚ್ಛೇದನದಂತಹ ಸಮಸ್ಯೆಗಳು ಶುರುವಾಗಿದೆ ಮತ್ತೊಂದೆಡೆ ನಿರಂತರ ಡಿಜಿಟಲ್ ಆನ್ಲೈನ್ ಹೊರೆಯಿಂದಾಗಿ ಕಿನ್ನತೆ ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತಿವೆ ಇದು ಉದ್ಯೋಗಿಯ ಖಾಸಗಿ ಬದುಕಿನ ಖುಷಿಯನ್ನೇ ಕದಿಯುತ್ತಿದೆ ಹೀಗಾಗಿ ಈ ಮಸೂದೆ ವಯಕ್ತಿಕ ಸ್ಥಳ ಮತ್ತು ಮಾನಸಿಕ ಆರೋಗ್ಯವನ್ನ ರಕ್ಷಿಸುವ ಒಂದು ಕ್ರಮವಾಗಿ ಸಂಪರ್ಕ ಕಡಿತಗೊಳಿಸುವ ಹಕ್ಕನ್ನ ಪ್ರತಿಪಾದಿಸುತ್ತೆ ಇನ್ನು ಈ ರೈಟ್ ಟು ಡಿಸ್ಕನೆಕ್ಟ್ ಬಿಲ್ ಅನ್ನುವ ಈ ಮಸೂದೆಯನ್ನ ಭಾರತದಲ್ಲಷ್ಟೇ ಮೊದಲ ಬಾರಿಗೆ ಪರಿಚಯಿಸತ್ತಾ ಇಲ್ಲ ಈಗಾಗಲೇ ಫ್ರಾನ್ಸ್ ಇಟಲಿ ಸ್ಪೇನ್ ಪೋರ್ಚುಗಲ್ ಐರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಜಾರಿಯಲ್ಲಿದೆ ಉದ್ಯೋಗಿಗಳ ಖಾಸಗಿ ಬದುಕಿನ ಖುಷಿಯನ್ನ ರಕ್ಷಿಸುವ ನಿಟ್ಟಿನಲ್ಲಿ ಇದು ತನ್ನ ಕಾರ್ಯಾಚರಣೆ ನಡೆಸುತ್ತಾ ಇದೆ ಎಲ್ಲಾ ರಾಷ್ಟ್ರಗಳು ಕಚೇರಿ ಕೆಲಸದ ಸಮಯ ಹಾಗೂ ಉದ್ಯೋಗಿಗಳ ಹಕ್ಕುಗಳ ಕುರಿತು ಸ್ಪಷ್ಟ ನೀತಿ ಗಡಿ ಗುರುತಿಸಿವೆ ಹಾಗಂತ ಉದ್ಯೋಗದ ದಾತರ ಹಕ್ಕುಗಳನ್ನ ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ ಬದಲಾಗಿ ಅನಗತ್ಯ ಹೊರೆ ಅನಿರ್ಬಂಧಿತ ನಿಯಮಗಳಿಂದ ಕೆಲಸಗಾರರಿಗೆ ಮುಕ್ತಿ ನೀಡುತ್ತದೆ.
ಇದೀಗ ಯುರೋಪಿಯನ್ ಯೂನಿಯನ್ ಕೂಡ ಡಿಸ್ಕನೆಕ್ಟ್ ಬಿಲ್ ಬಗ್ಗೆ ನಿರಂತರ ಸಮಾಲೋಚನೆ ಚರ್ಚೆಯಲ್ಲಿ ತೊಡಗಿದೆ ಹೀಗಾಗಿ ಭಾರತ ಕೂಡ ಈ ಜಾಗತಿಕ ಸಮಾಲೋಚನೆಯಲ್ಲಿ ಈ ಮಸೂದೆ ಮೂಲಕ ಪಾಲ್ಗೊಂಡಂತಾಗಿದೆ ಇನ್ನು ಸುಪ್ರಿಯ ಸುಳೆ ಮಂಡಿಸಿರುವ ಮಸೂದೆಯಲ್ಲಿ ಯಾವೆಲ್ಲ ಪ್ರಮುಖ ಅಂಶಗಳಿದೆ ಅನ್ನೋದನ್ನ ನೋಡೋದಾದರೆ ನಂಬರ್ ಒನ್ ಕೆಲಸದ ಅವಧಿ ಬಳಿಕ ಸಂಪರ್ಕ ಕಡಿತಗೊಳಿಸುವ ಹಕ್ಕು ಅಂದರೆ ಒಬ್ಬ ಉದ್ಯೋಗಿ ತನ್ನ ಕೆಲಸದ ಅವಧಿ ಬಳಿಕ ಕಚೇರಿಯೊಂದಿಗೆ ತನ್ನ ಸಂಪರ್ಕವನ್ನ ಕಡಿತಗೊಳಿಸಿಕೊಳ್ಳಬಹುದು ಅಂದರೆ ಕರೆಗಳುವಾಟ್ ಸಂಪರ್ಕ ಇಮೇಲ್ ಸಂಹಾರವನ್ನ ಕಡಿತಗೊಳಿಸಿಕೊಳ್ಳಬಹುದು ಇದು ಉದ್ಯೋಗಿಯ ಹಕ್ಕಾಗಿದ್ದು ಆತನ ನಿರ್ಧಾರವೇ ಅಂತಿಮ ನಂಬರ್ ಟೂ ಉದ್ಯೋಗಿಗಳನ್ನ ಈ ಕಾರಣಕ್ಕಾಗಿ ಶಿಕ್ಷಿಸುವಂತಿಲ್ಲ ಕೆಲಸದ ಅವಧಿ ಬಳಿಕ ಕಚೇರಿಯೊಂದಿಗೆ ಸಂಪರ್ಕದಲ್ಲಿಲ್ಲದ ಕಾರಣದಿಂದ ಉದ್ಯೋಗಿಯನ್ನ ಶಿಕ್ಷಿಸುವುದಾಗಿ ಪೀಡಿಸುವುದಾಗಲಿ ಮಾನಸಿಕ ಕಿರಿಕಿರಿ ಉಂಟು ಮಾಡುವುದಾಗಲಿ ಅಥವಾ ಈ ಕಾರಣ ಮುಂದಿಟ್ಟುಕೊಂಡು ಆತನ ವೇತನಕ್ಕೆ ಕತ್ತರಿ ಹಾಕೋದು ಪ್ರಮೋಷನ್ ತಡೆಯೋದು ಮಾಡುವಂತಿಲ್ಲ ನಂಬರ್ ಮೂರು ಉದ್ಯೋಗದಾತರ ಬಾಧ್ಯತೆಗಳು ಇನ್ನು ಈ ಮಸೂದೆಯಲ್ಲಿ ಕೇವಲ ಉದ್ಯೋಗಿಗಳ ಬಗ್ಗೆ ಅಷ್ಟೇ ಫೋಕಸ್ ಮಾಡಿಲ್ಲ ಬದಲಾಗಿ ಉದ್ಯೋಗದಾತರ ಬಗ್ಗೆಯೂ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ ಅಂದರೆ ಎಂಪ್ಲಾಯರ್ಗಳು ತಮ್ಮ ಕಂಪನಿಯ ಕೆಲಸದ ಅವಧಿ ಹೆಚ್ಚುವರಿ ಸೇವೆಗೆ ಪಾವತಿಸುವ ಮೊತ್ತಂ ತುರ್ತು ಸಂವಹನ ಶಿಷ್ಟಾಚಾರದ ಬಗ್ಗೆ ಲಿಖಿತ ಒಪ್ಪಂದ ಮಾಡಿಕೊಳ್ಳುವಂತೆ ಸೂಚಿಸುತ್ತದೆ ಅಲ್ಲದೆ ಈ ಕೆಲಸದ ಅವಧಿಯ ಕುರಿತು ಉದ್ಯೋಗಿಗಳು ಅಥವಾ ನೌಕರರ ಸಂಘಟನೆಗಳೊಂದಿಗೆ ಒಪ್ಪಂದಕ್ಕೆ ಬರುವಂತೆ ಸೂಚಿಸುತ್ತದೆ. ಕನಿಷ್ಠ 10ಕ್ಕಿಂತ ಮೇಲ್ಪಟ್ಟ ನೌಕರರನ್ನ ನೇಮಿಸಿಕೊಳ್ಳುವ ಕಂಪನಿಗಳು ಸಂಸ್ಥೆಗಳಿಗೆ ಈ ಲಿಖಿತ ಒಪ್ಪಂದ ಕಡ್ಡಾಯ. ನಂಬರ್ ನಾಲ್ಕು ಕಂಪನಿಗಳು ಡಿಜಿಟಲ್ ಗಡಿಗಳನ್ನ ಗುರುತಿಸಿ ಅನುಷ್ಠಾನಗೊಳಿಸುವುದು ಯಾವುದೇ ಕಂಪನಿಗಳು ತಮ್ಮ ಡಿಜಿಟಲ್ ಸಾಧನಗಳ ಬಳಕೆಯನ್ನ ಮಿತಿಗೊಳಿಸಿಕೊಳ್ಳುವುದು ಅಂದರೆ ಅಂದರೆ ಸರ್ವರ್ಗಳ ಸಮಯವನ್ನ ನಿಗದಿ ಪಡಿಸಿಕೊಳ್ಳುವುದು.
ಇಮೇಲ್ ಡೆಲಿವರಿ ಡಿಲೇ ಸೆಟ್ಟಿಂಗ್ಸ್ ಗಳನ್ನ ಫಿಕ್ಸ್ ಮಾಡಿಕೊಳ್ಳುವುದು ಅಗತ್ಯವಿದ್ದರೆ ರೊಟೇಷನಲ್ ಆನ್ ಕಾಲ್ ಡ್ಯೂಟಿ ಪದ್ಧತಿಯನ್ನ ಅನುಸರಿಸುವುದು ನಂಬರ್ ಐದು ಕೌನ್ಸಲಿಂಗ್ ಹಾಗೂ ಡಿಜಿಟಲ್ ಹೊರೆ ನಿರ್ವಹಣೆ ಕಾರ್ಯಕ್ರಮಗಳನ್ನ ಆಯೋಜಿಸುವುದು ಸಧ್ಯದ ಸ್ಥಿತಿಯಲ್ಲಿ ಪ್ರತಿಯೊಂದು ಕಂಪನಿಗಳಲ್ಲಿ ಡಿಜಿಟಲ್ ಹೊರೆ ನಾವು ಅಂದುಕೊಂಡಕಿಂತ ತುಸು ಜಾಸ್ತಿಯೇ ಇದೆ ಇದು ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತಿದೆ ಹೀಗಾಗಿ ಕಂಪನಿಗಳು ಉದ್ಯೋಗದಾತರು ತಮ್ಮ ನೌಕರರಿಗೆ ಕೌನ್ಸಲಿಂಗ್ ವ್ಯವಸ್ಥೆ ಡಿಜಿಟಲ್ ಹೊರೆ ನಿರ್ವಹಣೆ ಶಿಬಿರಗಳನ್ನ ಆಯೋಜಿಸಬೇಕು ಮೆಂಟಲ್ ಹೆಲ್ತ್ ಸಪೋರ್ಟ್ ಕುಟುಂಬ ಕೆಲಸ ಬ್ಯಾಲೆನ್ಸ್ ಮಾಡುವ ವಿಚಾರಗಳ ಮೇಲೆ ಫೋಕಸ್ ಮಾಡಬೇಕು ನಂಬರ್ ಆರು ಹೆಚ್ಚಿನ ಕೆಲಸದ ಸಮಯಕ್ಕೆ ಓವರ್ ಟೈಮ್ ಪಾವತಿ ಅನ್ವಯ ಒಂದುವೇಳೆ ಉದ್ಯೋಗಿಗಳು ಅಧಿಕೃತ ಸಮಯದ ಹೊರತಾಗಿಯೂ ಕೆಲಸ ಮಾಡಲು ಬಯಸಿದ್ದರೆ ಪ್ರಮಾಣಿತ ವೇತನ ದರದಲ್ಲಿ ಓವರ್ಟೈಮ್ ಪಾವತಿ ನೀತಿ ಅನ್ವಯವಾಗಬೇಕು ಎಂದು ಮಸೂದೆ ಹೇಳುತ್ತೆ. ಅಂದರೆ ಡಿಜಿಟಲ್ ರೂಪಾಂತರದೊಂದಿಗೆ ಬೆಳೆದ ಪಾವತಿಸದ ಓವರ್ಟೈಮ್ ಅವಧಿಯ ಹೆಚ್ಚಳವನ್ನ ನಿಯಂತ್ರಿಸುವ ಉದ್ದೇಶ ಹೊಂದಿದೆ. ಹೀಗಾಗಿ ಕಂಪನಿಗಳು ಹೆಚ್ಚುವರಿ ಸೇವೆಯ ಮಾನದಂಡಗಳನ್ನ ರೂಪಿಸಿಕೊಳ್ಳಬೇಕು. ಓಟಿ ಮೊತ್ತವನ್ನ ನಿಗದಿ ಪಡಿಸಬೇಕು ಬೇಕಾಬಿಟ್ಟಿಯಾಗಿ ನೌಕರರನ್ನ ದೊಡಿಸಿಕೊಳ್ಳುವಂತಿಲ್ಲ. ಪ್ರತಿಯೊಂದು ಓವರ್ಟೈಮ್ ಕೆಲಸದ ಅವಧಿಯನ್ನ ಅಧಿಕೃತವಾಗಿ ದಾಖಲಿಸಿಕೊಳ್ಳಬೇಕು. ನಂಬರ್ ಏಳು ಉದ್ಯೋಗದಾತರಿಗೆ ದಂಡದ ಪ್ರಸ್ತಾಪ. ಒಂದುವೇಳೆ ಯಾವುದೇ ಕಂಪನಿ ತಪ್ಪುಗಳನ್ನ ಮಾಡಿದ್ರೆ ನಿಬಂಧನೆಗಳನ್ನ ಉಲ್ಲಂಘಿಸಿದರೆ ಆ ಕಂಪನಿಯ ಒಟ್ಟು ಉದ್ಯೋಗಿಗಳ ಒಟ್ಟು ಸಂಬಳದ ಶೇಕಡ ಒಂದರಷ್ಟು ಹಣವನ್ನ ದಂಡವಾಗಿ ಪಾವತಿಸಬೇಕು. ನಂಬರ್ ಎಂಟು ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ. ಈ ಕರಡು ಮಸೂದೆಯಲ್ಲಿ ಉದ್ಯೋಗಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ನೌಕರರ ಕಲ್ಯಾಣ ಪ್ರಾಧಿಕಾರ ಪ್ರಸ್ತಾಪಿಸಲಾಗಿದೆ. ಈ ಪ್ರಾಧಿಕಾರ ದೇಶದಾದ್ಯಂತ ಉದ್ಯೋಗಿಗಳ ಕಂಪನಿಗಳ ಸಮೀಕ್ಷೆ ನಡೆಸಬೇಕು. ಎಲ್ಲೆಲ್ಲಿ ಏನು ಸಮಸ್ಯೆ ಇದೆ? ನೌಕರರು ಉದ್ಯೋಗಿಗಳು ಅನುಭವಿಸುತ್ತಾ ಇರುವ ಸಮಸ್ಯೆಗಳೇನು? ಸಂಕಷ್ಟಗಳೇನು ಅನ್ನೋದನ್ನ ಪತ್ತೆ ಹಚ್ಚಬೇಕು.
ಜೊತೆಗೆ ನಿಯಮ ಉಲ್ಲಂಘನೆ ವಿಚಾರದಲ್ಲಿ ಉದ್ಯೋಗಿಗಳು ನೀಡುವ ದೂರನ್ನ ಸ್ವೀಕರಿಸುವುದು ಕಂಪನಿಗಳ ಮೇಲೆ ನಿಗಾ ವ್ಯವಸ್ಥೆ ನಿಯಮ ಉಲ್ಲಂಘನೆ ಮಾಡಿದ ಸಂಸ್ಥೆಗಳಿಗೆ ದಂಡ ವಿಧಿಸುವುದು ಉದ್ಯೋಗದಾತರಿಗೆ ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನ ನೀಡುವುದು ಸ್ನೇಹಿತರೆ ಈ ಪ್ರಸ್ತಾವಿ ಕಾಯ್ದೆ ಯಾಕೆ ಮುಖ್ಯ ಅಂದ್ರೆ ಇಂದಿನ ದಿನಗಳಲ್ಲಿ ಕಂಪನಿಗಳು ಉದ್ಯೋಗದಾತರು ತಮ್ಮ ಮನಸ್ಸು ಇಚ್ಛೆ ಕೆಲಸ ಮಾಡಿಸಿಕೊಳ್ಳುವ ಪರಿಪಾಠಕ್ಕೆ ಬಿದ್ದಿದ್ದಾರೆಎಫ್ಎಚ್ ಸಂಸ್ಕೃತಿಯಿಂದಾಗಿ ಯಾವುದಕ್ಕೂ ಮಿತಿ ಗಡಿ ಎನ್ನುವುದೇ ಇಲ್ಲ ಅಗತ್ಯ ಅಗತ್ಯವಿದ್ದರೆ ಮಧ್ಯರಾತ್ರಿಯು ನೌಕರರ ಅವೈಲೆಬಿಲಿಟಿಯನ್ನ ಬಳಸಿಕೊಳ್ಳುವ ಮಟ್ಟಕ್ಕೆ ಕಂಪನಿಗಳು ಬಂದು ನಿಂತಿವೆ ಹೀಗಾಗಿ ಈ ಉದ್ದೇಶಿತ ಮಸೂದೆ ಈ ಎಲ್ಲಾ ಸಮಸ್ಯೆಗಳ ಮೇಲೆ ಫೋಕಸ್ ಮಾಡಿ ಅವುಗಳಿಗೊಂದು ಕಾನೂನಿನ ಕುಣಿಕೆಯನ್ನ ಬಿಗಿ ಮಾಡುವ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಲಿದೆ ಇನ್ನು ಒಳ್ಳೆಯ ಬೆಳವಣಿಗೆ ಅಂದರೆ ಸದ್ಯದ ಸ್ಥಿತಿಯಲ್ಲಿ ಭಾರತ ಕೂಡ ಜಾಗತಿಕ ಕಾರ್ಮಿಕ ನಿಯಮಗಳಿಗೆ ಅನುಸಾರವಾಗಿ ತನ್ನ ನೀತಿ ನಿಲುವುಗಳನ್ನ ಬದಲಾಯಿಸಿಕೊಳ್ಳುತ್ತಿದೆ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಗಳಿಗೆ ಅನುಸಾರವಾಗಿ ನೌಕ ನೌಕರರ ಜೀವನ ಹಾಗೂ ಕೆಲಸವನ್ನ ಸಮನ್ವಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತಿದೆ ಇನ್ನು ಕಂಪನಿಗಳು ಕೂಡ ಈ ಪ್ರಸ್ತಾವಿ ಮಸೂದೆ ಪರಾಮೃದುವಾಗಿದ್ದಾರೆ ಇತೀಚಿಗೆ ನಡೆಸಲಾಗಿರುವ ಸಮೀಕ್ಷೆ ಪ್ರಕಾರ ಉದ್ಯೋಗದಾತರು ಈ ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ ಶೇಕಡ 81ರಷ್ಟು ಜನರು ಕೆಲಸ ಜೀವನದ ಸಮತೋಲನದ ಕಾಳಜಿಗಳನ್ನ ನಿರ್ಲಕ್ಷಿಸಿದರೆ ಕುಶಲ ಸಿಬ್ಬಂದಿಯನ್ನ ಕಳೆದುಕೊಳ್ಳುವ ಬಗ್ಗೆ ವರಿ ಮಾಡಿಕೊಂಡಿದ್ದಾರೆ ಅಲ್ಲದೆ ಕೆಲವು ಕಾರಣದಿಂದಾಗಿ ಅನೇಕ ಉದ್ಯೋಗದಾತರು ಇನ್ನು ಕಚೇರಿ ಸಮಯದ ನಂತರ ಉದ್ಯೋಗಿಗಳನ್ನ ಸಂಪರ್ಕಿಸಬೇಕಾದ ಅನಿವಾರ್ ವಾರ್ಯತೆ ಹೊಂದಿದ್ದಾರೆ ಒಂದುವೇಳೆ ನೌಕರರನ್ನ ಬಳಸಿಕೊಳ್ಳದಿದ್ದರೆ ಉತ್ಪಾದಕತೆ ಕುಸಿಯಬಹುದು ಅಂತನು ಅಭಿಪ್ರಾಯ ಪಟ್ಟಿದ್ದಾರೆ ಅದೇನೇ ಇದ್ದರು ಸದ್ಯದ ಮಟ್ಟಿಗೆ ಉದ್ಯೋಗದಾತರು ಈ ನೀತಿಯ ಪರವಾಗಿದ್ದಾರೆ ಅವರಿಗೂ ಮಾನವ ಸಂಪನ್ಮೂಲದ ಬಗ್ಗೆ ಕಾಳಜಿ ಇದೆ ಒಂದುವೇಳೆ ನಿರ್ಲಕ್ಷ ಮಾಡಿದರೆ ಉತ್ಪಾದಕತೆ ಕೂಡ ಕುಸಿಯುವ ಆತಂಕವಿದೆ ಹೀಗಾಗಿ ಕೆಲ ಎಂಪ್ಲಾಯರ್ಗಳು ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಪಾವತಿಸುವ ಬಗ್ಗೆಯೂ ಸಕಾರಾತ್ಮಕ ನಿಲುವು ಹೊಂದಿದ್ದಾರೆ ಪ್ರಸ್ತಾವಿ ಮಸೂದೆಯಲ್ಲಿನ ಕೆಲ ಅಂಶಗಳನ್ನ ಇಂಪ್ಲಿಮೆಂಟ್ ಮಾಡಿದರೆ ನೇರವಾಗಿ ಕಂಪನಿಗಳಿಗೂ ಲಾಭವಾಗಲಿದೆ ಅನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಹೀಗಿದ್ದರೂ ಕೂಡ ಪ್ರಸ್ತುತ ಭಾರತದ ವರ್ಕ್ ಕಲ್ಚರ್ ಹಾಗೂ ಕಂಪನಿಗಳ ಕಾರ್ಯವೈಕರಿಗೆ ಇದು ಹೊಂದಿಕೆ ಆಗೋದಿಲ್ಲ. ಕಾರಣ ನಮ್ಮದು ಇನ್ನು ಕೂಡ ಅಭಿವೃದ್ಧಿಶೀಲ ಆರ್ಥಿಕತೆ ಆಗಿರೋದ್ರಿಂದ ಕಂಪನಿಗಳು ಹೆಚ್ಚೆಚ್ಚು ಶ್ರಮ ಕೇಳ್ತಾವೆ. ಜೊತೆಗೆ ಬಿಪಿಓ ನಂತಹ ಹೊರಗೊತ್ತಿಗೆ ಹಾಗೂ ಸ್ಟಾರ್ಟಪ್ ಗಳಲ್ಲಿ ಮಸೂದೆಯಲ್ಲಿನ ನೀತಿ ನಿಯಮಗಳಂತೆ ಕೆಲಸ ನಿರ್ವಹಣೆ ಕಷ್ಟ ಸಾಧ್ಯವಿದೆ. ಇನ್ನು ಈ ಖಾಸಗಿ ಮಸೂದೆ ಮಂಡನೆಯಾಗಿದ್ದರು ಸಂಸತ್ನಲ್ಲಿ ಅಂಗೀಕಾರಗೊಳ್ಳುವ ಸವಾಲುಗಳಿವೆ. ಕಾರಣ ಭಾರತದ ಇತಿಹಾಸದಲ್ಲಿ ಇಲ್ಲಿವರೆಗೆ ಕೇವಲ 14 ಖಾಸಗಿ ಮಸೂದೆಗಳು ಪಾರ್ಲಿಮೆಂಟ್ನಿಂದ ರಾಷ್ಟ್ರಪತಿ ಭವನ ತಲುಪಲು ಯಶಸ್ವಿಯಾಗಿವೆ. ಅಸಲಿಗೆ ಈ ಖಾಸಗಿ ವಿಧೇಯಕ ಮಂಡಿಸಲು ಕಡಿಮೆ ಅವಕಾಶವಿದೆ. ಸಂಸತ್ತಿನ ಅಧಿವೇಶನ ನಡೆಸುವ ವೇಳೆ ಶುಕ್ರವಾರ ಮಾತ್ರ ಪ್ರೈವೇಟ್ ಬಿಲ್ ತರಬಹುದು ಜೊತೆಗೆ ಈ ಮಸೂದೆಯ ವಿಸ್ತೃತ ಚರ್ಚೆ ನಡೆಯೋದು ತೀರ ಕಡಿಮೆ ಕಾರಣ ಸಮಯಾವಧಿ ಸಮಸ್ಯೆ 1970 ರಲ್ಲಿ ಒಂದು ಖಾಸಗಿ ಮಸೂದೆ ಮಂಡನೆಯಾಗಿ ಅಂಗೀಕಾರ ಗೊಂಡಿದ್ದನ್ನ ಬಿಟ್ಟರೆ ಅಲ್ಲಿಂದ ಇಲ್ಲಿವರೆಗೆ ಯಾವುದೇ ಖಾಸಗಿ ಮಸೂದೆ ಅಂಗೀಕಾರವಾಗಿಲ್ಲ ಹೀಗಾಗಿ ಸುಪ್ರಿಯ ಸುಳ್ಯ ಮಂಡಿಸಿರುವ ಈ ವಿಧೇಯಕ ಅಂಗೀಕಾರವಾಗುವ ಯಾವುದೇ ಭರವಸೆ ಇಲ್ಲ ಆದರೆ ಯಾವುದೇ ಖಾಸಗಿ ಮಸೂದೆಯಲ್ಲಿ ಅತ್ಯುತ್ತಮ ಅಂಶಗಳು ಇದೆ ಎನ್ನುವುದಾದರೆ ಅಂತಹ ವಿಧೇಯಕ ಗಳನ್ನ ಸರ್ಕಾರವೇ ಕುದ್ದಾಗಿ ಪರಾಮರ್ಶಗೆ ಒಳಪಡಿಸಿ ಕುದ್ದು ತಾನೇ ಹೊಸದಾಗಿ ಮಸೂದೆ ಮಂಡಿಸುವ ಅವಕಾಶಗಳಿದೆ ಆದರೆ ಇತ್ತೀಚಿನ ದಶಕಗಳಲ್ಲಿ ಅಂತಹ ಯಾವುದೇ ಪ್ರಸಂಗ ನಡೆದಿಲ್ಲ ಹೀಗೆ ಹತ್ತು ಹಲವು ಸಂಕಷ್ಟಗಳನ್ನ ದಾಟಿ ಈ ರೈಟ್ ಟು ಡಿಸ್ಕನೆಕ್ಟ್ ಬಿಲ್ ಮಸೂದೆ ಸಂಸತ್ನಲ್ಲಿ ಅಂಗೀಕಾರ ಗೊಂಡರೆ ಅದು ನಿಜಕ್ಕೂ ಇತಿಹಾಸ ನಿರ್ಮಿಸಲಿದೆ ಹಾಗೆಯೇ ಉದ್ಯೋಗಿಗಳ ಪಾಲಿಗೆ ಭಗವದ್ಗೀತೆಯಾದಂತ ಆಗಲಿದೆ ಇದರಿಂದ ಉದ್ಯೋಗಿಗಳಿಗೆ ಕೆಲಸದ ಹೊರೆ ಕಡಿಮೆಯಾಗುವುದಲ್ಲದೆ ರಜಯ ಸದುಪಯೋಗ ಕ್ವಾಲಿಟಿ ಜೀವನ ಸಾಧ್ಯವಾಗಲಿದೆ ಹಾಗೆಯೇ ಮಾನಸಿಕ ದೈಹಿಕ ಆರೋಗ್ಯ ಚೆನ್ನಾಗಿರೋದರಿಂದ ಕುಶಲತೆಯು ಹೆಚ್ಚಲಿದೆ.


