Thursday, January 15, 2026
HomeTech Tips and Tricksರೋಲ್ಸ್ ರಾಯ್ಸ್ ಬೆಲೆ ಕೇಳಿದರೆ ಶಾಕ್! ಯಾಕೆ ಅಷ್ಟೊಂದು ದುಬಾರಿ ಗೊತ್ತಾ?

ರೋಲ್ಸ್ ರಾಯ್ಸ್ ಬೆಲೆ ಕೇಳಿದರೆ ಶಾಕ್! ಯಾಕೆ ಅಷ್ಟೊಂದು ದುಬಾರಿ ಗೊತ್ತಾ?

ರೋಲ್ಸ್ ರಾಯ್ಸ್ ಇದು ಬರಿಯ ಹೆಸರಿನಲ್ಲಿ ಮಾತ್ರವೇ ಅಲ್ಲ ಈ ಕಂಪನಿ ತಯಾರಿಸುವ ಕಾರುಗಳು ಕೂಡ ರಾಯಲ್ ಆಗಿ ಇರುತ್ತವೆ ಪ್ರಪಂಚದಲ್ಲಿಯೇ ಮೋಸ್ಟ್ ಲಕ್ಸುರಿ ಕಾರ್ ಅಂದರೆ ಮೊದಲು ನೆನಪಿಗೆ ಬರುವುದೇ ಈ ಕಾರು ಡಿಸೈನ್ ನಲ್ಲಿ ಮತ್ತು ಫೀಚರ್ ನಲ್ಲಿ ಈ ಕಾರನ್ನ ಮೀರಿಸುವ ಮತ್ತೊಂದು ಕಾರ್ ಇಲ್ಲ ಕೆಲವು ಕಾರ್ ಕಂಪನಿಗಳು ವರ್ಷಕ್ಕೆ ಲಕ್ಷಗಟ್ಟಲೆ ಕಾರ್ ಕಾರನ್ನ ಪ್ರೊಡ್ಯೂಸ್ ಮಾಡುತ್ತಿರುತ್ತವೆ ಆದರೆ ರೋಲ್ಸ್ ರಾಯ್ಸ್ ಕಂಪನಿ ಸಾವಿರ ಕಾರುಗಳನ್ನು ಅಷ್ಟೇ ತಯಾರು ಮಾಡುತ್ತದೆ ಒಮ್ಮೆ ಈ ಕಂಪನಿ ಯಾವುದಾದರೂ ತನ್ನ ಹೊಸ ಕಾರನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಅಂದ್ರೆ ಅದು ದೊಡ್ಡ ಟ್ರೆಂಡ್ ಆಗುತ್ತದೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇರುವ ಶ್ರೀಮಂತರು ನಟರು ಬಿಸಿನೆಸ್ ಮ್ಯಾನ್ ಗಳು ಸ್ಪೋರ್ಟ್ಸ್ ಪರ್ಸನ್ಸ್ ಹೀಗೆ ತುಂಬಾ ಜನರು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಈ ಕಾರನ್ನ ಖರೀದಿ ಮಾಡುತ್ತಿರುತ್ತಾರೆ ಅಷ್ಟಕ್ಕೂ ಈ ಕಾರ್ ನಲ್ಲಿರುವ ಸ್ಪೆಷಾಲಿಟಿ ಏನು ಈ ಕಾರ್ ನಲ್ಲಿ ಅಂತಹ ಫೀಚರ್ಸ್ ಏನಿದೆ ಈ ಕಾರಿಗೆ ಅಷ್ಟೊಂದು ಬೆಲೆ ಯಾಕೆ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ರೋಲ್ಸ್ ರಾಯ್ಸ್ ಕಾರಿನ ಕುರಿತಾದ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬೇರೆ ಎಲ್ಲಾ ಕಂಪನಿಗಳು ವಿವಿಧ ರೀತಿಯ ಮಾಡೆಲ್ ಕಾರುಗಳನ್ನು ತಯಾರು ಮಾಡುತ್ತವೆ ಅವುಗಳಲ್ಲಿ ನಮಗೆ ಇಷ್ಟವಾದದ್ದನ್ನ ಕೊಂಡುಕೊಳ್ಳುತ್ತೇವೆ ಆದರೆ ರೋಲ್ಸ್ ರಾಯ್ಸ್ ಕಾರ್ ನಲ್ಲಿ ಹಾಗೆ ಇಲ್ಲ ಕೇವಲ ನಾವು ಆರ್ಡರ್ ನೀಡಿದ ಬಳಿಕವೇ ಕಾರನ್ನ ತಯಾರಿಸಲು ಶುರು ಮಾಡುತ್ತಾರೆ ಅವರು ನಮಗೆ ಬೇಕಾದ ರೀತಿಯಲ್ಲಿ ಕಾರನ್ನ ತಯಾರಿಸಿ ಕೊಡುತ್ತಾರೆ ಡಿಸೈನ್ ಕಲರ್ ಫೀಚರ್ಸ್ ನಲ್ಲಿ ಹೀಗೆ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನು ಕೂಡ ನಮಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿಕೊಳ್ಳಬಹುದು.

ಈ ಕಾರಿನ ಬೆಲೆಗೆ ಲಿಮಿಟ್ ಕೂಡ ಇರೋದಿಲ್ಲ ಮತ್ತು ಬೇಸಿಕ್ ಪ್ರೈಸ್ ಕೂಡ ಇರೋದಿಲ್ಲ ಈ ಕಂಪನಿ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಕಾರನ್ನ ತಯಾರಿಸುವುದರಿಂದ ಈ ಕಾರಿಗೆ ಯಾವುದೇ ರೀತಿಯ ಬೇಸಿಕ್ ಪ್ರೈಸ್ ಇರೋದಿಲ್ಲ ಹಾಗೆಯೇ ಈ ಕಾರಿನ ಬೆಲೆಯಲ್ಲೂ ಕೂಡ ವ್ಯತ್ಯಾಸವಾಗುತ್ತಿರುತ್ತದೆ ಈ ಕಾರಿನ ಬಗ್ಗೆ ಮೊದಲು ಮಾತನಾಡಬೇಕೆಂದರೆ ಅದರ ಕಲರ್ ಬಗ್ಗೆ ಮಾತನಾಡಬೇಕು ಬೇರೆ ಕಾರ್ ಕಂಪನಿಗಳು ಒಂದು ಕಾರನ್ನ ರಿಲೀಸ್ ಮಾಡುವಾಗ ಆರರಿಂದ ಏಳು ಕಲರ್ ವೇರಿಯಂಟ್ಸ್ ನಿಂದ ರಿಲೀಸ್ ಮಾಡುತ್ತಾರೆ ಆದರೆ ಈ rolls ರಾಯ್ಸ್ ಕಂಪನಿಯ ಬಳಿ 44000 ಕಲರ್ ಗಳಿವೆ ಅದರಲ್ಲಿ ನಮಗೆ ಇಷ್ಟವಾದ ಕಲರ್ ಆಯ್ಕೆ ಮಾಡಿಕೊಳ್ಳಬಹುದು ಇದರ ಆಧಾರದ ಮೇಲೆ ಕಾರಿನ ಬೆಲೆ ಬದಲಾಗುತ್ತದೆ ನೀವು ಬಾಲಿವುಡ್ ನಲ್ಲಿ ಮೂಡಿಬಂದ ಅನಿಮಲ್ ಸಿನಿಮಾವನ್ನ ನೋಡಿದ್ರೆ ಅದರಲ್ಲಿ ಹೀರೋ ಒಂದು ಕಲರ್ ಅನ್ನ ತೋರಿಸಿ ಆ ಕಲರ್ ನಲ್ಲಿ ರೋಲ್ಸ್ ರಾಯ್ಸ್ ಕಾರ್ ಬೇಕೆಂದು ಕೇಳುತ್ತಾನೆ ಹಾಗೆ ಕೆಲವರು ಅವರ ನಾಯಿಯ ಬಣ್ಣದ ಕಲರ್ ನಲ್ಲಿ ಕಾರ್ ಡಿಸೈನ್ ಮಾಡಿಸಿಕೊಳ್ಳುತ್ತಾರೆ ಈ 44000 ಕಲರ್ ನಲ್ಲಿ ಅಲ್ಲದೆ ಬೇರೆ ಕಲರ್ ಅನ್ನ ತೋರಿಸಿದ್ರು ಕೂಡ ಆ ಕಲರ್ ನಲ್ಲೇ ಕಾರ್ ಡಿಸೈನ್ ಮಾಡಿಕೊಡುತ್ತಾರೆ ಹಾಗೆ ಆ ಕಲರ್ ಅನ್ನ ನಿಮ್ಮ ಹೆಸರಿನ ಮೇಲೆ ರಿಜಿಸ್ಟರ್ ಮಾಡಿಸುತ್ತಾರೆ ಒಂದು ವೇಳೆ ಯಾರಿಗಾದರೂ ಎಕ್ಸಾಕ್ಟ್ ಅದೇ ಕಲರ್ ನಲ್ಲಿ ಕಾರು ತಯಾರಿಸಿಕೊಳ್ಳಬೇಕು ಎಂದಾದರೆ ನಿಮ್ಮನ್ನ ಪರ್ಮಿಷನ್ ಕೇಳಿ ನಂತರ ತಯಾರಿಸಿ ಕೊಡುತ್ತಾರೆ ವೀಕ್ಷಕರೇ ಒಬ್ಬ ಕಸ್ಟಮರ್ ತನಗೆ ಬೇಕೆಂದಿರುವ ಕಾರಿಗೆ ಅದರ ಕಲರ್ ನಲ್ಲಿ ಡೈಮಂಡ್ ಅನ್ನ ಪೌಡರ್ ಮಾಡಿ ಆ ಕಲರ್ ನಲ್ಲಿ ಮಿಕ್ಸ್ ಮಾಡಿ ಹಾಕಿ ಎಂದು ಕೇಳುತ್ತಾನೆ ಅವನು ಕೇಳಿದ ಹಾಗೆ ಆ ಕಂಪನಿಯವರು ಸಾವಿರ ವಜ್ರವನ್ನ ಪೌಡರ್ ಮಾಡಿ ನಂತರ ಪೇಂಟ್ ನಲ್ಲಿ ಮಿಕ್ಸ್ ಮಾಡಿ ಕಾರಿಗೆ ಪೇಂಟ್ ಮಾಡುತ್ತಾರೆ.

ಕಾರಿಗೆ ಪೇಂಟ್ ಮಾಡಿದ ನಂತರ ಆ ಕಾರು ಕನ್ನಡಿಯ ರೀತಿ ಹೊಳೆಯಲು ಪ್ರೈಮರ್ ಕಲರ್ ಶೈನಿಂಗ್ ಮತ್ತು ಫಿನಿಶಿಂಗ್ ಹೀಗೆ ಕನಿಷ್ಠ ಪಕ್ಷ ಏಳು ಪದರದಷ್ಟು ಪೇಂಟಿಂಗ್ ಮಾಡುತ್ತಾರೆ ಇನ್ನು ಕೆಲವು ಮಾಡೆಲ್ ಕಾರುಗಳಿಗಾಗಿ 21 ಪದರದಷ್ಟು ಪೇಂಟಿಂಗ್ ಕೂಡ ಹಾಕುತ್ತಾರೆ ಕೇವಲ ಕಾರಿಗೆ ಬಣ್ಣ ಹಚ್ಚಲು ಸುಮಾರು 50 ಕೆಜಿ ಬಣ್ಣವನ್ನು ಉಪಯೋಗ ಮಾಡುತ್ತಾರೆ ಹಾಗೆ ಪೇಂಟಿಂಗ್ ವರ್ಕ್ ಕಂಪ್ಲೀಟ್ ಆಗಲು ಸುಮಾರು ಏಳು ದಿನ ತೆಗೆದುಕೊಳ್ಳುತ್ತದೆ ಹಾಗೆಯೇ ಈ ಕಾರಿನ ಮೇಲೆ ಇರುವ ಡೀಟೇಲ್ ವರ್ಕ್ಸ್ ಅಂದ್ರೆ ಲಯನ್ಸ್ ಮತ್ತು ಯಾವುದಾದರೂ ಡಿಸೈನ್ ಇದ್ದರೆ ಅದಕ್ಕಾಗಿ ಯಾವುದೇ ರೀತಿಯ ಮಿಷನ್ ಗಳನ್ನ ಉಪಯೋಗ ಉಪಯೋಗಿಸುವುದಿಲ್ಲ ಈ ಕೆಲಸಗಳನ್ನು ಮಾಡುವುದಕ್ಕಾಗಿ ಈ ಕಂಪನಿಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾನೆ ಅವನು ತನ್ನ ಫ್ರೀ ಹ್ಯಾಂಡ್ ಮೂಲಕ ಡಿಸೈನ್ ಮಾಡುತ್ತಾನೆ ಈ ಪೇಂಟಿಂಗ್ ಮಾಡಲು ಕೆಲವು ಆಯುಧ ಪ್ರಾಣಿಗಳ ಕೂದಲಿನ ಬ್ರಷ್ ತಯಾರಿಸಿ ಅದರ ಮೂಲಕ ಪೇಂಟ್ ಹಚ್ಚುತ್ತಾರೆ ರೋಲ್ಸ್ ರಾಯ್ಸ್ ಕಾರು ಬೇಕೆಂದರೆ ನಾರ್ಮಲ್ ಆಗಿ ಶೋರೂಮ್ಗೆ ಹೋಗಿ ಕೊಂಡುಕೊಳ್ಳಲು ಆಗೋದಿಲ್ಲ ಮೊದಲು ಆರ್ಡರ್ ಕೊಡಬೇಕು ನಾವು ಆರ್ಡರ್ ಕೊಟ್ಟ ನಂತರವೇ ಕಾರನ್ನ ತಯಾರಿಸುತ್ತಾರೆ ನಾವು ಆರ್ಡರ್ ಕೊಟ್ಟ ಸುಮಾರು ಎಂಟು ತಿಂಗಳಿನಿಂದ ಒಂದು ವರ್ಷದವರೆಗೂ ಕಾಯಬೇಕಾಗುತ್ತದೆ ಯಾಕಂದ್ರೆ ಬೇರೆ ಕಂಪನಿಗಳಲ್ಲಿ ಕಾರ್ ಮೇಕಿಂಗ್ ಎಲ್ಲವನ್ನ ಮಾಡೋದು ರೋಬೋಟ್ ಮಿಷಿನ್ ನ ಮೂಲಕ ಇವೆಲ್ಲವೂ ಆಟೋಮೆಟಿಕ್ ಆಗಿ ನಡೆಯುತ್ತದೆ ಆದರೆ ರೋಲ್ಸ್ ರಾಯ್ಸ್ ಕಂಪನಿಯಲ್ಲಿ ತುಂಬಾ ಕೆಲಸವನ್ನ ಮನುಷ್ಯರು ತಮ್ಮ ಕೈ ಮೂಲಕವೇ ಮಾಡುತ್ತಾರೆ ಅದು ಕೂಡ ಕಾರಿನ ಸಣ್ಣ ಪಾರ್ಟ್ ಕೂಡ ಕಸ್ಟಮರ್ ಗೆ ಇಷ್ಟವಾಗುವಂತೆ ಮಾಡಬೇಕು ಹೀಗೆ ಸುಮಾರು 60 ಮಂದಿ ಸ್ಕಿಲ್ಡ್ ವರ್ಕರ್ ಗಳು ಸೇರಿ ಈ ಕಾರನ್ನ ತಯಾರು ಮಾಡುತ್ತಾರೆ ಹೀಗೆ ಎಲ್ಲವೂ ಹ್ಯಾಂಡ್ ಮೇಡೆಡ್ ಆಗಿ ತಯಾರಿಸುತ್ತಾರೆ.

ಕಾರುಗಳಿಗಿಂತ ಭಿನ್ನವಾಗಿ ನೋಡ್ತಾರೆ ಕೇವಲ ಮನುಷ್ಯರು ತಯಾರು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಕಾರಿನ ಬೆಲೆ ಇಷ್ಟಿದೆ ಅಂದ್ರೆ ಅದು ತಪ್ಪಾಗುತ್ತದೆ ಈ ಕಾರುಗಳಿಗೆ ಕೆಲವು ಸ್ಪೆಷಾಲಿಟಿಗಳಿವೆ ಹಾಗೆ ಕೆಲವು ಫೀಚರ್ ಗಳು ಕೂಡ ಇವೆ ಅವುಗಳೇನೆಂದರೆ ಮೊದಲು ಶಬ್ದ ಬೇರೆ ಕಾರುಗಳಿಗೆ ಹೋಲಿಕೆ ಮಾಡಿದರೆ ರೋಲ್ಸ್ ರಾಯ್ಸ್ ಕಾರಿನ ಕ್ಯಾಬಿನ್ ನಲ್ಲಿ ಸೌಂಡ್ ಯಾವುದೇ ಕಾರಣಕ್ಕೂ ಇರೋದಿಲ್ಲ ಹೊರಗಡೆ ಇರುವ ಟ್ರಾಫಿಕ್ ನ ಶಬ್ದವು ಕೂಡ ಕೇಳಿಸೋದಿಲ್ಲ ಪ್ರಯಾಣ ತುಂಬಾ ತುಂಬಾ ಸ್ಮೂತ್ ಆಗಿ ಇರುತ್ತದೆ ಆ ಶಬ್ದಗಳು ಬರದೇ ಇರಲು ಸುಮಾರು 136 kg ಎಕೋಸ್ಟಿಕ್ ಇನ್ಸುಲೇಷನ್ ಏರ್ಪಾಡು ಮಾಡಿರುತ್ತಾರೆ ಕೊನೆಯದಾಗಿ ಕಾರಿನ ಟೈಯರ್ ಗಳಿಗೂ ಕೂಡ ಫೋಮ್ ನಿಂದ ತುಂಬಿರುತ್ತಾರೆ ಇದರಿಂದಾಗಿ ಕಾರ್ ಟೈಯರ್ ಗಳಿಂದ ಬರುವ ಶಬ್ದ -9 ಡೆಸಿಮಲ್ ನ ವರೆಗೂ ಕಡಿಮೆಯಾಗುತ್ತದೆ ಎಷ್ಟು ಸೈಲೆಂಟ್ ಆಗಿರುತ್ತದೆ ಎಂದು ಹೇಳುವುದಾದರೆ ಅನಲಾಗ್ ಕ್ಲಾಕ್ ಶಬ್ದ ಕೇಳಿಸುತ್ತಿರುತ್ತದೆ ಅಂತಹ ಒಂದು ಅನಲಾಗ್ ಕ್ಲಾಕ್ ಈ ರೋಲ್ಸ್ ರಾಯ್ಸ್ ಕಾರಿನ ಒಳಗಡೆ ಇದೆ ಎಂದುಕೊಳ್ಳಿ ಈ ಕಾರು ಸುಮಾರು 20 ಕಿಲೋಮೀಟರ್ ಗಂಟೆಗೆ ಚಲಿಸುತ್ತಿದ್ದರು ಕೂಡ ಈ ಗಡಿಯಾರದ ಮುಳ್ಳುಗಳು ತಿರುಗುತ್ತಿರುವ ಶಬ್ದ ನಮಗೆ ಕೇಳಿಸುತ್ತದೆ ಈಗ ನೀವು ಕಾರಿನ ಒಳಗೆ ಎಷ್ಟು ನಿಶಬ್ದದಿಂದ ಇರುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು ಇನ್ನು ಕಾರಿನ ಒಳಗಡೆ ಇರುವ ಇಂಟೀರಿಯರ್ ನೋಡಿದರೆ ಅದ್ಭುತ ಅನಿಸದೆ ಇರೋದು ನಮಗೆ ಇಷ್ಟವಾಗುವಂತೆ ಕಾರಿನ ಒಳಗಡೆ ಇಂಟೀರಿಯರ್ ಡಿಸೈನ್ ಮಾಡಿಕೊಡುತ್ತಾರೆ ಕೆಲವರಂತೂ ಕಾರಿನಲ್ಲಿ ಇಂಟೀರಿಯರ್ ಡಿಸೈನ್ ಎಲ್ಲವನ್ನು ಡೈಮಂಡ್ ನಲ್ಲಿ ಮಾಡಿಸಿಕೊಳ್ಳುತ್ತಾರೆ.

ಹಾಗೆಯೇ ಕೆಲವು ಕಾರಿನಲ್ಲಿ ಇರುವ ರೂಫ್ ಟಾಪ್ ಅನ್ನ ನೋಡಿದರೆ ರಾತ್ರಿಯ ಸಮಯ ಸಮಯದಲ್ಲಿ ಆಕಾಶದಲ್ಲಿ ನಕ್ಷತ್ರ ಮಿನುಗುವ ರೀತಿ ಇರುತ್ತದೆ ಅದಕ್ಕಾಗಿ ಫೈಬರ್ ಆಪ್ಟಿಕ್ ನಿಂದ ಮಾಡಿದ ಲೈಟ್ ಗಳನ್ನ ಜೋಡಿಸುತ್ತಾರೆ ಕೆಲವು ಮಂದಿ ಅವರು ಹುಟ್ಟಿದಾಗ ನಕ್ಷತ್ರಗಳು ಯಾವ ಸ್ಥಿತಿಯಲ್ಲಿ ಇದ್ದವು ಅದೇ ರೀತಿ ಕಾರಿನ ಒಳಗೆ ಡಿಸೈನ್ ಮಾಡಿಸಿಕೊಳ್ಳುತ್ತಾರೆ ಇನ್ನು ಲೆದರ್ ವರ್ಕ್ ಗಾಗಿ ಎತ್ತಿನ ಚರ್ಮವನ್ನು ಉಪಯೋಗಿಸುತ್ತಾರೆ ಅದು ಕೂಡ ಪ್ರಪಂಚದಲ್ಲಿಯೇ ಬೆಸ್ಟ್ ಲೆದರ್ ಅನ್ನ ಉಪಯೋಗಿಸುತ್ತಾರೆ ಅದಕ್ಕೋಸ್ಕರ ಮಂಜು ಹೆಚ್ಚಾಗಿರುವ ಯುರೋಪ್ ದೇಶಗಳಲ್ಲಿ ಬೆಳೆದಿರುವ ಎತ್ತುಗಳನ್ನು ಉಪಯೋಗಿಸುತ್ತಾರೆ ಇದಕ್ಕೆ ಕಾರಣ ಇದೆ ಈ ಪ್ರಾಂತ್ಯದಲ್ಲಿ ನೊಣಗಳು ಸೊಳ್ಳೆಗಳು ಕೀಟಗಳು ಹುಳಗಳು ತುಂಬಾ ಕಡಿಮೆ ಇರುತ್ತದೆ ಇಲ್ಲಿ ಪ್ರಾಣಿಗಳ ಚರ್ಮದ ಮೇಲೆ ಹುಳಗಳು ಕಚ್ಚಿದ ಮಾರ್ಕ್ ಇಲ್ಲದೆ ಕ್ಲೀನಾಗಿ ಸಾಫ್ಟ್ ಆಗಿ ಇರುತ್ತದೆ ಹಾಗೆ ಒಂದು ಕಾರಿಗೆ ಸುಮಾರು ಐದು ಎತ್ತುಗಳ ಚರ್ಮದ ಅವಶ್ಯಕತೆ ಇರುತ್ತದೆ ಕೇವಲ ಕಾರ್ ನಲ್ಲಿ ಲೆದರ್ ವರ್ಕ್ ಮಾಡಲು ಸುಮಾರು ಎರಡು ವಾರಗಳ ಸಮಯ ಬೇಕಾಗುತ್ತದೆ ಹಾಗೆಯೇ ಈ ಕಾರಿನ ಒಳಗಡೆ ಶಾಂಪೇನ್ ಅನ್ನ ಇಟ್ಟುಕೊಳ್ಳಲು ಒಂದು ರೆಫ್ರಿಜರೇಟರ್ ಕೂಡ ಇರುತ್ತದೆ ಈ ಕಾರಿನಲ್ಲಿ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಸಾಮಾನ್ಯವಾಗಿ ಕಾರಿನ ಚಕ್ರಗಳು ತಿರುಗುತ್ತಿರುವಾಗ ಕಾರಿನ ಚಕ್ರದಲ್ಲಿರುವ ಲೋಗೋ ಕೂಡ ತಿರುಗುತ್ತಿರುತ್ತದೆ ಆದರೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಹಾಗಿರುವುದಿಲ್ಲ ವೀಲ್ಸ್ ಗಳು ತಿರುಗುತ್ತಿದ್ದರೂ ಕೂಡ ಲೋಗೋ ಮಾತ್ರ ತಿರುಗೋದಿಲ್ಲ ಚಕ್ರದಲ್ಲಿರುವ ಗೈರೋಸ್ಕೋಪಿಕ್ ಟೆಕ್ನಾಲಜಿಯಿಂದ ಚಕ್ರದ ಮೇಲೆ ಇರುವ ಲೋಗೋ ಯಾವಾಗಲೂ ಕೂಡ ಸ್ಟೇಬಲ್ ಆಗಿ ಇರುತ್ತದೆ ಇನ್ನು ರೋಲ್ಸ್ ರಾಯ್ಸ್ ಕಾರಿನ ಸೆಂಟರ್ ಆಫ್ ಅಟ್ರಾಕ್ಷನ್ ಅಂದರೆ ಕಾರಿನ ಮುಂಭಾಗದಲ್ಲಿ ಇರುವ ಒಬ್ಬ ಮನುಷ್ಯನ ಸ್ಟ್ಯಾಚ್ ಹಾರುತ್ತಿರುವ ಹಾಗೆ ಒಬ್ಬ ಮನುಷ್ಯನ ಆಕೃತಿ ಇರುತ್ತದೆ ಇದನ್ನ ಸ್ಪಿರಿಟ್ ಆಫ್ ಎಷ್ಟೇ ಎಂದು ಕರೆಯುತ್ತಾರೆ ಇದನ್ನ ಕಸ್ಟಮರ್ ಗೆ ಬೇಕೆಂದ ಹಾಗೆ ಸಿಲ್ವರ್ ಗೋಲ್ಡ್ ಡೈಮಂಡ್ ನಲ್ಲಿ ಕೂಡ ಮಾಡಿಕೊಡುತ್ತಾರೆ ಹೀಗೆ ತಯಾರು ಮಾಡಿದ ಈ ಸ್ಟ್ಯಾಚ್ ಬೆಲೆ 20 ಲಕ್ಷದಿಂದ ಎರಡು ಕೋಟಿ ವರೆಗೂ ಕೂಡ ಇರುತ್ತೆ ಇದಕ್ಕೆ ಇಷ್ಟೊಂದು ಬೆಲೆ ಇರುವ ಕಾರಣ ಮೊದಲೆಲ್ಲ ಕೆಲವರು ಇದನ್ನ ಒಡೆದು ಹಾಕಿ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು.

ಈಗ ಹೊಸದಾಗಿ ಬಂದಿರುವ ಟೆಕ್ನಾಲಜಿ ಮೂಲಕ ಇದನ್ನ ಎಲ್ಲರೂ ಒಡೆದು ಹಾಕಲು ಸಾಧ್ಯವಿಲ್ಲ ಯಾರಾದರೂ ಇದನ್ನ ಕಳ್ಳತನ ಮಾಡಲು ಪ್ರಯತ್ನಿಸಿದರೆ ಅಲ್ಲವೇ ಆಕ್ಸಿಡೆಂಟ್ ಆಗಿ ಏನಾದರೂ ಜರಗಿದ್ರು ಕೂಡ ಇದು ತಕ್ಷಣವೇ ಕಾರಿನ ಮುಂದೆ ಇರುವ ಬ್ಯಾನೆಟ್ ಒಳಗೆ ಹೋಗಿಬಿಡುತ್ತೆ ಆದ್ದರಿಂದ ಇದನ್ನ ಕಳ್ಳತನ ಮಾಡುವುದು ಅಸಾಧ್ಯ ವೀಕ್ಷಕರೇ ಕಾರು ಪೂರ್ತಿ ತುಂಬಾ ಫೀಚರ್ ನಿಂದ ಕೂಡಿರುತ್ತದೆ ಇವುಗಳ ಜೊತೆ ಈ ಕಾರಿನಲ್ಲಿ ಒಂದು ಛತ್ರಿಯು ಕೂಡ ಇರುತ್ತೆ ಇದು ವಿಚಿತ್ರ ಎಂದುಕೊಳ್ಳಬೇಡಿ ಜಸ್ಟ್ ಒಂದು ಛತ್ರಿಯ ಬೆಲೆಯೇ 85200 ರಿಂದ 25500 ರವರೆಗೂ ಇರುತ್ತದೆ ಕೇವಲ ಇದೊಂದೇ ಅಲ್ಲದೆ ರೋಲ್ಸ್ ರಾಯ್ಸ್ ಕಾರಿಗೆ ಸಂಬಂಧಿಸಿದ ವಸ್ತು ವಸ್ತುಗಳು ಪ್ರತಿಯೊಂದು ಕೂಡ ಹೀಗೆ ಇರುತ್ತವೆ ಉದಾಹರಣೆಗೆ ಕಾಲಿನ ಬಳಿ ಹಾಕುವ ಫ್ಲೋರ್ ಮ್ಯಾಟ್ಸ್ ಇರುತ್ತದೆ ಅಲ್ಲವೇ ಅದರ ಬೆಲೆ 85000 ಕೀ ರಿಂಗ್ 10000 ಕಾರಿನ ಕವರ್ 187000 ಅಷ್ಟೇ ಅಲ್ಲದೆ ಕಾರನ್ನ ಕ್ಲಿಯರ್ ಮಾಡುವ ಚಿಕ್ಕ ಚಿಕ್ಕ ಟವಲ್ ಗಳು ಸ್ಪ್ರೇಗಳು ಅಂತಹ ಕಾರ್ ಕೇರ್ ಕಿಟ್ಟೆ 212000 ಇರುತ್ತದೆ ಈಗ ನೀವು ಅರ್ಥ ಮಾಡಿಕೊಳ್ಳಬಹುದು ಈ ಕಾರಿಗೆ ಯಾಕೆ ಅಷ್ಟೊಂದು ಬೆಲೆ ಇರುತ್ತದೆ ಅಂತ ಸ್ನೇಹಿತರೆ ಈ ಕಾರಿನ ಇಂಜಿನ್ ಆಯಿಲ್ ಚೇಂಜ್ ಮಾಡಲೆಂದೆ ಸುಮಾರು 58000 ಖರ್ಚಾಗುತ್ತದೆ ರೆಗ್ಯುಲರ್ ಆಗಿ ಕಾರ್ ಮೈಂಟೆನೆನ್ಸ್ ಗಾಗಿ ಮೂರು ಲಕ್ಷದಿಂದ 18 ಲಕ್ಷದವರೆಗೂ ಖರ್ಚಾಗುತ್ತದೆ ಬೇರೆ ಕಾರಿನ ಕಂಪನಿಗಳಲ್ಲಿ ಕಾರ್ ಮಾರಾಟ ಮಾಡಿದ್ರೆ ಸರಿಹೋಗುತ್ತದೆ ಆದರೆ ರೋಲ್ಸ್ ರಾಯ್ಸ್ ಕಂಪನಿಗೆ ಹಾಗೆ ಇಲ್ಲ ಈ ಕಾರನ್ನ ಕೊಂಡುಕೊಳ್ಳುವವರು ಯಾರು ಡ್ರೈವ್ ಮಾಡುವುದಿಲ್ಲ ಬದಲಿಗೆ ಡ್ರೈವರ್ ಇರುತ್ತಾರೆ ಇಷ್ಟೊಂದು ದುಡ್ಡು ಕೊಟ್ಟು ಕೊಂಡ ಕಾರಿಗೆ ಡ್ರೈವರ್ ಸರಿ ಇಲ್ಲವೆಂದರೆ ಹೇಗೆ ಅದಕ್ಕಾಗಿ ಕಂಪನಿ ಡ್ರೈವರ್ ಗಳಿಗೆ ಟ್ರೈನಿಂಗ್ ಕೂಡ ಕೊಡುತ್ತದೆ ಯಾವ ಕಸ್ಟಮರ್ ಕಾರನ್ನ ಕೊಂಡು ಕೊಳ್ಳುತ್ತಾರೋ ಅವರ ಡ್ರೈವರ್ ಅನ್ನ ಇಲ್ಲಿಗೆ ಕಳಿಸಿದರೆ ಟ್ರೈನಿಂಗ್ ನೀಡುತ್ತಾರೆ.

ಈ ಟ್ರೈನಿಂಗ್ ನಲ್ಲಿ ಕಾರಿನ ಡೋರನ್ನ ಫಿಂಗರ್ ಪ್ರಿಂಟ್ಸ್ ಬೀಳದ ರೀತಿ ಹೇಗೆ ತೆಗೆಯಬೇಕು ಮತ್ತು ಯಾವ ರೀತಿ ಕ್ಲೋಸ್ ಮಾಡಬೇಕು ಕಾರಿನ ಒಳಗಡೆ ಇರುವ ವ್ಯಕ್ತಿಯ ತಲೆಯು ಕೂಡ ಅಲ್ಲಾಡದ ರೀತಿ ಹೇಗೆ ಬ್ರೇಕ್ ಹಾಕಬೇಕು ಕಾರಿನ ಒಳಗಡೆ ಇರುವ ಓನರ್ ಗೆ ಯಾವ ರೀತಿ ಗೌರವ ಕೊಡಬೇಕು ಡ್ರೈವಿಂಗ್ ಮಾಡುವ ರೋಡನ್ನ ಹೇಗೆ ಅರ್ಥಮಾಡಿಕೊಳ್ಳಬೇಕು ಹೀಗೆ ಅನೇಕ ಸಂಗತಿಗಳನ್ನ ಈ ಟ್ರೈನಿಂಗ್ ಪ್ರೋಗ್ರಾಮ್ ನಲ್ಲಿ ಕಲಿಸಿಕೊಡುತ್ತಾರೆ ಇನ್ನು ಈ ರೋಲ್ಸ್ ರಾಯ್ಸ್ ಕಾರುಗಳು ಎಷ್ಟು ಬಲಶಾಲಿ ಎಂದು ಹೇಳಬೇಕಾದರೆ ಈ ಕಂಪನಿ 1904 ರಲ್ಲಿ ಸ್ಥಾಪನೆಗೊಂಡಿತ್ತು ಅಲ್ಲಿಂದ ಇಲ್ಲಿವರೆಗೂ ತಯಾರಿಸಿದ ಕಾರ್ ನಲ್ಲಿ 65% ಕಾರುಗಳು ಇನ್ನು ಕೂಡ ವರ್ಕ್ ಆಗುತ್ತಿವೆ 1904 ರಲ್ಲಿ ಅಂದ್ರೆ 120 ವರ್ಷಗಳ ಹಿಂದೆ ರೋಲ್ಸ್ ರಾಯ್ಸ್ ತಯಾರಿಸಿದ ಕಾರು ಇನ್ನು ಕೂಡ ರನ್ ಆಗುತ್ತಿದೆ ಎಂದರೆ ಈ ಕಾರ್ ಬಿಲ್ಡ್ ಕ್ವಾಲಿಟಿ ಹೇಗೆ ಇದೆ ಅಂತ ಅರ್ಥಮಾಡಿಕೊಳ್ಳಿ ಅಷ್ಟೇ ಅಲ್ಲದೆ rolls ರಾಯ್ಸ್ ಕಂಪನಿ ಬೇರೆ ಕಂಪನಿಗಳ ಹಾಗೆ ಲಕ್ಷಗಟ್ಟಲೆ ಕಾರುಗಳನ್ನ ತಯಾರಿಸಿ ಮಾರಾಟ ಮಾಡೋದಿಲ್ಲ ಇದರ ಸಂಖ್ಯೆ ಕೇವಲ ಸಾವಿರದಲ್ಲೇ ಇರುತ್ತದೆ ಅದರಿಂದಾಗಿಯೇ ಈ ಕಾರುಗಳಿಗೆ ಅಷ್ಟೊಂದು ಡಿಮ್ಯಾಂಡ್ ಇದೆ ಉದಾಹರಣೆಯಾಗಿ ಹೇಳುವುದಾದರೆ 2023 ರಲ್ಲಿ toyota ಕಂಪನಿ 11 1230000 ಕಾರುಗಳನ್ನ ಮಾರಾಟ ಮಾಡಿದೆ ಅದೇ ಮಾರುತಿ ಸುಜುಕಿ 21 ಲಕ್ಷ ಕಾರುಗಳನ್ನ ಮಾರಾಟ ಮಾಡಿದೆ ಆದರೆ rolls ರಾಯ್ಸ್ ಕಂಪನಿ 2023 ರಲ್ಲಿ ಎಷ್ಟು ಕಾರುಗಳನ್ನ ಮಾರಾಟ ಮಾಡಿದೆ ಎಂದು ನಿಮಗೆ ತಿಳಿದಿದ್ಯಾ ಕೇವಲ 603 ಈ ಕಂಪನಿ ರಿಲೀಸ್ ಮಾಡುವ ಒಂದೊಂದು ಕಾರುಗಳು ಕೂಡ ಒಂದೊಂದು ರೀತಿಯ ಟ್ರೆಂಡ್ ಅನ್ನ ಸೆಟ್ ಮಾಡುತ್ತವೆ ಯಾವುದೇ ಹೊಸ ಮಾಡೆಲ್ ಕಾರನ್ನ ತೆಗೆದುಕೊಂಡು ಬಂದರು ಕೂಡ ಅದು ಸೆನ್ಸೇಷನಲ್ ಆಗುತ್ತದೆ ಇದರ ಜೊತೆಗೆ ಕಾರಿನ ಬೆಲೆಯು ಕೂಡ ಹೆಚ್ಚುತ್ತಲೇ ಹೋಗುತ್ತೆ ಈ ಕಂಪನಿ 2017 ರಲ್ಲಿ ರೋಲ್ಸ್ ರಾಯ್ಸ್ ಶೆಫ್ಟ್ ಟೈಲ್ ಎಂಬ ಹೊಸ ಕಾರನ್ನ ರಿಲೀಸ್ ಮಾಡಿತ್ತು ಇದರ ಬೆಲೆ 100 ಕೋಟಿ 2021 ರಲ್ಲಿ ಬೋಕ್ ಲೈಟ್ ಕಾರನ್ನ ರಿಲೀಸ್ ಮಾಡಿದ್ದು ಅದರ ಬೆಲೆ 234 ಕೋಟಿ ಈಗ ಡ್ರಾಪ್ ಟೈಲ್ ಎಂಬ ಹೊಸ ಮಾಡೆಲ್ ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ ಇದರ ಬೆಲೆ 250 ಕೋಟಿ ನಿಮಗೆ ಅನಿಸಬಹುದು ಈ ಕಾರಿನ ಬೆಲೆ ಇಷ್ಟೊಂದು ಇದೆ ಆದ್ದರಿಂದಾಗಿ ಯಾರಾದರೂ ಖರೀದಿ ಮಾಡುತ್ತಾರೆಯೇ ಅಂತ ಆಗಬಹುದು ಆದರೆ ಇಷ್ಟೊಂದು ಬೆಲೆ ಇದ್ದರೂ ಕೂಡ royals ರಾಯ್ಸ್ ಕಾರಿನ ಮಾರಾಟ ಹೆಚ್ಚಾಗುತ್ತಲೇ ಇದೆ ಮುಖ್ಯವಾಗಿ ಅಮೆರಿಕಾ ಚೈನಾ ಅರಬ್ ದೇಶದ ಜನರು ಈ ಕಾರನ್ನ ಹೆಚ್ಚಾಗಿ ಕೊಂಡುಕೊಳ್ಳುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments