ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಇತಿಹಾಸದಲ್ಲಿ ಫಸ್ಟ್ ಟೈಮ್ 90ರ ಗಡಿ ಕ್ರಾಸ್ ಮಧ್ಯಮ ವರ್ಗಕ್ಕೆ ಬಿಗ್ ಶಾಕ್ ಏನೆಲ್ಲ ಎಫೆಕ್ಟ್ ಇದುವರೆಗೂ ಊಹೆ ಮಾಡದೆ ಇರುವಂತಹ ಮಟ್ಟ ಟ್ಟಕ್ಕೆ ಭಾರತದ ರೂಪಾಯಿ ಕುಸಿತ ಕಂಡಿದ್ದು ಅಮೆರಿಕದ ಡಾಲರ್ ಎದರು ಬರಬರಿ 90 ರೂಪಾಯಿಗಳ ಗಡಿಯನ್ನ ದಾಟಿದೆ ಈ ರೀತಿ ಆಗಿರುವುದು ಇತಿಹಾಸದಲ್ಲೇ ಇದೆ ಮೊದಲು ಮಂಗಳವಾರ 89.94 ರಷ್ಟಿದ್ದ ಮೌಲ್ಯ ಬುಧವಾರ ದಿಡೀರ್ ಕುಸಿತ ಕಂಡಿದ್ದು 90 ರೂಪಾಯಿಯ ಬಾರ್ಡರ್ ದಾಟಿದ್ದು ನೂರರ ಹತ್ತಿರಕ್ಕೆ ಬಂದು ನಿಂತಿದೆ ಮೇಲ್ನೋಟಕ್ಕೆ ಇದೊಂದು ಸಣ್ಣ ಬದಲಾವಣೆ ಅಂತ ಅನಿಸಿದರು ಕೂಡ ಇದರ ಪರಿಣಾಮ ಮಾತ್ರ ಬ್ರಹ್ಮಾಂಡದಷ್ಟಿದೆ ಈ ರೀತಿ ರೂಪಾಯಿ ಮೌಲ್ಯ ಕುಸಿತಿರುವುದು ಭಾರತದ ಆರ್ಥಿಕತೆಯನ್ನ ಜಗತ್ತು ಹೇಗೆ ನೋಡ್ತಾ ಇದೆ ಎನ್ನುದರ ದಿಕ್ಸೂಚಿಯಾಗಿದೆ. ದಲಾಲ್ ಸ್ಟ್ರೀಟ್ ನಿಂದ ಹಿಡಿದು ಸಾಮಾನ್ಯರ ಅಡುಗೆ ಮನೆಯವರೆಗೂ ಇದರ ಬಿಸಿ ತಟ್ಟಲಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ? ನೀವು ಕಟ್ಟುವ ಇಎಂಐ ಕೂಡ ಹೆಚ್ಚಾಗುತ್ತಾ ವಿದೇಶಿ ವ್ಯಾಸಂಗದ ಖರ್ಚುಗಳು ಗಗನಕ್ಕೆ ಏರ್ತಾವಾ? ಡೀಟೇಲ್ ಆಗಿ ನೋಡೋಣ. ಇದರ ಜೊತೆಗೆ ಹಾಗಾದರೆ 1947 ರಲ್ಲಿ ರೂಪಾಯಿ ಮೌಲ್ಯ ಎಷ್ಟಿತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಬೀಳ್ತಾ ಇರುವುದು ಯಾಕೆ ಆರ್ಬಿಐ ಏನ್ು ಮಾಡ್ತಾ ಇದೆ ಅದನ್ನು ಕೂಡ ನೋಡ್ತಾ ಹೋಗೋಣ.
ಹೌದು ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಮೊಟ್ಟದಲ್ಲಿ ಕುಸಿತ ಕಂಡಿದೆ ಇತಿಹಾಸದಲ್ಲಿ ಇದೇ ಮೊದಲ ಬಾರಿ 90ರ ಗಡಿದಾಟಿದೆ ಈ ಕುಸಿತವು ಕೇವಲ ಶೇರು ಮಾರುಕಟ್ಟೆಯ ಹುಡಿಕೆದಾರರಿಗೆ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನಿಗೂ ನೇರ ಪರಿಣಾಮ ಬೀರಲಿದೆ ಮೈಕ್ರೋ ಮತ್ತು ಮ್ಯಾಕ್ರೋ ಎಕಾನಮಿಯ ಲೆಕ್ಕಾಚಾರದಲ್ಲಿ ನೋಡುವುದಾದರೆ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಯು ಏರಿಕೆಯಾಗಲಿದೆ ಭಾರತವು ತನ್ನ ತೈಲ ಅಗತ್ಯದ ಶೇಕಡ 90 ರಷ್ಟನ್ನ ಆಮದು ಮಾಡಿಕೊಳ್ಳುತ್ತಾ ಇದೆ ಇದರೊಂದಿಗೆ ಎಲೆಕ್ಟ್ರಾನಿಕ್ಸ್ ರಸಗೊಬ್ಬರ ಮತ್ತು ಅಡಿಕೆ ಎಣ್ಣೆಗೂ ಕೂಡ ನಾವು ವಿದೇಶವನ್ನು ಅವಲಂಬಿಸಿದ್ದೇವೆ ರೂಪಾಯಿ ಮೌಲ್ಯ ಕುಸಿತದಿಂದ ಈ ಬಿಲ್ಗಳ ಮೊತ್ತ ಹೆಚ್ಚಾಗಲಿದ್ದು ಪರೋಕ್ಷವಾಗಿ ಹಣದುಬ್ಬರಕ್ಕೆ ಕಾರಣವಾಗಲಿದೆ ನಿಮ್ಮ ಮುಂದಿನ ಐಫೋನ್ ಫ್ರಿಡ್ಜ್ ಅಥವಾ ಕಾರಿನ ಬೆಲೆ ದುಭಾರಿಯಾಗುವುದು ಖಚಿತ ಅಷ್ಟೇ ಅಲ್ಲ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಿಕೆ ಇದೊಂದು ಕೆಟ್ಟ ಸುದ್ದಿಯಾಗಿದ್ದು 2023 ಕ್ಕೆ ಹೋಲಿಸಿದರೆ ವಾರ್ಷಿಕವಾಗಿ ಐದರಿಂದ 10 ಲಕ್ಷ ರೂಪಾಯಿಗಳಷ್ಟು ಹೆಚ್ಚಿನ ಹಣವನ್ನ ಟ್ಯೂಷನ್ ಫೀಸ್ಗಾಗಿ ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 947 ರಲ್ಲಿ ರೂಪಾಯಿ ಮೌಲ್ಯ ಎಷ್ಟಿತ್ತು ಡಾಲರ್ ವರ್ಸಸ್ ರೂಪಾಯಿ ಇತಿಹಾಸ ಹೇಗಿದೆ ಇದೇವೇಳೆ ರೂಪಾಯಿಯ ಇತಿಹಾಸವನ್ನ ನಾವು ಒಮ್ಮೆ ಗಮನಿಸಲೇಬೇಕು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1947 ಕ್ಕೂ ಮೊದಲು ಭಾರತದ ರೂಪಾಯಿ ಬ್ರಿಟಿಷ್ ಆರ್ಥಿಕತೆಯೊಂದಿಗೆ ತಡುಕು ಹಾಕಿಕೊಂಡಿತ್ತು.
1947 ರಲ್ಲಿ ಅಂದಾಜಿನ ಪ್ರಕಾರ ಒಂದು ಡಾಲರ್ ಗೆ ಕೇವಲ 4.16 ರೂಪಾಯ ಮೌಲ್ಯವಿತ್ತು. ಆಗ ಬ್ರಿಟನಿನ ಫೌಂಡ್ ಅಮೆರಿಕದ ಡಾಲರ್ ಜೊತೆ ಮತ್ತು ಡಾಲರ್ ಚಿನ್ನದ ಜೊತೆ ಲಿಂಕ್ ಆಗಿತ್ತು. ಸ್ವಾತಂತ್ರ್ಯ ನಂತರ 1947 ರಿಂದ 1991ರವರೆಗೆ ಭಾರತ ಸ್ಥಿರ ವಿನಿಮಯ ದರ ಪದ್ಧತಿಯನ್ನ ಅನುಸರಿಸಿತು. ಸರ್ಕಾರದ ನಿಯಂತ್ರಣದಲ್ಲಿ ರೂಪಾಯಿ ಮೌಲ್ಯವನ್ನ ಸ್ಥಿರವಾಗಿಡಲಾಗಿತ್ತು ಆದರೆ 1991ರ ಆರ್ಥಿಕ ಉದಾರೀಕರಣದ ನಂತರ ಕಥೆ ಬದಲಾಯಿತು. ಮಾರುಕಟ್ಟೆ ಆಧಾರಿತ ಹೊಂದಿಕೊಳ್ಳುವ ವಿನಿಮಯ ದರ ಜಾರಿಗೆ ಬಂತು. 1991ರ ಸುಧಾರಣೆಗಳ ನಂತರ ಒಂದು ಡಾಲರ್ಗೆ 35 ರೂಪಾಯ ಇದ್ದ ಮೌಲ್ಯ 2000 ಇಸವಯ್ಯ ಹೊತ್ತಿಗೆ 45 ರೂಪಾಯಿಗೆ ತಲುಪಿತು. 21ನೇ ಶತಮಾನದಲ್ಲಿ ಅಂದ್ರೆ 2001 ರಿಂದ 2025ರ ಅವಧಿಯಲ್ಲಿ ಜಾಗತಿಕ ವಿದ್ಯಮಾನಗಳು 2028ರ ಆರ್ಥಿಕ ಕುಸಿತ ಕೋವಿಡ್-1 19 ಮುಂತಾದ ಕಾರಣಗಳಿಂದ ರೂಪಾಯಿ ಮೌಲ್ಯ 2023 ರಲ್ಲಿ 80ರ ಗಡಿ ದಾಟಿ ಇದೀಗ 2025ರಲ್ಲಿ 90ರ ಗಡಿದಾಟಿ ದಾಖಲೆಯ ಕುಸಿತವನ್ನ ಕಂಡಿದೆ. ರೂಪಾಯಿ ಕುಸಿತಕ್ಕೆ ಪ್ರಮುಖ ಮೂರು ಕಾರಣ ಅಮೆರಿಕದ ಸುಂಕ ನೀತಿಯೇ ಬಿಗ್ ವಿಲನ್ ಸದ್ಯ ರೂಪಾಯಿ ಮೌಲ್ಯ 90ರ ಗಡಿ ದಾಟಲು ಪ್ರಮುಖವಾಗಿ ಮೂರು ಕಾರಣಗಳನ್ನ ತಗ್ನರು ನೀಡ್ತಾರೆ ಫಸ್ಟ್ ಅಮೆರಿಕದ ಜೊತೆಗಿನ ವ್ಯಾಪಾರ ಸಮರ ಅಮೆರಿಕವು ಭಾರತೀಯ ರಪ್ತುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿರುವುದು ಬಿಸಿನೆಸ್ ಕಾನ್ಫಿಡೆನ್ಸ್ಗೆ ಪೆಟ್ಟು ನೀಡಿದೆ ಸೆಕೆಂಡ್ ಕಾರಣ ಹೂಡಿಕೆದಾರರ ನಿರ್ಗಮನ ಭಾರತದಲ್ಲಿ ಜಿಡಿಪಿ ಬೆಳವಣಿಗೆ ಸ್ಥಿರವಾಗಿದ್ದರು 2025ರಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಈಕ್ವಿಟಿ ಮಾರುಕಟ್ಟೆಯಿಂದ ಬರೊಬ್ಬರಿ 17 ಬಿಲಿಯನ್ ಡಾಲರ್ ಹಣವನ್ನ ಹಿಂಪಡೆದಿದ್ದಾರೆ ಇದು ರೂಪಾಯಿ ಮೇಲೆ ತೀವ್ರ ಒತ್ತಡವನ್ನ ಹೇರಿದೆ. ಮೂರನೆಯದಾಗಿ ಆರ್ಬಿಐ ನ ನೀತಿ ಬದಲಾವಣೆ.
ಅಂತರಾಷ್ಟ್ರೀಯ ಹಣಕಾಸು ನಿಧಿ ಭಾರತದ ವಿನಿಮಯ ಧರವನ್ನ ಸ್ಥಿರದಿಂದ ತೆವಳುವಿಕೆ ಅಂತ ಮುರುಗೀಕರಿಸಿದೆ. ಇದರಿಂದ ಆರ್ಬಿಐ ಈಗ ರೂಪಾಯಿಯನ್ನ ರಕ್ಷಿಸುವ ಬದಲು ಮಾರುಕಟ್ಟೆಗೆ ಅನುಗುಣವಾಗಿ ಅದು ತನ್ನ ಮೌಲ್ಯ ಕಂಡುಕೊಳ್ಳಲು ಬಿಡ್ತಾ ಇದೆ. ಇದರರ್ಥ ಆರ್ಬಿಐ ಈಗ ರೂಪಾಯಿಯನ್ನ ರಕ್ಷಿಸುವ ಬದಲು ಮಾರುಕಟ್ಟೆಗೆ ಅನುಗುಣವಾಗಿ ಅದು ತನ್ನ ಮೌಲ್ಯ ಕಂಡುಕೊಳ್ಳಲು ಬಿಡ್ತಾ ಇದೆ. ರೂಪಾಯಿಗಾಗಿ ಆರ್ಬಿಐ ಏನ್ು ಮಾಡ್ತಾ ಇದೆ? ಭಾರತದ ರಿಸರ್ವ್ ಬ್ಯಾಂಕ್ ಬಳಿ ಹಣವಿಲ್ಲವೇ. ಈ ಭಾರಿಯ ರೂಪಾಯಿ ಕುಸಿತ ಹಿಂದಿನ ಬಿಕ್ಕಟ್ಟುಗಳಿಗಿಂತ ಭಿನ್ನವಾಗಿದೆ ಅಂತ ಅನಲೈಸ್ ಮಾಡಲಾಗ್ತಿದೆ. 2013ರ ಟೇಪರ್ ಟ್ಯಾಂಟ್ರಮ ಮತ್ತು 2018ರ ತೈಲ ಬೆಲೆ ಏರಿಕೆಯ ಆಘಾತದಂತೆ ಈಗಿನ ಕುಸಿತ ಇಲ್ಲ. ಯಾಕಂದ್ರೆ ಈ ಬಾರಿ ಡಾಲರ್ ಜಾಗತಿಕವಾಗಿ ಸ್ಥಿರವಾಗಿದ್ದರೂ ರೂಪಾಯಿ ಕುಸಿತಾ ಇದೆ. ಹಾಗಂತ ಆರ್ಬಿಐ ಬಳೆ ಹಣವಿಲ್ಲವೇ ಖಂಡಿತ ಇದೆ. ಆರ್ಬಿಐ ಬಳೆ ಬರೊಬ್ಬರಿ 690 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಸಂಗ್ರಹವಿದೆ. ಆದರೆ ಆರ್ಬಿಐ ಈ ಬಾರಿ ಫೈರ್ ಫೈಟಿಂಗ್ ಅಂದ್ರೆ ಬೆಂಕಿ ನಂದಿಸುವ ಕೆಲಸವನ್ನ ಮಾಡ್ತಾ ಇಲ್ಲ. ಬದಲಾಗಿ ದೀರ್ಘಕಾಲೀನ ಸ್ಥಿರತೆಗಾಗಿ ಸ್ಟ್ರಾಟಜಿಕ್ ಪೇಶನ್ಸ್ ತೋರಿಸ್ತಾ ಇದೆ. 90 ರೂಪಾಯಿ ಗಡಿಯನ್ನ ಕಾಯ್ದುಕೊಳ್ಳುವುದಕ್ಕಿಂತ ರಪ್ತು ಸ್ಪರ್ಧಾತ್ಮಕತೆಯನ್ನ ಹೆಚ್ಚಿಸಲು ರೂಪಾಯಿ ಮೌಲ್ಯ ಕುಸಿಯಲು ಬಿಡುವುದು ಒಳಿತು ಎಂಬ ಲೆಕ್ಕಾಚಾರದಲ್ಲಿ ರಿಸರ್ವ್ ಬ್ಯಾಂಕ್ ಇದೆ. ಈ ಅಭಿಪ್ರಾಯಗಳ ನಡುವೆಯು ತನ್ನ ವಿದೇಶಿ ಮೀಸಲು ಸಂಗ್ರಹದಿಂದ ಬಿಲಿಯನ್ ಗಟ್ಟಲೆ ಡಾಲರ್ ಅನ್ನ ಕೂಡ ಮಾರಿರುವ ರಿಸರ್ವ್ ಬ್ಯಾಂಕ್ ರೂಪಾಯಿ ರಕ್ಷಣೆಗೆ ನಿಂತಿರುವ ಬಗ್ಗೆಯೂ ಕೂಡ ವರದೆಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದುಬಾರಿ.
ಮಧ್ಯಮ ವರ್ಗದ ಬಜೆಟ್ಗೆ ಬೇಕತ್ತರಿ ಇನ್ನು ಈ ಆರ್ಥಿಕ ಬದಲಾವಣೆ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ರೂಪಾಯಿ ಕುಸಿತವು ನೇರವಾಗಿ ಹಣದುಬ್ಬರಕ್ಕೆ ಕಾರಣವಾಗಲಿದೆ ಕಾರಣ ಭಾರತ ತನ್ನ ಅಗತ್ಯದ ಶೇಕಡ 90ರಷ್ಟು ಕಚ್ಚ ತೈಲ ಮತ್ತು ಶೇಕಡ 60ರಷ್ಟು ಖಾದ್ಯ ತೈಲವನ್ನ ಆಮದು ಮಾಡಿಕೊಳ್ಳುತ್ತಾ ಇದೆ ರೂಪಾಯಿ ದುರ್ಬಲವಾದರೆ ಇವುಗಳ ಆಮದು ಬಿಲ್ ಹೆಚ್ಚಾಗಲಿದ್ದು ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಎಣ್ಣೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಈಗಾಗಲೇ ಪೆಟ್ರೋಲ್ ಬೆಲೆ 100 ರೂಪಾ ದಾಟಿದ್ದು ಇದು ಇನ್ನು ಹೆಚ್ಚಾಗುವ ನಿರೀಕ್ಷೆ ಇದೆ ಕೇವಲ ರೂಪಾಯಿ ಕುಷಿತ ಮಾತ್ರವಲ್ಲದೆ ರಷ್ಯಾದಿಂದ ತೈಲ ಖರೀದಿಯನ್ನ ಕಡಿಮೆ ಮಾಡಿರುವುದರಿಂದ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗುವುದು ಫಿಕ್ಸ್ ಎನ್ನಲಾಗಿದೆ ಅಷ್ಟೇ ಅಲ್ಲ ವಿದೇಶದಿಂದ ಬರುವ ಎಲೆಕ್ಟ್ರಾನಿಕ್ಸ್ ವಸ್ತುಗಳು ಸ್ಮಾರ್ಟ್ ಫೋನ್ಗಳು ಲ್ಯಾಪ್ಟಾಪ್ಗಳು ಮತ್ತು ಕಾರುಗಳ ಬೆಲೆಯಲ್ಲೂ ಏರಿಕೆಯಾಗಲಿದೆ ವಿದೇಶಿ ವ್ಯಾಸಂಗಕ್ಕೆ 5 ಲಕ್ಷ ರೂಪಾಯಿ ಹೆಚ್ಚು ಫಾರಿನ್ ಟ್ರಿಪ್ ಕೂಡ ದುಬಾರಿಯಾಗಲಿದೆ ವಿಶೇಷವಾಗಿ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಉದಾಹರಣೆಗೆ ವರ್ಷಕ್ಕೆ 50ಸಾ ಡಾಲರ್ ಟ್ಯೂಷನ್ ಫೀಸ್ ಇದ್ದರೆ ಡಾಲರ್ ಮೌಲ್ಯ 80 ಇದ್ದಾಗ 40 ಲಕ್ಷ ರೂಪಾಯ ಆಗ್ತಾ ಇತ್ತು ಈಗ ಅದು 90 ದಾಟಿರುವುದರಿಂದ 45 ಲಕ್ಷ ರೂಪಾಯಿ ಆಗಲಿದೆ ಅಂದ್ರೆ ನೇರವಾಗಿ 5 ಲಕ್ಷ ರೂಪಾಯಿ ಹೊರೆ ಬಿಡಲಿದೆ ಇದು ಎಷ್ಟೋ ಮಧ್ಯಮ ವರ್ಗದ ಕುಟುಂಬಗಳ ತಿಂಗಳ ಸಂಬಳಕ್ಕಿಂತ ಹಲವು ಪಟ್ಟು ಹೆಚ್ಚು ಈಗಾಗಲೇ ಡಾಲರ್ ರೂಪದಲ್ಲಿ ಸಾಲ ಪಡೆದವರು ಈಗ ರೂಪಾಯಿ ಲೆಕ್ಕದಲ್ಲಿ ಶೇಕಡ 12 ರಿಂದ 13ರಷ್ಟು ಹೆಚ್ಚು ಹಣವನ್ನ ಮರುಪಾದಿಸಬೇಕಾಗುತ್ತೆ.
ತಿಂಗಳಿಗೆ ಒಂದೂವರೆ ಲಕ್ಷ ದುಡಿಯುವ ಕುಟುಂಬವು ಕೂಡ ಈಗ ಸೇವಿಂಗ್ಸ್ ಹಣಕ್ಕೆ ಕೈ ಹಾಕಬೇಕು ಪರಿಸ್ಥಿತಿ ನಿರ್ಮಾಣವಾಗಿದೆ ವಿದೇಶಿ ಪ್ರವಾಸದ ಕನಸು ಕಾಣುವವರೆಗೂ ಇದು ಶಾಕನ್ನ ನೀಡಿದೆ 2000 ಡಾಲರ್ನ ಫ್ಯಾಮಿಲಿ ಟ್ರಿಪ್ ಖರ್ಚು 1.6 ಲಕ್ಷದಿಂದ 1.8 ಲಕ್ಷಕ್ಕೆ ಏರಿಕೆಯಾಗಿದೆ ವಿದೇಶದಿಂದ ಹಣ ಕಳಿಸುವವರಿಗೆ ಹಬ್ಬ ರೆಮಿಟೆನ್ಸ್ ದಾರರಿಗೆ ಬಂಪರ್ ಲಾಟರಿ ಇದೆಲ್ಲದರ ನಡುವೆ ಒಂದು ಸಮಾಧಾನಕರ ಸಂಗತಿ ಏನಪ್ಪಾ ಅಂತಂದ್ರೆ ವಿದೇಶದಿಂದ ಭಾರತಕ್ಕೆ ಹಣ ಕಳಿಸುವವರೆಗೆ ಇದು ಲಾಭದಾಯಕ 2024 ರಲ್ಲಿ ಭಾರತಕ್ಕೆ 137 ರಿಂದ 138 ಬಿಲಿಯನ್ ಡಾಲರ್ ರೆಮಿಟೆನ್ಸ್ ಹರಿದು ಬಂದಿದೆ. ಇದು ಜಗತ್ತಿನ ಯಾವುದೇ ದೇಶಕ್ಕಿಂತ ದುಪ್ಪಟ್ಟು ವಿದೇಶದಲ್ಲಿರುವ ಮಗ ಅಥವಾ ಮಗಳು ಮನೆಗೆ 500 ಡಾಲರ್ ಕಳಿಸಿದರೆ ಹಿಂದೆ 40ಸಾ ರೂಪಾಯ ಸಿಗತಾ ಇತ್ತು. ಈಗ ಅದೇ 500 ಡಾಲರ್ ಗೆ ಬರೊಬ್ಬರಿ 45,000 ರೂಪಾಯ ಸಿಗಲಿದೆ. ಗ್ರಾಮೀಣ ಭಾಗದ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಈ ಹೆಚ್ಚುವರಿ 5000 ರೂಪಾಯ ದೊಡ್ಡ ಮೊತ್ತವಾಗಿದ್ದು ಶಿಕ್ಷಣ ಆರೋಗ್ಯ ಅಥವಾ ಆಸ್ತಿ ಹೂಡಿಕೆಗೆ ಬಳಕೆಯಾಗಲಿದೆ.
ರಫ್ತುದಾರರ ಕಥೆ ಏನಾಗಲಿದೆ ಐಟಿ ಕಂಪನಿಗಳಿಗೆ ಇದರಿಂದ ಲಾಭವಾಗಲಿದ್ದರೂ ಕೂಡ ಅಮೆರಿಕದ ಸುಂಕದ ಏಟು ಟೆಕ್ಸ್ಟೈಲ್ಸ್ ಮತ್ತು ಉತ್ಪಾದನ ವಲಯಕ್ಕೆ ಬಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅಂತ ಹೇಳಲಾಗ್ತಿದೆ. 6ರಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಮುಂದಿನ ವರ್ಷ ಭಾರತೀಯರು ಏನ್ ಮಾಡಬೇಕು ಹಾಗಾದರೆ ಈಗ ಭಾರತೀಯ ಕುಟುಂಬಗಳು ಮಾಡಬೇಕು ಎಂಬ ಪ್ರಶ್ನೆ ಬರಲಿದೆ ತಜ್ಞರ ಪ್ರಕಾರ ನಿಮ್ಮ ಆದಾಯ ಯಾವ ಕರೆನ್ಸಿಯಲ್ಲಿ ಇದೆಯೋ ಅದೇ ಕರೆನ್ಸಿಯಲ್ಲಿ ಸಾಲ ಇರುವುದು ಉತ್ತಮ ರೂಪಾಯಿಯಲ್ಲಿ ದುಡಿದು ಡಾಲರ್ ಸಾಲ ಮಾಡುವುದು ಅಪಾಯಕಾರಿ ವಿದೇಶಿ ಪಾವತಿಗಳಿಗೆ ಫಾರ್ವರ್ಡ್ ಕಾಂಟ್ರಾಕ್ಟ್ ಅಥವಾ ಹಂತ ಹಂತವಾಗಿ ಪಾವತಿಸುವ ವಿಧಾನವನ್ನ ಅನುಸರಿಸಬೇಕು ಮುಂದಿನ ದಿನಗಳಲ್ಲಿ ಅಂದ್ರೆ 2026ರ ಹೊತ್ತಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 93 ರಿಂದ 95ಕ್ಕೆ ತಲುಪಬಹುದು ಅಂತ ಊಹಿಸಿಕೊಂಡು ಬಜೆಟ್ ಮಾಡುವುದು ಜಾಣತನ ಅಲ್ಪಾವಧಿಯ ಸಾಲ ನಿಧಿಗಳು ಮತ್ತು ಫಿಕ್ಸಡ್ ಡೆಪಾಸಿಟ್ಗಳು ಈಗ ಉತ್ತಮ ಆಯ್ಕೆಯಾಗಿವ. ಒಟ್ಟನಲ್ಲಿ ರೂಪಾಯಿ 90ರ ಗಡಿ ದಾಟಿರುವುದು ಭಾರತದ ಆರ್ಥಿಕತೆಯ ಹೊಸ ಅಧ್ಯಾಯವನ್ನ ಸೂಚಿಸುತ್ತೆ ಆರ್ಬಿಐ ಸದ್ಯಕ್ಕೆ ಆಕ್ರಮಣಕಾರಿ ರಕ್ಷಣಕ್ಕಿಂತ ಮಾರುಕಟ ಟೆಯ ಸ್ವಾಭಾವಿಕ ಹೊಂದಾಣಿಕೆಗೆ ಒತ್ತು ನೀಡಿದೆ ಅಂದರೆ ಆರ್ಬಿಐ ದೀರ್ಘಕಾಲೀನ ಲಾಭಕ್ಕಾಗಿ ಈ ಕುಷಿತವನ್ನ ಸಹಿಸಿಕೊಳ್ಳುತ್ತಿರಬಹುದು ಆದರೆ ಸದ್ಯಕ್ಕೆ ಕೋಟ್ಯಾಂತರ ಭಾರತೀಯರ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಇದು ದೊಡ್ಡ ಎಫೆಕ್ಟ್.


