ನಮ್ಮ ದೇಶದಲ್ಲಿ ಇವತ್ತಿಗೂ ಹಲವಾರು ವಿಧದ ಬೈಕ್ಗಳು ಮಾರುಕಟ್ಟೆಗೆ ಎಂಟ್ರಿ ಆಗ್ತಾನೆ ಇದೆ ಆದರೆ ಇವುಗಳಲ್ಲಿ ಕೆಲವು ಬೈಕ್ಗಳು ಮಾತ್ರ ಇನ್ನು ಕೂಡ ಸವಾರರ ಕ್ರೇಜ ಅನ್ನ ಹಾಗೆ ಉಳಿಸಿಕೊಂಡಿರೋದು ಇವುಗಳ ಸರದಿಯಲ್ಲಿ 90ರ ದಶಕದಲ್ಲಿ ಪ್ರತಿ ಯುವಕರ ಮನದಾಳದಲ್ಲಿ ಅಚ್ಚುತ್ತಿದ್ದ ಈ ಬೈಕ್ನಲ್ಲಿ ಕುಳಿತಾಗ ಹೊಸ ಚೈತನ್ಯ ವನ್ನ ತುಂಬುತ್ತಿದ್ದ ಜೊತೆಗೆ ಭಾರತೀಯ ರಸ್ತೆಗಳನ್ನ ರಾಜನಂತೆ ಆಳುತ್ತಿದ್ದಆರ್ಎಕ್ಸ್ 100 ಕೂಡ ಒಂದು ಅಂದಿನ ಯುವಕರಿಗೆ ಈ ಬೈಕ್ ಮೇಲಿನ ಕ್ರೇಸ್ ಅಂತಿಂತದ್ದಲ್ಲ ಇವತ್ತಿಗೂ ಕೂಡ ಈ ಬೈಕ್ ಅದೇ ಕ್ರೇಜ ಅನ್ನ ಉಳಿಸಿಕೊಂಡು ಬಂದಿದೆ ಆದರೆ ದುರಂತ ಅಂದ್ರೆಆರ್ಎಕ್ಸ್ 100 ಬೈಕ್ಗಳೇ ಈಗ ಇಲ್ಲದಾಗಿದೆ ರಾಯಲ್ ಎನ್ಫೀಲ್ಡ್ kೆಟಿಎಂ ಹರ್ಲಿ ಡೇವಿಸನ್ ಹೀಗೆ ಕೆಲವು ಬೈಕ್ಗಳಿಗಾಗಿ ಇಂದಿನ ಯುವಕರು ಮಾರುಕಟ್ಟೆಯಲ್ಲಿ ಯಾವ ರೀತಿ ಮುಗಿಬೀಳುತ್ತಾರೋ ಹಾಗೆಯೇ 90ರ ದಶಕದಲ್ಲಿRx 100 ಬೈಕ್ಗಾಗಿ ಯುವಕರು ಮುಗಿಬೀಳುತ್ತಿದ್ದರು ಅಂದಿನ ಯುವಕರ ಹಾಟ್ ಫೇವರೆಟ್ ಆಗಿದ್ದ ತನ್ನ ಶಬ್ದದ ಮೂಲಕವೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಹಾಗೂ ಯಸಸ್ಸಿನ ತುತ್ತ ತುದಿಯಲ್ಲಿದ್ದ ಈ ಬೈಕ್ನ ಉತ್ಪಾದನೆಯನ್ನ ಕಂಪನಿ 1996ರ ವೇಳೆಗೆ ಸ್ಥಗಿತಗೊಳಿಸಿತು ಹಾಗಾದರೆ ಇದಕ್ಕೆ ಕಾರಣವಾದರೂ ಏನು ಭಾರತದ ರಸ್ತೆಯಲ್ಲಿ ರಾರಾಜಿಸುತ್ತಿದ್ದ.
ಹೈ ಪರ್ಫಾರ್ಮೆನ್ಸ್ ಬೈಕ್ಗಳನ್ನ ಉತ್ಪಾದಿಸುವುದರಲ್ಲಿ ಜಪಾನ್ ದೇಶದ ದೈತ್ಯ ಸಂಸ್ಥೆಯಾದಯಮಹ ಸದಾ ಒಂದು ಹೆಜ್ಜೆ ಮುಂದು ಎಂಬ ವಿಷಯ ಎಲ್ಲರಿಗೂ ತಿಳಿದಿರುವ ಸಂಗತಿ ಈ ಕಾರಣದಿಂದಲೇ ನಮ್ಮ ದೇಶದಲ್ಲಿಯಮಹ ಸಂಸ್ಥೆಯ ಮೂಲಕ ಉತ್ಪಾದನೆಯಾದ ಬೈಕ್ಗಳಿಗೆ ಬಲು ಬೇಡಿಕೆ ಇರುತ್ತೆ ಆದರೆ ನಾವು ಕೆಲವು ವರ್ಷಗಳ ಹಿಂದೆ ಅಂದ್ರೆ 1980ರ ದಶಕಕ್ಕೂ ಹೋದ್ರೆ ಯಮಹದ ಬೈಕ್ಗೆ ನಮ್ಮ ದೇಶದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಇರಲಿಲ್ಲ. ಇದಕ್ಕೆ ಮುಖ್ಯವಾದ ಒಂದು ಕಾರಣ ಏನೆಂದರೆ ನಮ್ಮ ದೇಶದಲ್ಲಿ ಆಗಷ್ಟೇ ದ್ವಿಚಕ್ರ ವಾಹನದ ಇಂಡಸ್ಟ್ರಿಗಳು ಪ್ರಗತಿ ಹೊಂದುತ್ತಿದ್ದು ಈ ಸಂದರ್ಭದಲ್ಲಿ ಜಪಾನ್ ಸಂಸ್ಥೆಯಾದ ಯಮಹ ನಮ್ಮ ಭಾರತ ದೇಶದ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರಲು ಬಹಳ ಶ್ರಮವಹಿಸಿತ್ತು. 1983ರ ದಶಕದಲ್ಲಿ ಭಾರತಕ್ಕೆ ಬಂದ yಮಹಾ ದ ಫೇಮಸ್ ಮಾಡೆಲ್ yamaha 350 ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನ ಕಾಣೋದಿಲ್ಲ ಜಪಾನ್ನ ಪ್ರಕಾರ ಈ ಬೈಕ್ನ ದಕ್ಷತೆ ಹಾಗೂ ಕಾರ್ಯಕ್ಷಮತೆ ಉತ್ತಮವಾಗಿದ್ದರು ನಮ್ಮ ಭಾರತದಲ್ಲಿ ಮಾತ್ರ ಬಹಳ ಘೋರವಾಗಿ ವಿಫಲವನ್ನ ಕಂಡಿತು ಜೊತೆಗೆ ಭಾರತೀಯರ ಪ್ರಕಾರ ಇದರ ಬೆಲೆಯ ವಿಚಾರದಲ್ಲಿ ಹಾಗೆ ಇಂಧನ ದಕ್ಷತೆಯಲ್ಲಿ ಈ ಬೈಕ್ ಕಳಪೆ ಮಟ್ಟದಲ್ಲಿತ್ತುಯಮಹahaಆಡಿ 350ಯ ವೈಫಲ್ಯ ಯಮಹ ಸಂಸ್ಥೆಗೆ ಹೊಸ ದೃಷ್ಟಿಕೋನದತ್ತ ಆಲೋಚಿಸಲು ಹೊಸದಾದ ಮಾದರಿಯಲ್ಲಿ ಬೈಕನ್ನ ಉತ್ಪಾದಿಸಲು ಪ್ರೇರಣೆಯಾಯಿತುಮಹ rd 350ಯ ಸೋಲಿನ ಬೆನ್ನಲ್ಲೇ ಅಂದರೆ 1984 ರಲ್ಲಿ ಮತ್ತೆ ಪುನಃ ಜಪಾನ್ನ ಇನ್ನೊಂದು ಕಂಪನಿಯು ಭಾರತೀಯ ಮಾರುಕಟ್ಟೆಗೆ 100ಸಿಸಿ ಲೈಟ್ ವೆಟ್ ಬೈಕ್ suುಜುಕಎ 100 ಅನ್ನ ಪರಿಚಯಿಸುತ್ತೆ ಇದು ಲಘುತೂಕದ ಬೈಕ್ ಆದ ಕಾರಣ ಸ್ವಲ್ಪ ಸಮಯಗಳ ಕಾಲ ಈ ಬೈಕ್ ಭಾರತದಲ್ಲಿ ಯಶಸ್ವಿಯಾಗುತ್ತೆ ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಘುತೂಕದ ಬೈಕ್ಗಳಿಗೆ ಇರುವ ಬೇಡಿಕೆಯನ್ನ ಕಂಡ ಜಪಾನ್ ಮುಂದಿನ ದಿನಗಳಲ್ಲಿ ತನ್ನ ಗಮನವನ್ನ ಹೆಚ್ಚು ತೂಕದ ಬೈಕ್ಗಳತ್ತ ಕೇಂದ್ರೀಕರಿಸದೆ ಲಘುತೂಕದ ಹಾಗೂ ನೋಡಲು ಆಕರ್ಷಕವಾಗಿರುವಂತಹ ಬೈಕ್ಗಳನ್ನ ತಯಾರಿಸುವಲ್ಲಿ ಕೇಂದ್ರೀಕರಿಸಿತ್ತು ಆಮೂಲಕ ಭಾರತದ ಯುವಕರನ್ನ ತನ್ನತ್ತ ಆಕರ್ಷಿಸುವಂತಹ ಪ್ರಣಾಳಿಕೆಯನ್ನ ಕಂಪನಿ ರೂಪಿಸಿ ಒಂದು ಹೊಸ ಬೈಕನ್ನ ವಿನ್ಯಾಸಗೊಳಿಸುವಲ್ಲಿ ಮಗ್ನನಾಗುತ್ತದೆ ಈ ಮೂಲಕ 1985ರ ನವೆಂಬರ್ ನಲ್ಲಿ ಜಪಾನ್ ಯಮಹ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಯುವಕರ ನಿದ್ದೆಗೆಡಿಸುವ ಹೊಸ ಮಾಡೆಲ್ ಅನ್ನ ಪರಿಚಯಿಸುತ್ತೆ ಆ ಮಾಡೆಲ್ ಹೆಸರೇಯಮ RX 100 ಈ ಬೈಕ್ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿದ್ದಂತೆ ಹೊಸ ಸಂಚಲನವನ್ನೇ ಮೂಡಿಸಿತ್ತು ಆ ಸಂಚಲನ ಎಷ್ಟರ ಮಟ್ಟಿಗೆ ಇತ್ತೆಂದರೆ ಸುಮಾರು 10 ವರ್ಷಗಳ ತನಕ ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಯಮಹಾ ಸಂಸ್ಥೆಯ ಹೆಸರು ಬಿಟ್ಟರೆ ಬೇರೆ ಯಾವುದೇ ಹೆಸರು ಕೇಳಿ ಬರ್ತಿರಲಿಲ್ಲ ಒಂಟಿಸಲಗನಾಗಿ ಯಮಹ ಸಂಪೂರ್ಣವಾಗಿ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನ ಸಾಧಿಸಿತು.
Yamaha ದ ಇತರೆ ಬೈಕ್ಗಳಾದ Yamaha RX 100 DX Yamaha RX ಗಳ ವಿನ್ಯಾಸ ಕೋಲಿಸಿದ್ರೆ Yamaha RX 100 ವಿನ್ಯಾಸ ಭಿನ್ನವಾಗಿದೆ. RX 100ಡಿX, Yamaha RX ಎರಡು ಮಾಡೆಲ್ಗಳು ಅಮೆರಿಕಾ ಹಾಗೂ ಇಂಗ್ಲೆಂಡ್ನಲ್ಲಿ ಲಾಂಚ್ ಆಗಿ ಯಶಸ್ವಿಯಾಗಿದ್ದವು ಆದರೆ ಇವೆರಡಕ್ಕಿಂತ ನವೀಕರಿಸಿದ ಆವೃತ್ತಿಯಮ RX 100 ಆಗಿತ್ತು. ಈ ಬೈಕ್ನ ವೈಶಿಷ್ಟ್ಯತೆಗಳ ಬಗ್ಗೆ ಹೇಳೋದಾದರೆ ಇದರ ನೋಟ ಮಾತ್ರ ಕೇವಲ ಆಕರ್ಷಕ ಮಾತ್ರವಲ್ಲದೆ ಕಾರ್ಯಕ್ಷಮತೆಯಲ್ಲಿಯೂ ಅಷ್ಟೇ ಆಕರ್ಷಕವಾದದ್ದು 11 ಬಿಎಚ್pಿ ಪವರ್ ಔಟ್ಪುಟ್ ಹೊಂದಿದ್ದು ಗಂಟೆಗೆ ಸುಮಾರು 100 km ವೇಗವನ್ನ ತಲುಪುವ ಸಾಮರ್ಥ್ಯ ಈ ಬೈಕ್ ನದ್ದಾಗಿದೆ. ಜೊತೆಗೆ 100 ಸಿಸಿಯ ಸಿಂಗಲ್ ಸಿಲಿಂಡರ್ ಎರಡು ಸ್ಟ್ರೋಕ್ ಇಂಜಿನ್ ಸಾಮರ್ಥ್ಯ ಹೊಂದಿದ ಹಗುರ ತೂಕವುಳ್ಳ ಬೈಕ್ ಇದಾಗಿತ್ತು. RX 100 ನ ಈ ಎಲ್ಲಾ ಗುಣಲಕ್ಷಣವನ್ನ ನೋಡುವಾಗ ಇದರಲ್ಲೆಲ್ಲೂ ವಿಶೇಷ ಇದೆ ಅಂತ ಅನಿಸಬಹುದು ಆದರೆ ನಿಜ ಜೀವನದಲ್ಲಿ ಈ ಬೈಕ್ನೊಂದಿಗಿನ ಸವಾರಿ ಬಿರುಗಾಳಿಯ ಜೊತೆಗೆ ಹೋದಂತಹ ಅನುಭವವನ್ನ ನೀಡುತ್ತೆ.
90ರ ದಶಕದಲ್ಲಿ RX 100 ಬೈಕ್ ಇಂದಿನ ಫೆರಾರಿ ಬೈಕ್ನ ಅನುಭವವನ್ನ ನೀಡುತಿತ್ತು ಎಂದರೂ ತಪ್ಪಾಗೋದಿಲ್ಲ. ಪವರ್ ಹಾಗೂ ಪರ್ಫಾರ್ಮೆನ್ಸ್ ನಲ್ಲಿ ಈ ಬೈಕ್ ಟಾಪ್ ನಲ್ಲಿದ್ದ ಕಾರಣ ಇದನ್ನ ಪಾಕೆಟ್ ರಾಕೆಟ್ ಅಂತಲೂ ಕೂಡ ಕರೀತಾ ಇದ್ರು ಎಷ್ಟೋ ಮಂದಿ ಈ ಬೈಕ್ ಅನ್ನ ಇಷ್ಟಪಡಲು ಮತ್ತೊಂದು ಕಾರಣ ಏನಂದ್ರೆ ಅದರ ತೂಕ ಹೌದು ಆಶ್ಚರ್ಯಕರವಾದ ಸಂಗತಿ ಏನಂದ್ರೆ RX 100 ನ ತೂಕ ಒಟ್ಟು 98 kg ಈ ಬೈಕ್ ನಲ್ಲಿ ವಿಶೇಷವಾದ ಟೆಕ್ನಿಕಲ್ ಫೀಚರ್ಸ್ ಗಳು ಇಲ್ಲದ ಕಾರಣಗಳಿಂದಾಗಿ ಈ ಬೈಕ್ ಅತೀ ವೇಗವಾಗಿ ಸಾಗುವ ಒಂದು ಪವರ್ ಹೌಸ್ ಆಗುತ್ತೆ. ಮತ್ತೊಂದು ಆಶ್ಚರ್ಯ ಸಂಗತಿ ಅಂದ್ರೆ RX 100 ಬೈಕ್ 0 ಟು 60 km ಸ್ಪೀಡ್ ಅನ್ನ ಕೇವಲ 7.8 ಎ ಸೆಕೆಂಡ್ಗಳಲ್ಲಿ ತಲುಪಬಲ್ಲದು ಅತಿಯಾದ ವೇಗದ ಹಾಗೆ ಬಹಳ ಕಡಿಮೆ ಸಮಯದಲ್ಲಿ ಬಹುದೂರ ತಲುಪುವ ಕಾರಣಗಳಿಂದಾಗಿ ಈ ಬೈಕ್ ಡ್ರಾಗ್ ರೇಸರ್ಸ್ ಗಳಲ್ಲಿ ಕೂಡ ಬಹಳ ಪಾಪ್ಯುಲರ್ ಆಗುತ್ತೆ ಅಷ್ಟೇ ಅಲ್ಲದೆ ರೇಸರ್ಸ್ಗಳು ತಮಗೆ ಬೇಕಾದ ಹಾಗೆ ಈ ಬೈಕನ್ನ ಮಾಡಿಫೈ ಮಾಡಿ ರೇಸ್ಗಳಲ್ಲಿ ಈ ಬೈಕನ್ನ ಬಳಸಿಕೊಳ್ಳುತ್ತಿದ್ದರು.
ಈ ಬೈಕನ್ನ ರೇಸ್ಗಳಲ್ಲಿ ಬಳಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಹಳ ಮಂದಿ ರೇಸರ್ಸ್ ಗಳಿಗೆ ಈ ಬೈಕ್ ನಿಜವಾಗಿಯೂ 100 ಸಿಸಿ ಇರುವ ಬೈಕ್ ಆಗಿರಬಹುದೇ ಎಂಬ ಅನುಮಾನ ಶುರುವಾಗಿತ್ತು ಇದಕ್ಕ ಕಾರಣ ಈ ಬೈಕ್ನ ಸ್ಪೀಡ್ ಖಂಡಿತವಾಗಿಯೂ RX 100 ಬೈಕ್ನಲ್ಲಿ 100 ಸಿಸಿ ಗಿಂತ ಮಿಗಿಲಾದ ಪವರ್ ಹೊಂದಿರುವ ಇಂಜಿನ್ ಇದೆ ಎಂದು ಎಲ್ಲರ ಅನುಮಾನವಾಗಿತ್ತು ಕೆಲವು ಸಂದರ್ಭದಲ್ಲಿ ರೇಸ್ ಅಥಾರಿಟಿಸ್ ಗಳು ಕೂಡ ಈ ಬೈಕ್ನ ಸ್ಪೀಡ್ ನೋಡಿ ಚೆಕ್ ಮಾಡಿರುವ ಅದೆಷ್ಟು ನಿದರ್ಶನಗಳಿದೆ RX 100 ತಮ್ಮ ಉತ್ತಮ ಪ್ರದರ್ಶನದ ಜೊತೆಗೆ ಯುವಕರನ್ನ ಆಕರ್ಷಿಸುವುದು ಮಾತ್ರವಲ್ಲದೆ ತನ್ನ ಸ್ಟೈಲಿಷ್ ಮೈಮಾಟದಿಂದಲೂ ಯುವಕರನ್ನ ಆಕರ್ಷಿಸುತ್ತಾ ಇತ್ತು ಈ ಕಾರಣದಿಂದಲೇ ಭಾರತದಲ್ಲಿ ದಲ್ಲಿ ಈ ಬೈಕ್ ಲಾಂಚ್ ಆದ ಮರುಗಳಿಗೆಯಿಂದಲೇ ಬಹಳ ಪ್ರಸಿದ್ಧಿಯಾಗಿದ್ದು. ಈ ಬೈಕ್ನ ಮತ್ತೊಂದು ಮುಖ್ಯವಾದ ಆಕರ್ಷಣೆ ಏನಂದ್ರೆ ಅದರ ಸೌಂಡ್ ಹೌದು 90ರ ದಶಕದ ಯುವಕರು ಈ ಬೈಕ್ನ ಸೌಂಡ್ಗೆ ಮಾರುಹೋಗಿದ್ದರು. ಅಂದಿನ ಮಾರುಕಟ್ಟೆಯಲ್ಲಿ ಈ ಬೈಕ್ನ ಸೌಂಡ್ ಇತರೆ ಬೈಕ್ಗಳ ಸೌಂಡ್ಗಳಿಗಿಂತ ಭಿನ್ನವಾಗಿತ್ತು. ಇಂದಿನ ದಿನಗಳಲ್ಲಿ ರಾಯಲ್ ಎನ್ಫೀಲ್ಡ್ ಗೆ ಇರುವ ಹವಾ 90ರ ದಶಕದಲ್ಲಿಯ RX 100 ಗೆ ಇತ್ತು. ಅಂದಿನ ಕೆಲವು ಯುವಕರು ಯಮಹ RX ಬೈಕ್ ಅನ್ನ ಕೊಂಡುಕೊಳ್ಳಲು ಅದೆಷ್ಟೋ ಪಜೀತಿಗಳನ್ನ ಮಾಡಿದ್ದು ಉಂಟು ಕೆಲವರು ಕಷ್ಟಪಟ್ಟು ಈ ಬೈಕ್ ಅನ್ನ ಪಡೆದುಕೊಂಡರೆ ಇನ್ನು ಕೆಲವರು ಕಳ್ಳತನದ ಮೂಲಕವೂ ಈ ಬೈಕನ್ನ ಪಡೆದಿದ್ದಿದೆ ಸ್ನೇಹಿತರೆ 8090ರ ದಶಕದಲ್ಲಿ ಈ ಬೈಕ್ನ ಬೆಲೆ ಇದ್ದದ್ದು 19764 ರೂಪಾಯಿಗಳು ಇಂದು ಕಾಲ ಬದಲಾಗಿದೆ ತನಗೆ ಇಷ್ಟವಾಗಿದ್ದನ್ನ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಇಂದಿನ ಜನತೆಗಿದೆ ಈಗ ಈ ಬೆಲೆ ನಮಗೆ ಬಹಳ ಸಣ್ಣದು ಅಂತ ಅನಿಸಬಹುದು ಆದರೆ ಅಂದಿನ ಕಾಲ ಹಾಗಲ್ಲ 10 20 ರೂಪಾಯಿಗೂ ಅಬ್ಬಬ್ಬ ಅನ್ನುತ್ತಿದ್ದ ಕಾಲ. ಹಾಗಾಗಿ ಅಂದಿನ 19,000 ರೂಪಾಯಿ ಬಹಳ ದೊಡ್ಡ ಮೊತ್ತವೇ ಆಗಿತ್ತು. ಆಗಿನ ಕಾಲದಲ್ಲಿ ಇದರ ಬೆಲೆಯ ಕಾರಣಗಳಿಂದಲೂ ಈ ಬೈಕ್ ಕೆಲವರಿಗೆ ಕೈ ಗೆಟಕದ ಹುಳಿ ದ್ರಾಕ್ಷಿ ಆಗಿತ್ತು. ಈ ಬೈಕ್ ನ ಎಷ್ಟು ಮಟ್ಟಿಗಿತ್ತೆಂದರೆ ಭಾರತೀಯ ಎಷ್ಟೋ ಚಲನಚಿತ್ರಗಳಲ್ಲಿ ಕೂಡ RX 100 ಬೈಕ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಈ ಬೈಕನ್ನೇ ಬಳಸಿಕೊಳ್ಳುತ್ತಿದ್ದರು. ಲಘು ತೂಕ ಹಾಗೂ ಹೆಚ್ಚಿನ ವೇಗದ ಕಾರಣದಿಂದ ಸಿನಿಮಾ ಸ್ಟಂಟ್ ಗಳಲ್ಲಿ ಈ ಬೈಕ್ ಫೇಮಸ್ ಆಗಿತ್ತು.
ಇಷ್ಟೆಲ್ಲ ಕ್ವಾಲಿಟಿಗಳು ಇದ್ದರೂ ಕೂಡ RX 100 ಸಡನ್ಆಗಿ ಮಾಯವಾಗುತ್ತೆ. ಹಾಗಾದ್ರೆ ಈ ಬೈಕ್ನಲ್ಲಿ ನೆಗೆಟಿವ್ ಪಾಯಿಂಟ್ ಏನಾದ್ರೂ ಇತ್ತಾ ಅನ್ನೋದನ್ನ ನೋಡೋದಾದ್ರೆ ಮೊದಲೇ ಹೇಳಿದಂತೆ ಅದರ ತೂಕ ಹೌದು RX 100 ಗೆ ಲಘು ತೂಕ ಪ್ಲಸ್ ಪಾಯಿಂಟ್ ಆಗೋದರ ಜೊತೆಗೆ ಮೈನಸ್ ಪಾಯಿಂಟ್ ಕೂಡ ಆಗಿ ಹೋಯ್ತು. ವಾಸ್ತವವಾಗಿ ಲಘು ತೂಕವು ಅತಿ ದೊಡ್ಡ ಸಮಸ್ಯೆಗೆ ಕಾರಣವಾಯಿತು. ಲೈಟ್ ವೈಟ್ ನಿಂದಾಗಿ ಜನರು ಈ ಬೈಕನ್ನ ಬೇಕಾದ ಹಾಗೆ ಹಾರಾಡಿಸಿಕೊಂಡು ಹೋಗ್ತಿದ್ರು. ವೇಗಕ್ಕೆ ಮಿತಿ ಅನ್ನೋದು ಇರ್ತಾ ಇರಲಿಲ್ಲ. ಇದರಿಂದ ಅತಿಯಾದ ಗಾಳಿಯ ದುಡುವಿಕೆಯಿಂದಾಗಿ ಬೈಕ್ ಸವಾರನ ಹಿಡಿತಕ್ಕೆ ಸಿಗದೆ ಅನೇಕ ಅನಾಹುತಗಳಾಗುತ್ತಿದ್ದವು ಜೊತೆಗೆ ಈ ಬೈಕ್ನ ಚಕ್ರಗಳು ಬಹಳ ಸಪೂರವಾಗಿರೋದರಿಂದ ಸ್ಪೀಡ್ ಆಗಿ ಹೋದಾಗ ಗ್ರಿಪ್ ಸಿಗುತ್ತಿರಲಿಲ್ಲ ಈ ಕಾರಣದಿಂದಾಗಿ ಎಷ್ಟೋ ಆಕ್ಸಿಡೆಂಟ್ಗಳು ಕೂಡ ನಡೆದಿದ್ದವುಆರ್ಎಕ್ಸ್ 100 ಗೆ ಎದುರಾದ ಮತ್ತೊಂದು ಕಂಟಕವೆಂದರೆ ಇದು ಕ್ರಮೇಣ ಅಪಹರಣದ ವಾಹನವಾಗಿ ಮಾರ್ಪಟ್ಟಿದ್ದು ಹೌದು ಈ ಬೈಕ್ನ ಸೈಜ್ ಹಾಗೂ ಸ್ಪೀಡ್ನಿಂದಾಗಿ ದರೋಡೆಕೋರರಿಗೆ ಕಳ್ಳತನ ಹಾಗೂ ಅಪಹರಣವನ್ನ ಮಾಡಲು ಸರಳ ವಾಯಿತು ಇದರಿಂದಾಗಿ ಕ್ರಿಮಿನಲ್ಗಳು ಬಹಳ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ರು ಒಂದು ಕಾಲದಲ್ಲಿಮುರತ ಸುಜುಕಿ ಓಮಿನಿ ಕಾರನ್ನ ನೋಡಿದಾಗ ನಮಗೆ ಕಿಡ್ನಾಪರ್ಸ್ ಹೇಗೆ ನೆನಪಾಗ್ತಾ ಇದ್ರು ಹಾಗೆ ಈ ಬೈಕ್ನ ಸೌಂಡ್ ಕೇಳಿದ ತಕ್ಷಣ ಕಳ್ಳರು ಬರುತ್ತಿದ್ದಾರೆ ಎನ್ನುವ ಭಾವನೆ ಜನರನ್ನ ಆವರಿಸಿಕೊಂಡಿತ್ತು ಇದೆಲ್ಲದರ ಜೊತೆಗೆ ಸಣ್ಣ ಪುಟ್ಟ ಟೆಕ್ನಿಕಲ್ ಇಶ್ಯೂಸ್ ಕೂಡ ಈ ಬೈಕ್ನಲ್ಲಿತ್ತು ಜೊತೆಗೆ ಮುಖ್ಯವಾಗಿ ಈ ಬೈಕ್ನ ಟೂ ಸ್ಟ್ರೋಕ್ ಇಂಜಿನ್ ಕೂಡ RX 100 ನ ಸ್ಥಗಿತಕ್ಕೆ ಕಾರಣವಾಯಿತು ಹೌದು ಟೂ ಸ್ಟ್ರೋಕ್ ಇಂಜಿನ್ ಹಾಗೂ ಫೋರ್ ಸ್ಟ್ರೋಕ್ ಇಂಜಿನ್ ಎರಡನ್ನ ಹೋಲಿಕೆ ಮಾಡಿ ಯಾವ ಇಂಜಿನ್ ನಲ್ಲಿ ವೇಗವಾಗಿ ಹೋಗಲು ಸಾಧ್ಯ ಅನ್ನೋದನ್ನ ನೋಡೋದಾದರೆ ಅತ್ಯಂತ ವೇಗ ಸಿಗೋದು ಟೂ ಸ್ಟ್ರೋಕ್ ಇಂಜಿನ್ ನಲ್ಲಿ ಟೂ ಸ್ಟ್ರೋಕ್ ಇಂಜಿನ್ ಇರುವ ಬೈಕ್ ಕಡಿಮೆ ಮೈಲೇಜ್ ಕೊಡುತ್ತೆ ಇದರಿಂದಾಗಿ ಪೆಟ್ರೋಲ್ ಖರ್ಚು ಹೆಚ್ಚಾಗುತ್ತೆ ಈ ಖರ್ಚನ್ನ ಬರಿಸಲು ಆಗಿನ ಜನರಿಗೆ ಕಷ್ಟ ಸಾಧ್ಯವಾಗಿತ್ತು ಅಷ್ಟೇ ಅಲ್ಲದೆ ಟೂ ಸ್ಟ್ರೋಕ್ ಇಂಜಿನ್ ಇರುವ ಬೈಕ್ಗಳಲ್ಲಿ ಹೆಚ್ಚು ಹೋಗೆ ಬಿಡುಗಡೆ ಆಗ್ತಾ ಇತ್ತು ಸರ್ಕಾರ ಇಂತಹ ವಾಹನಗಳನ್ನ ನಿರ್ಬಂಧಿಸಬೇಕು ಎಂದು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುತ್ತೆ ಎಲ್ಲಾ ಕಾರಣಗಳಿಂದಮಹ ಸಂಸ್ಥೆಯು 1996 ರಲ್ಲಿ RX 100 ಬೈಕ್ ಉತ್ಪಾದನೆಯನ್ನ ಸ್ಥಗಿತಗೊಳಿಸಿತ್ತು.
ಇದಾದ ಬಳಿಕ RX 100 ಬೈಕ್ ನಲ್ಲಿರುವ ನೆಗೆಟಿವ್ ಅಂಶಗಳನ್ನ ಕಂಡುಹಿಡಿದು ಹೊಸದಾದ ಅಪ್ಗ್ರೇಡೆಡ್ ವರ್ಷನ್ ಲಾಂಚ್ ಮಾಡ್ತಾರೆ ಅದೇ Yamaha RX G1 135 ಹಾಗೂ Yamaha RX 135 ಆದರೆ RX 100 ಮೂಡಿಸಿದ ಸಂಚಲನವನ್ನ ಈ ಎರಡು ಬೈಕ್ ಗಳಿಗೆ ಮೂಡಿಸಲು ಸಾಧ್ಯವಾಗಲಿಲ್ಲ. ಸ್ನೇಹಿತರೆ ಭಾರತೀಯ ರಸ್ತೆಗಳಲ್ಲಿ ರಾರಾಜಿಸುತ್ತಿದ್ದ Yamaha RX 100 ಕಾಲಕ್ರಮೇಣ ಮೆಲ್ಲ ಮೆಲ್ಲಗೆ ಪೂರ್ತಿಯಾಗಿ ಅದೃಶ್ಯವಾಯಿತು. ಆನಂತರ ಈ ಬೈಕ್ನ ಸ್ಥಾನವನ್ನ ಪಲ್ಸರ್ ಸ್ಪ್ಲೆಂಡರ್ ಬೈಕ್ಗಳು ತುಂಬ ತೊಡಗಿದವು ಆದರೆ ಇಲ್ಲಿ ಆಶ್ಚರ್ಯಕರ ಸಂಗತಿ ಏನಂದ್ರೆ ಇವತ್ತಿಗೂ ಕೂಡ RX 100 ಬೈಕ್ ಅನ್ನ ಇಷ್ಟಪಡುವವರು ಬಹಳಷ್ಟು ಜನರಿದ್ದಾರೆ 90ರ ದಶಕದ ಬೇಡಿಕೆಯನ್ನ ಇಂದು ಕೂಡ ಈ ಬೈಕ್ ಹಾಗೆ ಉಳಿಸಿಕೊಂಡಿದೆ RX 100 ಸೆಕೆಂಡ್ ಹ್ಯಾಂಡ್ ಬೈಕ್ ಇದ್ದರೂ ಕೂಡ ಲಕ್ಷ ಕೊಟ್ಟು ತೆಗೆದುಕೊಳ್ಳುವವರು ಇಂದು ಕೂಡ ಇದ್ದಾರೆ RX 100 ಬೈಕ್ ಅನ್ನೋದು ಎರಡು ಚಕ್ರ ಇರುವ ಚಲಿಸುವ ವಾಹನ ಮಾತ್ರ ಆಗಿರದೆ ಎಷ್ಟು ಸಾವಿರ ಯುವಕರ ಎಮೋಷನ್ ಆಗಿದೆ.