ಈ ಆನ್ಲೈನ್ ಕಳ್ಳರಿಂದ ತಪ್ಪಿಸಿಕೊಳ್ಳುವುದು ಹೇಗೆ ನಮ್ಮ ಫೋನ್ ಲ್ಯಾಪ್ಟಾಪ್ ಹ್ಯಾಕ್ ಆಗಬಾರದು ಅಂದ್ರೆ ಏನು ಮಾಡಬೇಕು ಫೋನ್ ನ ರಕ್ಷಣೆ ಮಾಡೋಕೆ ಯಾವ ಯಾವ ಸೆಕ್ಯೂರಿಟಿ ಫೀಚರ್ಸ್ ಇದೆ ನೀವು ಕ್ರೋಮ್ ಇನ್ಯಾವುದೋ ಬ್ರೌಸರ್ ನಲ್ಲಿ ಬ್ರೌಸ್ ಮಾಡ್ತಿದ್ರೆ ಯಾವ ಸೆಕ್ಯೂರಿಟಿ ಫೀಚರ್ಸ್ ಅನ್ನ ಫಾಲೋ ಮಾಡಬೇಕು ಏನು ಸೆಟ್ಟಿಂಗ್ಸ್ ಅನ್ನ ಆನ್ ಆಫ್ ಮಾಡಬೇಕು ಮೇಲ್ ಎಸ್ಎಂಎಸ್ ಇವುಗಳಲ್ಲೆಲ್ಲ ಲಿಂಕ್ ಬರುತ್ತೆ ಆ ವಿಚಾರದಲ್ಲಿ ಈಗ ವರ್ಕ್ ಗೆಲ್ಲ ತುಂಬಾ ಜನ ಮೇಲ್ ಯೂಸ್ ಮಾಡ್ತಿರ್ತಾರೆ ಅಲ್ಲಿ ಯಾವ ಸೆಕ್ಯೂರಿಟಿ ವಿಚಾರಗಳನ್ನ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ಇದೆಲ್ಲವನ್ನ ನೋಡ್ತಾ ಹೋಗೋಣ ಮುಂಚೆ ರೋಡಲ್ಲಿ ಹೋಗ್ಬೇಕಾದ್ರೆ ಪಿಕ್ ಪಾಕೆಟ್ ಮಾಡೋದು ಆಗ್ತಾ ಇರ್ತಿತ್ತು ದರೋಡೆ ಆಗ್ತಿತ್ತು ಮನೆಗೆ ನುಗ್ಗಿ ಕಳತನ ಮಾಡೋದೆಲ್ಲ ಆಗ್ತಾ ಇತ್ತು ಆದ್ರೆ ಎಲ್ಲಾ ಕಡೆ ಸರ್ವೈಲೆನ್ಸ್ ಬಂದ್ಮೇಲೆ ಸೆಕ್ಯೂರಿಟಿ ಸಿಸ್ಟಮ್ ಜಾಸ್ತಿ ಆದ್ಮೇಲೆ ಈಗ ಅದು ಸ್ವಲ್ಪ ಕಮ್ಮಿ ಆಗ್ತಾ ಬಂದಿದೆ ಅಂತ ಈಗ ಆ ದಾರಿಯನ್ನ ಬಿಟ್ಟು ಕಷ್ಟದ ದಾರಿಯನ್ನ ಬಿಟ್ಟು ಇವಾಗ ಜನ ಎಲ್ಲಿ ಜಾಸ್ತಿ ಇರ್ತಾರೆ ಮುಂಚೆ ಓಡಾಡ್ತಿದ್ರು ಹೊರಗಡೆ ಇರ್ತಾ ಇದ್ರು ಫಿಸಿಕಲ್ ಸ್ಪೇಸಸ್ ಅಲ್ಲಿ ಇರ್ತಾ ಇದ್ರು ಆದರೆ ಈಗ ಡಿಜಿಟಲ್ ಸ್ಪೇಸ್ ಗೆ ಜನ ಹೋಗಿದ್ದಾರೆ ಕಳ್ಳರು ಅಲ್ಲಿಗೆ ನಮ್ಮನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ ಅಪ್ಡೇಟ್ ಆಗಿದ್ದಾರೆ ಅವರು ಹಾಗಾಗಿ ಅಲ್ಲಿಗೂ ಕೂಡ ನಾವು ಬಲವಾದ ಬೀಗಗಳನ್ನ ಹಾಕಿಕೊಳ್ಳುವುದು ತುಂಬಾ ಇಂಪಾರ್ಟೆಂಟ್ ಆ ಬಲವಾದ ಬೀಗಗಳನ್ನ ಸೈಬರ್ ಸ್ಪೇಸ್ ಗೆ ಹಾಕಬೇಕಾದ ಬೀಗಗಳನ್ನ ಇಲ್ಲಿ ಅರ್ಥ ಮಾಡ್ಕೊಳ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಈ ವರದಿಯನ್ನ ಎಷ್ಟಾಗುತ್ತೆ ಅಷ್ಟು ಜನಕ್ಕೆ ಶೇರ್ ಕೂಡ ಮಾಡಿ ಸ್ನೇಹಿತರೆ ಬ್ರೌಸರ್ ಗಳು.
ಬ್ರೌಸರ್ ಇಂಟರ್ನೆಟ್ ನ ಮುಖ್ಯ ಎಂಟ್ರಿ ಪಾಯಿಂಟ್ ಬೇರೆ ಆಪ್ ಗಳು ಅಂದ್ರೆ ಅಲ್ಲಿ ಎಂಟರ್ ಆಗೋಕೆ ಒಂದು ವ್ಯವಸ್ಥೆ ಇರುತ್ತೆ ಲಾಗಿನ್ ಅನ್ನೋ ಪ್ರಾಸೆಸ್ ಇರುತ್ತೆ ಆದರೆ ಬ್ರೌಸರ್ ಗಳು ಹಾಗಲ್ಲ ಡಿಜಿಟಲ್ ಲೋಕದ ಪಬ್ಲಿಕ್ ಪ್ಲೇಸ್ ಗಳು ಇವು ಹ್ಯಾಕರ್ ಗಳಿಗಂತೂನು ಕೆರೆ ಇದ್ದ ಹಾಗೆ ಈ ಕೆರೆಯಲ್ಲಿ ನಾವೇ ಅವರ ಪಾಲಿನ ಮೀನುಗಳು ಒಂದು ಅಂದಾಜಿನ ಪ್ರಕಾರ ಪ್ರತಿದಿನ 56 ಲಕ್ಷ ಹೊಸ ಮಾಲ್ವೇರ್ ಗಳು ಅಂದ್ರೆ ವೈರಸ್ ರಾನ್ಸಮ್ ವೇರ್ ಸ್ಪೈವೇರ್ ಗಳು ಪತ್ತೆಯಾಗುತ್ತವೆ ಇದರಿಂದ ಇಂಟರ್ನೆಟ್ ನಲ್ಲಿ ಯಾವಾಗಲೂ 100 ಕೋಟಿಗೂ ಅಧಿಕ ಮಾಲ್ವೇರ್ ಗಳು ಹರಿದಾಡುತ್ತಾನೆ ಇವೆ ಸೋ ಇಲ್ಲಿ ಸೇಫ್ ಆಗಿರೋದು ಅತ್ಯಂತ ಇಂಪಾರ್ಟೆಂಟ್ ಆಗುತ್ತೆ ಯಾವುದೋ ವೆಬ್ಸೈಟ್ ನಲ್ಲಿ ಇನ್ಯಾವುದೋ ವಿಂಡೋ ಪಾಪ್ ಅಪ್ ಆಗುತ್ತೆ ಯಾವುದೋ ಬಟನ್ ಬರುತ್ತೆ ಯಾವುದೋ ಆಪ್ ಸಜೆಶನ್ ಬರುತ್ತೆ ಅವುಗಳ ಮೇಲೆ ಕ್ಲಿಕ್ ಮಾಡಿದ್ರೆ ಬಹಳ ಕಷ್ಟ ನಿಮ್ಮ ಪರ್ಸನಲ್ ಡೇಟಾ ದುಡ್ಡೆಲ್ಲ ಕಿತ್ತುಕೊಂಡು ಹೋಗುತ್ತೆ ಮರ್ಯಾದೆ ಕೂಡ ಕಳೆದುಕೊಳ್ಳಬೇಕಾಗುತ್ತೆ ನೀವು ಹೀಗಾಗಿ ಕ್ರೋಮ್ ಅಲ್ಲೋ ಇನ್ಯಾವುದೋ ಬ್ರೌಸರ್ ನಲ್ಲೋ ನಿಮಗೆ ಬೇಕಾಗಿದ್ದನ್ನ ಬ್ರೌಸಿಂಗ್ ಮಾಡುವಾಗ ಒಂದಷ್ಟು ವಿಚಾರಗಳನ್ನ ನೆನಪಿಡಲೇಬೇಕು ನೀವು ಮೊದಲನೆಯದು ಪಾಸ್ವರ್ಡ್ ಲೀಕ್ ಡಿಟೆಕ್ಷನ್ ಸ್ನೇಹಿತರೆ ವರದಿಯನ್ನು ಸ್ವಲ್ಪ ನಿಧಾನಕ್ಕೆ ಬಿಡಿಸಿ ಹೇಳೋ ಪ್ರಯತ್ನ ಮಾಡ್ತೀವಿ ಫಾಸ್ಟ್ ಫಾಸ್ಟ್ ಆಗಿ ಹೇಳಲ್ಲ ನಾವು ಹೀಗೆ ಹೇಳ್ತೀವಿ ಇದನ್ನಂತೂ ಇನ್ನು ಸ್ವಲ್ಪ ಬಿಡಿಸಿ ಬಿಡಿಸಿ ಹೇಳೋ ಪ್ರಯತ್ನವನ್ನ ಮಾಡ್ತೀವಿ ಹಾಗಾಗಿ ವಿಚಾರ ನಿಮ್ಮ ಗಮನಕ್ಕೆ ಇರಲಿ ಇಂಟರ್ನೆಟ್ ಬಳಸುವಾಗ ಹಲವು ವೆಬ್ಸೈಟ್ ಗಳಲ್ಲಿ ನಾವು ಲಾಗಿನ್ ಗೋಸ್ಕರ ಪಾಸ್ವರ್ಡ್ ಕೊಟ್ಟಿರ್ತೀವಿ ಆದರೆ ಇದೇ ವೆಬ್ಸೈಟ್ ಗಳಿಂದ ನಮ್ಮ ಪಾಸ್ವರ್ಡ್ಸ್ ಲೀಕ್ ಕೂಡ ಆಗಬಹುದು ಸೋ ಕ್ರೋಮ್ ಸೆಟ್ಟಿಂಗ್ಸ್ ನ ಪಾಸ್ವರ್ಡ್ ಸೆಕ್ಷನ್ ನಲ್ಲಿ ಪಾಸ್ವರ್ಡ್ ಚೆಕ್ ಅಪ್ ಅನ್ನೋ ಫೀಚರ್ ಇರುತ್ತೆ ಅದರ ಮೂಲಕ ನಿಮ್ಮ ಪಾಸ್ವರ್ಡ್ಸ್ ಏನಾದ್ರು ಎಕ್ಸ್ಪೋಸ್ ಆಗಿದೆಯಾ ಅಂತ ಚೆಕ್ ಮಾಡಬಹುದು ಜೊತೆಗೆ ಯಾವುದೇ ವೆಬ್ಸೈಟ್ ನಲ್ಲಿ ಹೊಸದಾಗಿ ಪಾಸ್ವರ್ಡ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಡೀಟೇಲ್ಸ್ ಇತರ ಮಾಹಿತಿ ಕೊಡೋ ಟೈಮ್ ಬಂದ್ರೆ ಆ ವೆಬ್ಸೈಟ್ ನ ಯು ಆರ್ ಎಲ್ ಹೆಚ್ ಟಿ ಟಿ ಪಿ ಎಸ್ ನಿಂದ ಶುರುವಾಗಿದೆಯಾ ಅಂತ ನೋಡಿ ಎಸ್ ಅಂತ ಇದ್ರೆ ಅದು ಸೆಕ್ಯೂರ್ ಅಂತ ಅರ್ಥ ಹೆಚ್ ಟಿ ಟಿ ಪಿ ಎಸ್ ನಿಂದ ಶುರುವಾಗುವ ಪೇಜ್ ಗೆ ನೀವು ಕೊಟ್ಟ ಡೇಟಾ ಎನ್ಕ್ರಿಪ್ಟ್ ಆಗುತ್ತೆ.
ಹ್ಯಾಕ್ ಮಾಡೋದು ಡಿಫಿಕಲ್ಟ್ ಆಗುತ್ತೆ ಇನ್ನೊಂದು ಲೇಯರ್ ನ ಪ್ರೊಟೆಕ್ಷನ್ ಅಲ್ಲಿ ಆಡ್ ಆಗುತ್ತೆ ನೆಕ್ಸ್ಟ್ ಫಿಂಗರ್ ಪ್ರಿಂಟ್ ಸೇಫ್ಟಿ ಈಗ ಆಲ್ಮೋಸ್ಟ್ ಎಲ್ಲಾ ಡಿವೈಸ್ ಗಳಿಗೂ ಫಿಂಗರ್ ಪ್ರಿಂಟ್ ಅನ್ಲಾಕಿಂಗ್ ಫೀಚರ್ ಬರ್ತಾ ಇದೆ ಆದರೆ ಇದೇ ಫಿಂಗರ್ ಪ್ರಿಂಟ್ ಒಂದು ಬಯೋಮೆಟ್ರಿಕ್ ಡೇಟಾ ಆಗಿರೋದ್ರಿಂದ ನಮ್ಮ ಕಂಪ್ಲೀಟ್ ಮಾಹಿತಿ ಅದರಲ್ಲಿ ಇರುತ್ತೆ ಕೀ ತರ ಅದು ಹಾಗಾಗಿ ಬ್ರೌಸರ್ ಗಳಲ್ಲಿ ಆಂಟಿ ಫಿಂಗರ್ ಪ್ರಿಂಟ್ ಪ್ರೊಟೆಕ್ಷನ್ ಬಳಸಿ ಇದನ್ನ ಸೆಕ್ಯೂರ್ ಮಾಡ್ಕೋಬಹುದು ಕ್ರೋಮ್ ಬ್ರೌಸರ್ ಬಗ್ಗೆ ಹೇಳಬೇಕು ಅಂದ್ರೆ ಅದರಲ್ಲಿ ಡಿಫಾಲ್ಟ್ ಆಗಿ ಇರುತ್ತೆ ಆದರೆ ಫೈರ್ ಫಾಕ್ಸ್ ಬಳಸುವರು ನಿಮ್ಮ ಪ್ರಿಫರೆನ್ಸ್ ಗೆ ಹೋಗಿ ಸ್ಟ್ರಿಕ್ಟ್ ಮೋಡ್ ಎನೇಬಲ್ ಮಾಡ್ಕೊಂಡಿರಬೇಕು ಪ್ರೈವಸಿ ಸೆಕ್ಷನ್ ನಲ್ಲಿ ಸ್ಟ್ರಿಕ್ಟ್ ಮೋಡ್ ಆನ್ ಮಾಡಬಹುದು ಫೈರ್ ಫಾಕ್ಸ್ ನವರು ಸೆಕ್ಯೂರ್ ಡಿಎನ್ಎ ಎಸ್ ಡಿ ಎನ್ ಎಸ್ ಅಥವಾ ಡೊಮೈನ್ ನೇಮ್ ಸಿಸ್ಟಮ್ ಅನ್ನೋದು ಯಾವುದೇ ಡಿವೈಸ್ ನಲ್ಲಿ ಇಂಟರ್ನೆಟ್ ಬಳಕೆಗೆ ಬೇಕಾಗುವ ಬೇಸಿಕ್ ಕಾಂಪೊನೆಂಟ್ ನಮ್ಮ ಸ್ಮಾರ್ಟ್ ಫೋನ್ ಇಂದ ಹಿಡಿದು ಎಲ್ಲಾ ಡಿವೈಸ್ ನಲ್ಲೂ ಇರುತ್ತೆ ಇದನ್ನ ಸೆಕ್ಯೂರ್ ಮಾಡಿಕೊಳ್ಳೋಕೆ ಕ್ರೋಮ್ ಸೆಟ್ಟಿಂಗ್ಸ್ ನ ಸೆಕ್ಯೂರಿಟಿ ಸೆಕ್ಷನ್ ನಲ್ಲಿ ಯೂಸ್ ಸೆಕ್ಯೂರ್ ಡಿಎನ್ಎಸ್ ಅನ್ನೋ ಫೀಚರ್ ಆನ್ ಮಾಡ್ಕೋಬಹುದು ಇದನ್ನ ಆನ್ ಮಾಡ್ಕೊಂಡ್ರೆ ನಾವು ವಿಸಿಟ್ ಮಾಡೋ ವೆಬ್ಸೈಟ್ ಗಳ ಮಾಹಿತಿ ಸೈಬರ್ ಕಳ್ಳರಿಗೆ ಸಿಗದಂತೆ ತಪ್ಪಿಸೋಕೆ ಅಗೈನ್ ಒಂದು ಎಕ್ಸ್ಟ್ರಾ ಗೋಡೆಯನ್ನ ಆಗುತ್ತೆ ನೆಕ್ಸ್ಟ್ ಮಾಲ್ವೇರ್ ಸ್ಕ್ಯಾನರ್ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಬಿಲ್ಟ್ ಇನ್ ಮಾಲ್ವೇರ್ ಸ್ಕ್ಯಾನರ್ ಇದೆ ಸೆಟ್ಟಿಂಗ್ಸ್ ಗೆ ಹೋದ್ರೆ ಕ್ಲೀನ್ ಅಪ್ ಸೆಕ್ಷನ್ ನಲ್ಲಿ ಫೈಂಡ್ ಹಾರ್ಮ್ ಫುಲ್ ಸಾಫ್ಟ್ವೇರ್ ಅನ್ನೋ ಆಪ್ಷನ್ ಕ್ಲಿಕ್ ಮಾಡಿದ್ರೆ ನಿಮ್ಮ ಫೋನ್ ನಲ್ಲಿರೋ ಮಾಲ್ವೇರ್ ನ ಕೂಡ ಹುಡುಕಿ ಕ್ಲೀನ್ ಅಪ್ ಮಾಡೋಕೆ ಅದು ಪ್ರಯತ್ನ ಪಡುತ್ತೆ ಇನ್ನು ನಿಮ್ಮ ನಿಮ್ಮ ಡಿವೈಸ್ ಗಳಲ್ಲಿ ಥರ್ಡ್ ಪಾರ್ಟಿ ಕುಕೀಸ್ ಅವಾಯ್ಡ್ ಮಾಡೋದು ಕೂಡ ಮುಖ್ಯ ಯಾಕಂದ್ರೆ ನೀವು ಸೆಕ್ಯೂರ್ ವೆಬ್ಸೈಟ್ ಬಳಸ್ತಾ ಇದ್ರೂ ಕೂಡ ಕೆಲವೊಮ್ಮೆ ಬೇರೆ ಟ್ಯಾಬ್ ಗಳ ಮೂಲಕ ನೀವು ಟ್ರ್ಯಾಕ್ ಆಗೋ ಸಾಧ್ಯತೆ ಇರುತ್ತೆ.
ಇದೇ ಕಾರಣಕ್ಕೆ ಥರ್ಡ್ ಪಾರ್ಟಿ ಕುಕೀಸ್ ಬ್ಲಾಕ್ ಮಾಡಬೇಕು ಅಗೈನ್ ಕ್ರೋಮ್ ಬ್ರೌಸರ್ ನಲ್ಲಿ ಆದ್ರೆ ಸೆಟ್ಟಿಂಗ್ಸ್ ಗೆ ಹೋಗಿ ಕುಕೀಸ್ ಸೆಕ್ಷನ್ ಗೆ ಹೋಗಿ ಒಂದೇ ಸ್ಟೆಪ್ ನಲ್ಲಿ ಅಲ್ಲಿ ಆಫ್ ಮಾಡುವ ಮೂಲಕ ಥರ್ಡ್ ಪಾರ್ಟಿ ಕುಕ್ಕೀಸ್ ನ ನೀವು ಬ್ಲಾಕ್ ಮಾಡಬಹುದು ಉಳಿದಂತೆ ಒಂದಷ್ಟು ಸಣ್ಣ ಸಣ್ಣ ಕ್ರಮಗಳನ್ನು ಕೂಡ ತಗೋಬೇಕು ಸೆಟ್ಟಿಂಗ್ಸ್ ನಲ್ಲಿ ಪಾಪ್ ಅಪ್ ವಿಂಡೋ ಡಿಸೇಬಲ್ ಮಾಡೋದು ಸೇಫ್ ಸರ್ಚ್ ಆನ್ ಮಾಡ್ಕೊಳೋದು ಬ್ರೌಸರ್ ಗಳನ್ನ ಆಗಾಗ ಅಪ್ಡೇಟ್ ಮಾಡೋದು ರೆಗ್ಯುಲರ್ ಆಗಿ ಕುಕೀಸ್ ಕ್ಯಾಶ್ ಡಿಲೀಟ್ ಮಾಡೋದೆಲ್ಲ ನಿಮಗೆ ಗೊತ್ತಿರಬಹುದು ಇಲ್ಲಾಂದ್ರೆ ನೀವು ಅದನ್ನ ತಿಳ್ಕೊಬೇಕು ಪ್ರೈವೇಟ್ ಬ್ರೌಸಿಂಗ್ ಅಥವಾ ಇನ್ಕಾಗ್ನಿಟೋ ಮೋಡ್ ನಲ್ಲೂ ಕೂಡ ನೀವು ಬ್ರೌಸರ್ ಅನ್ನ ಬಳಸಬಹುದು ಈ ರೀತಿ ಪ್ರೈವೇಟ್ ಮೋಡ್ ಅಥವಾ ಇನ್ಕಾಗ್ನಿಟೋ ಮೋಡ್ ನಲ್ಲಿ ನೀವು ಬ್ರೌಸರ್ ಅನ್ನ ಬಳಸುವುದರಿಂದ ನೀವು ರೈಟ್ ಕ್ಲಿಕ್ ಮಾಡಿದ್ರೆ ಮೇಲ್ಗಡೆ ಆಪ್ಷನ್ ಇರುತ್ತೆ ಅದರಲ್ಲಿ ಬಳಸುವುದರಿಂದ ನಿಮ್ಮ ಯಾವುದೇ ಸರ್ಚ್ ಹಿಸ್ಟರಿ ನಿಮ್ಮ ಬ್ರೌಸರ್ ನಲ್ಲಿ ಉಳಿದುಕೊಳ್ಳುವುದಿಲ್ಲ ನೀವು ಯಾವುದೇ ಪ್ರೈವೇಟ್ ಡೀಟೇಲ್ ಅನ್ನ ಏನಾದ್ರೂ ಕೂಡ ಖಾಸಗಿ ವಿಚಾರಗಳನ್ನ ನೀವು ಸರ್ಚ್ ಮಾಡಿದ್ರೆ ನೆಕ್ಸ್ಟ್ ಏನಾದ್ರು ನಿಮ್ಮ ಫೋನ್ ಅನ್ ಆಥರೈಸ್ಡ್ ಪರ್ಸನ್ ಕೈಗೆ ಸಿಕ್ಕಿ ಅವರು ಕ್ರೋಮ್ ಗೆ ಹೋಗಿ ಹಿಸ್ಟರಿ ಚೆಕ್ ಮಾಡಿದಾಗ ಅವರಿಗೆ ಅದು ಸಿಗುವುದಿಲ್ಲ ನೀವು ಪ್ರೈವೇಟ್ ನೋಡಿ ನಲ್ಲಿ ಬ್ರೌಸ್ ಮಾಡಿದ್ರೆ ಹಾಗಂತ ಇದು ಯಾರಿಗೂ ಗೊತ್ತಾಗಲ್ಲ ಅಂತ ಅಲ್ಲ ಅದು ನಿಮ್ಮ ಟೆಲಿಕಾಂ ಸರ್ವಿಸ್ ಪ್ರೊವೈಡರ್ ಗೆ ಗೊತ್ತಾಗಬಹುದು ವೈಫೈ ಬಳಸ್ತಾ ಇದ್ರೆ ನಿಮ್ಮ ಅಡ್ಮಿನ್ ಗೆ ಅದು ಗೊತ್ತಾಗಬಹುದು ಹಾಗಾಗಿ ಯಾವುದೇ ಅಪರಾಧ ಚಟುವಟಿಕೆಗಳಿಗೆ ಅಥವಾ ದೇಶದ್ರೋಹಿ ಕೆಲಸಗಳಿಗೆ ಇನ್ಕಾಗ್ನಿಟೋ ಮೋಡ್ ನಲ್ಲಿ ಸರ್ಚ್ ಮಾಡಿದ್ರೆ ಗೊತ್ತಾಗಲ್ಲ ಅಂತ ಅನ್ಕೋಬೇಡಿ ನಿಮ್ಮ ಪ್ರೈವೇಟ್ ಸರ್ಚ್ ಗಳಿಗೆ ಅವುಗಳನ್ನ ಯೂಸ್ ಮಾಡಬಹುದು ಅಷ್ಟೇ ಜೊತೆಗೆ ಬ್ರೌಸರ್ ಗಳು ಕೂಡ ವಾರ್ನಿಂಗ್ ಅನ್ನ ನೆಗ್ಲೆಕ್ಟ್ ಮಾಡಬೇಡಿ ಸೋಶಿಯಲ್ ಮೀಡಿಯಾದಲ್ಲಿ ಅನಾವಶ್ಯಕವಾಗಿ ಅಡ್ರೆಸ್ ಮೊಬೈಲ್ ನಂಬರ್ ಇಮೇಲ್ ಐಡಿ ಅದರಲ್ಲೂ ಕೂಡ ನೀವು ಬ್ಯಾಂಕಿಗೂ ಅದೇ ಇಮೇಲ್ ಐಡಿ ಸೋಶಿಯಲ್ ಮೀಡಿಯಾಗು ಅದೇ ಇಮೇಲ್ ಐಡಿ ಶಾಪಿಂಗ್ ಸೈಟ್ ಗೂ ಅದೇ ಇಮೇಲ್ ಐಡಿ ಆ ರೀತಿ ಮಾಡಬೇಡಿ ಪ್ರೈವೇಟ್ ಇಮೇಲ್ ಐಡಿ ಇಟ್ಕೊಳ್ಳಿ ಫೋನ್ ನಂಬರ್ ಕೂಡ ಹೀಗೆ ಮಾಡಬಹುದು ನೀವು ನಿಮ್ಮ ಪರ್ಸನಲ್ ಯೂಸ್ ಗೆ ಬ್ಯಾಂಕಿಂಗ್ ಯೂಸ್ ಗೆ ಆಧಾರ್ ಯೂಸ್ ಗೆ ಒಂದು ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನ ಸಪರೇಟ್ ಆಗಿ ಇಟ್ಕೊಂಡು ಉಳಿದಂತೆ ಡೇ ಟು ಡೇ ವ್ಯವಹಾರಗಳಿಗೆ ಜನರಿಗೆಲ್ಲ ಕೊಡೋಕೆ ಪರಿಚಯಸ್ಥರಿಗೆ ಕೊಡೋಕೆ ಅಥವಾ ಈ ಶಾಪಿಂಗ್ ಸೈಟ್ಸ್ ಗೆ ಕೊಡೋಕೆ ಅಥವಾ ಈ ಸೋಶಿಯಲ್ ಮೀಡಿಯಾ ಕೊಡೋಕೆ ಬೇರೆ ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನ ಇಟ್ಕೊಂಡ್ರೆ ಅತ್ಯುತ್ತಮ ಇನ್ನು ಕೆಲವೊಂದಷ್ಟನ್ನ ಸರ್ಚ್ ಮಾಡ್ಲೇಬಾರದು ನೀವು ಯಾವುದೆಲ್ಲ ಸರ್ಚ್ ಮಾಡಬಾರದು ಹೇಳ್ತಾ ಹೋಗ್ತೀವಿ ಒಂದಷ್ಟು ವಿಚಾರಗಳನ್ನ ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ನಿಮ್ಮ ಮೇಲೆ ಪೊಲೀಸ್ ತನಿಕೆ ಕೂಡ ಆಗಬಹುದು ದಂಡ ಬೀಳಬಹುದು ಅಷ್ಟೇ ಯಾಕೆ ಜೈಲಿಗೂ ಹೋಗೋ ಚಾನ್ಸಸ್ ಇರುತ್ತೆ ಈ ಹಿಂದೆ ಇಂಟರ್ನೆಟ್ ಮೇಲೆ ಮ್ಯಾನುಲ್ ಆಗಿ ಕಣ್ಗಾವಲು ಇಡಬೇಕಾಗುತ್ತಿತ್ತು.
ಆದರೆ ಈಗ ಎಐ ಬಂದಿದೆ ಸೋ ಏನೇ ಕ್ರಿಮಿನಲ್ ವಿಚಾರಗಳನ್ನ ಸರ್ಚ್ ಮಾಡಿದ್ರು ಕೂಡ ಅದು ಸರ್ವೆಲೆನ್ಸ್ ಗೆ ಒಳಪಡೋ ಸಾಧ್ಯತೆ ಇರುತ್ತೆ ಸ್ಫೋಟಕ ತಯಾರಿಸುವುದು ಹೇಗೆ ಅಂತ ಸರ್ಚ್ ಮಾಡೋದು ಹಲವು ರಾಷ್ಟ್ರಗಳಲ್ಲಿ ಕ್ರಿಮಿನಲ್ ಅಪರಾಧ ಸ್ಪೋಟಕಗಳನ್ನ ಮಾಡೋಕೆ ತನಿಕೆ ಮಾಡೋದು ಕೆಲವು ಸೈಂಟಿಸ್ಟ್ ಗಳು ವಿದ್ಯಾರ್ಥಿಗಳು ಅವರ ಅಧ್ಯಯನಕ್ಕೆ ರಿಸರ್ಚ್ ಮಾಡೋದಕ್ಕೆ ಇದು ಅನ್ವಯ ಆಗೋದಿಲ್ಲ ಆದರೆ ಎಲ್ಲವೂ ಕೂಡ ಅಡ್ವಾನ್ಸ್ ಸಾಫ್ಟ್ವೇರ್ ಗಳ ಮೂಲಕ ಟ್ರ್ಯಾಕ್ ಆಗ್ತಿರೋ ಸಾಧ್ಯತೆ ಇರುತ್ತೆ ಇಲ್ಲಿ ಇಂಥದ್ದು ಸರ್ಚ್ ಆಗ್ತಾ ಇದೆ ಅಂತ ಹೇಳಿ ಸೆಕ್ಯೂರಿಟಿ ಎಸ್ಟಾಬ್ಲಿಷ್ಮೆಂಟ್ ನವರಿಗೆ ಪಾಪ್ ಅಪ್ ಸಿಗೋ ಸಾಧ್ಯತೆ ಇರುತ್ತೆ ಅದಾದ್ಮೇಲೆ ನೋಡಿದಾಗ ಸ್ಟೂಡೆಂಟ್ ಅಥವಾ ಸಮಾಜ ಘಾತಕ ಶಕ್ತಿನ ಅಂತವರು ವೆರಿಫೈ ಕೂಡ ಮಾಡುವ ಸಾಧ್ಯತೆ ಇರುತ್ತೆ ಹಾಗಾಗಿ ಕ್ರಿಮಿನಲ್ ಅಪರಾಧ ಅಂತರಾಷ್ಟ್ರೀಯ ಅಪರಾಧ ಹಾಗೂ ದೇಶದ ಭದ್ರತೆಗೆ ತರುವಂತಹ ಚಟುವಟಿಕೆಗಳಿಗೆ ನೀವು ಇಂಟರ್ನೆಟ್ ಯೂಸ್ ಮಾಡಿಕೊಂಡು ತಯಾರಿಗಳನ್ನು ನಡೆಸುವುದು ಅಪರಾಧ 10 ದಿನ ಕಣ್ಣಿಟ್ಟು ಕೂತಿರ್ತಾರೆ ಇವಾಗಂತೂ ಅಡ್ವಾನ್ಸ್ಡ್ ಎಐ ಸಾಫ್ಟ್ವೇರ್ ಗಳ ಮೂಲಕ ಭದ್ರತಾ ಸಿಬ್ಬಂದಿ ಸೋ ಆಯುಧ ಸ್ಪೋಟಕ ಮತ್ತು ಭಯೋತ್ಪಾದನೆಯ ಉದ್ದೇಶದಿಂದ ಸರ್ಚ್ ಮಾಡಿದ್ರೆ ನೋಟ್ ಆಗೋ ಸಾಧ್ಯತೆ ತುಂಬಾ ಜಾಸ್ತಿ ಇದೆ ಈಗಿನ ಕಾಲದಲ್ಲಿ ಇನ್ನು ಮಕ್ಕಳ ಅಶ್ಲೀಲ ಚಿತ್ರಗಳ ಬಗ್ಗೆ ಸರ್ಚ್ ಮಾಡೋದು ಮಿಸ್ ಆಗಿ ಅಂತಹ ಕಾಂಟೆಂಟ್ ನೋಡೋದು ಕೂಡ ಒಬ್ಬ ವ್ಯಕ್ತಿ ಮೇಲೆ ಪೋಕ್ಸೋ ಕೇಸನ್ನ ಅಟ್ರಾಕ್ಟ್ ಮಾಡಬಹುದು ಸೈಬರ್ ಸೆಕ್ಯೂರಿಟಿ ಏಜೆನ್ಸಿ ಹಾಗೂ ಸರ್ಕಾರ ನಿರಂತರವಾಗಿ ಇಂತಹ ಕಾಂಟೆಂಟ್ ಇರೋ ವೆಬ್ಸೈಟ್ ಗಳನ್ನ ಟ್ರ್ಯಾಕ್ ಮಾಡಿ ಬ್ಲಾಕ್ ಮಾಡ್ತಾ ಇರ್ತಾರೆ ಅದು ಸರ್ಕ್ಯುಲೇಟ್ ಆಗಬಾರದು ಅನ್ನೋ ಪ್ರಯತ್ನದಲ್ಲಿ ಇರ್ತಾರೆ ಅದೇ ರೀತಿ ಆನ್ಲೈನ್ ಆಕ್ಟಿವಿಟಿಯನ್ನ ಕೂಡ ಮಾನಿಟರ್ ಮಾಡ್ತಾ ಇರ್ತಾರೆ ಸೋ ಇಂತಹ ಅಪರಾಧಗಳಿಂದ ದೂರ ಇರಲೇಬೇಕು ಇನ್ನು ಹ್ಯಾಕಿಂಗ್ ಸಾಫ್ಟ್ವೇರ್ ಬಗ್ಗೆ ಸರ್ಚ್ ಮಾಡೋದು ಹ್ಯಾಕಿಂಗ್ ಟುಟೋರಿಯಲ್ ಬಗ್ಗೆ ಸರ್ಚ್ ಮಾಡೋದು ಅದು ಕೂಡ ನೋಟೆಡ್ ಆಗೋ ಸಾಧ್ಯತೆ ಇರುತ್ತೆ ಎಲ್ಲಿಂದ ಸರ್ಚ್ ಆಗ್ತಿದೆ.
ಇದು ಅನ್ನೋದನ್ನ ಸೆಕ್ಯೂರಿಟಿ ಎಸ್ಟಾಬ್ಲಿಷ್ಮೆಂಟ್ ನವರು ಕಣ್ಣಾಡಿಸೋ ಸಾಧ್ಯತೆ ಇರುತ್ತೆ ಎಥಿಕಲ್ ಹ್ಯಾಕಿಂಗ್ ತರದೆಲ್ಲ ರೆಕಾಗ್ನೈಸ್ಡ್ ಪ್ರೊಫೆಷನ್ ಅನ್ನೋ ವಾದ ಮಾಡಬಹುದು ಆದರೆ ಅದಕ್ಕೆ ಅಗತ್ಯ ಸರ್ಟಿಫಿಕೇಟ್ ಮತ್ತು ಪರ್ಮಿಷನ್ ಇರಬೇಕು ಆದರೆ ಡೇಟಾ ಬ್ರೀಚ್ ಮಾಡೋದು ಇನ್ನೊಬ್ಬರ ಪ್ರೈವಸಿಯನ್ನ ಭೇದಿಸಿ ಪರ್ಸನಲ್ ಮಾಹಿತಿಯನ್ನ ಕದಿಯೋಕೆ ಟ್ರೈ ಮಾಡೋದು ಪೊಲೀಸರ ಅತಿಥಿ ಆಗೋಕೆ ಬಾಗಿಲು ಓಪನ್ ಮಾಡಿದಂಗೆ ಅನ್ನೋದನ್ನ ನೆನಪಲ್ಲಿ ಇಟ್ಕೊಂಡಿರಬೇಕು ಸ್ನೇಹಿತರೆ ಪೈರೇಟೆಡ್ ಸಿನಿಮಾ ಡೌನ್ಲೋಡ್ ಮಾಡೋದು ಪೈರೇಟೆಡ್ ಸಿನಿಮಾ ಸ್ಟ್ರೀಮ್ ಮಾಡೋದು ಇದು ನಾರ್ಮಲ್ ಅಂತ ಅನಿಸಬಹುದು ಹೇ ಅಲ್ಲಿ ಬರುತ್ತೆ ಇಲ್ಲಿ ಬರುತ್ತೆ ಅಂತ ಆದ್ರೆ ಭಾರತದಲ್ಲಿ ಇವುಗಳಿಗೆ 10 ಲಕ್ಷ ರೂಪಾಯಿ ದಂಡ ಮೂರು ವರ್ಷ ಜೈಲು ಕೂಡ ಆಗಬಹುದು ಸಾಧ್ಯತೆ ಇರುತ್ತೆ ಅನ್ನೋದನ್ನ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ಹಾಗಾಗಿ ಲೀಗಲ್ ದಾರಿಗಳಲ್ಲೇ ಕಾಂಟೆಂಟ್ ನೋಡೋಕೆ ಪ್ರಯತ್ನ ಪಡಿ ಪೈರಸಿ ಮಾಡೋವರಿಗೂ ತಿಳಿಯಬೇಡಿ ಮೇಲ್ ಸೇಫ್ ಆಗಿ ಬಳಸೋದು ಹೇಗೆ ವೆರಿ ವೆರಿ ಇಂಪಾರ್ಟೆಂಟ್ ನಮ್ಮ ಪರ್ಸನಲ್ ಮಾಹಿತಿ ಬ್ಯಾಂಕಿಂಗ್ ಡೀಟೇಲ್ಸ್ ಪರ್ಸನಲ್ ಫೈಲ್ ಗಳೆಲ್ಲ ಮೇಲ್ ಜೊತೆ ಸಿಂಕ್ ಆಗಿರುತ್ತವೆ ಹಾಗಾಗಿ ಜಿಮೇಲ್ ಸೇಫ್ಟಿ ಬಹಳ ಇಂಪಾರ್ಟೆಂಟ್ ಅಥವಾ ನೀವು ಯಾವುದೇ ಮೇಲ್ ಪ್ರೊವೈಡರ್ ನ ಬಳಸ್ತಾ ಇದ್ರೂ ಕೂಡ ಅದರ ಸೆಕ್ಯೂರಿಟಿ ತುಂಬಾ ಇಂಪಾರ್ಟೆಂಟ್ ಇದೇ ಕಾರಣಕ್ಕೆ ಆಗಾಗ ನಿಮ್ಮ ಇಮೇಲ್ ಅಕೌಂಟ್ ನ ಪಾಸ್ವರ್ಡ್ ಚೇಂಜ್ ಮಾಡಿ ತಿಂಗಳಿಗೆ ಒಂದು ಸಲಿ ಮಾಡಿದ್ರೆ ವಂಡರ್ಫುಲ್ ಇಲ್ಲ ಅಂದ್ರೆ ಮೂರು ತಿಂಗಳಿಗೆ ಒಂದು ಸಲಿನಾದರೂ ಕೂಡ ಪಾಸ್ವರ್ಡ್ ಅನ್ನ ಚೇಂಜ್ ಮಾಡಿ ಜೊತೆಗೆ ಮೇಲ್ನಲ್ಲಿ ಯಾವಾಗ್ಲೂ ಕೂಡ ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್ ಆನ್ ಮಾಡಿ ಅಂದ್ರೆ ಕೇವಲ ನಿಮ್ಮ ಇಮೇಲ್ ಐಡಿ ಪಾಸ್ವರ್ಡ್ ಹಾಕಿದ ತಕ್ಷಣ ಲಾಗಿನ್ ಆಗಬಾರದು ಓಟಿಪಿ ಕೂಡ ಹಾಕಿದ್ರೆ ಮಾತ್ರ ಲಾಗಿನ್ ಆಗೋ ರೀತಿ ಇರಬೇಕು ಅಥವಾ ಥರ್ಡ್ ಪಾರ್ಟಿ ಅಥೆಂಟಿಕೇಟರ್ ಆಪ್ ಗಳನ್ನ ಬಳಸಬಹುದು ಗೂಗಲ್ ದೇ ಗೂಗಲ್ ಅಥೆಂಟಿಕೇಟರ್ ಅನ್ನೋ ಆಪ್ ಇದೆ ಅಲ್ಲಿ ನೀವು ಪಾಸ್ವರ್ಡ್ ಹಾಕಿದ್ಮೇಲೂ ಕೂಡ ಗೂಗಲ್ ಅಥೆಂಟಿಕೇಟರ್ ಗೆ ಹೋಗಿ ಅಲ್ಲಿ ರಿಫ್ರೆಶ್ ಆಗ್ತಾನೆ ಇರುತ್ತೆ ಎವ್ರಿ 30 ಸೆಕೆಂಡ್ 20 ಸೆಕೆಂಡ್ ಗೋ ಅದು ರಿಫ್ರೆಶ್ ಆಗ್ತಾನೆ ಇರುತ್ತೆ ಹೊಸ ಪಾಸ್ವರ್ಡ್ ಬರ್ತಾನೆ ಇರುತ್ತೆ ಅಲ್ಲಿಂದನು ಕೂಡ ಪಾಸ್ವರ್ಡ್ ತೆಗೆದು ಹಾಕೋ ರೀತಿ ಇರುತ್ತೆ ಇವುಗಳ ಬಗ್ಗೆ ನೀವು ಸ್ಟಡಿ ಮಾಡಬಹುದು ನೀವು ನಿಮ್ಮ ಯಾವುದೇ ಆಪ್ ಗೆ gmail ಆಗಿರಬಹುದು instagram ಆಗಿರಬಹುದು facebook ಆಗಿರಬಹುದು ಯಾವುದಕ್ಕೂ ಕೂಡ ಈ ಅಥೆಂಟಿಕೇಟರ್ ಆಪ್ ಗಳನ್ನ ಬಳಸಬಹುದು ಗೂಗಲ್ ದು ಆಥೆಂಟಿಕೇಟರ್ ಆಪ್ ಇದೆ ಮೈಕ್ರೋಸಾಫ್ಟ್ ದು ಆಥೆಂಟಿಕೇಟರ್ ಆಪ್ ಇದೆ ಯಾವುದಾದರೂ ಬಳಸಬಹುದು ನೀವು ಇದು ಸ್ವಲ್ಪ ನಿಮಗೆ ಎಕ್ಸ್ಟ್ರಾ ಲೇಯರ್ ಆಫ್ ಸೆಕ್ಯೂರಿಟಿಯನ್ನ ಕೊಡುತ್ತೆ ಉದಾಹರಣೆಗೆ gmail ಹೇಳ್ಬೇಕು ಅಂದ್ರೆ ಜಿಮೇಲ್ ನ ಸೆಟ್ಟಿಂಗ್ಸ್ ಗೆ ಹೋಗಿ ಸೆಕ್ಯೂರಿಟಿ ಸೆಟ್ಟಿಂಗ್ಸ್ ಗೆ ಹೋಗಿ ಅಥೆಂಟಿಕೇಟರ್ ಆಪ್ಷನ್ ಅನ್ನ ಆನ್ ಮಾಡಿದ್ರೆ ನಿಮಗೆ ಅಲ್ಲಿ ಅಥೆಂಟಿಕೇಟರ್ ಆಪ್ ಓಪನ್ ಮಾಡ್ಬಿಟ್ಟು ಆ ಕೋಡ್ ಅನ್ನ ಸ್ಕ್ಯಾನ್ ಮಾಡೋಕೆ ಹೇಳುತ್ತೆ ಸ್ಕ್ಯಾನ್ ಮಾಡಿದ್ರೆ ನಿಮಗೆ ಆಟೋಮ್ಯಾಟಿಕಲಿ ಅಥೆಂಟಿಕೇಟರ್ ಜೊತೆಗೆ ನಿಮ್ಮ ಅಕೌಂಟ್ ಸಿಂಕ್ ಆಗುತ್ತೆ ಪ್ರತಿ ಸಲಿ ನೀವು ಪಾಸ್ವರ್ಡ್ ಹಾಕಿದ್ಮೇಲೆ ಅಥೆಂಟಿಕೇಟರ್ ಆಪ್ ಗೆ ಬಂದು ಆ ಪರ್ಟಿಕ್ಯುಲರ್ ಅಕೌಂಟ್ ನ ಅಥೆಂಟಿಕೇಟರ್ ಪಾಸ್ವರ್ಡ್ ಕೂಡ ಹಾಕಬೇಕಾಗುತ್ತೆ ಆಥೆಂಟಿಕೇಟರ್ ಪಾಸ್ವರ್ಡ್ ಎವ್ರಿ 20 ಸೆಕೆಂಡ್ ನಿಮಗೆ ಹೇಳಿದ್ನಲ್ಲ ಅದು ರಿಫ್ರೆಶ್ ಆಗ್ತಾನೆ ಇರುತ್ತೆ ಹೊಸದು ಬರ್ತಾನೆ ಇರುತ್ತೆ.


