ಸೌಂದರ್ಯದ ಬೀಡು ಶಿವಮೊಗ್ಗ ಇದೀಗ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಿದ್ಧವಾಗಿದೆ ಕೇವಲ ವಿಮಾನ ಯಾನದಿಂದ ಅಷ್ಟೇ ಅಲ್ಲ ಈಗ ರೈಲ್ವೆ ರೈಲ್ವೆ ಸಂಪರ್ಕದಲ್ಲೂ ಐತಿಹಾಸಿಕ ಕ್ರಾಂತಿಗೆ ನಾಂದಿಹಾಳಲು ಸಜ್ಜ ಆಗಿದೆ ಶಿವಮೊಗ್ಗವನ್ನ ಕೇಂದ್ರವಾಗಿಟ್ಟುಕೊಂಡು ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆ ಸಿದ್ಧವಾಗಿದೆ ಮಲೆನಾಡಿನ ದಶಕಗಳ ಕನಸಿಗೆ ಇದೀಗ ಮರುಜೀವ ಬಂದಿದೆ ಶಿವಮೊಗ್ಗವನ್ನ ಕೇಂದ್ರವಾಗಿಇಟ್ಟುಕೊಂಡು ಮೂರು ದಿಕ್ಕುಗಳಿಗೆ ರೈಲ್ವೆ ಮಾರ್ಗಗಳನ್ನ ವಿಸ್ತರಿಸುವ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದೆ ಮಲ್ನಾಡಿಂದ ಕರಾವಳಿಗೆ ಕಲ್ಯಾಣ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವಂತಹ ನಾಲ್ಕು ಪ್ರಮುಖ ನೂತನ ರೈಲು ಮಾರ್ಗಗಳ ಅಂತಿಮ ಸಮೀಕ್ಷೆಗೆ ನೈರುತ್ಯ ರೈಲ್ವೆ ಟೆಂಡರ್ ಕರೆದಿದೆ ಇದು ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಜನರಲ್ಲಿ ಹೊಸ ಭರವಸೆಯನ್ನ ಮೂಡಿಸಿದೆ ಹಾಗಾದರೆ ಏನಿದು ಯೋಜನೆ ಯಾವೆಲ್ಲ ಜಿಲ್ಲೆಗಳಿಗೆ ಅನುಕೂಲ ಆಗುತ್ತೆ ಡೀಟೇಲ್ ಆಗಿ ನೋಡೋಣ ಹೌದು ಇದು ಶಿವಮೊಗ್ಗದ ಪಾಲಿಗೆ ನಿಜಕ್ಕೂ ಸುವರ್ಣ ಯುಗ ಮಲ್ನಾಡಲ್ಲಿ ಹೊಸ ರೈಲ್ವೆ ಕ್ರಾಂತಿಯ ಶುರುವಾಗಲಿದೆ ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತ ಈಗ ನಾಲ್ಕು ಹೊಸ ಮಾರ್ಗಗಳಿಗೆ ಟೆಂಡರ್ನ್ನ ಕರೆಯಲಾಗಿದೆ ಮೊದಲಿಗೆ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಯಾವೆಲ್ಲ ಮಾರ್ಗಗಳು ಇವೆ.
ಒಟ್ಟು ನಾಲ್ಕು ಹೊಸ ಮಾರ್ಗಗಳ ಸಮೀಕ್ಷೆಗೆ ಟೆಂಡರ್ ಅನ್ನ ಆಹ್ವಾನಿಸಲಾಗಿದೆ ಮೊದಲನೆಯದು ಬಹುನಿರೀಕ್ಷಿತ ಶಿವಮೊಗ್ಗ ಶೃಂಗೇರಿ ಮಂಗಳೂರು ಮಾರ್ಗ ಇದರ ಉದ್ದ ಸುಮಾರು 332 ಕಿಲೋಮೀಟರ್ ಇನ್ನು ಎರಡನೆಯದು ಐದು ದಶಕಗಳ ಹೋರಾಟದ ಫಲವಾದ ತಾಳಗುಪ್ಪ ಹೊನ್ನವರ ಮಾರ್ಗ ಇದರ ಉದ್ದ 95 ಕಿಲೋಮೀಟ ಇನ್ನು ಮೂರನೆಯದು ಕೈಗಾರಿಕ ಸಂಪರ್ಕಕ್ಕೆ ಅನುಕೂಲವಾಗುವಂತಹ ಭದ್ರಾವತಿಚಿ ಚಿಕ್ಕ ಜಾಜೂರು ಮಾರ್ಗ. ಇದರ ಉದ್ದ ಸುಮಾರು 73 km ಇರಲಿದೆ. ಇನ್ನು ನಾಲ್ಕನೆಯದು ಕಲ್ಯಾಣ ಕರ್ನಾಟಕ ಭಾಗದ ಆಲ್ಮಟ್ಟಿ ಯಾದಗಿರಿ ಮಾರ್ಗ. ಇದರ ಉದ್ದ 162 km. ಈ ಸಮೀಕ್ಷೆಗಳು ಕೇವಲ ಮಾರ್ಗ ಗುರುತಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ಯೋಜನೆಯ ಆರ್ಥಿಕ ಲಾಭ ಪರಿಸರದ ಮೇಲಾಗುವ ಪರಿಣಾಮ ಭೂಸ್ವಾಧೀನದ ಸವಾಲುಗಳು ಸೇರಿದಂತೆ ಎಲ್ಲಾ ಆಯಾಮಗಳ ಬಗ್ಗೆಯೂ ಕೂಡ ವಿಸ್ತೃತ ವರದಿಯನ್ನ ಸಿದ್ಧಪಡಿಸಲಾಗ್ತಾ ಇದೆ. ಹಾಗಾಗಿಯೇ ಈ ಸಮೀಕ್ಷೆ ಈ ಭಾಗದ ಜನರ ತೀವ್ರ ಕುತುಹಲಕ್ಕೂ ಕೂಡ ಕಾರಣವಾಗಿದೆ.
ಈಗ ಪ್ರತಿಯೊಂದು ಮಾರ್ಗದ ಹಿನ್ನಲೆ ಮತ್ತು ಮಹತ್ವವನ್ನ ನೋಡ್ಕೊಂಡು ಬರೋಣ. ಮೊದಲಿಗೆ ಶಿವಮೊಗ್ಗ ಶೃಂಗೇರಿ ಮಂಗಳೂರು ಮಾರ್ಗ ಈ ಯೋಚನೆಗೆ ಒಂದು ಸುದೀರ್ಘ ಇತಿಹಾಸವಿದೆ 2018ರಲ್ಲಿ ಡಿವಿ ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಈ ಮಾರ್ಗವನ್ನ ಬಜೆಟ್ನಲ್ಲಿ ಘೋಷಣೆಯನ್ನ ಮಾಡಿದ್ರು ಆಗ ಭದ್ರಾವತಿಯಿಂದ ನರಸಿಂಹರಾಜಪುರ ಕೊಪ್ಪ ಶೃಂಗೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚರ್ಚೆ ನಡೆದಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ಅದಿರು ಸಾಗಿಸಲು ನರಸಿಂಹರಾಜಪುರದವರೆಗೆ ಇದ್ದಂತಹ ಹಳೆಯ ಟ್ರಾಂಬೆ ಮಾರ್ಗವನ್ನೇ ಬಳಸಿಕೊಳ್ಳುವ ಚಿಂತನೆಯೂ ಕೂಡ ಇತ್ತು. ಆದರೆ ಈಗ ಸಂಸದ ಬಿವೈ ರಾಘವೇಂದ್ರ ಅವರ ಪ್ರಸ್ತಾಪದಂತೆ ಅರಸಾಳೆನಿಂದ ತೀರ್ಥಹಳ್ಳಿ ಕೊಪ್ಪ ಶೃಂಗೇರಿ ಮೂಲಕ ಮಂಗಳೂರಿಗೆ ಹಾಗೂ ಶೃಂಗೇರಿಯಿಂದ ಚಿಕ್ಕಮಂಗಳೂರು ಬೇಲೂರು ಹಾಸನಕ್ಕೆ ಸಂಪರ್ಕವನ್ನು ಕಲ್ಪಿಸುವಂತಹ ಮಾರ್ಗದ ಸಮೀಕ್ಷೆಗೆ ಕೇಂದ್ರ ಸಚಿವರು ಅನುಮೋದನೆಯನ್ನ ನೀಡಿದ್ದಾರೆ ಈ ಬೆಳವಣಿಗೆಯಿಂದ ತಮ್ಮೂರಿನ ಮೂಲಕ ರೈಲು ಮಾರ್ಗ ನಿರ್ಮಿಸಬೇಕಂತ ನರಸಿಂಹರಾಜಪುರದ ಜನ ಪ್ರತಿಭಟನೆಯನ್ನ ನಡೆಸಿದ್ದು ಮುಂದಿನ ದಿನಗಳಲ್ಲಿ ಮಾರ್ಗ ಆಯ್ಕೆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗುವಂತಹ ಸಾಧ್ಯತೆ ಹೆಚ್ಚಳವಾಗಿದೆ.
ತಾಳುಗುಪ್ಪ ಹೊನ್ನಾವರ ಮಾರ್ಗದ ಕಥೆಯೇ ರೋಚಕ ಇನ್ನು 50 ವರ್ಷಗಳ ಬೇಡಿಕೆಯಾದ ತಾಳುಗುಪ್ಪ ಹೊನ್ನಾವರ ಮಾರ್ಗದ ಕಥೆಯ ಉತ್ತರ ರೋಚಕ ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಹಾದು ಹೋಗುವ ಈ ಮಾರ್ಗ ಪರಿಸರ ನಾಶಕ್ಕೆ ಕಾರಣವಾಗುತ್ತೆ ಎಂಬ ಕಾರಣಕ್ಕೆ ಕೇಂದ್ರ ಪರಿಸರ ಸಚಿವಾಲಯದಿಂದ ಹಲವು ಬಾರಿ ತಿರಸ್ಕೃತಗೊಂಡಿತ್ತು ಇದಕ್ಕೆ ಪರ್ಯಾಯವಾಗಿ ತಾಳಗುಪ್ಪ ಸಿದ್ದಾಪುರ ಶಿರಸಿ ಹುಬ್ಬಳ್ಳಿ ಮಾರ್ಗದ ಸಮೀಕ್ಷೆ ಈಗಾಗಲೇ ಪ್ರಗತಿಯಲ್ಲಿದೆ ಹೀಗಿರುವಾಗ ಮತ್ತೆ ತಾಳಗುಪ್ಪ ಹೊನ್ನವರ ಮಾರ್ಗದ ಸಮೀಕ್ಷೆಗೆ ಟೆಂಡರ್ನ್ನ ಕರೆದ ರುವುದು ಕೂಡ ಹಲವು ಕುತುಹಲಗಳಿಗೆ ಕಾರಣವಾಗಿದೆ ಪರಿಸರಕ್ಕೆ ಹಾನಿಯಾಗದಂತೆ ಸುರಂಗ ಮಾರ್ಗ ಅಥವಾ ಎಲಿವೇಟೆಡ್ ಟ್ರ್ಾಕ್ಟ್ ಅಂತಹ ತಂತ್ರಜ್ಞಾನ ಬಳಕೆಯ ಸಾಧ್ಯತೆಯನ್ನು ಕೂಡ ಈ ಸಮೀಕ್ಷೆ ಪರಿಶೀಲಿಸಲಿದೆ ಭದ್ರಾವತಿ ಚಿಕ್ಕಜಾಜೂರು ಮತ್ತೊಂದು ಪ್ರಮುಖ ಮಾರ್ಗ ಬಂದರೆ ಭದ್ರಾವತಿ ಚಿಕ್ಕಜಾಜೂರು ಅಂದರೆ ಬಳ್ಳಾರಿಯಿಂದ ವಿಐಎಸ್ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರು ಸಾಗಿಸಲು ಈ ಮಾರ್ಗ ಅತ್ಯಂತ ಸಹಕಾರಿ ಆಗಲಿದೆ ಇದು ಭದ್ರಾವತಿ ಮತ್ತು ಚನ್ನಗಿರಿ ತಾಲೂಕಿನ ಜನರಿಗೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಿದ್ದು ಈ ಭಾಗದ ಆರ್ಥಿಕತೆಗೆ ಹೊಸ ಶಕ್ತಿಯನ್ನ ತುಂಬಲಿದೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿರುವಂತಹ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿ ಸಮೀಕ್ಷೆಗೆ ಟೆಂಡರ್ನ್ನ ಕರೆದಿದೆ.
ಪರಿಸರ ಆರ್ಥಿಕತೆ ಮತ್ತು ಭೂಸ್ವಾಧೀನರದಂತಹ ಅಂಶಗಳನ್ನ ಪರಿಗಣಿಸಿ ಪ್ರತಿಯೊಂದು ಯೋಜನೆಗೂ ತಲ ಮೂರು ಪರ್ಯಾಯ ಮಾರ್ಗಗಳನ್ನ ಶಿಫಾರಸು ಮಾಡಲಿದೆ ಎಲ್ಲವೂ ಅಂದುಕೊಂಡಂತೆ ನಡೆದರೆ 2026 27ನೇ ಸಾಲಿನ ಬಜೆಟ್ನಲ್ಲಿ ಯೋಜನೆಗೆ ಅನುದಾನ ಮೀಸಲಿಡುವ ಸಾಧ್ಯತೆಯು ಇದೆ ಅಂತ ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಶಿವಮೊಗ್ಗ ಜಿಲ್ಲೆಗೆ ಎರಡು ಒಂದೇ ಭಾರತ್ ರೈಲು ಹೌದು ಈ ಹಿಂದೆ ಸಂಸದ ಬಿವೈ ರಾಘವೇಂದ್ರ ಅವರು ಶಿವಮೊಗ್ಗಕ್ಕೆ ಎರಡು ಒಂದೇ ಭಾರತ್ ಎಕ್ಸ್ಪ್ರೆಸ್ ಎಂಟ್ರಿ ಆಗಲಿದೆ ಅಂತ ಹೇಳಿದ್ರು ಜೊತೆಗೆ ರಾಜ್ಯದ ನಾಲ್ಕನೇ ರೈಲ್ವೆ ಕೋಚಿಂಗ್ ಡಿಪೋ ಕೂಡ ಆರಂಭವಾಗಲಿದೆ ಅಂತನು ಹೇಳಿದ್ರು ಸಂಪೂರ್ಣ ಹವಾ ನಿಯಂತ್ರಿತ ವೇಗದ ಮತ್ತು ಆರಾಮದಾಯಕ ಪ್ರಯಾಣಕ್ಕೆ ಹೆಸರಾದ ಒಂದೇ ಭಾರತ ರೈಲುಗಳು ಶಿವಮೊಗ್ಗದ ಸಂಪರ್ಕ ವ್ಯವಸ್ಥೆಗೆ ಹೊಸ ಗರಿಯನ್ನ ಮೂಡಿಸಲಿವೆ ಆ ಎರಡು ಒಂದೇ ಭಾರತ್ ಎಲ್ಲೆಲ್ಲಿ ಓಡಾಡಲಿದೆ ಅಂತ ನಾವು ನೋಡುವುದಾದರೆ ಶಿವಮೊಗ್ಗದಿಂದ ತಿರುಪತಿ ಗೆ ವಂದೇ ಭಾರತ್ ಇದು ಕೇವಲ ಪ್ರಯಾಣಿಕರ ರೈಲಲ್ಲ ಲಕ್ಷಾಂತರ ಭಕ್ತರ ಕನಸನ್ನ ನನಸಾಗಿಸುವಂತಹ ಸೇತುವೆ ಶಿವಮೊಗ್ಗ ತಿರುಪತಿ ಒಂದೇ ಭಾರತ್ ರೈಲು ಮುಂಜಾನೆ 4:30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12:30ಕ್ಕೆ ತಿರುಪತಿಯನ್ನ ತಲುಪುತ್ತೆ ಮತ್ತೆ ಸಂಜೆ 4:30ಕ್ಕೆ ಅಲ್ಲಿಂದ ಹೊರಟು ರಾತ್ರಿ 12:30ಕ್ಕೆ ಶಿವಮೊಗ್ಗವನ್ನು ತಲುಪುತ್ತೆ ಕೇವಲಎಂಟು ಗಂಟೆಗಳಲ್ಲಿ ತಿರುಪತಿ ದರ್ಶನಕ್ಕೆ ಅನುಕೂಲ ಕಲ್ಪಿಸುವ ಈ ರೈಲು ಮಲ್ನಾಡು ಚಿತ್ರದುರ್ಗ ಹಾಗೂ ಆಂಧ್ರ ಗಡಿಭಾಗದ ಜನರಿಗೆ ವರದಾನ ಅಂತನೆ ಹೇಳಬಹುದು ರಾತ್ರಿ ಪ್ರಯಾಣದ ಆಯಸ್ ಸವಿಲ್ಲದೆ ಒಂದೇ ದಿನದಲ್ಲಿ ತಿರುಪತಿಗೆ ಹೋಗಿ ಬರಲು ಸಾಧ್ಯವಾಗುತ್ತೆ ಮತ್ತೆ ಅದೇ ದಿನ ಸಂಜೆ 4:30ಕ್ಕೆ ತಿರುಪತಿಯಿಂದ ಹೊರಟು ಮಧ್ಯರಾತ್ರಿ 12:30ಕ್ಕೆ ಶಿವಮೊಗ್ಗಕ್ಕೆ ವಾಪಸ್ ಆಗುತ್ತೆ ಇದು ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನವನ್ನ ನೀಡಲಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ವಂದೇ ಭಾರತ್ ರಾಜಧಾನಿ ಬೆಂಗಳೂರಿಗೆ ಈಗಿರುವ ಸಂಪರ್ಕವನ್ನ ಮತ್ತಷ್ಟು ಬಲಪಡಿಸಲು ಈ ರೈಲು ಸಹಕಾರಿಯಾಗಲಿದೆ ವಿದ್ಯಾರ್ಥಿಗಳು ಉದ್ಯೋಗಿಗಳು ವ್ಯಾಪಾರಿಗಳು ಮತ್ತು ತುರ್ತು ವೈದ್ಯಕೀಯ ಕಾರಣಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಇದು ಅತ್ಯಂತ ಉಪಯುಕ್ತ ರಸ್ತೆ ಮಾರ್ಗದ ಟ್ರಾಫಿಕ್ ಕಿರಿಕಿರಿ ತಪ್ಪಿಸಿ ಕೇವಲ ಮೂರು ನಾಲ್ಕು ಗಂಟೆಗಳಲ್ಲಿ ಆರಾಮವಾಗಿ ಬೆಂಗಳೂರು ತಲುಪಲು ಇದು ಅನುವನ್ನ ಮಾಡಿಕೊಳ್ಳಲಿದೆ. ಒಂದೇ ಭಾರತ್ ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಐದು ಹೊಸ ದೂರಗಾಮಿ ರೈಲುಗಳ ಸೇವೆಯು ಕೂಡ ಮುಂದಿನ ವರ್ಷ ಅಂದ್ರೆ ಜನವರಿ ಮತ್ತು ಫೆಬ್ರವರಿಯಲ್ಲಿ ಆರಂಭವಾಗುವ ಸಾಧ್ಯತೆಯು ಇದೆ. ಹೊಸ ರೈಲು ಶಿವಮೊಗ್ಗದಿಂದ ಕೇರಳದ ವಾಣಿಜ್ಯ ರಾಜಧಾನಿ ಎರ್ನಾಕುಲಂಗೆ ನೇರವಾಗಿ ಸಂಪರ್ಕಿಸುತ್ತೆ. ಎರಡನೆಯದಾಗಿ ಶಿವಮೊಗ್ಗ, ಬಾಗಲ್ಪುರ ಅಂದ್ರೆ ಬಿಹಾರದ ಪ್ರಮುಖ ನಗರಕ್ಕೆ ನೇರ ಸಂಪರ್ಕ. ಇನ್ನು ಮೂರನೆಯದಾಗಿ ಶಿವಮೊಗ್ಗದಿಂದ ಜಂಶೇಡ್ಪುರಗೆ ಅಂದ್ರೆ ಜಾರ್ಖಂಡ್ಗೆ ಸಂಪರ್ಕವನ್ನ ಕಲ್ಪಿಸಲಿದೆ. ಇನ್ನು ನಾಲ್ಕನೆಯದಾಗಿ ಶಿವಮೊಗ್ಗದಿಂದ ಪಂಜಾಬ್ನ ಚಂಡಿಗಡಕ್ಕೆ ಇನ್ನು ಐದನೆಯದಾಗಿ ಶಿವಮೊಗ್ಗದಿಂದ ಅಸ್ಸಾಂನ ಗೌಹಾಟಿಗೆ ಸಂಪರ್ಕವನ್ನ ಕಲ್ಪಿಸಲಿದೆ. ಕೋಟೆ ಗಂಗೂರಿನ ರೈಲ್ವೆ ಕೋಚಿಂಗ್ ಡಿಪೋ. ರಾಜ್ಯದಲ್ಲಿ ಎಲ್ಲೆಲ್ಲಿ ಇವೆ ಕೋಚಿಂಗ್ ಡಿಪೋ.
ಈ ಎಲ್ಲಾ ಹೊಸ ರೈಲುಗಳ ಯೋಜನೆಗೆ ಮೂಲಾಧಾರವೇ ಕೋಟೆ ಗಂಗೂರಿನಲ್ಲಿ ನಿರ್ಮಾಣವಾಗಲಿರುವ ರಾಜ್ಯದ ನಾಲ್ಕನೇ ರೈಲ್ವೆ ಕೋಚಿಂಗ್ ಡಿಪೋ. ಹಾಗಾದ್ರೆ ಏನಿದು ಕೋಚಿಂಗ್ ಡಿಪೋ ಇದರ ಮಹತ್ವವೇನು ಅನ್ನೋದನ್ನ ನೋಡುವುದಾದರೆ ನಾವು ಸರಳವಾಗಿ ಹೇಳುವುದಾದರೆ ಕೋಚಿಂಗ್ ಡಿಪೋ ಅನ್ನುವುದು ರೈಲುಗಳ ಸರ್ವಿಸ್ ಸೆಂಟರ್ ಯಾವುದೇ ರೈಲು ತನ್ನ ಪ್ರಯಾಣವನ್ನ ಆರಂಭಿಸುವ ಮೊದಲು ಮತ್ತು ಮುಗಿಸಿದ ನಂತರ ಅದರ ಭೋಗಿಗಳನ್ನ ಸಂಪೂರ್ಣವಾಗಿ ತಪಾಸಣೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು ನೀರು ತುಂಬುವುದು ಸಣ್ಣ ಪುಟ್ಟ ದುರಸ್ತಿಗಳನ್ನ ಮಾಡುವುದು ಮತ್ತು ಮುಂದಿನ ಪ್ರಯಾಣಕ್ಕೆ ಸಜ್ಜುಗೊಳಿಸುವ ಸ್ಥಳವೇ ಈ ಕೋಚಿಂಗ್ ಡಿಪೋ ಇಲ್ಲಿಯವರೆಗೆ ಕರ್ನಾಟಕದಲ್ಲಿ ಬೆಂಗಳೂರು ಮೈಸೂರು ಮತ್ತು ಹುಬ್ಬಳಿಯಲ್ಲಿ ಮಾತ್ರ ಈ ಸೌಲಭ್ಯವಿತ್ತು ಇದರಿಂದಾಗಿ ಬಹುತೇಕ ಎಲ್ಲಾ ಪ್ರಮುಖ ರೈಲುಗಳು ಈ ನಗರಗಳಿಂದಲೇ ತಮ್ಮ ಪ್ರಯಾಣವನ್ನು ಆರಂಭಿಸಬೇಕಿತ್ತು. ಶಿವಮೊಗ್ಗಕ್ಕೆ ಬರುವ ರೈಲುಗಳು ಕೇವಲ ಹಾದು ಹೋಗುವ ಅಥವಾ ಪ್ರಯಾಣವನ್ನ ಅಂತ್ಯಗೊಳಿಸುವ ನಿಲ್ದಾಣವಾಗಿತ್ತು. ಆದರೆ ಕೋಟೆ ಗಂಗೂರಿನಲ್ಲಿ ಈ ಡಿಪೋ ನಿರ್ಮಾಣವಾದ ನಂತರ ಶಿವಮೊಗ್ಗವು ರೈಲುಗಳನ್ನ ಆರಂಭಿಸುವ ಸಾಮರ್ಥ್ಯವನ್ನ ಪಡೆಯಲಿದೆ. ಇದು ಬೆಂಗಳೂರು ಮತ್ತು ಮೈಸೂರು ರೈಲ್ವೆ ನಿಲ್ಧಾಣಗಳ ಮೇಲಿನ ಒತ್ತಡವನ್ನ ಗಣನೀಯವಾಗಿ ಕಡಿಮೆ ಮಾಡಲಿದೆ. ಸಂಸದ ಬಿವೈ ರಾಘವೇಂದ್ರ ಅವರ ಮಾಹಿತಿ ಪ್ರಕಾರ 2026ರ ಜನವರಿ ಅಂತ್ಯದೊಳಗೆ ಈ ಕೋಚಿಂಗ್ ಡಿಪೋ ಕಾರ್ಯಾರಂಭವನ್ನ ಮಾಡಲಿದೆ ಅಂತ ಹೇಳಿದ್ದಾರೆ.
ಇದು ಕೇವಲ ರೈಲು ಸಂಚಾರಕ್ಕೆ ಮಾತ್ರವಲ್ಲ ಸ್ಥಳೀಯವಾಗಿ ನೂರಾರು ಉದ್ಯೋಗಗಳನ್ನ ಸೃಷ್ಟಿಸುವ ಸಾಮರ್ಥ್ಯವನ್ನ ಹೊಂದಿರುತ್ತೆ. ನುರಿತ ತಂತ್ರಜ್ಞರಿಂದ ಹಿಡಿದು ಸಹಾಯಕ ಸಿಬ್ಬಂದಿಯವರೆಗೆ ಹಲವು ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಅಂತ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ನಾಲ್ಕು ನೂತನ ರೈಲು ಮಾರ್ಗಗಳ ಸಮೀಕ್ಷೆ ಮಲ್ನಾಡು ಮತ್ತು ಕರಾವಳಿ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯಾಗಿದೆ ಈ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಪ್ರವಾಸೋದ್ಯಮ ವಾಣಿಜ್ಯ ಮತ್ತು ಪ್ರಯಾಣಿಕರ ಸಂಚಾರಕ್ಕೆ ದೊಡ್ಡ ಉತ್ತೇಜನ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಪರಿಸರ ಮತ್ತು ಭೂಸ್ವಾಧೀನದಂತಹ ದೊಡ್ಡ ಸವಾಲುಗಳನ್ನ ಸರ್ಕಾರ ಹೇಗೆ ನಿವಾಯಿಸಲಿದೆ ಎಂಬುದನ್ನು ಕೂಡ ಕಾದು ನೋಡಬೇಕು ಅಲ್ಲದೆ ಕೋಚಿಂಗ್ ಡಿಪೋ ಸ್ಥಾಪನೆಯಿಂದ ಹಿಡಿದು ಒಂದೇ ಭಾರತದಂತಹ ಪ್ರತಿಷ್ಠಿತ ರೈಲುಗಳ ಸೇವೆ ದೇಶದ ಮೂಲೆ ಮೂಲೆಗೆ ಸಂಪರ್ಕ ಮತ್ತು ಭವಿಷ್ಯದ ಹೊಸ ಮಾರ್ಗಗಳ ಯೋಚನೆಗಳು ಇವೆಲ್ಲವೂ ಕೂಡ ಕಾರ್ಯರೂಪಕ್ಕೆ ಬಂದಾಗ ಶಿವಮೊಗ್ಗವು ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ಸಾರಿಗೆ ಕೇಂದ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಈ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡು ಮಲೆನಾಡಿನ ಜನರ ದಶಕಗಳ ಕನಸು ನನಸಾಗಲಿ.


