ಬೆಳ್ಳಿ ರಜತ ಸಿಲ್ವರ್ ಚಿನ್ನ ಬಿಟ್ಟರೆ ಭಾರತೀಯರ ಫೇವರೆಟ್ ಲೋಹ ಮದುವೆಗಳಲ್ಲಿ ಚಿನ್ನವನ್ನ ಜಾಸ್ತಿ ಖರೀದಿ ಮಾಡೋಕಾಗದಿದ್ರು ಕನಿಷ್ಠ ಪಕ್ಷ ಬೆಳ್ಳಿಯನ್ನಾದರೂ ಹೆಚ್ಚು ಹೆಚ್ಚು ಕೊಂಡುಕೊಳ್ತಾರೆ ಆದರೀಗ ಅಂತ ಬೆಳ್ಳಿ ಚಿನ್ನಕ್ಕೆ ಶಾಕ್ ಕೊಟ್ಟಿದೆ ಚಿನ್ನವನ್ನ ಮೀರಿಸಿ ಬೆಳ್ಳಿಯ ಬೆಲೆ ಹೆಚ್ಚಾಗ್ತಿದೆ ಈ ವರ್ಷದಲ್ಲಿ ಚಿನ್ನದ ಬೆಲೆ 59% ಏರಿಕೆ ಆದರೆ ಬೆಳ್ಳಿ ರೇಟ್ ಬರೋಬರಿ 85% ಜಂಪ್ ಆಗಿದೆ 1980ರ ನಂತರ ಇದೇ ಮೊದಲ ಬಾರಿಗೆ ಈತರ ಆಗಿರೋದು ಎಷ್ಟರ ಮಟ್ಟಿಗೆ ಅಂದ್ರೆ ಜನ ಚಿನ್ನದ ತರ ವಿಮಾನದಲ್ಲಿ ಸಿಲ್ವರ್ ಬಾರ್ಗಳನ್ನ ಸಾಗಿಸುತ್ತಿದ್ದಾರೆ ಜಗತ್ ವಿಖ್ಯಾತ ರಿಚ್ ಡ್ಯಾಡ್ ಪುವರ್ ಡ್ಯಾಡ್ ಪುಸ್ತಕದ ಖ್ಯಾತ ಲೇಖಕ ರಾಬರ್ಟ್ ಕಿಯೋಸ್ಕಿ ಕೂಡ ಬೆಳ್ಳಿ ಪರ್ಚೇಸ್ ಮಾಡಿ ಇಟ್ಕೊಳ್ಳಿ ಅಂತಿದ್ದಾರೆ ಹಾಗಿದ್ರೆ ಇದ್ದಕ್ಕಿದ್ದಂತೆ ಬೆಳ್ಳಿಗೆ ಏನಾಯ್ತು ಚಿನ್ನವನ್ನ ಕೂಡ ಮೀರಿಸಿ ಬೆಳ್ಳಿ ಜಿಗಿತ್ತಿರೋದು ಯಾಕೆ ದಿಡೀರಂತ ಬೆಳ್ಳಿ ಡಿಮ್ಯಾಂಡ್ ಏರಿರೋದಕ್ಕೆ ಕಾರಣ ಏನು ಬೆಳ್ಳಿ ಭರಾಟೆ ಹಿಂದಿರೋ ಲಂಡನ್ ಎಫೆಕ್ಟ್ ಏನು ಎಲ್ಲವನ್ನ ಹೇಳ್ತೀವಿ ವಿಡಿಯೋನ ಕಡೆ ತನಕ ನೋಡಿ ಚಿನ್ನ ಮೀರಿಸಿದ ಬೆಳ್ಳಿ ಹೌದು ದಸರಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತೀಯರು ಚಿನ್ನ ಬೆಳ್ಳಿ ಆಭರಣ ಖರೀದಿಗೆ ಇಳಿತಾರೆ ಯಾಕಂದ್ರೆ ನಮ್ಮಲ್ಲಿ ಇವುಗಳನ್ನ ಸಮೃದ್ಧಿ ಸ್ಥಿರತೆಯ ಸಂಕೇತ ಅಂತ ನಂಬಲಾಗುತ್ತೆ ಆದರೆ ಈ ಬಾರಿ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳಿ ಅಂತ ಹೇಳಿದ್ರೆ ಅಕ್ಷರಶಹ ಪರದಾಡಬೇಕಾಗುತ್ತೆ ಯಾಕಂದ್ರೆ ಬೆಳ್ಳಿಯ ಬೆಲೆ ಚಿನ್ನ ಮೇರಿಸಿ ಏರಿಕೆ ಆಗ್ತಿದೆ ನೀವಿಲ್ಲಿ ನೋಡಬಹುದು.
ಕಳೆದ ತಿಂಗಳು ಸೆಪ್ಟೆಂಬರ್ 15ಕ್ಕೆ ಭಾರತದಲ್ಲಿ 1ಕೆಜಿ ಬೆಳ್ಳಿಯ ಬೆಲೆ 127000 ರೂಪಾಯ ಇತ್ತು ಆದರೆ ಅಕ್ಟೋಬರ್ 14 ಅನ್ನೋ ಹೊತ್ತಿಗೆ ಈಗಒಲ78ಸ000 ರೂಪಾಯ ಆಗಿದೆ ಅಂದ್ರೆ ಒಂದೇ ತಿಂಗಳಲ್ಲಿ ಬರೋಬರಿ 51000 ರೂಪಾಯಿ ಏರಿಕೆಯಾಗಿದೆ ಆದರೆ ಚಿನ್ನ ನೋಡಿ ಇದು ಕೂಡ ಏರಿಕೆಯಾಗಿದೆ ಇಲ್ಲ ಅಂತೇನಿಲ್ಲ ಆದರೆ ಬೆಳ್ಳಿ ಅಷ್ಟಲ್ಲ ಸೆಪ್ಟೆಂಬರ್ 15ಕ್ಕೆ 10 ಗ್ರಾಂನ ಚಿನ್ನದ ಬೆಲೆಒಲ9000 ರೂಪಾಯ ಇತ್ತು ಈಗಒಲ26000 ರೂಪಾಯ ಆಗಿದೆ ಒಂದು ತಿಂಗಳಲ್ಲಿ 17000 ರೂಪಾಯಿ ಅಷ್ಟೇ ಜಾಸ್ತಿಯಾಗಿದೆ ಚಿನ್ನದ ರೇಟ್ ಒಂದು ತಿಂಗಳಲ್ಲಿ 15% ಏರಿಕೆ ಆದರೆ ಬೆಳ್ಳಿ ಬರೋಬರಿ 40% ಜಂಪ್ ಆಗಿದೆ ಇದು ಕೇವಲ ಭಾರತದಲ್ಲಿಷ್ಟೇ ಅಲ್ಲ ಜಾಗತಿಕವಾಗಿ ಈ ಟ್ರೆಂಡ್ ಕಾಣಿಸಿಕೊಳ್ಳುತ್ತಿದೆ ಜಾಗತಿಕ ಮಾರ್ಕೆಟ್ನಲ್ಲಿ ಒಂದು ಆನ್ಸ ಚಿನ್ನ ಅಂದ್ರೆ 30ಗ್ರಾಂ ಚಿನ್ನದ ಬೆಲೆ ಒಂದು ತಿಂಗಳಲ್ಲಿ 14% ಏರಿಕೆಯಾಗಿ 4179 ಡಾಲ ತಲುಪಿದ್ರೆ ಒಂದು ಅನ್ಸ್ ಬೆಳ್ಳಿಯ ಬೆಲೆ ಇದೇ ಅವಧಿಯಲ್ಲಿ ಬರೋಬರಿ 24% ಇನ್ಕ್ರೀಸ್ ಆಗಿ 52 ಡಾಲರ್ ತಲುಪಿದೆ ಈ ಇಡೀ ವರ್ಷದಲ್ಲಿ ಚಿನ್ನದ ರೇಟ್ 59% ಏರಿಕೆ ಆದರೆ ಬೆಳ್ಳಿ ಭರ್ತಿ 85% ಜಂಪ್ ಆಗಿದೆ.
ಬೆಳ್ಳಿ ಉತ್ಪಾದನೆ ಸ್ನೇಹಿತರೆ ದಿಡೀರ್ ಬೆಳ್ಳಿ ದರ ಏರಿಕೆ ಆಗ್ತಿರೋದಕ್ಕೆ ಹಲವಾರು ಕಾರಣಗಳಿವೆ ಆದರೆ ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಅಂದ್ರೆ ಬೆಳ್ಳಿ ಉತ್ಪಾದನೆ ಕುಸಿದಿರೋದು ನಿಮಗೆ ಆಶ್ಚರ್ಯ ಆಗಬಹುದು ಚಿನ್ನದಂತೆ ಬೆಳ್ಳಿಯನ್ನ ನೇರವಾಗಿ ಭೂಮಿಯಿಂದ ಅಗೆದು ತೆಗೆಯಲ್ಲ ಬೆಳ್ಳಿ ಜಿಂಕ್, ಲೆಡ್, ತಾಮ್ರದಂತ ಬೇರೆ ಲೋಹಗಳ ಜೊತೆ ಕೂಡಿಕೊಂಡಿರುತ್ತೆ. ಹೀಗಾಗಿ ಆ ಲೋಹಗಳನ್ನ ಅಗ್ಗಿದಾಗ ಮಾತ್ರ ಬೆಳ್ಳಿ ಸಿಗುತ್ತೆ. 70 ರಿಂದ 75% ಬೆಳ್ಳಿನ ಹೀಗೆ ಉತ್ಪಾದನೆ ಆಗೋದು. ಒಂದು ವೇಳೆ ಏನಾದ್ರೂ ಜಿಂಕ್ ಕಾಪರ್ ಉತ್ಪಾದನೆ ಕುಸಿದ್ರೆ ಬೆಳ್ಳಿ ಉತ್ಪಾದನೆ ಕೂಡ ಕುಸಿಯುತ್ತೆ. ಈಗ ಕೂಡ ಹಾಗೆ ಆಗಿದೆ. 2014 ರಿಂದ 2020 ರವರೆಗೆ ಬೆಳ್ಳಿಗೆ ಡಿಮ್ಯಾಂಡ್ ಇರ್ಲಿಲ್ಲ. ಹೀಗಾಗಿ ಬೆಳ್ಳಿ ಬೆಲೆ ಕೂಡ ಜಾಸ್ತಿ ಏರಿಕೆ ಆಗಿರಲಿಲ್ಲ. ಸೋ, ಬೆಳ್ಳಿಯನ್ನ ಉತ್ಪಾದನೆ ಮಾಡೋದು ತುಂಬಾ ದುಬಾರಿಯಾಗಿತ್ತು, ಹಾಗಾಗಿ ಹೆಚ್ಚು ಗಣಿಗಾರಿಕೆ ಮಾಡ್ತಿರಲಿಲ್ಲ. ಸಿಲ್ವರ್ ಇನ್ಸ್ಟಿಟ್ಯೂಷನ್ ಪ್ರಕಾರ 2014 ರಲ್ಲಿ ಜಾಗತಿಕವಾಗಿ 26.8,000 ಟನ್ ಬೆಳ್ಳಿ ಉತ್ಪಾದನೆಯಾದರೆ, 2020 ರಲ್ಲಿ 23.7,000 7ಸ000 ಟನ್ ಬೆಳ್ಳಿ ಉತ್ಪಾದನೆಯಾಗಿದೆ ಸೋ ಸಿಲ್ವರ್ ಪ್ರೊಡಕ್ಷನ್ ಕುಸ್ತಿದೆ ಇವಿ ಸೋಲಾರ್ ನಿಂದ ಹೆಚ್ಚಿದ ಬೇಡಿಕೆ. ಹೌದು ಸ್ನೇಹಿತರೆ ಬೆಳ್ಳಿ ಅವೈಲೇಬಲ್ ಇಲ್ಲ ಸಪ್ಲೈ ಟೈಟ್ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವಿ ಸೋಲಾರ್ ಪ್ಯಾನೆಲ್ ಗಳ ಕಾರಣದಿಂದ ಬೆಳ್ಳಿಯ ಇಂಡಸ್ಟ್ರಿಯಲ್ ಡಿಮ್ಯಾಂಡ್ ಏರಿಕೆಯಾಗಿದೆ. ಯಾಕಂದ್ರೆ ಬೆಳ್ಳಿ ಬೆಳಕು ಮತ್ತು ವಿದ್ಯುತ್ ಶಕ್ತಿಯ ಅತ್ಯಂತ ಪರಿಣಾಮಕಾರಿ ವಾಹಕ ಬೆಸ್ಟ್ ಕಂಡಕ್ಟರ್ ಹೀಗಾಗಿ ಸೋಲಾರ್ ಪ್ಯಾನೆಲ್ ಗಳಿಗೆ ಬೆಳ್ಳಿ ಬೇಕೇ ಬೇಕು.
ಸರಾಸರಿ ಒಂದು ಸೋಲಾರ್ ಪ್ಯಾನೆಲ್ ಗೆ 15 ರಿಂದ 20 ಗ್ರಾಂ ಸಿಲ್ವರ್ ಬೇಕು ಅಂತ ಹೇಳಲಾಗುತ್ತೆ. ಅದೇ ರೀತಿ ಇವಿ ಬ್ಯಾಟರಿ, ಸ್ಮಾರ್ಟ್ ಫೋನ್ ಸೆನ್ಸಾರ್ ಚಿಪ್ ಗಳಿಗೆ ಕೂಡ ಬೆಳ್ಳಿ ಬೇಕು. ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಇವಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರ ಬೂಮ ಆಗ್ತಿದೆ. ಹೀಗಾಗಿ ದಶಕದವರೆಗೆ ನಿಂತ ನೀರಾಗಿದ್ದ ಬೆಳ್ಳಿ ಬೇಡಿಕೆ ದಿಡೀರಂತ ಏರಿಕೆ ಆಗ್ತಿದೆ. ಸಿಲ್ವರ್ ಇನ್ಸ್ಟಿಟ್ಯೂಟ್ ಪ್ರಕಾರ ಕಳೆದ ವರ್ಷ 680 ಮಿಲಿಯನ್ ಟ್ರಾಯ್ ಅಥವಾ 2 ಕೋಟಿ ಕೆಜಿ ಬೆಳ್ಳಿ ಕೇವಲ ಇಂಡಸ್ಟ್ರಿಗೆ ಬೇಕಾಗಿತ್ತು. ಹೂಡಿಕೆಗೂ ಬೇಕು ಬೆಳ್ಳಿ. ಹೌದು ಸ್ನೇಹಿತರೆ ಕೇವಲ ಇಂಡಸ್ಟ್ರಿಗಳಿಂದ ಬೆಳ್ಳಿ ಬೆಳಿಕೆ ಜಾಸ್ತಿಯಾಗಿರೋದು ಸಾಲದು ಅಂತ ಈಗ ಹೂಡಿಕೆಗೂ ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಬೇಕಾಗಿದೆ. ಟ್ರಂಪ್ ಟ್ಯಾರಿಫ್ ಆಟದಿಂದ ಆರ್ಥಿಕತೆಯಲ್ಲಿ ಅನಿಶ್ಚಿತತೆ ಮೂಡಿದೆ. ಹೀಗಾಗಿ ಜನ ಶಾಶ್ವತ ಸಂಪತ್ತಾದ ಚಿನ್ನದಲ್ಲಿ ಹೂಡಿಕೆ ಜಾಸ್ತಿ ಮಾಡಿರೋದನ್ನ ನೀವು ನೋಡಿರಬಹುದು ಕೇಳಿರಬಹುದು. ಆದರೆ ಇದರಿಂದ ಚಿನ್ನದ ಬೆಲೆ ಕೂಡ ಜಾಸ್ತಿಯಾಗಿದೆ. ಹೀಗಾಗಿ ಚಿನ್ನದಲ್ಲಿ ಹೂಡಿಕೆ ಮಾಡೋಕಾಗದವರು ಚಿನ್ನಕ್ಕೆ ಪರ್ಯಾಯ ಅಂತ ಬೆಳ್ಳಿಲಿ ಕೂಡ ಇನ್ವೆಸ್ಟ್ ಮಾಡ್ತಿದ್ದಾರೆ. ಅದರಲ್ಲೂ ಈ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಇಟಿಎಫ್ ಬಂದಾಗಿನಿಂದ ಇಂತಹ ಫಿಸಿಕಲ್ ಅಸೆಟ್ ಗಳಲ್ಲಿ ಹೂಡಿಕೆ ಮಾಡೋದು ಸುಲಭ ಆಗಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಜನ ಇಟಿಎಫ್ ನಲ್ಲಿ ಬೆಳ್ಳಿಯ ಮೇಲೆ ಹೂಡಿಕೆ ಮಾಡ್ತಿದ್ದಾರೆ. ಕಳೆದ ಅಕ್ಟೋಬರ್ ಅಂಕಿ ಅಂಶದ ಪ್ರಕಾರ ಕೇವಲ ಭಾರತದಲ್ಲೇ ಸಿಲ್ವರ್ ಇಟಿಎಫ್ ನಲ್ಲಿ 12000 ಕೋಟಿ ಇನ್ವೆಸ್ಟ್ ಮಾಡಿದ್ದಾರೆ. ಇಲ್ಲಿ ಎಟಿಎಫ್ ನಲ್ಲಿ ಹೂಡಿಕೆ ಮಾಡೋದು ಅಂದ್ರೆ ಕೇವಲ ಪೇಪರ್ ಅಥವಾ ಕಂಪ್ಯೂಟರ್ ನಲ್ಲಿ ನಡೆಯೋ ಅಂಕಿ ಆಟ ಅಲ್ಲ.ಅಷ್ಟೇ ಪ್ರಮಾಣದ ಬೆಳ್ಳಿಯನ್ನ ಇನ್ವೆಂಟರಿಗಳಲ್ಲಿ ತೆಗೆದಿಡಬೇಕಾಗುತ್ತೆ. ಹೀಗಾಗಿ ಆಲ್ರೆಡಿ ಟೈಟ್ ಆಗಿದ್ದ ಬೆಳ್ಳಿ ಪೂರೈಕೆ ಈ ಹೂಡಿಕೆಯಿಂದ ಇನ್ನಷ್ಟು ಟೈಟ್ ಆಗಿದೆ.
ಭಾರತದಲ್ಲಿ ಈಗ ಹಬ್ಬದ ಸೀಸನ್ ಸೋ ದೊಡ್ಡ ಮಟ್ಟದಲ್ಲಿ ಜನ ಬೆಳ್ಳಿ ಖರೀದಿಸುತ್ತಿದ್ದಾರೆ. ಹೀಗಾಗಿ ಬೆಳ್ಳಿಯ ಆಭರಣ ಬೇಡಿಕೆ ಕೂಡ ಜಾಸ್ತಿಯಾಗಿದೆ. ಇದೆಲ್ಲದರ ಪರಿಣಾಮ ಬೆಳ್ಳಿ ಪೂರೈಕೆಗಿಂತ ಡಿಮ್ಯಾಂಡ್ ಜಾಸ್ತಿಯಾಗಿದೆ. ಜಾಗತಿಕವಾಗಿ ಸುಮಾರು 149 ಮಿಲಿಯನ್ ಡ್ರಾಯ್ ಅಥವಾ 46 ಲಕ್ಷಕೆಜಿ ಯಷ್ಟು ಬೆಳ್ಳಿ ಕೊರತೆ ಉಂಟಾಗಿದೆ. ಖಾಲಿಯಾದ ಲಂಡನ್ ಖಜಾನೆ ಈಗಾಗಲೇ ಹೇಳಿದಂತೆ ಎಟಿಎಫ್ ಸೇರಿದಂತೆ ಬೆಳ್ಳಿಯಲ್ಲಿ ಹೂಡಿಕೆ ಮಾಡುವಾಗ ಅಷ್ಟೇ ಪ್ರಮಾಣದಲ್ಲಿ ಇನ್ವೆಂಟರಿಗಳಲ್ಲಿ ಬೆಳ್ಳಿ ಇರಬೇಕಾಗುತ್ತೆ. ಲಂಡನ್ ನ ಎಲ್ಬಿಎಂಎ, ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್, ಇಂತಹ ಇನ್ವೆಂಟರಿಗಳಲ್ಲಿ ಒಂದು. ಇಲ್ಲೆಲ್ಲ ಮುಂಚೆ ಒಂದು ಬಿಲಿಯನ್ ಔನ್ಸ್ ನಷ್ಟು ಬೆಳ್ಳಿ ಇರ್ತಿತ್ತು, ಆದರೆ ಡಿಮ್ಯಾಂಡ್ ಹೆಚ್ಚಿದಂತೆ ಖಜಾನೆಯಲ್ಲಿದ್ದ ಬೆಳ್ಳಿ ಖಾಲಿ ಆಗ್ತಾ ಈಗ ಕೇವಲ 750 ಮಿಲಿಯನ್ ಔನ್ಸ್ ಗೆ ಕುಸಿದಿದೆ. ಸಾಲು ಸಾಲು ಯುದ್ಧ ದುಬಾರಿ ಇನ್ಶೂರೆನ್ಸ್ ವೆಚ್ಚದಿಂದ ಗಣಿಗಳಿಂದ ಲಂಡನ್ ಗೆ ಬೆಳ್ಳಿ ಸಾಗಿಸೋದು ಕೂಡ ನಿಧಾನ ಆಗಿದೆ. ಇಂತದ್ರಲ್ಲಿ ಅನೇಕ ಹೂಡಿಕೆದಾರರು ಬೆಳ್ಳಿ ವಿರುದ್ಧ ಶಾರ್ಟ್ ಮಾಡಿದ್ರು.
ಅಂದ್ರೆ ಬೆಳ್ಳಿ ಬೆಲೆ ಮುಂದೆ ಕುಸಿಯುತ್ತೆ ಆಗ ಲಾಭ ಮಾಡ್ಕೋಬಹುದು ಅಂತ ಹೇಳಿ ಸಿಲ್ವರ್ ಕಾಂಟ್ರಾಕ್ಟ್ ಗಳನ್ನ ಪರ್ಚೇಸ್ ಮಾಡಿದ್ರು ಆದರೆ ಬೆಳ್ಳಿಯ ಡಿಮ್ಯಾಂಡ್ ಏರಿಕೆಯಾದ ಪರಿಣಾಮ ಬೆಳ್ಳಿ ಬೆಲೆ ಕುಸಿಯೋದರ ಬದಲು ಏರಿಕೆಯಾಗಿದೆ ಸೋ ಇವರೆಲ್ಲ ಈಗ ಪ್ಯಾನಿಕ್ ಆಗಿದ್ದಾರೆ ಹೀಗಾಗಿ ತರಾತುರಿಯಲ್ಲಿ ಲಂಡನ್ ನಲ್ಲಿರುವ ಇದ್ದ ಬದ್ದ ಬೆಳ್ಳಿಯನ್ನೆಲ್ಲ ಖರೀದಿ ಮಾಡ್ತಿದ್ದಾರೆ ವಿಮಾನಗಳಲ್ಲಿ ತುಂಬಿಕೊಂಡು ತಮ್ಮ ತಮ್ಮ ದೇಶಕ್ಕೆ ತಗೊಂಡು ಬರ್ತಿದ್ದಾರೆ ಇದರಿಂದ ಅಗೈನ್ ಡಿಮ್ಯಾಂಡ್ ಹೆಚ್ಚಾಗಿ ದಿಡೀರ್ ಬೆಳ್ಳಿ ಬೆಲೆ ಗಗನ ಮುಟ್ಟಿದೆಏಳು ಲಕ್ಷ ಮೀರಲಿದೆ ಬೆಳ್ಳಿ ಒಂದು ಕಡೆ ಹಿಗ್ಗಮುಗ ಬೆಳ್ಳಿ ಏರ್ತಿರಬೇಕಾದ್ರೆನೆ ಇನ್ಫ್ಯಾಕ್ಟ್ ಅದಕ್ಕಿಂತಲೂ ಮುಂಚೆನೇ ರಿಚ್ ಡ್ಯಾಡ್ ಪುವರ್ ಡ್ಯಾಡ್ ಪುಸ್ತಕದ ಲೇಖಕ ಮತ್ತು ಪ್ರಸಿದ್ಧ ಹೂಡಿಕೆದಾರ ರಾಬರ್ಟ್ ಕಿಯೋಸ್ಕಿ ಬೆಳ್ಳಿ ತಗೊಳಿ ಅಂತ ಪದೇ ಪದೇ ಹೇಳ್ತಿದ್ದಾರೆ ನಾನು ನನ್ನ ಪುಸ್ತಕದಲ್ಲಿ ಜಗತ್ತು ದೊಡ್ಡ ಆರ್ಥಿಕ ಕ್ರಾಶ್ ನ ಕಾಣುತ್ತೆ ಅಂತ ಹೇಳಿದ್ದೆ ಅದು ಈ ವರ್ಷವೇ ಆಗಬಹುದು ಅಂತ ನನಗೆ ಅನ್ಸುತ್ತೆ ನಾನು ಮುಂಚೆಯಿಂದಲೂ ಹೇಳ್ತಾ ಬಂದಿದ್ದೆ ಪ್ರಿಂಟೆಡ್ ಅಸೆಟ್ ಅಂದ್ರೆ ನೋಟುಗಳಲ್ಲಿ ಕಾದಿಟ್ಟುಕೊಳ್ಳೋದ್ರಲ್ಲಿ ಏನು ಅರ್ಥ ಇಲ್ಲ ರಿಯಲ್ ಅಸೆಟ್ ಗಳಲ್ಲಿ ಹೂಡಿಕೆ ಮಾಡಬೇಕು ಈಗ ಇನ್ಫ್ಲೇಷನ್ ಇಂದ ಮತ್ತೆ ರಿಯಲ್ ಅಸೆಟ್ಗಳ ಳಿಗೆ ಮೌಲ್ಯ ಬರಲಿದೆ. ಶೀಘ್ರದಲ್ಲೇ ಬೆಳ್ಳಿ ಮತ್ತು ಇಥೇರಿಯಂ ಬಿಟ್ಕಾಯಿನ್ ಗಿಂತ ಬೆಲೆ ಬಾಳುವ ವಸ್ತುಗಳಾಗ್ತವೆ. ಬೆಳ್ಳಿಯ ಬೆಲೆ 400ಪ್ರತಿದಷ್ಟು ಏರಿಕೆ ಆಗಬಹುದು ಅಂತ ಭವಿಷ್ಯ ನೋಡ್ತಿದ್ದಾರೆ. ಅವರ ಭವಿಷ್ಯವಾಣಿ ಸರಿಯಾಗಿದ್ರೆ ಭಾರತೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಏಳು ಲಕ್ಷ ರೂಪಾಯಿ ದಾಟಬಹುದು ಎನ್ನಲಾಗ್ತಿದೆ. ಒಟ್ಟನಲ್ಲಿ ಏನೇ ಹೇಳಿ ಸ್ನೇಹಿತರೆ ಜಗತ್ತು ಅಸ್ಥಿರ ಆರ್ಥಿಕತೆ ಹಣಕಾಸು ವ್ಯವಸ್ಥೆಗೆ ಸಾಕ್ಷಿಯಾಗ್ತಿದೆ. ಹೀಗಾಗಿ ಚಿನ್ನ ಬೆಳ್ಳಿ ಮತ್ತೆ ಅತ್ಯಂತ ಮೌಲ್ಯಯುತ ವಸ್ತುಗಳು ಅಂತ ಸಾಬೀತು ಮಾಡ್ತಿವೆ.


