Monday, March 2, 2026
HomeTech NewsSilver Thursday ಎಂದರೇನು? Hunt Brothers ಬೆಳ್ಳಿ ಪತನದ ಸಂಪೂರ್ಣ ವಿವರಣೆ

Silver Thursday ಎಂದರೇನು? Hunt Brothers ಬೆಳ್ಳಿ ಪತನದ ಸಂಪೂರ್ಣ ವಿವರಣೆ

ಮಾರ್ಚ್ 27 1980 ಜಾಗತಿಕ ಹಣಕಾಸು ಮಾರುಕಟ್ಟೆಯ ಇತಿಹಾಸದಲ್ಲಿ ಅದೊಂದು ಕರಾಳ ದಿನ ಅದನ್ನ ಸಿಲ್ವರ್ ಥರ್ಸ್ಡೇ ಅಂತಾರೆ ಅಂದು ನ್ಯೂಯಾರ್ಕ್ನ ಆರ್ಥಿಕ ವಲಯದಲ್ಲಿ ಉಸಿರು ಬಿಗಿಹಿಡಿದು ನೋಡುವಂತಹ ವಾತಾವರಣ ನಿರ್ಮಾಣವಾಗಿತ್ತು ಬೆಳ್ಳಿಯ ಬೆಲೆ ನೋಡ ನೋಡುತ್ತಿದ್ದಂತೆ ಮರಳಿನ ಗೋಪುರದಂತೆ ಕುಸಿಯಲು ಆರಂಭಿಸಿತ್ತು ಅಮೆರಿಕದ ಅತ್ಯಂತ ಶ್ರೀಮಂತ ಸಹೋದರರು ಎಂದೇ ಕರೆಸಿಕೊಳ್ಳುತ್ತಿದ್ದ ಟೆಕ್ಸಾಸ್ನ ಆಯಿಲ್ ಕುಳಗಳು ದಿವಾಳಿಯಾಗುವ ಹಂಚಿಗೆ ಬಂದು ನಿಂತಿದ್ದರು ಎಕ್ಸ್ಚೇಂಜ್ ಫ್ಲೋರ್ನಲ್ಲಿ ಭೀತಿ ಆವರಿಸಿತ್ತು ಹೂಡಿಕೆದಾರರ ಫೋನ್ಗಳು ನಿರಂತರವಾಗಿ ರಿಂಗ್ ಆಗ್ತಿದ್ದವು ಮಾರ್ಜಿನ್ ಕಾಲ್ ಎಂದೆ ಒಂದೇ ಒಂದು ಪದ ಬಲಿಷ್ಠರ ಸಾಮ್ರಾಜ್ಯವನ್ನು ಅಲುಗಾಡಿಸಿತ್ತು.

ಕೇವಲ ಒಂದು ದಿನದಲ್ಲಿ ಬೆಳ್ಳಿಯ ಬೆಲೆ ಶೇಕಡ 50ರಷ್ಟು ಕುಸಿದು 11 ಡಾಲರ್ ಗಿಂತ ಕೆಳಗೆ ಬಿದ್ದಿತ್ತು ಬೆಳ್ಳಿಯ ಮಾರುಕಟ್ಟೆಯನ್ನೇ ತಮ್ಮ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಹೋದವರು ಮಣ್ಣು ಮುಕ್ಕಿದ್ರು ಇದು 46 ವರ್ಷಗಳ ಹಿಂದೆ ನಡೆದ ಕಥೆ ಆದರೆ 2026ರಲ್ಲಿ ಮತ್ತೆ ಮುನ್ನಲಿಗೆ ಬಂದಿದೆ 2026ರ ಆರಂಭದಲ್ಲಿ ಸಿಲ್ವರ್ ಮಾರ್ಕೆಟ್ ಬ್ಲಾಸ್ಟ್ ಆಗಿದೆ ಭಾರತದಲ್ಲಿ 1ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿಗಳ ಗಡಿದಾಟಿದೆ ಜಾಗತಿಕವಾಗಿ ಬೆಲೆ 80ರಿಂದ 90 ಡಾಲರ್ ಮುಟ್ಟಿದೆ ಈ ಹಟಾತ್ ಏರಿಕೆ 1980ರಲ್ಲಿ ಹಂಟ್ ಬ್ರದರ್ಸ್ ಸೃಷ್ಟಿಸಿದ ಕೃತಕ ಏರಿಕೆಯನ್ನೇ ಹೋಲುತ್ತಿದೆ ಅಂದು ನಡೆದ ಆ ಮಹಾ ಕುಸಿತ ಇಂದು ಮತ್ತೆ ನಡೆಯಬಹುದಾ ಅಂದು ಬೆಳ್ಳಿ ಮಾರುಕಟ್ಟೆಯನ್ನ ಆಳಲು ಹೋದ ಆ ಇಬ್ಬರು ಬ್ರದರ್ಸ್ ಯಾರು ಅವರ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಬನ್ನಿ ಆ ರೋಚಕ ಇತಿಹಾಸವನ್ನ ಮತ್ತು ಇಂದಿನ ಮಾರುಕಟ್ಟೆಯ ವಾಸ್ತವವನ್ನ ನೋಡೋಣ.

ಏನಿದು ಹಂಟು ಸಹೋದರರ ಕಥೆ ಬೆಳ್ಳಿಯ ಮೇಲೆ ಕಣ್ಣು ಬಿದ್ದಿದ್ದು ಹೇಗೆ ಈಗ ಬನ್ನಿ 26 ವರ್ಷಗಳ ಹಿಂದೆ ನಡೆದ ಸಿಲ್ವರ್ ಥರ್ಸ್ಡೇ ಸ್ಟೋರಿಯನ್ನ ನೋಡ್ತಾ ಹೋಗೋಣ ಆ ಕಥೆಯ ಹೀರೋಗಳು ಅಥವಾ ವಿಲನ್ಗಳು ಅಂತ ಕರೆಯಬಹುದಾದರು ನೆಲ್ಸನ್ ಬಂಕರ್ ಹಂಟ್ ಮತ್ತು ವಿಲಿಯಂ ಹರ್ಬರ್ಟ್ ಹಂಟ್ ಇವರು ಅಮೆರಿಕದ ಟೆಕ್ಸಸ್ ಮೂಲದ ತೈಲ ಉದ್ಯಮಿಗಳು ಅಮೆರಿಕದ ಅತ್ಯಂತ ಶ್ರೀಮಂತ ಕುಟುಂಬದ ವಾರಸುದಾರರು 1970ರ ದಶಕದ ಕೊನೆಯಲ್ಲಿ ಅಮೆರಿಕದಲ್ಲಿ ಹಣದುಬ್ಬರ ಅಥವಾ ಇನ್ಫ್ಲೇಷನ್ ವಿಪರೀತವಾಗಿತ್ತು ಡಾಲರ್ ಮೌಲ್ಯ ಕುಸಿಯುತ್ತಿತ್ತು ಕಾಗದದ ನೋಟುಗಳ ಮೇಲೆ ನಂಬಿಕೆ ಕಳೆದುಕೊಂಡ ಹಂಟ್ ಬ್ರದರ್ಸ್ ತಮ್ಮ ಸಂಪತ್ತನ್ನ ಉಳಿಸಿಕೊಳ್ಳಲು ಲೋಹದ ಮೊರೆ ಹೋದರು ಅಷ್ಟೊತ್ತಿಗಾಗಲೇ ಚಿನ್ನ ದುಭಾರಿಯಾಗಿತ್ತು ಆದರೆ ಬೆಳ್ಳಿ ಅಗ್ಗವಾಗಿತ್ತು ಮತ್ತು ಅಂಡರ್ ವ್ಯಾಲ್ಯೂಡ್ ಆಗಿತ್ತು. ಹೀಗಾಗಿ ಡಾಲರ್ ಕೂಸಿದರೆ ಬೆಳ್ಳಿ ಬೆಲೆ ಏರುತ್ತದೆ ಎಂಬ ಲೆಕ್ಕಚಾರದಲ್ಲಿ ಅವರು ಸಿಲ್ವರ್ ಮಾರ್ಕೆಟ್ ಅನ್ನ ಪ್ರವೇಶಿಸಿದರು. ಆದರೆ ಅವರ ಉದ್ದೇಶ ಕೇವಲ ಇನ್ವೆಸ್ಟ್ ಆಗಿರಲಿಲ್ಲ.

ಇಡೀ ಮಾರ್ಕೆಟ್ನ್ನೇ ಕಾರ್ನರ್ ಮಾಡೋದು ಅಥವಾ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದಾಗಿತ್ತು. ಕಾಗದದ ಬದಲಿಗೆ ಫಿಸಿಕಲ್ ಬೆಳ್ಳಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿ ಸಾಮಾನ್ಯವಾಗಿ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಟ್ರೇಡರ್ಗಳು ಕಾಂಟ್ರಾಕ್ಟ್ ಮುಗಿದಾಗ ಹಣವನ್ನ ಸೆಟಲ್ ಮಾಡಿಕೊಳ್ಳುತ್ತಾರೆ ಯಾರೋ ಲಾರಿಗಳಲ್ಲಿ ಲೋಹವನ್ನ ಮನೆಗೆ ಹೊಯ್ಯುವುದಿಲ್ಲ ಆದರೆ ಹಂಟು ಸಹೋದರರ ಪ್ಲಾನ್ ಬೇರೆಯಾಗಿತ್ತು ಅವರು ಖರೀದಿಸಿದ ಪ್ರತಿಯೊಂದು ಕಾಂಟ್ರಾಕ್ಟ್ಗೂ ಫಿಸಿಕಲ್ ಡೆಲಿವರಿ ಕೇಳಿದರು ಅಂದರೆ ನಮಗೆ ದುಡ್ಡು ಬೇಡ ಬೆಳ್ಳಿಯನ್ನೇ ಕೊಡಿ ಅಂತ ಪಟ್ಟು ಹಿಡಿದರುವಿನ ಳ ಮೂಲಕ ಟನ್ಗಟ್ಟಲೆ ಬೆಳ್ಳಿಯನ್ನ ಸ್ವಿಟ್ಜರ್ಲ್ಯಾಂಡ್ ಮತ್ತು ಅಮೆರಿಕದ ಗೋದಾಮುಗಳಿಗೆ ಸಾಗಿಸಿದ್ರು ಇದರಿಂದ ಮಾರುಕಟ್ಟೆಯಲ್ಲಿ ಬೆಳ್ಳಿಯ ತೀವ್ರ ಅಭಾವ ಸೃಷ್ಟಿಯಾಯಿತು.

ಬೆಲೆಗಳು 11 ಡಾಲರ್ ನಿಂದ 50 ಡಾಲರ್ಗೆ ರಾಕೆಟ್ ವೇಗದಲ್ಲಿ ಏರಿವು ಒಂದು ಹಂತದಲ್ಲಿ ಹಂಟ್ ಬ್ರದರ್ಸ್ ಬಳಿ 200 ಮಿಲಿಯನ್ ಅಂನ್ಸ್ ಬೆಳ್ಳಿ ಇತ್ತು ಅಂದರೆ ಜಗತ್ತಿನ ಒಟ್ಟು ಬೆಳ್ಳಿಯ ಮೂರನೇ ಒಂದು ಭಾಗ ಇವರಿಬ್ಬರ ಕೈಯಲ್ಲೇ ಇತ್ತು ಇಂದಿನ ಮೌಲ್ಯದಲ್ಲಿ ಇದು ಸುಮಾರು 15 ಬಿಲಿಯನ್ ಡಾಲರ್ ಅಥವಾ ಒಂದು ಕಾಲು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅಂದ್ರೆ ನೀವು ನಂಬಲೇಬೇಕು ಸಾಲದ ಸುಳಿಯಲ್ಲಿ ಸಿಲ್ಕಿದ ಹಂಟರ್ಸ್ ಸಿಲ್ವರ್ ರೋಲ್ ಸೆವೆನ್ ಬದಲಿಸಿದ ಅಮೆರಿಕ ಹಂಟ್ ಬ್ರದರ್ಸ್ ತಮ್ಮ ಸ್ವಂತ ಹಣ ಖಾಲಿಯಾದಾಗ ತಮ್ಮ ಕುಟುಂಬದ ಹೆಸರಿನ ಬಲದಿಂದ ಬ್ಯಾಂಕುಗಳಿಂದ ಸಾಲ ಪಡೆದು ಬೆಳ್ಳಿ ಖರೀದಿಸಲು ಶುರು ಮಾಡಿದ್ರು ಮಧ್ಯಪ್ರಾಚ್ಯದ ಶ್ರೀಮಂತರನ್ನು ಸೇರಿಸಿಕೊಂಡರು ಬೆಲೆ ಏರುತ್ತಿದ್ದಂತೆ ಬೆಲೆ ಇಳಿಯುತ್ತದೆ ಎಂದು ಬೆಟ್ ಕಟ್ಟಿದ ಶಾರ್ಟ್ ಸೆಲ್ಲರ್ಸ್ ಸಂಕಷ್ಟಕ್ಕೆ ಸಿಲುಕಿದ್ರು.

ಅವರು ಬೆಳ್ಳಿಯನ್ನ ವಾಪಸ್ ಕೊಡಲು ದುಬಾರಿ ಬೆಲೆಗೆ ಖರೀದಿಸಬೇಕಾಯಿತು. ಇದು ಬೆಲೆಯನ್ನ ಮತ್ತಷ್ಟು ಹೆಚ್ಚಿಸಿತ್ತು. ಇದು ಅಮೆರಿಕದ ಸರ್ಕಾರದ ಕಣ್ಣು ಕೆಂಪಾಗಿಸಿತ್ತು. ಇದೊಂದು ಮಾರ್ಕೆಟ್ ಮ್ಯಾನಿಪುಲೇಷನ್ ಎಂದು ಭಾವಿಸಿದ ರೆಗ್ಯುಲೇಟರ್ಗಳು ಸಿಲ್ವರ್ ರೋಲ್ ಸೆವೆನ್ ಎಂಬ ಹೊಸ ನಿಯಮ ಜಾರಿಗೆ ತಂದರು ಇದರ ಪ್ರಕಾರ ಸಾಲದ ಹಣದಲ್ಲಿ ಅಂದರೆ ಮಾರ್ಜಿನ್ ನಲ್ಲಿ ಹೊಸದಾಗಿ ಬೆಳ್ಳಿ ಖರೀದಿಸುವುದನ್ನ ನಿಷೇಧಿಸಲಾಯಿತು. ಕೇವಲ ಇರುವ ಬೆಳ್ಳಿಯನ್ನ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಯಿತು. ಫೆಡರಲ್ ರಿಸರ್ವ್ ಕೂಡ ಬ್ಯಾಂಕುಗಳಿಗೆ ಸಾಲ ನೀಡದಂತೆ ತಾಕಿತು ಮಾಡಿತ್ತು ಇದು ಹಂಟ್ ಬ್ರದರ್ಸ್ಗೆ ದೊಡ್ಡ ಹೊಡೆತವನ್ನೇ ನೀಡ್ತು ಸಿಲ್ವರ್ ಥರ್ಸ್ಡೇ ದಿ ಗ್ರಾಟ್ ಕ್ರಾಶ್ ಅರಮನೆಯಿಂದ ಸಾಲದ ಕೋಪಕ್ಕೆ ಯಾವಾಗ ಹೊಸ ಖರೀದಿದಾರರು ಮಾರುಕಟ್ಟೆಗೆ ಬರುವುದು ನಿಂತಿತು ಬೆಲೆ ಕುಸಿಯಲ ಆರಂಭಿಸಿತು ಮಾರ್ಚ್ 27 1980ರಂದು ಹಂಟ್ ಬ್ರದರ್ಸ್ಗೆ ಮಾರ್ಜಿನ್ ಕಾಲ್ ಬಂತು ಅಂದರೆ ನಷ್ಟ ಭರಿಸಲು ಕೂಡಲೆ ಹಣಕಟ ಬೇಕು ಎಂದು ಬ್ರೋಕರ್ಗಳು ಒತ್ತಾಯಿಸಿದ್ರು ಆದರೆ ಅವರ ಬಳಿ ಹಣವಿರಲಿಲ್ಲ.

ಸಾಲ ಕೊಡಲು ಬ್ಯಾಂಕುಗಳು ಇರಲಿಲ್ಲ ಅನಿವಾರ್ಯವಾಗಿ ಅವರು ತಮ್ಮ ಬೆಳ್ಳಿಯನ್ನ ಮಾರಾಟ ಮಾಡಬೇಕಾಯಿತು ಅಂದು ಬೆಳ್ಳಿಯ ಬೆಲೆ ಶೇಕಡ 50ರಷ್ಟು ಕುಸಿಯಿತ್ತು ಬಿಲಿನಿಯರ್ ಆಗಿದ್ದ ಹಂಟು ಸಹೋದರರು ಒಂದೇ ದಿನದಲ್ಲಿ ಭಿಕಾರಿಯಾದರು ದಂಡದ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಕಟ್ಟಿದ್ರು ಅವರ ಬೆಳ್ಳಿಯ ಸಾಮ್ರಾಜ್ಯ ಒಂದೇ ದಿನದಲ್ಲಿ ಕುಸಿದುಬಿತ್ತು 70ರ ದಶಕದ ಆರಂಭದಲ್ಲಿ ಹಂಟ್ ಬ್ರದರ್ಸ್ ಬೆಳ್ಳಿಯಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದಾಗ ಬೆಲೆ ಒಂದು ಅಂಸ್ಗೆ 2 ಡಾಲರ್ ಇತ್ತು 1979ರ ಹೊತ್ತಿಗೆ ಬೆಳ್ಳಿ ಒಂದು ಅಂಸ್ಗೆಆ ಡಾಲರ್ ಗೆ ಏರಿತು ಬಳಿಕ ಅದು 11 ಡಾಲರ್ 50 ಡಾಲರ್ ವರೆಗೂ ಹೋಯಿತು ಆದರೆ ಹೆಚ್ಚು ದಿನ ಈ ಸಕ್ಸಸ್ ಉಳಿಯಲಿಲ್ಲ ಹಂಟ್ ಬ್ರದರ್ಸ್ ದುರಾಸೆಗೆ ದೊಡ್ಡ ಪೆಟ್ಟೆ ಬಿತ್ತು ಅಪ್ಪ ಕಟ್ಟಿದ್ದ ಸಾಮ್ರಾಜ್ಯ ಬೀದಿಪಾಲು ದುರಾಸೆಗೆ ಬಿದ್ದು ಮಕಾಡೆ ಮಲಗಿದ ಅಂತಮ್ಮ ಇನ್ನು ಹಂಟ್ ಬ್ರದರ್ಸ್ ಇತಿಹಾಸವನ್ನ ಗಮನಿಸಿದರೆ ಹಂಟ್ ಬ್ರದರ್ ಸಂಪತ್ತು ಹೆರಾಲ್ಡ್ಸನ್ ಲಫಯಟ್ಟೆ ಹಂಟ್ನೊಂದಿಗೆ ಪ್ರಾರಂಭವಾಯಿತು.

ಹೆರಾಲ್ಡ್ಸನ್ ಲಫಯಟ್ಟೆ ಹಂಟ್ ಬಡ ಕುಟುಂಬದಲ್ಲಿ ಜನಿಸಿದ್ರು ಶಿಕ್ಷಣ ಪಡೆಯುವ ಸೌಲತ್ತು ಅವರ ಬಳಿ ಇರಲಿಲ್ಲ ತಮ್ಮ 22ನೇ ವಯಸ್ಸಿನಲ್ಲಿ ಅವರು ಹತ್ತಿ ಮತ್ತು ಹತ್ತಿ ತೋಟಗಳನ್ನ ಖರೀದಿಸಿ ಮಾರಾಟ ಮಾಡುವ ಉದ್ಯಮಿಯಾಗಿ ಯಶಸ್ಸನ್ನ ಕಂಡುಕೊಂಡವರು ಅವರ ಗಮನ ಶೀಘ್ರದಲ್ಲಿ ದೊಡ್ಡ ಮತ್ತು ವೇಗವಾಗಿ ಹಣಗಳಿಸುವ ಕಡೆ ಹೋಯಿತು ಹತ್ತಿಯಿಂದ ತೈಲಕ್ಕಿ ತಮ್ಮ ಫೋಕಸ್ ಅನ್ನ ಶಿಫ್ಟ್ ಮಾಡಿದರು ಅಲ್ಲಿಂದ ಹೆರಾಲ್ಡ್ಸನ್ ಟೆಕ್ಸಾಸ್ ನಲ್ಲಿ ದೊಡ್ಡದಾಗಿ ಬೆಳೆದರು ಬಿಲಿಯನ್ ಗಟ್ಟಲೆ ಡಾಲರ್ ಅನ್ನ ಸಂಗ್ರಹಿಸಿದ್ರು ಅವರ ನಿಧನದ ಬಳಿಕ ಹಂಟ್ ಬ್ರದರ್ಸ್ ಉದ್ಯಮವನ್ನೇ ಮುಂದುವರಿಸಿದರು ತಮ್ಮ ತಂದೆಯ ಹೆಜ್ಜಗಳನ್ನ ಹಂಟ್ ಬ್ರದರ್ಸ್ ಅನುಸರಿಸಿದ್ರು 1970ರ ದಶಕದಲ್ಲಿ ತೈಲಕ್ಕೆ ಬೇಡಿಕೆ ಹೆಚ್ಚಾಗಿದ್ದಕ್ಕೆ ಭರ್ಜರಿ ಯಶಸ್ಸನ್ನ ಕಂಡರು ಬಳಿಕ ಬೆಳ್ಳಿ ಕಡೆ ಮುಖ ಮಾಡಿ ಮಕಾಡೆ ಮಲಗಿದ್ದು ಈಗ ಇತಿಹಾಸ 2026 ರಲ್ಲಿ ಬೆಳ್ಳಿಯ ಕಥೆ ಏನು 160% ಏರಿಕೆ ಮತ್ತು 1980ರ ಭಯ ಈಗ ಪ್ರೆಸೆಂಟ್ ಸಿಚುವೇಷನ್ ಗೆ ಬರೋಣ 2026 ರಲ್ಲಿ ಬೆಳ್ಳಿ ಮಾರುಕಟ್ಟೆ ಮತ್ತು ಅದೇ ರೀತಿಯ ಲಕ್ಷಣಗಳನ್ನು ತೋರಿಸುತ್ತಿದೆ.

ಕಳೆದ ವರ್ಷ ಬೆಳ್ಳಿ ಬರೊಬ್ಬರಿ ಶೇಕಡ 160ರಷ್ಟು ರಿಟರ್ನ್ಸ್ ನೀಡಿದೆ ಬೆಲೆಗಳು ಆಕಾಶಕ್ಕೆ ಏರಿವೆ ಮಾರುಕಟ್ಟೆಯಲ್ಲಿ ಓವರ್ ಬಾಟ್ ಆಗಿದೆ 1980ರಂತೆಯೇ ಈಗಲೂ ಎಕ್ಸ್ಚೇಂಜ್ಗಳು ಮಾರ್ಜಿನ್ ಹಣವನ್ನ ಶೇಕಡ 25ರಷ್ಟು ಹೆಚ್ಚಿಸಿವೆ ಇದು ಹಂಟ್ ಬ್ರದರ್ಸ್ ಪತನಕ್ಕೆ ಕಾರಣವಾದ ನಡೆಗಳನ್ನ ಹೋಲುತ್ತದೆ ವಿಶ್ಲೇಷಕರ ಪ್ರಕಾರ ಇತಿಹಾಸದ ಪ್ರಕಾರ ಇಂತಹ ಬೃಹತ್ ರಯಾಲಿಯ ನಂತರ ಕನಿಷ್ಠ ಶೇಕಡ 30ರಷ್ಟು ಬೆಲೆಕುಸಿತ ಅಂದ್ರೆ ಕರೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ ಆದರೆ ತಜ್ಞರು ಹೇಳುವ ಪ್ರಕಾರ 2020ರ ಸನ್ನಿವೇಶಕ್ಕೂ 1980ಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ 1980 ರಲ್ಲಿ ಬೆಲೆ ಏರಿಕೆಗೆ ಕೇವಲ ಇಬ್ಬರು ವ್ಯಕ್ತಿಗಳ ಸ್ಪೆಕ್ಯುಲೇಷನ್ ಅಥವಾ ಜೂಜಾಟದಿಂದ ಆಗಿತ್ತು ಆದರೆ ಈಗ ಬೆಳ್ಳಿಯ ನೈಜ ಕೈಗಾರಿಕೆ ಬೇಡಿಕೆ ಇದೆ.

ಸೋಲಾರ್ ಪ್ಯಾನೆಲ್ ಎಲೆಕ್ಟ್ರಿಕ್ ವಾಹನಗಳು ಮತ್ತು ಎಐ ಸರ್ವರ್ಗಳಿಗೆ ಬೆಳ್ಳಿ ಅತ್ಯಗತ್ಯ ಜಗತ್ತಿನ ಶೇಕಡ 60ರಷ್ಟು ಬೆಳ್ಳಿ ಬೆಳಕೆ ಈ ಕೈಗಾರಿಕೆಗಳಿಂದಲೇ ಆಗುತ್ತಿದೆ ಆದ್ದರಿಂದ ಬೆಳ್ಳಿ ಈಗ ಗ್ರೀನ್ ಮೆಟಲ್ ಆಗಿ ಬದಲಾಗಿದೆ ಇನ್ವೆಸ್ಟರ್ಸ್ಗೆ ಹಂಟ್ ಬ್ರದರ್ಸ್ ಪಾಠ ಏನು ದುರಾಸೆ ಬೀಳಬೇಡಿ ಕಾದು ಹೂಡಿಕೆ ಮಾಡಿ 2025ರಲ್ಲಿ ಮಾರುಕಟ್ಟೆಯಲ್ಲಿ 160 ರಿಂದ 200 ಮಿಲಿಯನ್ ಅನ್ಸ್ ಬೆಳ್ಳಿಯ ಕೊರತೆ ಇತ್ತು ಇದು ಕೃತಕ ಅಭಾವವಲ್ಲ ನೈಜ ಅಭಾವ ಅಂದು ಕೇವಲ ಹಂಟ್ ಬ್ರದರ್ಸ್ ಮಾರ್ಕೆಟ್ನಲ್ಲಿದ್ದರು ಆದರೆ ಇಂದು ಜೆಪಿ ಮಾರ್ಗನ್ ಅಂತಹ ದೈತ್ಯ ಸಂಸ್ಥೆಗಳು ಫಿಸಿಕಲ್ ಬೆಳ್ಳಿಯನ್ನ ಶೇಖರಣೆ ಮಾಡಿಟ್ಟುಕೊಂಡಿವೆ ಇದು ಬೆಲೆಗೆ ಸ್ಥಿರತೆ ನೀಡಬಹುದು ಅಂದು ಹಂಟ್ ಬ್ರದರ್ ಸೋತಿದ್ದು ಲಿವರೇಜ್ ಅಥವಾ ಸಾಲದ ಹಣದಿಂದ ಟ್ರೇಡ್ ಮಾಡಿದಕ್ಕೆ ಇಂದಿನ ಹೂಡಿಕೆದಾರರಿಗೂ ಇದೇ ಪಾಠ ಬೆಲೆ 3 ಲಕ್ಷ ಆಗಿದೆ ಎಂದು ಸಾಲ ಮಾಡಿ ಅಥವಾ ಫ್ಯೂಚರ್ ಮಾರುಕಟ್ಟೆಯಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಂಡರೆ ಮಾರ್ಚ್ 27 1980ರ ಇತಿಹಾಸ ಮರುಕಳಿಸಬಹುದು.

ಮಾರುಕಟ್ಟೆಯಲ್ಲಿ ಏರಿಳಿತ ಸಹಜ ಆದರೆ ಫಂಡಮೆಂಟಲ್ಸ್ ಅಥವಾ ಮೂಲಭೂತ ಅಂಶಗಳು ಗಟ್ಟಿಯಾಗಿದ್ದಾಗ ದೀರ್ಘಾವಧಿ ಹುಡುಕಿ ಸುರಕ್ಷಿತವಾಗಿರುತ್ತದೆ ಆದರೆ ಮಾರ್ಕೆಟ್ ನೋಡಿ ಏನಾಗುತ್ತೋ ಯಾರಿಗೂ ಗೊತ್ತಿರಲ್ಲ ಒಟ್ಟಿನಲ್ಲಿ 1980ರ ಸಿಲ್ವರ್ ಥರ್ಸ್ಡೇ ಹಾಗೂ ಹಂಟ್ ಬ್ರದರ್ಸ್ ಕಹಾನಿ ನಮಗೆ ಕಲಿಸುವ ಪಾಠ ಏನಂದ್ರೆ ಮಾರ್ಕೆಟ್ನ್ನ ಯಾರಿಗೂ ಶಾಶ್ವತವಾಗಿ ಕಾರ್ನರ್ ಮಾಡಲು ಸಾಧ್ಯವಿಲ್ಲ ದುರಾಸೆ ಮತ್ತು ಮಿತಿಮೀರಿದ ಸಾಲ ಅಂತಿಮವಾಗಿ ವಿನಾಶಕ್ಕೆ ಕಾರಣವಾಗುತ್ತದೆ 2026ರ ಈ ಬುಲ್ ರನ್ ನೈಜ ಬೇಡಿಕೆಯ ಮೇಲೆ ನಿಂತಿದ್ದರು ಹಠತ್ ಕುಸಿತದ ಬಗ್ಗೆ ಎಚ್ಚರವಿರಲಿ ಬೆಳ್ಳಿ ಮಿಂಚುತ್ತಿದೆ ನಿಜ ಆದರೆ ಆ ಮಿಂಚಿನ ಹಿಂದೆ ಗುಡುಗು ಕೂಡ ಇರಬಹುದು ಎಂಬುದನ್ನ ಮರೆಯದಿರಿ ನೋಡಿ ನಿರ್ಧಾರ ತೆಗೆದುಕೊಳ್ಳಿ ಇದಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments