Thursday, November 20, 2025
HomeLatest Newsರಸ್ತೆಯೇ ವಿದ್ಯುತ್ ಮೂಲ: ಭಾರತದಲ್ಲಿ ಸೌಲಭ್ಯಪೂರ್ಣ ಸೌರ ಹೈವೇಗಳ ಉದಯ!

ರಸ್ತೆಯೇ ವಿದ್ಯುತ್ ಮೂಲ: ಭಾರತದಲ್ಲಿ ಸೌಲಭ್ಯಪೂರ್ಣ ಸೌರ ಹೈವೇಗಳ ಉದಯ!

ಏರುತ್ತಲೆ ಇರುವ ಪೆಟ್ರೋಲ್ ದರ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ ಪೆಟ್ರೋಲ್ ಬದಲು ನೀರು ಹಾಕಿ ವಾಹನ ಓಡಿಸುವಂತಿದ್ದರೆ ಎಷ್ಟು ಒಳ್ಳೆಯದು ಅಲ್ವಾ ಅನ್ನುವ ಯೋಚನೆ ಮಾಡದೆ ಉಳಿದವರು ಯಾರು ಇಲ್ಲ ಬಿಡಿ ಅಂತಹ ಅನ್ವೇಷಣೆಗಳು ಕೈಗೆಟಕುವ ಹಾಗಿಲ್ಲ ಪೆಟ್ರೋಲ್ ಡೀಸಲ್ ವಾಹನಗಳ ಬದಲಿಗೆ ಪರ್ಯಾಯವಾಗಿ ಎಲೆಕ್ಟ್ರಿಕಲ್ ವಾಹನಗಳು ಲಗ್ಗೆ ಇಟ್ಟಿವೆ ಆದರೂ ನಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಚಾರ್ಜಿಂಗ್ ಸ್ಟೇಷನ್ ಇಲ್ದಿದ್ರೆ ಏನಾಗ್ತಿತ್ತು ಚಲಿಸುವಾಗ ರಸ್ತೆಯೇ ವಾಹನವನ್ನ ಚಾರ್ಜ್ ಮಾಡಿ ಕೊಡೋಕೆ ಸಾಧ್ಯವಾದರೆ ಅನುಕೂಲ ಆಗ್ತಿತ್ತು ಅಲ್ವಾ ಈ ಪ್ರಶ್ನೆಗಳು ಫ್ಯಾಂಟಸಿಯಾಗಿ ಅದೆಷ್ಟೋ ಮಂದಿಯನ್ನ ಕಾಡಿದೆ ಆದರೆ ನಿಜವಾಗಿಯೂ ಈ ವ್ಯವಸ್ಥೆ ಭಾರತದಲ್ಲಿ ಜಾರಿಯಾಗುತ್ತಿದೆ ತಮಾಷೆಯಲ್ಲ ಈ ಮೂಲಕ ಜಪಾನ್ ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ಪಡುವಂತೆ ಮಾಡಿದೆ ಭಾರತವು ಲಭ್ಯವಿರುವ ಎಲ್ಲಾ ಸೌಕರ್ಯಗಳನ್ನ ಸಮರ್ಥವಾಗಿ ಬಳಸ್ತಾ ಇದೆ. ನೈಸರ್ಗಿಕ ಸಂಪನ್ಮೂಲವಾದ ಸೌರಶಕ್ತಿಯನ್ನ ಬಳಸಿಕೊಂಡು ಇತ್ತೀಚಿಗೆ ಹೊಸ ಯೋಜನೆ ಮಾಡಿದೆ. ಸೌರಶಕ್ತಿ ಮೂಲಕವೇ ವಾಹನಗಳು ಚಲಿಸುವಂತೆ ಹೆದ್ದಾರಿ ನಿರ್ಮಿಸಿದೆ.

ಹಾಗಾದರೆ ಪರಿಸರ ಅನುರಾಗಿ ಸೌರಶಕ್ತಿ ಚಾಲಿತ ಹೆದ್ದಾರಿ ಹೇಗಿರುತ್ತೆ ಮೊದಲಿಗೆ ಅದನ್ನ ಎಲ್ಲಿ ಪರಿಚಯಿಸಲಾಯಿತು ಭಾರತದಲ್ಲಿ ಅನುಷ್ಠಾನವಾಗುವ ಹೊಸ ಪರಿಕಲ್ಪನೆ ಸೌರಶಕ್ತಿ ಹೆದ್ದಾರಿಯಿಂದ ಆಗುವ ಪ್ರಯೋಜನಗಳು ಯಾವುವು ಸ್ನೇಹಿತರೆ ಇವೆಲ್ಲ ಪ್ರಶ್ನೆಗಳಿಗೂ ನಾವು ಇವತ್ತಿನ ಈ ವಿಡಿಯೋದಲ್ಲಿ ಉತ್ತರ ಕೊಡ್ತೀವಿ ನೋಡಿ ನೈಸರ್ಗಿಕ ಸಂಪನ್ಮೂಲಗಳಿಂದ ಪ್ರಯೋಜನಗಳನ್ನ ಪಡೆಯುವಲ್ಲಿ ಭಾರತ ಎತ್ತಿದ ಕೈ ಸೂರ್ಯನ ಕಿರಣಗಳನ್ನ ವಿವಿಧ ತಂತ್ರಜ್ಞಾನಗಳನ್ನ ಬಳಸುತ್ತಾ ಸೌರಶಕ್ತಿಯನ್ನಾಗಿಸಿ ಬಳಕೆ ಮಾಡುವುದರಲ್ಲಿ ಭಾರತ ಪಳಗಿದೆ ವಿಶ್ವದ ಮೂರನೇ ಅತಿ ದೊಡ್ಡ ಸೌರ ಮತ್ತು ಪವನ ವಿದ್ಯುತ್ ಉತ್ಪಾದಕ ದೇಶವೆನ್ನುವ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ ಈ ಸೌರಶಕ್ತಿಯನ್ನ ವಿದ್ಯುತ್ಾಗಿ ಮಾತ್ರವಲ್ಲದೆ ನೀರಾವರಿ ಕ್ಷೇತ್ರದಲ್ಲಿ ವಿಮಾನ ನಿಲ್ದಾಣಗಳಲ್ಲೂ ಬಳಸ್ತಾ ಇದೆ ಇವೆಲ್ಲವನ್ನ ಹೊರತುಪಡಿಸಿ ಭಾರತ ಸೌರಶಕ್ತಿಯಿಂದ ಹೆದ್ದಾರಿ ನಿರ್ಮಾಣಕ್ಕೆ ತೊಡಗಿಬಿಟ್ಟಿದೆ ಸ್ನೇಹಿತರೆ ಈ ಸೌರಶಕ್ತಿಯ ಹೆದ್ದಾರಿ ಎನ್ನುವುದು ಹೊಸ ವಿಷಯವಾದರೂ ಸುಲಭ ವಿಧಾನಗಳನ್ನ ಹೊಂದಿರುತ್ತೆ ಮೊದಲಿಗೆ ಹೆದ್ದಾರಿಯ ಬದಿಗಳಲ್ಲಿ ಅಥವಾ ಅದರ ಮೇಲ್ಭಾಗದಲ್ಲಿ ಸೌರ ಫಲಕಗಳನ್ನ ಸ್ಥಾಪಿಸುತ್ತೆ ಸೂರ್ಯನ ಬೆಳಕಿನ ಫೋಟಾನ್ಗಳು ಸೌರ ಫಲಕಗಳಲ್ಲಿರುವ ಸಿಲಿಕಾನ್ ಅಥವಾ ಇತರೆ ಅರೆವಾಹಕಗಳ ಮೇಲೆ ಬಿದ್ದಾಗ ಎಲೆಕ್ಟ್ರಾನ್ಗಳು ಬಿಡುಗಡೆಯಾಗುತ್ತವೆ ಈ ಎಲೆಕ್ಟ್ರಾನ್ಗಳು ಒಂದು ದಿಕ್ಕಿನಲ್ಲಿ ಹರಿಯೋದರಿಂದ ವಿದ್ಯುತ್ ಪ್ರವಾಹ ಉಂಟಾಗುತ್ತೆ ಸೌರ ಫಲಕಗಳಿಂದ ಉತ್ಪತ್ತಿಯಾಗುವ ಡೈರೆಕ್ಟ್ ಕರೆಂಟ್ನ್ನ ಇನ್ವರ್ಟರ್ ಬಳಸಿ ಪರ್ಯಾಯ ಪ್ರವಾಹ ಕೆ ಪರಿವರ್ತಿಸಲಾಗುತ್ತೆ ಈ ವಿದ್ಯುತ್ನ್ನ ಸ್ಥಳೀಯ ವಿದ್ಯುತ್ ಜಾಲಕ್ಕೆ ಕಳಿಸಲಾಗುತ್ತದೆ ಅಥವಾ ಹೆದ್ದಾರಿಯಲ್ಲಿ ವಿದ್ಯುತ್ ವಾಹನಗಳನ್ನ ಚಾರ್ಜ್ ಮಾಡಲು ಬಳಸಲಾಗುವ ವ್ಯವಸ್ಥೆಯನ್ನ ರೂಪಗೊಳಿಸಲಾಗುತ್ತಿದೆ.

ಈ ರೀತಿಯಾಗಿ ಸೌರಶಕ್ತಿ ಹೆದ್ದಾರಿ ವ್ಯವಸ್ಥೆ ರೂಪಗೊಂಡಿದೆ ಈ ರಸ್ತೆಗಳು ಎರಡು ಪ್ರಮುಖ ತಂತ್ರಜ್ಞಾನಗಳನ್ನ ಬಳಸುತ್ತವೆ ಮೊದಲನೆದು ಯಾವುದು ಅಂದ್ರೆ ಓವರ್ಹೆಡ್ ವೈರ್ ಸಿಸ್ಟಮ್ ಇಲ್ಲಿ ರಸ್ತೆಯ ಮೇಲೆ ವಿದ್ಯುತ್ ತಂತಿಗಳನ್ನ ಅಳವಡಿಸಲಾಗಿದೆ ಪ್ಯಾಂಟೋಗ್ರಾಫ್ ಗಳನ್ನ ಹೊಂದಿರುವ ವಿಶೇಷ ವಾಹನಗಳು ಚಲಿಸುವಾಗ ಈ ತಂತಿಗಳಿಗೆ ಸಂಪರ್ಕಗೊಳ್ಳುತ್ತವೆ ವಾಹನವನ್ನ ನಿಲ್ಲಿಸದೆಯೇ ತಕ್ಷಣವೇ ಚಾರ್ಜಿಂಗ್ ಆಗುವ ವ್ಯವಸ್ಥೆ ಇದಾಗಿದೆ ಎರಡನೆಯದು ಯಾವುದು ಅಂದ್ರೆ ನೆಲಮಟ್ಟದ ವಿದ್ಯುತ್ ಸರಬರಾಜು ಈ ವ್ಯವಸ್ಥೆಯಲ್ಲಿ ರಸ್ತೆಯ ಕೆಳಗೆ ವಿದ್ಯುತ್ ಹಳಿಗಳನ್ನ ಅಳವಡಿಸಲಾಗಿದೆ ವಿದ್ಯುತ್ ವಾಹನಗಳು ಅವುಗಳ ಮೇಲೆ ಹಾದು ಹೋದಾಗ ಚಾರ್ಜ್ ಆಗುತ್ತದೆ ಇಲ್ಲಿ ವೈರ್ ಮೂಲಕ ಅಥವಾ ಹಸ್ತಚಾಲಿತ ಚಾರ್ಜಿಂಗ್ನ ಅಗತ್ಯವಿರೋದಿಲ್ಲ ಮೊಬೈಲ್ ಚಾರ್ಜ್ಗಳನ್ನಇಟ್ಟು ಬಳಕೆ ಮಾಡ್ತೀವಲ್ಲ ಅದೇ ರೀತಿ ವ್ಯವಸ್ಥೆ ಇದು ಇಷ್ಟೊಳ್ಳೆ ವ್ಯವಸ್ಥೆಯನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಅನುಷ್ಠಾನ ಗೊಳಿಸಿದವರು ಯಾರು ಈ ಕನಸಿನ ಯೋಜನೆ ಹಿಂದೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರೆ ಇದ್ದಾರೆ ಅದರ ಜೊತೆಗೆ ಮೋದಿಯ ಕನಸು ಕೂಡ ಇದು ಇವರಿಬ್ಬರು ಜಂಟಿಯಾಗಿ ತೆಗೆದುಕೊಂಡ ಈ ನಿರ್ಧಾರ ದೂರದೃಷ್ಟಿತ್ವ ಹೊಂದಿದೆ ಸೌರಶಕ್ತಿಯ ರಸ್ತೆಗಳನ್ನ ಸಾರಿಗೆಗಾಗಿ ಮಾತ್ರವಲ್ಲದೆ ಶಕ್ತಿಯ ಮೂಲವಾಗಿಯೂ ಪರಿವರ್ತಿಸುವ ಗುರಿಯನ್ನ ಹೊಂದಿದ್ದಾರೆ ಈ ಕನಸಿನ ಮೊದಲ ಹಂತವು ಈಗಾಗಲೇ ನಿರ್ಮಾಣ ಹಂತದಲ್ಲಿದೆ ದೆಹಲಿಯಿಂದ ಜೈಪುರಕ್ಕೆ ಹೆದ್ದಾರಿ ಮತ್ತು ದೆಹಲಿಯಿಂದ ಆಗ್ರಾಗೆ ಹೆದ್ದಾರಿಯು ನಿರ್ಮಾಣಗೊಳ್ಳುತ್ತಿದೆ. ಸ್ವೀಡನ್ ನಲ್ಲಿ ಈಗಾಗಲೇ ಇರುವ 109 ಕಿಲೋಮೀಟರ್ ಈ ಹೆದ್ದಾರಿಯನ್ನ ಹಿಂದಿಕ್ಕಿ ವಿಶ್ವದ ಅತಿ ಉದ್ದದ ವಿದ್ಯುತ್ ಹೆದ್ದಾರಿ ಭಾರತದ್ದಾಗಲಿದೆ. ಹೌದು ಈ ಪಟ್ಟ ಭಾರತದ ಮುಡಿಗೇರಲಿದೆ. ಈ ಸಂಪೂರ್ಣ ಯೋಜನೆ ಶೇಕಡನೂರಷ್ಟು ಭಾರತೀಯ ತಂತ್ರಜ್ಞಾನದಿಂದ ನಿರ್ಮಾಣವಾಗ್ತಾ ಇದೆ.

ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಸೀಮಿತವಾದ ವಿದೇಶಿ ವಿದ್ಯುತ್ ವಾಹನ ತಂತ್ರಜ್ಞಾನಕ್ಕಿಂತ ಭಿನ್ನವಾಗಿ ಭಾರತದ ವಿದ್ಯುತ್ ಹೆದ್ದಾರಿಗಳು ಕಾರ್ಯ ನಿರ್ವಹಿಸಲಿದೆ. ಜನಸಾಮಾನ್ಯರ ಕೈಗೆಟಕುವಂತೆ ನಿಯಮಗಳನ್ನ ರೂಪಿಸಲಾಗಿದೆ. ದೀರ್ಘಕಾಲ ಬಾಳಿಕೆ ಬರುವ ಕಚ್ಚಾ ವಸ್ತುಗಳನ್ನ ಪರಿಶೀಲಿಸಿ ಆಯ್ದುಕೊಳ್ಳಲಾಗಿದೆ. ಜೊತೆಗೆ ಭವಿಷ್ಯದ ಪೀಳಿಗೆಗೆ ಪರಿಸರ ಸ್ನೇಹಿ ಆಗಿರುವಂತಹ ಯೋಜನೆ ಕೈಗೊಳ್ಳಲಾಗಿದೆ. ಸ್ನೇಹಿತರೆ ದೆಹಲಿಯಿಂದ ಜೈಪುರಕ್ಕೆ ಹೆದ್ದಾರಿ ಮತ್ತು ದೆಹಲಿಯಿಂದ ಆಗ್ರಾಗೆ ಹೆದ್ದಾರಿಯು ಆರಂಭದ ಹೆದ್ದಾರಿ ಯೋಜನೆ. ಆರಂಭದಲ್ಲೇ ಅಂತ್ಯವನ್ನ ಕಾಣದೆ ಇನ್ನಷ್ಟು ವಿಸ್ತೃತಗೊಂಡ ಯೋಜನೆಗಳಿವೆ. ಮುಂಬರುವ ವರ್ಷಗಳಲ್ಲಿ ಸರ್ಕಾರವು ದೊಡ್ಡ ಯೋಜನೆಗಳನ್ನ ಹೊಂದಿದೆ. 5000 ಕಿಲೋಮೀಟಗೂ ಹೆಚ್ಚು ಸಾಂಪ್ರದಾಯಿಕ ಹೆದ್ದಾರಿಗಳನ್ನ ವಿದ್ಯುತ್ ಹೆದ್ದಾರಿಗಳನ್ನಾಗಿಸುವ ಗುರಿಯನ್ನ ಹೊಂದಿದೆ. ಹೆದ್ದಾರಿಯ ಎರಡು ಬದಿಗಳನ್ನ ಹಸಿರಾಗಿಸಲು ಸಾಲು ಮರಗಳನ್ನ ನೆಡುವ ಯೋಜನೆ ಇದೆ. ಕರ್ನಾಟಕದ ಸಾಲುಮರದ ತಿಮ್ಮಕ್ಕನ ಕಲ್ಪನೆಯನ್ನ ಕೇಂದ್ರ ಸರ್ಕಾರ ಇಲ್ಲಿ ಪರಿಗಣಿಸಿದೆ. ಹಸಿರು ಪರಿಸರಕ್ಕಾಗಿ ಈ ರಸ್ತೆಗಳ ಉದ್ದಕ್ಕೂಮೂರು ಕೋಟಿಗೂ ಹೆಚ್ಚು ಮರಗಳನ್ನ ನೆಡುವ ಸಂಕಲ್ಪ ತೊಟ್ಟಿದೆ. ಸ್ನೇಹಿತರೆ ಸೌರಶಕ್ತಿಯ ಬಳಕೆಯಿಂದಾಗಿ ಮುಗಿಯುವ ನೈಸರ್ಗಿಕ ಸಂಪನ್ಮೂಲವಾದ ಇಂಧನದ ಉಳಿತಾಯ ಸಾಧ್ಯ ಇದರಿಂದ ಪ್ರತಿವರ್ಷ ಅಂದಾಜು 30 ಲಕ್ಷ ಕೋಟಿ ಲೀಟರ್ ಇಂಧನ ಉಳಿತಾಯವಾಗುತ್ತೆ ಎಂದು ಲೆಕ್ಕಾಚಾರ ಹಾಕಲಾಗಿದೆ ಇದೆಲ್ಲವೂ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಮಿಷನ್ನ ಭಾಗವಾಗಿದ್ದು 2025ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಸೌರಶಕ್ತಿ ಹೆದ್ದಾರಿ ಯೋಜನೆಯು ವಾಹನ ಚಾಲಕರಿಗೆ ಕೂಡ ಸಂತಸವನ್ನ ತಂದಿದೆ ದೂರದೂರ ಪ್ರಯಾಣಿ ಸುವ ಟ್ರಕ್ಗಳು ಬಸ್ಗಳಿಗೆ ದೂರದ ಪ್ರಯಾಣ ಹಾಯಾಗಿರುತ್ತೆ ಯಾವುದೇ ಅಡಚನೆಗಳಿಲ್ಲದೆ ವೇಗವಾಗಿ ನಿರ್ದೇಶಿತ ಪ್ರದೇಶಕ್ಕೆ ತಲುಪಲು ಸಾಧ್ಯವಾಗುತ್ತೆ.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡಕರಿ ಅವರು ಮೊದಲಿಗೆ ಆರಂಭಿಸುವ ಹೆದ್ದಾರಿ ಯೋಜನೆಯು ಬಸ್ಗಳಿಗೆ ಸೀಮಿತವಾಗಿರುತ್ತದೆ ನಂತರದ ಹಂತಗಳಲ್ಲಿ ಟ್ರಕ್ ಹಾಗೂ ಉಳಿದ ವಾಹನಗಳಿಗೆ ಚಲಿಸಲು ಅವಕಾಶ ಕಲ್ಪಿಸುತ್ತೇವೆ ಎಂದಿದ್ದಾರೆ ಹಾಗಾಗಿ ಚಾಲಕರಲ್ಲೂ ಶೀಘ್ರ ಪ್ರಯಾಣಕ್ಕೆ ಸೌರಶಕ್ತಿ ರಸ್ತೆ ಒಳ್ಳೆಯದು ಅನ್ನುವ ಭಾವನೆ ಬಂದಿದೆ ಇದರ ಜೊತೆಗೆ ಚಾಲನೆ ಮಾಡುವಾಗಲೇ ಚಾರ್ಜ್ ಮಾಡುವ ವ್ಯವಸ್ಥೆ ಇರೋದರಿಂದ ಸಮಯ ವ್ಯರ್ಥವಾಗುವುದು ಕಡಿಮೆಯಾಗುತ್ತೆ ಇದರಿಂದ ಇಂಧನ ವೆಚ್ಚದಲ್ಲಿ ಚಾಲಕರಿಗೆ ಬಾರಿ ಉಳಿತಾಯವಾಗುತ್ತೆ ಈ ರೀತಿ ಸಮಯ ಉಳಿತಾಯದ ಜೊತೆಗೆ ಹಣದ ಉಳಿತಾಯ ಮಾರ್ಗವು ಇದಾಗಿದೆ ಇಷ್ಟೇ ಅಲ್ಲ ಈ ತಂತ್ರಜ್ಞಾನವು ವಾಹನಗಳಿಂದ ಹೊಗೆ ಹೊರ ಸೂಸುವಿಕೆಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತೆ ಕಾಡುತ್ತಿರುವ ವಾಯು ಮಾಲಿನ್ಯದ ಸಮಸ್ಯೆ ಬಗೆಹರಿಸಲು ಸೌರಶಕ್ತಿ ಹೆದ್ದಾರಿ ಪರಿಹಾರವಾಗಬಹುದೇನೋ ವರ್ಷದಿಂದ ವರ್ಷಕ್ಕೆ ಅದಗಿಡುತ್ತಾ ಇರುವ ನಗರದ ಮಾಲಿನ್ಯ ನಿಯಂತ್ರಣ ಇದರಿಂದ ಸಾಧ್ಯವಾಗಬಹುದು ಪ್ರತಿವರ್ಷವೂ ಗಂಭೀರ ರೂಪ ತಾಳುವ ದೆಹಲಿಯ ಮಾಲಿನ್ಯಕ್ಕೆ ಇದೊಂದು ಸೂಕ್ತ ವ್ಯವಸ್ಥೆ ಆಗಬಹುದು ಅನ್ನುವ ಭರವಸೆ ಮೂಡ್ತಾ ಇದೆ ಸೌರಶಕ್ತಿ ಹೆದ್ದಾರಿಯಿಂದಾಗಿ ಮಾಲಿನ್ಯ ಕಡಿಮೆಯಾಗಿ ದೇಶದ ಜನರ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ತಂತ್ರಜ್ಞಾನವು ಅಭಿವೃದ್ಧಿಗೊಳ್ಳುತ್ತದೆ ಇಂಧನಗಳಿಗಾಗಿ ಇತರೇ ದೇಶಗಳನ್ನ ಅವಲಂಬನೆಯಾಗುವುದು ತಪ್ಪುತ್ತೆ ಸ್ವಾಭಿಮಾನಿ ಭಾರತ ಮತ್ತಷ್ಟು ಆತ್ಮನಿರ್ಭರವಾಗಲು ಸೌರಶಕ್ತಿ ಹೆದ್ದಾರಿಗಳು ಸಹಕರಿಸುವುದರಲ್ಲಿ ಯಾವುದೇ ಸಂಶಯ ಬೇಡವೇ ಬೇಡ ಸ್ನೇಹಿತರೆ ಸೌರಶಕ್ತಿ ಹೆದ್ದಾರಿ ಯೋಜನೆಯು ಕೆಲವು ಸಮಸ್ಯೆಗಳನ್ನ ಕೂಡ ಒಳಗೊಂಡಿದೆ ಸೌರಫಲಕ ವ್ಯವಸ್ಥೆಗಳನ್ನ ಅಳವಡಿಸುವ ಆರಂಭಿಕ ವೆಚ್ಚವು ತುಂಬಾ ಹೆಚ್ಚಾಗಿರುತ್ತೆ ಮತ್ತು ಈ ಹೂಡಿಕೆ ಮರಳಿ ಪಡೆಯಲು ಬಹಳ ವರ್ಷಗಳೇ ಬೇಕಾಗುತ್ತೆ ಹಾಗಾಗಿ ಪ್ರಾರಂಭದಲ್ಲಿ ಈ ಯೋಜನೆಯ ಮುಖಾಂತರ ಲಾಭ ಗಳಿಸುವುದು ಅಸಾಧ್ಯ ಇಷ್ಟು ಮಾತ್ರವಲ್ಲದೆ ಸೌರ ಫಲಕಗಳು ಸೂರ್ಯನ ಬೆಳಕಿನ ಮೇಲೆ ಅವಲಂಬಿತವಾಗಿರುತ್ತೆ ಮೋಡಕವಿದ ದಿನಗಳು ಚಳಿಗಾಲ ಅಥವಾ ಕಡಿಮೆ ಸೂರ್ಯನ ಬೆಳಕು ಇರುವ ಪ್ರದೇಶಗಳಲ್ಲಿ ಶಕ್ತಿಯ ಉತ್ಪಾದನೆ ಕಡಿಮೆಯಾಗುತ್ತೆ ಪರ್ಯಾಯವಾಗಿ ಯಾವ ರೀತಿಯ ಉಪಾಯವನ್ನ ಸರ್ಕಾರ ಹುಡುಕಿದೆ ಅನ್ನೋದು ಇನ್ನು ಕೂಡ ತಿಳಿದಿಲ್ಲ ಹಾಗಾಗಿ ಜನರಲ್ಲಿ ಈ ಬಗ್ಗೆ ಗೊಂದಲ ಮೂಡಿದೆ ರಾತ್ರಿಯ ಸಮಯದಲ್ಲಿ ಅಥವಾ ಮೋಡ ಕವಿದಾಗ ಬಳಕೆಯಾಗುವ ಶಕ್ತಿಯನ್ನ ಸಂಗ್ರಹಿಸಲು ದೊಡ್ಡ ಬ್ಯಾಟರಿಗಳ ಅಥವಾ ಶಕ್ತಿ ಶೇಕರಣ ವ್ಯವಸ್ಥೆಗಳನ್ನ ನಿರ್ಮಿಸುವ ಅಗತ್ಯ ಖಂಡಿತ ಇದೆ ಇದರ ವೆಚ್ಚ ದುಬಾರಿಯಾಗಿರುತ್ತೆ ಹಾಗಾಗಿ ಸೌರಶಕ್ತಿ ಹೆದ್ದಾರಿ ಊಹೆ ಹೇಗೆ ನಿಲುಕುವಷ್ಟು ಸುಲಭವಾಗಿಲ್ಲ.

ಸೌರ ಫಲಕಗಳನ್ನ ಅಳವಡಿಸಲು ದೊಡ್ಡ ಪ್ರದೇಶದ ಅಗತ್ಯವಿರುತ್ತೆ. ಇದು ಎಲ್ಲಾ ಸ್ಥಳಗಳಿಗೆ ಸಾಧ್ಯವಾಗುವುದಿಲ್ಲ. ಸೌರ ಫಲಕಗಳನ್ನ ಅಳವಡಿಸಲು ಅನುಕೂಲಕರವಾದ ಜಾಗಗಳನ್ನ ಹುಡುಕುವ ವ್ಯವಧಾನ ಬೇಕಾಗುತ್ತೆ. ಒಂದುವೇಳೆ ಅಳವಡಿಸಿದ ಫಲಕಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಇದ್ದರೆ ನಿಯಮಿತ ನಿರ್ವಹಣೆ ಹಾಗೂ ದುರಸ್ತಿ ಅಗತ್ಯವಿರುತ್ತದೆ ಇದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತದೆ ಪರ್ಯಾಯ ವ್ಯವಸ್ಥೆ ಶೀಘ್ರವಾಗಿ ನೀಡಬೇಕಾಗುತ್ತೆ ದೊಡ್ಡ ಸೌರ ಕೇಂದ್ರಗಳನ್ನ ವಿದ್ಯುತ್ ಗ್ರಿಡ್ಗಳಿಗೆ ಸಂಪರ್ಕಿಸಲು ದುಬಾರಿ ಟ್ರಾನ್ಸ್ಮಿಷನ್ ಲೈನ್ಗಳು ಬೇಕಾಗುತ್ತೆ ಇವೆಲ್ಲವನ್ನ ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಸೌರಶಕ್ತಿ ಹೆದ್ದಾರಿ ಯಶಸ್ಸು ಪಡೆಯುವುದಕ್ಕೆ ಸಾಧ್ಯ ಭಾರತ ತಂತ್ರಜ್ಞಾನದಲ್ಲಿ ಅನಾದಿ ಕಾಲದಿಂದ ಪಳಗಿದ ರಾಷ್ಟ್ರ ಹಾಗಾಗಿ ಸೌರಶಕ್ತಿ ಹೆದ್ದಾರಿಯಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನ ಹಿಮ್ಮೆಟ್ಟುದರಲ್ಲಿ ಸಂಶಯವಿಲ್ಲ ದೇಶದ ಜನರಿಗೆ ಉತ್ತಮ ವ್ಯವಸ್ಥೆಯನ್ನ ಬಳುವಳಿಯಾಗಿ ಖಂಡಿತ ನೀಡುತ್ತದೆ ಎನ್ನುವ ಭರವಸೆ ಭಾರತೀಯರಲ್ಲಿದೆ ಸ್ನೇಹಿತರೆ ನಾವಿನ್ಯತೆಯು ಎಂದಿಗೂ ಕಾಸ್ಟ್ಲಿಯಾಗಿ ಇರಲ್ಲ ಅಂತ ಭಾರತ ಸೌರಶಕ್ತಿ ಅಳವಡಿಸುವ ಮೂಲಕ ಸಾಬಿತು ಪಡಿಸುವಂತೆ ಬಾಸವಾಗುತ್ತಿದೆ ಸ್ಮಾರ್ಟ್ ಯೋಜನೆಯ ಮೂಲಕ ಸ್ಥಳೀಯ ತಂತ್ರಜ್ಞಾನಗಳ ಸದ್ಬಳಕೆಯಾಗ್ತಾ ಇದೆ ಇನ್ನೇನು ಶೀಘ್ರವೇ ಮುಗಿಯುವ ಸಂಪನ್ಮೂಲಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನ ಬಳಸ್ತಾ ಇದೆ ಈ ಮೂಲಕ ಪ್ರಪಂಚಕ್ಕೆ ಸಂದೇಶವನ್ನ ನೀಡೋದಕ್ಕೆ ಭಾರತ ಮುಂದಾಗಿದೆ ಫ್ಯಾಂಟಸಿ ಆಗಿರುವ ಕಲ್ಪನೆ ಕಾರ್ಯಗತಗೊಳ್ಳುತ್ತಿರುವುದು ಹೆಮ್ಮೆ ಅಲ್ವಾ ಇವೆಲ್ಲ ಭಾರತ ಬಲವರ್ಧನೆ ಗೊಳ್ಳುತ್ತಾ ಇರುವ ಬಗ್ಗೆ ಸೂಕ್ಷ್ಮ ಸಂದೇಶಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments