Monday, September 29, 2025
HomeLatest Newsಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಕನ್ಜೆಷನ್ ಟ್ಯಾಕ್ಸ್: ಸಿಂಗಲ್ ಡ್ರೈವರ್ಸ್‌ಗೆ ಸಿದ್ದರಾಮಯ್ಯ ಶಾಕ್!

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಕನ್ಜೆಷನ್ ಟ್ಯಾಕ್ಸ್: ಸಿಂಗಲ್ ಡ್ರೈವರ್ಸ್‌ಗೆ ಸಿದ್ದರಾಮಯ್ಯ ಶಾಕ್!

ನೀವೇನಾದ್ರೂ ಇನ್ಮೇಲೆ ಕಾರ್ನಲ್ಲಿ ಒಬ್ಬೊಬ್ಬರೇ ಓಡಾಡ್ತಿದ್ದರೆ ಸರ್ಕಾರಕ್ಕೆ ಸಾವಿರಾರ ರೂಪಾಯಿ ದಂಡ ಅಥವಾ ಟ್ಯಾಕ್ಸ್ ಕಟ್ಟಬೇಕಾಗಿ ಬರಬಹುದು ಅಂತ ಹೊಸ ನಿಯಮ ತರೋಕೆ ರಾಜ್ಯ ಸರ್ಕಾರ ನೋಡ್ತಾ ಇದೆ ಬೆಂಗಳೂರು ಟ್ರಾಫಿಕ್ ವಿಚಾರದಲ್ಲಿ ದಿನಬೆಳಗಾದ್ರೆ ಮಂಗಳಾರತಿ ಮಾಡಿಸಿಕೊಳ್ತಿರೋದರಿಂದ ಸಿದ್ದು ಸರ್ಕಾರ ಇಂತ ಸರ್ಕಸ್ ಮಾಡೋಕೆ ಹೊರಟಿದೆ ಕಂಜಷನ್ ಟ್ಯಾಕ್ಸ್ ವಿಧಿಸೋಕೆ ನೋಡ್ತಾ ಇದೆ ಕಾರ್ನಲ್ಲಿ ಸಿಂಗಲ್ ಆಗಿ ಓಡಾಡೋರು ಹೆಚ್ಚುವರಿ ಟ್ಯಾಕ್ಸ್ ಕಟ್ಟಬೇಕಾಗುತ್ತೆ ಸುಮಾರು ಒಂಬತ್ತು ರಸ್ತೆಗಳಲ್ಲಿ ಓಡಾಡಿದ್ರೆ ಟ್ಯಾಕ್ಸ್ ಬೀಳುತ್ತೆ ಅಂತ ಹೇಳ್ತಾ ಇದ್ದಾರೆ ಆರಸ್ ರಸ್ತೆಗಳು ಯಾವ್ಯಾವುದು ಒಂಬತ್ತು ಹಾಗಿದ್ರೆ ಏನಿದು ಕಂಜೆಷನ್ ಟ್ಯಾಕ್ಸ್ ಹೇಗೆ ವರ್ಕ್ ಆಗುತ್ತೆ ಇದರಿಂದ ಟ್ರಾಫಿಕ್ ಕಮ್ಮಿ ಆಗಬಹುದಾ ಜನ ಎಷ್ಟು ದುಡ್ಡು ಚೆಲ್ಲಬೇಕಾಗಿ ಬರುತ್ತೆ ಎಲ್ಲವನ್ನ ಹೇಳ್ತಾ ಹೋಗ್ತೀವಿ ಎಕ್ಸ್ಪ್ಲೈನ್ ಮಾಡ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ಟ್ರಾಫಿಕ್ ಗೆ ಸಿದ್ದು ಆಕ್ಷನ್ ಪ್ಲಾನ್ ಕಾರ್ಗಳಿಗೆ ಕಂಜಶನ್ ಟ್ಯಾಕ್ಸ್ ಫ್ರೆಂಡ್ಸ್ ಬೆಂಗಳೂರು ಅಂದ ತಕ್ಷಣ ನಮಗೆ ಮೊದಲಿಗೆ ನೆನಪಿಗೆ ಬರೋದು ಇಲ್ಲಿನ ಟ್ರಾಫಿಕ್ ಬೆಂಗಳೂರು ಐಟಿಬಿಟಿಗೆ ಎಷ್ಟು ಫೇಮಸ್ ಆಗಿದೆಯೋ ಅಷ್ಟೇ ಖ್ಯಾತಿ ಅಥವಾ ಕುಖ್ಯಾತಿ ಟ್ರಾಫಿಕ್ ನಿಂದ ಕೂಡ ಪಡೆತಿದೆ ಲಂಡನ್ ಬಿಟ್ರೆ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್ ಹೊಂದಿರೋ ನಗರ ಬೆಂಗಳೂರು 10 ಕಿಲೋಮೀಟ ದೂರ ಹೋಗೋಕು ಅರ್ಧ ಗಂಟೆ ಬೇಕಾಗುತ್ತೆ ಬೆಂಗಳೂರಿನ ಗಾಡಿಗಳ ಸರಾಸರಿ ಸ್ಪೀಡ್ 18 km ಪರ್ ಇದೆ ಆದರೆ ಈ ಟ್ರಾಫಿಕ್ ಸಮಸ್ಯೆ ಕೇವಲ ಸವಾರರಿಗೆ ಮಾತ್ರ ಅಲ್ಲ ಸರ್ಕಾರಕ್ಕೂ ತಲೆನೋವೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಇನ್ಫ್ರಾಗೆ ಸಂಬಂಧಪಟ್ಟಂತೆ ಸರ್ಕಾರ ಸಿಕ್ಕಾಪಟ್ಟೆ ಟೀಕೆ ಫೇಸ್ ಮಾಡಿತ್ತು ಭಾರಿ ಪ್ರೆಷರ್ ಇತ್ತು ರಾಜೇಶ್ ಯಾಬಾಜಿ ಬ್ಲಾಕ್ ಬಗ್ ಅನ್ನೋ ಕಂಪನಿ ಅಂದರ ಸಿಇಓ ಒಬ್ಬರು ರಸ್ತೆಗುಂಡಿ ಟ್ರಾಫಿಕ್ ಸಮಸ್ಯೆಯಿಂದ ನಾವು ಬೆಳ್ಳಂದೂರು ಬಿಡಬೇಕಾಗಿದೆ ಬೇರೆ ಕಡೆಗೆ ಹೋಗ್ತಾ ಇದೀವಿ ಅಂತ ಪೋಸ್ಟ್ ಹಾಕಿದ್ರು ಅವರೇನೋ ಬೆಂಗಳೂರಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರಿಲೋಕೇಟ್ ಆಗಬೇಕು ಅಂತ ಹೇಳಿದ್ರು.

ಬೆಂಗಳೂರು ಬಿಟ್ಟು ಹೊರಗಡೆ ಹೋಗೋದು ಅಂತಲ್ಲ ಬೆಂಗಳೂರಲ್ಲೇ ಬೇರೆ ಕಡೆಗೆ ಹೋಗೋದು ಅಂತ. ಆದರೆ ಮಾಧ್ಯಮಗಳಲ್ಲಿ ರಸ್ತೆ ಗುಂಡಿಯಿಂದ ಕಂಪನಿಯೊಂದು ಬೆಂಗಳೂರಿನಿಂದಲೇ ಹೊರಗೆ ಹೋಗ್ತಿದೆ ಅಂತ ಸುದ್ದಿಯಾಗಿತ್ತು. ಇದರಿಂದ ಸರ್ಕಾರ ಭಾರಿ ಮುಜುಗರ ಅನುಭವಿಸಬೇಕಾಗಿ ಬಂದಿತ್ತು. ಚೀಫ್ ಮಿನಿಸ್ಟರ್ ಡಿಸಿಎಂ ಬಂದು ಉತ್ತರ ಕೊಡಬೇಕಾಗಿತ್ತು. ಚೀಫ್ ಮಿನಿಸ್ಟರ್ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರಿಗೆ ಪತ್ರ ಬರೆದು ನಿಮ್ಮ ಪ್ರೈವೇಟ್ ಜಾಗದಲ್ಲಿ ನಿಮ್ಮ ಕ್ಯಾಂಪಸ್ ಒಳಗಡೆ ರೋಡ್ ಇದೆಯಲ್ಲ ಅದರಲ್ಲಿ ವಾಹನ ಹೋಗೋಕೆ ಬಿಡಿ ಟ್ರಾಫಿಕ್ ಸ್ವಲ್ಪ ಕಮ್ಮಿ ಆಗುತ್ತೆ ಅಂತ ಕೇಳ್ಕೊಂಡಿದ್ರು ಆದರೆ ಆಜಿಂ ಪ್ರೇಮ್ಜಿ ಅವರು ಹಾಗೆಲ್ಲ ಆಗಲ್ಲ ಇದು ವಿಶೇಷ ಆರ್ಥಿಕ ವಲಯ ಪ್ರೈವೇಟ್ ಜಾಗ ಇಲ್ಲಿ ಪಬ್ಲಿಕ್ ವೆಹಿಕಲ್ ಎಲ್ಲ ಬಿಟ್ಕೊಂಡ್ರೆ ಇಲ್ಲೂ ಟ್ರಾಫಿಕ್ ಸಮಸ್ಯೆ ಆಗುತ್ತೆ ಓವರಾಲ್ ಯಾವುದಕ್ಕೂ ಸಮಸ್ಯೆಗೆ ಪರಿಹಾರ ಅಲ್ಲ ಇದು ಲಾಂಗ್ ಟರ್ಮ್ ಪರಿಹಾರ ಇದಲ್ಲ ಪ್ರೈವೇಟ್ ಜಾಗದಲ್ಲೆಲ್ಲ ಗಾಡಿ ಬಿಡಿ ಅಂತ ಹೇಳೋದು ಸಾರಿ ಬೇರೆ ದಾರಿ ನೋಡ್ಕೊಳ್ಳಿ ಅಂತ ಹೇಳಿದ್ರು ಬೇಕಾದ್ರೆ ಇದರ ಬಗ್ಗೆ ಸ್ಟಡಿ ಮಾಡೋಕ್ಕೆ ಏನಾದ್ರು ನೀವು ಪ್ಲಾನ್ ಮಾಡಿದ್ರೆ ಫ್ಯೂಚರಿಸ್ಟಿಕ್ ಆಗಿ ಥಿಂಕ್ ಮಾಡ್ತೀರಿ ಅಂದ್ರೆ ನಾವು ದುಡ್ಡು ಹಾಕೋ ರೆಡಿ ಅಂತ ಹೇಳಿದ್ರು. ಸರ್ಕಾರದ ಮೇಲೆ ಸಾಕಷ್ಟು ಈ ರೀತಿ ಪ್ರೆಷರ್ ಅಂತೂ ಇದ್ದೆ ಇದೆ. ಹೀಗಾಗಿ ತರಾತುರಿಯಲ್ಲಿ ಸರ್ಕಾರ ಖಾಸಗಿ ಕಂಪನಿಗಳು ಮೊಬಿಲಿಟಿ ತಜ್ಞರು ಸೇರಿದ ಹಾಗೆ ಬೆಂಗಳೂರಿನ ಪ್ರಮುಖರ ಸಭೆ ಕರೆದಿದೆ. 90ದಿನಗಳಲ್ಲಿ ಬೆಂಗಳೂರಿನ ಇನ್ಫ್ರಾ ಸರಿಪಡಿಸುವ ಆಕ್ಷನ್ ಪ್ಲಾನ್ ರಚಿಸಿದೆ. ಅದರಲ್ಲಿ ಈಗ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕೋಕೆ ಸರ್ಕಾರ ಕಂಜೆಶನ್ ಟ್ಯಾಕ್ಸ್ ವಿಧಿಸಬೇಕು ಅಂತ ಸಜೆಸ್ಟ್ ಮಾಡಲಾಗ್ತಿದೆ.

ಹಾಗಿದ್ರೆ ಏನಿದು ಕಂಜೆಶನ್ ಟ್ಯಾಕ್ಸ್ ಸ್ನೇಹಿತರೆ ಕಂಜಶನ್ ಅಂದ್ರೆ ದಟ್ಟಣೆ ಸೋ ಕಂಜೆಶನ್ ಟ್ಯಾಕ್ಸ್ ಅಂದ್ರೆ ಈ ರೀತಿ ವಿಪರೀತ ಸಂಚಾರ ದಟ್ಟಣೆ ಅಥವಾ ಟ್ರಾಫಿಕ್ ಇರೋ ಜಾಗಗಳಲ್ಲಿ ಜನ ಹೆಚ್ಚುವರಿ ಟ್ಯಾಕ್ಸ್ ಕಟ್ಟಬೇಕು ಅಂತ ಅರ್ಥ ನಗರದ ಇಂತಹ ಜಾಗಗಳಿಗೆ ಎಂಟರ್ ಆಗಬೇಕು ಅಂದ್ರೆ ಅದರಲ್ಲೂ ಕೂಡ ರಶ್ ಆವರ್ಗಳಲ್ಲಿ ಓಡಾಡಬೇಕು ಅಂದ್ರೆ ವಾಹನ ಸವಾರರು ಇಂತಿಷ್ಟು ಫೀಸ್ ಕಟ್ಟಬೇಕು ಅಂತ ಕೆಲ ರಿಪೋರ್ಟ್ಗಳ ಪ್ರಕಾರ ಬೆಂಗಳೂರಲ್ಲಿ ಪ್ರತಿ ಕಾರ್ಗೆ ಸುಮಾರು 50 ರಿಂದ 200 ರೂಪಾಯವರೆಗೆ ಕಟ್ಟಬೇಕಾಗಿ ಬರಬಹುದು ಅಂತ ಹೇಳಲಾಗ್ತಿದೆ ಈ ರೀತಿ ಎಕ್ಸ್ಟ್ರಾ ಟ್ಯಾಕ್ಸ್ ಫೀಸ್ ಅಂತ ಇಟ್ಟರೆ ಜನ ಆ ರೀತಿ ಟ್ಯಾಕ್ಸ್ ಕಲೆಕ್ಟ್ ಮಾಡುವ ಪ್ರದೇಶಗಳಿಗೆ ಹೋಗೋಕೆ ಹಿಂದೆಟು ಹಾಕ್ತಾರೆ. ಹೋಗಪ್ಪಾ ಯಾವನು ಮತ್ತೆ ಎಕ್ಸ್ಟ್ರಾ ದುಡ್ಡು ಕಟ್ಟಬೇಕು ಅಂತ ಹೇಳಿ ಬದಲಿ ಮಾರ್ಗಗಳನ್ನ ಆಯ್ಕೆ ಮಾಡ್ಕೊಳ್ತಾರೆ. ಹಾಗೆ ಜನ ತಮ್ಮ ಪ್ರೈವೇಟ್ ವೆಹಿಕಲ್ ಬಿಟ್ಟು ಬಸ್ ಇತ್ಯಾದಿ ಮೆಟ್ರೋ ಇತ್ಯಾದಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ಅನ್ನ ಯೂಸ್ ಮಾಡೋಕು ಶುರು ಮಾಡ್ತಾರೆ. ಇದರಿಂದ ಡಿಕಂಜೆಶನ್ ಆಗುತ್ತೆ ಟ್ರಾಫಿಕ್ ಜಾಮ್ ಆಗಲ್ಲ. ಅವಶ್ಯಕತೆ ಇರೋ ವಾಹನಗಳು ಮಾತ್ರ ಸರಾಗವಾಗಿ ಹೋಗಬಹುದು. ಈಗ ಆಲ್ರೆಡಿ 2007 ರಿಂದ 2020 ಅನ್ನುವಷ್ಟರಲ್ಲಿ ಪ್ರೈವೇಟ್ ವೆಹಿಕಲ್ ಸಂಖ್ಯೆ 280% ಜಾಸ್ತಿಯಾಗಿದೆ. ಮೂರು ಪಟ್ಟು ವಾಹನಗಳು ಜಾಸ್ತಿ ಆದ್ರೆ ಮೂರು ಪಟ್ಟು ರೋಡ್ಸ್ ಆಗಿದಾವಾ ಇಲ್ಲ 80 ಲಕ್ಷ ವಾಹನಗಳು ಅತ್ತ ಬಸ್ ಮೆಟ್ರೋ ಬಳಸೋವರು ಕೇವಲ 48% ಇದ್ದಾರೆ ಹೀಗಾಗಿ ಕಂಜೆಶನ್ ಟ್ಯಾಕ್ಸ್ ವಿಧಿಸಿದರೆ ಟ್ರೆಂಡ್ ಚೇಂಜ್ ಆಗುತ್ತೆ ಅನ್ನೋದು ಸರ್ಕಾರದ ನಂಬಿಕೆ .

ಎರಡು ವರ್ಷದ ಹಿಂದೆನೇ ಪ್ರಸ್ತಾಪ ಹಾಗಂತ ಇದು ಹೊಸ ನಿಯಮ ಏನಲ್ಲ 2023 ರಲ್ಲಿ ಇದರ ಪ್ರಸ್ತಾಪ ಮಾಡಲಾಗಿತ್ತು ಟ್ರಾಫಿಕ್ ಹಾಗೂ ಮೊಬೈಲಿಟಿ ತಜ್ಞ ಎಂ ಎನ್ ಶ್ರೀಹರಿ ಇವರ ನೇತೃತ್ವದ ಒಂದು ತಂಡ ಬೆಂಗಳೂರಿನ ಟ್ರಾಫಿಕ್ ಬಗ್ಗೆ ರಿಸರ್ಚ್ ಮಾಡಿ ವರದಿ ರೆಡಿ ಮಾಡಿತ್ತು ಅದರಲ್ಲಿ ಟ್ರಾಫಿಕ್ ನಿಂದ ಪ್ರತಿವರ್ಷ ಬೆಂಗಳೂರಿಗೆ ಬರೋಬರಿ 19725 ಕೋಟಿ ರೂಪಾಯಿ ಲಾಸ್ ಆಗ್ತಿದೆ ಅಂತ ಹೇಳಿತ್ತು ಈ ವರದಿಯನ್ನ ಸರ್ಕಾರಕ್ಕೆ ಕೊಟ್ಟಿತ್ತು ಇದರ ಬೆನ್ನಲ್ಲೇ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಜೊತೆಗೂಡಿ ಮತ್ತೊಂದು ರಿಪೋರ್ಟ್ ರೆಡಿ ಮಾಡಿದ್ರು ಅದರಲ್ಲಿ ಕೂಡ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕೋಕೆ ಕಂಜೆಶನ್ ಟ್ಯಾಕ್ಸ್ ವಿಧಿಸಬೇಕು ಅಂತ ಸಜೆಸ್ಟ್ ಮಾಡಲಾಗಿತ್ತು ಔಟರ್ ರಿಂಗ್ ರೋಡ್ ಸರ್ಜಾಪುರ ರಸ್ತೆ ಹೊಸೂರು ರಸ್ತೆ ಹಳೆ ಏರ್ಪೋರ್ಟ್ ರಸ್ತೆ ಓಲ್ಡ್ ಮಡ್ರಾಸ್ ರೋಡ್ ಬಳ್ಳಾರಿ ರಸ್ತೆ ಬನ್ನೇರಘಟ್ಟ ರಸ್ತೆ ಕನಕಪುರ ರಸ್ತೆ ಮಾಗಡಿ ರಸ್ತೆ ವೆಸ್ಟ್ ಆಫ್ ಕಾಲ್ಡ್ ರೋಡ್ ಮತ್ತು ತುಮಕೂರು ರಸ್ತೆ ಸೇರಿದಂತೆ ಬೆಂಗಳೂರಿನ ಒಟ್ಟು ಒಂಬತ್ತು ಟ್ರಾಫಿಕ್ ಜಂಕ್ಷನ್ ಗಳಲ್ಲಿ ಈ ವಿಶೇಷ ಟ್ಯಾಕ್ಸ್ ತರಬೇಕು ಅಂತ ಹೇಳಲಾಗಿತ್ತು ಆದರೆ ಜಾರಿ ಆಗಿರಲಿಲ್ಲ ಆದರೆಈಗ ಮತ್ತೆ ಒತ್ತಡ ಜಾಸ್ತಿ ಆಗಿರೋದ್ರಿಂದ ಮತ್ತೆ ಸರ್ಕಾರ ಕಂಜೆಶನ್ ಟ್ಯಾಕ್ಸ್ ಹಾಕ್ತೀವಿ ಅಂತ ಹೇಳ್ತಾ ಇದೆ ಸಿಂಗಲ್ ಗಳಿಗೆ ಸಿದ್ದು ಶಾಕ್ ಫಾಸ್ಟ್ ಟ್ಯಾಗ್ ನಲ್ಲೇ ಟ್ಯಾಕ್ಸ್ ಕಟ್ ಸದ್ಯದ ಸರ್ಕಾರದ ಆಕ್ಷನ್ ಪ್ಲಾನ್ ಪ್ರಕಾರ ಎಲ್ಲಾ ರಸ್ತೆಗಳಿಗೂ ಕಂಜೆಷನ್ ಟ್ಯಾಕ್ಸ್ ವಿಧಿಸುವುದರ ಬದಲು ಕೇವಲ ಓಆರ್ಆರ್ ಅಥವಾ ಔಟರ್ ರಿಂಗ್ ರೋಡ್ನಲ್ಲೇ ಇದರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತೆ ಯಾಕಂದ್ರೆ ಬೆಂಗಳೂರಲ್ಲಿ ಇದೆ ಅತಿ ದೊಡ್ಡ ಐಟಿ ಕಾರಿಡಾರ್ ಐಬಿಎಂ ಕಾಗ್ನಿಸಂ ಮೈಕ್ರೋಸಾಫ್ಟ್ವಪ್ರೋ ದಂತ 5ಕ್ಕೂ ಅಧಿಕ ಟೆಕ್ ಕಂಪನಿಗಳು ಈ ಸುತ್ತ ಮುತ್ತಲೇ ಬರ್ತವೆ ಮಾನ್ಯತಾ ಆರ್ಎಂಸಿ ಎಂಬಿಸಿ ಅಂತಹ ದೊಡ್ಡ ದೊಡ್ಡ ಟೆಕ್ ಪಾರ್ಕ್ಗಳಲ್ಲಿ ಈ ಕಂಪನಿಗಳಿವೆ ಅಲ್ದೆ ಮಾರತಹಳ್ಳಿ ಹೆಬ್ಬಾಳ ಇಬ್ಲೂರಿನಂತಹ ಕುಖ್ಯಾತ ಟ್ರಾಫಿಕ್ ಜಂಕ್ಷನ್ ಗಳು ಇದೇ ಭಾಗದಲ್ಲಿ ಬರ್ತವೆ ಈ ಸ್ಟ್ರೆಚ್ ನಲ್ಲೇ ಹೀಗಾಗಿ ಈ ರಸ್ತೆಯಲ್ಲಿ ಮೊದಲು ಕಂಜೆಶನ್ ಟ್ಯಾಕ್ಸ್ ಇಂಪ್ಲಿಮೆಂಟ್ ಮಾಡಬೇಕು ಅದರಲ್ಲೂ ಒಬ್ಬೊಬ್ಬರೇ ಹೋಗ್ತಿರ್ತಾರೆ ದೊಡ್ಡ ದೊಡ್ಡ ಕಾರ್ ತಗೊಂಡು ಸಿಂಗಲ್ ಗಮ್ಮತ್ತಲ್ಲಿ ಹೋಗ್ತಿರ್ತಾರೆ ಅಂತಹ ಓಡಾಡೋ ಕಾರುಗಳಿಗೆ ಹೆಚ್ಚುವರಿ ಟ್ಯಾಕ್ಸ್ ಹಾಕಬೇಕು ಸಂಚಾರದಟ್ಟಣೆ ಹೆಚ್ಚಿರೋ ಪೀಕ್ ಅವರ್ಸ್ ನಲ್ಲಿ ಈ ಫೀಸ್ ವಿಧಿಸಬೇಕು ಅಂತ ಸರ್ಕಾರ ಪ್ಲಾನ್ ಮಾಡ್ತಿದೆ ನಮ್ಮದಲ್ಲ ಸ್ವಾಮಿ ಸರ್ಕಾರದ ಪ್ಲಾನ್ ಇದು ಆದರೆ ಆರಂಭಿಕ ಹಂತ ಮಾತ್ರ ಮುಂದಿನ ದಿನಗಳಲ್ಲಿ ಉಳಿದ ರೋಡ್ಗಳಿಗೂ ಇದನ್ನ ವಿಸ್ತರಿಸಬಹುದು ಅಂತ ಹೇಳಲಾಗ್ತಿದೆ. ಹಾಗೆ ಟ್ಯಾಕ್ಸ್ ಹಾಕೋದು ಅಂದ್ರೆ ಹೊಸದಾಗಿ ಮತ್ತೆ ಟ್ಯಾಗ್ಸ್ ಕಲೆಕ್ಟ್ ಮಾಡ್ತಾ ಕೂರಲ್ಲ.

ಈಗ ಆಲ್ರೆಡಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಚೆನ್ನಾಗಿ ವರ್ಕ್ ಆಗ್ತಿದೆ. ಸೋ ಈ ಟ್ಯಾಕ್ಸ್ ಅನ್ನ ಕೂಡ ಫಾಸ್ಟ್ ಟ್ಯಾಗ್ ನಲ್ಲೇ ಕಟ್ ಮಾಡ್ಕೊಳ್ಳೋಕ್ಕೆ ಪ್ಲಾನ್ ಮಾಡಲಾಗ್ತಿದೆ. ಇಂತ ಕಾರುಗಳು ಓಆರ್ಆರ್ ರಸ್ತೆಗೆ ಎಂಟ್ರಿ ಆಗ್ತಿದ್ದ ಹಾಗೆ ಟೋಲ್ ಜೊತೆಗೆ ಕಂಜೆಶನ್ ಟ್ಯಾಕ್ಸ್ ಕೂಡ ಕಟ್ ಮಾಡ್ಕೊಳ್ಳಲಾಗುತ್ತೆ ಅನ್ನೋ ಲೆಕ್ಕಾಚಾರ ಇದೆ. ಲಂಡನ್ ಸಿಂಗಪೂರ್ನಲ್ಲೂ ಈ ನಿಯಮ ಇದೆ. ಎಸ್ ಸಿಂಗಪೂರ್ ಲಂಡನ್ ಹಾಗೆ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲೂ ಕೂಡ ಈ ಪದ್ಧತಿ ಇದೆ. ಸಿಂಗಪೂರನ ಕಂಜಶನ್ ಟ್ಯಾಕ್ಸ್ ಪ್ರೈಸಿಂಗ್ ಸಂಪೂರ್ಣ ಆಟೋಮೇಟೆಡ್ ಆಗಿದೆ. ದಿನದ ಬೇರೆ ಬೇರೆ ಅವಧಿಗೆ ತಕ್ಕಂತೆ ಬೇರೆ ಬೇರೆ ಜಾಗಗಳಲ್ಲಿ ಟ್ಯಾಕ್ಸ್ ರೇಟ್ ಚೇಂಜ್ ಆಗುತ್ತೆ. ಇದನ್ನ ಇನ್ನು ರಿಯಲ್ ಟೈಮ್ ಮಾಡ್ಕೊಳ್ಳೋ ಪ್ರಯತ್ನಗಳು ನಡೀತಾ ಇದೆ. ಇನ್ನು ಲಂಡನ್ ನಲ್ಲಿ ವೀಕ್ ಡೇಸ್ ಅಂದ್ರೆ ವಾರದ ಮಧ್ಯದಲ್ಲಿ ಸೆಂಟ್ರಲ್ ಲಂಡನ್ ಒಳಗೆ ಹೋಗೋಕೆ 15 ಪೌಂಡ್ ಕೊಡಬೇಕು. ರೂಪಾಯಿ ಲೆಕ್ಕದಲ್ಲಿ ಹೇಳೋದಾದ್ರೆ 1700 ರಿಂದ 1800 ರೂಪಾಯ ಕಟ್ಟಬೇಕು. ಅದೇ ರೀತಿ ಸ್ಟಾಕ್ ಹೋಮ್ ಕೂಡ ವೀಕ್ ಡೇಸ್ ನಲ್ಲಿ ಫೀಸ್ ಕೊಟ್ಟು ಹೋಗಬೇಕು. ಆದರೆ ಸ್ನೇಹಿತರೆ ಕಂಜೆಶನ್ ಟ್ಯಾಕ್ಸ್ ನಿಂದ ಒಂದಷ್ಟು ಪ್ರಮಾಣದ ಟ್ರಾಫಿಕ್ ಕಿರಿಕಿರಿ ಕಮ್ಮಿ ಆಗಬಹುದು. ಆದ್ರೆ ಇದರಿಂದ ಸಂಪೂರ್ಣ ಸಮಸ್ಯೆ ಸಾಲ್ವ್ ಆಗಲ್ಲ ಸುಳ್ಳದು ಯಾಕಂದ್ರೆ ಇದೆ ಸಿಂಗಪುರ್ ಮತ್ತು ಯೂರೋಪ್ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸೋಕ್ಕೆ ಬರಿ ಟ್ಯಾಕ್ಸ್ ಹಾಕೊಂಡು ಕೂತಿಲ್ಲ ಅವರು ಎಕ್ಸ್ಟ್ರಾ ಅಲ್ಲೆಲ್ಲ ಪಬ್ಲಿಕ್ ಟ್ರಾನ್ಸ್ಪೋರ್ಟ್ ತುಂಬಾ ಚೆನ್ನಾಗಿ ಮಾಡಿದ್ದಾರೆ. 50 60% ಜನ ಬಸ್ಸು ಟ್ರೈನ್ ಮೆಟ್ರೋ ಸವರ್ಬನ್ ಟ್ರೈನ್ ಅಂತಹ ಸಮೂಹ ಸಾರಿಗೆ ವ್ಯವಸ್ಥೆಗಳನ್ನ ಅದರ ಮೇಲೆ ಡಿಪೆಂಡ್ ಆಗಿದ್ದಾರೆ ಓಡಾಡಕ್ಕೆ ಆದರೆ ನಮ್ಮಲ್ಲಿ ಈ ಸಂಖ್ಯೆ 40% ಗಿಂತ ಕಮ್ಮಿ ಇದೆ ಯಾಕಂದ್ರೆ ಸರಿಯಾಗಿ ಇನ್ನು ಕೂಡ ಸೆಟ್ಪ್ೇ ಆಗಿಲ್ಲ ಮೆಟ್ರೋ ಕನೆಕ್ಟಿವಿಟಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಇನ್ನು ಇಂಪ್ರೂವ್ ಆಗಿಲ್ಲ ಸಿಂಗಪುರ್ನಲ್ಲಿ ಇಡೀ ದೇಶದಲ್ಲಿ ಕೇವಲ 10 ಲಕ್ಷ ಖಾಸಗಿ ವಾಹನಗಳಿವೆ ಸುಮಾರು 30 ಲಕ್ಷ ಜನ ಮೆಟ್ರೋ ಟ್ರೈನ್ ನಲ್ಲಿ ಓಡಾಡ್ತಾರೆ ಆದರೆ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಹತ್ತತ್ರ ಜನಸಂಖ್ಯೆ ಮತ್ತು ಒಂದು ಕೋಟಿ ಖಾಸಗಿ ಗೆ ವಾಹನಗಳು ಮೆಟ್ರೋದಲ್ಲಿ ಕೇವಲ 10 ಲಕ್ಷ ಜನ ಓಡಾಡ್ತಾರೆ ಹೀಗಾಗಿ ನಿಜವಾಗಲೂ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಅಂತ ಹೇಳಿದ್ರೆ ನಾವು ಈ ರೀತಿ ತುರಕಿ ಆದಾಗಷ್ಟೇ ಕೆರಕೊಳ್ಳೋ ತೇಪೆ ಕೆಲಸ ಮಾಡೋದನ್ನ ಬಿಡಬೇಕು ಮಾಸ್ ಟ್ರಾನ್ಸ್ಪೋರ್ಟ್ ನ ಪಬ್ಲಿಕ್ ಟ್ರಾನ್ಸ್ಪೋರ್ಟ್ ನ ತುಂಬಾ ಚೆನ್ನಾಗಿ ಇಂಪ್ಲಿಮೆಂಟ್ ಮಾಡಬೇಕು ಯಾಕಂದ್ರೆ ಸಮೂಹ ಸಾರಿಗೆ ಆ ತಾಕತ್ತಿದೆ ಒಂದು ರಸ್ತೆನಲ್ಲಿ ಕಾರು ಬೈಕಲ್ಲಿ ಓಡಾಡಿದ್ರೆ ಒಂದು ಗಂಟೆಗೆ 1800 ಪ್ರಯಾಣಿಕರು ಟ್ರಾವೆಲ್ ಮಾಡಬಹುದು ಆದರೆ ಟ್ರೈನ್ ಮೆಟ್ರೋ ಬಸ್ನಂತ ವ್ಯವಸ್ಥೆಗಳು ಗಂಟೆಗೆ 60 70ಸಾ ಪ್ರಯಾಣಿಕರನ್ನ ಟ್ರಾನ್ಸ್ಪೋರ್ಟ್ ಮಾಡೋ ತಾಕತನ್ನ ಹೊಂದಿವೆ ವೇಗವಾಗಿ. ಆದರೆ ನಮ್ಮಲ್ಲಿ ಆ ಕೆಲಸ ಆಗಿಲ್ಲ. ಮೆಟ್ರೋ ಪ್ರಾಜೆಕ್ಟ್ ಮುಗಿಯೋಕೆ ಐದೈದು 10ತ ವರ್ಷ ತಗೊಳ್ತಾನೆ ಇರುತ್ತೆ.

ಈಗ ಇನ್ನು 75 km ಮೆಟ್ರೋ ಆಗಿದೆ ಅಷ್ಟೇ. ಬೆಂಗಳೂರಿನಂತಹ ಸಿಟಿಗೆ ಒಂದೂವರೆ ಕೋಟಿ ಜನಸಂಖ್ಯೆ ಇರೋ ಸಿಟಿಗೆ 200 ರಿಂದ 300 ಕಿಲೋಮೀಟ ಮೆಟ್ರೋ ಮಿನಿಮಮ್ ಬೇಕು. ಆದರೆ ಮೆಟ್ರೋ ನಿರ್ಮಾಣ ಕುಂಟು ಸಾಗಿದೆ. ಅತ್ತ ಸಬರ್ಬನ್ ಟ್ರೈನ್ ಅಂತೂ ಅದು ಯಾವಾಗ ಮಾಡ್ತಾರೋ ದೇವರಿಗೆ ಗೊತ್ತು 1983 ರಲ್ಲಿ ಪ್ರಸ್ತಾಪ ಆಗಿದ್ದು ಇನ್ನು ರೆಡಿ ಆಗಿಲ್ಲ. ಆಲ್ರೆಡಿ ನಮ್ಮಲ್ಲಿ 30ಕ್ಕೂ ಅಧಿಕ ರೈಲ್ವೆ ಸ್ಟೇಷನ್ 50 km ಅಧಿಕ ಉದ್ದದ ರೈಲ್ವೆ ಸಂಪರ್ಕ ಹಳಿಗಳಿದಾವೆ. ಅವುಗಳನ್ನ ಸರಿಯಾಗಿ ಕನೆಕ್ಟ್ ಮಾಡಿ ರೈಲುಗಳ ಸಂಖ್ಯೆ ಹೆಚ್ಚುವರೆಯಾಗಿ ಓಡಿಸಿದ್ರೆ ಅದೇ ಸಾಕಾಗುತ್ತೆ ಅದನ್ನು ಮಾಡಕ್ಕೆ ಇವರ ಕೈಯಲ್ಲಿ ಆಗ್ತಿಲ್ಲ. ಬಸ್ ವಿಚಾರದಲ್ಲೂ ಕೂಡ ಅಷ್ಟೇ ಬಿಎಂಟಿಸಿ ನಲ್ಲಿ 7000 ಬಸ್ಗಳಿವೆ. ಆದರೆ ಬೆಂಗಳೂರಿಗೆ ಇದರ ದುಪ್ಪಟ್ಟು ಬಸ್ಗಳು ಬೇಕು. ಜೊತೆಗೆ ಬಸ್ ಮೆಟ್ರೋ ದರ ಕಮ್ಮಿ ಆಗಬೇಕು. ಬಸ್ ಮೆಟ್ರೋ ಟ್ರೈನ್ಗಳು ಎಲ್ಲಾ ಕಡೆಗೂ ಕನೆಕ್ಟಿವಿಟಿ ಕೊಟ್ಟಿದ್ದಾರೆ. ಜಾಸ್ತಿ ಒಂದು ಅರ್ಧ ಕಿಲೋಮೀಟರ್ ಒಂದು ಕಿಲೋಮೀಟರ್ ಹೋದ್ರೆ ಯಾವುದಾದ್ರೂ ಒಂದು ಸಿಕ್ಕೆ ಸಿಗುತ್ತೆ. ಕಾರು ಬೈಕ್ ಗಿಂತ ವೇಗವಾಗಿ ಕಮ್ಮಿ ಖರ್ಚಲ್ಲಿ ಕರ್ಕೊಂಡು ಹೋಗ್ಬಿಡ್ತಾರೆ. ಎಲ್ಲಿಗೆ ಬೇಕು ಅಲ್ಲಿಗೆ ಹೋಗಬಹುದು ನಾನು ಜಾಸ್ತಿ ಚೇಂಜಸ್ ಇಲ್ಲದೆ ಅಂತ ಹೇಳಿ ಅವಕಾಶ ಇತ್ತು ಅಂದ್ರೆ ಯಾರು ಹೋಗ್ತಾರೆ ಪ್ರೈವೇಟ್ ಗಾಡಿ ತಗೊಂಡು ಟ್ರಾಫಿಕ್ ಅಲ್ಲಿ ಯಾರು ಸಾಯಲಿಕ್ಕೆ ಇಷ್ಟ ಪಡ್ತಾರೆ ಯಾರು ಇಷ್ಟ ಪಡಲ್ಲ ಆದರೆ ಸರ್ಕಾರಗಳಿಗೆ ಇವುಗಳಲ್ಲೆಲ್ಲ ಆಸಕ್ತಿ ಇಲ್ಲ ಟನೆಲ್ ತೋಡ್ತೀನಿ ಫ್ಲೈ ಓವರ್ ಹಾಕ್ತೀನಿ ಅಲ್ಲೊಂದು ಮೆಟ್ರೋ ಇಲ್ಲೊಂದು ಮೆಟ್ರೋ ತುಂಡು ತುಂಡು ಮಾಡ್ತೀನಿ ಈತರ ದೊಡ್ಡದಾಗಿ ತೋರಿಸಿಕೊಳ್ಳಕೆ ಏನಾದ್ರು ಮಾಡ್ಬೇಕು ಅಷ್ಟೇ ಸಮಗ್ರ ಯೋಜನೆ ಇಲ್ಲ ಕಾಂಪ್ರಿಹೆನ್ಸಿವ್ ಪ್ಲಾನ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments