ನಿಮಗೆ ಟಾಟಾ ಟೆಕ್ನಾಲಜಿಸ್ ಐಪಿಓ ನೆನಪಿದೆಯಾ? 19 ವರ್ಷಗಳ ನಂತರ ಬಂದಿದ್ದ ಟಾಟಾ ಕಂಪನಿಯ ಈ ಐತಿಹಾಸಿಕ ಐಪಿಓ ದುಡ್ಡಿನ ಸುರಿಮಳೆಯನ್ನೇ ಸುರಿಸಿತ್ತು. ಒಂದೇ ದಿನದಲ್ಲಿ ಹೂಡಿಕೆದಾರರ ಹಣ ಡಬಲ್ ಗಿಂತಲೂ ಹೆಚ್ಚಾಗಿತ್ತು. ಈಗ ಮತ್ತೊಮ್ಮೆ ಅಂತಹದೇ ಸುವರ್ಣಾವಕಾಶ ಹೂಡಿಕೆದಾರರ ಮುಂದೆ ಬರ್ತಾ ಇದೆ. ಭಾರತದ ಅತ್ಯಂತ ನಂಬಿಕಸ್ಥ ಉದ್ಯಮ ಸಮೂಹವಾದ ಟಾಟಾ ಗ್ರೂಪ್ ನ ಮತ್ತೊಂದು ಬೃಹತ್ ಕಂಪನಿ ಶೇರು ಮಾರುಕಟ್ಟೆಗೆ ಲಗ್ಗೆ ಇಡೋದಕ್ಕೆ ಸಜ್ಜಾಗಿದೆ ಯಾವುದು ಈ ಕಂಪನಿ ಯಾವಾಗ ಈ ಐಪಿಓ ಆರಂಭ ಎಲ್ಲವನ್ನೂ ನೋಡೋಣ.
ಟಾಟಾ ಕ್ಯಾಪಿಟಲ್ ಬಗ್ಗೆ ಇದು ಟಾಟಾ ಸನ್ಸ್ ಬೆಂಬಲಿತ ದೇಶದ ಬೃಹತ್ ಬ್ಯಾಂಕತರ ಹಣ ಕಾಸು ಸಂಸ್ಥೆ ಅಂದ್ರೆ ಎನ್ಬಿಎಫ್ಸಿ ಗಳಲ್ಲಿ ಒಂದು ತನ್ನ ಬಹುನಿರೀಕ್ಷಿತ ಐಪಿಓ ಗಾಗಿ ಕಂಪನಿ ಶೇರು ಮಾರುಕಟ್ಟೆ ನಿಯಂತ್ರಕ ಸೇಬಿಗೆ ಕರಡು ದಾಖಲೆಯನ್ನ ಅಂದ್ರೆ ಡ್ರಾಫ್ಟ್ ರೆಡ್ ಹೇರಿಂಗ್ ಪ್ರಾಸ್ಪೆಕ್ಟಸ್ ಅನ್ನ ಸಲ್ಲಿಸಿದೆ ಈ ಮೂಲಕ ಬೃಹತ್ ಐಪಿಓ ಗೆ ಅಧಿಕೃತವಾಗಿ ತಯಾರಿ ಆರಂಭಿಸಿದೆ ಹಾಗಾದರೆ ಈ ಐಪಿಓ ದ ಗಾತ್ರ ಎಷ್ಟು ಇದರ ವಿವರಗಳನ್ನ ನೋಡೋಣ ಟಾಟಾ ಕ್ಯಾಪಿಟಲ್ ಐ ಪಿಓ ದ ಗಾತ್ರ ಎಷ್ಟು ಅಂತ ನಿಖರವಾಗಿ ಇನ್ನು ಗೊತ್ತಾಗಿಲ್ಲ ಕಾರಣ ಕಂಪನಿ ಇನ್ನು ಪ್ರೈಸ್ ಬ್ಯಾಂಡ್ ನಿಗದಿ ಪಡಿಸಿಲ್ಲ ಆದರೆ ಹಂಚಿಕೆಗೆ ಇರುವ ಶೇರುಗಳ ವಿವರಗಳನ್ನ ನೀಡಿದೆ ಒಟ್ಟು ಶೇರುಗಳು 47.58 ಕೋಟಿ ಹೊಸ ಶೇರುಗಳು 21 ಕೋಟಿ ಹಾಲಿ ಶೇರುಗಳ ಮಾರಾಟ 26.58 ಕೋಟಿ ಕಂಪನಿ ಐಪಿಓದಲ್ಲಿ ಒಟ್ಟು 47.58 58 ಕೋಟಿ ಶೇರುಗಳನ್ನ ಮಾರಾಟ ಮಾಡಲಿದೆ ಇದರಲ್ಲಿ ಎರಡು ಭಾಗಗಳಿದೆ ಒಂದು ಫ್ರೆಶ್ ಇಶ್ಯೂ ಅಂದ್ರೆ ಕಂಪನಿಯು ಹೊಸದಾಗಿ 21 ಕೋಟಿ ಶೇರುಗಳನ್ನ ಬಿಡುಗಡೆ ಮಾಡಲಿದೆ ಎರಡನೆಯದು ಆಫರ್ ಫಾರ್ ಸೇಲ್ ಅಂದ್ರೆ ಅಸ್ತಿತ್ವದಲ್ಲಿರುವ ಶೇರುದಾರರು ತಮ್ಮಲ್ಲಿರುವ ಶೇರುಗಳನ್ನ ಮಾರಾಟ ಮಾಡಲಿದ್ದಾರೆ ಇದರಲ್ಲಿ 26.58 58 ಕೋಟಿ ಶೇರುಗಳನ್ನ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತೆ.
ಕಂಪನಿಯ ಮಾಲಿಕ ಸಂಸ್ಥೆ ಟಾಟಾ ಸನ್ಸ್ ಬರುಬರಿ 23 ಕೋಟಿ ಶೇರುಗಳನ್ನ ಮಾರಾಟ ಮಾಡಿದ್ರೆ ಇನ್ನೊಂದು ಹೂಡಿಕೆ ಸಂಸ್ಥೆ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಸುಮಾರು 3.58 58 ಕೋಟಿ ಶೇರುಗಳನ್ನ ಮಾರಾಟ ಮಾಡಲಿದೆ ಹೊಸ ಶೇರುಗಳ ಮಾರಾಟದಿಂದ ಸಂಗ್ರಹ ಆಗುವ ಹಣವನ್ನು ಕಂಪನಿಯು ತನ್ನ ಭವಿಷ್ಯದ ಬಂಡವಾಳದ ಅಗತ್ಯತೆಗಳು ಅಂದರೆ ವ್ಯವಹಾರ ವಿಸ್ತರಣೆ ಮತ್ತು ಹೆಚ್ಚಿನ ಸಾಲ ನೀಡುವಿಕೆಗಾಗಿ ಬಳಸಿಕೊಳ್ಳಲಿದೆ ಅಂದಹಾಗೆ ಟಾಟಾ ಗ್ರೂಪ್ ಈ ಐಪಿಓ ತರಲು ಒಂದು ಬಲವಾದ ಕಾರಣ ಇದೆ ಹಾಗೆ ನೋಡಿದ್ರೆ ಕಂಪನಿಗೆ ಐಪಿಓ ತರಲು ಅದರಲ್ಲೂ ಇಷ್ಟು ಬೇಗ ಶೇರು ಮಾರುಕಟ್ಟೆ ಪ್ರವೇಶಿಸುದಕ್ಕೆ ಯಾವುದೇ ಆಸಕ್ತಿ ಇರಲಿಲ್ಲ ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಳ ಪ್ರಕಾರ ಕಂಪನಿ ಐಪಿಓ ಆರಂಭಿಸಲೇಬೇಕಿದೆ ಅದೇನು ಅಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಹೂಡಿಕೆ ಸಂಸ್ಥೆ ಎನ್ಬಿಎಫ್ಸಿ ಯನ್ನ ಅಪ್ಪರ್ ಲೇಯರ್ ಹಣಕಾಸು ಸಂಸ್ಥೆ ಅಂತ ವರ್ಗೀಕರಿಸಿದಲ್ಲಿ ಮೂರು ವರ್ಷಗಳ ಒಳಗೆ ಅದು ಶೇರು ಮಾರುಕಟ್ಟೆ ಪ್ರವೇಶಿಸಲೇಬೇಕು ಬೃಹತ್ ಬ್ಯಾಂಕಿತರ ಹಣಕಾಸು ಸಂಸ್ಥೆಗಳು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಅವುಗಳ ಮೇಲೆ ಹೆಚ್ಚಿನ ನಿಗಾ ಇಡಲು ಈ ತರಹದ ಒಂದು ನಿಯಮ ತರಲಾಗಿದೆ ಇದರಂತೆ ಮೂರು ವರ್ಷಗಳ ಕೆಳಗೆ ಅಂದ್ರೆ 2022 ರಲ್ಲಿ ಹಲವು ಎನ್ಬಿಎಫ್ಸಿ ಗಳನ್ನ ಅಪ್ಪರ್ ಲೇಯರ್ ಸಂಸ್ಥೆಗಳು ಅಂತ ಆರ್ಬಿಐ ವರ್ಗೀಕರಿಸಿತ್ತು. ಈ ಪಟ್ಟಿಯಲ್ಲಿ ಟಾಟಾ ಕ್ಯಾಪಿಟಲ್ ಕೂಡ ಸೇರಿತ್ತು. ಹೀಗಾಗಿ 2025ರ ಸೆಪ್ಟೆಂಬರ್ ಒಳಗೆ ಟಾಟಾ ಕ್ಯಾಪಿಟಲ್ ಶೇರು ಮಾರುಕಟ್ಟೆಗೆ ಕಾಲಿಡಲೇಬೇಕಿದೆ.
ಆರ್ಬಿಐ ನ ಈ ಕಡ್ಡಾಯ ನಿಯಮದಿಂದಾಗಿ ಟಾಟಾ ಗ್ರೂಪ್ ಈ ಐಪಿಓ ವನ್ನ ಆರಂಭಿಸತ್ತಾ ಇದೆ. ಈ ಸಂಬಂಧ ಏಪ್ರಿಲ್ ನಲ್ಲಿ ಕಂಪನಿ ಸೆಬಿಗೆ ಗೌಪ್ಯ ದಾಖಲೆಗಳನ್ನು ಸಲ್ಲಿಸಿತ್ತು. ಇದಕ್ಕೆ ಜುಲೈನಲ್ಲಿ ಸೆಬಿ ಒಪ್ಪಿಗೆಯನ್ನು ನೀಡಿತ್ತು. ಶೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಒಪ್ಪಿಗೆ ಸಿಕ್ಕ ಹಿನ್ನಲೆಯಲ್ಲಿ ಇದೀಗ ಕಂಪನಿ ಕರಡು ದಾಖಲೆಯನ್ನ ಸಲ್ಲಿಕೆ ಮಾಡಿ ಐಪಿಓ ಗೆ ಅಧಿಕೃತವಾಗಿ ಸಿದ್ಧತೆ ಆರಂಭಿಸಿದೆ. ಎಲ್ಲಾ ಐಪಿಓ ಗಳು ಬರ್ತವೆ ಇದರಲ್ಲೇನು ವಿಶೇಷ ಇದರ ಬಗ್ಗೆ ಇಷ್ಟೊಂದು ಕುತೂಹಲ ಯಾಕೆ ಹೂಡಿಕೆದಾರರು ಈ ಪರಿ ಯಾಕೆ ಐಪಿಓ ಗೆ ಕಾಯ್ತಾ ಇದ್ದಾರೆ ಅಂತ ನೀವು ಕೇಳಬಹುದು ಉತ್ತರ ಸಿಂಪಲ್ ಟಾಟಾ ಬ್ರಾಂಡ್ ನ ಟ್ರ್ಯಾಕ್ ರೆಕಾರ್ಡ್ ಇದಕ್ಕಾಗಿ ಸ್ವಲ್ಪ ಇತಿಹಾಸವನ್ನ ಕೆದುಕೊಳ್ಳೋಣ ಎರಡು ವರ್ಷಗಳ ಹಿಂದೆ ಅಂದರೆ 2023ರ ನವೆಂಬರ್ ನಲ್ಲಿ ಟಾಟಾ ಟೆಕ್ನಾಲಜಿಸ್ ಐ ಪಿಓ ಬಂದಿತ್ತು ನೀವು ಶೇರು ಹೂಡಿಕೆದಾರರಾಗಿದ್ದರೆ ನಿಮಗೆ ಈ ಐಪಿಓ ನೆನಪಿರಬಹುದು ಇದರಲ್ಲಿ 500 ರೂಪಾಯಿಗೆ ಶೇರನ್ನ ಹಂಚಿಕೆ ಮಾಡಲಾಗಿತ್ತು ಆದರೆ ಭಾರಿ ಚಂದಾದಾರಿಕೆ ಕಂಡು ಕೇಳರಿಯದ ಬೇಡಿಕೆಯಿಂದ ಶೇರು ಬರುಬ್ಬರಿ 1200 ರೂಪಾಯಿ ಮೊತ್ತದಲ್ಲಿ ಮಾರುಕಟ್ಟೆಗೆ ಲಿಸ್ಟ್ ಆಗಿತ್ತು ಅಂದ್ರೆ ಬಂಪರ್ 140% ಪ್ರೀಮಿಯಂ ದರದಲ್ಲಿ ಲಿಸ್ಟಿಂಗ್ ಆಗಿತ್ತು ಈ ಮೂಲಕ ಒಂದೇ ಶೇರು ಬರುಬರಿ 700 ರೂಪಾಯಿ ಲಾಭ ತಂದುಕೊಟ್ಟಿತ್ತು ಕೆಲವೇ ದಿನಗಳಲ್ಲಿ ಹೂಡಿಕೆದಾರರು ಕಂಡು ಕೇಳರಿಯದ 140% ರಿಟರ್ನ್ಸ್ ಜೇಬಿಗೆಳಿಸಿಕೊಂಡಿ ದ್ರು ಅಷ್ಟೇ ಅಲ್ಲ ದಿನದ ವಹಿವಾಟಿನಲ್ಲಿ ಈ ಶೇರು 1400 ರೂಪಾಯ ಗಡಿಯು ತಲುಪಿತ್ತು.
ಹೂಡಿಕೆದಾರರಿಗೆ 180% ವರೆಗೂ ಲಾಭಗಳಿಸುವ ಅವಕಾಶ ಸಿಕ್ಕಿತ್ತು ಇದು ಟಾಟಾ ಬ್ರಾಂಡ್ ಮೇಲಿರುವ ನಂಬಿಕೆ ಮತ್ತು ಕಂಪನಿಯ ಬಲಿಷ್ಠ ಅಡಿಪಾಯಕ್ಕೆ ಸಾಕ್ಷಿ ಹಾಗಾದ್ರೆ ಟಾಟಾ ಕ್ಯಾಪಿಟಲ್ ಕೂಡ ಟಾಟಾ ಟೆಕ್ ರೀತಿಯಲ್ಲಿ ಜಾಕ್ಪಾಟ್ ಲಾಭ ನೀಡುತ್ತಾ ಅದು ಮಾತ್ರ ಗೊತ್ತಿಲ್ಲ ಆದರೆ ಟಾಟಾ ಸಮೂಹದ ಮತ್ತೊಂದು ಬಲಿಷ್ಠ ಲಾಭದಾಯಕ ಕಂಪನಿ ಶೇರು ಮಾರುಕಟ್ಟೆ ಪ್ರವೇಶಿಸುತ್ತಾ ಇರೋದು ಮಾತ್ರ ನಿಜ ಕಳೆದ ಹಣಕಾಸು ವರ್ಷದಲ್ಲಿ ಟಾಟಾ ಕ್ಯಾಪಿಟಲ್ ಲಾಭ 10% ಏರಿಕೆ ಕಂಡು 3655 ಕೋಟಿ ರೂಪಾಯಿಗೆ ಜಿಗಿದಿತ್ತು ಆದಾಯ ಬರೋಬರಿ 57% ಏರಿಕೆ ಕಂಡು 25719 ಕೋಟಿ ರೂಪಾಯಿಗೆ ತಲುಪಿತ್ತು ಕಂಪನಿ ನೀಡಿರುವ ಸಾಲದ ಮೊತ್ತವು 2.26 26 ಲಕ್ಷ ಕೋಟಿ ರೂಪಾಯಿ ಇದೆ ಇದು ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದೆ ಹೀಗಾಗಿ ಹೂಡಿಕೆದಾರರಲ್ಲಿ ಈ ಕಂಪನಿಯ ಐಪಿಓ ಬಗ್ಗೆ ಭಾರಿ ನಿರೀಕ್ಷೆ ಇದೆ ಕಂಪನಿ ಇನ್ನು ಐಪಿಓ ದಿನಾಂಕ ಪ್ರೈಸ್ ಬ್ಯಾಂಡ್ ಮತ್ತು ಲಾಟ್ ಸೈಜ್ ವಿವರಗಳನ್ನ ಪ್ರಕಟಿಸಿಲ್ಲ.
ಟಾಟಾ ಬ್ರಾಂಡ್ ಮೇಲೆ ಹೂಡಿಕೆದಾರರ ನಂಬಿಕೆ ಮತ್ತು ಕಂಪನಿಯ ಬಲಿಷ್ಠ ಅಡಿಪಾಯ ಈ ಐಪಿಓಗೆ ಶಕ್ತಿ ನೀಡಿದೆ. ಕಳೆದ ಹಣಕಾಸು ವರ್ಷದಲ್ಲಿ ಟಾಟಾ ಕ್ಯಾಪಿಟಲ್ ಲಾಭದಲ್ಲಿ 10% ಏರಿಕೆ ಕಂಡು, 3655 ಕೋಟಿ ರೂಪಾಯಿಗೆ ತಲುಪಿದ್ದು, ಆದಾಯ 57% ಏರಿಕೆ ಕಂಡು 25719 ಕೋಟಿ ರೂಪಾಯಿಗೆ ಏರಿತು. ಕಂಪನಿ ನೀಡಿರುವ ಸಾಲದ ಮೊತ್ತ 2.26 ಲಕ್ಷ ಕೋಟಿ ರೂಪಾಯಿ ಇರುವುದರಿಂದ ಇದು ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆ ಆಗಿದೆ. ಹೀಗಾಗಿ ಹೂಡಿಕೆದಾರರಲ್ಲಿ ಈ ಐಪಿಓ ಬಗ್ಗೆ ಭಾರಿ ನಿರೀಕ್ಷೆ ಇದೆ. ಐಪಿಓ ದಿನಾಂಕ, ಪ್ರೈಸ್ ಬ್ಯಾಂಡ್ ಮತ್ತು ಲಾಟ್ ಸೈಜ್ ಇನ್ನೂ ಪ್ರಕಟವಾಗಿಲ್ಲ. ಆದರೆ ಟಾಟಾ ಸಮೂಹದ ಬಲಿಷ್ಠ ಸ್ಥಿತಿ ಮತ್ತು ಮಾರುಕಟ್ಟೆಯಲ್ಲಿ ಶೇರು ಮೌಲ್ಯದ ಸಾಧನೆ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಹೂಡಿಕೆದಾರರು ಈ ಜಾಕ್ಪಾಟ್ ಲಾಭದ ಅವಕಾಶ ಬಗ್ಗೆ ಉತ್ಸುಕವಾಗಿದ್ದಾರೆ. ಮುಂದಿನ ಐಪಿಓ ಬಿಡುಗಡೆ ಟಾಟಾ ಕ್ಯಾಪಿಟಲ್ ಹಿಸ್ಟರಿ ಹಾಗೂ ಭವಿಷ್ಯದ ಆದಾಯದ ಮೇಲೆ ಗಮನ ಹರಿಸುತ್ತದೆ.


