ಟಾಟಾ ಗ್ರೂಪ್ ಗೆ ಮೋದಿ ಸರ್ಕಾರ ಎಂಟ್ರಿ ಅವರನ್ನ ಕಿತ್ತು ಬಿಸಾಡಿ ಅಂತ ಬೇಕು ಸೂಚನೆ ನಾಲಕು ವಿಲನ್ಗಳ ಸೂಪರ್ ಬೋರ್ಡ್ಗೆ ಬ್ರೇಕ್ ರತನ್ ಟಾಟಾ ನಿಧನದ ಬಳಿಕ ಟಾಟಾ ಗ್ರೂಪ್ನಲ್ಲಿ ಎಲ್ಲವೂ ಸರಿಯಲ್ಲ ಈ ಆಂತರಿಕ ಕಚ್ಚಾಟ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ರುವ ಆತಂಕವನ್ನ ಸೃಷ್ಟಿಸಿದೆ ಈ ಹಿನ್ನಲೆ ಮೋದಿ ಸರ್ಕಾರ ಡೈರೆಕ್ಟಆಗಿ ಎಂಟ್ರಿ ಕೊಟ್ಟಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನವರು ಟಾಟಾ ಗ್ರೂಪ್ನ ಲೀಡರ್ಗಳ ಜೊತೆ ಮಾತುಕಥೆಯನ್ನ ನಡೆಸಿದ್ದಾರೆ ಈ ವೇಳೆ ಟಾಟಾ ಗ್ರೂಪ್ನ ಲೀಡರ್ಗಳಿಗೆ ಮೋದಿ ಸರ್ಕಾರ ಬಿಗ್ ಎಚ್ಚರಿಕೆಯನ್ನ ನೀಡಿದೆ ಸಮಸ್ಯೆ ಸೃಷ್ಟಿಸುವವರನ್ನ ಕಂಪನಿಯಿಂದ ಕಿತ್ತು ಬಿಸಾಡಿ ಎಂಬ ಫ್ರೀಡಮ ಅನ್ನ ಕೂಡ ಕೇಂದ್ರ ಸರ್ಕಾರ ಟಾಟಾ ಗ್ರೂಪ್ಗೆ ನೀಡಿದೆ ಹಾಗಾದರೆ ಟಾಟಾ ಗ್ರೂಪ್ನ ಉನ್ನತ ನಾಯಕತ್ವಕ್ಕೆ ಮೋದಿ ಸರ್ಕಾರ ನೀಡಿರುವಂತಹ ಖಡಕ್ಕ ಸಂದೇಶ ನು ಸೂಪರ್ ಬೋರ್ಡ್ ಅಂತ ಕರೆಯಲ್ಪಡುತ್ತಿರುವ ಆ ನಾಲ್ವರು ಟ್ರಸ್ಟಿಗಳು ಯಾರು ಈ ಬಿಕ್ಕಟ್ಟಿನ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿದೆ ನೋಡೋಣ ಹೌದು ನಮ್ಮದ್ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದಂತೆ ಟಾಟಾ ಟ್ರಸ್ಟ್ನೊಳಗಿನ ಆಂತರಿಕ ಸಂಘರ್ಷಗಳು ಟಾಟಾ ಸನ್ಸ್ನ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಹಂತ ತಲುಪುತಾ ಇದ್ದಂತೆ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿದೆ ಈ ವೇಳೆ ಕಂಪನಿಯಲ್ಲಿ ಸ್ಥಿರತೆಯನ್ನ ಮರುಸ್ಥಾಪಿಸುವಂತೆ ಟಾಟಾ ಗ್ರೂಪ್ನ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನ ನೀಡಲಾಗಿದೆ. ಟಾಟಾ ಟ್ರಸ್ಟ್ನ ಅಧ್ಯಕ್ಷ ನೋಯಲ್ ಟಾಟಾ ಉಪಾಧ್ಯಕ್ಷ ವೇಣು ಶ್ರೀನಿವಾಸನ್ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಟ್ರಸ್ಟಿ ಡೇರಿಎಸ್ ಕಂಭಾಟ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನವರು ಸಭೆಯನ್ನ ನಡೆಸಿದರು.
ಸುಮಾರು ಒಂದು ಗಂಟೆಗಳ ಕಾಲ ನಡೆದ ಮಹತ್ವದ ಸಭೆಯಲ್ಲಿ ಅನೇಕ ಸೂಚನೆಗಳನ್ನ ಟಾಟಾ ಗ್ರೂಪ್ಗೆ ನೀಡಲಾಗಿದೆ. ಅಕ್ಟೋಬರ್ 2024 ರಲ್ಲಿ ರತನ್ ಟಾಟಾ ಅವರ ನಿಧನದ ನಂತರ ಟ್ರಸ್ಟ್ನಲ್ಲಿ ಆಂತರಿಕ ಸಂಘರ್ಷ ಶುರುವಾಗಿದೆ. ಇತೀಚಿನ ತಿಂಗಳುಗಳಲ್ಲಿ ಈ ಬಿರುಕು ಮತ್ತಷ್ಟು ದೊಡ್ಡದಾಗಿದ್ದು ದೊರಾಬ್ಜಿ ಟಾಟಾ ಟ್ರಸ್ಟ್ನ ನಾಲ್ವರು ಟ್ರಸ್ಟಿಗಳು ಒಂದಡೆಯಾದರೆ ನೋಯಲ್ ಟಾಟಾ ಸೇರಿ ಇತರ ಮೂವರು ಇನ್ನೊಂದೆಡೆ ನಿಂತಿದ್ದಾರೆ. ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಿ. ಸಮಸ್ಯೆ ಮಾಡುವವರನ್ನ ಇಟ್ಟಕೊಳ್ಳಬೇಡಿ. ಕಂಪನಿಯಲ್ಲಿ ಸ್ಟೆಬಿಲಿಟಿಯನ್ನ ವಾಪಸ್ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನ ಕೈಗೊಳ್ಳಿ ಮತ್ತು ನಿಮ್ಮ ಆಂತರಿಕ ಭಿನ್ನಾಭಿಪ್ರಾಯಗಳು ಯಾವುದೇ ಕಾರಣಕ್ಕೂ ಟಾಟಾ ಸಂಸ್ನ ಕಾರ್ಯಾಚರಣಗಳ ಮೇಲೆ ಎಫೆಕ್ಟ್ ಬೀರಬಾರದು ಎಂಬ ಸ್ಪಷ್ಟ ಸಂದೇಶವನ್ನ ಸಚಿವರು ಟಾಟಾ ಗ್ರೂಪ್ನ ನಾಯಕರಿಗೆ ನೀಡಿದ್ದಾರೆ. ಅದಲ್ಲದೆ ಒಂದಿಷ್ಟು ವರದಿಗಳ ಪ್ರಕಾರ ಟಾಟಾ ಗ್ರೂಪ್ ಅನ್ನ ಅಸ್ಥಿರಗೊಳಿಸುವಂತಹ ಕೃತ್ಯಗಳಲ್ಲಿ ತೊಡಗಿರುವ ಯಾವುದೇ ಟ್ರಸ್ಟಿಯನ್ನ ತೆಗೆದು ಬಿಸಾಕುವಂತಹ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲು ಕೂಡ ಮೋದಿ ಸರ್ಕಾರ ಟಾಟಾ ಗ್ರೂಪ್ನ ನಾಯಕರಿಗೆ ಸೂಚಿಸಿದೆ. ಟಾಟಾ ಗ್ರೂಪ್ನ ಗಾತ್ರ ಮಾರುಕಟ್ಟೆ ಪ್ರಭಾವ ಮತ್ತು ಆರ್ಥಿಕ ಮಹತ್ವವನ್ನ ಪರಿಗಣಿಸಿರುವ ಕೇಂದ್ರ ಸರ್ಕಾರ ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ ಅಂತ ಟಾಟಾ ಸಂಸ್ಥೆಯ ಆಂತರಿಕ ಚಟುವಟಿಕೆಗಳಲ್ಲಿ ಮಧ್ಯ ಪ್ರವೇಶಿಸಿದೆ. ಇದೇ ಕಾರಣಕ್ಕೆ ಟಾಟಾ ಗ್ರೂಪ್ನ ಬಹುಪಾಲು ಶೇರ್ಗಳು ಸಾರ್ವಜನಿಕ ಜವಾಬ್ದಾರಿಯನ್ನ ಹೊಂದಿದೆ ಎಂಬುದನ್ನ ಸಚಿವರು ಇದೇ ವೇಳೆ ಟಾಟಾ ಗ್ರೂಪ್ ನ ಲೀಡರ್ಗಳಿಗೆ ನೆನಪಿಸಿದ್ದಾರೆ. ಟಾಟಾ ಸನ್ಸ್ ಐಪಿಓ ಡೆಡ್ಲೈನ್ ಬಗ್ಗೆಯೂ ಚರ್ಚೆ.
ಮುಂಬೈನಲ್ಲಿ ರತನ್ ಟಾಟಾ ಪುಣ್ಯತಿಥಿಯಲ್ಲಿ ಬ್ರೇಕ್ ಇನ್ನು ಇದೆ ಹೈ ಲೆವೆಲ್ ಮೀಟಿಂಗ್ನಲ್ಲಿ ಟಾಟಾ ಸನ್ಸ್ ಗೆ ಶೇರು ಮಾರುಕಟ್ಟೆಯ ಲಿಸ್ಟಿಂಗ್ಗೆ ಆರ್ಬಿಐ ಡೆಡ್ಲೈನ್ ನೀಡಿರುವ ಬಗ್ಗೆ ಕೂಡ ಚರ್ಚೆಯಾಗಿದೆ. ಮೇಲ್ಮಟ್ಟದ ಬ್ಯಾಂಕಿಂಗ್ತರ ಹಣಕಾಸು ಕಂಪನಿಗಳನ್ನ ಕಡ್ಡಾಯವಾಗಿ ಶೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಬೇಕು ಅಂತ ಆರ್ಬಿಐ ನಿಯಮ ಮಾಡಿದೆ. ಟಾಟಾ ಸನ್ಸ್ ಅನ್ನಎನ್ಪಿಎಫ್ಸಿ ಗೆ ಸೇರಿಸಿದ್ದು ಐಪಿಓ ಲಿಸ್ಟಿಂಗ್ಗೆ ಸೆಪ್ಟೆಂಬರ್ 30ರ ಡೆಡ್ಲೈನ್ ಅನ್ನ ನೀಡಿತ್ತು. ಆದರೆ ಟಾಟಾ ಸನ್ಸ್ ಐಪಿಓ ಮಾತ್ರ ಇನ್ನು ಘೋಷಣೆಯಾಗಿಲ್ಲ. ಈ ಬಗ್ಗೆ ಮೀಟಿಂಗ್ನಲ್ಲಿ ಚರ್ಚೆಯಾಗಿದೆ. ಇದರ ಜೊತೆ ಟಾಟಾ ಸನ್ಸ್ನ ಎರಡನೇ ಅತಿ ದೊಡ್ಡ ಶೇರುದಾರರಾದ ಶಪೂರ್ಜಿ ಪಲ್ಲೋಂಜಿ ಗ್ರೂಪ್ಗೆ ಲಿಕ್ವಿಡಿಟಿ ಪರಿಹಾರವನ್ನ ಕಂಡುಕೊಳ್ಳುವ ಬಗ್ಗೆ ಕೂಡ ಈ ಸಭೆಯಲ್ಲಿ ಚರ್ಚೆಗಳು ನಡೆದಿವೆ. ಇನ್ನು ಸಭೆಯ ನಂತರ ಟಾಟಾ ಗ್ರೂಪ್ನ ನಾಲ್ವರು ಪ್ರತಿನಿಧಿಗಳು ಮುಂಬೈಗೆ ಹಿಂತಿರುಗುವ ಮೊದಲು ಸಂಕ್ಷಿಪ್ತ ಆಂತರಿಕ ಚರ್ಚೆಯನ್ನ ನಡೆಸಿದ್ದಾರೆ. ಅಕ್ಟೋಬರ್ 9 2024 ರಂದು ನಿಧನರಾದ ಟಾಟಾ ಸಂಸ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಮೊದಲ ಪುಣ್ಯತಿಥಿಯ ಅಂಗವಾಗಿ ಮುಂಬೈನಲ್ಲಿ ಎರಡು ದಿನಗಳ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಲ್ಲಿ ಈ ಎಲ್ಲಾ ಬೆಳವಣಿಗೆಗಳಿಗೆ ಬ್ರೇಕ್ ಬೀಳುವ ನಿರೀಕ್ಷೆ ಇದೆ ಟ್ರಸ್ಟಿಗಳ ನಡುವೆ ಆಂತರಿಕ ಸಂಘರ್ಷ ಯಾಕೆ ನಾಲ್ಕು ಮಂದಿಯ ಸೂಪರ್ ಬೋರ್ಡ್ ಏನ್ ಮಾಡ್ತಿದೆ
ಇನ್ನು ಟಾಟಾ ಗ್ರೂಪ್ನ ಆಪ್ತ ಮೂಲಗಳು ತಿಳಿಸಿರುವಂತೆ ಟಾಟಾ ಟ್ರಸ್ಟ್ನ ನಾಲ್ವರು ಟ್ರಸ್ಟಿಗಳು ನಡೆಸುತ್ತಿರುವ ಅಧಿಕಾರ ಕಬಳಿಕೆಯ ಪ್ರಯತ್ನವನ್ನ ಸರ್ಕಾರವು ಮೂಖ ಪ್ರೇಕ್ಷಕನಾಗಿ ನೋಡಲು ಸಾಧ್ಯವಿಲ್ಲ ಆದ್ದರಿಂದ ಮೋದಿ ಸರ್ಕಾರ ಎಂಟ್ರಿ ಕೊಟ್ಟಿದೆ ಈ ವಿವಾದದ ಕೇಂದ್ರ ಬಿಂದುವಾಗಿ ನಾಲ್ವರು ಟ್ರಸ್ಟಿಗಳು ಕಾಣಿಸಿಕೊಳ್ಳುತ್ತಾ ಇದ್ದು ಡೇರಿಯಸ್ ಕಂಬಾಟ ಜಹಾಂಗೀರ್ ಹೆಚ್ಸಿ ಜಹಾಂಗೀರ್ ಪ್ರಮಿತ್ ಜಾವೇರಿ ಮತ್ತು ಮೆಹಲಿ ಮಿಸ್ತ್ರಿ ಇದ್ದು ಈ ನಾಲ್ವರ ಗುಂಪು ಒಂದು ರೀತಿಯ ಸೂಪರ್ ಬೋರ್ಡ್ ಆಗಿ ಕಾರ್ಯವನ್ನ ನಿರ್ವಹಿಸುತ್ತಾ ಇದೆ ಎನ್ನಲಾಗ್ತಿದೆ. ಈ ನಾಲ್ವರ ಸೂಪರ್ ಬೋರ್ಡ್ ಟಾಟಾ ಟ್ರಸ್ಟ್ನ ಅಧ್ಯಕ್ಷ ನೋವೆಲ್ ಟಾಟಾ ಅವರ ಅಧಿಕಾರವನ್ನ ದುರ್ಬಲ ಗೊಳಿಸಲು ಯತ್ನಿಸ್ತಾ ಇದೆ ಎಂಬ ಆರೋಪಗಳು ಕೇಳಿ ಬಂದಿವೆ. ಟಾಟಾ ಸನ್ಸ್ನ ಬೋರ್ಡ್ ಮೀಟಿಂಗ್ನ ನಡಾವಳಿಗಳನ್ನ ಪರಿಶೀಲಿಸುವುದು ಮತ್ತು ಕಂಪನಿಯ ನಾಮಿನೇಷನ್ ಮತ್ತು ಸಂಭಾವನೆ ಸಮಿತಿಯು ಅಂತಿಮಗೊಳಿಸಿದ ಸ್ವತಂತ್ರ ನಿರ್ದೇಶಕರ ಪಟ್ಟಿಗೆ ಅನುಮೋದನೆ ನೀಡುವಂತಹ ವಿಷಯಗಳಲ್ಲಿ ಈ ಗುಂಪು ಹಸ್ತಾಕ್ಷೇಪ ಮಾಡಲು ಪ್ರಯತ್ನಿಸಿದೆ ಅಂತ ಮೂಲಗಳು ತಿಳಿಸಿವೆ ಈ ನಡೆಗಳು ಟಾಟಾ ಗ್ರೂಪ್ನ ಸಂಸ್ಥೆಯೊಳಗೆ ಗಂಭೀರ ಕಾರ್ಪೊರೇಟ್ ಆಡಳಿತದ ಕಳವಳಗಳನ್ನ ಹುಟ್ಟುಹಾಕಿವೆ ಬೆಳವಣಿಗೆಯ ನಡುವೆಯೇ ಶೇರು ಮಾರುಕಟ್ಟೆ ಚಿಗಿತ ಉಪ್ಪಿನಿಂದ ಉಕ್ಕಿನವರೆಗೂ ಇರುವ ಟಾಟಾ ಗ್ರೂಪ್ ಇನ್ನು ಈ ಆಂತರಿಕ ಸಂಘರ್ಷದ ಸುದ್ದಿಯ ನಡುವೆಯು ಟಾಟಾ ಗ್ರೂಪ್ನ ಹಲವಾರು ಕಂಪನಿಗಳ ಶೇರುಗಳು ಏರಿಕೆ ಕಂಡಿರುವುದು ಕುತುಹಲವನ್ನ ಮೂಡಿಸಿದೆ.
ಟೈಟನ್ ಕಂಪನಿಯು ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗ್ರಾಹಕ ವ್ಯವಹಾರದಲ್ಲಿ ಶೇಕಡ 20ರಷ್ಟು ಬೆಳವಣಿಗೆಯನ್ನ ವರದಿ ಮಾಡಿದ ನಂತರ ಶೇರುಗಳು ಸುಮಾರು ಶೇಕಡ ನಾಲ್ಕರಷ್ಟು ಏರಿಕೆ ಕಂಡು ಪ್ರತಿ ಶೇರಿಗೆ 3552 ರೂಪಯ ತಲುಪಿದ್ರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಂದ್ರೆ ಟಿಸಿಎಸ್ ಶೇರ್ಗಳು ಸುಮಾರು ಶೇಕಡ ಎರಡರಷ್ಟು ಏರಿಕೆ ಕಂಡು 3025 ರೂಪಯ ತಲುಪಿವೆ. ರತನ್ ಟಾಟಾ ಅವರ ಪುಣ್ಯತಿಥಿಯ ದಿನವಾದ ಅಕ್ಟೋಬರ್ ಒರಂದು ನಿಗದಿಯಾಗಿದ್ದ ಪತ್ರಿಕಾ ಗೋಷ್ಠಿಯನ್ನ ಕಂಪನಿ ರದ್ದುಗೊಳಿಸಿದೆ. ಟಾಟಾ ಸ್ಟೀಲ್ ಟ್ರೆಂಟ್ ಮತ್ತು ಟಾಟಾ ಟೆಕ್ನಾಲಜಿಸ್ ಶೇರ್ಗಳು ಸಹ ಅಲ್ಪ ಏರಿಕೆಯನ್ನ ಕಂಡರೆ ಟಾಟಾ ಮೋಟಾರ್ಸ್ ಶೇರ್ಗಳು ಇಡಿಕೆ ಕಂಡಿವೆ ಟಾಟಾ ಸಂಸ್ಥೆ ಕೇವಲ ಈಗ ಒಂದು ಖಾಸಗಿ ಉದ್ಯಮವಾಗಿ ಉಳಿದಿಲ್ಲ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವಂತೆ ಬೆಳೆದಿದೆ. ಹಲವು ಸರ್ಕಾರಿ ಉದ್ಯಮಗಳಲ್ಲಿ ಸಹಭಾಗಿಯಾಗಿದೆ. ಜೆಮಶೆಡ್ ಜಿ ಟಾಟಾ ಅವರು 1868 ರಲ್ಲಿ ಸ್ಥಾಪಿಸಿದರು. ಮುಂಬೈನಲ್ಲಿ ಪ್ರಮುಖ ಕಚೇರಿ ಹೊಂದಿರುವ ಇದುನೂರಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಆರು ಖಂಡಗಳಲ್ಲಿ ಕಾರ್ಯವನ್ನ ನಿರ್ವಹಿಸುತ್ತಾ ಇದ್ದು ಮಾಹಿತಿ ತಂತ್ರಜ್ಞಾನ ಇಂಜಿನಿಯರಿಂಗ್ ಆಟೋಮೊಬೈಲ್ ಉಕ್ಕು ರಸಾಯನಿಕಗಳು ಗ್ರಾಹಕ ಉತ್ಪನ್ನಗಳು ಹಣಕಾಸು ಆತಿಥ್ಯ ವಿಮಾನಯಾನ ಸೇರಿ ಅನೇಕ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನ ಹೊಂದಿದೆ. ಟಾata ಗ್ರೂಪ್ ಸುಮಾರು 30 ಕಂಪನಿಗಳನ್ನ ಒಳಗೊಂಡಿದ್ದು. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿ, ಸರ್ವಿಸಸ್, ಟಾata ಮೋಟಾರ್ಸ್, tata ಸ್ಟೀಲ್, tata ಪವರ್, ಟಾಟಾ ಕೆಮಿಕಲ್ಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಟಾಟಾ ಕಮ್ಯೂನಿಕೇಶನ್ಸ್ ಮತ್ತು ಟಾಟಾ ಸನ್ಸ್ ನಂತಹ ಪ್ರಮುಖ ಕಂಪನಿಗಳು ಇವೆ. ಟಾಟಾ ಗ್ರೂಪ್ ನಲ್ಲಿ 7 ಲಕ್ಷಕ್ಕೂ ಅಧಿಕ ಉದ್ಯೋಗಗಳು ಕೆಲಸವನ್ನ ಮಾಡ್ತಾ ಇದ್ದಾರೆ. ಜೆಆರ್ಡಿ ಟಾಟಾ ಬಳಿಕ ರತನ್ ಟಾಟಾ ಅವರು ಒಪ್ಪಿನಿಂದ ಒಕ್ಕಿನವರೆಗೂ ಟಾಟಾ ಗ್ರೂಪ್ ಅನ್ನ ವಿಸ್ತರಿಸಿದ್ರು.
ಜನರ ಬಳಿಗೆ ತೆಗೆದುಕೊಂಡು ಹೋಗಿದ್ರು ಆದರೆ ಅವರ ನಿಧನದ ಬಳಿಕ ಟಾಟಾ ಗ್ರೂಪ್ ಸಮಸ್ಯೆಯನ್ನ ಅನುಭವಿಸುತ್ತಾ ಇದೆ. ಒಟ್ಟನಲ್ಲಿ ಟಾಟಾ ಟ್ರಸ್ಟ್ನ ಆಂತರಿಕ ಬಿಕ್ಕಟ್ಟಿಗೆ ಮೋದಿ ಸರ್ಕಾರ ಮಧ್ಯ ಪ್ರವೇಶಿಸಿದೆ ಟಾಟಾ ಸನ್ಸ್ನ ಸುಮಾರು ಶೇಕಡ 66ರಷ್ಟು ಪಾಲನ್ನ ಹೊಂದಿರುವ ಟಾಟಾ ಟ್ರಸ್ಟ್ ನಲ್ಲಿನ ಯಾವುದೇ ಅಸ್ಥಿರತೆ ಇಡೀ ದೇಶದ ಆರ್ಥಿಕತೆಯ ಮೇಲೆ ಪರಿಣಾಮವನ್ನ ಬೀರಬಲ್ಲದು ಇದೇ ಕಾರಣಕ್ಕೆ ಮೋದಿ ಸರ್ಕಾರವು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಟಾಟಾ ನಾಯಕತ್ವವು ಈ ಬಿಕ್ಕಟ್ಟನ್ನ ಹೇಗೆ ನಿಭಾಯಿಸಲಿದೆ? ಆ ಸೂಪರ್ ಬೋರ್ಡ್ ನ ಭವಿಷ್ಯವೇನು ಮತ್ತು ಟಾಟಾ ಗ್ರೂಪ್ ನ ಗೌರವ ಮತ್ತು ಸ್ಥಿರತೆಯನ್ನ ಕಾಪಾಡಲು ಯಾವ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ ಎಂಬುದನ್ನ ಇಡೀ ಕಾರ್ಪೊರೇಟ್ ಜಗತ್ತು ಮತ್ತು ದೇಶವೇ ಎದುರು ನೋಡ್ತಾ ಇದೆ. ಏನಾಗುತ್ತೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


