ನಾವು ಭಾರತದ ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಂದ್ರೆ ಟಿಸಿಎಸ್ ಬಗ್ಗೆ ಮಾತನಾಡೋದಕ್ಕೆ ಬಂದಿದ್ದೀವಿ. ಇದು ಎರಡು ಮುಖಗಳನ್ನ ಹೊಂದಿರುವ ಸುದ್ದಿ ಒಂದೆಡೆ ಭಾರತದ ಭವಿಷ್ಯವನ್ನೇ ಬದಲಿಸಬಲ್ಲ 60ಸಾವಿರ ಕೋಟಿ ರೂಪಾಯಿಯ ಒಂದು ಮೆಗಾ ಪ್ಲಾನ್ ಇನ್ನೊಂದೆಡೆ ಸಾವಿರಾರು ಟೆಕ್ಕಿಗಳ ಜೀವನಕ್ಕೆ ಆಘಾತ ನೀಡಿದ ಉದ್ಯೋಗ ಕಡಿತದ ಶಾಕಿಂಗ್ ಸುದ್ದಿ ಹಾಗಾದ್ರೆ ಏನಿದು ಟಿಸಿಎಸ್ ನ ಹೊಸ ಯೋಜನೆ ಮೂರೇ ತಿಂಗಳಲ್ಲಿ ಕಂಪನಿ ಸಾವಿರಾರು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದ್ಯಾಕೆ.
ವಿಶ್ವದ ಅತಿ ದೊಡ್ಡ ಎಐ ಚಾಲಿತ ತಂತ್ರಜ್ಞಾನ ಸೇವಾ ಕಂಪನಿ ಆಗುವ ಗುರಿ ಈ ಟಾರ್ಗೆಟ್ ತಲುಪಲು ಕಂಪನಿಯು ಭಾರತದಲ್ಲಿ ಒಂದು ದೈತ್ಯ ಹೆಜ್ಜೆ ಇಡುತಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಬರೋಬ್ಬರಿ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಿಸಲು ಟಿಸಿಎಸ್ ಯೋಜನೆ ರೂಪಿಸಿದೆ. ಇದಕ್ಕಾಗಿ ಸುಮಾರು ಆರರಿಂದ ಏಳು ಬಿಲಿಯನ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 60 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಈ ಒಂದು ಗಿಗಾವ್ಯಾಟ್ ಸಾಮರ್ಥ್ಯ ಅಂದ್ರೆ ಎಷ್ಟು ಅಂತ ನೀವು ಕೇಳಬಹುದು. ಸದ್ಯಕ್ಕೆ ಇಡೀ ಭಾರತದಲ್ಲಿರುವ ಎಲ್ಲಾ ಡೇಟಾ ಸೆಂಟರ್ಗಳ ಒಟ್ಟು ಸಾಮರ್ಥ್ಯವೇ ಸುಮಾರು 1.2 gಿಗಾವಟ್ ಮಾತ್ರ. ಅಂದ್ರೆ ಟಿಸಿಎಸ್ ಒಂದೇ ಕಂಪನಿ ಇಡೀ ದೇಶದ ಈಗಿನ ಸಾಮರ್ಥ್ಯಕ್ಕೆ ಸರಿಸಮವಾದ ಡೇಟಾ ಸೆಂಟರ್ ನಿರ್ಮಿಸಲು ಹೊರಟಿದೆ. ಟಿಸಿಎಸ್ ನ ಸಿಇಓ ಕೆ ಕೃತಿವಾಸನ್ ಅವರ ಪ್ರಕಾರ ಪ್ರತಿ 150 ಮೆಗಾವಟ್ ಕಂಪ್ಯೂಟಿಂಗ್ ಪವರ್ ಗೆ ಸುಮಾರು ಒಂದು ಬಿಲಿಯನ್ ಡಾಲರ್ ಅಂದ್ರೆ 9000 ಕೋಟಿ ರೂಪಾಯಿ ಬೇಕು. ಹೀಗಾಗಿ ಈ ಬೃಹತ್ ಯೋಜನೆಯನ್ನ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಕಂಪನಿ ತೀರ್ಮಾನಿಸಿದೆ ಅದಕ್ಕಾಗಿ ಟಾಟಾ ಕಂಪನಿ ಒಂದು ದೊಡ್ಡ ಯೋಜನೆ ರೂಪಿಸಿದೆ ಹೊಸ ಕಂಪನಿಯನ್ನೇ ಆರಂಭಿಸಲು ತೀರ್ಮಾನಿಸಿದೆ.
ಈ ಡೇಟಾ ಸೆಂಟರ್ ಉದ್ಯಮಕ್ಕಾಗಿ ಟಿಸಿಎಸ್ ಒಂದು ಹೊಸ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯನ್ನ ಸ್ಥಾಪಿಸಲಿದೆ ಈ ಡೇಟಾ ಸೆಂಟರ್ಗಳ ವಿಶೇಷತೆ ಅಂದರೆ ಇದರಲ್ಲಿ ಸಂಗ್ರಹವಾಗುವ ಎಲ್ಲಾ ಡೇಟಾ ಮತ್ತು ಕಂಪ್ಯೂಟಿಂಗ್ ಪ್ರಕ್ರಿಯೆಗಳು ಭಾರತದ ಗಡಿಯಳ ಒಳಗೆ ನಡೆಯಲಿದೆ ಇದನ್ನ ಸಾವರಿನ್ ಎಐ ಡೇಟಾ ಸೆಂಟರ್ ಅಂತ ಕರೀತಾರೆ ಇದರಿಂದ ಯಾರಿಗೆ ಉಪಯೋಗ ಇದು ಸರ್ಕಾರಿ ಸಂಸ್ಥೆಗಳು ಭಾರತೀಯ ಉದ್ಯಮಗಳು ಮತ್ತು ಅತಿ ದೊಡ್ಡ ಟೆಕ್ ಕಂಪನಿಗಳಿಗೆ ಸೇವೆ ನೀಡಲಿದೆ ಈ ಹೊಸ ಕಂಪನಿಯಿಂದ ಮೊದಲ ಆದಾಯ ಬರಲು ಸುಮಾರು 18ರಿಂದ 24 ತಿಂಗಳುಗಳು ಅಂದರೆ ಒಂದುವರೆಯಿಂದ ಎರಡು ವರ್ಷಗಳು ಬೇಕಾಗಬಹುದು ಅಂತ ಕಂಪನಿ ಅಂದಾಜಿಸಿದೆ ಆದರೆ ಈ ದೊಡ್ಡ ಕನಸಿನ ಇನ್ನೊಂದು ಮುಖ ಅತ್ಯಂತ ಅತ್ಯಂತ ಆಘಾತಕಾರಿಯಾಗಿದೆ ಇದೇ ಸಮಯದಲ್ಲಿ ಟಿಸಿಎಸ್ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಬಾರಿ ಕಡಿತ ಮಾಡಿದೆ ಹೌದು ನೀವು ಕೇಳಿದ್ದು ನಿಜ 2025 26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದ್ರೆ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಿಸಿಎಸ್ ನ ಒಟ್ಟು ಉದ್ಯೋಗಿಗಳ ಸಂಖ್ಯೆ 19755ರಷ್ಟು ಕಡಿಮೆಯಾಗಿದೆ ಅಂದ್ರೆ ಮೂರೇ ತಿಂಗಳಲ್ಲಿ ಕಂಪನಿ ಸುಮಾರು 20000ದಷ್ಟು ಉದ್ಯೋಗ ಕಡಿತ ಮಾಡಿದೆ ಇದರಿಂದ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 6,13,69 ರಿಂದ 5,93,314 ಕ್ಕೆ ಇಳಿದಿದೆ.
ಸ್ವಯಂ ಪ್ರೇರಿತ ಮತ್ತು ಬಲವಂತದ ಉದ್ಯೋಗ ಕಡಿತ ಎರಡನ್ನು ಒಳಗೊಂಡಿದೆ ಅಂತ ಸ್ವತಃ ಟಿಸಿಎಸ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ. ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ ಕಂಪನಿಯ ಪುನರಚನೆಯ ಭಾಗವಾಗಿ ಈ ಕಡಿತ ಮಾಡಲಾಗಿದೆ ಅಂತ ಅವರು ತಿಳಿಸಿದ್ದಾರೆ. ಆದರೆ ಐಟಿ ಉದ್ಯೋಗಿಗಳ ಸಂಘಟನೆಯಾದ ಎನ್ಐಟಿಇಎಸ್ ಟಿಸಿಎಸ್ ನ ಈ ವಾದವನ್ನ ಒಪ್ಪತಾ ಇಲ್ಲ. ಉದ್ಯೋಗ ಕಡಿತದ ಸಂಖ್ಯೆಯನ್ನು ಟಿಸಿಎಸ್ ಕಡಿಮೆ ಮಾಡಿ ತೋರಿಸ್ತಾ ಇದೆ. ನಿಜವಾದ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಅಂತ ಆರೋಪಿಸಿದೆ. ಅಷ್ಟೇ ಅಲ್ಲದೆ ಕಂಪನಿಯ ಆದಾಯ ಬೆಳಿತಾ ಇದ್ರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಜ ಮಾಡಿರೋದು ಆತಂಕಕಾರಿ ಅಂತ ಎನ್ಐಟಿಎಸ್ ಕಿಡಿಕಾರಿದೆ. ಹಾಗಾದ್ರೆ ಕಂಪನಿಯ ಆರ್ಥಿಕ ಸ್ಥಿತಿ ಹೇಗಿದೆ ಎರಡನೇ ತ್ರೈಮಾಸಿಕದ ಫಲಿತಾಂಶವನ್ನ ನೋಡಿದ್ರೆ ಟಿಸಿಎಸ್ 1275 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಇದು ಕಳೆದ ವರ್ಷಕ್ಕಿಂತ 1.4% ಹೆಚ್ಚಾಗಿದ್ರು ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಇದೆ. ಕಂಪನಿಯ ಆದಾಯ 65,799 ಕೋಟಿ ರೂಪಾಯಿಗಳಷ್ಟಿದೆ. ಅಲ್ಲದೆ ಪ್ರತಿ ಶೇರಿಗೆ ಟಿಸಿಎಸ್ 111 ಡಿವಿಡೆಂಡ್ ಕೂಡ ಘೋಷಿಸಿದೆ. ಅಂದರೆ ಕಂಪನಿ ಲಾಭದಲ್ಲಿದೆ. ಆದರೂ ಇಷ್ಟೊಂದು ದೊಡ್ಡ ಸಂಖ್ಯೆಯ ಉದ್ಯೋಗ ಕಡಿತ ಮಾಡಿರೋದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಹಾಗಾದರೆ ಕೊನೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿದ್ದು ಇಷ್ಟೇ.
ಒಂದು ಕಡೆ ಟಿಸಿಎಸ್ ತನ್ನ ಭವಿಷ್ಯವನ್ನ ಎಐ ಮತ್ತು ಡೇಟಾದಲ್ಲಿ ಕಾಣುತ್ತಿದೆ. ಅದಕ್ಕಾಗಿ 60ಸಾ ಕೋಟಿ ರೂಪಾಯಿಯಷ್ಟು ಬೃಹತ್ ಹೂಡಿಕೆ ಮಾಡಿ ಭಾರತವನ್ನ ಜಾಗತಿಕ ಡೇಟಾ ಹಬ್ ಮಾಡಲು ಹೊರಟಿದೆ.ಮತ್ತೊಂದೆಡೆ ಈ ತಂತ್ರಜ್ಞಾನದ ಬದಲಾವಣೆ ಉದ್ಯೋಗ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀಡುತ್ತಿದೆ. ಎಐ ಯುಗದ ಅಗತ್ಯಗಳಿಗೆ ತಕ್ಕಂತೆ ಕಂಪನಿಗಳು ತಮ್ಮನ್ನ ತಾವು ಬದಲಿಸಿಕೊಳ್ಳುತ್ತಿವೆ ಮತ್ತು ಈ ಪ್ರಕ್ರಿಯೆಯಲ್ಲಿ ಸಾವಿರಾರು ಉದ್ಯೋಗಗಳು ಬಲಿಯಾಗ್ತಾ ಇವೆ.ಇದು ಇದು ಕೇವಲ ಟಿಸಿಎಸ್ ನ ಕಥೆಯಲ್ಲ ಇಡೀ ಐಟಿ ಉದ್ಯಮದ ಭವಿಷ್ಯದ ಮುನ್ಸೂಚನೆಯು ಆಗಿರಬಹುದು ಈ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಐ ತಂತ್ರಜ್ಞಾನದಿಂದ ಉದ್ಯೋಗಗಳು ಹೆಚ್ಚಾಗುತ್ತಾ ಅಥವಾ ಕಡಿಮೆ ಆಗುತ್ತಾ.


