Friday, January 16, 2026
HomeTech NewsQ3 ಫಲಿತಾಂಶ ಪ್ರಕಟಣೆ: TCS, ಇನ್ಫೋಸಿಸ್‌ನಲ್ಲಿ ಏನು ಬದಲಾವಣೆ?

Q3 ಫಲಿತಾಂಶ ಪ್ರಕಟಣೆ: TCS, ಇನ್ಫೋಸಿಸ್‌ನಲ್ಲಿ ಏನು ಬದಲಾವಣೆ?

ದೇಶದ ಆರ್ಥಿಕತೆಯ ಬೆನ್ನೆಲಬು ಯಾವುದು ಅಂತ ಕೇಳಿದ್ರೆ ಕಣ್ಣು ಮುಚ್ಚಿಕೊಂಡು ಹೇಳಬಹುದು ಅದು ನಮ್ಮ ಐಟಿ ವಲಯ ಐಟಿ ಸೆಕ್ಟರ್ ಅಂತ ಆದರೆ ಇವತ್ತು ಆ ಬೆನ್ನೆಲುಬಿಗೆ ಒಂದು ಬಲವಾದ ಏಟು ಬಿದ್ದಿದೆ ದೇಶದ ನಂಬರ್ ಒನ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಟಿಸಿಎಸ್ ಒಂದೇ ಒಂದು ಕ್ವಾರ್ಟರ್ ನಲ್ಲಿ ಬರೋಬರಿ 2128 ಕೋಟಿ ರೂಪಾಯಿ ಲಾಭವನ್ನ ಕಳೆದುಕೊಂಡಿದೆ ಕಿತ್ಕೊಂಡು ಹೋಗಿದೆ ಇನ್ಫೋಸಿಸ್ ಕಥೆ ಕೇಳಿದ್ರೆ ಇನ್ನು ಶಾಕ್ ಆಗುತ್ತೆ 1289 ಕೋಟಿ ರೂಪಾಯಿ ಅವರದು ಕೂಡ ಕಿತ್ತುಕೊಂಡು ಹೋಗಿದೆ. ಹೆಚ್ಸಿಎಲ್ ಟೆಕ್ ಕೂಡ ಇದಕ್ಕೆ ಹೊರತಾಗಿಲ್ಲ. ಸುಮಾರು 956 ಕೋಟಿ ರೂಪಾಯ ಲಾಭ ಕೈ ಜಾರಿ ಹೋಗಿದೆ. ಇದು ಬಿಸಿನೆಸ್ ಇಲ್ಲದೆ ಪ್ರಾಜೆಕ್ಟ್ ಸಿಗದೆ ಆಗಿರೋ ಲಾಸ್ ಅಲ್ಲ. ದುಡ್ಡು ಬಂದಿದೆ ಆದರೆ ಮಾಯ ಆಗಿದೆ.

ಕಂಪನಿಗಳ ಅಕೌಂಟ್ ಬುಕ್ ನಲ್ಲಿದ್ದ ದುಡ್ಡು ಇದ್ದಕ್ಕಿದ್ದ ಹಾಗೆ ಸಾವಿರಾರು ಕೋಟಿ ರೂಪಾಯಿ ಮಾಯ ಆಗಿದೆ. ಇದ ಕಾರಣ ಕೇಂದ್ರ ಸರ್ಕಾರದ ಹೊಸ ರೂಲ್ ನ್ಯೂ ಲೇಬರ್ ಕೋಡ್. ಹಾಗಿದ್ರೆ ಏನಿದು ಆಘಾತ? ಲಾಭ ಮಾಡ್ತಾ ಇದ್ದ ಕಂಪನಿಗಳಿಗೆ ದಿಡೀರಂತ ಪೆಟ್ಟು ಬಿದ್ದಿರೋದು ಹೇಗೆ? ಸರ್ಕಾರದ ಈ ರೂಲ್ ನಿಂದ ಐಟಿ ಉದ್ಯೋಗಿಗಳ ಸಂಬಳ ಕಮ್ಮಿ ಆಗುತ್ತಾ ಅಥವಾ ಜಾಸ್ತಿ ಆಗುತ್ತಾ? ಈ 4000 ಕೋಟಿ ಲಾಸ್ ನ ಅಸಲಿ ಸ್ಟೋರಿ ಏನು? ಬನ್ನಿ ಕಾರ್ಪೊರೇಟ್ ಜಗತ್ತಿನ ಈ ಬಿಲಿಯನ್ ಡಾಲರ್ ಲೆಕ್ಕಾಚಾರವನ್ನ ಕಂಪ್ಲೀಟ್ಆಗಿ ಅರ್ಥ ಮಾಡಿಕೊಳ್ತಾ ಹೋಗೋಣ.

ಜನವರಿ ತಿಂಗಳಲ್ಲಿ ಎಲ್ಲಾ ಐಟಿ ಕಂಪನಿಗಳು ತಮ್ಮ ಕ್ಯೂ ತ್ರೀ ಅಂದ್ರೆ ಮೂರನೇ ತ್ರೈಮಾಸಿಕದ ರಿಸಲ್ಟ್ ಅನೌನ್ಸ್ ಮಾಡಿದ್ರು. ಅಲ್ಲಿ ಕಂಡಿದ್ದು ಬರಿ ಕೆಂಪು ಗೆರೆಗಳು ಮೊದಲಿಗೆ ಟಿಸಿಎಸ್ ಭಾರತದ ಅತಿ ದೊಡ್ಡ ಐಟಿ ಕಂಪನಿ. ಇವರು ಈ ಸಲ ಅನೌನ್ಸ್ ಮಾಡಿರೋ ನಂಬರ್ಸ್ ನೋಡಿ ಮಾರ್ಕೆಟ್ ಪಂಡಿತರೇ ತಲೆ ಕೆರಕೊಳ್ತಾ ಇದ್ದಾರೆ. ಲಾಭದಲ್ಲಿ ಬರೋಬರಿ 14% ಕುಸಿತ ಕಾರಣ ಎಕ್ಸೆಪ್ಷನಲ್ ಐಟಂ ಅಂತ ಒಂದು ಕಾಲಂ ಹಾಕಿ ಅದರಲ್ಲಿ ಬರೋಬರಿ 2128 ಕೋಟಿ ರೂಪಾಯಿನ ಮೈನಸ್ ಮಾಡಿದ್ದಾರೆ. ಇದರಲ್ಲಿ ಸಿಂಹಪಾಲು ಅಂದ್ರೆ 1816 ಕೋಟಿ ರೂಪಾಯಿ ಹೋಗಿರೋದು ಕೇವಲ ಗ್ರಾಚುವಿಟಿ ಪ್ರಾವಿಷನ್ ಗೆ ಒಂದುಸಲ ಊಹೆ ಮಾಡ್ಕೊಳ್ಳಿ 1816 ಕೋಟಿ ಎಷ್ಟೋ ಸಣ್ಣ ಪುಟ್ಟ ಕಂಪನಿಗಳ ಒಟ್ಟು ಆಸ್ತಿಗಿಂತ ಜಾಸ್ತಿ ಇಷ್ಟು ದೊಡ್ಡ ಮೊತ್ತವನ್ನ ಟಿಸಿಎಸ್ ಒಂದೇ ಏಟಿಗೆ ಲಾಸ್ ಅಂತ ಮೈನಸ್ ಮಾಡಿದೆ. ಇನ್ನು ಕರ್ನಾಟಕದ ಹೆಮ್ಮೆಯ ಇನ್ಫೋಸಿಸ್ ದು ಸೇಮ್ ಕಥೆ. ಇವರ ನೆಟ್ ಪ್ರಾಫಿಟ್ ಈ ಕ್ವಾರ್ಟರ್ ನಲ್ಲಿ 6654 ಕೋಟಿ ಇದೆ. ಆದರೆ ಇಲ್ಲೂ ಕೂಡ ಆ ಲೇಬರ್ ಕೋಡ್ನ ಭೂತ ಇದೆ.

ಇನ್ಫೋಸಿಸ್ ಗೆ ಬಿದ್ದಿರೋ ಪೆಟ್ಟು 1289 ಕೋಟಿ ರೂಪಾಯಿ ಇದರಿಂದ ಇವರ ಲಾಭದಲ್ಲೂ ಕೂಡ ಸುಮಾರು 2% ಇಳಿಕೆಯಾಗಿದೆ.ಹಚ್ಸಿಎಲ್ ಟೆಕ್ ವಿಚಾರಕ್ಕೆ ಬರೋದಾದ್ರೆ ಇವರ ಲಾಭ 11% ಕುಸಿತಿದೆ. ಇವರು ಕೂಡ ಸುಮಾರು 956 ಕೋಟಿ ರೂಪಾಯಿಯನ್ನ ಈ ಹೊಸ ರೂಲ್ ಗೋಸ್ಕರನೇ ತ್ಯಾಗ ಮಾಡಬೇಕಾಯಿತು. ಈ ಕಂಪನಿಗಳು ಮಾತ್ರ ಅಲ್ಲವಪ್ರೋ ಸೇರಿ ಎಲ್ಲಾ ಟೆಕ್ ಕಂಪನಿಗಳಿಗೂ ಎಲ್ಲಾ ಬಿಗ್ ಕಂಪನಿಗೂ ಟೆಕ್ ಅಂತಲ್ಲ ಎಲ್ಲದಕ್ಕೂ ಕೂಡ ಈಬಿಸಿ ಗ್ಯಾರಂಟಿ ಆದರೆ ಸದ್ಯಕ್ಕೆ ಮೂರೇ ಕಂಪನಿಗಳದ್ದು ಒಟ್ಟುಗೂಡಿಸಿದ್ರು ಕೂಡ 4300 ಕೋಟಿ ರೂಪಾಯಿ ಗಾನ್ ಇಲ್ಲಿ ನೀವು ಗಮನಿಸಬೇಕಾಗಿರೋದು ಒಂದು ಇಂಪಾರ್ಟೆಂಟ್ ಪಾಯಿಂಟ್ ಈ ಕಂಪನಿಗಳಿಗೆ ಪ್ರಾಜೆಕ್ಟ್ ಸಿಗದೆ ಲಾಸ್ ಆಗಿಲ್ಲ ಕ್ಲೈಂಟ್ಸ್ ದುಡ್ಡು ಕೊಡದೆ ಪೇಮೆಂಟ್ ಮಾಡದೆ ಲಾಸ್ ಆಗಿಲ್ಲ ಇದು ಆಪರೇಷನಲ್ ಲಾಸ್ ಅಲ್ಲ ಇದು ಸ್ಟ್ಯಾಚುಟರಿ ಹಿಟ್ ಆದರೆ ಕಾನೂನಿನ ಏಟು ಸರ್ಕಾರದ ಹೊಸ ಲೇಬರ್ ಕೋಡ್ ರೂಲ್ಸ್ ಎಫೆಕ್ಟ್ ನಿಂದಾಗಿ ಅನಿವಾರ್ಯವಾಗಿ ಈ ದುಡ್ಡನ್ನ ಲಾಸ್ ಅಂತ ತೋರಿಸಬೇಕಾದ ಲೀಗಲ್ ಅನಿವಾರ್ಯತೆ ಕಂಪನಿಗಳಿಗೆ ಬಂದಿದೆ. ಅಸಲಿಗೆಲಿ ಆಗಿದ್ದೇನು ಆ ಒನ್ ಟೈಮ್ ಹಿಟ್ ಹಿಂದಿರೋ ಮರ್ಮ ಏನು ಏನಿದು 50% ರೂಲ್ ಇದಕ್ಕೆಲ್ಲ ಕಾರಣ ಕೋಡ್ ಆನ್ ವೇಜಸ್ ಅಥವಾ ವೇತನ ಸಂಹಿತೆ ಇದರೊಳಗೊಂದು ಮೇಜರ್ ರೂಲ್ ಇದೆ.

ಕಳೆದ ಬಾರಿ ಕೂಡ ಹೇಳಿದ್ವಿ ಅದನ್ನ ಮತ್ತೆ ಈಗ ಸಿಂಪಲ್ ಆಗಿ ಹೇಳ್ತೀವಿ ಕೇಳಿ ನಿಮ್ಮ ಪೂರ್ತಿ ಸಂಬಳ ಅಥವಾ ಸಿಟಿಸಿ ಕಾಸ್ಟ್ ಕಂಪನಿ ಏನಿದೆ ಅಲ್ವಾ ಅದರಲ್ಲಿ ನಿಮ್ಮ ಬೇಸಿಕ್ ಸ್ಯಾಲರಿ ಅಥವಾ ಮೂಲ ವೇತನ ಎಷ್ಟ ಇರಬೇಕು ಅನ್ನೋದೇ ಇಲ್ಲಿ ಮೇನ್ ಮ್ಯಾಟರ್ ಈ ಹಿಂದೆ ಏನ್ ಮಾಡ್ತಿದ್ರು ಕಂಪನಿಗಳು ಟ್ಯಾಕ್ಸ್ ಉಳಿಸೋಕೆ ಮತ್ತು ಪಿಎಫ್ ಕಾಂಟ್ರಿಬ್ಯೂಷನ್ ಉಳಿಸೋಕೆ ನಿಮ್ಮ ಬೇಸಿಕ್ ಸ್ಯಾಲರಿನ ಆದಷ್ಟು ಕಮ್ಮಿ ತೋರಿಸ ಇದ್ರು ಎಷ್ಟೋ ಕಡೆ ಇದು ಟೋಟಲ್ ಸಂಬಳದ 30% ಅಥವಾ 40% ಅಷ್ಟೇ ಇರ್ತಾ ಇತ್ತು ಮಿಕ್ಕಿದೆಲ್ಲ ಹೆಚ್ಆರ್ಎ ಸ್ಪೆಷಲ್ ಅಲೋಯನ್ಸ್ ಇಂಟರ್ನೆಟ್ ಅಲೋಯನ್ಸ್ ಅಂತೆಲ್ಲ ಏನೇನೋ ಹೆಸರು ಕೊಟ್ಟು ತುಂಬುತಾ ಇದ್ರು ಆದರೆ ಈಗ ಸರ್ಕಾರ ಹೇಳಿದೆ ಇದೆಲ್ಲ ಆಗಲ್ಲ ಉದ್ಯೋಗಿಯ ಸೇಫ್ಟಿ ನಮಗೆ ಮುಖ್ಯ ಇನ್ನ ಮುಂದೆ ಪ್ರತಿಯೊಬ್ಬ ಉದ್ಯೋಗಿಯ ಬೇಸಿಕ್ ಸ್ಯಾಲರಿ ಪ್ಲಸ್ ಡಿಎ ಅವರ ಟೋಟಲ್ ಸಂಬಳದ ಮಿನಿಮಮ್ 50% ಇರಲೇಬೇಕು ಅಂತ ಅಂದ್ರೆ ನಿಮ್ಮ ಸಂಬಳ 1 ಲಕ್ಷ ಇದ್ರೆ ಅದರಲ್ಲಿ 50% ಅಂದ್ರೆ 50,000 ಬೇಸಿಕ್ ಇರಲೇಬೇಕು ಉಳಿದ 50,000 ನಲ್ಲಿ ನೀವು ಯಾವ ಅಲೋಯನ್ಸ್ ಬೇಕಾದ್ರೂ ಕೊಟ್ಕೊಳ್ಳಿ ಆದರೆ ಬೇಸಿಕ್ ಮಾತ್ರ 50% ಸ ಗಿಂತ ಕಮ್ಮಿ ಇರೋ ಹಾಗಿಲ್ಲ ಕೇಳೋಕೆ ಚೆನ್ನಾಗಿದೆ ಅಲ್ವಾ ಬೇಸಿಕ್ ಜಾಸ್ತಿ ಆದ್ರೆ ನಮಗೆ ಒಳ್ಳೇದಲ್ವಾ ಅಂತ ನಿಮಗೆ ಅನಿಸಬಹುದು.

ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ ಈ ರೂಲ್ ನಿಂದ ಕಂಪನಿಗಳ ಖಜಾನೆಗೆ ಕನ್ನವಿ ಬಿತ್ತು ಅದು ಹೇಗೆ ಅಂತ ಗೊತ್ತಾದ್ರೆ ಆಶ್ಚರ್ಯ ಆಗುತ್ತೆ ಲೆಕ್ಕಾಚಾರ ತಲೆ ಕೆಳಗಾಗಿದ್ದು ಹೇಗೆ ಇದನ್ನ ಅರ್ಥ ಮಾಡ್ಕೊಳ್ಳೋಕ್ಕೆ ನಾವು ಒಂದು ಸಣ್ಣ ಗಣಿತ ಮಾಡೋಣ ಗಮನ ಕೊಟ್ಟು ಕೇಳಿ ಇದು ತುಂಬಾ ಇಂಪಾರ್ಟೆಂಟ್ ನಿಮ್ಮ ಫ್ಯೂಚರ್ ದುಡ್ಡಿನ ವಿಚಾರ ಇದು ಭಾರತದಲ್ಲಿ ಗ್ರಾಚುವಿಟಿ ಮತ್ತು ಲೀವ್ ಎನ್ಕ್ಯಾಶ್ಮೆಂಟ್ ಅಂತ ಎರಡು ಬೆನಿಫಿಟ್ಗಳನ್ನ ಎಂಪ್ಲಾಯಿಸ್ಗೆ ಕೊಡಲಾಗುತ್ತೆ ಇದರ ಲೆಕ್ಕಾಚಾರ ನಡೆಯುದು ನಮ್ಮ ಬೇಸಿಕ್ ಸ್ಯಾಲರಿ ಮೇಲೆ ನಿಮ್ಮ ಟೋಟಲ್ ಸಂಬಳದ ಮೇಲೆ ಅಲ್ಲ ಈಗೊಂದು ಉದಾಹರಣೆ ತಗೊಳಿ ಒಬ್ಬ ಉದ್ಯೋಗಿಯ ತಿಂಗಳ ಸಂಬಳ ಸಿಟಿಸಿ ಒ ಲಕ್ಷ ರೂಪಾಯಿ ಅಂತ ಇಟ್ಕೊಳ್ಳೋಣ ಹಳೆ ರೂಲ್ ಪ್ರಕಾರ ಅವರ ಬೇಸಿಕ್ ಸ್ಯಾಲರಿ ಬರಿ 30,000 ಇರ್ತಾ ಇತ್ತು 30% ಗ್ರಾಚುವಿಟಿ ಫಾರ್ಮುಲಾ ಪ್ರಕಾರ ನೀವು ಸ್ಕ್ರೀನ್ ಮೇಲೆ ಫಾರ್ಮುಲಾ ನೋಡ್ತಾ ಇದ್ದೀರಿ ಅದರ ಪ್ರಕಾರ ಕಂಪನಿ ಈ ಉದ್ಯೋಗಿಗಾಗಿ ವರ್ಷಕ್ಕೆ ಎತ್ತಿಡ್ತಾ ಇದ್ದ ದುಡ್ಡು ಸುಮಾರು 17308ರೂಪ ಹೊಸ 50% ರೂಲ್ ಪ್ರಕಾರ ಅದೇ ಉದ್ಯೋಗಿಯ ಬೇಸಿಕ್ ಸ್ಯಾಲರಿ ಈಗ 50,000 ಆಗ್ಲೇಬೇಕು ಈಗ ಅದೇ ಫಾರ್ಮುಲಾ ಹಾಕಿ ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಹೊಸ ಫಿಗರ್ಸ್ ನ ಈಗ ಕಂಪನಿ ವರ್ಷಕ್ಕೆ ಎತ್ತಿಡಬೇಕಾಗಿರೋ ದುಡ್ಡು ಈ ಫಾರ್ಮುಲಾ ಪ್ರಕಾರ 28846 ರೂಪಯ ವ್ಯತ್ಯಾಸ ನೋಡಿ ಒಬ್ಬ ಉದ್ಯೋಗಿಗೆ ಒಂದೇ ವರ್ಷಕ್ಕೆ ಕಂಪನಿಗೆ ಬಿದ್ದಿರೋ ಎಕ್ಸ್ಟ್ರಾ ಹೊರ ಸುಮಾರು 11500 ರೂಪಾಯ ಇಲ್ಲಿಗೆ ಮುಗಿಲಿಲ್ಲ.

ಕಂಪನಿಗಳಿಗೆ ನಿಜವಾದ ಪೆಟ್ಟು ಬಿದ್ದಿರೋದು ರೆಟ್ರೋಸ್ಪೆಕ್ಟಿವ್ ಪ್ರಾವಿಷನಿಂಗ್ ಅನ್ನೋ ಒಂದೇ ಒಂದು ಪದದಿಂದ ಹಳೆ ಪಾಪಕ್ಕೆ ಈಗ ಪ್ರಾಯಶ್ಚಿತ ಏನಿದು ರೆಟ್ರೋಸ್ಪೆಕ್ಟಿವ್ ಸಿಂಪಲ್ ಆಗಿ ಹೇಳ್ತೇವೆ ಒಬ್ಬ ಉದ್ಯೋಗಿ ಕಳೆದ 10 ವರ್ಷಗಳಿಂದ ಟಿಸಿಎಸ್ ನಲ್ಲೋ ಇನ್ಫೋಸಿಸ್ ನಲ್ಲೋ ಕೆಲಸ ಮಾಡ್ತಿದ್ದಾರೆ ಅಂತ ಇಟ್ಕೊಳ್ಳಿ ಆಗ ಸರ್ಕಾರದ ರೂಲ್ ಏನಿತ್ತು ಬೇಸಿಕ್ ಸ್ಯಾಲರಿ ಕಮ್ಮಿ ಇಟ್ಕೊಳ್ಳಿ ಗ್ರಾಚುಯುಟಿ ಕಮ್ಮಿ ಕೊಡಿ ಅಂತ ಕಂಪನಿಗಳು ಲೆಕ್ಕ ಮಾಡ್ತಿದ್ವು ಅದರ ಪ್ರಕಾರವೇ ಕಂಪನಿಗಳು ಆ ಉದ್ಯೋಗಿಯ ಗ್ರಾಚುವಿಟಿಗಾಗಿ ಸ್ವಲ್ಪ ಸ್ವಲ್ಪ ದುಡ್ಡನ್ನ ಎತ್ತಿಡ್ತಾ ಇದ್ವು ಆದರೆ ಈಗ ಬಂತಲ್ಲ ಹೊಸ ರೂಲ್ ಇದು ಬರಿ ಇವತ್ತಿನಿಂದ ಅನ್ವಯ ಆಗಲ್ಲ ಇದು ಆ ಉದ್ಯೋಗಿಯ ಗತ ಕಾಲಕ್ಕೂ ಅನ್ವಯ ಆಗುತ್ತೆ ಸರ್ಕಾರ ಏನ್ ಹೇಳ್ತಾ ಇದೆ ಗೊತ್ತಾ ರೀ ಕಂಪನಿಗಳೇ ನಿಮ್ಮ ಉದ್ಯೋಗಿಯ ಬೇಸಿಕ್ ಸ್ಯಾಲರಿ ಈಗ ಜಾಸ್ತಿ ಮಾಡಿದ್ದೀರಲ್ವಾ ಹಾಗಿದ್ರೆ ಈ ಹೊಸ ಜಾಸ್ತಿ ಇರೋ ಸಂಬಳದ ಲೆಕ್ಕದಲ್ಲೇ ಆತ ಕೆಲಸ ಮಾಡಿದ ಕಳೆ 10 ವರ್ಷಕ್ಕೂ ಗ್ರಾಚುಯ್ಯುವಿಟಿ ಲೆಕ್ಕ ಹಾಕಿ ಅಂತ ಅಂದ್ರೆ 2016 ರಲ್ಲಿ 17 ರಲ್ಲಿ 18ರಲ್ಲಿ ನೀವು ಆತನಿಗೆ ಏನು ಕಮ್ಮಿ ಗ್ರಾಚುವಿಟಿ ಲೆಕ್ಕ ಹಾಕಿದ್ರೋ ಆ ಡಿಫರೆನ್ಸ್ ದುಡ್ಡನ್ನ ಈಗಲೇ ಈ ಕ್ಷಣವೇ ತುಂಬಿಸಿ ಅಂತ ಹೇಳ್ತಾ ಇದೆ.

ಇದು ಬರಿ ಬಾಯಿ ಮಾತು ಲೆಕ್ಕ ಅಲ್ಲ ಸ್ಕ್ರೀನ್ ಮೇಲೆ ಈ ನಂಬರ್ಸ್ ನೀವು ನೋಡಿ ಸ್ನೇಹಿತರೆ ಆವಾಗಲೂ ನಿಮಗೆ ಆಶ್ಚರ್ಯ ಆಗುತ್ತೆ. ರಫ್ ಆಗಿ ಒಂದು ಲೆಕ್ಕ ಕೊಡ್ತೀವಿ. ಒಬ್ಬ ಎಂಪ್ಲಾಯಿ 10 ವರ್ಷ ಸರ್ವಿಸ್ ಅವರ ಬೇಸಿಕ್ ಸ್ಯಾಲರಿ ಮೊದಲು 30ಸಾ ಇತ್ತು. ಈಗ ಹೊಸ ರೂಲ್ ಇಂದ 50,000 ಆಗಿದೆ. ಗ್ರಾಚುವಿಟಿ ಲೆಕ್ಕದಲ್ಲಿ 15 ಡೇಸ್ ಪರ್ ಇಯರ್ ವ್ಯಾಲ್ಯೂ ಅಂದ್ರೆ ಒಂದು ವರ್ಷಕ್ಕೆ ಸುಮಾರು 10,000 ರೂಪ ಡಿಫರೆನ್ಸ್ ಬಂತು ಅಂತ ಇಟ್ಕೊಳ್ಳಿ. 10 ವರ್ಷಕ್ಕೆ ಎಷ್ಟಾಯ್ತು ಒ ಲಕ್ಷ ರೂಪಾಯಿ ಅಂದ್ರೆ ಒಬ್ಬ ಉದ್ಯೋಗಿಗೆ ಈಗ ಎಕ್ಸ್ಟ್ರಾ ಒ ಲಕ್ಷ ರೂಪಾಯಿ ಎತ್ತಿಡಬೇಕು. ಅದು ಈ ಪರ್ಟಿಕ್ಯುಲರ್ ಅಂಕಿ ಅಂಶಗಳ ಕ್ಯಾಲ್ಕುಲೇಷನ್ ಮೇಲೆ ಇದು ವೇರಿ ಆಗುತ್ತೆ ಸೇಮ್ ಇರಲ್ಲ ಎಲ್ಲರಿಗೂ ಕೂಡ. ಈಗ ಟಿಸಿಎಸ್ ಕಡೆಗೆ ಬನ್ನಿ ಅವರ ಹತ್ರ ಇರೋದು 100 ಜನ ಅಲ್ಲ ಸಾವಿರ ಜನ ಅಲ್ಲ ಬರೋಬರಿ 6 ಲಕ್ಷಕ್ಕೂ ಅಧಿಕ ಉದ್ಯೋಗಿಗಳು.ಇನ್ಫೋಸಿಸ್ ಇನ್ಫೋಸಿಸ್ ಹತ್ರ 3 ಲಕ್ಷಕ್ಕೂ ಅಧಿಕ ಉದ್ಯೋಗಿಗಳು. ಆ 1 ಲಕ್ಷವನ್ನ ಈ 6 ಲಕ್ಷ ಜನರ ಜೊತೆಗೆ ಗುಣಿಸಿ ನೋಡಿ. ಕ್ಯಾಲ್ಕುಲೇಟರ್ ನಲ್ಲಿ ಜಾಗ ಸಾಕಾಗಲ್ಲ. ಅದಕ್ಕೆ ಟಿಸಿಎಸ್ ಗೆ 1800 ಕೋಟಿಗೂ ಅಧಿಕ ಗ್ರಾಚುಯಿಟಿಗೆ ಹೋಯ್ತು. ಜೊತೆಗೆ ಲೀವ್ ಎನ್ಕ್ಯಾಶ್ಮೆಂಟ್ ರಜೆ ದಿನಗಳ ಸಂಬಳ ಬೇರೆ.

ಬೇಸಿಕ್ ಮೇಲೆ ಲೆಕ್ಕ ಹಾಕೋದು ಅದು ಸೇರಿಕೊಂಡಾಗ ಆ ಮೊತ್ತ 2128 ಕೋಟಿಗೆ ಬಂದು ನಿಂತಿದೆ. ಇದನ್ನೇ ಹೇಳೋದು ಹಳೆ ಪಾಪಕ್ಕೆ ಈಗ ಪ್ರಾಯಶ್ಚಿತ ಅಂತ. ಒಬ್ಬ ಉದ್ಯೋಗಿಯ 10 15 ವರ್ಷದ ಬಾಕಿಯನ್ನ ಒಂದೇ ಕ್ವಾರ್ಟರ್ ನಲ್ಲಿ ತುಂಬಿಸಬೇಕು ಅಂದ್ರೆ ಯಾವ ಕಂಪನಿ ತಡೆಕೊಳ್ಳುತ್ತೆ ಹೇಳಿ. ಕಂಪನಿಗಳು ಇಷ್ಟು ದಿನ ಕಮ್ಮಿ ಬೇಸಿಕ್ ತೋರಿಸಿ ಏನು ಉಳಿಸಿದರು ಅದನ್ನ ಈಗ ಬಡ್ಡಿ ಸಮೇತ ಒಟ್ಟಿಗೆ ಎತ್ತಿಡಬೇಕಾದ ಪರಿಸ್ಥಿತಿ ಬಂದಿದೆ. ಇದೇ ನೋಡಿ ಟಿಸಿಎಸ್ ಮತ್ತು ಇನ್ಫೋಸಿಸ್ ಲಾಭಕ್ಕೆ ಕತ್ತರಿ ಹಾಕಿರೋ ಅಸಲಿ ಕಾರಣ. ಇನ್ನು ಇಷ್ಟೆಲ್ಲಾ ಟೆನ್ಶನ್ ನಡುವೆ ನಿಮಗೊಂದು ಬ್ರೇಕ್ ಬೇಕು ಅಂತ ಹೇಳಿದ್ರೆ ಸೆವೆನ್ ಸೈನ್ಸ್ ಟೂರಿಸಂ ನ ಸೌತ್ ಇಂಡಿಯಾ ಟ್ರಿಪ್ ಹೋಗಬಹುದು ರಾಮೇಶ್ವರಂ ಪದ್ಮನಾಭ ಸ್ವಾಮಿ ಟೆಂಪಲ್ ೆಲ್ಲ ನೀವು ಹೋಗಿ ಬರಬಹುದು. ಕೇವಲ 18700 ರೂಪಾಯಿಗೆ ಡೀಟೇಲ್ಸ್ ಇಲ್ಲಿದೆ ಆಸಕ್ತರು ಕಾಲ್ ಮಾಡಿ. ಉದ್ಯೋಗಿಗಳಿಗೆ ಲಾಭನ ನಷ್ಟನ ಇದರಲ್ಲಿ ಗುಡ್ ನ್ಯೂಸ್ ಇದೆ ಬ್ಯಾಡ್ ನ್ಯೂಸ್ ಕೂಡ ಇದೆ.

ಗುಡ್ ನ್ಯೂಸ್ ಏನಪ್ಪಾ ಅಂದ್ರೆ ನಿಮ್ಮ ರಿಟೈರ್ಮೆಂಟ್ ಸೇಫ್ ಆಗುತ್ತೆ ನಿಮ್ಮ ಪಿಎಫ್ ಪ್ರಾವಿಡೆಂಟ್ ಫಂಡ್ ಕಟ್ ಆಗೋದು ಕೂಡ ಬೇಸಿಕ್ ಸ್ಯಾಲರಿ ಮೇಲೆ ಅಲ್ವಾ ಸೋ ಬೇಸಿಕ್ ಜಾಸ್ತಿ ಆದ್ರೆ ನಿಮ್ಮ ಪಿಎಫ್ ಅಕೌಂಟ್ ಗೆ ಹೋಗೋ ದುಡ್ಡು ಜಾಸ್ತಿ ಆಗುತ್ತೆ ಟೇಕ್ ಹೋಮ್ ಸ್ವಲ್ಪ ಕಮ್ಮಿ ಆಗುತ್ತೆ. ಆದ್ರೆ ಗ್ರಾಚುವಿಟಿ ದುಡ್ಡು ಜಾಸ್ತಿ ಆಗುತ್ತೆ. ನೀವು ಕೆಲಸ ಬಿಡುವಾಗ ಅಥವಾ ರಿಟೈರ್ ಆಗುವಾಗ ಜಾಸ್ತಿ ಕಾಸು ಸಿಗುತ್ತೆ. ಆದರೆ ಬ್ಯಾಡ್ ನ್ಯೂಸ್ ಏನಪ್ಪಾ ಅಂದ್ರೆ ನಿಮ್ಮ ಟೇಕ್ ಹೋಂ ಸ್ಯಾಲರಿ ಅಥವಾ ಕೈಗೆ ಸಿಗೋ ಸಂಬಳ ಕಮ್ಮಿ ಆಗುತ್ತೆ. ಇದನ್ನ ಕಳೆದ ಬಾರಿ ಕೂಡ ಹೇಳಿದ್ವಿ. ನಿಮ್ಮಒ ಲಕ್ಷ ಸಂಬಳದಲ್ಲಿ ಮೊದಲು 3000 ರೂಪಾ ಪಿಎಫ್ ಗೆ ಹೋಗ್ತಾ ಇದ್ರೆ ಈಗ 5000 ರೂಪ ಹೋಗುತ್ತೆ. ಅಂದ್ರೆ ತಿಂಗಳಿಗೆ 2000 ರೂಪಾ ನಿಮ್ಮ ಕೈಗೆ ಬರೋದು ಕಮ್ಮಿ ಆಯ್ತು. ಅಗೈನ್ ಒ ಲಕ್ಷ ಸಂಬಳದ ಕ್ಯಾಲ್ಕುಲೇಷನ್ ಅಲ್ಲಿ ಹೇಳಿದ್ದು. ಅಷ್ಟು ಮಾತ್ರ ಅಲ್ಲ ಕಂಪನಿಗಳಿಗೆ ಈಗ ಕಾಸ್ಟ್ ಪರ್ ಎಂಪ್ಲಾಯಿ ಜಾಸ್ತಿ ಆಗ್ತಾ ಇದೆ. ಅಂದ್ರೆ ಒಬ್ಬ ಎಂಪ್ಲಾಯಿನ ಮೇಂಟೈನ್ ಮಾಡೋದು ಇನ್ನ ಮುಂದೆ ದುಬಾರಿ. ಸೋ ಅವರ ಏನ್ು ಮಾಡ್ತಾರೆ ಹೊಸಬರನ್ನ ಕೆಲಸಕ್ಕೆ ತಗೊಳೋದನ್ನ ಕಮ್ಮಿ ಮಾಡಬಹುದು.

ಹೈರಿಂಗ್ ಫ್ರೀಸ್ ಈಗ ಆಲ್ರೆಡಿ ಟಿಸಿಎಸ್ ಇನ್ಫೋಸಿಸ್ ಅಟ್ರಿಷನ್ ರೇಟ್ ಕೆಲಸ ಬಿಡೋರ ಸಂಖ್ಯೆ ಕಮ್ಮಿ ಇದೆ ಅಂತ ಹೇಳ್ತಾ ಇದ್ದಾರೆ. ಈಗ ಈ ಹೊಸ ಹೊರೆ ಕೂಡ ಬಿದ್ದಿರೋದ್ರಿಂದ ಫ್ರೆಶರ್ಸ್ ಹೈರಿಂಗ್ ಗೆ ದೊಡ್ಡ ಬ್ರೇಕ್ ಬೀಳೋ ಸಾಧ್ಯತೆ ಇದೆ. ಕ್ಯಾಂಪಸ್ ಸೆಲೆಕ್ಷನ್ ಗೆ ಬರೋ ಕಂಪನಿಗಳು 10 ಸಲ ಯೋಚನೆ ಮಾಡ್ತಾರೆ. ಈ ವರ್ಷದ ಅಪ್ರೈಸಲ್ ಅಥವಾ ಹೈಕ್ ಕೊಡುವಾಗ ಚೌಕಾಸಿ ಮಾಡಬಹುದು. ವೇರಿಯೇಬಲ್ ಪೇ ಕಟ್ ಆಗಬಹುದು. ಪ್ರತಿ ಕ್ವಾರ್ಟರ್ ನಲ್ಲಿ ಕೊಡು ವೇರಿಯೇಬಲ್ ಪೇ ಮೇಲೆ ಕತ್ತರಿ ಬೀಳಬಹುದು. ನೋಡಿ ನಮಗೆ ಲೇಬರ್ ಕೋಡ್ ಲಾಸ್ ಆಗ್ತಾ ಇದೆ ಮಾರ್ಜಿನ್ ಪ್ರೆಷರ್ ಇದೆ ಅಂತ ಹೇಳಿ ಹೈಕ್ ಅನ್ನ ರೆಡ್ಯೂಸ್ ಮಾಡಬಹುದು. ಲಾಭದ ಮಾರ್ಜಿನ್ ಸರಿ ಮಾಡ್ಕೊಳ್ಳೋಕೆ ಎಲ್ಲಿ ಸಾಧ್ಯವೋ ಅಲ್ಲಿ ಕಾಸ್ಟ್ ಕಟಿಂಗ್ ಮಾಡೋ ಸಾಧ್ಯತೆ ದಟ್ಟವಾಗಿದೆ. ಹಾಗೆ ಆಟೋಮೇಷನ್ ಪುಶ್ ಒಬ್ಬ ಮನುಷ್ಯನನ್ನ ಇಟ್ಕೊಂಡ್ರೆ ಇಷ್ಟೆಲ್ಲಾ ಗ್ರಾಚುವಿಟಿ ಪಿಎಫ್ ಲೇಬರ್ ಕೋಡ್ ತಲೆನೋವು ಆ ಜಾಗಕ್ಕೆ ಒಂದು ಎಐ ತಗೊಂಡು ಬಂದ್ರೆ ರೋಬೋಟ್ಸ್ ತಂದ್ರೆ ಈ 4000 ಕೋಟಿ ಲಾಸ್ ಕಂಪನಿಗಳನ್ನ ಆಟೋಮೇಷನ್ ಕಡೆಗೆ ಇನ್ನು ವೇಗವಾಗಿ ಈ ಕಾರಣಕ್ಕೆ ಪುಶ್ ಮಾಡಬಹುದು. ಮುಂದೇನು ಭಯಪಡಬೇಕಾ ಖಂಡಿತ ಇಲ್ಲ ಎಕ್ಸ್ಪರ್ಟ್ ಪ್ರಕಾರ ಇದೊಂದು ಒನ್ ಟೈಮ್ ಕ್ಲೀನ್ ಅಪ್ ಅಂದ್ರೆ ಹಳೆ ಮನೆಯ ಕಸವನ್ನೆಲ್ಲ ಒಂದು ಸಲಿ ಕ್ಲೀನ್ ಮಾಡಿ ರೆಡಿ ಮಾಡ್ಕೊಂಡ ಹಾಗೆ ಗಾಡಿಯನ್ನ ಸರ್ವಿಸ್ ಮಾಡಿದೆ ಸುಮಾರು ಟೈಮ್ ಆಗಿರೋದಕ್ಕೆ ಸರ್ವಿಸ್ ಕೊಟ್ಟರೆ ಜಾಸ್ತಿ ಕೆಲಸ ಬರುತ್ತಲ್ಲ ಖರ್ಚು ಬರುತ್ತಲ್ಲ ಆತರ ಈ ಕ್ವಾರ್ಟರ್ ನಲ್ಲಿ ಅದೆಲ್ಲ ಕ್ಲಿಯರ್ ಆಗುತ್ತೆ.

ಹಳೆ ಎಲ್ಲಾ ಅಕೌಂಟ್ ಕ್ಲಿಯರ್ ಆಗುತ್ತೆ ಮುಂದಿನ ಕ್ವಾರ್ಟರ್ ನಿಂದ ಈ ಎಕ್ಸ್ಟ್ರಾ ಹೊರೆ ಮತ್ತು ಮತ್ತೆ ಬರೋದಿಲ್ಲ ಜೊತೆಗೆ ಶೇರು ಪೇಟೆ ಕೂಡ ಇದನ್ನ ನೆಗೆಟಿವ್ ಆಗಿ ತಗೊಂಡಿಲ್ಲ ರಿಸಲ್ಟ್ ಬಂದಮೇಲೆ ಟಿಸಿಎಸ್ ಮತ್ತು ಇನ್ಫೋಸಿಸ್ ಶೇರ್ಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಆಗಲಿಲ್ಲ ಇನ್ವೆಸ್ಟರ್ಸ್ಗೆ ಆಲ್ರೆಡಿ ಗೊತ್ತಿತ್ತು ಇದು ಬಿಸಿನೆಸ್ ಬಿನೆಸ್ ನಲ್ಲಿ ಏನು ಪ್ರಾಬ್ಲಮ್ ಇಲ್ಲ ಕಂಪನಿಗಳದು ಅಕೌಂಟಿಂಗ್ ಅಡ್ಜಸ್ಟ್ಮೆಂಟ್ ಅಂತ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಕೈಗೆ ಅವಾಗವಾಗ ಖರ್ಚು ಮಾಡೋಕೆ ಸಿಗೋ ಸಂಬಳ ಜಾಸ್ತಿ ಇರಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments