ಒಬ್ಬರಾದರೂ ಟೆಕ್ಕಿಯಾಗಿರ್ತಾರೆ ಅಷ್ಟರ ಮಟ್ಟಿಗೆ ಐಟಿ ಉದ್ಯೋಗಿಗಳು ನಮ್ಮಲ್ಲಿದ್ದಾರೆ ಆದ್ರೆ ಈಗ ಅವರೇ ಒಂದು ದೊಡ್ಡ ಗಂಡಾಂತರಕ್ಕೆ ಸಿಲುಕಿದ್ದಾರೆ ಸಾಲು ಸಾಲು ಆಫ್ ಗಳು ನೇಮಕಾತಿಯಲ್ಲಿ ಇಳಿಕೆ ಐಟಿ ವಲಯವನ್ನ ಹಿಂಡಿ ಹಿಪ್ಪೆ ಮಾಡಿದೆ ಇದೀಗ ಭಾರತದ ಐಟಿ ಸಾಮ್ರಾಜ್ಯದ ಚಕ್ರವರ್ತಿ ಅನಿಸಿಕೊಂಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇದಕ್ಕೆ ತುಪ್ಪ ಸುರಿತಿದೆ ಟಾಟಾ ಒಡೆತನಕ್ಕೆ ಸೇರಿದ ಟಿಸಿಎಸ್ ಇದೆ ಮೊದಲ ಬಾರಿಗೆ ದೊಡ್ಡ ಸಂಖ್ಯೆ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡೋದಾಗಿ ಘೋಷಿಸಿದೆ. ಇನ್ನು ಆತಂಕಕಾರಿ ಸಂಗತಿ ಅಂದ್ರೆ ಇದಕ್ಕೆ ಮುನ್ನುಡಿ ಬರೆದಿರೋದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದ್ರೆ ಎಐ ಹೊಸ ಬೆಂಚ್ ಪಾಲಿಸಿ ಉದ್ಯೋಗಿಗಳ ನೇಮಕಾತಿಯಲ್ಲಿ ವಿಳಂಬದ ಬಳಿಕ ಇದೀಗ ಪಿಂಕ್ ಸ್ಲಿಪ್ ಹೆಸರಲ್ಲಿ ಟಿಸಿಎಸ್ ಉದ್ಯೋಗಿಗಳ ತಲೆ ಮೇಲೆ ಕತ್ತಿ ನೇತು ಹಾಕಿದೆ. ಏನಿದು ಸರಣಿ ಬೆಳವಣಿಗೆ ಐಟಿ ವಲಯದಲ್ಲಿ ಏನಾಗ್ತಾ ಇದೆ?
ಕೋವಿಡ್ ಸೋಂಕು ಅಮೆರಿಕಾ ಯುರೋಪ್ನಲ್ಲಿ ಆರ್ಥಿಕ ಹಿಂಜರಿತ ನಿಧಾನಗತಿಯ ಆರ್ಥಿಕತೆ ಹೀಗೆ ಹಲವು ಕಾರಣಗಳಿಂದಾಗಿ ಕಳೆದ ಹಲವು ವರ್ಷಗಳಿಂದ ಐಟಿ ಉದ್ಯಮ ಮಂಕಾಗಿದೆ ಹೊಸ ನೇಮಕಾತಿಗಳು ಹಿಂದಿನಂತೆ ಆಗ್ತಾ ಇಲ್ಲ ಇರುವವರಿಗೆ ಸರಿಯಾದ ಸಂಬಳ ಸವಲತ್ತುಗಳು ಸಿಗತಾ ಇಲ್ಲ ಇದರ ನಡುವೆ ಕಳೆದ ಹಲವು ವರ್ಷಗಳಿಂದ ಸರಣಿ ಉದ್ಯೋಗ ಕಡಿತಗಳು ನಡೀತಾ ಇದೆ ಮೊದಮೊದಲು ಅಮೆರಿಕನ್ ಕಂಪನಿಗಳಲ್ಲಿ ಶುರುವಾದ ಈ ಪಿಂಕ್ ಸ್ಲಿಪ್ ಟ್ರೆಂಡ್ ಇದೀಗ ನಮ್ಮ ಹಿತ್ತಲಲ್ಲೂ ಕೇಳಿ ಬರೋದಕ್ಕೆ ಆರಂಭಿಸಿದೆ ಇದಕ್ಕೆ ಹೊಸ ಉದಾಹರಣೆ ಟಿಸಿಎಸ್ 1200 ಉದ್ಯೋಗ ಕಡಿತ ಜಗತ್ತಲ್ಲೆಲ್ಲ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕುವ ವಿದ್ಯಮಾನಗಳು ನಡೀತಾ ಇದ್ರು ಭಾರತೀಯ ಕಂಪನಿಗಳು ಅದರಿಂದ ದೂರವೇ ಉಳಿದಿದ್ವು ಆದರೆ ಅದೀಗ ಬದಲಾಗಿದೆ ಟಾಟಾ ಸಮೂಹದ ಅತಿ ದೊಡ್ಡ ಕಂಪನಿ ಜಗತ್ತಿನ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಟಿಸಿಎಸ್ ತನ್ನ ಸಾಮ್ರಾಜ್ಯದಿಂದ ಸುಮಾರು 12200 ಉದ್ಯೋಗಿಗಳನ್ನ ಮನೆಗೆ ಕಳಿಸೋದಕ್ಕೆ ತೀರ್ಮಾನಿಸಿದೆ ಅಂದ್ರೆ ಅಂದ್ರೆ 63000 ಉದ್ಯೋಗಿಗಳಲ್ಲಿ 2% ಸಿಬ್ಬಂದಿಗೆ ಗೇಟ್ ಪಾಸ್ ನೀಡಲಿದೆ. ಈ ಉದ್ಯೋಗ ಕಡಿತದ ಬಿಸಿ ಹೆಚ್ಚಾಗಿ ತಡ್ತಾ ಇರೋದು ಮಧ್ಯಮ ಮತ್ತು ಹಿರಿಯ ಹುದ್ದೆಗಳಲ್ಲಿರುವ ಅನುಭವಿಗಳಿಗೆ ವರ್ಷಗಳ ಕಾಲ ಕಂಪನಿಗೆ ದುಡಿದವರ ಕುರ್ಚಿಗೆ ಈಗ ಕುತ್ತು ಬಂದಿದೆ.
ಹಾಗಾದ್ರೆ ಟಿಸಿಎಸ್ ನಂತ ದೈತ್ಯ ಕಂಪನಿಗೆ ಯಾಕೆ ಇಂತ ಸ್ಥಿತಿ ಬಂತು ಕಂಪನಿಯ ಸಿಇಓ ಕೆ ಕೃತಿ ವಾಸನ್ ಹೇಳೋ ಪ್ರಕಾರ ಭವಿಷ್ಯಕ್ಕೆ ಸಿದ್ಧ ಆಗೋದಕ್ಕೆ ಕಂಪನಿ ಈ ನಿರ್ಧಾರಕ್ಕೆ ಬಂದಿದೆಯಂತೆ. ಅಂದ್ರೆ ಬದಲಾಗ್ತಾ ಇರುವ ಟೆಕ್ನಾಲಜಿ ಅದರಲ್ಲೂ ಮುಖ್ಯವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜೊತೆ ಹೆಜ್ಜೆ ಹಾಕೋದಕ್ಕೆ ಈ ಸರ್ಜರಿ ಅನಿವಾರ್ಯ ಅಂತ ಅವರು ಹೇಳ್ತಾ ಇದ್ದಾರೆ. 35 ದಿನಗಳ ಬೆಂಚ್ ಪಾಲಿಸಿ ಲೇಔಟ್ಸ್ ಒಂದು ಭಾಗ ಆದರೆ ಕಂಪನಿಯ ಒಳಗೆ ಇರೋರಿಗೆ ನೆಮ್ಮದಿ ಇಲ್ಲದಂತೆ ಮಾಡೋದಕ್ಕೆ ಹೊಸ ಬೆಂಚ್ ಪಾಲಿಸಿಯನ್ನ ಟಿಸಿಎಸ್ ಜಾರಿಗೆ ತಂದಿದೆ. ಐಟಿ ಭಾಷೆಯಲ್ಲಿ ಬೆಂಚ್ ಅಂದರೆ ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲದೆ ಸುಮ್ಮನೆ ಕೂರೋದು. ಮೊದಲೆಲ್ಲ ಹೀಗೆ ತಿಂಗಳುಗಟ್ಟಲೆ ಇರಬಹುದಾಗಿತ್ತು. ಆದರೆ ಜೂನ್ 12, 2025 ರಿಂದ ಆಟ ಬದಲಾಗಿದೆ. ಹೊಸ ನಿಯಮದ ಪ್ರಕಾರ ನೀವು ವರ್ಷದಲ್ಲಿ ಕೇವಲ 35 ದಿನ ಮಾತ್ರ ಬೆಂಚಲ್ಲಿ ಇರಬಹುದು. 225 ದಿನ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲೇಬೇಕು. ಮಾಡಿಲ್ಲ ಅಂತ ಇಟ್ಕೊಳ್ಳಿ ನಿಮ್ಮ ಸಂಬಳ ಬಡತಿ ವಿದೇಶ ಪ್ರಯಾಣದ ಕನಸು ಎಲ್ಲದಕ್ಕೂ ಕತ್ತರಿ ಬೀಳುತ್ತೆ ಕೊನೆಗೆ ಕೆಲಸವೇ ಕೈತಪ್ಪಿ ಹೋಗಬಹುದು ಇದೊಂದು ರೀತಿ ಕೆಲಸ ಮಾಡು ಇಲ್ಲ ಮನೆಗೆ ನಡಿ ಅನ್ನೋ ಸಂದೇಶ ಇದೇ ಕಾರಣಕ್ಕೆ ಉದ್ಯೋಗಿ ಸಂಘಟನೆ ಎನ್ಐ ಟಿಇಎಸ್ ಈ ನೀತಿ ಅಮಾನವೀಯ ಅಂತ ಕಿಡಿಕಾರಿದೆ ಅಲ್ಲದೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ಕೂಡ ಕೊಟ್ಟಿದೆ ಆಫರ್ ಲೆಟರ್ ಗೊಂದಲ ಒಂದೆಡೆ ಇರುವವರನ್ನ ತೆಗಿತಾ ಇದ್ರೆ ಇನ್ನೊಂದೆಡೆ ಸೇರಿಸಿಕೊಳ್ಳಬೇಕಾದವರನ್ನು ಟಿಸಿಎಸ್ ಕೆಲಸಕ್ಕೆ ಸೇರಿಸಿಕೊಳ್ತಾ ಇಲ್ಲ ಇವರಿಗೆ ಆಫರ್ ಲೆಟರ್ ನೀಡಿ ಕೆಲಸಕ್ಕೂ ಸೇರಿಸಿಕೊಳ್ಳದೆ ಟಿಸಿಎಸ್ ಅತಂತ್ರ ಸ್ಥಿತಿಯಲ್ಲಿಇಟ್ಟಿದೆ ಸುಮಾರು 600 ಅನುಭವಿ ಉದ್ಯೋಗಿಗಳು ಕೈಯಲ್ಲಿ ಟಿಸಿಎಸ್ ಆಫರ್ ಲೆಟರ್ ಹಿಡಿದು ಕಾಯ್ತಾ ಇದ್ದಾರೆ ಬೇರೆ ಕಂಪನಿಯಲ್ಲಿದ್ದ ಇವರೆಲ್ಲ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕುಳಿತಿದ್ದಾರೆ ಆದರೆ ತಿಂಗಳಾದರೂ ಜಾಯಿನಿಂಗ್ ಡೇಟ್ ಮಾತ್ರ ಸಿಗತಾ ಇಲ್ಲ ಇವರ ಕುಟುಂಬಗಳು ಈಗ ಹಳೆ ಕೆಲಸವು ಇಲ್ಲದೆ ಹೊಸ ಕೆಲಸವು ಸಿಗದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ.
ಈ ಬಗ್ಗೆ ಟಿಸಿಎಸ್ ಮಾತ್ರ ಎಲ್ಲಾ ಆಫರ್ ಗಳನ್ನ ಗೌರವಿಸುತ್ತೀವಿ ಶೀಘ್ರದಲ್ಲೇ ಕೆಲಸಕ್ಕೆ ಸೇರಿಸಿಕೊಳ್ತೀವಿ ಎನ್ನುವ ಭರವಸೆ ನೀಡ್ತಾ ಕೂತಿದೆ. ಆದರೆ ಆ ಶೀಘ್ರ ಯಾವಾಗ ಅನ್ನೋದೇ ಯಕ್ಷ ಪ್ರಶ್ನೆಯಾಗಿ ಉಳಿಕೊಂಡಿದೆ. ಎ ತೆರೆಯ ಹಿಂದಿನ ವಿಲನ್ ಹಾಗಾದರೆ ಈ ಎಲ್ಲಾ ಕಥೆಯ ಹಿಂದೆ ಇರೋ ನಿಜವಾದ ವಿಲನ್ ಎ ಹೀಗೊಂದು ಪ್ರಶ್ನೆ ಕೇಳಿ ಬರ್ತಾ ಇದೆ. ಇದಕ್ಕೆ ಟಿಸಿಎಸ್ ಸಿಇಓ ನಾವು ಜನರನ್ನ ತೆಗೆದು ಹಾಕಿ ಎಐ ತರ್ತಾ ಇಲ್ಲ ಅಂತ ಹೇಳಿದ್ದಾರೆ. ಆದರೆ ನಾವು ದೊಡ್ಡ ಮಟ್ಟದಲ್ಲಿ ಎಐ ಬಳಸ್ತಾ ಇದ್ದೀವಿ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಕೋಡಿಂಗ್ ಟೆಸ್ಟಿಂಗ್ ಡೇಟಾ ಅನಾಲಿಸಿಸ್ ನಂತ ಅನೇಕ ಕೆಲಸಗಳನ್ನ ಈಗ ಎಐ ವೇಗವಾಗಿ ಅಗ್ಗವಾಗಿ ಮಾಡ್ತಾ ಇದೆ ಅಂತ ತಜ್ಞರು ಹೇಳ್ತಾ ಇದ್ದಾರೆ. ಇದರ ಅರ್ಥ ಸ್ಪಷ್ಟ ಭವಿಷ್ಯದಲ್ಲಿ ನಿಮ್ಮ 10 ವರ್ಷದ ಅನುಭವಕ್ಕಿಂತ ಎಐ ಜೊತೆ ಕೆಲಸ ಮಾಡುವ ಹೊಸ ಕೌಶಲ್ಯವೇ ನಿಮ್ಮನ್ನ ಕಾಪಾಡಬಹುದು. ಸ್ಕಿಲ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಐಟಿ ಸೇರಿದಂತೆ ಹಲವು ಉದ್ಯೋಗಗಳಲ್ಲಿ ಸರ್ವೈವಲ್ ಕಷ್ಟ. ಸದ್ಯಕಂತು ಟಿಸಿಎಸ್ ನ 12000 ಜನರ ಉದ್ಯೋಗ ಕಡಿತ 35 ದಿನಗಳ ಬೆಂಚ್ ಪಾಲಿಸಿ ವಿಳಂಬ ಆಗ್ತಾ ಇರುವ ಜಾಯಿನಿಂಗ್ಸ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಐ ನ ಅಧಿಕೃತ ರಂಗ ಪ್ರವೇಶ ಇವೆಲ್ಲವೂ ಭಾರತೀಯ ಐಟಿ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ ಇದು ಟಿಸಿಎಸ್ ಉದ್ಯೋಗಿಗಳಿಗೆ ಮಾತ್ರ ಅಲ್ಲ ಇಡೀ ಐಟಿ ಉದ್ಯಮಕ್ಕೆ ಬಾರಿಸಿದ ಎಚ್ಚರಿಕೆ ಗಂಟೆ ಕಾಲ ಸಂಪೂರ್ಣ ಬದಲಾಗಿದೆ ನಿರಂತರವಾಗಿ ಕಲಿಯದಿದ್ದರೆ.


