ಮುಂದುವರಿಯುತ್ತಿರುವ ಲೇಔಫ್ ತರಂಗ – ಭದ್ರತೆ ಕಳೆದುಕೊಂಡ ಉದ್ಯೋಗ ಮಾರುಕಟ್ಟೆ ಜಾಗತಿಕವಾಗಿ 2025 ರಲ್ಲಿ 1 ಲಕ್ಷ ಮಂದಿಗೆ ಕಂಪನಿಗಳಲ್ಲಿ ಗೇಟ್ ಪಾಸ್. ಯಾವ ಯಾವ ಕಂಪನಿಗಳಲ್ಲಿ ಎಷ್ಟೆಷ್ಟು ಉದ್ಯೋಗ ಕಡಿತ? ಈ ಬಗ್ಗೆ ಡೀಟೇಲ್ ರಿಪೋರ್ಟ್ನ್ನ ನಾವೀಗ ನಿಮ್ಮ ಮುಂದೆ ಇಡ್ತೇವೆ ನೋಡಿ. 2025ರಲ್ಲಿ ಔದ್ಯೋಗಿಕ ವಲಯದಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ.
ಜಗತ್ತಿನ ಪ್ರಮುಖ ಕಂಪನಿಗಳೇ ತಮ್ಮ ಉದ್ಯೋಗಿಗಳಿಗೆ ಆಫ್ ನೀಡ್ತಿವೆ. ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿ ಮುಲಾಜಿಲ್ಲದೆ ಗೇಟ್ ಪಾಸ್ ನೀಡ್ತಿವೆ. 2025 ರಲ್ಲಿ ಮೊದಲ ಆರು ತಿಂಗಳಲ್ಲೇ ಬರೋಬ್ಬರಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಮೈಕ್ರಸಾಫ್ಟ್,ಇಟೆಲ್, Google, infosys, ಐಬಿಎಂ ಸೇರಿದಂತೆ ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಂಪನಿಗಳು ವೆಚ್ಚದ ಒತ್ತಡ ತಗ್ಗಿಸಲು ಕಂಪನಿಯ ಉದ್ಯೋಗಿಗಳ ಸಂಖ್ಯೆಯನ್ನ ಕಡಿತಗೊಳಿಸಿ ಕಂಪನಿಯ ಪುನರಚನೆ ಮಾಡುವ ಉದ್ದೇಶ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಳವಡಿಸಿಕೊಳ್ಳಲು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿ ಮುಲಾಜಿಲ್ಲದೆ ಮನೆಗೆ ಕಳಿಸಿವೆ. ಜಾಗತಿಕವಾಗಿ ಐಟಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಡಿಮ್ಯಾಂಡ್ ಕಡಿಮೆಯಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಟೋಮೇಷನ್ ಇಂದಾಗಿ ಹೊಸ ಉದ್ಯೋಗಗಳು ಹೆಚ್ಚಾಗಿ ಸೃಷ್ಟಿಯಆಗ್ತಾ ಇಲ್ಲ. ಕಳೆದ ವರ್ಷವೂ ಐಟಿ ವಲಯದಲ್ಲಿ ಉದ್ಯೋಗ ಸೃಷ್ಟಿ ಕಡಿಮೆ ಇತ್ತು.
ಈ ವರ್ಷ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಯಾಗಿ ಉದ್ಯೋಗಗಳೇ ಸೃಷ್ಟಿಯಆಗ್ತಾ ಇಲ್ಲ. ಮುಂದಿನ ಕೆಲ ವರ್ಷಗಳಲ್ಲಿ ಬೆಳವಣಿಗೆ ಉದ್ಯೋಗ ಸೃಷ್ಟಿಯಾಗುವ ಸಂಭವ ಇಲ್ಲ ಅಂತ ಇನ್ಫೋಸಿಸ್ ನಲ್ಲಿ ಉನ್ನತ ಉದ್ದೆಯಲ್ಲಿದ್ದ ಉದ್ಯಮಿ ಮೋಹನ್ದಾಸ್ ಪೈ ಇತ್ತೀಚೆಗೆ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ. ಇದರ ಬಗ್ಗೆ ನಾವು ಆಲೋಚನೆಯನ್ನ ಮಾಡಬೇಕು. ಇಂಜಿನಿಯರಿಂಗ್ ಕಾಲೇಜ್ಗಳು ವಿದ್ಯಾರ್ಥಿಗಳಿಗೆ ಎಐ ಆಟೋಮೇಷನ್ ಬಗ್ಗೆ ತರಬೇತಿಯನ್ನ ನೀಡಬೇಕು ಈ ಮೊದಲು ಅಭ್ಯರ್ಥಿಗಳ ನಾಲೆಡ್ಜ್ ನೋಡ್ತಾ ಇರಲಿಲ್ಲ ಕಾಲೇಜುಗಳಲ್ಲಿ ಟ್ರೈನಿಂಗ್ ಅನ್ನ ಹೆಚ್ಚಿಸಬೇಕು ಸಣ್ಣ ಸಣ್ಣ ಕಂಪನಿಗಳನ್ನ ಕಾಲೇಜಿಗೆ ಕರೆದು ಪ್ಲೇಸ್ಮೆಂಟ್ ಹೆಚ್ಚಿಸಬೇಕು ಅಂತ ಮೋಹನ್ದಾಸ್ ಪೈ ಹೇಳಿದ್ದಾರೆ.
2025 ತಂತ್ರಜ್ಞಾನ ವಲಯಕ್ಕೆ ಮತ್ತೊಂದು ಕ್ರೂರ ವರ್ಷವಾಗಿ ರೂಪುಗೊಳ್ಳುತ್ತಾ ಇದೆ. ಜಾಗತಿಕವಾಗಿ 2025 ರಲ್ಲಿ ಇದುವರೆಗೆಒದು ಲಕ್ಷ ಮಂದಿ ಉದ್ಯೋಗವನ್ನು ಕಳೆಕೊಂಡಿದ್ದಾರೆ. ಮೈಕ್ರೋಸಾಫ್ಟ್ಇಟೆಲ್ ಮೇಟಗೂಗಲ್ ನಂತಹ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನ ಕಡಿತಗೊಳಿಸುತ್ತಿವೆ. ಈ ಎಲ್ಲಾ ದೈತ್ಯ ಕಂಪನಿಗಳು ಆರ್ಥಿಕ ಒತ್ತಡಕ್ಕೆ ಒಳಗಾಗಿವೆ. ತಮ್ಮ ನಷ್ಟವನ್ನ ಕಡಿಮೆ ಮಾಡಿಕೊಳ್ಳಲು ಉದ್ಯೋಗಿಗಳನ್ನ ಕೆಲಸದಿಂದ ತೆಗೆಯದೆ ಬೇರೆ ದಾರಿ ಇಲ್ಲ ಅಂತ ಕಂಪನಿಗಳು ಹೇಳ್ತಾ ಇವೆ. ಮೈಕ್ರೋಸಾಫ್ಟ್ ಈ ವರ್ಷದ ಎರಡನೇ ಸುತ್ತಿನ ಲೇಫ್ನಲ್ಲಿ 6000 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ.ಎಬಾಕ್ಸ್ ಗೇಮಿಂಗ್ ಯೂನಿಟ್ ಗಳಲ್ಲಿ 91 ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳ ಪೈಕಿ ಶೇಕಡ ನಾಲ್ಕರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕ್ತಾ ಇದೆ. ಕ್ಯಾಂಡಿ ಕ್ರಾಶ್ ಸುಮಾರು 200 ಉದ್ಯೋಗಿಗಳನ್ನ ತೆಗೆದು ಹಾಕಿದೆ.ಇಟೆಲ್ ಇಂದ ಶೇಕಡ 20ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.ಇಟೆಲ್ ಕಂಪನಿಯು ಹೊಸ ಸಿಇಓ ಲಿಪ್ ಬೂಟಾನ್ ನೇತೃತ್ವದಲ್ಲಿ ಕಂಪನಿಯ ಪುನರಚನೆಯನ್ನ ಮಾಡ್ತಾ ಇದೆ. ಜುಲೈನಲ್ಲಿ ಸಂತಾಕ್ಲಾರ ಪ್ರಧಾನ ಕಚೇರಿಯಲ್ಲಿ 107 ಮಂದಿ ಉದ್ಯೋಗ ಕಳೆದುಕೊಳ್ಳುವರು. ಕಂಪನಿಯು ಜರ್ಮನ್ ನಲ್ಲಿರುವ ಆಟೋಮೇಟಿವ್ ಚಿಪ್ ಘಟಕವನ್ನು ಸಹ ಮುಚ್ಚುತ್ತಾ ಇದೆ. ಬಹುತೇಕ ಇಡೀ ತಂಡವನ್ನ ಕೆಲಸದಿಂದ ತೆಗೆದು ಹಾಕ್ತಾ ಇದೆ.
ಜಾಗತಿಕವಾಗಿಇಟೆಲ್ ಕಂಪನಿಯು ಶೇಕಡ 20ರಷ್ಟು ಉದ್ಯೋಗಿಗಳನ್ನ ತೆಗೆದು ಹಾಕಲು ನಿರ್ಧರಿಸಿದೆ. ಚಿಪ್ ಡಿಸೈನ್ ಕ್ಲೌಡ್ ಆರ್ಕಿಟೆಕ್ಚರ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳನ್ನ ಕೆಲಸದಿಂದ ತೆಗೆದು ಹಾಕ್ತಾ ಇದೆ. ಚಿಪ್ ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಿಗಳಿಗೆ ಹೆಚ್ಚಿನ ತೊಂದರೆ ಆಗ್ತಾ ಇದೆ. ಅನಗತ್ಯ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿ ಪರಿಣಾಮಕಾರಿಯಾದ ತಂಡವನ್ನ ರೂಪಿಸಲು ಕಾರ್ಯತಂತ್ರದ ಭಾಗವಾಗಿ ಆಫ್ ನೀಡಲಾಗ್ತಾ ಇದೆ ಅಂತಇಟೆಲ್ ಕಂಪನಿಯು ತನ್ನ ಕ್ರಮವನ್ನ ಸಮರ್ಥಿಸಿಕೊಂಡಿದೆ. ಚಿಕ್ಕ ತಂಡಗಳನ್ನ ರಚಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುವ ಬಗ್ಗೆಇಟೆಲ್ ಕಂಪನಿಯು ಈಗ ಆಧ್ಯತೆಯನ್ನ ನೀಡ್ತಾ ಇದೆ.
ಇನ್ನು amazon ಕಂಪನಿಯು 2025ರಲ್ಲಿ ಈಗಾಗಲೇ ನಾಲ್ಕು ಸುತ್ತಿನಲ್ಲಿ ಆಫ್ ನೀಡಿದೆ. amazಮon 14ಸ000 ಮ್ಯಾನೇಜಿಂಗ್ ರೋಲ್ ನಲ್ಲಿದ್ದ ಉದ್ಯೋಗಿಗಳನ್ನ ಮನೆಗೆ ಕಳಿಸಲು ನಿರ್ಧರಿಸಿದೆಯಂತೆ. ಕಂಪನಿಯ ನಾಯಕತ್ವದ ಉದ್ಯೋಗಿಗಳ ಪೈಕಿ ಶೇಕಡ 13 ರಷ್ಟು ಮಂದಿಗೆ ಆಫ್ ನೀಡ್ತಾ ಇದೆ. ಕಂಪನಿಗೆ ಲಾಭ ಕಡಿಮೆಯಾಗಿರೋದ್ರಿಂದ ವೆಚ್ಚ ಕಡಿತದ ಭಾಗವಾಗಿ ಉದ್ಯೋಗಿಗಳನ್ನ ತೆಗೆದು ಹಾಗಾಗ್ತಿದೆ. ಆಫ್ ಮುಗಿದ ಬಳಿಕ ಕಂಪನಿಯ ಉದ್ಯೋಗಿಗಳ ಸಂಖ್ಯೆ 92000ಕ್ಕೆ ಕುಸಿಯಲಿದೆ. ಇನ್ನು ಐಬಿಎಂ ನಿಂದ 8000 ಉದ್ಯೋಗಿಗಳು ಮನೆಗೆ ಐಬಿಎಂ ಕಂಪನಿಯು 8000 ಉದ್ಯೋಗಿಗಳಿಗೆ ಆಫ್ ನೀಡಿ ಮನೆಗೆ ಕಳಿಸಿದೆ. ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಹೆಚ್ಚಿನ ಉದ್ಯೋಗಿಗಳನ್ನ ಮನೆಗೆ ಕಳಿಸಲಾಗಿದೆ. ಐಬಿಎಂ ಕಂಪನಿಯಲ್ಲಿ ಈ ಮೊದಲು ಉದ್ಯೋಗಿಗಳು ಮಾಡುತ್ತಿದ್ದ ಕೆಲಸಗಳನ್ನ ಈಗ ಆಟೋಮೇಷನ್ಎಐ ನಿರ್ವಣೆ ಮಾಡ್ತಾ ಇವೆ.
ಐಬಿಎಂ ಕಂಪನಿಯು ಆಟೋಮೇಷನ್ಎ ಯನ್ನ ಅಳವಡಿಸಿಕೊಂಡು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಇನ್ಫೋಸಿಸ್ ನಲ್ಲಿ 540 ಮಂದಿಗೆ ಆಫ್ ಬೆಂಗಳೂರಿನ ಪ್ರಸಿದ್ಧ ಇನ್ಫೋಸಿಸ್ ಕಂಪನಿನಲ್ಲಿ ಈ ವರ್ಷ 540 ಮಂದಿಗೆ ಲೇಆಫ್ ನೀಡಲಾಗಿದೆ. ಇಂಟರ್ನಲ್ ಅಸೆಸ್ಮೆಂಟ್ ಅನ್ನ ಕ್ಲಿಯರ್ ಮಾಡಲು ಸಾಧ್ಯವಾಗದ 240 ಮಂದಿಯನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. 2025ರ ಫೆಬ್ರವರಿಯಲ್ಲೂ 300 ಮಂದಿಯನ್ನ ಇಂಟರ್ನಲ್ ಅಸೆಸ್ಮೆಂಟ್ ಕ್ಲಿಯರ್ ಮಾಡಿಲ್ಲ ಎಂಬ ಕಾರಣದಿಂದ ತೆಗೆದು ಹಾಕಲಾಗಿದೆ. ಮೇಟಾದಲ್ಲಿ ಶೇಕಡ ಐದರಷ್ಟು ಉದ್ಯೋಗ ಕಡಿತಗೂಗಲ್ ನಲ್ಲಿ ನೂರಾರು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗಿದೆ. ಮೇಟಾದಲ್ಲಿ ಶೇಕಡ ಐದರಷ್ಟು ಉದ್ಯೋಗ ಕಡಿತ ಮಾಡಲಾಗ್ತಾ ಇದೆ. 3600 ಮಂದಿ ಉದ್ಯೋಗಿಗಳು ಕಳಪೆ ಕೆಲಸಗಾರರು ಎಂದು ಪಟ್ಟಿ ಮಾಡಿದ್ದು ಕೆಲಸದಿಂದ ತೆಗೆದು ಹಾಕಲಾಗ್ತಾ ಇದೆ. ರಿಯಾಲಿಟಿ ಲ್ಯಾಬ್ ಡಿವಿಷನ್ ನಲ್ಲಿ 100 ಮಂದಿಯನ್ನ ತೆಗೆದು ಹಾಕಲಾಗಿದೆ. ಇನ್ನು ಬೇರೆ ಯಾವ ಯಾವ ಕಂಪನಿಗಳಲ್ಲಿ ಉದ್ಯೋಗ ಕಡಿತ ಆಗಿದೆ ಅಂತ ನೋಡೋದಾದ್ರೆ ಆಟೋಮೆಟಿಕ್ ಕಂಪನಿಯು ವರ್ಡ್ ಪ್ರೆಸ್ ನಡೆಸ್ತಾ ಇದ್ದು ಶೇಕಡ 16 ರಷ್ಟು ಉದ್ಯೋಗ ಕಡಿತ ಮಾಡ್ತಾ ಇದ್ದು 270 ಮಂದಿಗೆ ಗೇಟ್ ಪಾಸ್ ನೀಡ್ತಾ ಇದೆ. ತನ್ನ ಕಂಪನಿಯ ಶೇಕಡ 10ರಷ್ಟು ಉದ್ಯೋಗ ಕಡಿತ ಮಾಡ್ತಾ ಇದ್ದು 300 ಮಂದಿಯನ್ನ ಮನೆಗೆ ಕಳಿಸುತ್ತಿದೆ.
ಓಲ ಎಲೆಕ್ಟ್ರಿಕ್ ಐದು ತಿಂಗಳಲ್ಲಿ ಎರಡನೇ ಬಾರಿಗೆ ಆಫ್ ನೀಡಿದ್ದು 1000 ಉದ್ಯೋಗಿಗಳನ್ನ ಮನೆಗೆ ಕಳಿಸಿದೆ.ಎಚ್ಪಿ ಕಂಪನಿಯು 2000 ಉದ್ಯೋಗಿಗಳನ್ನ ಪುನರಚನೆಯ ಕಾರಣ ನೀಡಿ ತೆಗೆದು ಹಾಕಿದೆ. ಸೇಲ್ಸ್ ಫೋರ್ಸ್ 1000 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಬ್ಲೂ ಒರಿಜಿನ್ 1000 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಕಾನವಲೆಟ್ ಕಂಪನಿಯು 10ರಿಂದ 12 ಟೆಕ್ನಿಕಲ್ ರೈಟರ್ ಉದ್ಯೋಗಿಗಳನ್ನ ತೆಗೆದು ಹಾಕಿದೆ. ಸೀಮನ್ಸ್ ಕಂಪನಿಯು 5600 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಎಲೆಕ್ಟ್ರಾನಿಕ್ಸ್ ಆರ್ಟ್ಸ್ ಕಂಪನಿಯು 400 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಮ್ಯಾಚ್ ಗ್ರೂಪ್ ಶೇಕಡ 13 ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ. ಕ್ರೌಡ್ ಸ್ಟ್ರೈಕ್ ಶೇಕಡ ಐದರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಿದೆ.
ಹೀಗೆ ಬಹುತೇಕ ಎಲ್ಲಾ ಕಂಪನಿಗಳಲ್ಲೂ ಉದ್ಯೋಗ ಕಡಿತ, ವೆಚ್ಚ ಕಡಿತ,ಕಂಪನಿಯ ಪುನರಚನೆ, ಎಐ ಅಳವಡಿಕೆ, ಆಟೋಮೇಷನ್ ಅಳವಡಿಕೆ ಎಂಬುದು ಸಾಮಾನ್ಯವಾಗಿದೆ. ಎಐ ಆಟೋಮೇಷನ್ ನಿಂದಾಗಿ ಉದ್ಯೋಗಿಗಳಿಗೆ ಬೇಡಿಕೆ ಇಲ್ಲವಾಗಿದೆ. ಇನ್ನು ಮುಂದಿನ ಮೂರು ವರ್ಷ ಇದೇ ರೀತಿಯಾದ ಪರಿಸ್ಥಿತಿ ಮುಂದುವರೆಯಲಿದೆ ಅಂತ ಹೇಳಿ ಐಟಿ ಕ್ಷೇತ್ರದ ತಜ್ಞರು ಹೇಳ್ತಾ ಇದ್ದಾರೆ.