ಚಾಟ್ ಜಿಪಿಟಿ ಗೆ ಒಂದು ಪ್ರಶ್ನೆ ಹಾಕಿದ್ವಿ ನಾನು ಬೆಳಗ್ಗೆ 10 ರಿಂದ ಸಂಜೆ 7:00 ಗಂಟೆಯವರೆಗೆ ಕೆಲಸ ಮಾಡ್ತೀನಿ ಮಧ್ಯಾಹ್ನ ಒಂದು ಗಂಟೆ ಬ್ರೇಕ್ ಇರುತ್ತೆ ಇದರ ಜೊತೆಗೆ ಡೈಲಿ ಸ್ವಲ್ಪ ಹೊತ್ತು ವರ್ಕೌಟ್ ಮಾಡಬೇಕು ನಾಲೆಡ್ಜ್ ಇಂಪ್ರೂವ್ ಮಾಡ್ಕೊಳೋಕೆ ಟೈಮ್ ಕೊಡಬೇಕು ಮನೆಯವರಿಗೆ ಕಾಲ್ ಮಾಡಬೇಕು ದುಡ್ಡು ಕಾಸು ಮ್ಯಾನೇಜ್ ಮಾಡೋದಕ್ಕೆ ಪ್ಲಾನಿಂಗ್ ಮಾಡಬೇಕು ಆಫೀಸಿಗೆ ಒಂದು ಸೈಡ್ ಟ್ರಾವೆಲಿಂಗ್ ಒಂದು ಗಂಟೆ ಇರುತ್ತೆ ಇದನ್ನೆಲ್ಲ ಮ್ಯಾನೇಜ್ ಮಾಡೋಕೆ ಒಳ್ಳೆ ರೂಟೀನ್ ಡೆವಲಪ್ ಮಾಡಿಕೊಡು ಅಂತ ಕೇಳಿದ್ವಿ ಅದಕ್ಕೆ ಚಾಟ್ ಜಿಪಿಟಿ ಕೊಟ್ಟ ಪ್ಲಾನ್ ಬೆಳಗ್ಗೆ 6:00 ಗಂಟೆಯಿಂದ ಸಂಜೆ 10:00 ಗಂಟೆಯವರೆಗೆ ಹೇಗೆ ಟೈಮ್ ಮ್ಯಾನೇಜ್ ಮಾಡಬಹುದು ಹೆಚ್ಚು ಕಮ್ಮಿ ಫಾಲೋ ಮಾಡೋಕೆ ಸಾಧ್ಯ ಆಗಬಹುದಾದ ಫೀಸಿಬಲ್ ರೂಟೀನ್ ಕೊಡ್ತು ಇಷ್ಟೇ ಅಲ್ಲ ಸ್ನೇಹಿತರೆ ನಮ್ಮ ಕೆಲಸಗಳಿಗೆ ರಿಮೈಂಡರ್ ಕೊಡೋದ್ರಿಂದ ಹಿಡಿದು ನಮ್ಮ ಕಾಲ್ ರಿಸೀವ್ ಮಾಡೋದು ಹೆಲ್ತ್ ಟ್ರ್ಯಾಕ್ ಮಾಡೋದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕೋದು ಲೈಫ್ ಸ್ಟೈಲ್ ರೆಕಮೆಂಡೇಶನ್ ಕೊಡೋದು ಹೀಗೆ ಬೇಕಾದಷ್ಟು ಕೆಲಸಗಳನ್ನ ಎಐ ಸೈಂಟಿಫಿಕ್ ಆಗಿ ಮಾಡಿಕೊಡುತ್ತೆ ಹಾಗಿದ್ರೆ ಇದಕ್ಕೆಲ್ಲ ಯಾವ ಟೂಲ್ ಬಳಸಬೇಕು ಹೇಗೆ ಬಳಸಬೇಕು ಹೇಗೆ ಎಐ ಟೂಲ್ ಗಳನ್ನ ಬಳಸಿ ಡೈಲಿ ಲೈಫ್ ಅನ್ನ ಸುಲಭ ಮಾಡ್ಕೋಬಹುದು ಅಥವಾ ಡೈಲಿ ಲೈಫ್ ಗೆ ಯೂಸ್ ಆಗೋ ಉಪಯುಕ್ತ ಎಐ ಟೂಲ್ ಗಳು ಯಾವುದು ಅದನ್ನ ಎಕ್ಸ್ಪ್ಲೈನ್ ಮಾಡ್ತಾ ಹೋಗೋ ಪ್ರಯತ್ನ ಮಾಡ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ರಿಮೈಂಡರ್ ಗಳು ಮನುಷ್ಯರಿಗೂ ಕಂಪ್ಯೂಟರ್ ಗೂ ಡಿಫರೆನ್ಸ್ ಏನು ಅಂದ್ರೆ ನಮ್ಮ ಮನವಿನ ಶಕ್ತಿ ಇರುತ್ತೆ ನಮಗೆ ಆದರೆ ಕಂಪ್ಯೂಟರ್ಗಳು ಯಾವುದನ್ನು ಮರೆಯಲ್ಲ ಒಂದು ಸಲ ಏನಾದ್ರು ಫೀಡ್ ಮಾಡಿದ್ರೆ ಡಿಸ್ಟ್ರಾಯ್ ಆಗೋತನಕ ಡಿಲೀಟ್ ಮಾಡೋ ತನಕ ಅಥವಾ ಏನಾದ್ರು ವೈರಸ್ ಬಂದು ಕರಪ್ಟ್ ಆಗೋ ತನಕ ಅಲ್ಲೇ ಇರ್ತವೆ ಉದಾಹರಣೆಗೆ ನಿಮ್ಮ ಸಂಗಾತಿ ಬರ್ತಾ ಏನೋ ತಗೊಂಡು ಬನ್ನಿ ಅಂತ ಹೇಳ್ತಾರೆ ಅಂತ ನಿಮಗೆ ಮನೆಗೆ ಬರ್ತಾ ಅದು ಕೊತ್ತಂಬರಿ ಸೊಪ್ಪೆ ಇರಬಹುದು ಅಥವಾ ಇನ್ನು ಇಂಪಾರ್ಟೆಂಟ್ ಯಾವುದೋ ವಸ್ತು ಇರಬಹುದು.
ಮೆಡಿಸಿನ್ ಇರಬಹುದು ಯಾವುದಾದರೂ ಎಷ್ಟು ದಿವಸ ನೀವು ಇದನ್ನ ಮರೆತು ಹೋಗಿ ಬಯಸಿಕೊಂಡಿರ್ತೀರಾ ಹೇಳಿ ಹಾಗೆ ಆಗಬಾರದು ಅಂದ್ರೆ ನಿಮಗೆ ನಿಮ್ಮ ಮನೆಯಲ್ಲಿ ಹೇಳಿದ ತಕ್ಷಣ ನೀವು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಗೆ ಒಂದು ಕಮಾಂಡ್ ಕೊಟ್ಟು ಓಕೆ ಗೂಗಲ್ ರಿಮೈಂಡ್ ಮಿ ಟು ಬೈ ಮೆಡಿಸಿನ್ ಬೈ 8:00 pm ಅಂತ ಹೇಳಿದ್ರೆ ಅದು ಆಟೋಮ್ಯಾಟಿಕಲಿ ಜಸ್ಟ್ ಇಷ್ಟು ಮಾಡಿದ್ರೆ ಸಾಕು ರಿಮೈಂಡರ್ ನ ಸೇವ್ ಮಾಡ್ಕೊಂಡು 8:00 ಗಂಟೆ ಅಷ್ಟೊತ್ತಿಗೆ ನಿಮಗೆ ಮೆಡಿಸಿನ್ ತಗೊಳೋಕೆ ಅಥವಾ ಕೊತ್ತಂಬರಿ ಸೋಪ್ ತಗೊಳೋಕೆ ಸೋಪ್ ತಗೊಳೋಕೆ ನೆನಪು ಮಾಡುತ್ತೆ ಈ ರೀತಿ ನೀವು ಯಾವುದಾದರೂ ಇಂಪಾರ್ಟೆಂಟ್ ಕಾಲ್ ಮಾಡೋಕಿದ್ರೆ ಮೇಲ್ ಮಾಡೋಕಿದ್ರೆ ಮೀಟಿಂಗ್ ಕೆಲಸಕ್ಕೆ ಸಂಬಂಧಪಟ್ಟಂತ ವಿಚಾರಗಳು ಇವೆಲ್ಲದಕ್ಕೂ ಕೂಡ ಈ ರೀತಿ ರಿಮೈಂಡರ್ ಇಟ್ಕೋಬಹುದು ಜಸ್ಟ್ ನಿಮ್ಮ ಫೋನ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನ ನೀವು ಎನೇಬಲ್ ಮಾಡಿದ್ರೆ ಆಯ್ತು ಅದನ್ನ ಫುಲ್ ಸೆಟ್ ಮಾಡ್ಕೊಂಡ್ರೆ ಆಯ್ತು ನೀವು ಗೂಗಲ್ ಯೂಸ್ ಮಾಡ್ತಿಲ್ಲ ನೀವು ಆಪಲ್ ಯೂಸ್ ಮಾಡ್ತಿದ್ದೀರಿ ಅಂದ್ರೆ ಅದರಲ್ಲಿ ಸಿರಿ ಇರುತ್ತೆ ಸಿರಿಯನ್ನ ನೀವು ಯೂಸ್ ಮಾಡ್ಕೋಬಹುದು ಭಾಷಾಂತರ ಟ್ರಾನ್ಸ್ಲೇಷನ್ ಕೇವಲ ಪೊಲೀಸ್ ಪರೀಕ್ಷೆ ಸಿವಿಲ್ ಸರ್ವಿಸ್ ಬರೆಯುವವರಿಗೆ ಅಲ್ಲ ನಮ್ಮ ಕಾಂಟೆಂಟ್ ಕ್ರಿಯೇಷನ್ ಫೀಲ್ಡ್ ನಿಂದ ಹಿಡಿದು ಎಲ್ಲಾ ಫೀಲ್ಡ್ ನಲ್ಲೂ ಟ್ರಾನ್ಸ್ಲೇಷನ್ ಅಗತ್ಯ ಇರುತ್ತೆ ಕೆಲವೊಂದು ಸಲ ಆಫೀಸ್ ನಿಂದ ಬಂದಿರೋ ಮೇಲ್ ಅರ್ಥ ಆಗದೆ ಇರಬಹುದು ಕೆಲವೊಂದು ಸಲ ಬ್ಯಾಂಕ್ ಕಳಿಸಿರೋ ಮೆಸೇಜ್ ಸೋಶಿಯಲ್ ಮೀಡಿಯಾ ಕಾಮೆಂಟ್ ಗಳು ಕೋರ್ಟ್ ನೋಟಿಸ್ ಬ್ಲಾಗ್ ಪುಸ್ತಕಗಳು ಕೆಲ ಸೆಂಟೆನ್ಸ್ ಗಳು ಸಿನಿಮಾಗಳ ಡೈಲಾಗ್ ಗಳು ಅರ್ಥ ಆಗದೆ ಇರಬಹುದು ಆದರೆ ನೀವು ಅದನ್ನ ಗೂಗಲ್ ಟ್ರಾನ್ಸ್ಲೇಟರ್ ಅಥವಾ ಯಾವುದಾದರೂ ಚಾಟ್ ಜಿಪಿಟಿ ಅಂತ ಸರ್ವಿಸ್ ಅಥವಾ ನಿಮ್ಮ ಬೇರೆ ಬೇರೆ ಬ್ರಾಂಡ್ ಅಲ್ಲಿ ಬೇರೆ ಬೇರೆ ತರದ ಫೋನ್ ನಲ್ಲಿ ಫೀಚರ್ಸ್ ಕೊಡ್ತಾರೆ ಅವುಗಳನ್ನ ಯೂಸ್ ಮಾಡ್ಕೊಂಡು ಟ್ರಾನ್ಸ್ಲೇಟ್ ದಿಸ್ ಟು ಸೋ ಲ್ಯಾಂಗ್ವೇಜ್ ಅಂತ ಹಾಕಿದ್ರೆ ನಿಮಗೆ ಟ್ರಾನ್ಸ್ಲೇಟ್ ಮಾಡಿಕೊಡುತ್ತೆ ಅದನ್ನ ಸ್ವಲ್ಪ ಸಿಂಪ್ಲಿಫೈ ಮಾಡಿಕೊಡು ಅಂದ್ರೆ ಅದನ್ನ ಇನ್ನು ಸ್ವಲ್ಪ ಸಿಂಪ್ಲಿಫೈ ಮಾಡಿಕೊಡುತ್ತೆ ಇದನ್ನೇ ವಾಯ್ಸ್ ಮೂಲಕ ಹೇಳಿನೇ ಮಾಡಬೇಕು ಅಂತಿಲ್ಲ ಟೈಪ್ ಮಾಡಿ ಕೂಡ ಈ ಕಮಾಂಡ್ ಗಳನ್ನ ಕೊಡಬಹುದು.
ಕೆಲವೊಂದು ಸಲ ಅರ್ಥ ಆಗದೆ ಇರೋ ವಿಚಾರದ ಒಂದು ಫೋಟೋ ಇದೆ ಅದನ್ನ ಅದಕ್ಕೆ ಹಾಕ್ಬಿಟ್ಟು ಇದನ್ನ ಈ ಫೋಟೋದಲ್ಲಿ ಇರೋದನ್ನ ಓದ್ಬಿಟ್ಟು ನನಗೆ ಅರ್ಥ ಮಾಡಿಸು ಅಂದ್ರೆ ಅದನ್ನ ಕೂಡ ಚಾಟ್ ಜಿಪಿಟಿ ಮಾಡುತ್ತೆ ಗೂಗಲ್ ಟ್ರಾನ್ಸ್ಲೇಟ್ ಮಾಡುತ್ತೆ ಜೊತೆಗೆ ಬೇರೆ ರಾಜ್ಯಕ್ಕೆ ಹೋಗಿ ಯಾವುದೇ ಬೋರ್ಡ್ ಅರ್ಥ ಆಗ್ಲಿಲ್ಲ ಸಿನಿಮಾ ಪೋಸ್ಟರ್ ಅರ್ಥ ಆಗ್ಲಿಲ್ಲ ಅಂದ್ರು ಕೂಡ ಒಂದು ಫೋಟೋ ತೆಗೆದು ಅದನ್ನ ನೀವು ಹಾಕಿ ಗೂಗಲ್ ಹತ್ರ ಕೇಳಬಹುದು ಇದರಲ್ಲಿರೋ ಏನು ಅಂತ ಎಜುಕೇಶನ್ ಹೀಗೆಲ್ಲ ನಿಮ್ಮ ಮಕ್ಕಳನ್ನ ಎಕ್ಸಾಮ್ ಗೆ ಪ್ರಿಪೇರ್ ಮಾಡೋಕೆ ಸ್ಟಡಿ ಪ್ಲಾನ್ ಗೆ ಪ್ರಾಕ್ಟೀಸ್ ಪ್ರಶ್ನೆಗಳಿಗೆ ಕ್ವಿಜ್ ಮಾಡೋಕೆ ಮಾಕ್ ಎಕ್ಸಾಮ್ಸ್ ಕೊಡೋಕೆ ಟಾಪಿಕ್ ಗಳನ್ನ ಅರ್ಥ ಮಾಡಿಕೊಳ್ಳೋಕೆ ಟ್ಯೂಷನ್ ಗೋ ಇನ್ನೆಲಿಗೂ ಕಳಿಸಬೇಕು ಅಂತಾನೆ ಇಲ್ಲ ಎಲ್ಲಾ ಅಂಗೈಯಗಲದ ಫೋನ್ ನಲ್ಲೇ ಇದೆ ಸ್ಕ್ವಿರಲ್ ಎಐ ನಿಮ್ಮ ಮಕ್ಕಳ ಲರ್ನಿಂಗ್ ಸ್ಟೈಲ್ ಹೇಗಿದೆ ಎಷ್ಟು ಬೇಗ ಕಲಿತಾರೆ ಅನ್ನೋದನ್ನ ಅರ್ಥಮಾಡಿಕೊಂಡು ಪಾಠ ಹೇಳುತ್ತೆ ನಿಮ್ಮ ಮಕ್ಕಳು ಯಾವ ಫೀಲ್ಡ್ ನಲ್ಲಿ ಸ್ಲೋ ಇದ್ದಾರೆ ಅವರಿಗೆ ಮ್ಯಾಥ್ಸ್ ಕಷ್ಟ ಆಗ್ತಿದೆಯಾ ಸೈನ್ಸ್ ಕಷ್ಟ ಆಗ್ತಿದೆಯಾ ಸೋಶಿಯಲ್ ಯಾವುದು ಕಷ್ಟ ಆಗ್ತಿದೆ ಅದೆಲ್ಲವನ್ನು ಕಂಡುಹಿಡಿದು ಇಂಪ್ರೂವ್ ಮಾಡಿ ಹೇಗೆ ಅನ್ನೋ ಫೀಡ್ಬ್ಯಾಕ್ ಕೂಡ ಕೊಡುತ್ತೆ ಯಾವ ಅಪ್ರೋಚ್ ನಲ್ಲಿ ಕಲಿಬೇಕು ಅಂತ ಕೂಡ ಹೇಳುತ್ತೆ ಸೋ ಕ್ರಾಟಿಕ್ ಮತ್ತು ಕ್ವಿಜ್ ಆಪ್ ಗಳು ಓದೋಕೆ ಹೋಂ ವರ್ಕ್ ಮಾಡೋಕೆ ಹೆಲ್ಪ್ ಮಾಡುತ್ತವೆ ಕಷ್ಟವಾದ ಟಾಪಿಕ್ ಗಳಿಗೆ ಸ್ಟೆಪ್ ಬೈ ಸ್ಟೆಪ್ ಸೊಲ್ಯೂಷನ್ ಕೊಡ್ತವೆ ಪರೀಕ್ಷೆಗೆ ಪ್ರಿಪೇರ್ ಆಗೋಕೆ ಪ್ರೆಸ್ ಸ್ಕಾಲರ್ ಅನ್ನೋ ಪ್ಲಾನ್ ಹೆಲ್ಪ್ ಮಾಡುತ್ತೆ ಪದ್ ಎಐ ಅನ್ನೋ ಎಐ ಯುಪಿಎಸ್ಸಿ ಪ್ರಿಪರೇಷನ್ ಗೂ ಹೆಲ್ಪ್ ಮಾಡುತ್ತೆ ಆಹಾರ ಆಹಾರಕ್ಕೂ ಎಐ ಗೂ ಏನು ಸಂಬಂಧ ಇಲ್ಲೇನು ಮಾಡುತ್ತೆ ಎಐ ಅಂತ ಯೋಚನೆ ಮಾಡಬಹುದು ಇಲ್ಲಿ ಎಐ ಯಾವ ಆಹಾರ ತಿನ್ನಬೇಕು ಯಾವುದು ತಿನ್ನಬಾರದು ಅಂತ ಲೆಕ್ಚರ್ ಬೇಕಾದ್ರೆ ನೀವು ಕೇಳಿದ್ರೆ ಕೊಡುತ್ತೆ ಬಟ್ ಸ್ಟಿಲ್ ಇಟ್ಸ್ ಯುವರ್ ಡಿಸಿಷನ್ ನಿಮ್ಮ ಡಿಸಿಷನ್ ಅದು ಆದರೆ ಹೇಗೆ ತಿನ್ನಬೇಕು ಅಂತ ಹೇಳುತ್ತೆ ಈಗ ಸದ್ಯಕ್ಕೆ ನಿಮ್ಮ ಮನೆಯಲ್ಲಿ ಏನು ಅಡುಗೆ ಐಟಂ ಇದೆ ಅಂತ ಯಮ್ ಲಿ ಹಾಗೂ ಮಿಲಿಮಿ ಶೆಫ್ ಜಿಪಿಟಿ ಎಐ ಗಳಿಗೆ ಫೀಡ್ ಮಾಡಿ ಆ ಪದಾರ್ಥಗಳನ್ನ ಬಳಸಿಕೊಂಡು ಯಾವ ರೆಸಿಪಿ ರೆಡಿ ಮಾಡಬಹುದು ಅಂತ ಎಐ ನ ಕೇಳಿದ್ರೆ ಹೇಳುತ್ತೆ ಚಾಟ್ ಜಿಪಿಟಿ ಯಲ್ಲೂ ರೆಸಿಪಿ ಕೇಳಬಹುದು ಇಲ್ನೋಡಿ ರೈಸ್ ಅರಿಶಿನ ಪುಡಿ ಶೇಂಗಾ ಕರಿಬೇವು ಲೆಮನ್ ಆಯಿಲ್ ಇದೆ ಅಂತ ಕೇಳಿದ್ವಿ ಚಿತ್ರಾನ್ನ ಮಾಡೋ ರೆಸಿಪಿ ಕೊಟ್ಟಿದೆ ಸ್ಟೆಪ್ ಬೈ ಸ್ಟೆಪ್ ಇಷ್ಟೇ ಅಲ್ಲ ಸ್ನೇಹಿತರೆ ನೀವು ಈ ವಾರ ಏನೇನು ತಿನ್ನಬೇಕು ಅಂತ ಖಾದ್ಯಗಳ ಹೆಸರನ್ನ ಕೊಟ್ರೆ ಸಾಕು ಅದಕ್ಕೆ ಏನೇನು ಪದಾರ್ಥಗಳು ಬೇಕು ಎಷ್ಟೆಷ್ಟು ತರಬೇಕು ಅಂತ ಲಿಸ್ಟ್ ಕೂಡ ಕೊಡ್ತಾರೆ ಪಟ್ಟಿ ಕೂಡ ಮಾಡಿಕೊಡುತ್ತೆ ಈ ಎಐ samsung ಫುಡ್ ಎಐ ನೀವು ತಿನ್ನೋ ಆಹಾರದ ಪೌಷ್ಟಿಕಾಂಶವನ್ನ ಅನಲೈಸ್ ಮಾಡುತ್ತೆ ಹೆಚ್ಚು ಕಮ್ಮಿ ಮಾಡುವ ಅವಶ್ಯಕತೆ ಇದ್ರೆ ಸಜೆಸ್ಟ್ ಮಾಡುತ್ತೆ ಫ್ಯಾಟ್ ಜಾಸ್ತಿ ಅಂತಲೋ ಕಾರ್ಬ್ ಜಾಸ್ತಿ ಅಂತಲೋ ಅಥವಾ ಫೈಬರ್ ಬೇಕು ಅಂತಲೋ ಸಜೆಶನ್ ಕೊಡುತ್ತೆ ಎಐ ಗಳು ನಿಮ್ಮ ಬಾಡಿ ಟೈಪ್ ಹೆಲ್ತ್ ಡೇಟಾ ಆಧರಿಸಿ ಎಕ್ಸರ್ಸೈಜ್ ಸಜೆಸ್ಟ್ ಮಾಡ್ತಾವೆ ನಿಮ್ಮ ಡೈಲಿ ಸ್ಟೆಪ್ ಟಾರ್ಗೆಟ್ ಮೀಟ್ ಮಾಡೋಕೆ ಮೋಟಿವೇಟ್ ಮಾಡುತ್ತವೆ.
ಈ ಅತಿ ಮುಖ್ಯವಾದ ವರದಿಯಲ್ಲಿ ಮುಂದುವರೆಯುವುದಕ್ಕಿಂತ ಮುಂಚೆ ಎಐ ಸ್ಕಿಲ್ಸ್ ಆಗಿರಬಹುದು ಡೇಟಾ ಅನಾಲಿಸಿಸ್ ಆಗಿರಬಹುದು ಪರ್ಸನಲ್ ಬ್ರಾಂಡಿಂಗ್ ಬಿಸಿನೆಸ್ ಹಾಗೂ ಮಾರ್ಕೆಟಿಂಗ್ ಟೆಕ್ನಿಕ್ ಗಳು ಟಾಸ್ಕ್ ಆಟೋಮೇಷನ್ ಎಚ್ ಆರ್ ಆಪರೇಷನ್ ಆಂಟ್ರಪ್ರೇನರ್ಸ್ ಎಲ್ಲರಿಗೂ ಉಪಯೋಗ ಆಗೋ ಉಚಿತ ಟ್ರೈನಿಂಗ್ ಪ್ರೋಗ್ರಾಮ್ ಅನ್ನ ಗ್ರೋಥ್ ಸ್ಕೂಲ್ ತಗೊಂಡು ಬಂದಿದೆ ಪ್ರತಿಯೊಂದು ಫೀಲ್ಡ್ ನಲ್ಲಿ ತಮ್ಮ ಸ್ಕಿಲ್ಸ್ ಅನ್ನ ಇಂಪ್ರೂವ್ ಮಾಡ್ಕೋಬೇಕು ಅನ್ನೋವರಿಗೆ ಈ ಮೂರು ಗಂಟೆಗಳ ಹ್ಯಾಂಡ್ಸ್ ಆನ್ ಎಐ ಟ್ರೈನಿಂಗ್ ಪ್ರೋಗ್ರಾಮ್ ಹೆಲ್ಪ್ ಮಾಡಬಹುದು ಫೈನಾನ್ಸ್ ಮಿಂಟ್ ಎಐ ವೈ ನಾನ್ಬ್ ಎಐ ಗಳು ಬಜೆಟ್ ಮಾಡಿಕೊಳ್ಳೋಕೆ ಖರ್ಚುಗಳನ್ನು ಟ್ರ್ಯಾಕ್ ಮಾಡೋಕೆ ಹಣವನ್ನು ಎಫಿಷಿಯೆಂಟ್ ಆಗಿ ಮ್ಯಾನೇಜ್ ಮಾಡೋಕೆ ಹೆಲ್ಪ್ ಮಾಡುತ್ತವೆ ನಿಮ್ಮ ಖರ್ಚುಗಳನ್ನು ಕ್ಯಾಟಗರೈಸ್ ಮಾಡಿ ಅನಲೈಸ್ ಮಾಡಿ ನೋಡಪ್ಪ ಇದಕ್ಕೆ ಇದು ಖರ್ಚು ಮಾಡ್ತಾ ಇದ್ದೀಯಾ ನಿಮ್ಮ ಸ್ಪೆಂಡಿಂಗ್ ಹ್ಯಾಬಿಟ್ ಯಾವ ತರ ಇದೆ ನೋಡು ಅಂತ ನಿಮಗೆ ತಿಳಿಸುತ್ತೆ ಉದಾಹರಣೆಗೆ ರೆಸ್ಟೋರೆಂಟ್ ಬಿಲ್ಗಳು ಜಾಸ್ತಿ ಇದೆ ಅಂತ ಅಂದುಕೊಳ್ಳಿ ಲಿಮಿಟ್ ಗಿಂತ ಜಾಸ್ತಿ ನೀವು ರೆಸ್ಟೋರೆಂಟ್ ಗೆ ಖರ್ಚು ಮಾಡ್ತಿದ್ರೆ ಅಲರ್ಟ್ ಕೊಡುತ್ತೆ ಇಲ್ಲಿ ಸಿಕ್ಕಾಪಟ್ಟೆ ಹೋಗ್ತಾ ಇದೆ ಅಂತ ಅಷ್ಟು ಮಾತ್ರ ಅಲ್ಲ ನೀವು ಖರ್ಚು ಮಾಡೋ ಪ್ಯಾಟರ್ನ್ ಗಮನಿಸಿ ಮುಂದೆ ನಿಮಗೆ ಇದೇ ರೀತಿ ಖರ್ಚು ಮಾಡ್ತಾ ಹೋದ್ರೆ ಎಷ್ಟು ದುಡ್ಡು ಖರ್ಚಾಗುತ್ತೆ ಎಷ್ಟು ದುಡ್ಡು ಬೇಕಾಗುತ್ತೆ ಅಂತಾನೂ ಹೇಳುತ್ತೆ ಇದರಿಂದ ನಿಮ್ಮ ಬಜೆಟ್ ಅಡ್ಜಸ್ಟ್ ಮಾಡ್ಕೊಳೋಕೆ ಹೆಲ್ಪ್ ಆಗಬಹುದು ಕ್ಲಿಯೋ ಅನ್ನೋ ಎಐ ನಲ್ಲಿ ರೋಸ್ಟ್ ಮೋಡ್ ಇದೆ ಅತಿಯಾಗಿ ಖರ್ಚು ಮಾಡಿದ್ರೆ ನಿಮ್ಮ ರೋಸ್ಟ್ ಮಾಡುತ್ತೆ ಅದು ಹೈಪ್ ಮೋಡ್ ನಲ್ಲಿ ನಿಮ್ಮ ಸೇವಿಂಗ್ಸ್ ಹಾಗೂ ಹೂಡಿಕೆಗೆ ಉತ್ತೇಜನ ಕೊಡೋ ಭಾಷೆ ಬಳಸಿ ಮೋಟಿವೇಟ್ ಮಾಡುತ್ತೆ ಇನ್ನು ಮನೆಯ ಸೆಕ್ಯೂರಿಟಿಗೆ ಕ್ಯಾಮೆರಾ ಹಾಗೂ ಇತರ ಸೆಕ್ಯೂರಿಟಿ ಸಿಸ್ಟಮ್ ಗಳನ್ನ ಆಪರೇಟ್ ಮಾಡೋಕೆ ನೆಕ್ಸ್ಟ್ ಕ್ಯಾಮ್ ಎಐ ಬಳಸಬಹುದು ಗೂಗಲ್ ನೆಸ್ಟ್ ಎಐ ಮನೆ ಬಾಗಿಲಿಗೆ ಅಪರಿಚಿತರು ಬಂದ್ರೆ ಅಲರ್ಟ್ ಕೊಡುತ್ತೆ ಕಿಟಕಿಗೆ ಹೊಡಿಯೋದು ಇಣಕೋದನ್ನ ಮಾಡಿದ್ರೆ ನೋಟಿಫಿಕೇಶನ್ ಕೊಡುತ್ತೆ ಬೆಕ್ಕು ಬಂದ್ರು ಗೊತ್ತಾಗುತ್ತೆ.
samsung ನಲ್ಲಿರೋ ಬಿಗ್ಬಿ ಕಾಲ್ ಅಸಿಸ್ಟೆಂಟ್ ನಿಮ್ಮ ಕಾಲ್ ಗಳನ್ನ ರಿಸೀವ್ ಮಾಡುತ್ತೆ ಕಾನ್ವರ್ಸೇಶನ್ ಗಳನ್ನ ಟ್ರಾನ್ಸ್ಲೇಟ್ ಕೂಡ ಮಾಡುತ್ತೆ ಚಾಟ್ ಜಿಪಿಟಿ ಕ್ಲೌಡ್ ಎಐ ಜೆಮಿನಿಗಳನ್ನ ಬಳಸಿಕೊಂಡು ಕೇವಲ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಟ್ಯಾಗ್ ಲೈನ್ ಜನರೇಟ್ ಮಾಡೋದಲ್ಲ ಆರ್ಟಿಕಲ್ ಬ್ಲಾಗ್ ಪುಸ್ತಕಗಳನ್ನು ಕೂಡ ಬರೀಬಹುದು ನೆಸ್ಟ್ ಅನ್ನೋ ಎಐ ಡಿವೈಸ್ ಇದೊಂದು ಸ್ಮಾರ್ಟ್ ಥರ್ಮೋ ಸ್ಟಾಟ್ ಅಂದ್ರೆ ಮನೆಯ ಟೆಂಪರೇಚರ್ ಮೈಂಟೈನ್ ಮಾಡೋ ಡಿವೈಸ್ ನಿಮ್ಮ ಮನೆಗೆ ಬರೋ ಟೈಮಿಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಟೆಂಪರೇಚರ್ ಸೆಟ್ ಮಾಡುತ್ತೆ ನೀವಾಗಿ ನೀವೇ ಎಸಿ ಆಪರೇಟ್ ಮಾಡೋ ಅಗತ್ಯ ಇರಲ್ಲ philips ಬಳಸಿ ವಾಯ್ಸ್ ಕಮಾಂಡ್ ಕೊಟ್ಟು ಮನೆ ಲೈಟ್ ಗಳನ್ನ ಆಪರೇಟ್ ಮಾಡಬಹುದು ಅಲೆಕ್ಸಾ ದಲ್ಲೂ ಈ ರೀತಿ ಲೈಟ್ ಗಳನ್ನ ಆಪರೇಟ್ ಮಾಡಬಹುದು ಗೂಗಲ್ ಹೋಂ ನಲ್ಲೂ ಕೂಡ ಈ ರೀತಿ ನೀವು ಆಪರೇಟ್ ಮಾಡಬಹುದು ಎಐ ಬಳಸಿ ಇಡೀ ಮನೆಯನ್ನೇ ಆಟೋಮೇಟ್ ಮಾಡಿಬಿಡಬಹುದು ಇನ್ನು ಮ್ಯೂಸಿಕ್ ಆರ್ಟ್ ಡಿಸೈನಿಂಗ್ ಫೋಟೋ ಎಡಿಟಿಂಗ್ ನಲ್ಲಿ ಎಐ ಮಾಡೋ ಮ್ಯಾಜಿಕ್ ಅದ್ಭುತ ಹೊಸ ಲೋಕವನ್ನೇ ಸೃಷ್ಟಿಸುತ್ತೆ ನಮ್ಮ ತಂಡದ ಸದಸ್ಯರೊಬ್ಬರನ್ನ ಅವರ ಎಡಿಟಿಂಗ್ ಸಂಬಂಧಪಟ್ಟ ಡೇಟಾ ಆಧರಿಸಿ ಎಐ ಹೇಗೆ ಚಿತ್ರಿಸಿದೆ ಅಂತ ನೀವು ಸ್ಕ್ರೀನ್ ಮೇಲೆ ನೋಡ್ತಿರಬಹುದು ಟ್ರಾವೆಲಿಂಗ್ ಮಾಡೋವರಿಗೆ ವರ್ಚುವಲ್ ಟ್ರಾವೆಲ್ ಏಜೆಂಟ್ ತರ ಕೆಲಸ ಮಾಡೋ ಎಕ್ಸ್ಪೀಡಿಯಾ ಅನ್ನೋ ಎಐ ಇದೆ ಪಿಕ್ ಪಾಯಿಂಟ್ ಅನ್ನೋ ಎಐ ನೀವು ಹೋಗ್ತಿರೋ ಡೆಸ್ಟಿನೇಶನ್ ಗೆ ತಕ್ಕಂತೆ ಏನೇನು ತಗೊಂಡು ಹೋಗ್ಬೇಕು ಅಂತ ಹೇಳುತ್ತೆ ಈ ರೀತಿ ಎಐ ಬಳಸಿಕೊಂಡು ಲೈಫ್ ಅನ್ನ ಈಜಿ ಮಾಡ್ಕೊಳೋಕೆ ಅವಕಾಶ ಇದ್ದೆ ಇದೆ.


