ದೇಶಾದ್ಯಂತ ಹಬ್ಬತಾ ಇರೋ ಐ ಲವ್ ಮಹಮ್ಮದ್ ಕಿಚ್ಚು ಈಗ ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಬೆಳಗಾವಿಯಲ್ಲಿ ಭಾರಿ ಗಲಾಟೆಯಾಗಿದೆ ಶುಕ್ರವಾರ ರಾತ್ರಿ ನಗರದ ಬಾಬು ಸುಬಾನಿ ದರ್ಗಾದ ಉರುಸ್ ವೇಳೆ ಕೆಲವರು ಐ ಲವ್ ಮಹಮ್ಮದ್ ಅಂತ ಘೋಷ ಘೋಷಣೆ ಕೂಗಿದ್ರು ಇದನ್ನ ಸ್ಥಳೀಯ ಹಿಂದೂ ನಿವಾಸಿಗಳು ಪ್ರಶ್ನೆ ಮಾಡಿದರು ಪರಿಣಾಮ ಗಲಭಿಯಾಗಿದೆ. ಪ್ರತಿವರ್ಷ ನಿಗದಿತ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗ್ತಾ ಇತ್ತು. ಆದರೆ ಈ ಸಲ ಬೇರೆ ಬೇರೆ ಕಡೆಗೆ ಬಂದು ಬೇಕು ಅಂತಲೇ ಪ್ರಚೋದನಕಾರಿಯಾಗಿ ಐ ಲವ್ ಮಹಮ್ಮದ್ ಘೋಷಣೆ ಕೂಗಿ ಪ್ರವೋಕ್ ಮಾಡಿದ್ದಾರೆ ಅಂತ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿ ಕೋಲಾಹಲ ಆಗಿದೆ. ಬಳಿಕ ತಲವಾರು ಪ್ರದರ್ಶಿಸಿರುವ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲ ಆಗ್ತಿದ್ದ ಹಾಗೆ ಸ್ಥಳಕ್ಕೆ ಬಂದ ಕರ್ನಾಟಕ ಸರ್ಕಾರದ ಪೊಲೀಸರು ಕೂಡಲೆ ಮೆರವಣಿಗೆಯನ್ನ ಅಲ್ಲಿಂದ ವಾಪಸ್ ಕಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು ಅದನ್ನ ಪೊಲೀಸರು ತಿಳಿಗೊಳಿಸು ಕೆಲಸ ಮಾಡಿದ್ದಾರೆ. ಕಲ್ಲು ತೂರಿದವರ ಮೇಲೆ ಕಠಿಣ ಕ್ರಮ ತಗೊಳಿ ಅಂತ ಸ್ಥಳಿಯರು ದೂರ ದಾಖಲಿಸಿದರು ಅದರ ಮೇಲೆ 50 ಜನರ ವಿರುದ್ಧ ಎಫ್ಐಆರ್ ಆಗಿದೆ. 11 ಮಂದಿಯನ್ನ ವಿಚಾರಣೆ ನಡೆಸಿದ್ದಾರೆ. ಇಷ್ಟೆಲ್ಲ ಆದಮೇಲೆ ಇನ್ನೊಂದು ಗುಂಪಿನಿಂದ ಹಾಗಾದರೆ ನಾವು ಮಾಡ್ತೀವಿ ಅಂತ ಹೇಳಿ ಐ ಲವ್ ಶ್ರೀರಾಮ ಅನ್ನೋ ಫಲಕವನ್ನ ತೋರಿಸಲಾಗಿದೆ. ಇನ್ನೊಂದು ಕಡೆ ದಾವಣಗೆರೆಯಲ್ಲಿ ಇನ್ನೊಂದು ಘಟನೆಯಾಗಿದೆ.
ಉತ್ತರ ಪ್ರದೇಶದಲ್ಲಿ ಐ ಲವ್ ಮಹಮ್ಮದ್ ಗಲಾಟೆ ಮುಂದುವರೆತಿದೆ ಬರೇಲಿಯಲ್ಲಿ ಈಗ ಆಲ್ರೆಡಿ ಎರಡು ದಿನ ಇಂಟರ್ನೆಟ್ ಕಟ್ ಮಾಡಲಾಗಿದೆ ಇದರ ನಡುವೆನೇ ಈಗ 14 ಸದಸ್ಯರ ಸಮಾಜವಾದಿ ಪಾರ್ಟಿ ನಿಯೋಗ ಬರೇಲಿಗೆ ಹೋಗೋಕೆ ಮುಂದಾಗಿದ್ರು ಆದರೆ ಸ್ಥಳೀಯ ಪೊಲೀಸರು ಗಾಜಿಯಾಬಾದ್ ಬಳಿನೆ ಅವರನ್ನ ತಡೆದು ವಾಪಸ್ ಕಳಿಸಿದ್ದಾರೆ ಇದಕ್ಕೆ ಅಖಿಲೇಶ್ ಪಾರ್ಟಿಯ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ ಅಲ್ದೆ ಯುಪಿಯಲ್ಲಿ ಸದ್ಯ ಆಘೋಷಿತ ತುರತು ಪರಿಸ್ಥಿತಿ ಹೇರಿದಂಗೆ ಕಾಣಿಸ್ತಾ ಇದೆ ಐ ಲವ್ ಮಹಾದೇವ ಐ ಲವ್ ಶ್ರೀರಾಮ್ ಅಂದ್ರೆ ತಪ್ಪಲ್ಲ ಐ ಲವ್ ಮಹಮ್ಮದ್ ಅಂದ್ರೆ ಏನು ತಪ್ಪು ಅನ್ನೋ ಪ್ರಶ್ನೆಯನ್ನ ಸಂಸದ ಇಕರಾ ಹಸನ್ ಮಾಡಿದ್ದಾರೆ ಇನ್ನೊಂದು ಕಡೆ ಐ ಲವ್ ಮಹಮ್ಮದ್ ಪೋಸ್ಟರ್ ಅಂಟಿಸಿದ್ದಾರೆ ಅಂತ ಮೀರತ್ ನಗರದಲ್ಲಿ ಐವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಶುಕ್ರವಾರ ರಾತ್ರಿ ನಗರದ ಮುಖ್ಯ ಬೀದಿಯಲ್ಲಿ ಪೋಸ್ಟರ್ ಹಾಕಲಾಗಿದೆ ಶನಿವಾರ ಬೆಳಗ್ಗೆ ಸ್ಥಳಿಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ಈ ಕ್ರಮ ತಗೊಂಡಿದ್ದಾರೆ ಇದೆಲ್ಲದರ ನಡುವೆ ಉತ್ತರಾಖಂಡ ಅವಿಮುಕ್ತೇಶ್ವರನಂದ ಸ್ವಾಮೀಜಿ ಈ ಲವ್ ಗಲಾಟೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ಸಾರ್ವಜನಿಕರನ್ನ ನಿಜವಾದ ಸಮಸ್ಯೆಗಳಿಂದ ಡಿಸ್ಟ್ರಾಕ್ಟ್ ಮಾಡೋಕೆ ಐ ಲವ್ ಮಹಮ್ಮದ್ ಐ ಲವ್ ಮಹಾದೇವ್ ವಿವಾದ ಶುರು ಮಾಡಿದ್ದಾರೆ ನನಗೆ ಮಹಮ್ಮದ್ರ ಬಗ್ಗೆ ಗೊತ್ತಿಲ್ಲ ಅವರ ಜೊತೆ ಇದ್ದವರಿಗೆ ಅವರ ಬಗ್ಗೆ ಗೊತ್ತಿರುತ್ತೆ ಆದರೆ ಐ ಲವ್ ಮಹಾದೇವ್ ಅಂತ ಹೇಳೋದು ಮಹಾದೇವರಿಗೆ ಮಾಡಿದ ಅಪಮಾನ ಇದ್ದ ಹಾಗೆ ಅಂತ ಹೇಳಿಕೆಯನ್ನ ಈ ಸ್ವಾಮೀಜಿ ಕೊಟ್ಟಿದ್ದಾರೆ ಅಂದಹಾಗೆ ಸ್ನೇಹಿತರೆ ಎಲ್ಲಾ ಕಡೆ ಇದರ ಘೋಷಣೆಂ ಬ್ಯಾನರ್ ಅಂತೆ ಲವ್ ಅಂತೆ ಲವ್ ಅಂತೆ ನೀವು ಸುದ್ದಿ ನೋಡ್ತಾ ಇದ್ದೀರಿ ಮೂಲ ಏನು ತಿರಳೇನು ಯಾರೋ ಯಾರನ್ನ ಲವ್ ಮಾಡೋದರ ಬಗ್ಗೆ ಒಂದು ಗುಂಪು ಐ ಲವ್ ಮಹಮ್ಮದ್ ಅಂತ ಹೇಳೋದರ ಬಗ್ಗೆ ಇನ್ನೊಂದು ಗುಂಪು ಐ ಲವ್ ಮಹಾದೇವ್ ಅಂತ ಹೇಳೋದರ ಬಗ್ಗೆ ಯಾರಿಗಾದರೂ ಈ ಲವ್ ಬಗ್ಗೆ ಆಕ್ಷೇಪ ಅಥವಾ ಅಪಸ್ವರ ಯಾಕೆ ಐ ಲವ್ ಮಹಮ್ಮದ್ ಬಗ್ಗೆ ಮುಸ್ಲಿಮರ ಒಳಗೆನೆ ಎರಡು ರೀತಿ ಒಪಿನಿಯನ್ ಇರೋದು ಯಾಕೆ ಡಿವೈಡೆಡ್ ಒಪಿನಿಯನ್ ಇರೋದು ಯಾಕೆ ಮೂಲ ತಿರಳೇನು ಧಾರ್ಮಿಕತೆಯ ವಿಚಾರ ಏನಿದೆ ಇದರಲ್ಲಿ ಮತ್ತು ಸಾಮಾಜಿಕ ವರ್ತನೆಯ ವಿಚಾರ ಏನಿದೆ ಇದಕ್ಕೆ ಸಂಬಂಧಪಟ್ಟಂತೆ ನಾವು ಪ್ರತ್ಯೇಕ ವರದಿಯಲ್ಲಿ ಆಲ್ರೆಡಿ ಮಾಹಿತಿ ಕೊಟ್ಟು ಪಬ್ಲಿಶ್ ಮಾಡಿದೀವಿ ನೀವು ಅದನ್ನ ನೋಡಿಲ್ಲ ಅಂದ್ರೆ ಮಿಸ್ ಮಾಡಿದೆ ಚೆಕ್ ಮಾಡಿ ಅಂತ ನಿಮ್ಮಲ್ಲಿ ಮನವಿ ಬನ್ನಿ ಈಗ ಫುಲ್ ನ್ಯೂಸ್ ನಲ್ಲಿ ಮುಂದುವರೆಯೋಣ ಸ್ನೇಹಿತರೆ ಏನೋ ರಷ್ಯಾ ಮತ್ತು ಯುಕ್ರೇನ್ ಯುದ್ಧ ಈಗ ಇನ್ನೊಂದು ಹಂತಕ್ಕೆ ತಲುಪಿದೆ ರಷ್ಯಾ ಯುಕ್ರೇನ್ ಮೇಲೆ ಮತ್ತೆ ದೊಡ್ಡ ದಾಳಿ ಮಾಡಿದೆ ಯುಕ್ರೇನ್ನ ಸುಮಿ ಪ್ರದೇಶದಲ್ಲಿ ಪ್ಯಾಸೆಂಜರ್ ಟ್ರೈನ್ ಮೇಲೆ ದಾಳಿ ಮಾಡಿದ್ದು ಅನೇಕರು ಮೃತಪಟ್ಟಿರುವ ಮಾಹಿತಿ ಬರ್ತಾ ಇದೆ 30 ಜನ ಗಾಯಗೊಂಡಿದ್ದಾರೆ ಟ್ರೈನ್ ನಲ್ಲಿದ್ದ ಪ್ಯಾಸೆಂಜರ್ಸ್ ಮತ್ತು ಸಿಬ್ಬಂದಿ ಅಂತ ಯುಕ್ರೇನ್ನ ಅಧ್ಯಕ್ಷ ಜೆಲೆನ್ಸ್ಕಿ ಹೇಳಿದ್ದಾರೆ.
ಈ ಟ್ರೈನ್ ಬೆಂಕಿಗೆ ಸುಟ್ಟು ಭಸ್ಮವಾಗುತ್ತಿರೋ ವಿಡಿಯೋವನ್ನ ಕೂಡ ಪೋಸ್ಟ್ ಮಾಡಿದ್ದಾರೆ ಈ ಘಟನಾ ಸ್ಥಳ ರಷ್ಯಾ ಗಡೆಯಿಂದ 50 ಕಿಲೋಮೀಟರ್ ದೂರವಷ್ಟೇ ಇದೆ ಶುಕ್ರವಾರ ರಷ್ಯಾ ಯುಕ್ರೇನ ನ್ಯಾಚುರಲ್ ಗ್ಯಾಸ್ ಫೆಸಿಲಿಟಿ ಮೇಲೆ ದಾಳಿ ಮಾಡಿತ್ತು ಅದರ ಬೆನ್ನಲ್ಲೇ ಈ ದಾಳಿಯಾಗಿದೆ. ಇದಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿದೆ. ಇದುವರೆಗೂ ರಷ್ಯಾ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನು ಕಾಫ್ ಸಿರಪ್ ಗೆ ಸಂಬಂಧಪಟ್ಟಂತೆ ಮತ್ತೊಂದು ಅಪ್ಡೇಟ್ ಬಂದಿದೆ ಸ್ನೇಹಿತರೆ ಈಗ ಮಕ್ಕಳ ಸಾವಿಗೆ ಕಾರಣವಾಗಿದೆ ಅಂತ ಹೇಳಿ ಮಧ್ಯಪ್ರದೇಶ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸ್ರೆಸನ್ ಫಾರ್ಮಸ್ಯೂಟಿಕಲ್ಸ್ ಕಂಪನಿಯ ಕೋಲ್ಡ್ ಡ್ರಿಫ್ ಕಾಫ್ ಸಿರಪ್ ಗೆ ಬ್ಯಾನ್ ಹೇರಲಾಗಿದೆ. ಮಧ್ಯಪ್ರದೇಶದಲ್ಲಿ ಒಂಬತ್ತು ಮಕ್ಕಳ ಸಾವಿಗೆ ಕಾರಣವಾಗಿದೆ ಅಂತ ಹೇಳಿ ಈ ಕೋಲ್ಡ್ ಡ್ರಿಫ್ ಕಾಫ್ ಸಿರಪ್ ಅನ್ನ ಟೆಸ್ಟ್ ಮಾಡಿ ಅಂತ ಮಧ್ಯಪ್ರದೇಶ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಆಗ್ರಹ ಮಾಡಿತ್ತು ಯಾಕಂದ್ರೆ ಇದನ್ನ ತಯಾರಿಸುವ ಈ ಕಂಪನಿ ಕಾಂಚಿಪುರಂ ಮೂಲದ್ದು ಅದರಂತೆ ಈಗ ಈ ಸಿರಪ್ನಲ್ಲಿ ನಾನ್ ಸ್ಟ್ಯಾಂಡರ್ಡ್ ಹಾಗೂ ಹಾನಿಕಾರಕ ಅಂಶ ಇದೆ 48.6% ನಷ್ಟು ಡೈ ಎಥಲಿನ್ ಗ್ಲೈಕಾಲ್ ಅನ್ನೋ ಮನುಷ್ಯರಿಗೆ ಭಾರಿ ಹಾನಿ ಮಾಡೋ ಅಥವಾ ಕೆಲವು ಸಲ ಸಾವಿಗೂ ಕಾರಣ ಆಗೋ ವಿಷಕಾರಿ ರಾಸಾಯನಿಕ ಇದೆ ಅಂತ ಹೇಳಿ ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯ ರಿಪೋರ್ಟ್ ಕೊಟ್ಟಿತ್ತು. ಇದರ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಈ ಸಿರಪ್ ಅನ್ನ ಬ್ಯಾನ್ ಮಾಡಿದೆ. ಇತ್ತ ಕರ್ನಾಟಕದಲ್ಲೂ ಕೂಡ ಈ ಸಿರಪ್ ಬ್ಯಾನ್ ಮಾಡಲಾಗಿದೆ. ಕರ್ನಾಟಕ ಫಾರ್ಮ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ ಸಂಸ್ಥೆ ಪತ್ರ ಬರೆಯುವ ಮೂಲಕ ಕರ್ನಾಟಕದಲ್ಲಿ ಎಲ್ಲಾ ಔಷಧ ಮಾರಾಟಗಾರರು ಹಾಗೂ ವಿತರಕರಿಗೆ ಇದನ್ನ ಸೇಲ್ ಮಾಡಬೇಡಿ ಅಂತ ಸೂಚನೆ ಕೊಟ್ಟಿದ್ದಾರೆ. ಹಾಗೆ ಡೈ ಎಥಲಿನ್ ಗ್ಲೈಕಾಲ್ ಕಾಂಟೆಂಟ್ ಇರೋ ಕಾಫ್ ಸಿರಪ್ ತಡೆಗೂ ಸೂಚಿಸಲಾಗಿದೆ. ಅತ್ತ ತಮಿಳುನಾಡಿನಲ್ಲೂ ಇದನ್ನ ನಿಷೇಧಿಸಲಾಗಿದೆ. ಈ ಸಿರಪ್ ನ ಎಲ್ಲಾ ಸ್ಟಾಕ್ ಅನ್ನ ತಕ್ಷಣ ಸ್ಥಗಿತಗೊಳಿಸಿ ಮುಂದಿನ ಆದೇಶ ಬರುವರೆಗೂ ಮಾರಾಟ ಮಾಡಬೇಡಿ ಅಂತ ತಮಿಳುನಾಡು ಸರ್ಕಾರ ಸೂಚನೆ ಕೊಟ್ಟಿದೆ. ಇನ್ನು ಮಕ್ಕಳ ಸಾವಿಗೆ ಕಾರಣವಾಗಿದೆ ಅಂತ ಹೇಳಿ ರಾಜಸ್ಥಾನದಲ್ಲಿ ಡೆಕ್ಸ್ಟ್ರೋ ಮೆಥಾರ್ಫನ್ ಅಂಶ ಇರೋ ಸಿರಪ್ ಅನ್ನ ಬ್ಯಾನ್ ಮಾಡಲಾಗಿದೆ.
ಇದೆಲ್ಲದರ ನಡುವೆ ಕೇಂದ್ರ ಸರ್ಕಾರ ದೊಡ್ಡ ಎಚ್ಚರಿಕೆ ಕೊಟ್ಟಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪೇ ಕೊಡಬೇಡಿ ಅಂತ ದ ಡೈರೆಕ್ಟರೇಟ್ಸ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ ಅಡ್ವೈಸರಿ ಜಾರಿ ಮಾಡಿದ್ದಾರೆ. ಮಧ್ಯಪ್ರದೇಶ ಹಾಗೂ ಇತರ ಕಡೆ ಸೇರಿ ಒಟ್ಟು 11 ಮಕ್ಕಳು ಕಾಫ್ ಸಿರಪ್ ಸೈಡ್ ಎಫೆಕ್ಟ್ ನಿಂದಾಗಿ ಮೃತಪಟ್ಟ ಬೆನ್ನಲ್ಲೇ ಈ ಸೂಚನೆ ಕೊಡಲಾಗಿದೆ. ಆದರೆ ಅಪಾಯ ಅಂತ ಹೇಳಲಾಗ್ತಿರೋ 19 ಔಷಧಗಳ ಉತ್ಪಾದನಾ ಘಟಕಗಳನ್ನ ತಪಾಸಣೆ ಮಾಡೋಕು ಸರ್ಕಾರ ಮುಂದಾಗಿದೆ. ಕೇಂದ್ರದ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಬರೋ ದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಷನ್ ಸಿಡಿಎಸ್ಓ ಈ ಕೆಲಸ ಮಾಡ್ತಾ ಇದೆ. ಭಾರತದ ಉನ್ನತ ನಾಯಕರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆಯ ಪರ್ವ ಮುಂದುವರೆದಿದೆ. ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೆ ಭಾರತದ ಆಪರೇಷನ್ ಬಗ್ಗೆ ಮಾತನಾಡಿದ್ದಾರೆ. ಭಾರತ ತನ್ನ ಪ್ರಜೆಗಳನ್ನ ರಕ್ಷಣೆ ಮಾಡೋಕೆ ಯಾವ ಗಡಿಯನ್ನ ಬೇಕಾದರೂ ದಾಟಿ ಹೋಗುತ್ತೆ ಅಂತ ಹೇಳಿದ್ದಾರೆ. ನಾವು ಯಾವತ್ತೂ ಅವರ ಸೇನೆ ಮತ್ತು ನಾಗರಿಕರಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಟಾರ್ಗೆಟ್ ಮಾಡಿಲ್ಲ ಮೊದಲಿಗೆ ಒಂದು ವೇಳೆ ದಾಳಿ ಮಾಡಬೇಕು ಅಂತ ಇದ್ರೆ ಮೊದಲೇ ಎಲ್ಲ ಮುಗಿಸಿಬಿಡ್ತಾ ಇದ್ವಿ. ಭಾರತದ ಘನತೆ ಅಂತ ಬಂದಾಗ ನಾವು ಯಾವತ್ತೂ ರಾಜಿ ಆಗಲ್ಲ. ನಮ್ಮ ಏಕತೆ ಸಮಗ್ರತೆ ಮತ್ತು ನಮ್ಮ ಪ್ರಜೆಗಳ ರಕ್ಷಣೆಯ ಮ್ಯಾಟರ್ ಅಂತ ಬಂದಾಗ ನಾವು ಯಾವುದೇ ಬಾರ್ಡರ್ ಇರಲಿ ಅದನ್ನ ಕ್ರಾಸ್ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಮೂಲಕ ಅಫ್ಘಾನ್ ಗಳಿಗೆ ಉಗ್ರರನ್ನ ಕಳಿಸಿ ಅಲ್ಲಿಂದ ದಾಳಿ ಮಾಡಿಸಬಹುದು. ಹೊಡೆದ್ರೆ ಅಫ್ಘಾನಿಸ್ತಾನ ಹೊಡಿಬೇಕಾಗುತ್ತೆ.
ಭಾರತ ಹೆಂಗೆ ಅಂತ ಪ್ಲಾನ್ ಮಾಡ್ತಿರೋ ಪಾಕಿಸ್ತಾನಕ್ಕೆ ನಾವು ಯಾವ ಬಾರ್ಡರ್ನು ಕೇರ್ ಮಾಡಲ್ಲ ನಮಗೆ ತ್ರೆಟ್ ಇದ್ರೆ ಅಲ್ಲಿಗೂ ಹೋಗ್ತೀವಿ ಅನ್ನೋ ಮೆಸೇಜ್ನ್ನ ಭಾರತ ನೇರವಾಗಿ ಪಾಸ್ ಮಾಡಿದೆ ರಕ್ಷಣಾ ಮಂತ್ರಿಯ ಈ ಹೇಳಿಕೆ ಮೂಲಕ ಇನ್ನು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡ್ತಿದ ಆರೋಪದ ಮೇಲೆ ಹರಿಯಾಣದ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಒಬ್ಬ ಯೂಟ್ಯೂಬರ್ ವಾಸಿಂ ಅಕ್ರಂ ಮತ್ತೊಬ್ಬ ತೌಫಿಕ್ ವಿಚಾರಣೆ ನಡೆಸಿದ ಪೊಲೀಸರು ಈಗ ಆಘಾತಕಾರಿ ಮಾಹಿತಿಯನ್ನ ಹೊರಹಾಕಿದ್ದಾರೆ ಇವರಿಬ್ಬರು ಪಾಕಿಸ್ತಾನಕ್ಕೆ ವೀಸಾ ಮಾಡಿಸಿಕೊಡ್ತೀವಿ ಅಂತ ಹೇಳಿ ಜನರಿಂದ ಹಣ ಪಡೆದು ಅದನ್ನ ದಿಲ್ಲಿಯಲ್ಲಿರೋ ಪಾಕಿಸ್ತಾನದ ಹೈ ಕಮಿಷನ್ಗೆ ಕೊಡ್ತಾ ಇದ್ರು ಒಮ್ಮೆ ಪಾಕಿಸ್ತಾನದ ಅಧಿಕಾರಿ ಡ್ಯಾನಿಶ್ ಅನ್ನೋನು ಟೂರಿಸ್ಟ್ ವಿಸಾ ಮೂಲಕ ಭಾರತಕ್ಕೆ ಬಂದಾಗ ಇವರಿಬ್ಬರು ಜನರಿಂದ ಕಲೆಕ್ಟ್ ಮಾಡಿದ್ದ ಹಣವನ್ನ ಡ್ಯಾನಿಶ್ ಕೈಗೆ ಕೊಟ್ಟು ಐಎಸ್ಐ ಗೆ ತಲುಪಿಸಿದ್ರು ಈ ಹಣವನ್ನೆಲ್ಲ ಭಾರತದಲ್ಲಿ ವಾಸ ಮಾಡ್ತಿರೋ ಪಾಕ್ಪರ ಬೇಹುಗಾರರಿಗೆ ಸಪ್ಲೈ ಮಾಡೋಕೆ ಯೂಸ್ ಮಾಡಲಾಗ್ತಾ ಇತ್ತು ಅವರ ಬೇಹುಗಾರಿಕೆ ಜಾಲ ಹರಡೋಕೆ ಹೆಲ್ಪ್ ಆಗ್ತಾ ಇತ್ತು ಅಂತ ತನಿಕೆ ವೇಳೆ ಗೊತ್ತಾಗಿದೆ ಹಾಗೆ ಈ ವಾಸಿಮ ಸಿವಿಲ್ ಇಂಜಿನಿಯರ್ ಕೂಡ ಆಗಿದ್ದು ಪಾರ್ಕ್ ಹೈಕ ಕಮಿಷನ್ ಜೊತೆಗೆ WhatsApp ನಲ್ಲಿ ಕಾಂಟ್ಯಾಕ್ಟ್ ನಲ್ಲಿದ್ದ ಸುಮಾರು ನಾಲ್ಕರಿಂದ 5 ಲಕ್ಷ ರೂಪಾಯಿಯನ್ನ ಐಎಸ್ಐ ಗೆ ಟ್ರಾನ್ಸ್ಫರ್ ಮಾಡಿಸೋಕ್ಕೆ ಹೆಲ್ಪ್ ಮಾಡಿದ್ದಾನೆ. ಒಂದಿಷ್ಟು ಕ್ಯಾಶ್ ಪೇಮೆಂಟ್ ಕೂಡ ಆಗಿದೆ ಅಂತ ತನಿಕೆಯಲ್ಲಿ ಬಯಲಾಗಿದೆ. ಇನ್ನೊಂದು ಕಡೆ ಜಮ್ಮು ಕಾಶ್ಮೀರದಲ್ಲಿ ಪೊಲೀಸರು ಉಗ್ರ ವಿರೋಧಿ ಕಾರ್ಯಚರಣೆ ಶುರು ಮಾಡಿದ್ದಾರೆ. ಸಜ ಅಹಮದ್ ಶೇಖ ಅನ್ನೋ ಉಗ್ರನ ಕುಟುಂಬಕ್ಕೆ ಸೇರಿದ್ದು ಎನ್ನಲಾದ ಎರಡು ಕೋಟಿ ಮೌಲ್ಯದ ಆಸ್ತಿಯನ್ನ ಶ್ರೀನಗರ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಈ ಪ್ರಾಪರ್ಟಿಯನ್ನ ಶ್ರೀನಗರದ ಖುಷಿಪೋರಾದ ರೋಸ್ ಅವೆನ್ಯೂ ನಲ್ಲಿದ್ದ ಉಗ್ರ ಗೌಲ್ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸ್ತಾ ಇದ್ದ ಅಂತ ಹೇಳಲಾಗಿದೆ. ಇತ್ತ ಮಣಿಪುರದ ಮೂರು ಜಿಲ್ಲೆಗಳಲ್ಲಿ 10 ಉಗ್ರಗಾಮಿಗಳನ್ನ ಬಂಧಿಸಲಾಗಿದೆ.
ಇವರೆಲ್ಲ ನಿಷೇಧಿತ ಸಂಘಟನೆಗಳಿಗೆ ಸೇರಿದ್ದು ಕಳೆದ ಕೆಲ ದಿನಗಳಿಂದ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಹಿಡಿದು ಹಾಕಲಾಗಿದೆ. ಇದೇ ವೇಳೆ ಚುರುಚಂದಾಪುರ ಜಿಲ್ಲೆಯ ಕಾಡಿನಲ್ಲಿ ಅಡಗಿದ ಸೀನಿಯರ್ ಕಮಾಂಡರ್ ಅನ್ನ ಕೂಡ ಅಸ್ಸಾಂ ರೈಫಲ್ಸ್ ಹಿಡಿದು ಹಾಕಿದೆ. ಇನ್ನು 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಅವರ ಚಾರ್ಲಿ ನಟನೆಗೆ ಅತ್ಯುತ್ತಮ ನಟ ಮತ್ತು ಮ್ಯೂಟ್ ಸಿನಿಮಾದ ನಟನೆಗೆ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಇನ್ನು ಅತ್ಯುತ್ತಮ ಚಿತ್ರವಾಗಿ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಹೊರಹೊಮ್ಮಿದರೆ ಭಾರತದ ಪ್ರಜೆಗಳಾದ ನಾವು ವಿಶೇಷ ಸಾಮಾಜಿಕ ಕಾಳಜಿ ಚಿತ್ರವಾಗಿ ಮೂಡಿಬಂದಿದೆ. ಕೇಕ್ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ತ ಪ್ರಶಸ್ತಿ ಲಭಿಸಿದೆ. ಪರಪ್ಪನ ಅಗ್ರಹಾರ ಜೈಲ್ನಲ್ಲಿ ಮತ್ತೆ ರೌಡಿಗಳಿಗೆ ರಾಜಾತಿತ್ಯ ಕೊಡ್ತಿರೋ ವಿಚಾರ ಬಯಲಾಗಿದೆ. ಸುಪ್ರೀಂ ಕೋರ್ಟ್ ಅಷ್ಟೆಲ್ಲ ಯಾಡ್ಸ್ ಜಾಡಿಸಿ ಮಾತಿನ ಮೂಲಕ ಉದ್ದರು ಕೂಡ ಮರ್ಯಾದೆ ಬಿಟ್ಟಿಲ್ಲ ಇವರು. ಜೈಲಿನ ಸಿಬ್ಬಂದಿ ಮತ್ತೆ ಅಲವ್ ಮಾಡ್ತಿದ್ದಾರೆ. ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಅನ್ನೋನು ಜೈಲಲ್ಲೇ ಬರ್ತ್ಡೇ ಸೆಲೆಬ್ರೇಟ್ ಮಾಡ್ಕೊಂಡಿರೋದು ವೈರಲ್ ಆಗಿದೆ. ಫೋಟೋ ತೆಗೆದು ಆತನ ಶಿಷ್ಯಂದರು ವೈರಲ್ ಮಾಡಿದ್ದಾರೆ. ಜನ ಈಗ ಇದನ್ನ ಇಟ್ಕೊಂಡು ಪರಮೇಶ್ವರ ಅವರಿಗೆ ಟ್ಯಾಗ್ ಮಾಡಿ ಕೇಳ್ತಾ ಇದ್ದಾರೆ. ಇದು ಗೊತ್ತಾ ನಿಮಗೆ ಇದಾದ್ರೂ ಗೊತ್ತಾಗಿದೆಯಾ ಗಮನಕ್ಕೆ ಬಂದಿದೆಯಾ ಅಂತ ಕೇಳ್ತಾ ಇದ್ದಾರೆ ಪರಮೇಶ್ವರವರಿಗೆ ಗೃಹ ಮಂತ್ರಿ ಅವರಿಗೆ ಏನು ಅರಬಿ ಸಮುದ್ರದಲ್ಲಿ ಶಕ್ತಿ ಚಂಡ ಮಾರುತದ ಶಕ್ತಿ ತೋರ್ಪಡಿಕೆ ಶುರುವಾಗಿದೆ ಈಗ ಮುಂದಿನ ದಿನಗಳಲ್ಲಿ ಪಕ್ಕದ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತೆ ಆಲ್ರೆಡಿ ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ನಲ್ಲೆಲ್ಲ ಹೆವಿ ಮಳೆ ಮುಂಬೈನಲ್ಲೆಲ್ಲ ಮಳೆಯಿಂದ ಬಹಳ ಅನಾಹುತ ಆಗಿಹೋಗಿದೆ ಈಗ ಮತ್ತೆ ಹೆವಿ ಮಳೆ ಅಂತ ಹೇಳಿ ಮಾಹಿತಿ ಭಾರತೀಯ ಹವಾಮಾನ ಇಲಾಖೆ ಅಲರ್ಟ್ ಕೊಟ್ಟಿದೆ ಅಗೈನ್ ಮುಂಬೈ ಠಾಣೆ ಪಾಲ್ಗರ್ ರಾಯಗಡ್ ರತ್ನಗಿರಿ ಸಿಂಧುರ್ಗ ಜಿಲ್ಲೆಗಳಲ್ಲಿ ಅಕ್ಟೋಬರ್ ಏಳರವರೆಗೆ ಹೈ ಅಲರ್ಟ್ ಉತ್ತರ ಮಹಾರಾಷ್ಟ್ರದ ನಾಶಿಕ್ ಡಿವಿಷನ್ ನಲ್ಲಿ 45 ರಿಂದ 65 km ವೇಗದಲ್ಲಿ ಗಾಳಿ ಬೀಸ್ತಾ ಇದೆ. ಹೀಗಾಗಿ ಎಲ್ಲರೂ ಅಲರ್ಟ್ ಆಗಿರಿ ಅಂತ ಅಧಿಕಾರಿಗಳು ಹೇಳಿದ್ದಾರೆ. ಏನು ಕರ್ನಾಟಕದ ಹಲವು ಕಡೆ ಮುಂದಿನ 24 ಗಂಟೆ ಸಾಧಾರಣ ಮಳೆಯಾಗೋ ಸಾಧ್ಯತೆ ಇದೆ ಅಂತ ಹೇಳಿ ಇಲ್ಲೂ ಕೂಡ ಅಲರ್ಟ್ ಇದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕರಾವಳಿ ಕರ್ನಾಟಕ ಹಾಗೂ ಬೆಂಗಳೂರು ಸುತ್ತಮುತ್ತ ಸೇರಿದ ಹಾಗೆ ಹಳೆ ಮೈಸೂರು ಭಾಗದಲ್ಲಿ ಎಲ್ಲೋ ಅಲರ್ಟ್ ಇದೆ. ಇನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿಯವಲ್ ಅವರು ಬ್ರೆಜಿಲ್ ಅಧ್ಯಕ್ಷರ ವಿಶೇಷ ಸಲಹೆಗಾರ ಸೆಲ್ಸೋ ಲೂಯಿಸ್ ನ್ಯೂನ್ಸ್ ಅಮೋರಿಮ್ ಅವರನ್ನ ದಿಲ್ಲಿಯಲ್ಲಿ ಮೀಟ್ ಆಗಿದ್ದಾರೆ. ಕಳೆದ ಜುಲೈನಲ್ಲಿ ಪಿಎಂ ಮೋದಿ ಬ್ರೆಜಿಲ್ಗೆ ಭೇಟಿ ಕೊಟ್ಟಿದ್ರು. ಈ ವೇಳೆ ಕೆಲ ಕ್ಷೇತ್ರಗಳಲ್ಲಿ ಸಮಸ್ಯೆ ಬಗೆಹರಿಸಿ ಪರಸ್ಪರ ಸಹಕಾರ ಹೆಚ್ಚು ಮಾಡಿಕೊಳ್ಳುದರ ಬಗ್ಗೆ ನಿರ್ಧಾರ ಮಾಡಿದ್ರು.


