Toyota ಅಂದಾಕ್ಷಣ ನಮ್ಮೆಲ್ಲರ ಕಣ್ಮುಂದೆ ಬರೋದು ಇನ್ನೋವ ಹಾಗೂ Fortuner ಕಾರುಗಳು. ಜಗತ್ತಿನಲ್ಲೇ Toyota ಎಷ್ಟೇ ಕಾರುಗಳನ್ನ ಮಾರಾಟ ಮಾಡಿದರು ಭಾರತದಲ್ಲಿ ಆ ಕಂಪನಿಗೆ ಒಂದು ಗಟ್ಟಿಯಾದ ನೆಲೆ ಮತ್ತು ಬ್ರಾಂಡ್ ವ್ಯಾಲ್ಯೂ ತಂದುಕೊಟ್ಟಿದ್ದು ಇದೇ ಇನ್ನೋವ. ಪ್ರಯಾಣಕ್ಕೆ ಕಂಫರ್ಟ್ ಅಂದ್ರೆ ಇನ್ನೋವ ಅನ್ನುವಷ್ಟರ ಮಟ್ಟಿಗೆ ಹೆಸರು ಮಾಡಿದ ಕಾರ್ ಇದು. ರಾಜಕಾರಣಿ ಅಧಿಕಾರಿಗಳಿಂದ ಹಿಡಿದು ಬಾಡಿಗೆಗೆ ಕಾರು ಓಡಿಸುವವರೆಗೆ ಎಲ್ಲರಿಗೂ ಇದು ಅಚ್ಚುಮೆಚ್ಚು ಒಂದು ಕಾಲದಲ್ಲಿ ಅಂಬಾಸಿಡರ್ ಕಾರು ಹೇಗೆ ಸರ್ಕಾರದ ಅಧಿಕೃತ ಕಾರು ಅನಿಸಿಕೊಂಡಿತ್ತೋ ಈಗ ಆ ಜಾಗವನ್ನ ಇನ್ನೋವಾa ಆಕ್ರಮಿಸಿಕೊಂಡಿದೆ ಆದರೆ ಇಂತ ಬಾರಿ ಜನಪ್ರಿಯ ಕಾರೇ ಇನ್ಮುಂದೆ ನೀವು ದುಡ್ಡು ಕೊಟ್ಟರು ಸಿಗಲ್ಲ ಅಂದ್ರೆ ನಂಬುತ್ತೀರಾ ಹೌದು Toyota ಕಂಪನಿ ಈಗ ಒಂದು ಶಾಕಿಂಗ್ ನಿರ್ಧಾರಕ್ಕೆ ಬಂದಿದೆ. ಅಷ್ಟಕ್ಕೂ ಏನಿದು ನಿರ್ಧಾರ? ಜಪಾನ್ ಮೂಲದ ಕಂಪನಿ ಹೀಗೇಕೆ ಮಾಡ್ತಾ ಇದೆ.
ಇನ್ನೋವಾa ಕ್ರಿಸ್ಟಾ ಗೆ ಗುಡ್ ಬಾಯ್ ಟೈಮ್ ಫಿಕ್ಸ್ ಮಾಡಿದ Toyota. ಆಟೋಮೊಬೈಲ್ ಜಗತ್ತಿನಿಂದ ಬಂದಿರೋ ಬಿಗ್ ಬ್ರೇಕಿಂಗ್ ನ್ಯೂಸ್ ಅಂದ್ರೆಟೊ ತನ್ನ ಅತ್ಯಂತ ಜನಪ್ರಿಯ ಇನ್ನೋವಾa ಕ್ರಿಸ್ಟಾ ಕಾರಿನ ಉತ್ಪಾದನೆಯನ್ನ ನಿಲ್ಲಿಸಲು ನಿರ್ಧರಿಸಿದೆ. ಇದಕ್ಕೆ ಡೆಡ್ಲೈನ್ ಕೂಡ ಫಿಕ್ಸ್ ಆಗಿದೆ. ಮಾರ್ಚ್ 2027ರ ಹೊತ್ತಿಗೆ ಅಂದ್ರೆ ಇನ್ನು ಒಂದು ವರ್ಷದಲ್ಲಿ ಕಂಪನಿಯು ಡೀಸೆಲ್ ಇನ್ನೋವ ಕ್ರಿಸ್ಟಾ ಗೆ ಸಂಪೂರ್ಣವಾಗಿ ವಿದಾಯ ಹೇಳಲಿದೆ. ಅಂದ್ರೆ ಸುಮಾರು ಎರಡು ದಶಕಗಳ ಕಾಲ ಭಾರತದ ರಸ್ತೆಗಳಲ್ಲಿ ರಾಜನಂತೆ ಮೆರೆದ ಒಂದು ಕಾರಿನ ಶಕೆ ಅಲ್ಲಿಗೆ ಮುಗಿಯಲಿದೆ. ನಿಜ ಹೇಳಬೇಕು ಅಂದ್ರೆ ಕಂಪನಿ 2025ರಲ್ಲೇ ಇದನ್ನ ನಿಲ್ಲಿಸೋ ಪ್ಲಾನ್ ಮಾಡಿತ್ತು. ಆದರೆ ಭಾರತದಲ್ಲಿ ಈ ಕಾರ್ ಗೆ ಇರೋ ವಿಪರೀತ ಡಿಮ್ಯಾಂಡ್ ಮತ್ತು ಸೆಮಿಕಂಡಕ್ಟರ್ಗಳ ಕೊರತೆಯಿಂದ ಹೈ ಕ್ರಾಸ್ ಮಾಡೆಲ್ ಗಳಲ್ಲಿ ಆದ ವಿಳಂಬದಿಂದ ಕ್ರಿಸ್ಟ ಉತ್ಪಾದನೆಯನ್ನ 2027 ರ ವರೆಗೆ ಎಳೆಯಲಾಗಿದೆ. ಅತ್ಯಂತ ಹೆಚ್ಚು ಸೇಲ್ ಆಗೋ ಕಾರನ್ನ ಕಂಪನಿ ಯಾಕೆ ನಿಲ್ಲಿಸ್ತಿದೆ ಅನ್ನೋ ಪ್ರಶ್ನೆ ನಿಮ್ಮಲ್ಲಿರಬಹುದು. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಕಠಿಣ ನಿಯಮಗಳು.
ಭಾರತದಲ್ಲಿ ಶೀಘ್ರದಲ್ಲೇ ಸಿಎಫ್ ಅಂದ್ರೆ ಕಾರ್ಪೊರೇಟ್ ಅವರೇಜ್ ಫ್ಯೂಯಲ್ ಎಕಾನಮಿ ನಿಯಮಗಳು ಜಾರಿಗೆ ಬರ್ತಿವೆ. ಸರಳವಾಗಿ ಹೇಳಬೇಕು ಅಂದ್ರೆ ಪರಿಸರ ಮಾಲಿನ್ಯವನ್ನ ತಡೆಯೋಕೆ ಕಾರು ಕಂಪನಿಗಳಿಗೆ ಸರ್ಕಾರ ಹಾಕಿರೋ ಲಗಾಮು ಇದು ಇನ್ನೋವ ಕ್ರಿಸ್ಟ ಒಂದು ಲ್ಯಾಡರ್ ಫ್ರೇಮ್ ಹೊಂದಿರೋ ಭಾರವಾದ ಕಾರು ಇದರಲ್ಲಿರೋದು ದೊಡ್ಡ 2.4ಲೀಟರ್ 4 ಲೀಟರ್ ಡೀಸೆಲ್ ಇಂಜಿನ್ ಹೊಸ ನಿಯಮದ ಪ್ರಕಾರ ಇಂತ ಭಾರವಾದ ಡೀಸೆಲ್ ವಾಹನಗಳು ಹೊರಸೂಸುವ ಇಂಗಾಲದ ಪ್ರಮಾಣ ಜಾಸ್ತಿಯಾಗಿರುತ್ತೆ ಹಾಗಾಗಿ ಭವಿಷ್ಯದ ಕಾನೂನುಗಳಿಗೆ ಈ ಕಾರು ಒಗ್ಗಿಕೊಳ್ಳೋದು ಕಷ್ಟ ಇದೇ ಕಾರಣಕ್ಕೆಟೊಯೋ ಈ ಕಠಿಣ ನಿರ್ಧಾರಕ್ಕೆ ಬಂದಿದೆಟೊಯೋ ಕಂಪನಿಯ ಪ್ಲಾನ್ ಬಹಳ ಕ್ಲಿಯರ್ ಆಗಿದೆ ಇನ್ಮುಂದೆ ಅವರು ಡೀಸೆಲ್ ಕಾರುಗಳ ಬದಲು ಪೆಟ್ರೋಲ್ ಹೈಬ್ರಿಡ್ ಕಾರುಗಳನ್ನೇ ಹೆಚ್ಚು ಮಾರಾಟ ಮಾಡಲಿದ್ದಾರೆ ಅದಕ್ಕಾಗಿ ಇನ್ನೋವ ಹೈ ಕ್ರಾಸ್ ಅನ್ನೋ ಹೈಬ್ರಿಡ್ ಕಾರನ್ನ ಈಗಾಗಲೇ ಮಾರ್ಕೆಟ್ಗೆ ಬಿಟ್ಟಿದ್ದಾರೆ. ಇದರಿಂದ ಕಂಪನಿಗೆ ಏನು ಲಾಭ ಅಂತೀರಾ ಇಲ್ಲೇ ಇರೋದು ಸೂಪರ್ ಕ್ರೆಡಿಟ್ಸ್ ಆಟ.
ಸರ್ಕಾರದ ನಿಯಮದ ಪ್ರಕಾರ ಒಂದು ಕಂಪನಿ ಸ್ಟ್ರಾಂಗ್ ಹೈಬ್ರಿಡ್ ಕಾರನ್ನ ಮಾರಾಟ ಮಾಡಿದ್ರೆ ಅದು ಮಾಲಿನ್ಯವನ್ನ ಕಡಿಮೆ ಮಾಡುತ್ತೆ ಅಂತ ಪರಿಗಣಿಸಿ ಅವರಿಗೆ ಬೋನಸ್ ಪಾಯಿಂಟ್ಸ್ ನೀಡಲಾಗುತ್ತೆ. ಇದರಿಂದ ಒಂದು ಹೈಬ್ರಿಡ್ ಕಾರು ಮಾರಿದರೆ ಅದು ಎರಡು ಎಲೆಕ್ಟ್ರಿಕ್ ವಾಹನಗಳಷ್ಟೇ ಪರಿಸರ ಸ್ನೇಹಿ ಅಂತ ಲೆಕ್ಕ ಹಾಕಲಾಗುತ್ತೆ. ಆಗ ಒಂದಿಷ್ಟು ಬೇರೆ ಡೀಸೆಲ್ ಕಾರುಗಳನ್ನ ಮಾರಾಟ ಮಾಡಬಹುದು. ಅಂದ್ರೆ ಇಲ್ಲಿ ಕಂಪನಿ ಸ್ವಲ್ಪ ಸಮಯ ಫಾರ್ಚುನರ್ ಡೀಸೆಲ್ ಕಾರುಗಳನ್ನ ಉಳಿಸಿಕೊಳ್ಳಲಿದೆ. ಹೀಗಾಗಿಯೋ ತನ್ನ ಸರಾಸರಿ ಕಾರ್ಬನ್ ಸ್ಕೋರ್ ಮೇಂಟೈನ್ ಮಾಡಬೇಕು ಅಂದ್ರೆ ಹೆಚ್ಚು ಹೊಗೆ ಉಗುಳುವ ಕ್ರಿಸ್ಟಾವನ್ನ ನಿಲ್ಲಿಸಿ ಪರಿಸರ ಸ್ನೇಹಿ ಹೈ ಕ್ರಾಸ್ ಅನ್ನೇ ಹೆಚ್ಚು ಮಾರಾಟ ಮಾಡಬೇಕಿದೆ. ಅದಕ್ಕಾಗಿ ಕಂಪನಿ ಈ ಕಠಿಣ ನಿರ್ಧಾರಕ್ಕೆ ಬಂದಿದೆ.
ಒಮ್ಮೆ 2027 ರಲ್ಲಿ ಕ್ರಿಸ್ಟಾ ಮಾರುಕಟ್ಟೆಯಿಂದ ಹೋದ್ರೆ ಆ ಜಾಗವನ್ನ ತುಂಬೋದು ಯಾರು ಅನ್ನೋದೇ ಈಗಿರೋ ದೊಡ್ಡ ಪ್ರಶ್ನೆ ಯಾಕಂದ್ರೆ ಟಾಟಾ ಮತ್ತು Mahindra ಹತ್ರ ಪವರ್ಫುಲ್ ಡೀಸೆಲ್ ಇಂಜಿನ್ಗಳಿದ್ರು ಇನ್ನೋವ ತರಹದ ಬಾಡಿ ಆನ್ ಫ್ರೇಮ್ ಎಂಪಿವಿ ಕಾರುಗಳಿಲ್ಲ Hyundai ಕಂಪನಿ ಸ್ಟಾರಿಯ ಅನ್ನೋ ಕಾರನ್ನ ತರೋ ಪ್ಲಾನ್ ಮಾಡ್ತಾ ಇದೆ ಆದರೆ ಅದು ಇನ್ನೋವಗೆ ಎಷ್ಟರ ಮಟ್ಟಿಗೆ ಫೈಟ್ ಕೊಡುತ್ತೆ ಅಂತ ಗೊತ್ತಿಲ್ಲ ಒಟ್ಟಿನಲ್ಲಿಟyota ನಿರ್ಧಾರ ಫ್ಲೀಟ್ ಆಪರೇಟರ್ಗಳಿಗೆ ಟ್ಯಾಕ್ಸಿ ಮಾಲಿಕರಿಗೆ ಮತ್ತು ಡೀಸೆಲ್ ಇಂಜಿನ್ ನ ಪವರ್ ಇಷ್ಟ ಪಡೋರಿಗೆ ಇದು ನಿಜಕ್ಕೂ ಬೇಸರದ ಸುದ್ದಿ 2.4ಲೀಟರ್ ಡೀಸೆಲ್ ಇಂಜಿನ್ ಮತ್ತು ಮ್ಯಾನ್ಯುವಲ್ ಗೇರ್ ಬಾಕ್ಸ್ ನ ಆ ಫೀಲ್ ಇನ್ಮುಂದೆ ಮಿಸ್ ಆಗಲಿದೆ. ನಿಮ್ಮ ಪ್ರಕಾರಟೊ ಡೀಸೆಲ್ ಇನ್ನೋವನ್ನ ನಿಲ್ಲಿಸ್ತಾ ಇರೋದು ಸರಿಯಾ ಅಥವಾ ಎಷ್ಟೇ ಹೊಸ ರೂಲ್ಸ್ ಬಂದ್ರು ಡೀಸೆಲ್ ಕಾರುಗಳು ಮಾರುಕಟ್ಟೆಯಲ್ಲಿ ಇರಬೇಕಾಗಿತ್ತಾ.


