ತುಮಕೂರಿಗೆ 59 ಕಿಲೋಮೀಟ ಮೆಟ್ರೋ ಕೊನೆಗೂ ಬಿಡ್ಕರೆದ ಸರ್ಕಾರ ಇನ್ಮೇಲೆ ತುಮಕೂರಿನ ಬಣ್ಣವೇ ಫುಲ್ ಚೇಂಜ್ ಬಹುನಿರೀಕ್ಷಿತ ತುಮಕೂರು ಮೆಟ್ರೋ ಯೋಜನೆಗೆ ಸಂಬಂಧಪಟ್ಟಂತೆ ಮೇಜರ್ ಡೆವಲಪ್ಮೆಂಟ್ ಆಗಿದೆ ಬೆಂಗಳೂರಿನ ನರನಾಡಿಯಾಗಿರೋ ನಮ್ಮ ಮೆಟ್ರೋವನ್ನ ತುಮಕೂರಿಗೆ ವಿಸ್ತರಣೆ ಮಾಡೋ ಯೋಜನೆಗೆ ಕೊನೆಗೂ ಬಿಡ್ ಆಹ್ವಾನ ಮಾಡಲಾಗಿದೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಆದೇಶ ಹೊರಡಿಸಿದೆ ಡಿಪಿಆರ್ ರೆಡಿ ಮಾಡೋಕೆ ಸೂಚನೆ ಕೊಟ್ಟಿದೆ 25 ಮೆಟ್ರೋ ಸ್ಟೇಷನ್ ಮಾಡಬೇಕು ಅಂತ ಹೇಳಿದೆ ಮೂಲಕ ಬೆಂಗಳೂರಿನ ಪಕ್ಕದಲ್ಲಿ ಮತ್ತೊಂದು ಮೇಜರ್ ಸಿಟಿಗೆ ಹೈ ಸ್ಪೀಡ್ ಕನ್ವಿನಿಯಂಟ್ ಕನೆಕ್ಟಿವಿಟಿ ಸಿಗ್ತಾ ಇದೆ ಅಷ್ಟೇ ಅಲ್ಲ ಇದೆ ಮೊದಲ ಬಾರಿಗೆ ಬೆಂಗಳೂರಿನ ಆಚೆಗೂ ಮೆಟ್ರೋ ನುಗ್ತಾ ಇದೆ ಸುಮಾರು 60 ಕಿಲೋಮೀಟ ಉದ್ದದ ಮೆಟ್ರೋ ಹಳಿ ನಿರ್ಮಾಣ ಆಗುತ್ತೆ ರಾಜ್ಯದ ಪಾಲಿಗೆ ಅತ್ಯಂತ ದೊಡ್ಡ ಯೋಜನೆ ಆಗುತ್ತೆ ಬೆಂಗಳೂರು ತುಮಕೂರು ಅವಳಿ ನಗರಗಳಾಗು ದಿನ ಈಗ ಹತ್ತಿರಕ್ಕೆ ಬರೋ ಎಲ್ಲ ಲಕ್ಷಣ ಇದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಯೋಜನೆ ಜನೆ ಹೋಗುತ್ತೆ ಎಷ್ಟು ಮೆಟ್ರೋ ಸ್ಟೇಷನ್ಗಳು ಬರ್ತಿವೆ ಇದರಿಂದ ತುಮಕೂರು ಜಿಲ್ಲೆಗೆ ಆಗೋ ಅನುಕೂಲವೇನು ನಮ್ಮ ಮೆಟ್ರೋ ಯಾವ ರೀತಿ ಎಕ್ಸ್ಪ್ಯಾಂಡ್ ಆಗ್ತಿದೆ.
ಬೆಂಗಳೂರು ಟು ಶಿರಾ ಗೇಟ್ ಘೋಷಣೆ ಮಾಡಿದ ಸರ್ಕಾರ ಸರ್ಕಾರಿ ಒಡೆತನದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಕುರಿತು ರಿಪೋರ್ಟ್ ರಿಲೀಸ್ ಮಾಡಿದೆ. ಬೆಂಗಳೂರಲ್ಲಿರೋ ಗ್ರೀನ್ ಲೈನ್ ವಿಸ್ತರಣೆ ಮಾಡೋಕೆ ಅದನ್ನ ತುಮಕೂರಿನ ತನಕ ಎಕ್ಸ್ಪ್ಯಾಂಡ್ ಮಾಡೋಕೆ ನಾವು ರೆಡಿ ಇದ್ದೀವಿ ಈಗ ಬಿಡ್ ಕರೀತಾ ಇದ್ದೀವಿ ಅಂತ ಹೇಳಿದೆ. ಈಗ ಆಲ್ರೆಡಿ ಅದಕ್ಕೆ ಮಾನದಂಡಗಳನ್ನ ಕೂಡ ಫಿಕ್ಸ್ ಮಾಡಿ ನವೆಂಬರ್ 20ರವರೆಗೆ ಬಿಡ್ ಸಲ್ಲಿಸೋಕ್ಕೆ ಅವಕಾಶ ಕೊಡಲಾಗಿದೆ. ಮೊದಲ ಹಂತದಲ್ಲಿ ಸುಮಾರು 20649 ಕೋಟಿ ರೂಪಾಯ ವೆಚ್ಚದಲ್ಲಿ ಇದು ನಿರ್ಮಾಣ ಆಗ್ತಾ ಇದೆ. ಪಬ್ಲಿಕ್ ಮತ್ತು ಪ್ರೈವೇಟ್ ಸೆಕ್ಟರ್ ಅಂದ್ರೆ ಸರ್ಕಾರ ಮತ್ತು ಖಾಸಗಿಯವರು ಇಬ್ಬರು ಸೇರಿಕೊಂಡು ನಿರ್ಮಾಣ ಮಾಡ್ತಿದ್ದಾರೆ. ಇದರಲ್ಲಿ ಭಾಗಿಯಾಗುವ ಕಂಪನಿಗಳು ಸುಮಾರು 4.5 ಲಕ್ಷ ರೂಪಾಯಿ ಟೇವಣಿ ಇಡಬೇಕಾಗುತ್ತೆ. ನವೆಂಬರ್ 21ನೇ ತಾರೀಕು ಟೆಂಡರ್ ಕರೀತಾ ಇದ್ದಾರೆ. ಐದು ತಿಂಗಳ ಒಳಗಡೆ ಡಿಪಿಆರ್ ರೆಡಿ ಮಾಡಬೇಕು ಅಂತ ಹೇಳಲಾಗಿದೆ. ಸುಮಾರು 59.6 kಮ ಉದ್ದದ ಮೆಟ್ರೋವನ್ನ ಇದರಲ್ಲಿ ನಿರ್ಮಾಣ ಮಾಡ್ತಿದ್ದಾರೆ. ಎಲ್ಲಿಂದ ಎಲ್ಲಿಗೆ ಸದ್ಯ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಅಂದ್ರೆ ಮಾದಾವರದವರೆಗೆ ಮೆಟ್ರೋ ಇದೆ ಅಲ್ಲಿಂದ ಸೀದಾ ಶಿರಾಂಗ್ ಗೇಟ್ ವರೆಗೂ ಇದನ್ನ ತಗೊಂಡು ಹೋಗ್ತಾ ಇದ್ದಾರೆ.
ಇದರಲ್ಲಿ 25 ಎಲಿವೇಟೆಡ್ ಸ್ಟೇಷನ್ ನಿರ್ಮಾಣ ಮಾಡೋಕ್ಕೆ ಪ್ಲಾನ್ ಮಾಡಲಾಗಿದೆ. 25 ಸ್ಟೇಷನ್ಗಳು ಪ್ರತಿ ಗಂಟೆಗೆ 15000 ಪ್ರಯಾಣಿಕರು ಟ್ರಾವೆಲ್ ಮಾಡುವ ನಿರೀಕ್ಷೆ ಇದೆ ಈ ಭಾಗದ ಪ್ರಮುಖ ಟೌನ್ಗಳನ್ನ ಹಾದು ಹೋಗುತ್ತೆ ಗಮನಿಸಿ ಈ ಭಾಗದ ಬಹುತೇಕ ದಕ್ಷಿಣ ಕರ್ನಾಟಕದಲ್ಲೇ ಅತ್ಯಂತ ಮುಖ್ಯವಾಗಿರೋ ಒಂದು ಟ್ರಾನ್ಸ್ಪೋರ್ಟೇಷನ್ ಲೈನ್ ಆಗೋ ಎಲ್ಲಾ ಚಾನ್ಸಸ್ ಇರುತ್ತೆ ಇದು ಕಂಪ್ಲೀಟ್ ಆದಾಗ ಮೊದಲಿಗೆ ಮಾದಾವರ ಮಾಕಳಿ ದಾಸನಪುರ ನೆಲಮಂಗಲ ವೇವರ್ ಕಾಲೋನಿ ವಿಶ್ವೇಶ್ವರಪುರ ನೆಲಮಂಗಲ ಟೋಲ್ಗೇಟ್ ಬೂದಿಹಾಲ್ ಟಿ ಬೇಗೂರು ತಿಪ್ಪಗುಂಡನಹಳ್ಳಿ ಕುಲುವನಹಳ್ಳಿ ಮಹಿಮಾಪುರ ಬಿಲ್ಲಕೋಟೆ ಸೋಮಪುರ ಕೈಗಾರಿಕ ಪ್ರದೇಶ ದಾಬಸ್ಪೇಟೆ ನಲ್ಲಾಯನ ಪಾಟ್ಯ ಚಿಕ್ಕಹಳ್ಳಿ ಹಿರೆಹಳ್ಳಿ ಕೈಗಾರಿಕ ಪ್ರದೇಶ ಪಂಡಿತನಹಳ್ಳಿ ಕ್ಯಾತ್ಸಂದ್ರ ಬೈಪಾಸ್ ಕ್ಯಾಸಂದ್ರ ಎಸ್ಐಟಿ ತುಮಕೂರು ಬಸ್ ನಿಲ್ದಾಣ ಟೂಡಾ ಲೇಔಟ್ ನಾಗಣ್ಣಪಾಳ್ಯ ಮತ್ತು ಶಿರಾಗೇಡ್ ತನಕವು ಇದು ಹರಡುತ್ತೆ ಲಾಭ ಏನು ಸ್ನೇಹಿತರೆ ಇದು ಆಗಲೇ ಹೇಳಿದ ಹಾಗೆ ಕರ್ನಾಟಕದ ಪಾಲಿಗೆ ದೊಡ್ಡ ಯೋಜನೆ ಬಹುಶಃ ದಕ್ಷಿಣ ಭಾರತದಲ್ಲೇ ಒಂದು ಅತಿ ಮುಖ್ಯವಾಗಿರೋ ಯೋಜನೆ ಭಾರತದಲ್ಲಿ ಅಂತ ಕೂಡ ಹೇಳಬಹುದು ಬೆಂಗಳೂರಿನ ಮೇಲಿನ ಹೊರೆ ತಪ್ಪಿಸುವುದರಿಂದ ಮತ್ತು ರಾಜಧಾನಿ ಸುತ್ತಮುತ್ತಲ ಪ್ರದೇಶವನ್ನ ಕನೆಕ್ಟ್ ಮಾಡೋ ಉದ್ದೇಶದಿಂದ ಮಹತ್ವ ಪಡ್ಕೊಳ್ಳುತ್ತೆ.
ನಿಮಗೆಲ್ಲ ಗೊತ್ತಿರೋ ಹಾಗೆ ತುಮಕೂರು ಈಗ ಆಲ್ರೆಡಿ ಬೆಂಗಳೂರಿನ ಆವಳಿ ನಗರವಾಗಿ ಬೆಳಿತಾ ಇದೆ. ಜೊತೆಗೆ ಬೆಂಗಳೂರಿನ ಪಕ್ಕದಲ್ಲಿರೋ ಅತಿ ದೊಡ್ಡ ಸಿಟಿ. ಬೆಳಗಾವಿ, ಕಲಬುರ್ಗಿ ಬಿಟ್ಟರೆ ಅತಿ ದೊಡ್ಡ ಜಿಲ್ಲೆಯೊಂದರ ಜಿಲ್ಲಾ ಕೇಂದ್ರ ಕೂಡ ಹೌದು. ಸ್ಮಾರ್ಟ್ ಸಿಟಿ ಮಿಷನ್ ನಲ್ಲೂ ಇದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಗಳ ಕೆಲಸನೂ ನಡೀತಾ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ತುಮಕೂರಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಜಿಲ್ಲೆಯನ್ನ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಹಬ್ ಮಾಡೋಕೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ರು. ಹಾಗೆ ಕಾರಿಡಾರ್ ಗೆ ಸುಮಾರು 20ಸಾ ಎಕರೆ ಭೂಮಿಯನ್ನ ಮಂಜೂರು ಮಾಡಲಾಗಿದೆ. ಇನ್ನು ಹೊಸ ಅಂತರಾಷ್ಟ್ರೀಯ ಏರ್ಪೋರ್ಟ್ ಕೂಡ ತುಮಕೂರಿಗೆ ಬರೋ ನಿರೀಕ್ಷೆ ಇದೆ. ತುಮಕೂರಿನ ಸೋರೆಕುಂಟೆ ಬಳಿ 50 ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ರೆಡಿಯಾಗಲಿದೆ. ಜೊತೆಗೆ ಬೆಂಗಳೂರಿನ ಸಬರ್ಬನ್ ರೈಲ್ವೆ ನೆಟ್ವರ್ಕ್ ಕೂಡ ತುಮಕೂರಿನ ಹಲವು ತಾಲೂಕುಗಳನ್ನ ಕವರ್ ಮಾಡುತ್ತೆ. ಒಂದು ವೇಳೆ ಕುಣಿಗಲ್ ಬಳಿ ಹೊಸ ಏರ್ಪೋರ್ಟ್ ಕೂಡ ಬಂದುಬಿಟ್ಟರೆ ಅಲ್ಲಿವರೆಗೂ ಮೆಟ್ರೋ ಪ್ಲಸ್ ಸಬರ್ಬನ್ ರೈಲ್ವೆ ಕನೆಕ್ಟಿವಿಟಿ ಸಿಗುತ್ತೆ. ಸೋ ಸಾಲು ಸಾಲು ಯೋಜನೆಗಳು ಸಾವಿರಾರು ಕೋಟಿ ರೂಪಾಯಿ ಬಂಡವಾಳ ತುಮಕೂರಿಗೆ ಹರಿದು ಹೋಗ್ತಾ ಇದೆ. ಸೋ ಇಷ್ಟು ದೊಡ್ಡ ನಗರಕ್ಕೆ ಮೆಟ್ರೋ ಪ್ರಾಜೆಕ್ಟ್ ಕೂಡ ಬಂದು ಬೆಂಗಳೂರಿಗೆ ಕನೆಕ್ಟ್ ಆಗ್ಬಿಟ್ಟರೆ ಸಂಪರ್ಕ ಕ್ರಾಂತಿಯೇ ಆಗುತ್ತೆ. ಇದರ ಅಕ್ಕಪಕ್ಕದ ಭೂಮಿಗೆ ಸಿಕ್ಕಾಪಟ್ಟೆ ಬೆಲೆ ಬರುತ್ತೆ. ಇದರ ಸುತ್ತಮುತ್ತ ಕೈಗಾರಿಕೆಗಳು ಏಳುತ್ತವೆ. ಸುಲಭವಾಗಿ ಮೆಟ್ರೋ ಸಿಕ್ಕಿದ್ರೆ ಕೈಗಾರಿಕೆಗಳು ಐಟಿ ಕಂಪನಿಗಳು ಇಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನ ಸ್ಥಾಪನೆ ಮಾಡೋಕೆ ಈಸಿ ಆಗುತ್ತೆ.
ಹೊಸೂರು ಕಡೆಗೆ ಹರಿಕೊಂಡು ಆ ಕಡೆಗೆ ಬೆಳ್ಕೊಂಡ್ ಹೋಗ್ತಾ ಇರೋ ಬೆಂಗಳೂರು ತುಮಕೂರು ಕಡೆಗೆ ತಿರುಗುತ್ತೆ. ಹಾಗೆ ಈ ಭಾಗದ ಜನರಿಗೆ ಓಡಾಡೋಕು ಈಸಿ ಆಗುತ್ತೆ. ಸ್ನೇಹಿತರೆ ವಾರಾಂತಿಗಳಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತ ಆಗಿ ತುಮಕೂರು ಬಸ್ಗಳು ಬೆಂಗಳೂರಿಗೆ ಸೇರ್ತವೆ. ಬಸ್ ಸರಿಯಾದ ಟೈಮ್ಗೆ ಬರಲ್ಲ ಅಂತ ಜನ ವಾಹನ ಬಳಸ್ತಿದ್ದಾರೆ. ಆದರೆ ಅದರಿಂದ ಟ್ರಾಫಿಕ್ ಸಮಸ್ಯೆ ಆಗ್ತಿದೆ. ಸೋ ಈ ಸಮಸ್ಯೆಗೆ ಮೆಟ್ರೋ ಪರಿಹಾರವನ್ನ ಕೊಡಬಹುದು. ನೆಲಮಂಗಲ ದಾಬಸ್ಪೇಟೆ ಕಡೆಯಿಂದ ಲಕ್ಷಾಂತರ ಜನ ಪ್ರತಿದಿನ ಬೆಂಗಳೂರಿಗೆ ಕೆಲಸಕ್ಕೆ ಬರ್ತಿದ್ದಾರೆ. ಹಾಗಾಗಿ ನೆಲಮಂಗಲ ಅದರಿಂದಲೇ ಶುರುವಾಗೋ ಟ್ರಾಫಿಕ್ ಇಲ್ಲ ಆಗಬಹುದು. ಗಂಟೆಗೆ 15000 ಜನ ಅಂದ್ರೆ 10 ಗಂಟೆಗೆ ಒಂದೂವರೆ ಲಕ್ಷ ಜನರಿಗೆ ಇದು ಪ್ರಯಾಣ ಮಾಡೋಕೆ ಅವಕಾಶ ಮಾಡಿಕೊಡುತ್ತೆ. ಅಲ್ದೇ ಉತ್ತರ ಕರ್ನಾಟಕ ಕರಾವಳಿ ಮಲೆನಾಡು ಭಾಗದಿಂದಲೂ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವರು ತುಮಕೂರಿಂದಲೇ ಮೆಟ್ರೋ ಹತ್ಕೊಂಡು ಬಿಡಬಹುದು ಇದರಿಂದ ಸಿಕ್ಕಬಟ್ಟೆ ಟೈಮ್ ಉಳಿಯುತ್ತೆ ನ್ಯಾಷನಲ್ ಹೈವೆ 48ರ ಪಕ್ಕದಲ್ಲೇ ಮೆಟ್ರೋ ಲೈನ್ ಬರೋದ್ರಿಂದ ಈ ರಸ್ತೆಗೂ ಬಂಡವಾಳ ಹರೆದು ಬರುತ್ತೆ ರಿಯಲ್ ಎಸ್ಟೇಟ್ ಇಂಪ್ರೂವ್ ಆಗುತ್ತೆ ಹೀಗೆ ಹೆಜ್ಜೆ ಹೆಜ್ಜೆಗೂ ಮಹತ್ವ ಇದೆ ಇದಕ್ಕೆ ಮತ್ತೆ ಹೊಸ ದಾಖಲೆ ಅಂದುಕೊಂಡಷ್ಟು ಬೇಗ ನಿರ್ಮಾಣ ಆದರೆ ಬೆಂಗಳೂರಿನ ಮೆಟ್ರೋಗೆ ದೊಡ್ಡ ಗರಿ ಸಿಗುತ್ತೆ ಯಾಕಂದ್ರೆ ಸದ್ಯ ನಮ್ಮ ಮೆಟ್ರೋ ಭಾರತದಲ್ಲಿ ಎರಡನೇ ಅತಿ ದೊಡ್ಡ ಮೆಟ್ರೋ ನೆಟ್ವರ್ಕ್ ಬರೋಬರಿ 73.81 km ನೆಟ್ವರ್ಕ್ ಈಗ ಆಲ್ರೆಡಿ ಆಪರೇಟ್ ಆಗ್ತಿದೆ. ಪ್ರತಿದಿನ ಸರಾಸರಿ 8 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಟ್ರಾವೆಲ್ ಮಾಡ್ತಿದ್ದಾರೆ. ಸದ್ಯ ಎರಡು ಹಂತಗಳ ಮೆಟ್ರೋ ಕಾಮಗಾರಿ ಮುಗಿದ್ದು ಮೂರನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಅಪ್ರೂವಲ್ ಕೊಟ್ಟಿದೆ.
ಹಾಗೆ ನೋಡಿದ್ರೆ ಹಳೆ ಡಿಪಿಆರ್ ಗಳ ಪ್ರಕಾರ ಹಲವು ವರ್ಷಗಳ ಹಿಂದೆನೇ ಎರಡನೇ ಹಂತ ಮುಗಿಬೇಕಾಗಿತ್ತು ಆದರೆ ಜನ ನಿಬ್ಬಿಡ ಪ್ರದೇಶಗಳಲ್ಲಿ ಮೆಟ್ರೋ ಲೈನ್ಗಳು ಹೋಗೋದು ಭೂಮಿ ಒತ್ತುವರಿ ಸಾಕಷ್ಟು ಅವಗಡ ವಿವಾದ ಮೆಟ್ರೋ ಕಾಮಗಾರಿಯನ್ನ ಸ್ಲೋ ಮಾಡ್ತಿರೋದು. ಸದ್ಯ ಫೇಸ್ 2ಎ 2ಬಿ ಹಂತಗಳಲ್ಲಿ ಏಕಕಾಲದಲ್ಲಿ 100 km ಮೆಟ್ರೋ ಲೈನ್ ಕಾಮಗಾರಿ ಹಾಕೋ ಕೆಲಸ ನಡೀತಿದೆ. ಈಗ ನೀವು ಸ್ಕ್ರೀನ್ ಮೇಲೂ ಕೂಡ ನೋಡ್ತಾ ಇದ್ದೀರಾ 2A, 2B ಹಂತದಲ್ಲಿ ಗುಲಾಬಿ, ಹಳದಿ ಹಾಗೂ ನೀಲಿ ಮಾರ್ಗಗಳ ಕಾಮಗಾರಿ ನಡೀತಾ ಇದೆ. ಈ ಪೈಕಿ ಬರೋಬರಿ 58.19 ಕಿಲೋಮೀಟ ಉದ್ದದ ನೀಲಿ ಮಾರ್ಗ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕನೆಕ್ಟಿವಿಟಿ ಕೊಡುತ್ತೆ. ಔಟರ್ ರಿಂಗ್ ರೋಡ್ ಮೇಲೆ ಹಾದು ಹೋಗೋ ಈ ಲೈನ್ ಬೆಂಗಳೂರಿನ ಐಟಿ ಕಾರಿಡಾರ್ ಪೂರ್ತಿ ಕವರ್ ಮಾಡುತ್ತೆ. 2027ರ ಆರಂಭಕ್ಕೆ ಇದು ಕಂಪ್ಲೀಟ್ ಆಗೋ ನಿರೀಕ್ಷೆ ಇದೆ. ಐಟಿ ಕಾರಿಡಾರ್ ಹಾಗೂ ಏರ್ಪೋರ್ಟ್ ಗಳಿಗೆ ಈ ಲೈನ್ ಕನೆಕ್ಟಿವಿಟಿ ಕೊಡುವುದರಿಂದ ಈ ಭಾಗದ ಟ್ರಾಫಿಕ್ ದೊಡ್ಡ ಪ್ರಮಾಣದಲ್ಲಿ ಕಂಟ್ರೋಲ್ಗೆ ಬರೋ ಹೋಪ್ ಇದೆ. ಇನ್ನು 3ಎ ಹಾಗೂ 3B ಹಂತದಲ್ಲಿ ಕಿತ್ತಳೆ ಮತ್ತು ಬೆಳ್ಳಿ ಹಾಗೂ ಕೆಂಪು ಮಾರ್ಗಗಳು ಬರ್ತಾ ಇದಾವೆ. ಈ ಪೈಕಿ ಕಿತ್ತಳೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಈಗ ಆಲ್ರೆಡಿ ಅಪ್ರೂವಲ್ ಕೊಟ್ಟಿದೆ. 44.5 ಕಿಲೋಮೀಟ ಉದ್ದದ ಏರ್ ಲೈನ್ ಸೇರಿಸಿದರೆ ನಮ್ಮ ಮೆಟ್ರೋದ ಒಟ್ಟು ನೆಟ್ವರ್ಕ್ 222.2 ಕಿಲೋಮೀಟ ಗೆ ತಲುಪುತ್ತೆ. ಮೂರನೇ ಹಂತದ ಕಾಮಗಾರಿ ಮುಗಿಯೋ ಹೊತ್ತಿಗೆ ಆದರೆ ಸಿಲ್ವರ್ ಮತ್ತು ಕೆಂಪು ಮಾರ್ಗಗಳನ್ನ ಸೇರಿಸಿ ಟೋಟಲ್ ಮಾಡಿದ್ರೆ 253.9 km ಉದ್ದದ ಮೆಟ್ರೋ ನೆಟ್ವರ್ಕ್ ಬೆಂಗಳೂರಲ್ಲಿ ಇರುತ್ತೆ. ತುಮಕೂರು ಮಾರ್ಗವನ್ನ ಕೂಡ ಸೇರಿಸಿಬಿಟ್ಟರೆ 300ಪ ಕಿಲೋಮೀಟರ್ ಆಗುತ್ತೆ.
ಅಂದ್ರೆ ಈಗಿರೋ ನೆಟ್ವರ್ಕ್ ನ ನಾಲ್ಕು ಪಟ್ಟು ದೊಡ್ಡ ಆಗುತ್ತೆ. ಹೀಗಾಗಿ ಇದು ಅತಿ ದೊಡ್ಡ ಸ್ಟೆಪ್ ಅಂತ ಕರೆಸಿಕೊಳ್ತಾ ಇದೆ. ಯಾಕಂದ್ರೆ ದೇಶದ ರಾಜಧಾನಿಯಲ್ಲಿ ಇರೋದು ಅತಿ ದೊಡ್ಡ ಮೆಟ್ರೋ ನೆಟ್ವರ್ಕ್ ಸಧ್ಯದಲ್ಲಿ ದೇಶದಲ್ಲಿ 393 km ಅದು ಸಧ್ಯ ಇದೆ. ನಮ್ಮಲ್ಲಿ ವೇಗವಾಗಿ ಇದೆಲ್ಲ ಕಂಪ್ಲೀಟ್ ಮಾಡಿದ್ರೆ ತುಂಬಾ ಹತ್ತರಕ್ಕೆ ಬರ್ತೀವಿ. ಇನ್ನೊಂದು ಸ್ವಲ್ಪ ಮನಸ್ಸು ಮಾಡಿ ಬೆಂಗಳೂರಿನ ಮೂಲೆ ಮೂಲೆಗೂ ಮನೆಯಿಂದ ಒಂದು ಕಿಲೋಮೀಟರ್ಗೆ ಪ್ರತಿಯೊಬ್ಬರಿಗೂ ಮೆಟ್ರೋ ಸ್ಟೇಷನ್ ಸಿಗಂಗೆ ಮಾಡ್ತೀವಿ ಅಂತ ಏನಾದ್ರು ಮಾಡಿಬಿಟ್ರೆ ಇನ್ನೊಂದು 10 ವರ್ಷದಲ್ಲಿ ನಾವು ದೆಲ್ಲಿಗೆ ಹತ್ತತ್ರ ಅಥವಾ ಅದನ್ನ ದಾಟೋಕು ಕೂಡ ಅವಕಾಶ ಇರುತ್ತೆ.


