ಒಂದು ಕಾಲದಲ್ಲಿ ಸಂಜೆ ಆದರೆ ಸಾಕು ಮನೆಯಲ್ಲಿ ಟಿವಿ ರಿಮೋಟ್ಗಾಗಿನೇ ಮಹಾಯುದ್ಧ ನಡೀತಾ ಇತ್ತು ಅಪ್ಪಂಗೆ ನ್ಯೂಸ್ ಅಮ್ಮನಗೆ ಸೀರಿಯಲ್ ಮಕ್ಕಳಿಗೆ ಕಾರ್ಟೂನ್ ಅಣ್ಣಂಗೆ ಎಫ್ ಟಿವಿ ನೆನಪಿದೆಯಾ ಆ ದಿನಗಳು ಅವತ್ತು ಟಿವಿನೇ ಪ್ರಪಂಚ ಆಗಿತ್ತು ಟಿವಿ ಇಲ್ಲದ ಜೀವನವನ್ನ ಊಹೆ ಮಾಡಿಕೊಳ್ಳೋಕ್ಕು ಕಷ್ಟ ಆಗ್ತಿತ್ತು ಆದರೆ ಇವತ್ತು ಸೀನ್ ಪೂರ್ತಿ ಉಲ್ಟಾ ಆಗ್ತಿದೆ. ಹಾಲ್ನಲ್ಲಿರೋ ಟಿವಿ ಮೂಲೆ ಸೇರಿದೆ. ರಿಮೋಟ್ ಮೇಲೆ ಧೂಳು ಕೂತಿದೆ. ಎಷ್ಟೋ ಮನೆಗಳಲ್ಲಿ ಟಿವಿ ಆನ್ ಆಗಿ ಎಷ್ಟೋ ಕಾಲ ಕಳೆದು ಹೋಗಿದೆ. ಇನ್ನು ಕೆಲವರು ಟಿವಿ ಆನ್ ಮಾಡಿದ್ರು ಕೂಡ ಕೇಬಲ್ ಕನೆಕ್ಷನ್ ಕಿತ್ತು ಬಿಸಾಕಿದ್ದಾರೆ. ಇಂಟರ್ನೆಟ್ ಮೂಲಕ ಟಿವಿ ನೋಡ್ತಿದ್ದಾರೆ. ಇದು ಬರಿ ನಿಮ್ಮ ನಮ್ಮ ಮನೆ ಕಥೆಯಲ್ಲ. ಇಡೀ ಭಾರತದ ಕಥೆ.
ಟಿವಿ ಜಗತ್ತಲ್ಲಿ ದೊಡ್ಡ ಭೂಕಂಪ ಆಗ್ತಿದೆ. ಇಂಡಸ್ಟ್ರಿ ಆಳಿದ್ದ ದೈತ್ಯರಾದ ಸ್ಟಾರ್ ಮತ್ತು ಜೀನ್ ಅಂತಹ ಕಂಪನಿಗಳು ಟಿವಿ ಚಾನೆಲ್ ನಡೆಸೋಕೆ ಸರ್ಕಾರ ಕೊಟ್ಟಿರೋ ಲೈಸೆನ್ಸ್ ಅನ್ನ ಈಗ ವಾಪಸ್ ಬಿಸಾಕಿದ್ದಾರೆ. ನಮಗೆ ಚಾನೆಲ್ ನಡೆಸೋದು ಬೇಡವೇ ಬೇಡ ಈ ಸಹವಾಸನೇ ಸಾಕು ಅಂತಿದ್ದಾರೆ. ಒಂದೆರಡಲ್ಲ ಕೇವಲ ಮೂರೇ ವರ್ಷದಲ್ಲಿ ಬರೋಬರಿ 50 ಟಿವಿ ಚಾನೆಲ್ ಗಳು ಸದ್ದಿಲ್ಲದೆ ಬಂದಾಗಿವೆ ಕ್ಲೋಸ್ ಆಗಿವೆ ಯಾಕೆ ಹೀಗಾಗ್ತಿದೆ ಅಸಲಿಗೆ ಟಿವಿ ಇಂಡಸ್ಟ್ರಿ ಮುಳುಗಿ ಹೋಗ್ತಾ ಇದೀಯಾ ಕ್ಯೂ ನಿಂತು ಪಡಿತಾ ಇದ್ದ ಲೈಸೆನ್ಸ್ ಅನ್ನ ಸರೆಂಡರ್ ಮಾಡೋ ಮಟ್ಟಕ್ಕೆ ಪರಿಸ್ಥಿತಿ ಯಾಕೆ ಬಂತು ಇದರ ಹಿಂದೆ ಇರೋ ಆರ್ಥಿಕ ಲೆಕ್ಕಾಚಾರ ಅಥವಾ ಕ್ಯಾರೇಜ್ ಫೀ ಸ್ಟೋರಿ ಏನು ಎಲ್ಲವನ್ನ ಇವತ್ತಿನ ವರದಿಯಲ್ಲಿ ಡೀಟೇಲ್ ಆಗಿ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ.
50 ಚಾನೆಲ್ಸ್ ಬಂದ್ ಲೈಸೆನ್ಸ್ ವಾಪಸ್ ಎಸ್, ಈ ಸ್ಪೋಟಕ ರಿಪೋರ್ಟ್ ನೋಡಿ. ಭಾರತದ ಪ್ರಮುಖ ಬ್ರಾಡ್ಕಾಸ್ಟರ್ ಗಳು, ಅಂದ್ರೆ ಟಿವಿ ಚಾನೆಲ್ ನಡೆಸುವ ಕಂಪನಿಗಳು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸಾಲು ಸಾಲಾಗಿ ತಮ್ಮ ಲೈಸೆನ್ಸ್ ಗಳನ್ನ ರಿಟರ್ನ್ ಮಾಡ್ತಿದ್ದಾರೆ. ಅಂಕಿ ಅಂಶ ಬೆರಗಾಗಿಸುತ್ತೆ. ಮೂರು ವರ್ಷದಲ್ಲಿ 50 ಟಿವಿ ಚಾನೆಲ್ಗಳ ಲೈಸೆನ್ಸ್ ಕ್ಯಾನ್ಸಲ್ ಆಗಿದೆ ಅಂದ್ರೆ ಸರೆಂಡರ್ ಮಾಡಿದ್ದಾರೆ. ಇದರಲ್ಲಿ ಹೆಚ್ಚು ಒಪ್ಪಿಸಿರೋದು ಯಾರು ಗೊತ್ತಾ ಸಣ್ಣ ಪುಟ್ಟವರಲ್ಲ ಟಾಪ್ ಪ್ಲೇಯರ್ಸ್. ವಿಶೇಷವಾಗಿ ಡಿಸ್ನಿ ಮತ್ತು ಸ್ಟಾರ್ ವಿಲಿಯನದ ನಂತರ ತಯಾರಾಗಿರೋ ದೈತ್ಯ ಕಂಪನಿಜಿಯೋ ಸ್ಟಾರ್ ಬರುಬರಿ 15 ಲೈಸೆನ್ಸ್ ಗಳನ್ನ ವಾಪಸ್ ಕೊಟ್ಟಿದೆ. ಇನ್ನು ಜೀ ಎಂಟರ್ಟೈನ್ಮೆಂಟ್ ಅದು ಕೂಡ ಹಿಂದೆ ಬಿದ್ದಿಲ್ಲ. ಅವರು ಸುಮಾರು 10 ಲೈಸೆನ್ಸ್ ಗಳನ್ನ ಸರೆಂಡರ್ ಮಾಡಿದ್ದಾರೆ. ಇವರ ಜೊತೆಗೆ ರಿಲಯನ್ಸ್ ಮಾಲಿಕತ್ವದವಕಾಮ 18 ಕೂಡ ತನ್ನ ಏಳು ಮೀಡಿಯಾ ಲೈಸೆನ್ಸ್ ಗಳನ್ನ ಸರ್ಕಾರಕ್ಕೆ ವಾಪಸ್ ಮಾಡಿದೆ.
ಈ ನಾಡು ಟಿವಿ ಟುಡೇ ನೆಟ್ವರ್ಕ್ abbp ನೆಟ್ವರ್ಕ್ ಕೂಡ ಲಿಸ್ಟ್ನಲ್ಲಿವೆ. ಒಟ್ಟು 50 ಚಾನೆಲ್ಗಳು ಇತಿಹಾಸದ ಪುಟ ಸೇರವೆ. ಇಲ್ಲಿ ಗಮನಿಸಬೇಕಾದ ವಿಚಾರ ಏನು ಅಂದ್ರೆ ಇವರೆಲ್ಲ ಸುಮ್ಮನೆ ಬಂದಾಗಿಲ್ಲ. ಒಂದು ಕಾಲದಲ್ಲಿ ಟಿವಿ ಚಾನೆಲ್ ಶುರು ಮಾಡೋಕ್ಕೆ ಲೈಸೆನ್ಸ್ ಸಿಗೋದೇ ಕಷ್ಟ ಇತ್ತು. ಕ್ಯೂ ನಿಲ್ತಾ ಇದ್ರು ದೇಶದಲ್ಲಿ ಟಿವಿ ಚಾನೆಲ್ ಗಳಿಗೆ ಅಷ್ಟೊಂದು ಬೇಡಿಕೆ ಇತ್ತು ಆದರೆ ಈಗ ಇರೋ ಲೈಸೆನ್ಸ್ ನಮಗೆ ಬೇಡ ಸ್ವಾಮಿ ಅಂತ ವಾಪಸ್ ಕೊಡ್ತಿದ್ದಾರೆ ಅಂದ್ರೆ ಆಂತರಿಕವಾಗಿಲ್ಲನು ದೊಡ್ಡ ಮಟ್ಟದ ಸಮಸ್ಯೆ ಇದೆ ಅಂತ ಅರ್ಥ ತಾನೆ ಹಾಗಿದ್ರೆ ಏನದು ನೋಡೋಣ ಮುಖ್ಯವಾಗಿ ಮೂರು ಕಾರಣಗಳಿದಾವೆ ಒಂದೊಂದಾಗಿ ನೋಡ್ತಾ ಹೋಗೋಣ ಬದಲಾದ ವೀಕ್ಷಕರ ಮನಸ್ಥಿತಿ ಮೊದಲನೇ ಮತ್ತು ಅತಿ ಮುಖ್ಯವಾದ ಕಾರಣ ದಿ ಡಿಜಿಟಲ್ ಶಿಫ್ಟ್.
ಬದಲಾದ ಮನಸ್ಥಿತಿ ಒಂದು ಐದುಹತು ವರ್ಷದ ಹಿಂದೆ ಹೋಗಿ ನೋಡಿ ರಾತ್ರಿ 9:00 ಗಂಟೆಗೆ ಅಥವಾ ಸಂಜೆಏಳು ಗಂಟೆಗೆ ಸೀರಿಯಲ್ ನೋಡೋಕೆ ಇಡೀ ಮನೆ ಮುಂದೆ ಟಿವಿ ಮುಂದೆ ಹಾಜರ ಇರ್ತಾ ಇದ್ರು ಇದನ್ನ ಅಪಾಯಿಂಟ್ಮೆಂಟ್ ವ್ಯೂಯಿಂಗ್ ಅಂತ ಕರೀತಾರೆ. ಅಂದ್ರೆ ಟಿವಿ ಚಾನೆಲ್ ಫಿಕ್ಸ್ ಮಾಡಿದ ಟೈಮ್ಗೆ ನಾವು ಹೋಗಿ ಕೂತ್ಕೊಬೇಕಾಗಿತ್ತು ಆದರೆ ಇವತ್ತು ಆನ್ ಡಿಮಾಂಡ್ ವ್ಯೂಿಂಗ್ ನಡೀತಾ ಇದೆ ನನಗೆ ಯಾವಾಗ ಬೇಕೋ ಎಲ್ಲಿ ಬೇಕೋ ಏನು ಬೇಕೋ ಅದನ್ನ ಬೇಕಾದಂಗೆ ನೋಡ್ತೀನಿ ನಾನು ಕೂತ್ಕೊಂಡು ನೋಡ್ಬೇಕಾ ಮಲ್ಕೊಂಡು ನೋಡಬೇಕಾ ಪಾಸ್ ಮಾಡಿ ಮಾಡಿ ನೋಡಬೇಕಾ ಮಧ್ಯದಲ್ಲಿ ಪಾಸ್ ಮಾಡಿಟ್ಟು ಬಾತ್ರೂಮ್ಗೆ ಹೋಗಿ ಬರಬೇಕಾ ಅಥವಾ ಕ್ರಿಕೆಟ್ ಮ್ಯಾಚ್ ಆಡ್ ಬಂದು ಕಂಟಿನ್ಯೂ ಮಾಡಬೇಕಾ ಅದು ವೀಕ್ಷಕರ ಸ್ವಾತಂತ್ರ್ಯ ಇವಾಗ ನಿಮ್ಮ ಕೈಯಲ್ಲಿರೋ ಸ್ಮಾರ್ಟ್ ಫೋನ್ ಮತ್ತು ಅಗ್ಗದ 4ಜಿ 5ಜಿ ಡೇಟಾ ಟಿವಿ ನೋಡೋ ಕ್ರಮವನ್ನ ಚೇಂಜ್ ಮಾಡ್ಬಿಟ್ಟಿದೆ ನೋಡಿ ಮನಗ ಟಿವಿ ಗಳಿದ ಆದ್ರೆ ಅದನ್ನ ಆನ್ ಮಾಡೋರು ಯಾರು ಅಪ್ಪ ಅಮ್ಮ ನ್ಯೂಸ್ ಸೀರಿಯಲ್ ನೋಡೋಕೆ ಬಿಟ್ರೆ ಅದನ್ನು ಕಮ್ಮಿ ಆಗ್ತಿದೆ.
ಈಗ ಟಿವಿಲ್ಲಿ ನೋಡೋರದು ಟಿವಿಲ್ಲಿ ನೋಡಿದ್ರು ಕೂಡ ಇಂಟರ್ನೆಟ್ ಮೂಲಕ ನೋಡ್ತಿದ್ದಾರೆ ಕೊಡೆಗಳ ಮೂಲಕ ಆಂಟೆನ ಮೂಲಕ ಡಿಟಿಎಚ್ ಇಂದ ನೋಡೋದು ಕಮ್ಮಿಯಾಗಿದೆ ಯುವಜನತೆ ಟಿವಿ ರಿಮೋಟ್ ಮುಟ್ಟೋದೇ ಅಪರೂಪ ಆಗಿದೆ ಅವರಿಗೆ ಬೇಕಾದ ಸಿನಿಮಾ ವೆಬ್ ಸೀರೀಸ್ ಓಟಿಟಿ ಪ್ಲಾಟ್ಫಾರ್ಮ್ಸ್ ಅಲ್ಲಿ ಸಿಗುತ್ತೆ ಎಂಟರ್ಟೈನ್ಮೆಂಟ್ ಬೇಕು ಅಂದ್ರೆ YouTube ಇನ್ಸ್ಟಾ ರೀಲ್ಸ್ ಎಲ್ಲ ಇದಾವೆ ಯಾವಾಗ ಕಣ್ಣುಗಳು ಟಿವಿ ಪರದೆಯಿಂದ ಮೊಬೈಲ್ ಸ್ಕ್ರೀನ್ಗೆ ಶಿಫ್ಟ್ ಆಗಬಹು ಆಗ ಸಹಜವಾಗಿ ವಾಗಿ ಟಿವಿ ಚಾನೆಲ್ಗಳ ರೆಲೆವೆನ್ಸ್ ಅಸ್ತಿತ್ವ ಅವುಗಳ ಮಹತ್ವ ಕಮ್ಮಿಯಾಯಿತು ಅದರಲ್ಲೂ ಮುಖ್ಯವಾಗಿ ಮ್ಯೂಸಿಕ್ ಚಾನೆಲ್ಸ್ ಹಳೆಯ ಸಿನಿಮಾಗಳನ್ನ ಹಾಕೋ ಚಾನೆಲ್ಸ್ ಮತ್ತು ಎಸ್ಡಿ ಸ್ಟ್ಯಾಂಡರ್ಡ್ ಡೆಫಿನೇಷನ್ ಚಾನೆಲ್ ಗಳನ್ನ ನೋಡುವರೇ ಇಲ್ದಂತ ಆಗಿದೆ ಜನರ ಇಲ್ಲ ಅದಮೇಲೆ ಥಿಯೇಟರ್ ನಡೆಸಿ ಏನು ಪ್ರಯೋಜನ ಸೋ ಟಿವಿ ಕಥೆ ಕೂಡ ಹಾಗೆ ಆಗಿದೆ ಕ್ಯಾರಿಯೇಜ್ ಫೀ ಇದೆ ಅಸಲಿ ವಿಲನ್ ಎಸ್ ಇದು ಮುಖ್ಯವಾಗಿರೋ ಕಾರಣ ಮತ್ತು ಟೆಕ್ನಿಕಲ್ ಕಾರಣ ಕ್ಯಾರಿಯೇಜ್ ಫೀ ಸಿಂಪಲ್ ಆಗಿ ಹೇಳ್ತೀವಿ ಈಗ ನೀವು ಒಂದು ಬಟ್ಟೆ ಅಂಗಡಿ ಇಡಬೇಕು.
ಒಂದು ಫೇಮಸ್ ಮಾಲ್ನಲ್ಲಿ ಜಾಗಾ ಬಾಡಿಗೆಗೆ ಪಡಿತೀರಲ್ವಾ ಆ ಮಾಲ್ಗೆ ಅಂದ್ರೆ ಆ ಮಾಲ್ ಒಳಗಿರೋ ನಿಮ್ಮ ಅಂಗಡಿಗೆ ಜನ ಬರಲಿ ಬಿಡಲಿ ನೀವು ಮಾಲ್ ಮಾಲಿಕರಿಗೆ ಪ್ರತಿ ತಿಂಗಳು ಲಕ್ಷ ಲಕ್ಷ ಬಾಡಿಗೆ ಕಟ್ಟಲೇ ಬೇಕಲ್ವಾ ಟಿವಿ ಚಾನೆಲ್ ಬಿಸಿನೆಸ್ ಕೂಡ ಸೇಮ್ ಟು ಸೇಮ್ ಒಂದು ಚಾನೆಲ್ ಅದು ಸ್ಟಾರ್ ಇರಲಿ ಜ ಇರ್ಲಿ ನಿಮ್ಮ ಮನೇಲಿ ಟಿವಿ ಕಾಣಿಸಬೇಕು ಅಂದ್ರೆ ಆ ಚಾನೆಲ್ ನವರು ಡಿಟಿಎಚ್ ಕಂಪನಿಗಳಿಗೆ ಅಂದ್ರೆ ಟಾಟಾಪ್ಲೇ ಏಟೆಲ್ ಡಿಟಿಎಚ್ ಡಿಶ್ ಟಿವಿ ಅಥವಾ ಲೋಕಲ್ ಕೇಬಲ್ ಆಪರೇಟರ್ಸ್ಗೆ ಕೋಟಿ ಕೋಟಿ ಹಣ ಕೊಡಲೇಬೇಕು ಇದನ್ನೇ ಕ್ಯಾರಿಯೇಜ್ ಫೀ ಅಂತ ಹೇಳ್ತಾರೆ ಯೋಚನೆ ಮಾಡಿ ಒಂದು ಕಡೆ ಡಿಜಿಟಲ್ ನಿಂದಾಗಿ ವೀಕ್ಷಕರು ಕಮ್ಮಿಯಾಗಿದ್ದಾರೆ. ಇನ್ನೊಂದು ಕಡೆ ಚಾನೆಲ್ ನೋಡೋರು ಇರಲಿ ಇಲ್ದೆ ಇರಲಿ ಕೇಬಲ್ ಮತ್ತು ಡಿಟಿಎಚ್ ನವರಿಗೆ ಕೋಟಿ ಕೋಟಿ ಬಾಡಿಗೆ ಕಟ್ಟಲೇಬೇಕು. ಲೆಕ್ಕಾಚಾರ ಹಾಕಿದ ಕಂಪನಿಗಳಿಗೆ ತಲೆ ತಿರುಗಿದೆ. ಬರೋ ಆದಾಯಕ್ಕಿಂತ ಅದನ್ನ ಟಿವಿಯಲ್ಲಿ ತೋರಿಸೋಕೆ ಕಟ್ತಿರೋ ಬಾಡಿಗೆನೇ ಜಾಸ್ತಿ ಆಗ್ತಾ ಇದೆ ಅಂತ. ಇದನ್ನ ಬಿಸಿನೆಸ್ ಭಾಷೆಯಲ್ಲಿ ಅನ್ವಯಬಲ್ ಅಥವಾ ನಷ್ಟದ ಬಾಪ್ತು ಅಂತ ಹೇಳ್ತಾರೆ.
ಹಾಗಾಗಿ ಯಾವ ಚಾನೆಲ್ ಗಳಿಗೆ ಡಿಮ್ಯಾಂಡ್ ಇಲ್ವೋ ಉದಾಹರಣೆಗೆ ಮ್ಯೂಸಿಕ್ ಚಾನೆಲ್ಸ್ ಹಳೆ ಮೂವಿ ಚಾನೆಲ್ಸ್ ಅವುಗಳಿಗೆ ಸುಮ್ನೆ ಕೋಟಿ ಕೋಟಿ ಕ್ಯಾರೇಜ್ ಫೀ ಯಾಕೆ ಸುರಿಬೇಕು ಅಂತ ಆ ಚಾನೆಲ್ ಗಳನ್ನ ಬಂದ್ ಮಾಡಿ ಲೈಸೆನ್ಸ್ ಅನ್ನ ಸರೆಂಡರ್ ಮಾಡಿ ಹಣ ಉಳಿಸೋಕೆ ನೋಡ್ತಾ ಇದ್ದಾರೆ ಜಾಹಿರಾತು ಹಣ ಎಲ್ಲಿ ಹೋಯ್ತು ಮೂರನೇ ಕಾರಣ ಜಾಹಿರಾತು ಆದಾಯ ಅಥವಾ ಆಡ್ ರೆವಿನ್ಯೂ ಟಿವಿ ಚಾನೆಲ್ಗಳ ಉಸಿರಾಟವೇ ಈ ಜಾಹೀರಾತುಗಳು ಮೇಡಂ ನಿಮ್ಮ ಟೂತ್ಪೇಸ್ಟ್ ನಲ್ಲಿ ಉಪ್ಪಿದೆಯಾ ಅಂತ ಬರ್ತ ಇದ್ದ ಆಡ್ಗಳೇ ಇವರಿಗೆ ಊಟ ಹಾಕ್ತಾ ಇದ್ವು ಆದರೆ ಈಗ ಜಾಹಿರಾತುದಾರರು ಅಡ್ವರ್ಟೈಸರ್ ಸ್ಮಾರ್ಟ್ ಆಗಿದ್ದಾರೆ ಅವರಿಗೆ ಗೊತ್ತು ಜನ ಈಗ ಟಿವಿಗಿಂತ ಜಾಸ್ತಿ ಮೊಬೈಲ್ ನೋಡ್ತಾರೆ ಅಂತ ಟಿವಿ ಯಲ್ಲಿ ಆಡ್ ಕೊಟ್ರೆ ಅದು ಯಾರಿಗೆ ತಲುಪಿದೆ ಅಂತ ಕರೆಕ್ಟಆಗಿ ಗೊತ್ತಾಗಲ್ಲ ಆದರೆ ಡಿಜಿಟಲ್ ನಲ್ಲಿ YouTube ನಲ್ಲಿ ಇನ್ಸ್ಟಾದಲ್ಲಿ ಅಥವಾ ಯಾವುದೇ ಆಪ್ ನಲ್ಲಿ ಆಡ್ ಕೊಟ್ರೆ ನಿರ್ದಿಷ್ಟವಾಗಿ ಇಂತವರಿಗೆ ತಲುಪಬೇಕು ಅಂತ ಟಾರ್ಗೆಟ್ ಮಾಡಬಹುದು ಇಂತ ಏಜ್ ಗ್ರೂಪ್ ಇಂತ ಇನ್ಕಮ್ ಗ್ರೂಪ್ ಇಂತ ಜೆಂಡರ್ ಪ್ರತಿಯೊಂದನ್ನು ಟಾರ್ಗೆಟ್ ಮಾಡಬಹುದು.
ಜಿಯೋಗ್ರಾಫಿ ಕೂಡ ಟಾರ್ಗೆಟ್ ಮಾಡಬಹುದು ಅಲ್ದೆ ಟಿವಿಯಲ್ಲಿ ಆಡ್ ಸಾಮಾನ್ಯವಾಗಿ ದುಬಾರಿ ಇರುತ್ತೆ ಯಾವುದಾದ್ರೂ ಒಂದು ಪ್ರಖ್ಯಾತ ಚಾನೆಲ್ ನಲ್ಲಿ ಪ್ರೈಮ್ ಟೈಮ್ ನಲ್ಲಿ ಜಸ್ಟ್ 30 ಸೆಕೆಂಡ್ ಆಡ್ ಕೊಡಬೇಕು ಅಂತ ಹೇಳಿದ್ರೆ 50ಸಾವ ದಿಂದ 5 ಲಕ್ಷ ರೂಪಾಯವರೆಗೆ ಹಣ ಕೊಡಬೇಕು ಆದರೆ ಡಿಜಿಟಲ್ ಮೀಡಿಯಾದಲ್ಲಿ ತಿಂಗಳಿಗೆ ಆಡ್ ಕಾಸ್ಟ್ ಸುಮಾರು 15000 ದಿಂದ ಒು ಲಕ್ಷ ರೂಪಾಯವರೆಗೆ ಇರಬಹುದು ಇಡೀ ತಿಂಗಳು ಪ್ರಚಾರ ಮಾಡಬಹುದು ಸೋ ಖರ್ಚು ಕಮ್ಮಿ ರಿಸಲ್ಟ್ ಜಾಸ್ತಿ ಹೀಗಾಗಿ ಆಡ್ ಕೊಡುರು ಡಿಜಿಟಲ್ ಕಡೆಗೆ ಶಿಫ್ಟ್ ಆಗ್ತಿದ್ದಾರೆ ರಿಪೋರ್ಟ್ಸ್ ಪ್ರಕಾರ ಭಾರತದ ಒ ಲಕ್ಷ ಕೋಟಿ ಜಾಹಿರಾತು ಮಾರುಕಟ್ಟೆಯಲ್ಲಿ ಈಗ ಆಲ್ರೆಡಿ 46% ಪಾಲನ್ನ ಡಿಜಿಟಲ್ ಮೀಡಿಯಾಗಳೇ ಬಾಚಿಕೊಂಡಿವೆ ಯಾವಾಗ ಆದಾಯದ ಮೂಲವೇ ಒಣಗಿ ಹೋಯಿತು ಆಗ ಚಾನೆಲ್ ನಡೆಸುವುದು ಮತ್ತಷ್ಟು ಕಷ್ಟ ಆಯ್ತು ಇನ್ನೊಂದು ಮೇಜರ್ ಪಾಯಿಂಟ್ ಅಂದ್ರೆಜಿಯೋ ಮತ್ತು ಡಿಸ್ನಿ ಸ್ಟಾರ್ ವಿಧಿನ ಇವರಿಬ್ಬರು ಸೇರಿದಮೇಲೆ ಇಂಡಿಯಾದ ಅತಿ ದೊಡ್ಡ ಮೀಡಿಯಾ ಸಾಮ್ರಾಜ್ಯ ಸೃಷ್ಟಿಯಾಗಿದೆ.
ಈಗ ಒಂದೇ ಮನೆಯಲ್ಲಿ ಒಂದೇ ತರಹದ ಎರಡು ಚಾನೆಲ್ ಇದ್ರೆ ಏನು ಲಾಭ ಹೇಳಿ ಉದಾಹರಣೆಗೆ ಸ್ಟಾರ್ ಕಡೆ ಹಿಂದಿ ಮೂವಿ ಚಾನೆಲ್ ಇದೆ ಅದೇ ರೀತಿ ವಯಕಾಮ ಕಡೆ ಕೂಡ ಅದೇ ತರ ಚಾನೆಲ್ ಇದೆ ಆದ್ರೆ ಎರಡನ್ನು ನಡೆಸಿ ಡಬಲ್ ಖರ್ಚು ಮಾಡೋ ಬದಲು ಒಂದನ್ನ ಉಳಿಸಿಕೊಂಡು ಕಂಟೆಂಟ್ ಒಂದೇ ಕಡೆ ಹಾಕೊಂಡು ಇನ್ನೊಂದು ಚಾನೆಲ್ ನಲ್ಲಿ ನಡೆಸುವ ಎಕ್ಸ್ಪೆನ್ಸಸ್ ನ ಬಂದು ಮಾಡೋದು ಬುದ್ಧಿವಂತಿಕೆ ಅಲ್ವಾ ಇದನ್ನೇ ಕನ್ಸಾಲಿಡೇಶನ್ ಅಥವಾ ಕ್ರೂಡೀಕರಣ ಅಂತಾರೆ. ಈಗ ಅದೇ ಆಗ್ತಾ ಇದೆ. ಸೆಟ್ ಆಫ್ ಬಾಕ್ಸ್ ಕಥೆ ಮುಗಿತಾ ಎಸ್ ಸ್ನೇಹಿತರೆ ಟಿವಿ ಚಾನೆಲ್ ಗಳ ಸ್ಟೋರಿ ಮುಗಿತ ಹಾಗಾದ್ರೆ ನಮ್ಮ ಮನೆಯ ಸೆಟ್ ಆಫ್ ಬಾಕ್ಸ್ ಅನ್ನ ಗುಜರಿಗೆ ಹಾಕಬೇಕಾ ಇದಕ್ಕೆ ಉತ್ತರ ಹೌದು ಮತ್ತು ಇಲ್ಲ ಎಕ್ಸ್ಪರ್ಟ್ಸ್ ಪ್ರಕಾರ ಭವಿಷ್ಯದಲ್ಲಿ ಲಿನಿಯರ್ ಟಿವಿ ಅಂದ್ರೆ ನಾವು ಇವತ್ತು ನೋಡ್ತಿರೋ ಕೇಬಲ್ ಟಿವಿ ವ್ಯವಸ್ಥೆ ನಿಧಾನವಾಗಿ ಸಾಯುತ್ತೆ. ಆದರೆ ಟಿವಿ ಸಾಯಲ್ಲ. ಟಿವಿ ಕೇವಲ ಒಂದು ಸ್ಕ್ರೀನ್ ಸ್ಮಾರ್ಟ್ ಸ್ಕ್ರೀನ್ ಆಗಿ ಉಳಿಯುತ್ತೆ. ಅದಕ್ಕೆ ಹಿಂದೆ ಕೇಬಲ್ ವೈರ್ ಬದಲು ಇಂಟರ್ನೆಟ್ ವೈರ್ ಫೈಬರ್ ಕನೆಕ್ಷನ್ ಇರುತ್ತೆ.
ಇಂಟರ್ನೆಟ್ ಮೂಲಕ ವರ್ಕ್ ಆಗುತ್ತೆ. ಮುಂದೆ ಏನಾಗುತ್ತೆ ಮುಂದೆ ಬ್ರೇಕಿಂಗ್ ನ್ಯೂಸ್ ಮತ್ತು ಲೈವ್ ಕ್ರಿಕೆಟ್ ಮ್ಯಾಚ್ ನೋಡೋಕೆ ಮಾತ್ರ ಜನ ಲೈವ್ ಚಾನೆಲ್ಸ್ ನೋಡ್ತಾರೆ. ಸೀರಿಯಲ್ ಸಿನಿಮಾ ರಿಯಾಲಿಟಿ ಶೋಗಳೆಲ್ಲವೂ ಸಂಪೂರ್ಣವಾಗಿ ಆಪ್ ಗಳ ಒಳಗಡೆ ಹೋಗ್ತವೆ. ಈಗ ಆಲ್ರೆಡಿ ನಗರಗಳಲ್ಲಿ ಎಷ್ಟೋ ಜನ ಡಿಟಿಎಚ್ ರಿಚಾರ್ಜ್ ಮಾಡಿಸೋದನ್ನ ಸ್ಟಾಪ್ ಮಾಡಿದ್ದಾರೆ. ಬರಿ ಸ್ಮಾರ್ಟ್ ಟಿವಿ ಯಲ್ಲಿ YouTube ಮತ್ತು Netflix ನೋಡ್ಕೊಂಡು Amazon ಪ್ರೈಮ್ ನೋಡ್ಕೊಂಡು Jio Hot ಸ್ಟಾರ್ ಆಪ್ ಅಲ್ಲಿ ಸ್ಟ್ರೀಮ್ ಮಾಡ್ಕೊಂಡು ಕಾಲ ಕಳಿತಾ ಇದ್ದಾರೆ ಜಸ್ಟ್ ಮ್ಯಾಟರ್ ಆಫ್ ಟೈಮ್ ಮುಂದಿನ ಐದರಿಂದ 10 ವರ್ಷ ಹಳ್ಳಿ ಹಳ್ಳಿಗೂ ಇಂಟರ್ನೆಟ್ ರೀಚ್ ಆಗ್ಲಿ ಈಗಂತೂ ಸ್ಯಾಟಿಲೈಟ್ ಇಂಟರ್ನೆಟ್ ಕೂಡ ಎಲ್ಲಾ ಕಡೆ ಬರ್ತಾ ಇದೆ.
ಡೆಮೋಕ್ರೆಟೈಸ್ ಆಗ್ಲಿ ಪ್ರೈಸ್ ಆದರದ್ದು ಕಮ್ಮಿ ಆಗ್ಲಿ ಹಳ್ಳಿ ಹಳ್ಳಿಗೂ ರೀಚ್ ಆಗ್ಲಿ ಅವಾಗ ದೇಶದ ಮನೆ ಮನೆ ಕೂಡ ಸ್ಟ್ರೀಮಿಂಗ್ ಟಿವಿಗಳನ್ನ ಇಂಟರ್ನೆಟ್ ಕನೆಕ್ಟೆಡ್ ಟಿವಿಗಳನ್ನ ನೋಡ್ತಾ ಇರ್ತಾರೆ ಕೊಡೆಗಳು ಸಾಯ್ತವೆ ಈಗ ನೀವು ಹೇಳಿ ನೀವು ಟಿವಿ ಚಾನೆಲ್ಗಳಲ್ಲಿ ಮೂವಿ ನೋಡಿ ಟಿವಿ ಚಾನೆಲ್ಗಳಲ್ಲಿ ಜಾಹಿರಾತುಗಳ ನಡುವೆ ಮುಂದಕ್ಕೆ ಹೋಗಲಿಕ್ಕೂ ಆಗದೆ ಹಿಂದಕ್ಕೆ ಬರಲಿಕ್ಕೂ ಆಗದೆ. ಅಪಾಯಿಂಟ್ಮೆಂಟ್ ವ್ಯೂವಿಂಗ್ ತರ ಓ ಇಂತ ಟೈಮ್ಗೆ ಏನೋ ಬರುತ್ತೆ ಹೋಗಿಕೊಳ್ಳೋಣ ಅಂತ ಕೂತು ನೋಡಿದ್ದು ಯಾವಾಗ ಲಾಸ್ಟ್ ಅಥವಾ ನೀವು ಬಿಟ್ಟಿದ್ರೆ ಬಿಟ್ಟು ಎಷ್ಟು ಟೈಮ್ ಆಯ್ತು ನಿಮ್ಮ ಮನೆಲ್ಲಿ ಕೇಬಲ್ ಕನೆಕ್ಷನ್ ಅಥವಾ ಡಿಟಿಎಚ್ ಇದೆಯಾ ಅಥವಾ ನೀವು ಪಕ್ಕಾ ಮೊಬೈಲ್ ಮಂದಿ ಅಥವಾ ಇಂಟರ್ನೆಟ್ ಪೀಪಲ್ ಅಂತ ಹೇಳ್ತೀರಾ ಕಾಮೆಂಟ್ ಮಾಡಿ ತಪ್ಪದೆ ತಿಳಿಸಿ ಸ್ನೇಹಿತರೆ ನಿಮ್ಮ ಫೀಡ್ಬ್ಯಾಕ್ ತುಂಬಾ ಇಂಪಾರ್ಟೆಂಟ್ ನೋಡೋಣ ವೆರಿ ಇಂಟರೆಸ್ಟಿಂಗ್ ಇರುತ್ತೆ ಕಾಮೆಂಟ್ ಮಾಡಿ ತಿಳಿಸಿ.


