ರೈಲ್ವೆ ಪ್ರಯಾಣಿಕರ ದಶಕಗಳ ಕನಸು ನನಸು ಮೊದಲ ಒಂದೇ ಭಾರತ್ ಸ್ಲೀಪರ್ಗೆ ಕ್ಷಣಗಣನೆ ಉದ್ಘಾಟನೆ ಮಾಡಲಿರುವ ಸುರಭ ಭಾರತೀಯ ರೈಲ್ವೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ ಹತ್ತಿರವಾಗ್ತಾ ಇದೆ. ರೈಲ್ವೆ ಪ್ರಯಾಣಿಕರ ದಶಕಗಳ ಕನಸು ನನಸಾಗ್ತಾ ಇದೆ. ಒಂದೇ ಭಾರತ ರೈಲುಗಳು ಹಳಿಗಳ ಮೇಲೆ ಓಡಾಡುತಿದ್ದಂತೆ ಅದರ ಸೇವೆ ಪರಿಗಣಿಸಿ ದೇಶಾದ್ಯಂತ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿತ್ತು ಅಲ್ಲದೆ ಸ್ಲೀಪರ್ ಒಂದೇ ಭಾರತ ರೈಲು ಬೇಕೇ ಬೇಕು ಅಂತ ದೇಶಾದ್ಯಂತ ರೈಲ್ವೆ ಪ್ರಯಾಣಿಕರು ಬೇಡಿಕೆಯನ್ನ ಇಟ್ಟಿದ್ರು ಕೊನೆಗೂ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಕನಸನ್ನ ಈಗ ನನಸು ಮಾಡಿದೆ. ಇದೇ ತಿಂಗಳು ಹೊಸ ಒಂದೇ ಭಾರತ ಸ್ಲೀಪರ್ ರೈಲು ಹಳಿಗೆ ಇಳಿಯಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಯವರು ಇದಕ್ಕೆ ಚಾಲನೆಯನ್ನ ಕೊಡಲಿದ್ದಾರೆ.
ಹಳಿಗಳ ಮೇಲೆ ಹಾರುವ ಹಕ್ಕಿಯಂತೆ ಸಾಗುವ ಐಶರಾಮಿ ಸೌಲಭ್ಯಗಳ ಸಾಗರವನ್ನೇ ಹೊತ್ತು ತರುತ್ತಿರುವ ಒಂದೇ ಭಾರತ ಸ್ಲೀಪರ್ ರೈಲು ಈಗ ಹಳಿಗೆ ಇಳಿಯಲು ಸಜ್ಜಾಗಿದೆ. ಇಷ್ಟು ದಿನ ಕೇವಲ ಚೇರ್ ಕಾರ್ ಮೂಲಕ ಸಂಚಲನ ಮೂಡಿಸಿದ ಒಂದೇ ಭಾರತ್ ಈಗ ಸಾಮಾನ್ಯ ಪ್ರಯಾಣಿಕರ ಕನಸಿನ ಭಾರತಾಗಿ ಬದಲಾಗ್ತಾ ಇದೆ. ಇಲ್ಲಿ ವಿಐಪಿ ಕೋಟ ಇರಲ್ಲ ಸ್ಪೆಷಲ್ ಟ್ರೀಟ್ಮೆಂಟ್ ಸಿಗಲ್ಲ ಕೇವಲ ಸಾಮಾನ್ಯ ಪ್ರಯಾಣಿಕನೇ ಈ ರೈಲಿನ ಅಧಿಪತಿ ಹಾಗಾದರೆ ಯಾವಾಗ ಉದ್ಘಾಟನೆ ಸ್ಲೀಪರ್ ಒಂದೇ ಭಾರತ ರೈಲಿನ ವಿಶೇಷತೆಗಳು ಏನು ಏನೆಲ್ಲ ಹೈ ಟೆಕ್ನಾಲಜಿ ಇದೆ ಟಿಕೆಟ್ ದರ ಎಷ್ಟಿದೆ ಡೀಟೇಲ್ ಆಗಿ ನೋಡ್ಕೊಂಡು ಬರೋಣ ಹಲವು ವರ್ಷಗಳ ಕುತುಹಲ ಮತ್ತು ಕಾಯುವಿಕೆಯ ನಂತರ ದೇಶದ ಮೊದಲ ಒಂದೇ ಭಾರತ ಸ್ಲೀಪರ್ ರೈಲು ಜನವರಿ 17 ರಂದು ಸಂಚಾರವನ್ನ ಆರಂಭಿಸಲಿದೆ ಪ್ರಧಾನಿ ನರೇಂದ್ರ ಮೋದಿ ಯವರು ಈ ಮಹತ್ವಾಕಾಂಕ್ಷೆಯ ರೈಲಿಗೆ ಹಸಿರು ನಿಷಾನೆಯನ್ನ ತೋರಲಿದ್ದಾರೆ ಈ ರೈಲು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹೌರ ಮತ್ತು ಅಸ್ಸಾಂನ ಗುವಾಹಟ್ಟಿ ನಡುವೆ ಸಂಚಾರವನ್ನ ಮಾಡಲಿದ್ದು.
ಈಶಾನ್ಯ ರಾಜ್ಯಗಳ ಸಂಪರ್ಕಕ್ಕೆ ಹೊಸ ವೇಗವ ನ್ನ ನೀಡಿದೆ ಈ ರೈಲಿನ ಅತ್ಯಂತ ರೋಚಕ ವಿಷಯವೇನಂದ್ರೆ ಇಲ್ಲಿ ವಿಐಪಿ ಅಥವಾ ತುರ್ತು ಕೋಟ ವ್ಯವಸ್ಥೆಯೇ ಇರಲ್ಲ ಹೌದು ನೀವು ಕೇಳ್ತಾ ಇರೋದು ನಿಜ ಹಿರಿಯ ರೈಲ್ವೆ ಅಧಿಕಾರಿಗಳು ಕೂಡ ತಮ್ಮ ಉಚಿತ ಪಾಸ್ ಬಳಸಿ ಈ ರೈಲಿನಲ್ಲಿ ಪ್ರಯಾಣಿಸುವಂತಿಲ್ಲ ಕೇವಲ ಕನ್ಫರ್ಮ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಇಲ್ಲಿ ಪ್ರವೇಶ ಅಷ್ಟೇ ಅಲ್ಲ ಪ್ರಯಾಣಿಕರ ನೆಮ್ಮದಿಗೆ ಭಂಗವಾಗಬಾರದು ಎಂಬ ಕಾರಣಕ್ಕೆ ಈ ರೈಲಿನಲ್ಲಿ ಆರ್ಎಸಿ ವ್ಯವಸ್ಥೆಯನ್ನು ಕೂಡ ರದ್ದುಗೊಳಿಸಲಾಗಿದೆ ಅಂದ್ರೆ ನಿಮ್ಮ ಸೀಟು ಕೇವಲ ನಿಮ್ಮದಷ್ಟೇ ಕ್ಲೀಪರ್ ರೈಲಿನ ವಿನ್ಯಾಸ ಹೇಗಿದೆ ವಿಮಾನದಲ್ಲಿ ಪ್ರಯಾಣಿಸಿದಂತೆ ಅನುಭವ ಈ ಒಂದೇ ಭಾರತ್ ಸ್ಲೀಪರ್ ರೈಲು ಒಟ್ಟು 16 ಬೋಗಿಗಳನ್ನ ಒಳಗೊಂಡಿದೆ ಇವೆಲ್ಲವೂ ಕೂಡ ಸಂಪೂರ್ಣವಾಗಿ ಹವಾ ನಿಯಂತ್ರಿತ ಅಂದ್ರೆ ಎಸಿ ಬೋಗಿಗಳು ಆಗಿರುತ್ತವೆ ಮೂರು ಎಸಿ ಬೋಗಿಗಳು 11 ಎರಡು ಎಸಿ ಬೋಗಿಗಳು ನಾಲಕು ಒಂದು ಎಸಿ ಬೋಗಿ ಒಂದು ಒಟ್ಟು 823 ಪ್ರಯಾಣಿಕರಿಗೆ ಮಲಗಲು ವ್ಯವಸ್ಥೆಯನ್ನ ಮಾಡಲಾಗಿದೆ ಇದರಲ್ಲಿ 611 ಬರ್ತ್ಗಳು ಎಸಿ ವರ್ಗಕ್ಕೆ ಸೇರಿದರೆ 188 ಬರ್ತ್ಗಳು 2ಎಗೆ ಮತ್ತು 24 ಬರ್ತಗಳು ಪ್ರೀಮಿಯಂ ಒಂದು ಎಸಿ ವರ್ಗಕ್ಕೆ ಮೀಸಲಾಗಿವೆ.
ಈ ರೈಲಿನಲ್ಲಿ ಪ್ರಯಾಣಿಸುವುದು ವಿಮಾನದಲ್ಲಿ ಪ್ರಯಾಣಿಸಿದಷ್ಟೇ ಆರಾಮದಾಯಕ. ರೈಲು ವೇಗವಾಗಿ ಚಲಿಸುವಾಗ ಪ್ರಯಾಣಿಕರಿಗೆ ಆಘಾತ ಉಂಟಾಗದಂತೆ ವಿಶೇಷ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹೊರಗಿನ ಸದ್ದು ಒಳಗೆ ಕೆಳಿಸಿದಂತೆ ಸೌಂಡ್ ಪ್ರೂಫಿಂಗ್ ತಂತ್ರಜ್ಞಾನ ಬಳಸಲಾಗಿದೆ. ರೈಲಿನಲ್ಲಿ ಆಹಾರ ವ್ಯವಸ್ಥೆ ಹೇಗಿರಲಿದೆ ಸುರಕ್ಷತೆಗಾಗಿ ಭಾರತೀಯ ರೈಲ್ವೆಯ ಹೆಮ್ಮೆಯ ಕವಚ ರಕ್ಷಣಾ ವ್ಯವಸ್ಥೆ ಇದೆ ಜೊತೆಗೆ ಆಟೋಮ್ಯಾಟಿಕ್ ಬಾಗಿಲುಗಳು ಮತ್ತು ನೈರ್ಮಲ್ಯ ಕಾಪಾಡಲು ಅತ್ಯಾಧುನಿಕ ರೋಗಾಣು ನಿವಾರಕ ತಂತ್ರಜ್ಞಾನವನ್ನು ಕೂಡ ಇಲ್ಲಿ ಅಳವಡಿಸಲಾಗಿದೆ. ಒಂದೇ ಭಾರತ್ ಸ್ಲೀಪರ್ ನಲ್ಲಿ ಭಾರತೀಯ ಸಂಸ್ಕೃತಿಯ ಸೊಗಡನ್ನ ಕಾಣಬಹುದು. ಇಲ್ಲಿನ ಸಿಬ್ಬಂದಿ ಅಚ್ಚುಕಟ್ಟಾದ ಸಮವಸ್ತ್ರದಲ್ಲಿ ಇರಲಿದ್ದು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಹಾಸಿಗೆ ಮತ್ತು ಬ್ಲಾಂಕೆಟ್ ಗಳನ್ನ ಒದಗಿಸಲಾಗುತ್ತೆ. ಇನ್ನು ಆಹಾರದ ವಿಷಯಕ್ಕೆ ಬಂದರೆ ಇಲ್ಲಿ ಕೇವಲ ಸ್ಥಳೀಯ ತಿನಿಸುಗಳು ಮಾತ್ರ ಲಭ್ಯವಿರಲಿವೆ. ಆಯಾ ಪ್ರದೇಶದ ರುಚಿಯನ್ನ ಪ್ರಯಾಣಿಕರಿಗೆ ಉಣಬಡಿಸುವುದು ರೈಲ್ವೆಯ ಉದ್ದೇಶವಾಗಿದೆ. ಇದೊಂದು ಚಲಿಸುವ ಹೋಟೆಲ್ ಆದರೂ ಕೂಡ ತಪ್ಪಾಗಲಾರದು.
ಒಳಾಂಗಣದಲ್ಲಿ ಬೆಸ್ಟ್ ಇನ್ ಕ್ಲಾಸ್ ಎನ್ನಬಹುದಾದ ಜಿಎಫ್ಆರ್ಪಿ ಪ್ಯಾನೆಲ್ ಗಳನ್ನು ಕೂಡ ಬಳಸಲಾಗಿದೆ. ಒಂದೇ ಭಾರತ್ ರೈಲಿನ ಟಿಕೆಟ್ ದರ ಎಷ್ಟು ಇಷ್ಟೊತ್ತು ರೈಲಿನ ವಿನ್ಯಾಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದಾಯಿತು ಈಗ ಮೇನ್ ವಿಷಯಕ್ಕೆ ಬರೋಣ ಇಷ್ಟೆಲ್ಲ ಸೌಲಭ್ಯವಿರುವ ಇಷ್ಟೆಲ್ಲ ತಂತ್ರಜ್ಞಾನವನ್ನ ಒಳಗೊಂಡಿರುವಂತಹ ಈ ರೈಲಿನ ಟಿಕೆಟ್ ದರ ಎಷ್ಟಿರಬಹುದು ಅಂತ ಅದನ್ನೀಗ ನೋಡ್ತಾ ಹೋಗೋಣ ಮೂರನೇ ದರ್ಜೆಯ ಹವಾ ನಿಯಂತ್ರಿತ ಭೂಗಿಯಲ್ಲಿ ಸಂಚರಿಸಲು ಪ್ರತಿ ಕಿಲೋಮೀಟರ್ಗೆ 2.4 4 ರೂಪಾ ಅಂದ್ರೆ 1000 ಕಿಲೋಮೀಟ ಗೆ ರೂಪಯ ಆಗುತ್ತೆ ದ್ವಿತೀಯ ದರ್ಜೆಯ ಹವಾ ನಿಯಂತ್ರಿತ ಭೋಗಿಯಲ್ಲಿ ಸಂಚರಿಸಲು ಪ್ರತಿ ಕಿಲೋಮೀಟರ್ ಗೆ 3.1 ಅಂದ್ರೆ 1000 ಕಿಲೋಮೀಟಗೆ ಹಿಡ್ಕೊಂಡ್ರೆ 3100 ರೂಪಯ ಆಗುತ್ತೆ ಮೊದಲ ದರ್ಜೆಯ ಹವಾ ನಿಯಂತ್ರಿತ ಭೋಗಿಯಲ್ಲಿ ಸಂಚರಿಸಲು ಪ್ರತಿ ಕಿಲೋಮೀಟರ್ ಗೆ 3.8 ಶುಲ್ಕವನ್ನ ವಿಧಿಸಲಾಗುತ್ತೆ 400 ಕಿಲೋಮೀಟ ದೂರಕ್ಕೆ ಮೂರನೇ ದರ್ಜೆಯ ಹವಾ ನಿಯಂತ್ರಿತ ಭೋಗಿಯಲ್ಲಿ ಸಂಚರಿಸಲು 960 ರೂಪಾಯ ಆಗುತ್ತೆ.
ಜಿಎಸ್ಟಿ ಪ್ರತ್ಯೇಕ ಅಂತ ರೈಲ್ವೆ ಸಚಿವಾಲಯ ತಿಳಿಸಿದೆ ಪ್ರಯಾಣಿಕರಿಗೆ ಸಿಗುತ್ತೆ ಬಿಸಿನೀರಿನ ಸ್ನಾನ ಒಂದೇ ಭಾರತ್ ಎಕ್ಸ್ಪ್ರೆಸ್ ಸ್ಲೀಪರ್ನ ಪ್ರತಿ ಭೋಗಿಯಲ್ಲೂ ಕೂಡ ಆಟೋಮ್ಯಾಟಿಕ್ ಬಾಗಿಲುಗಳು ಇರುತ್ತವೆ ಇವು ಕೇವಲ ನಿಲ್ದಾಣಗಳಲ್ಲಿ ಮಾತ್ರ ತೆರೆಯುತ್ತವೆ ರೈಲು ನಿಲ್ದಾಣದಿಂದ ಹೊರಡೋಕು ಮುಂಚೆಯೇ ಡೋರ್ ಕ್ಲೋಸ್ ಮಾಡಿಕೊಂಡು ಲಾಕ್ ಆಗುತ್ತೆ ಭೋಗಿಗಳ ನಡುವೆ ಸುಗಮ ಸಂಚಾರಕ್ಕಾಗಿ ಸೀಲ್ಡ್ ಗ್ಯಾಂಗ್ ವೇಗಗಳಿವೆ ಇದರಿಂದ ಧೂಳು ಒಳಗೆ ಬರಲ್ಲ ಇನ್ನು ಬರ್ತ್ಗಳಲ್ಲಿ ನೀವು ಮೇಲಿನ ಬರ್ತ್ಗೆ ಹತ್ತಲು ಹ್ಯಾಂಡಲ್ಗಳು ಮತ್ತು ಮೆಟ್ಟಿಲುಗಳನ್ನ ರಿಡಿಸೈನ್ ಮಾಡಲಾಗಿದೆ ಇದರಿಂದ ಹಿರಿಯ ನಾಗರಿಕರು ಕೂಡ ಮೇಲಿನ ಬರ್ತ್ ನಲ್ಲಿ ಮಲಗೋಕೆ ಸಾಧ್ಯವಾಗಲಿದೆ ವಿಶೇಷ ಏನಪ್ಪಾ ಅಂತಂದ್ರೆ ಫಸ್ಟ್ ಎಸಿ ಪ್ರಯಾಣಿಕರಿಗೆ ಬಿಸಿ ನೀರಿನ ಸ್ಥಾನದ ಸೌಲಭ್ಯ ಕೂಡ ಇಲ್ಲಿ ಸಿಗುತ್ತೆ. ಇನ್ನು ಪ್ರತಿ ಬರ್ತ್ ನಲ್ಲಿ ಯುಎಸ್ಬಿ ಚಾರ್ಜಿಂಗ್ ಪಾಯಿಂಟ್ಗಳು ರೀಡಿಂಗ್ ಲ್ಯಾಂಪ್ಗಳು ಮತ್ತು ಮ್ಯಾಗ್ಜಿನ್ ಹೋಲ್ಡರ್ಗಳು ಇವೆ ಅಷ್ಟೇ ಅಲ್ಲ ಕೈ ತೊಳೆಯಲು ಸ್ಪ್ಲಾಶ್ ಪ್ರೂಫ್ ಬೇಸಿನ್ಗಳು ಅಳವಡಿಸಲಾಗಿದ್ದು ನೀರು ಹೊರಗೆ ಚೆಲ್ಲದಂತೆ ವಿನ್ಯಾಸವನ್ನ ಗೊಳಿಸಲಾಗಿದೆ ದೃಷ್ಟಿ ವಿಕಲ ಚೇತನರಿಗಾಗಿ ಸೀಟುಗಳ ಮೇಲೆ ಬ್ರೈಲ್ ಲಿಪಿಯಲ್ಲಿ ಮಾಹಿತಿಯನ್ನ ಬಳಸಲಾಗಿದೆ 180 ಕಿಲೋಮೀಟ ವೇಗದಲ್ಲಿ ನುಗ್ಗುವ ಒಂದೇ ಭಾರತ್ ಪ್ರಯಾಣದಲ್ಲಿ ವೇಗ ಎಷ್ಟು ಮುಖ್ಯವೋ ಸುರಕ್ಷತೆಯು ಅಷ್ಟೇ ಮುಖ್ಯವಾಗಿರುತ್ತೆ ಈ ರೈಲಿನಲ್ಲಿ ಭಾರತದ ಸ್ವದೇಶಿ ಸುರಕ್ಷಿತಾ ವ್ಯವಸ್ಥೆ ಕವಚನ್ನ ಅಳವಡಿಸಲಾಗಿದೆ.
ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗುವುದನ್ನ ತಪ್ಪಿಸುತ್ತೆ. ತುರ್ತು ಸಂದರ್ಭದಲ್ಲಿ ಸಿಬ್ಬಂದಿಯನ್ನ ಸಂಪರ್ಕಿಸಲು ಟಾಕ್ ಬ್ಯಾಕ್ ಸಿಸ್ಟಮ್ ಇರುತ್ತೆ ಬೆಂಕಿಯಿಂದ ರಕ್ಷಣೆ ಪಡೆಯಲು ಅಡ್ವಾನ್ಸ್ಡ್ ಫೈರ್ ಡಿಟೆಕ್ಷನ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. ಪ್ರತಿ ಕೋಚಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇವೆ ಇತೀಚಗಷ್ಟೇ ಈ ರೈಲು ಹೈ ಸ್ಪೀಡ್ ಟ್ರಯಲ್ ಅನ್ನ ಮುಗಿಸಿದೆ ಆಸಿಲೇಷನ್ ಬ್ರೇಕಿಂಗ್ ಮತ್ತು ಸ್ಟೆಬಿಲಿಟಿ ಪರೀಕ್ಷೆಗಳಲ್ಲಿ ಇದು ಅತ್ಯುತ್ತಮವಾಗಿ ಕಂಡುಬಂದಿದೆ. ಈ ರೈಲು ಗಂಟೆಗೆ 160 ರಿಂದ 180 ಕಿಲೋಮೀಟ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನ ಹೊಂದಿದೆ ಅಷ್ಟು ವೇಗವಾಗಿ ಹೋದ್ರು ಕೂಡ ಗಾಜಿನ ಲೋಟದಲ್ಲಿ ತುಂಬಿದ ನೀರು ಒಂದಿಷ್ಟು ಅಲುಗಾಡಿ ಹೊರಗೆ ಚೆಲ್ಲಲ್ಲ ಅನ್ನೋದು ಸ್ಪೀಡ್ ಟೆಸ್ಟ್ ನಲ್ಲಿ ಗೊತ್ತಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದೇ ಭಾರತ ಸ್ಲೀಪರ್ ರೈಲು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಕೇವಲ ಒಂದು ಹೊಸ ರೈಲಲ್ಲ ಬದಲಾಗಿ ಒಂದು ಕೋಟ್ಯಾಂತರ ಭಾರತೀಯರ ದಶಕಗಳ ಕಾಲದ ಕನಸಿನ ಪ್ರತಿಬಿಂಬ ಹಗಲು ಹೊತ್ತಿನ ಪ್ರಯಾಣಕ್ಕೆ ಸೀಮಿತವಾಗಿದ್ದ ಒಂದೇ ಭಾರತನ ವೇಗ ಮತ್ತು ಐಶರಾಮಿ ಸೌಲಭ್ಯಗಳು ಈಗ ರಾತ್ರಿ ಪ್ರಯಾಣಕ್ಕೂ ವಿಸ್ತರಿಸುತ್ತಿರುವುದು ಪ್ರಯಾಣಿಕರಲ್ಲಿ ಹೊಸ ಸಂಚಲನವನ್ನ ಮೂಡಿಸಿದೆ.
ಮುಖ್ಯವಾಗಿ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿ ಕೇವಲ ಸಾಮಾನ್ಯ ಪ್ರಯಾಣಿಕನಿಗೆ ರಾಜ್ಯ ಮರ್ಯಾದೆ ನೀಡಿರುವುದು ಈ ರೈಲಿನ ಘನತೆಯನ್ನ ಎಮ್ಮಡಿಗೊಳಿಸಿದೆ. ಈಶಾನ್ಯ ಭಾರತದ ಹೆಬ್ಬಾಗಿಲಾದ ಗುವಾಹಟಿಯನ್ನ ಹೌರಾಕ್ಕೆ ಜೋಡಿಸುವ ಮೂಲಕ ದೇಶದ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಇದು ಪೂರಕವಾಗಲಿದೆ. ವಿಶ್ವ ದರ್ಜೆಯ ಸುರಕ್ಷಿತ ತಂತ್ರಜ್ಞಾನ ಕವಚ್ ಶಬ್ದರಹಿತ ಪ್ರಯಾಣ ಮತ್ತು ಸ್ಥಳೀಯ ಸಂಸ್ಕೃತಿಯನ್ನ ಬಿಂಬಿಸುವ ಆಹಾರದ ರುಚಿ ಇವೆಲ್ಲವೂ ಕೂಡ ಸೇರಿ ರೈಲು ಪ್ರಯಾಣವನ್ನ ಒಂದು ಮಧುರ ಅನುಭವವನ್ನಾಗಿ ಮಾಡಲಿದೆ. ಭಾರತವು ಜಾಗತಿಕ ಮಟ್ಟದ ಸಾರಿಗೆ ವ್ಯವಸ್ಥೆಯತ್ತ ದಾಪುಗಾಲು ಹಾಕ್ತಾ ಇರುವುದಕ್ಕೆ ಈ ಸ್ಲೀಪರ್ ರೈಲ್ವೆ ಸಾಕ್ಷಿ ಜನವರಿ 17 ರಂದು ಚಾಲನೆ ಪಡಲಿರುವ ಈ ರೈಲು ಮುಂಬರುವ ದಿನಗಳಲ್ಲಿ ಭಾರತದ ಉದ್ದಗಲಕ್ಕೂ ಸಂಚಾರವನ್ನ ಮಾಡಲಿ ಅನ್ನೋದೇ ಭಾರತೀಯರ ಆಶಯ.


