ಸಕಲೇಶಪುರ ಸುಬ್ರಮಣ್ಯಕ್ಕೆ ಶೀಘ್ರವೇ ರೈಲು ಕಾಮಗಾರಿ ಮುಕ್ತಾಯ ಬರುತ್ತೆ ಒಂದೇ ಭಾರತ್ ದಟ್ಟಕಾಡು ಆಳವಾದ ಕಂದಕಗಳು ಮತ್ತು ಮನಮೋಹಕ ಹಸಿರಿನ ನಡುವೆ ಸಾಗುವ ಸಕಲೇಶಪುರ ಸುಬ್ರಮಣ್ಯ ರೈಲು ಮಾರ್ಗ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಈ ಗ್ರೀನ್ ರೂಟ್ನಲ್ಲಿ ಈಗೊಂದು ಮಹತ್ವದ ಬದಲಾವಣೆ ಸಂಭವಿಸಿದೆ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ ಹೌದು ಭಾರತೀಯ ರೈಲ್ವೆಯ ಅತ್ಯಂತ ಸವಾಲಿನ ಮತ್ತು ತಾಂತ್ರಿಕವಾಗಿ ಸಂಕೀರ್ಣವಾದ ಘಾಟ್ ವಿಭಾಗದ ವಿದ್ಯುತೀಕರಣದ ಕಾರ್ಯ ಈಗ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾನುವಾರ ನಡೆದ ವಿದ್ಯುತ್ ಲೋಕೋ ಮೋಟವಿನ ಪ್ರಾಯೋಗಿಕ ಸಂಚಾರವು ಈ ಮಾರ್ಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಹೈ ಸ್ಪೀಡ್ ಒಂದೇ ಭಾರತ್ ರೈಲುಗಳ ಓಡಾಟಕ್ಕೆ ಇದ್ದ ಅತಿ ದೊಡ್ಡ ತಾಂತ್ರಿಕ ಅಡ್ಡಿ ಈಗ ಸಂಪೂರ್ಣ ನಿವಾರಣೆಯಾಗಿದೆ. ಈ ಮೂಲಕ ಕರಾವಳಿ ಮತ್ತು ರಾಜಧಾನಿಯ ನಡುವಿನ ಪ್ರಯಾಣ ಇನ್ಮುಂದೆ ಮತ್ತಷ್ಟು ವೇಗ ಸುಗಮ ಮತ್ತು ಪರಿಸರ. ಈ ಐತಿಹಾಸಿಕ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಇಂಜಿನಿಯರಿಂಗ್ ಅದ್ಭುತ 55 ಕಿಲೋಮೀಟರ್ ಸಾಹಸಗಾತೆ ಸಕಲೇಶಪುರ ಮತ್ತು ಸುಬ್ರಮಣ್ಯ ರಸ್ತೆ ನಡುವಿನ ಈ 55 ಕಿಲೋಮೀಟ ಉದ್ದದ ಮಾರ್ಗವು ಕೇವಲ ಒಂದು ರೈಲ್ವೆ ಹಳಿಯಲ್ಲ ಇದು ಭಾರತೀಯ ರೈಲ್ವೆಯ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಹಿಡಿದ ಕೈಕನ್ನಡಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಈ ಯೋಜನೆಯನ್ನ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಇದು ಭಾರತೀಯ ರೈಲ್ವೆಯ ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.
2023ರ ಡಿಸೆಂಬರ್ ಒಂದರಂದು ಆರಂಭವಾದ ಈ ವಿದ್ಯುತೀಕರಣ ಕಾರ್ಯವು ಸುಮಾರು 93.55 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರ್ಣಗೊಂಡಿದೆ. 57 ಸುರಂಗಗಳು 258 ಸೇತುವೆಗಳು ಸಾಲು ಸಾಲು ಸವಾಲು ಗೆದ್ದ ರೈಲ್ವೆ ಇಲಾಖೆ. ಈ ಮಾರ್ಗದಲ್ಲಿ ಕೆಲಸ ಮಾಡುವುದು ರೈಲ್ವೆ ಇಲಾಖೆಗೆ ಸುಲಭದ ಮಾತಾಗಿರಲಿಲ್ಲ. ಇಲ್ಲಿನ ಭೌಗೋಳಿಕ ಸ್ಥಿತಿ ಅತ್ಯಂತ ಸವಾಲಿನದ್ದಾಗಿತ್ತು. ಈ 55 km ವ್ಯಾಪ್ತಿಯಲ್ಲಿ ಬರೊಬ್ಬರಿ 57 ಸುರಂಗಗಳು 258 ಸೇತುವೆಗಳು ಮತ್ತು 108 ತೀಷ್ಣವಾದ ಕ್ರಾಸ್ಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ರೈಲ್ವೆ ಮಾರ್ಗವು ಒಂದಕ್ಕೆ 50ರಷ್ಟು ಕಡಿದಾದ ಗ್ರೇಡಿಯಂಟ್ ಹೊಂದಿದೆ. ಅಂದರೆ ಪ್ರತಿ 50 m ಗೆ 1ಮೀಟರ್ ನಷ್ಟು ಏರಳಿತವಿದೆ. ಇಂತಹ ಕಡಿದಾದ ಹಾದಿಯಲ್ಲಿ ವಿದ್ಯುತ್ ಕಂಬಗಳನ್ನ ನೀಡುವುದು ಮತ್ತು ಓವರ್ಹೆಡ್ ಎಲೆಕ್ಟ್ರಿಕಲ್ ಲೈನ್ಗಳನ್ನ ಅಳವಡಿಸುವುದು ಅತಿ ದೊಡ್ಡ ಸಾಹಸವಾಗಿತ್ತು. ತಾಂತ್ರಿಕ ನಿಖರತೆ ಮತ್ತು ಸುರಕ್ಷತೆ. ಸುರಂಗಗಳ ಒಳಗೆ ವಿದ್ಯುತ್ ಲೈನ್ಗಳನ್ನ ಅಳವಡಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಲಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತಜ್ಞರು ಇಲ್ಲಿನ ಭೌಗೋಳಿಕ ಸಮೀಕ್ಷೆ ನಡೆಸಿದ್ರು ಸುರಂಗದ ಗೋಡೆಗಳಿಗೆ ಬೋಲ್ಟ್ಗಳನ್ನ ಅಳವಡಿಸಿ ಅವುಗಳ ಸ್ಥಿರತೆಯನ್ನ ಪರೀಕ್ಷಿಸಲು ಫುಲ್ ಔಟ್ ಟೆಸ್ಟ್ಗಳನ್ನ ನಡೆಸಲಾಗಿದೆ. ಗರಿಷ್ಠ 120 ಕಿಲೋಮೀಟ ಪ್ರತಿ ಗಂಟೆ ವೇಗದಲ್ಲಿ ರೈಲು ಚಲಿಸುವಂತೆ ಈ ವ್ಯವಸ್ಥೆಯನ್ನ ವಿನ್ಯಾಸಗೊಳಿಸಲಾಗಿದೆ. ವಿದ್ಯುತ್ ಕಂಬಗಳ ನಡುವಿನ ಅಂತರವನ್ನ 67ಮೀಟರ್ ಗೆ ಸೀಮಿತಗೊಳಿಸುವ ಮೂಲಕ ಗಾಳಿ ಮತ್ತು ಮಳೆಯ ಹೊಡತಕ್ಕೆ ಲೈನ್ಗಳು ಅಲುಗಾಡದಂತೆ ಎಚ್ಚರಿಕೆ ವಹಿಸಲಾಗಿದೆ. ಪ್ರಕೃತಿಯ ಮುನಿಸಿನ ನಡುವೆಯು ಸಾಧನೆ.
ಈ ಯೋಜನೆಯ ಹಾದಿಯಲ್ಲಿ ಪ್ರಕೃತಿ ಕೂಡ ಅನೇಕ ಅಡೆತಡೆಗಳನ್ನ ಒಡ್ಡಿದೆ. ಪಶ್ಚಿಮ ಘಟ್ಟದ ಭಾರಿ ಮಳೆಗಾಲ ಪದೇ ಪದೇ ಸಂಭವಿಸುವ ಭೂಕುಸಿತಗಳು ಮತ್ತು ಶಿಲಾಪಾತಗಳು ಕಾಮಗಾರಿಗೆ ತೀವ್ರ ಅಡ್ಡಿಪಡಿಸಿದ್ವು. ದಟ್ಟ ಕಾಡಿನ ನಡುವೆ ರಸ್ತೆ ಸಂಪರ್ಕವಿಲ್ಲದ ಜಾಗಗಳಿಗೆ ರೈಲು ಮಾರ್ಗದ ಮೂಲಕವೇ ಸಾಮಗ್ರಿಗಳನ್ನ ಸಾಕಿಸಬೇಕಾದ ಅನಿವಾರ್ಯತೆ ಇತ್ತು. ರೈಲ್ವೆ ಸುರಕ್ಷಿತ ಆಯುಕ್ತರ ಕಠಿಣ ಮಾರ್ಗ ಸೂಚಿಗಳನ್ನ ಪಾಲಿಸುತ್ತಲೆ ಚಲಿಸುವ ರೈಲುಗಳ ನಡುವೆ ಈ ಕಾಮಗಾರಿ ಪೂರ್ಣಗೊಳಿಸಿರುವುದು ಅಧಿಕಾರಿಗಳ ಶ್ರಮಕ್ಕೆ ಸಾಕ್ಷಿಯಾಗಿದೆ. ಕರಾವಳಿ ಜನತೆಗೆ ಒಂದೇ ಭಾರತ್ ಸಂಭ್ರಮ. ಈ ವಿದ್ಯುತೀಕರಣದ ಅಂತಿಮ ಗುರಿ ಒಂದೇ ಭಾರತ್ ರೈಲು ಸದ್ಯ ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸಲು ರೈಲುಗಳು ಘಾಟ್ ವಿಭಾಗದಲ್ಲಿ ಡೀಸೆಲ್ ಇಂಜಿನ್ಗಳ ಸಹಾಯವನ್ನ ಪಡೆಯಬೇಕಿತ್ತು. ಆದರೆ ಈಗ ಸಂಪೂರ್ಣ ವಿದ್ಯುತೀಕರಣವಾಗಿರುವುದರಿಂದ ಒಂದೇ ಭಾರತ್ ನಂತಹ ಸೆಮಿ ಹೈ ಸ್ಪೀಡ್ ರೈಲುಗಳ ಸಂಚಾರಕ್ಕೆ ಹಾದಿ ಸುಗಮವಾಗಿದೆ. ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಈ ಮಾರ್ಗದಲ್ಲಿ ಮೂರು ಪ್ರಮುಖ ಒಂದೇ ಭಾರತ ರೈಲುಗಳಿಗಾಗಿ ಪ್ರಸ್ತಾವನೆಯನ್ನ ಸಲ್ಲಿಸಿದ್ದಾರೆ. ಒಂದು ಬೆಂಗಳೂರಿನಿಂದ ಮಂಗಳೂರು, ಎರಡು ಬೆಂಗಳೂರಿನಿಂದ ಕಾರವಾರ, ಮೂರನೆಯದು ಬೆಂಗಳೂರು ಮತ್ತು ಉಡುಪಿ ಗೋವಾ ಈ ಪ್ರಸ್ತಾವನೆಗಳಿಗೆ ಶೀಘ್ರವೇ ಕೇಂದ್ರ ರೈಲ್ವೆ ಇಲಾಖೆಯಿಂದ ಹಸಿರು ನಿಷಾನೆ ಸಿಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2026ರ ಆರಂಭದಲ್ಲಿ ಪ್ರಯಾಣಿಕರು ಪಶ್ಚಿಮ ಘಟ್ಟದ ಸೌಂದರ್ಯವನ್ನ ಸಂಯುತ ಅತ್ಯಾಧುನಿಕ ಒಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಬಹುದು. ಐದು ವರ್ಷದಲ್ಲಿ ಡಬಲ್ ಆಗಲಿದೆ ರೈಲ್ವೆ ಜಾಲ.
ಬೆಂಗಳೂರು ಮೈಸೂರಿಗೆ ಸಿಗಲಿದೆ ಬಂಪರ್ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ದೇಶದ ಪ್ರಮುಖ ನಗರಗಳಲ್ಲಿ ರೈಲುಗಳನ್ನ ನಿಭಾಯಿಸುವ ಸಾಮರ್ಥ್ಯವನ್ನ ಮುಂದಿನ ಐದು ವರ್ಷಗಳಲ್ಲಿ ಡಬಲ್ ಮಾಡಲು ಕೇಂದ್ರ ರೈಲ್ವೆ ಇಲಾಖೆ ಮಾಸ್ಟರ್ ಪ್ಲಾನ್ ಅನ್ನ ರೂಪಿಸಿದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಿಗ್ ಯೋಜನೆಯನ್ನ ಘೋಷಣೆ ಮಾಡಿದ್ದು ದೇಶದ 48 ನಗರಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ಮೈಸೂರು ಇದ್ದು 2030ರ ವೇಳೆಗೆ ಹಂತ ಹಂತವಾಗಿ ಭಾರತೀಯ ರೈಲ್ವೆಯಲ್ಲಿ ಬೃಹತ್ ಕ್ರಾಂತಿಯಾಗಲಿದೆ. ಕೆಎಸ್ಆರ್ ಬೆಂಗಳೂರು ಯಶವಂತಪುರ ಅಪ್ಗ್ರೇಡ್ ಬೆಂಗಳೂರಿನ ರೈಲ್ವೆ ನಿಲ್ದಾಣಗಳು ಈಗ ಅಕ್ಷರಶಹ ಬದಲಾಗುತ್ತಿವೆ. ಮೆಜೆಸ್ಟಿಕ್ ನ ಕೆಎಸ್ಆರ್ ನಿಲ್ದಾಣದಲ್ಲಿ ಒಂದೇ ಭಾರತ ರೈಲುಗಳ ನಿರ್ವಹಣೆಗೆ ವಿಶೇಷ ಸೌಲಭ್ಯ ಹಾಗೂ ಹೆಚ್ಚುವರಿ ಪ್ಲಾಟ್ಫಾರ್ಮ್ಗಳು ನಿರ್ಮಾಣವಾಗುತ್ತಿವೆ. ಇತ್ತ ಯಶವಂತಪುರ ಜಂಕ್ಷನ್ ಅನ್ನ ಮೆಗಾ ಟರ್ಮಿನಲ್ ಆಗಿ ಪರಿವರ್ತಿಸಲಾಗ್ತಾ ಇದ್ದು ಐದು ಹೊಸ ಪ್ಲಾಟ್ಫಾರ್ಮ್ಗಳು ಶೀಘ್ರವೇ ಲೋಕಾರ್ಪಣೆಗೊಳ್ಳಲಿವೆ. ಇನ್ನು ಎಸ್ಎಂಇಟಿ ಬಯಪ್ಪನ ಹಳಿಯಿಂದ ರೈಲುಗಳ ಸಂಖ್ಯೆ ಹೆಚ್ಚಿಸಲು ವೈಟ್ ಫೀಲ್ಡ್ ಮತ್ತು ಹೊಸೂರು ಮಾರ್ಗದ ಹಳಿಗಳ ಕಾಮಗಾರಿ 2026ರ ವೇಳೆಗೆ ಪೂರ್ಣಗೊಳ್ಳಲಿದೆ. ಯಲಹಂಕದಲ್ಲಿ ಹೈಟೆಕ್ ಟರ್ಮಿನಲ್. ಈ ಯೋಜನೆಯ ಅತಿ ದೊಡ್ಡ ಆಕರ್ಷಣೆ ಅಂದರೆ ಯಲಹಂಕದಲ್ಲಿ ನಿರ್ಮಾಣವಾಗಲಿರುವ ಭಾರತದ ಮೊದಲ ಎಲಿವೇಟೆಡ್ ಕೋಚಿಂಗ್ ಟರ್ಮಿನಲ್. ಸುಮಾರು 6000 ಕೋಟಿ ರೂಪಾಯಿ ವೆಚ್ಚದಲ್ಲಿ ಚೀನಾದ ಹ್ಯಾಂಗ್ ಜೌ ವಿನ್ಯಾಸದಿಂದ ಪ್ರೇರಿತರಾಗಿ ಈ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ. ಪ್ರಸ್ತುತ ಇರುವ ಐದು ಪ್ಲಾಟ್ಫಾರ್ಮ್ಗಳ ಬದಲಿಗೆ ಇಲ್ಲಿ 16 ಪ್ಲಾಟ್ಫಾರ್ಮ್ಗಳು ಲಭ್ಯವಾಗಲಿವೆ. ಇದು ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣಕ್ಕೆ ನೇರ ಸಂಪರ್ಕ ಹೊಂದಲಿದ್ದು ನಗರದ ಪ್ರಮುಖ ನಿಲ್ದಾಣಗಳ ಮೇಲಿನ ಒತ್ತಡವನ್ನ ಕಡಿಮೆ ಮಾಡಲಿದೆ.
ಬೆಂಗಳೂರಿನ ಜೊತೆಗೆ ಸಾಂಸ್ಕೃತಿಕ ನಗರಿ ಮೈಸೂರಿಗೂ ದೊಡ್ಡ ಕೊಡುಗೆ ಸಿಕ್ಕಿದೆ. 395 ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರು ನಿಲ್ದಾಣಕ್ಕೆ ಮೂರು ಹೊಸ ಪ್ಲಾಟ್ಫಾರ್ಮ್ ಹಾಗೂ ನಾಲ್ಕು ಫಿಟ್ ಲೈನ್ಗಳು ಸೇರ್ಪಡೆಯಾಗಲಿವೆ. ಇದರಿಂದ ಮೈಸೂರಿನಿಂದ ದೂರದ ಊರುಗಳಿಗೆ ಹೆಚ್ಚಿನ ರೈಲುಗಳನ್ನ ಓಡಿಸಲು ಸಾಧ್ಯವಾಗಲಿದೆ. ಇದರೊಂದಿಗೆ ರಾಜ್ಯಕ್ಕೆ 10 ಹೊಸ ಮೆಮೊರ ರೈಲುಗಳು ಹಾಗೂ ಹೆಚ್ಚಿನ ಒಂದೇ ಭಾರತ್ ಎಕ್ಸ್ಪ್ರೆಸ್ ಗಳು ಬರಲಿದ್ದು ಕರ್ನಾಟಕದ ರೈಲ್ವೆ ವ್ಯವಸ್ಥೆ ಸಂಪೂರ್ಣ ಹೈಟೆಕ್ ಆಗಲಿದೆ. ಒಟ್ಟಿನಲ್ಲಿ ಸಕಲೇಶಪುರ ಸುಬ್ರಮಣ್ಯ ನಡುವಿನ ಈ ವಿದ್ಯುತೀಕರಣವು ಕರ್ನಾಟಕದ ಸಾರಿಗೆ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಕೇವಲ ಪ್ರಯಾಣದ ಸಮಯವನ್ನ ಕಡಿಮೆ ಮಾಡುವುದು ಮಾತ್ರವಲ್ಲದೆ ಇಂಧನ ಉಳಿತಾಯ ಮತ್ತು ಪರಿಸರ ಮಾಲಿನ್ಯ ತಡಗಟ್ಟುವಲ್ಲಿಯೂ ಕೂಡ ಪ್ರಮುಖ ಪಾತ್ರವನ್ನ ವಹಿಸಲಿದೆ ಕರಾವಳಿ ಮತ್ತು ಮಲೆನಾಡು ಭಾಗದ ಆರ್ಥಿಕ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಇದು ಹೊಸ ವೇಗವನ್ನ ನೀಡಲಿದೆ.


