ಒಂದ್ಸಲ ನೀವು ಹೈವೇನಲ್ಲಿ 100 120 ಸ್ಪೀಡ್ನಲ್ಲಿ ನಿಮ್ಮ ಫ್ಯಾಮಿಲಿಯೊಂದಿಗೆ ಕಾರಲ್ಲೋ ಅಥವಾ ಫ್ರೆಂಡ್ಸ್ ಜೊತೆ ಬೈಕ್ನಲ್ಲೋ ಹೋಗ್ತಾ ಇದ್ದೀರಾ ಅಕ್ಕ ಪಕ್ಕ ಲಾರಿಗಳು ಬಸ್ಗಳು ಹುಂ ಹುಂ ಅಂತ ಸೌಂಡ್ ಮಾಡ್ಕೊಂಡು ನಿಮ್ಮನ್ನ ಅಲಗಾಡಿಸೋ ರೀತಿಯಲ್ಲೂ ಹೋಗ್ತಾ ಇರ್ತಾವೆ ನಿಮ್ಮ ಮುಂದೆ ಹೋಗ್ತಿರೋ ಲಾರಿ ಡ್ರೈವರ್ಗೆ ಸಡನ್ಆಗಿ ಏನೋ ಆಟ ಬರುತ್ತೆ ಆತ ಫ್ರಾಕ್ಷನ್ ಆಫ್ ಸೆಕೆಂಡ್ ನಲ್ಲಿ ಸಡನ್ ಬ್ರೇಕ್ ಹಾಕ್ತಾನೆ ಆ ಲಾರಿಯ ಹಿಂದೆನೇ ವೇಗವಾಗಿ ಹೋಗ್ತಿರೋ ನಿಮಗೆ ರಿಯಾಕ್ಟ್ ಮಾಡೋಕೆ ಟೈಮೇ ಸಿಗಲ್ಲ. ಕಣ್ಣು ಮಿಟಕಿಸೋದ್ರಲ್ಲಿ ನಿಮ್ಮ ಗಾಡಿ ಹೋಗಿ ಲಾರಿಗೆ ಗುದ್ದಬಹುದು. ಹಿಂಗೆ ಅಪಘಾತಗಳು ಆಗ್ತಿರೋದು. ಅಥವಾ ನೀವು ಸಡನ್ಆಗಿ ಫೋರ್ಸ್ ಫುಲ್ಲಿ ರಾಬಿರಿ ಬ್ರೇಕ್ ಹಾಕಿದ್ರೆ ಹಿಂದಿರೋ ಗಾಡಿ ಬಂದು ನಿಮಗೆ ಗುದ್ದಬಹುದು. ರಿಯರ್ ಅಂಡ್ ಕೊಲಿಷನ್ ಇಂತ ಏನೇ ಆದ್ರೂ ಕೂಡ ಯೋಚನೆ ಮಾಡೋಕು ಭಯ ಆಗುತ್ತೆ ಅಲ್ವಾ ಒಂದು ಕ್ಷಣ ಸಾವು ಕಣ್ಣ ಮುಂದೆ ಕುಣಿಯುತ್ತೆ.
ಈಗ ಇನ್ನೊಂದು ಸೀನ್ ಇಮ್ಯಾಜಿನ್ ಮಾಡಿ ಆ ಲಾರಿ ಡ್ರೈವರ್ ಬ್ರೇಕ್ ಮೇಲೆ ಕಾಲಿಡೋ ಮುಂಚೆನೇ ಆ ಲಾರಿ ಬ್ರೇಕ್ ಹಾಕುತ್ತೆ ಅನ್ನೋ ವಿಚಾರ ನಿಮಗಿಂತ ಮುಂಚೆ ನಿಮ್ಮ ಗಾಡಿಗೆ ಗೊತ್ತಾದ್ರೆ ಹೇಗಿರುತ್ತೆ ನಿಮ್ಮ ಕಾರು ಅಥವಾ ಬೈಕ್ ಮುಂದಿರೋ ಲಾರಿಯೊಂದಿಗೆ ಮಾತಾಡಿ ಡ್ರೈವರ್ ೊಂದಿಗೆ ಅಲ್ಲ ಮಷೀನ್ ನೊಂದಿಗೆ ಲಾರಿಯೊಂದಿಗೆ ಮಾತಾಡಿ ಏ ಆ ಲಾರಿ ಸ್ಲೋ ಆಗ್ತಿದೆ ನೀನು ಹುಷಾರು ಅಂತ ನಿಮಗೆ ವಾರ್ನಿಂಗ್ ಕೊಟ್ಟರೆ ಹೇಗಿರುತ್ತೆ ಅಪಘಾತ ಆಗೋ 10 ಸೆಕೆಂಡ್ ಮುಂಚೆನೇ ನಿಮಗೆ ಅಲರ್ಟ್ ಬಂದ್ರೆ ಹೇಗಿರುತ್ತೆ ಎಷ್ಟು ಜನರ ಜೀವ ಉಳಿಯುತ್ತೆರಿ ಅಪಘಾತಗಳೇ ಆಗಲ್ವಲ್ಲರೀ ಹಂಗೂ ಆಗುತ್ತಾ ಚಾನ್ಸಸ್ ಇದೆಯಾ ಇದು ಮೂವಿ ಸ್ಟೋರಿನಾ ಅಂತ ನೀವು ಯೋಚನೆ ಮಾಡಬಹುದು. ಅಲ್ಲ ಇಷ್ಟು ದಿನ ಜಾಹಿರಾತುಗಳಲ್ಲಿ ನೋಡ್ತಾ ಇದ್ದ ಐಶರಾಮಿ ಫೀಚರ್ ಕೂಡ ಅಲ್ಲ 2026ರ ಒಳಗಡೆ ಭಾರತದ ರಸ್ತೆಗಿಳಿಯೋ ವಾಹನಗಳಲ್ಲಿ ಇಂತ ಒಂದು ಕ್ರಾಂತಿಕಾರಿ ಬದಲಾವಣೆ ತರೋಕೆ ಕೇಂದ್ರ ಸರ್ಕಾರ ಸಜ್ಜಾಗಿದೆ ಹೆಲ್ಮೆಟ್ ಸೀಟ್ ಬೆಲ್ಟ್ ರೀತಿ ಇನ್ಮುಂದೆ ಕಾರುಗಳು ಒಂದಕ್ಕೊಂದು ಮಾತಾಡಿಕೊಂಡು ಹೋಗೋದು ಕಡ್ಡಾಯ ಹಾಗಿದ್ರೆ ಏನಿದು ಗಡಕರಿ ಪ್ಲಾನ್ ವಾಹನಗಳು ಒಂದಕ್ಕೊಂದು ಕಮ್ಯುನಿಕೇಟ್ ಮಾಡಿಕೊಳ್ಳೋಕೆ ಹೇಗೆ ಸಾಧ್ಯ ಭಾರತದ ಟ್ರಾಫಿಕ್ ಇದು ಸೆಟ್ ಆಗುತ್ತಾ.
ಕಾರುಗಳ ಪ್ಲಾನ್ ಇತ್ತೀಚಿಗೆ ನಮ್ಮ ಸಿನಿಮಾ ಇಂಡಸ್ಟ್ರಿಗೆ ಅಲುಗಾಡೋ ಕಾರುಗಳ ಮೇಲೆ ಮೋಹ ಆದ್ರೆ ನಿತಿನ್ ಗಡ್ಡಕರಿ ಅವರಿಗೆ ಈಗ ಮಾತಾಡೋ ಕಾರುಗಳ ಮೇಲೆ ಮೋಹ ಬಂದುಬಿಟ್ಟಿದೆ ಬರಲೇಬೇಕು ಅಂತ ಹೇಳ್ತಾ ಇದ್ದಾರೆ ಭಾರತದ ರಸ್ತೆಗಳ ಹಣೆ ಬರಹವನ್ನೇ ಚೇಂಜ್ ಮಾಡೋಕೆ ಹೊರಟಿರೋ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರ ಬತ್ತಳಿಕೆಯಿಂದ ಬಂದಿರೋ ಹೊಸ ಅಸ್ತ್ರ ಇದು ಇಷ್ಟು ವರ್ಷ ಬರಿ ರಸ್ತೆಗಳನ್ನ ಅಗಲ ಮಾಡೋದು ಹೈವೆ ಕಟ್ಟೋದರಲ್ಲಿ ಬಿಸಿಯಾಗಿದ್ದ ರೋಡ್ ಮಿನಿಸ್ಟರ್ ನಿತಿನ್ ಗಡ್ಕರಿ ರು ಈಗ ರೋಡ್ ಸೇಫ್ಟಿ ಕಡೆಗೆ ಫುಲ್ ಫೋಕಸ್ ಮಾಡ್ತಾ ಇದ್ದಾರೆ. ರೀಸೆಂಟ್ಆಗಿ ನಡೆದ ಉನ್ನತ ಮಟ್ಟದ ಸಾರಿಗೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಗಡ್ಕರಿ ಒಂದು ಬಿಗ್ ಬಾಂಬ್ಸ್ ಸಿಡಿಸಿದ್ದಾರೆ. ಅದೇನು ಅಂದ್ರೆ ವೆಹಿಕಲ್ ಟು ವೆಹಿಕಲ್ ಕಮ್ಯುನಿಕೇಶನ್ ಅಂದ್ರೆ ವಿ ಟು ವಿ ಟೆಕ್ನಾಲಜಿ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಮನುಷ್ಯರು ನಾವು ಹೇಗೆ ರಸ್ತೆಯಲ್ಲಿ ಹೋಗುವಾಗ ಹ ನೋಡ್ಕೊಂಡು ಹೋಗಯ್ಯ ಸ್ವಲ್ಪ ಸೈಡ್ ಕೊಡಿ ಸಾರ್ ಹ ಕಾಣಲ್ವೇನೋ ಅಂತ ಬಾಯಲ್ಲಿ ಮಾತಾಡಿಕೊಂಡು ಸ್ಟ್ರೆಸ್ ಮಾಡಕೊಂಡು ಹೋಗ್ತಿವೋ ಅದನ್ನ ಆಟೋಮ್ಯಾಟಿಕಲಿ ವಾಹನಗಳು ಪರಸ್ಪರ ಮಾಡಿಕೊಂತಾ ಹೋಗ್ತಾವೆ ಕಮ್ಯುನಿಕೇಶನ್ ಅನ್ನ ಮಾಡಿಕೊಂಡು ಹೋಗಬೇಕು.
ಸರ್ಕಾರದ ಪ್ಲಾನ್ ಪ್ರಕಾರ 2026ರ ಹೊತ್ತಿಗೆ ಭಾರತದಲ್ಲಿ ತಯಾರಾಗು ವಾಹನಗಳಲ್ಲಿ ಈ ಟೆಕ್ನಾಲಜಿಯನ್ನ ಕಡ್ಡಾಯ ಮಾಡೋ ಸಾಧ್ಯತೆ ಇದೆ ಅಂದ್ರೆ ನೀವು ಹೊಸ ಬೈಕ್ ತಗೊಳಿ ಕಾರ್ ತಗೊಳಿ ಲಾರಿ ತಗೊಳಿ ಅದರಲ್ಲಿ ಇನ್ಬಿಲ್ಟ್ ಆಗಿ ಈ ಸಿಸ್ಟಮ್ ಬಂದೇ ಬರುತ್ತೆ ಹಾಗಿದ್ರೆ ಏನಿದು ವಿಟುವಿ ಇದು ಹೇಗೆ ಕೆಲಸ ಮಾಡುತ್ತೆ ಕಾರಿಗೆ ಬಾಯಿ ಬರುತ್ತಾ ಖಂಡಿತ ಇಲ್ಲ ಇದು ರೇಡಿಯೋ ಸಿಗ್ನಲ್ಸ್ ಮೂಲಕ ನಡೆಯೋ ಸಂಭಾಷಣೆ ಹೇಗೆ ಕೆಲಸ ಮಾಡುತ್ತೆ ವಿಟುವಿ ಮ್ಯಾಜಿಕ್ ಇದನ್ನ ಅರ್ಥ ಮಾಡಿಕೊಳ್ಳೋಕೆ ನೀವು ರಾಕೆಟ್ ಸೈಂಟಿಸ್ಟ್ ಆಗಬೇಕು ಅಂತ ಏನಿಲ್ಲ ನಿಮ್ಮ ಮೊಬೈಲ್ ನಲ್ಲಿ ಬ್ಲೂಟೂತ್ ಇದೆಯಲ್ಲ ವೈಫೈ ಇದೆಯಲ್ಲ ಆಲ್ಮೋಸ್ಟ್ ಅದೇ ಕಾನ್ಸೆಪ್ಟ್ ಆದ್ರೆ ನೆಕ್ಸ್ಟ್ ಲೆವೆಲ್ ಅಷ್ಟೇ ಇದನ್ನ ಟೆಕ್ನಿಕಲ್ ಭಾಷೆಯಲ್ಲಿಡಿಎಸ್ಆರ್ ಸಿ ಡೆಡಿಕೇಟೆಡ್ ಶಾರ್ಟ್ ರೇಂಜ್ ಕಮ್ಯುನಿಕೇಶನ್ ಅಥವಾಸವಿ2ಎ ಸೆಲ್ಯುಲರ್ ವೆಹಿಕಲ್ ಟು ಎವರಿಥಿಂಗ್ ಅಂತ ಕರೀತಾರೆ ಇಲ್ಲಿ ನಿಮ್ಮ ಕಾರ್ನಲ್ಲಿ ಒಂದು ಚಿಕ್ಕ ಟ್ರಾನ್ಸ್ಮಿಟರ್ ಮತ್ತೆ ರಿಸೀವರ್ ಇರುತ್ತೆ ಇದು ನಿಮ್ಮ ಮನೆಯಲ್ಲಿರೋ ವೈಫೈ ರೌಟರ್ ತರನೇ ಕೆಲಸ ಮಾಡುತ್ತೆ.
ಆದರೆ ಸ್ವಲ್ಪ ಬೇರೆ ತರ ಅಷ್ಟೇ ಇದಕ್ಕೆ ಇಂಟರ್ನೆಟ್ ಬೇಕಾಗಿಲ್ಲ ಸಿಮ್ ಕಾರ್ಡ್ ಬೇಕಾಗಿಲ್ಲ JIO ಅಥವಾ ಏಟೆಲ್ ಟವರ್ ನೆಟ್ವರ್ಕ್ ಕೂಡ ಬೇಕಾಗಿಲ್ಲ ಅದು ಡೈರೆಕ್ಟ್ ಆಗಿ ಕಾರ್ ನಿಂದ ಕಾರ್ ಗೆ ವಾಹನದಿಂದ ವಾಹನಕ್ಕೆ ಕಮ್ಯುನಿಕೇಶನ್ ಮಾಡ್ಕೊಳ್ತಾ ಇರ್ತಾವೆ ಎರಡು ಫೋನ್ ನಡುವೆ ನೀವು ನೆಟ್ವರ್ಕ್ ಇಲ್ಲ ಅಂದ್ರೂ ಕೂಡ ನೀವು ಡೇಟಾ ಆಫ್ ಮಾಡ್ಕೊಂಡು ನೀವು ವೈಫೈ ನಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಅಂದ್ರೂ ಕೂಡ ನೀವು ನೀವು ಯಾವುದೋ ಒಂದು ದೂರ ರಿಮೋಟ್ ಪ್ಲೇಸ್ ಅಲ್ಲಿ ಇದ್ರೂ ಕೂಡ ಫೋನ್ ಟು ಫೋನ್ ನೀವು ಕಳಿಸಿಕೊಳ್ಳಲ್ವಾ ಮುಂಚೆ ಶೇರ್ ಇಟ್ ಅಂತ ಮಾಡ್ತಾ ಇದೀರಿ ಈಗ ಕ್ವಿಕ್ ಶೇರ್ ಅಂತ ಮಾಡ್ತಾ ಇದೀರಿ ಏರ್ ಡ್ರಾಪ್ ಅಂತ ಮಾಡ್ತಾ ಇದೀರಿ ಮಾಡ್ತಿದ್ದೀರಲ್ವಾ ಹೆಚ್ಚು ಕಮ್ಮಿ ಹಂಗೆ ವರ್ಕ್ ಆಗುತ್ತೆ ಇದರ ರೇಂಜ್ ಸುಮಾರು 300ಮೀಟರ್ ಅಂದ್ರೆ ಸುಮಾರು ಮೂರು ಫುಟ್ಬಾಲ್ ಮೈದಾನದಷ್ಟು ದೂರ ನಿಮ್ಮ ಕಾರು ಪ್ರತಿ ಸೆಕೆಂಡ್ಗೆ 10 ಬಾರಿ ತನ್ನ ಮಾಹಿತಿಯನ್ನ ಸುತ್ತ ಮುತ್ತ ಇರೋ ಎಲ್ಲಾ ಕಾರುಗಳಿಗೆ ಕಳಿಸ್ತಾ ಇರುತ್ತೆ. ಏನೇನು ಮಾಹಿತಿಯನ್ನ? ನಾನು ಎಲ್ಲಿದ್ದೀನಿ, ಲೊಕೇಶನ್ ನನ್ನ ಸ್ಪೀಡ್ ಎಷ್ಟು? ನಾನು ಯಾವ ಕಡೆಗೆ ಹೋಗ್ತಾ ಇದ್ದೀನಿ.
ಡೈರೆಕ್ಷನ್ ಏನು? ನಾನು ಬ್ರೇಕ್ ಹಾಕ್ತಾ ಇದ್ದೀನಾ? ಬ್ರೇಕಿಂಗ್ ಸ್ಟೇಟಸ್ ಏನು? ಈ ಡೇಟಾ ಗಾಳಿಯಲ್ಲಿ ರೇಡಿಯೋ ವೇವ್ಸ್ ಮೂಲಕ ಹೋಗಿ ಪಕ್ಕದ ಕಾರಿನ ಕಂಪ್ಯೂಟರ್ಗೆ ಮನುಷ್ಯರ ಕಿವಿಗಲ್ಲ. ಇನ್ನೊಂದು ಕಾರಲ್ಲೂ ಹಂಗೆ ಇರುತ್ತಲ್ಲ ಅದರ ರಿಸೀವರ್ಗೆ ಕಂಪ್ಯೂಟರ್ಗೆ ತಲುಪುತಾ ಇರುತ್ತೆ. ಅಲ್ಲಿರೋ ಕಂಪ್ಯೂಟರ್ ತಕ್ಷಣ ಲೆಕ್ಕ ಹಾಕುತ್ತೆ ಓ ಆ ಕಾರು ಸಡನ್ಆಗಿ ಬ್ರೇಕ್ ಹಾಕ್ತು ನಾನಿರೋ ಸ್ಪೀಡ್ಗೆ ಹಿಂಗೆ ಹೋದ್ರೆ ಖಂಡಿತ ಅಪಘಾತ ಆಗುತ್ತೆ ಗುತ್ತೀನಿ ಅಂತ ಗೊತ್ತಾಗುತ್ತೆ ಅದಕ್ಕೆ ಆಗ ನಿಮ್ಮ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಬೀಪ್ ಬೀಪ್ ಬೀಪ್ ಅಂತ ಸೌಂಡ್ ಬರುತ್ತೆ ರೆಡ್ ಲೈಟ್ ಹದ್ಕೊಳ್ಳುತ್ತೆ ಕೆಲ ಅಡ್ವಾನ್ಸ್ಡ್ ಕಾರುಗಳಲ್ಲಿ ಆಟೋಮ್ಯಾಟಿಕಲಿ ಬ್ರೇಕ್ ಕೂಡ ಅಪ್ಲೈ ಆಗುತ್ತೆ ಎಡಾಸ್ ಗೂ ಇದಕ್ಕೂ ಏನು ವ್ಯತ್ಯಾಸ ಅಲ್ರಿ ಆಲ್ರೆಡಿ ಮಾರ್ಕೆಟ್ನಲ್ಲಿ ಎಡ್ಯಾಶ್ ಇದೆಯಲ್ಲ ಲೆವೆಲ್ಟ ತನಕ ಇಂಡಿಯಾದಲ್ಲಿ ಬಂದಾಗಿದೆಯಲ್ವಾ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ xಯುವಿ 7ಓವರ್ ಕಾರ್ನ ಹಾರಿಯರ್ ಈತರ ಸುಮಾರು ಕಾರ್ಗಳಲ್ಲಿ ಇದಾವಲ್ಲ ಅದು ಆಟೋಮೆಟಿಕಲಿ ಬ್ರೇಕ್ ಹಾಕುತ್ತಲ್ಲ ಫಾರ್ವರ್ಡ್ ಕೊಲಿಷನ್ ಅವಾಯ್ಡನ್ ಸಿಸ್ಟಮ್ ಇದೆ ರಿಯರ್ ಎಂಡ್ ಕೊಲಿಷನ್ ಅವಾಯ್ಡನ್ ಸಿಸ್ಟಮ್ ಕೂಡ ಇದೆ ಫ್ರಂಟ್ ಬ್ಯಾಕ್ ರೆಡಾರ್ಸ್ ಎಲ್ಲ ಇದೆಯಲ್ಲ ಅಂತ ನೀವು ಕೇಳಬಹುದು ಇದು ಯಾಕೆ ಹೊಸದು ಏನಕ್ಕೆ ನಿತಿನ್ ಗಡ್ಡಕರಿ ಅವರಿಗೆ ಬಂತು ಅಂತ ಗುಡ್ ಕ್ವಶ್ಚನ್ ಆದರೆ ಎ ಡ್ಯಾಶ್ ಗೂ ಮತ್ತು ವಿಟುವಿ ಗೂ ಆನೆಗೂ ಆಡಿಗೂ ಇರೋ ವ್ಯತ್ಯಾಸ ಇದೆ ಎಡ್ಯಾಶ್ ಅನ್ನೋದು ನಿಮ್ಮ ಕಣ್ಣುಗಳ ತರ ಕಾರಿಗೆ ಕ್ಯಾಮೆರಾ ಮತ್ತು ರೇಡಾರ್ ಇರುತ್ತೆ ಅದಕ್ಕೆ ಕಣ್ಣಿಗೆ ಕಾಣಿಸುವುದು ಮಾತ್ರ ಗೊತ್ತಾಗುತ್ತೆ ಮುಂದಿರೋ ಸೋ ಗಾಡಿ ಕ್ಯಾಮೆರಾ ಕಣ್ಣಿಗೆ ಅಥವಾ ರೆಡಾರ್ ರೇಂಜ್ಗೆ ಸಿಕ್ಕಿದ್ರೆ ಮಾತ್ರ ಬ್ರೇಕ್ ಆಗುತ್ತೆ.
ವಿ ಟುವಿ ಅನ್ನೋದು ಸಿಕ್ಸ್ತ್ ಸೆನ್ಸ್ ಇದ್ದ ಹಾಗೆ ಎ ಡ್ಯಾಶ್ ಗೆ ಒಂದು ಬಿಲ್ಡಿಂಗ್ ಇದೆ ಕಾರ್ ಇಲ್ಲಿ ಬರ್ತಾ ಇದೆ ಇನ್ನೊಂದು ಗಾಡಿ ಇಲ್ಲಿಂದ ಬರ್ತಾ ಇದೆ ಅಂತ ಅಂಕೊಳ್ಳಿ ಗೊತ್ತಾಗಲ್ಲ ಅದಕ್ಕೆ ರೇಡರ್ಗೂ ಸಿಗೋದಿಲ್ಲ ಅದು ಬಿಲ್ಡಿಂಗ್ ಅಡ್ಡ ಇರುತ್ತೆ ಕ್ಯಾಮೆರಾ ಕಣ್ಣಿಗೂ ಕಾಣೋದಿಲ್ಲ ಹತ್ರ ಬರೋತಂಕ ಗೊತ್ತಾಗಲ್ಲ ಅಲ್ವಾ ಅಥವಾ ಒಂದು ಶಾರ್ಪ್ ಟರ್ನ್ ಇದೆ ಅಂತ ಅಂಕೊಳ್ಳಿ ಹಿಂಗೆ ಬಂದು ಹಿಂಗೆ ತಗೊಂಡು ಟರ್ನ್ ಇದೆ ಅಂತ ಅಂಕೊಳ್ಳಿ ನಿಮ್ಮ ಗಾಡಿ ಇಲ್ಲಿಂದ ಬರ್ತಾ ಇದೆ ಅಂತ ಅಂಕೊಳ್ಳಿ ಇನ್ನೊಂದು ಗಾಡಿ ಇಲ್ಲಿಂದ ಬರ್ತಾ ಇದೆ ಅಂತ ಅಂಕೊಳ್ಳಿ ಹತ್ರ ಹತ್ರ ಬರೋ ತನಕ ಗೊತ್ತಾಗಲ್ವಲ್ಲ ಆದರೆ ವಿ ಟುವಿ ಹಾಗಲ್ಲ ಗೋಡೆಗಳನ್ನ ಭೇದಿಸಿಕೊಂಡು ಇದರ ಸಿಗ್ನಲ್ ಗಳು ವರ್ಕ್ ಆಗ್ತವೆ ನಿಮ್ಮ ಮುಂದೆ ಲಾರಿ ಇದ್ರೆ ಲಾರಿ ಮುಂದೆ ಏನಿದೆ ಅನ್ನೋದರ ಜೊತೆಗೂ ಕೂಡ ಇದಕ್ಕೆ ಕಮ್ಯುನಿಕೇಶನ್ ಆಗ್ತಾ ಇರುತ್ತೆ ಓವರ್ಟೇಕ್ ಮಾಡೋ ಟೈಮ್ನಲ್ಲೆಲ್ಲ ಬಹಳ ಹೆಲ್ಪ್ ಆಗುತ್ತೆ ಸೋ ಎ ಡ್ಯಾಶ್ ಅನ್ನೋದು ರಿಯಾಕ್ಟಿವ್ ನೋಡಿ ರಿಯಾಕ್ಟ್ ಮಾಡೋದು ಆದರೆ v2 ಟುವಿ ಅನ್ನೋದು ಪ್ರೊ ಆಕ್ಟಿವ್ ಮುಂಚಿತವಾಗಿನೇ ಎ ಡ್ಯಾಶ್ ಗೂ ಮೀರಿ ಏರಿಯಾವನ್ನ ಸ್ಕ್ಯಾನ್ ಮಾಡ್ತಿರುತ್ತೆ 300ಮ ಅಂದ್ರೆ ಕಮ್ಮಿ ಅಲ್ಲ ಇದು ಇವೆರಡು ಸೇರಿದಾಗ ರಸ್ತೆ ಮೇಲೆ ಅಪಘಾತ ಮಾಡೋದೇ ಕಷ್ಟ ಆಗಬಹುದು ಉದ್ದೇಶಪೂರ್ವಕವಾಗಿ ಅಪಘಾತ ಮಾಡಬೇಕು ಅಂದ್ರು ಕೂಡ ಕಷ್ಟ ಆಗಬಹುದು.
ಕಾಂಪ್ಲಿಕೇಟೆಡ್ ಅಂತ ಅನ್ನಿಸ್ತಾ ಇದೀಯಾ ತಲೆ ಕೆಡಿಸಿಕೊಳ್ಳಕ್ಕೆ ಹೋಗ್ಬೇಡಿ ಇನ್ನು ಕ್ಲಿಯರ್ ಆಗಿ ಅರ್ಥ ಮಾಡಿಸ್ತಾ ನಿಮಗೆ ಹೋಗ್ತೀವಿ ನಾವು ಇದು ಹೇಗೆ ಪ್ರಾಣ ಉಳಿಸುತ್ತೆ ಅಂತ ಯಮನ ದಾರಿ ಕಾಣಲ್ಲಾದ್ರೆ ಸಿಗ್ನಲ್ ಸಿಗುತ್ತೆ ಯಾವ ಯಾವ ಸಂದರ್ಭದಲ್ಲಿ ಸಂಜೀವನಿ ಆಗುತ್ತೆ ಅಂತ ಕ್ವಿಕ್ ಆಗಿ ಇನ್ನೊಂದು ಸಲ ಅರ್ಥ ಮಾಡ್ಕೊಳ್ತಾ ಹೋಗೋಣ ಸನ್ನಿವೇಶ ನಂಬರ್ ಒನ್ ದ ಡೆಡ್ಲಿ ಫಾಗ್ ಉತ್ತರ ಭಾರತದ ಯಮುನಾ ಎಕ್ಸ್ಪ್ರೆಸ್ ವೇ ಅಥವಾ ನಮ್ಮ ಕಡೆ ಚಳಿಗಾಲದ ಬೆಳಗಿನ ಜಾವಾ ಹೈವೆಗಳಲ್ಲಿ ದಟ್ಟ ಮಂಜಿರುತ್ತೆ 10 ಅಡಿ ದೂರ ದೂರ ಇರೋ ಲಾರಿ ಕೂಡ ಕಾಣಿಸಲ್ಲ ಮುಂದೆ ಹೋಗ್ತಿರೋ ಲಾರಿ ಡ್ರೈವರ್ ಸಡನ್ಆಗಿ ಬ್ರೇಕ್ ಹಾಕ್ತಾರೆ ನಿಮಗೆ ಲಾರಿ ಕಾಣೋದೇ ಇಲ್ಲ ಬ್ರೇಕ್ ಲೈಟ್ ಕೂಡ ಕಾಣಲ್ಲ ಗುದ್ದುಬಿಡೋ ಚಾನ್ಸಸ್ ಇರುತ್ತೆ ಅವಾಗ ನಿಮ್ಮ ಹಿಂದಿನವನು ಬಂದು ನಿಮಗೆ ಗುದ್ತಾನೆ ಇದೆ ಪೈಲಪ್ ರಾಶಿ ರಾಶಿ ವಾಹನಗಳ ಸರಣಿ ಅಪಘಾತ ಆದರೆ ವಿಟುವಿ ಇದ್ರೆ ಮುಂದಿನ ಲಾರಿ ಬ್ರೇಕ್ ಹಾಕಿದ ತಕ್ಷಣ ಆ ಲಾರಿಯಿಂದ ಒಂದು ರೇಡಿಯೋ ಸಿಗ್ನಲ್ ಬೆಳಕಿನ ವೇಗದಲ್ಲಿ ನಿಮ್ಮ ಕಾರಿಗೆ ಬರುತ್ತೆ ನಿಮ್ಮ ಕಣ್ಣಿಗೆ ಲಾರಿ ಕಾಣದೆ ಇದ್ರೂ ಕೂಡ ನಿಮ್ಮ ಕಾರಿನ ಡಿಸ್ಪ್ಲೇ ಮೇಲೆ ಕಾಶನ್ ವೆಹಿಕಲ್ ಅಹೆಡ್ ಬ್ರೇಕಿಂಗ್ ಅನ್ನೋ ವಾರ್ನಿಂಗ್ ಬರುತ್ತೆ.
ನೀವು ಸೇಫ್ ಆಗ್ತೀರಿ ಅದೇ ರೀತಿ ಎಲ್ಲಾ ಕಾರುಗಳಿಗೂ ಹೋಗಿರುತ್ತೆ ಸರಣಿ ಅಪಘಾತ ಕ್ಯಾನ್ಸಲ್ ನೆಕ್ಸ್ಟ್ ಸನ್ನಿವೇಶ ನಂಬರ್ ಟೂ ಬ್ಲೈಂಡ್ ಸ್ಪಾಟ್ಸ್ ನೀವೊಂದು ದೊಡ್ಡ ಬಿಲ್ಡಿಂಗ್ ಕಾರ್ನರ್ ಅಥವಾ ಬೆಟ್ಟದ ತಿರುವಿನಲ್ಲಿ ಟರ್ನ್ ತಗೊಳ್ತಾ ಇರ್ತೀರಾ ಆ ಕಡೆಯಿಂದ ಯಾವುದೋ ಹುಚ್ಚು ವಾಹನ ರಾಂಗ್ ಸೈಡ್ನಲ್ಲಿ ಸ್ಪೀಡ್ ಆಗಿ ನುಕ್ಕೊಂಡು ಬರ್ತಾ ಇರುತ್ತೆ ಗೋಡೆ ಅಥವಾ ಮರಗಿಡ ಅಡ್ಡ ಇರೋದ್ರಿಂದ ಅಥವಾ ಮಣ್ಣಿನ ದಿಣ್ಣೆ ಅಡ್ಡ ಇರೋದ್ರಿಂದ ಬೆಟ್ಟಗಳ ನಡುವೆ ಆಗಿರೋದ್ರಿಂದ ಕ್ಯಾಮೆರಾ ಅಥವಾ ಎ ಡ್ಯಾಶ್ ಗೆ ಅದು ಕಾಣಲ್ಲ ಇದನ್ನೇ ನಾನ್ ಲೈನ್ ಆಫ್ ಸೈಟ್ ಅಂತಾರೆ ಆದರೆ ರೇಡಿಯೋ ವೇವ್ಸ್ ಗೋಡೆ ಮರ ಬಿಲ್ಡಿಂಗ್ ಎಲ್ಲವನ್ನ ತೂರ್ಕೊಂಡು ಪಾಸ್ ಆಗುತ್ತೆ ಸೋ ನೀವು ಟರ್ನ್ ತಗೊಳೋ ಮುಂಚೆನೆ ಡೋಂಟ್ ಗೋ ವೆಹಿಕಲ್ ಅಪ್ರೋಚಿಂಗ್ ಅಂತ ನಿಮ್ಮ ಸ್ಕ್ರೀನ್ ಮೇಲೆ ಮೆಸೇಜ್ ಬಂದ್ಬಿಡುತ್ತೆ ಜಸ್ಟ್ ಇಮ್ಯಾಜಿನ್ ಈ ಫೀಚರ್ ಬಂದಾಗ ಘಾಟ್ ಸೆಕ್ಷನ್ ಗಳಲ್ಲಿ ಎಷ್ಟು ಅಪಘಾತಗಳನ್ನ ತಪ್ಪಿಸಬಹುದು ಅಂತ ಹಾಗೆ ನೆಕ್ಸ್ಟ್ ಸನ್ನಿವೇಶ ಓವರ್ಟೇಕಿಂಗ್ ರಿಸ್ಕ್ ನೀವು ಒಂದು ಬಸ್ ಅಥವಾ ಟ್ರಕ್ ಅನ್ನ ಓವರ್ಟೇಕ್ ಮಾಡೋಕೆ ಟ್ರೈ ಮಾಡ್ತಾ ಇರ್ತೀರಾ ಆದ್ರೆ ಎದುರುಗಡೆಯಿಂದ ಬರ್ತಿರೋ ಗಾಡಿ ನಿಮಗೆ ಕಾಣ್ತಿರೋದಿಲ್ಲ ಓ ಕಾಲಿದೆ ಅಂಕೊಂಡು ನುಗ್ಗೋಕೆ ಹೋಡ್ತೀರಾ ಆದ್ರೆ ಎಷ್ಟೋ ಸಲಿ ಇದರಿಂದ ಅಪಘಾತ ಆಗುತ್ತೆ ಆದ್ರೆ ವಿಟು ವೇ ಸಿಸ್ಟಮ್ ಇದನ್ನ ಕ್ಯಾಲ್ಕುಲೇಟ್ ಮಾಡಿ ಹೇಳುತ್ತೆ.
ಬೇಡ ಇವಾಗ ಓವರ್ಟೇಕ್ ಬೇಡ ಆ ಕಡೆಯಿಂದ ಗಾಡಿ ಬರ್ತಾ ಇದೆ ಗ್ಯಾಪ್ ಸಾಲಲ್ಲ ಟೈಮ್ ಸಾಲಲ್ಲ ಅದರ ಸ್ಪೀಡ್ ಕೂಡ ಜಾಸ್ತಿ ಇದೆ ನೀವು ವೇಟ್ ಮಾಡೋದು ಒಳ್ಳೇದು ಅಂತ ಅದ್ಭುತವಾಗಿದೆ ಅಲ್ಲ ಕೇಳಕೆ ಸರ್ವೇ ಭವಂತು ಸುಖಿನಹ ಅನ್ನೋ ಹಾಗೆ ರಸ್ತೆ ಮೇಲೆ ಎಲ್ಲರೂ ಸೇಫ್ ಆಗಲಿ ಅನ್ನೋದು ಇದರ ಉದ್ದೇಶ ಐಡಿಯಾ ಸೂಪರ್ ಆದರೆ ರಿಯಾಲಿಟಿ ಏನು ಗಡಕರಿ ಅವರ ಕನಸು ದೊಡ್ಡದು ಉದ್ದೇಶ ಒಳ್ಳೆದೆ ಜನರ ಜೀವ ಉಳಿಬೇಕು ಅಂತ ಆದರೆ ರಿಯಾಲಿಟಿ ಗ್ರೌಂಡ್ ಅಲ್ಲಿ ನಿಂತು ನೋಡಿದಾಗ ಕೆಲ ಪ್ರಶ್ನೆಗಳು ಭೂತ ರೀತಿ ಕಾಣುತವೆ ಮೊದಲನೇ ಸವಾಲು ಹಳೆ ವಾಹನಗಳ ಕಥೆ ಏನು ಅವುಗಳಿಗೆ ಮಾತಾಡಕ್ಕೆ ಬರಲ್ವಲ್ಲ ಹಳೆ ಗಾಡಿಗಳಿಗೆ ಅಂತ 2026 ರಿಂದ ಬರೋ ಹೊಸ ಕಾರುಗಳಿಗೆ ಡಿವೈಸ್ ಹಾಕ್ತಾರೆ. ಆದರೆ ಈಗ ಆಲ್ರೆಡಿ ರಸ್ತೆ ಮೇಲೆ ಓಡಾಡ್ತಿರೋ ಕೋಟ್ಯಂತರ ಹಳೆ ಕಾರುಗಳು ಲಾರಿಗಳು ಬಸ್ಗಳ ಗತಿ ಏನು ಒಂದು ರಿಸರ್ಚ್ ಪ್ರಕಾರ ಈ ವಿಟುವಿ ಸಿಸ್ಟಮ್ ಎಫೆಕ್ಟಿವ್ ಆಗಿ ಕೆಲಸ ಮಾಡಬೇಕು ಅಂದ್ರೆ ರಸ್ತೆ ಮೇಲಿರೋ ಕನಿಷ್ಠ 50% ವಾಹನಗಳಲ್ಲಾದರೂ ಈ ಡಿವೈಸ್ ಇರಲೇಬೇಕು ಎದುರಿಗಿರೋ ಲಾರಿಯಲ್ಲಿ ಇಲ್ಲ ಅಂದ್ರೆ ಆ ಲಾರಿ ನನ್ನ ಕಾರಿಗೆ ಕಾಣಿಸೋದೇ ಇಲ್ಲ ಆಕ್ಸಿಡೆಂಟ್ ಆಗೋದು ಹಾಗೆ ಹೋಗಬಹುದು.
ಹಳೆ ವಾಹನಗಳಿಗೂ ಕಡ್ಡಾಯವಾಗಿ ಹಾಕಿಸೋಕೆ ಆಗುತ್ತಾ ಜನ ಇದಕ್ಕೆ ಒಪ್ತಾರಾ ಅದು ಮಿಲಿಯನ್ ಡಾಲರ್ ಪ್ರಶ್ನೆ ನೆಕ್ಸ್ಟ್ ಸವಾಲ್ ಏನು ಗೊತ್ತಾ ಟೂ ವೀಲರ್ಸ್ ಭಾರತ ಕಾರುಗಳ ರಾಷ್ಟ್ರ ಇನ್ನು ಆಗಿಲ್ಲ ನಿಧಾನಕ್ಕೆ ಆಗ್ತಿದೆ ಬಟ್ ತುಂಬಾ ಟೈಮ್ ಬೇಕು ಸದ್ಯಕ್ಕೆ ಇದು ಬೈಕ್ಗಳ ರಾಷ್ಟ್ರ ನಮ್ಮ ರೋಡ್ ಆಕ್ಸಿಡೆಂಟ್ ಗಳಲ್ಲಿ ಅತಿ ಹೆಚ್ಚು ಪ್ರಾಣ ಕಳ್ಕೊಳ್ಳೋದು ಬೈಕ್ ಸವಾರರು ಕಾರುಗಳಿಗೆ ಐದರಿಂದ 7000 ರೂಪಾಯ ಡಿವೈಸ್ ಹಾಕಬಹುದು ಆದರೆ 70ಸಾದ ಬೈಕ್ಗೆ 7000ದ ಡಿವೈಸ್ ಹಾಕಿದ್ರೆ ಕಾಸ್ಟ್ ಬಂಪ್ ಅಪ್ ಆಗುತ್ತೆ ಬೈಕ್ಗಳಲ್ಲಿ ಈವಿಟುವಿ ಇಲ್ಲ ಅಂದ್ರೆ ಈ ಪೂರ್ತಿ ಪ್ರಾಜೆಕ್ಟ್ ಅರ್ಧ ಆದಹ ಹಾಗೆ ಅಷ್ಟೇ ಮೂರನೇ ಸವಾಲು ಡೇಟಾ ಓವರ್ಲೋಡ್ ವಿದೇಶಗಳಲ್ಲಿ ಟ್ರಾಫಿಕ್ ಶಿಸ್ತಲ್ಲಿ ಇರುತ್ತೆ ಆದರೆ ನಮ್ಮ ಬೆಂಗಳೂರು ಟ್ರಾಫಿಕ್ ಅಥವಾ ಭಾರತದಲ್ಲಿ ದಲ್ಲಿ ಹೆಚ್ಚಿನ ಜಾಗಗಳಲ್ಲಿ ಟ್ರಾಫಿಕ್ ಬಗ್ಗೆ ಮಾತಾಡದೇ ಬೇಡ ಒಂದೇ ಸಿಗ್ನಲ್ ನಲ್ಲಿ 200 ಗಾಡಿ ಅಕ್ಕ ಪಕ್ಕ ನಿಂತಿರ್ತವೆ ಎಲ್ಲಾ 200 ಗಾಡಿಗಳು ಒಟ್ಟಿಗೆ ನಾನೆಲ್ಲಿದ್ದೀನಿ ನಾನಎಲ್ಲಿದ್ದೀನಿ ಅಂತ ಹೇಳಿ ಮಾತಾಡಿಕೊಂಡು ಆಗ ಆ ಎಲ್ಲಾ 200 ಗಾಡಿಗಳ ಒಟ್ಟಿಗೆ ನಾನ ಇಲ್ಲಿದೀನಿ ನಾನ ಅದು ಮಾಡ್ತಿದೀನಿ ಇಲ್ಲಿದೀನಿ ಅದು ಮಾಡ್ತಿದೀನಿ ಅಂತ ಮೆಸೇಜ್ ಕಳಿಸಿಕೊಳ್ಳೋಕೆ ಶುರು ಮಾಡಿದ್ರೆ ಎಲ್ಲಾ ಗಾಡಿಗಳ ಕಂಪ್ಯೂಟರ್ಗೆ ತಲೆ ಕೆಡಲ್ವಾ ಅದು ಹೆಂಗೆ ಮ್ಯಾನೇಜ್ ಮಾಡ್ತವೆ ಅನ್ನೋದು ಈಗ ಪ್ರಶ್ನೆ ಇದೆ. ಇದನ್ನ ಟೆಕ್ನಿಕಲ್ ಲ್ಯಾಂಗ್ವೇಜ್ ನಲ್ಲಿ ನೆಟ್ವರ್ಕ್ ಕಂಜೆಶನ್ ಅಂತಾರೆ.
ನಮ್ಮ ಇಂಜಿನಿಯರ್ಗಳು ಇದನ್ನ ಹೇಗೆ ಸಾಲ್ವ್ ಮಾಡ್ತಾರೆ ನೋಡಬೇಕು ಟ್ರಾಫಿಕ್ ಕಂಡಿಷನ್ಸ್ ಅಲ್ಲಿ ಮೇ ಬಿ ಲೋ ಸ್ಪೀಡ್ ಅಲ್ಲಿ ಅವಶ್ಯಕತೆ ಇಲ್ಲ ಅಂತ ಹಂಗೆ ಮಾಡಬಹುದು ಎಡಸ್ ಗಳಲ್ಲಿ ಏನಾಗುತ್ತೆ ಹೇಳಿ ನಿಮಗೆ ಲೇನ್ ಕೀಪ್ ಅಸಿಸ್ಟ್ ಎಲ್ಲ 60 ಕಿಲೋಮೀಟ ದಾಟಿದ ಮೇಲೆ ಬರುತ್ತೆ ಅಲ್ವಾ ಲೇನ್ ನಲ್ಲೇ ನಿಮ್ಮನ್ನ ಇಡುವಂತ ಎಡ್ಯಾಸ್ ಫೀಚರ್ಸ್ ಎಲ್ಲ 60 ಕೆಳಗೆ ಬಂದ್ರೆ ಆಟೋಮ್ಯಾಟಿಕಲಿ ಆಫ್ ಆಗುತ್ತೆ ಲೇನ್ ಕೀಪ್ ಅಸಿಸ್ಟ್ ಅಲ್ವಾ ಆತರ ಮೋಸ್ಟ್ಲಿ ಲೋ ಟ್ರಾಫಿಕ್ ಕ್ರಾಲಿಂಗ್ ಸ್ಪೀಡ್ ಎಲ್ಲ ಹರ್ಕೊಂಡು ಹೋಗೋ ಲೋ ಸ್ಪೀಡ್ ಅಲ್ಲಿ ಸಿಸ್ಟಮ್ಸ್ ಎಲ್ಲ ಆಫ್ ಆಗ್ಬಿಡಬಹುದು ಅವಶ್ಯಕತೆನು ಅಷ್ಟೊಂದು ಇಲ್ಲ ನಿಧಾನ ನಿಧಾನ ಮೂವ್ ಆಗ್ತಿರೋ ಟೈಮ್ನಲ್ಲಿ ಹೆಚ್ಚಿನ ಟೈಮ್ನಲ್ಲಿ ಅಪಘಾತ ಆಗಲ್ಲ ಹಂಗಿದ್ರೂ ಅಪಘಾತ ಮಾಡೋರು ಮಾಡ್ತಾ ಇರ್ತಾರೆ ಅದ ಪ್ರಮಾಣ ತುಂಬಾ ಕಮ್ಮಿ ಅಲ್ವಾ ಆದ್ರೂ ಕೂಡ ಮ್ಯಾಕ್ಸಿಮಂ್ ಏನಾಗುತ್ತೆ ಸಣ್ಣ ಪುಟ್ಟ ಟಚ್ ಅಪ್ ಅಷ್ಟೇ ಆಗುತ್ತೆ ಜೀವ ಹೋಗುವಂತ ಕ್ರಶಿಂಗ್ ಕ್ರಾಶಸ್ ಕಮ್ಮಿ ಅಲ್ವಾ ಸ್ಲೋ ಮೂವಿಂಗ್ ಟ್ರಾಫಿಕ್ ಅಲ್ಲಿ ಸೋ ಬಿಲೋ 50 ಕಿಲೋಮೀ ಪ ಹರ್ ಸ್ಪೀಡ್ ಆಫ್ ಕೊಟ್ರೆ ಮುಗಿದು ಹೋಯ್ತು.
ಈ ವಿಟುವಿ ಫೀಚರ್ ಅನ್ನ ಕೆಸೆಗೆ ಕತ್ತರಿ ಬೀಳುತ್ತಾ ಎಸ್ ಅಂತಿಮವಾಗಿ ಕಾಮನ್ ಮ್ಯಾನ್ಗೆ ಪ್ರೈಸ್ ಜಾಸ್ತಿ ಆಗುತ್ತಾ ಈಗ ಆಲ್ರೆಡಿಬಿಎಸ್ಸ ಬಂತು ಸಿಕ್ಸ್ ಏರ್ ಬ್ಯಾಗ್ಸ್ ಬಂತು ಅಂತ ಕಾರಿನ ರೇಟ್ ಜಂಪ್ ಆಗಿದೆ. ಈಗ ಈ ವಿ ಟು ವಿ ಡಿವೈಸ್ ಮ್ಯಾಂಡೇಟರಿ ಅಂದ್ರೆ ಕಾಸ್ಟ್ ಸ್ವಲ್ಪ ಜಂಪ್ ಆಗೆ ಆಗುತ್ತೆ. ತಜ್ಞರ ಪ್ರಕಾರ ಈ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅಳವಡಿಸೋಕೆ ವಾಹನ ಒಂದಕ್ಕೆ ಕನಿಷ್ಠ 5000ದಿಂದ 15000 ರೂಪಾಯ ಹೆಚ್ಚುವರಿ ಖರ್ಚಾಗಬಹುದು. ಇದು ಟೂ ವೀಲರ್ ಗಳಿಗೆ ದೊಡ್ಡ ಹೊಡ್ತ 80ಸಾದ ಬೈಕ್ ಗೆ ಈ ಟೆಕ್ನಾಲಜಿಗೋಸ್ಕರ ಐದರಿಂದ 10ಸಾ ಎಕ್ಸ್ಟ್ರಾ ಕೊಡಿ ಅಂದ್ರೆ ಜನ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ನೋಡಬೇಕು. ಆಕ್ಚುಲಿ ಒಳ್ಳೆದು ಜೀವ ಉಳಿಸ್ಕೊಬೇಕು. ಬೈಕ್ ಅಲ್ಲೇ ಅತಿ ಹೆಚ್ಚು ಅನಾಹುತ ಆಗೋದು ಬಿದ್ರೆ ಯಾವುದೇ ಸೇಫ್ಟಿಗೆ ಅಂತದ್ದು ಏನು ಇರೋದಿಲ್ಲ ಬೈಕ್ ಅಲ್ಲಿ ಕೆಲವರಿಗಂತೂ ಹೆಲ್ಮೆಟ್ ಹಾಕಿರೋದಿಲ್ಲ ಜಾಕೆಟ್ ರೈಡಿಂಗ್ ಸೂಟ್ ಎಲ್ಲ ಹಾಕೊಂಡು ಹೋಗ್ತಿರ್ತಾರೆ ಸ್ವಲ್ಪ ಬಿದ್ರುನು ಏನಿಲ್ಲ ಅಂದ್ರೂ ಪೂರ ಕಿತ್ುಕೊಂಡು ಹೋಗುತ್ತೆ ಬಾಡಿಯಲ್ಲಿ ಅಲ್ವಾ ಮಿನಿಮಮ್ ಅಷ್ಟಆಗುತ್ತೆ ಹಾಗಾಗಿ ಸ್ವಲ್ಪ 50000 ರೂಪಾ ಜಾಸ್ತಿ ಆದ್ರೂ ಕೂಡ ಒಂತರ ಫೋರ್ಸ್ ಮಾಡಿದ್ರು ಕೂಡ ಒಳ್ಳೇದೆ ಅಂತ ನಮಗೆ ಅನ್ಸುತ್ತೆ ಇದನ್ನ ರಕ್ತ ಹೇರ್ತೇವೆ ರಸ್ತೆಗಳು ಬೆಚ್ಚಿ ಬೀಳಿಸು ಸತ್ಯ ಇದನ್ನ ಈ ನಂಬರ್ನ್ನ ನೀವು ನೋಡ್ಲೇಬೇಕು ಸ್ನೇಹಿತರೆ ಅವಾಗ ಗೊತ್ತಾಗುತ್ತೆ.
ನಿಮಗೆ ಸರ್ಕಾರ ಇಷ್ಟೊಂದು ಅರ್ಜೆಂಟ್ ಆಗಿ ಇದನ್ನ ಯಾಕೆ ಇದರ ಮೇಲೆ ಜಾರಿ ಜಾರಿ ಮಾಡೋಕ್ಕೆ ಬಿದ್ದಿದೆ ಅಂತ ಅಷ್ಟು ಭಯಾನಕ ಕೇಂದ್ರ ಸರ್ಕಾರದvಅಧಿಕೃತ ಲೆಕ್ಕದ ಪ್ರಕಾರ 2024 25ರ ಸಾಲಲ್ಲಿ ಬರೋಬರಿ 1ಲ80ಸಾ ಜನ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳ್ಕೊಂಡುಬಿಟ್ಟಿದ್ದಾರೆ ತೀರ್ಕೊಂಡಿದ್ದಾರೆಒಲ80ಸಾವಿರ ಜನರ ಜೀವ ವಯಸ್ಸಾದವರು ಯಂಗ್ಸ್ಟರ್ಸ್ ಮಕ್ಕಳು ಎಲ್ಲ ಸೇರಿ ದಿನಕ್ಕೆ 500 ಜನ ಭಾರತದಲ್ಲಿ ರಸ್ತೆ ಮೇಲೆ ಜೀವ ಕಳ್ಕೊಳ್ತಾ ಇದ್ದಾರೆ ಅಂದ್ರೆ ಎಷ್ಟು ಪ್ರತಿ ಗಂಟೆಗೆ ಈ ದೇಶದಲ್ಲಿ ಪ್ರತಿ ಗಂಟೆಗೆ 20 ಜನರ ಸಾವಾಗ್ತಿದೆ ರೋಡ್ ಮೇಲೆ ಈ ವಿಡಿಯೋ ಶುರು ಮಾಡಿ ಇಲ್ಲಿವರೆಗೂ ಬರೋದ್ರಲ್ಲಿ ದೇಶದ ಯಾವುದೋ ಮೂಲೆಯಲ್ಲಿ ಇಬ್ಬರೋ ಮೂರು ಜನನು ರಸ್ತೆ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ ಇದರಲ್ಲಿ ಇನ್ನೊಂದು ಆತಂಕಕಾರಿ ವಿಚಾರ ಏನು ಅಂದ್ರೆ ಹೀಗೆ ಪ್ರಾಣ ಕಳೆಕೊಳ್ಳುತ್ತಿರುವರಲ್ಲಿ ಶೇಕಡ 60ಕ್ಕಿಂತ ಹೆಚ್ಚು ಜನ 18ರಿಂದ 35 ವರ್ಷದ ಯುವಜನತೆ ದೇಶವನ್ನ ರೂಪಿಸಬೇಕಾಗಿರೋ ಯುವಜನಾಂಗ ರಸ್ತೆಯಲ್ಲಿ ರಕ್ತ ಸುರಿಸ್ತಾ ಇದೆ ಎಮೋಷನಲ್ ವಿಚಾರ ಅಷ್ಟೇ ಅಲ್ಲ ಇದು ಎಕನಾಮಿಕ್ ಡಿಸಾಸ್ಟರ್ ಕೂಡ ಹೌದು ದೇಶದ ಜಿಡಿಪಿಗೆ ಪ್ರತಿವರ್ಷ ಶೇಕಡ ಮೂರರಷ್ಟು ಲಾಸ್ ಇದರಿಂದಲೇ ಆಗ್ತಾ ಇದೆ ಅಂತ ವರ್ಲ್ಡ್ ಬ್ಯಾಂಕ್ ಹೇಳಿದೆ ಇದನ್ನ ತಡಿಲೇಬೇಕು ಅಂತ ಪಣ ತೊಟ್ಟಿರೋ ಗಡ್ಕರಿ ಟೀಮ್ 2030ರ ಒಳಗಡೆ ಅಪಘಾತಗಳನ್ನ 50% ಡೌನ್ ಮಾಡಬೇಕು ಅನ್ನೋ ಟಾರ್ಗೆಟ್ ಅನ್ನ ಅವರಿಗೇರ ಸೆಟ್ ಮಾಡಿಕೊಂಡಿದ್ದಾರಂತೆ ಅದಕ್ಕೆ ಈ ವಿಟುವಿ ಟೆಕ್ನಾಲಜಿಗ ಬ್ರಹ್ಮಸ್ತ್ರದಂತೆ ಅವರ ಕಣ್ಣಿಗೆ ಕಾಣಿಸ್ತಾ ಇದೆ ಸರ್ಕಾರ ಏನೋ ಜನರ ಸೇಫ್ಟಿಗಾಗಿ ಥಿಂಕ್ ಮಾಡ್ತಿದೆ
ಸಣ್ಣ ಪುಟ್ಟ ಬೈಕ್ನವರು ಎಲ್ಲೂ ಗೊತ್ತಾಗದಲ್ಲ ಅಷ್ಟಿಗೆ ರೋಡ್ ಸೈಡ್ಗೆ ಹೋಗ್ಬಿಡ್ತಾರೆ ಕೆಳಗೆ ಬಿದ್ದುಬಿಡ್ತಾರೆ ರೋಡಿಂದ ಕೆಳಗಡೆ ಪಕ್ಕಕ್ಕೆ ಹೋಗಿ ಏನು ಕಾಣಲ್ಲ ಏನಂದ್ರೆ ಅಂದ್ರೆ ಏನು ಕಾಣೋದಿಲ್ಲ ಆ ಲೆವೆಲ್ಗೆ ಹೈ ಬೀಮ್ ಹಾಕೊಂಡು ಬರ್ತಾ ಇರ್ತಾರೆ. ಅದು ಎಕ್ಸ್ಟ್ರಾ ಲೈಟ್ ಎಲ್ಲ ಕುರಿಸಿಕೊಂಡು ಜಗ ಮಗ ಜಗ ಮಗ ಅಂತ ಲೋ ಬೀಮ್ ಮಾಡಿ ಅಂತ ಸಿಗ್ನಲ್ ಕೊಟ್ರು ಮಾಡೋದಿಲ್ಲ ಎಲ್ಲೆಲ್ಲಿಂದನೂ ಬೇರೆ ಉತ್ತರ ಭಾರತ ಬೇರೆ ಬೇರೆ ಕಡೆಯಿಂದೆಲ್ಲ ಹೈವೇಲ್ಲಿ ಟ್ರಕ್ಗಳು ಹೋಗ್ತಿರ್ತಾವಲ್ಲ ಅದೇನಾಗುತ್ತೆ ಈ ನ್ಯಾಷನಲ್ ಹೈವೆಗಳಲ್ಲಿ ಲೈನ್ ಸಪರೇಷನ್ ಅಂದ್ರೆ ಡಿವೈಡರ್ ಇರುವಂತ ರೋಡ್ಗಳಲ್ಲಿ ಹೋಗೋದು ಬೇರೆ ಬರೋದು ಬೇರೆ ಅಲ್ಲೊಂದು ಏನೋ ಮ್ಯಾನೇಜ್ ಆಗುತ್ತೆ ಒಂದೇ ರೋಡ್ ಮುಂದೆ ಬರ್ತಾ ಇರ್ತಾರೆ ಈ ಕಡೆಯಿಂದ ಹೋಗೋರು ಇರ್ತಾರೆ ಅಂದ್ರೆ ವಿಪರೀತ ಅಪಘಾತಗಳು ಇದರಿಂದನೇ ಆಗ್ತಾ ಇದಾವೆ ಹತ್ತರ ಹೋಗೋ ತನಕ ಹೆದುರಕೊಂಡು ಸೈಡ್ ಅಲ್ಲೆಲ್ಲ ಹೋಗಕೊಂಡು ಆಮೇಲೆ ಮತ್ತೆ ಮೂವ್ ಮಾಡಬೇಕು ಬದುಕಿದಿಯಾ ಬಾಡಜೀವ ಅಂತ ಮತ್ತೆ ಮುಂದಕ್ಕೆ ಹೋಗ್ಬೇಕು ಏನು ಕಾಣಲ್ಲ ಹಂಗೆ ಬ್ಲೈಂಡ್ ಮಾಡ್ತಾ ಇದ್ದಾರೆ ಕೆಲ ಟ್ರಕ್ ನವರು ಅಂತ ಟ್ರಕ್ ಡ್ರೈವರ್ಗಳು ದಯವಿಟ್ಟು ಯೋಚನೆ ಮಾಡಿ ಕೆಳಗಡೆ ನಿಮ್ಮ ಫ್ಯಾಮಿಲಿ ಅವರು ಯಾರಾದ್ರೂ ಬರ್ತಾ ಇರಬಹುದು ನಿಮ್ಮ ರಿಲೇಟಿವ್ಸ್ ಯಾರಾದ್ರೂ ಬರ್ತಿರಬಹುದು ಚಿಕ್ಕ ಮಕ್ಕಳು ಯಾರಾದ್ರೂ ಇರಬಹುದು ಬೈಕ್ ಅಲ್ಲಿ ಬರ್ತಿರೋ ಯಾರಾದ್ರೂ ಲೇಡೀಸ್ ಇರಬಹುದು ಅಥವಾ ಅಷ್ಟೊಂದು ಡ್ರೈವಿಂಗ್ ಗೊತ್ತಿಲ್ದೆ ಇರೋರು ಅಥವಾ ಗಾಬರಿ ಆಗೋರು ಇರಬಹುದು.


