ದಸರಾ ಹಬ್ಬರ ಜೋರಾಗಿದೆ flipkart ಅಲ್ಲಿ amazon ಅಲ್ಲಿ ಮೊಬೈಲ್ ಗಳದು ಭರ್ಜರಿ ಶಾಪಿಂಗ್ ನಡೀತಾ ಇದೆ ಆದರೆ ಆನ್ಲೈನ್ ಆಗ್ಲಿ ಆಫ್ಲೈನ್ ಆಗ್ಲಿ ಫೋನ್ ತಗೋಬೇಕಅಂದ್ರೆ ಸಾಕು ಮೊದಲು ಕೇಳೋದು ಹಳೆ ಫೋನ್ ಇದ್ರೆ ಎಕ್ಸ್ಚೇಂಜ್ ಆಫರ್ ಇದೆ ಅಂತ ಎಕ್ಸ್ಚೇಂಜ್ ಮಾಡಿದ್ರೆ ಭಾರಿ ಡಿಸ್ಕೌಂಟ್ ಕೊಡ್ತೀವಿ ಎಕ್ಸ್ಟ್ರಾ ಅಂತನು ಹೇಳ್ತಾರೆ ಭಾರತದಲ್ಲಿ ಈತರ ಪ್ರತಿವರ್ಷ ಎರಡರಿಂದ ನಾಲ್ಕು ಕೋಟಿ ಮೊಬೈಲ್ಗಳು ಎಕ್ಸ್ಚೇಂಜ್ ಆಗ್ತಾ ಇದಾವೆ ಹೋಗ್ತಾ ಹೋಗ್ತಾ ಟ್ರೆಂಡ್ ಇನ್ನು ಜಾಸ್ತಿನೇ ಆಗ್ತಾ ಇದೆ ಪ್ರತಿವರ್ಷ ಈಗ ಫೋನ್ ಅಪ್ಗ್ರೇಡ್ ಮಾಡೋದ್ರಿಂದ ಎಕ್ಸ್ಚೇಂಜ್ ಕೊಟ್ಟಬಿಟ್ಟು ಹೊಸ ತಗೊಳ್ತಾ ಇದ್ದಾರೆ. ಆದ್ರೆ Amazon ಆಗ್ಲಿ, Flipkart ಆಗ್ಲಿ ಈ ಹಳೆ ಫೋನ್ ತಗೊಂಡು ಏನ್ ಮಾಡ್ತಾರೆ ನಿಮ್ಮ ಫೋನ್ ತಗೊಂಡು ಯೋಚನೆ ಮಾಡಿದ್ದೀರಾ? ಹಳೆ ಕವರ್ ತೆಗೆದು ಹೊಸ ಕವರ್ ಹಾಕಿ ಮಾರಾಟ ಮಾಡ್ಬಿಡೋಕೆ ಆಗುತ್ತಾ ಆ ಜನಕ್ಕೆ? ಆಗ ತಗೊಂಡವರಿಗೆ ಸೆಕೆಂಡ್ ಹ್ಯಾಂಡ್ ಫೋನ್ ಸಿಕ್ದಂಗೆ ಆಗಲ್ವಾ ಅಥವಾ ಅದರಲ್ಲಿರೋ ಪಾರ್ಟ್ಸ್ ತೆಗೆದು ಬೇರೆ ಫೋನ್ಗೆ ಹಾಕ್ತಾರಾ? ಆವಾಗ್ಲೂ ಕೂಡ ಸೆಕೆಂಡ್ ಹ್ಯಾಂಡ್ ಪಾರ್ಟ್ಸ್ ಆಗಲ್ವಾ ಅದು ಬನ್ನಿ ಹಾಗಾದ್ರೆ ನೀವು ಬೇಡ ಅಂತ ಕೊಟ್ಟ ನಿಮ್ಮ ಈ ಹಳೆ ಫೋನ್ ಅದರ ಹಣೆಬಾರ ನೆಕ್ಸ್ಟ್ ಏನಾಗುತ್ತೆ ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯ ಆಗಬಹುದು, ದಿಗ್ಭ್ರಮೆ ಕೂಡ ಆಗಬಹುದು. ಆನ್ಲೈನ್ ಅಲ್ಲಿ ಆದ್ರೆ Amazon, Flipkart ಈ- ಈ ಕಾಮರ್ಸ್ ಸಂಸ್ಥೆಗಳೇ ತಗೊಂಡು ಹೋಗ್ತಾರೆ. ಇಲ್ಲ ಅಂದ್ರೆ ಕೆಲವೊಂದು ಸಲಿ ಅವರು ಟೈ ಅಪ್ ಆಗಿರ್ತಾರೆ ಕ್ಯಾಶಿಫೈ ಅವರೊಟ್ಟಿಗೆಲ್ಲ ಟೈ ಅಪ್ ಆಗಿರ್ತಾರೆ. ಆಫ್ಲೈನ್ ಅಲ್ಲೂ ಕೂಡ ನೀವು ಕ್ಯಾಶಿಫೈ ಹತ್ರ ಹೋಗಬಹುದು ಬಡ್ಲಿ ಇನ್ಸ್ಟಾ ಕ್ಯಾಶ್ ಹಾಗೆ ಯಂತ್ರ ಈ flipkart ದೆ ಕಂಪನಿ ಇವರೆಲ್ಲ ತಗೊಳ್ತಾರೆ. ಕ್ಯಾಶಿಫೈ ಆನ್ಲೈನ್ ಆಫ್ಲೈನ್ ಎರಡು ಕಡೆ ಇದೆ ಅವರು ಬಿಗ್ ಪ್ಲೇಯರ್ ಅವರು ಈ ಬೇರೆ ಬೇರೆ ಮೊಬೈಲ್ ಕಂಪನಿಗಳೊಂದಿಗೆ ಟೈ ಅಪ್ ಕೂಡ ಮಾಡ್ಕೊಂಡಿದ್ದಾರೆ.
ಆನ್ಲೈನ್ ಕೂಡ ಅವರ ತ್ರೂ ಮಾಡಿಸ್ತಾರೆ. ಭಾರತದ ಸುಮಾರು 100 ನಗರಗಳಲ್ಲಿ 200ಕ್ಕೂ ಅಧಿಕ ಸ್ಟೋರ್ ಗಳನ್ನ ಹೊಂದಿದ್ದಾರೆ. ಇಲ್ಲಿ ನೀವು ಮೊದಲು ಫೋನ್ ಕೊಟ್ಟಾಗ ಆಬ್ವಿಯಸ್ಲಿ ಫೋನ್ ಕಂಡೀಷನ್ ಚೆಕ್ ಮಾಡ್ತಾರೆ. ಏನಾದ್ರೂ ಡ್ಯಾಮೇಜ್ ಇದೆಯಾ ಡೆಂಟ್ ಇದೆಯಾ ಸೌದು ಹೋಗಿದೆಯಾ ಸೈಡ್ ಬಟನ್ ಏನಾದ್ರೂ ಹಾಳಾಗಿದೆಯಾ ಡಿಸ್ಪ್ಲೇ ಕರೆಕ್ಟಾಗಿ ವರ್ಕ್ ಆಗ್ತಾ ಇದೀಯಾ ಕ್ಯಾಮೆರಾಸ್ ಎರಡು ಕೂಡ ಚೆನ್ನಾಗಿ ವರ್ಕ್ ಆಗ್ತಾ ಇದೀಯಾ ಸ್ಪೀಕರ್ ಚೆನ್ನಾಗಿ ವರ್ಕ್ ಆಗ್ತಾ ಇದೀಯಾ ಮೈಕ್ರೋಫೋನ್ ಕರೆಕ್ಟಾಗಿ ವರ್ಕ್ ಆಗ್ತಾ ಇದೀಯಾ ವೈಬ್ರೇಷನ್ ಮೋಟಾರ್ ಕರೆಕ್ಟಾಗಿ ವರ್ಕ್ ಆಗ್ತಿದೆಯಾ ಎಲ್ಲವನ್ನ ಚೆಕ್ ಮಾಡ್ತಾರೆ ವೈಫೈ ಬ್ಲೂಟೂತ್ ಚಾರ್ಜಿಂಗ್ ಪೋರ್ಟ್ ಫಿಂಗರ್ ಪ್ರಿಂಟ್ ಸೆನ್ಸಾರ್ ಬ್ಯಾಟರಿ ಎಲ್ಲ ನೋಡ್ತಾರೆ ಆನ್ ಮಾಡಿ ಇದಿಷ್ಟು ಆದಮೇಲೆ ನಮ್ಮ ಫೋನ್ ನ ಐಎಂಇಐ ನಂಬರ್ ತಗೊಂಡು ಇದೇನಾದ್ರು ಕಳವಾಗಿರೋದ ಬ್ಲಾಕ್ ಲಿಸ್ಟ್ ಆಗಿರೋದ ಇಎಂಐ ಏನಾದ್ರೂ ಬಾಕಿ ಇದ್ಯಾ ಅವರದು ಅಂತ ಚೆಕ್ ಮಾಡ್ಕೊಳ್ತಾರೆ ಕೊನೆಗೆ ಇವಿಷ್ಟು ಟೆಸ್ಟ್ನಲ್ಲಿ ಫೋನ್ ಕಂಡೀಷನ್ ಹೇಗಿದೆ ಅಂತ ನೋಡ್ಕೊಂಡು ನಿಮಗೊಂದು ಅಮೌಂಟ್ ನ ಪೇ ಮಾಡ್ತಾರೆ ಅಥವಾ ಡಿಸ್ಕೌಂಟ್ ರೂಪದಲ್ಲಿ ಕೊಡ್ತಾರೆ ವರ್ಗೀಕರಣ ಇಲ್ಲಿಂದ ರಿಫರ್ಬಿಷ್ಮೆಂಟ್ನ ಕೆಲಸಗಳು ಶುರುವಾಗ್ತವೆ ಮೊದಲು ಕಂಡಿಷನ್ಗೆ ತಕ್ಕಂತೆ ಫೋನ್ಗಳನ್ನ ರಿಸೆಲಬಲ್ ರಿಪೇರಬಲ್ ಪಾರ್ಟ್ಸ್ ಮತ್ತು ರಿಸೈಕಲ್ ಅಂತ ನಾಲ್ಕು ಭಾಗವಾಗಿ ಡಿವೈಡ್ ಮಾಡಲಾಗುತ್ತೆ ಫೋನ್ ಚೆನ್ನಾಗಿದೆ ಏನು ಆಗಿಲ್ಲ ತಗೊಂಡು ತುಂಬಾ ಕೇರ್ಫುಲ್ ಸೂಟ್ಕೇಸ್ ತರದ ಕೇಸ್ ಹಾಕೊಂಡು ನೀವು ಪ್ರೊಟೆಕ್ಟ್ ಮಾಡಿ ಇಟ್ಕೊಂಡಿದ್ರೆ ಡಿಸೈನರ್ ಅದ್ಭುತವಾಗಿ ಗಿ ಫೋನ್ನ ಡಿಸೈನ್ ಮಾಡಿರ್ತಾರೆ. ನಿಮಗೆ ಫೋನ್ನ ಸೇಫ್ಟಿ ಭಯ. ಬಸ್ ಟೈರ್ ಗೆ ಆತರದ ಕೇಸ್ ಹಾಕೊಂಡು ಅದನ್ನ ಮುಚ್ಚಿ ನೀವು ಕಷ್ಟಪಟ್ಟು ಅದನ್ನ ಇಟ್ಕೊಂಡ್ರಿ. ಒಂದು ವರ್ಷ ಎರಡು ವರ್ಷ ಆದಮೇಲೆ ನೀವು ಅದನ್ನ ಎಕ್ಸ್ಚೇಂಜ್ಗೆ ಕೊಡ್ತೀರಲ್ಲ ಅವರಿಗೆ ಬಹಳ ಖುಷಿಯಾಗುತ್ತೆ ಆಗ ತಗೊಂಡು ತುಂಬಾ ಕಾಲ ಆಗಿಲ್ಲ ಅನ್ನೋದಾದ್ರೆ ರಿಸೇಲಬಲ್ ಕ್ಯಾಟಗರಿಗೆ ಹಾಕಿ ನೇರವಾಗಿ ರಿಸೇಲ್ ಮಾಡ್ತಾರೆ. ಚೂರು ಅಲ್ಲಲ್ಲಿ ಡೆಂಟ್ ಬಿದ್ದಿದೆ ಡ್ಯಾಮೇಜ್ ಆಗಿದೆ ಅಂದ್ರೆ ರಿಪೇರಬಲ್ ಕ್ಯಾಟಗರಿಗೆ ಹಾಕೊಳ್ತಾರೆ. ಸಿಕ್ಕಾಪಟ್ಟೆ ಹಾಳಾಗಿದೆ ಅಂದ್ರೆ ಪಾರ್ಟ್ಸ್ ಕ್ಯಾಟಗರಿಗೆ ಸೇರಿಸಿಕೊಳ್ತಾರೆ.
ಈ ಫೋನ್ನ ಸೇಲ್ ಮಾಡಕ ಆಗಲ್ಲ. ಇದರ ಪಾರ್ಟ್ಸ್ ನ ಬಿಚ್ಚಿಬಿಟ್ಟು ಬೇರೆ ಫೋನ್ಗೆ ಅಂಗಾಂಗ ದಾನ ಮಾಡಬಹುದು ಅಂತ ಯಾಕಂದ್ರೆ ನಿಮ್ಮ ಪಾಲಿಗೆ ಫೋನ್ ಹಾಳಾಗಿರಬಹುದು ಆದ್ರೆ ಕಂಪನಿಗಳ ಪಾಲಿಗಲ್ಲ ಒಂದು ಮೊಬೈಲ್ನಲ್ಲಿ 30 ರಿಂದ 40 ಪಾರ್ಟ್ಸ್ ಇರ್ತವೆ ಏನಿಲ್ಲ ಅಂದ್ರೂ ಕೂಡ 15 ರಿಂದ 20 ಪಾರ್ಟ್ಸ್ ನ ಬೇರೆ ಫೋನ್ಗಳಿಗೆ ದಾನ ಮಾಡಬಹುದು ಆದ್ರೆ ಇಲ್ಲಿ ಫ್ರೀ ಅಲ್ಲ ದಾನ ಅಂದ್ರೆ ನಿಮ್ಮ ಹತ್ರ ದುಡ್ಡು ಕೊಟ್ಟು ತಗೊಂಡಿರ್ತಾರೆ ಅವರು ಅದನ್ನ ಬೇರೆ ಫೋನ್ಗೆ ಹಾಕೊಳ್ತಾರೆ ಆಮೇಲೆ ದುಡ್ಡಿಗೆ ಮಾರ್ತಾರೆ ಅದನ್ನ ಒಂದು ವೇಳೆ ಯಾವ ಪಾರ್ಟು ಚೆನ್ನಾಗಿಲ್ಲ ಇಡೀ ಮೊಬೈಲೇ ಹೋಗ್ಬಿಟ್ಟಿದೆ ಅಂದ್ರೆ ನೇರ ರಿಸೈಕಲ್ಗೆ ಹಾಕ್ತಾರೆ ಆಮೇಲೆ ಅದನ್ನ ಡೇಟಾ ಅಳಿಸುವಿಕೆ ಸ್ನೇಹಿತರೆ ಸೆಕೆಂಡ್ ಹ್ಯಾಂಡ್ ಫೋನ್ಗಳನ್ನ ಡಿವೈಡ್ ಮಾಡಿದಮೇಲೆ ರಿಪೇರಿ ಮಾಡಬಹುದಾದಂತ ಫೋನ್ಗಳನ್ನ ರಿಫರ್ಬಿಷಿಂಗ್ ಸೆಂಟರ್ ಗೆ ತರ್ತಾರೆ. ಕ್ಯಾಶಿಫೈ ಈ ಅಂತರದಂತ ಕಂಪನಿಗಳು ಬೆಂಗಳೂರು ದಿಲ್ಲಿ ಅಂತಹ ನಗರದಲ್ಲಿ ಇಂತ ಸೆಂಟರ್ಸ್ನ ಇಟ್ಕೊಂಡಿದ್ದಾರೆ. ಇಲ್ಲಿ ಮೊದಲು ಮಾಡೋ ಕೆಲಸ ಫೋನ್ ನ ಡೇಟಾ ಅಳಿಸೋದು. ಯಾಕಂದ್ರೆ ಫೋನ್ ನ ಆತ್ಮವೇ ಐಡೆಂಟಿಟಿನೇ ಡೇಟಾ ಅದೊಂದು ಇಲ್ಲ ಅಂದ್ರೆ ಯಾವುದೇ ಫೋನ್ ಆದ್ರೂ ಹೊಸ ಫೋನ್ ಆಗುತ್ತೆ. ಆದರೆ ಸಾಮಾನ್ಯವಾಗಿ ನಾವೇ ಬೇರೆಯವರಿಗೆ ನಮ್ಮ ಫೋನ್ನ ಮಾರಬೇಕಾದ್ರೆ ಫ್ಯಾಕ್ಟರಿ ರಿಸೆಟ್ ಮಾಡಿ ಕೊಟ್ಟಿರ್ತೀವಿ ಆದರೆ ಫ್ಯಾಕ್ಟರಿ ರಿಸೆಟ್ ಮಾಡಿದಾಗ ಸಂಪೂರ್ಣ ಡೇಟಾ ಹೋಗಿರೋದಿಲ್ಲ. ಬದಲಿಗೆ ಆ ಡೇಟಾ ಇರೋ ಜಾಗದ ಲಿಂಕ್ ಅನ್ನ ಫೋನ್ ಅಳಿಸಿರುತ್ತೆ. ಬರಿ ಅಡ್ರೆಸ್ ಮರೆತಿರುತ್ತೆ. ಆದರೆ ರಿಫರ್ಬಿಶ್ ಮಾಡೋರು ಈ ರಿಸ್ಕ್ ತಗೊಳಕೆ ಆಗಲ್ಲ. ಹೀಗಾಗಿ ಅವರು ವಿಶೇಷ ಕ್ರಿಪ್ಟೋಗ್ರಾಫಿಕ್ ಎರೇಸ್ ತಂತ್ರವನ್ನ ಬಳಸ್ತಾರೆ ಅಂದ್ರೆ ಫೋನ್ ನಲ್ಲಿರೋ ಎನ್ಕ್ರಿಪ್ಟೆಡ್ ಕೀಗಳನ್ನ ತೆಗೆದು ಹಾಕ್ತಾರೆ. ಜೊತೆಗೆ ಬ್ಲಾಂಕೋ ಸೆಲ್ ಬ್ರೈಟ್ ನಂತಹ ವಿಶೇಷ ಸಾಫ್ಟ್ವೇರ್ ಬಳಸಿ ಸಂಪೂರ್ಣ ಅಳಿಸ್ತಾರೆ. ಕೆಲವೊಂದು ಸಲ ಎನ್ಕ್ರಿಪ್ಟ್ ಆಗದ ಹಳೆ ಮೊಬೈಲ್ ಗಳಿದ್ರೆ ಅಲ್ಲಿ ರಾಂಡಮ್ ಡೇಟಾನ ಓವರ್ರೈಟ್ ಮಾಡ್ತಾರೆ. ಇದಿಷ್ಟು ಆದಮೇಲೆ ಮತ್ತೆ ಫೋನ್ನ ಚೆಕ್ ಮಾಡ್ತಾರೆ.
ಒಂದುವೇಳೆ ಈ ಯಾವ ತಂತ್ರಕ್ಕೂ ಫೋನ್ ನಲ್ಲಿರೋ ಡೇಟಾ ಅಳಿಸಲಿಲ್ಲ ಅಂದ್ರೆ ಫಿಸಿಕಲ್ ಆಗಿ ಫೋನ್ನ ಮೆಮೊರಿ ಚಿಪ್ ಅಥವಾ ಲಾಜಿಕ್ ಬೋರ್ಡ್ ನ ನಾಶ ಮಾಡ್ತಾರೆ ಆ ಜಾಗದಲ್ಲಿ ಹೊಸ ಪಾರ್ಟ್ನ ಹಾಕ್ತಾರೆ ಅಲ್ಲಿಗೆ ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಗುಜರಾತ್ಗೆ ಟ್ರಿಪ್ ಆಯೋಜನೆ ಮಾಡಿದೆ ಆಫರ್ ಪ್ರೈಸ್ 45700 ರೂಪಯ ಮಾತ್ರ ಅಹಮದಾಬಾದ್ ದ್ವಾರಕ ಬೆಟ್ ದ್ವಾರಕ ನಾಗೇಶ್ವರ ಸೋಮನಾಥ ಜ್ಯೋತಿರ್ಲಿಂಗ ನಿಷ್ಕಳಂಕ ಮಹಾದೇವ ಗಿರ್ ನ್ಯಾಷನಲ್ ಪಾರ್ಕ್ ವಡೋದರ ವಿಶ್ವದ ಅತಿ ಎತ್ತರದ ಸ್ಟ್ಯಾಚು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಮೂರ್ತಿ ಸ್ಟ್ಯಾಚ್ು ಆಫ್ ಯೂನಿಟಿ ಇದೆಲ್ಲ ಸೇರಿ ಸಿಕ್ಸ್ ನೈಟ್ ಸೆವೆನ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ದೇವರ ದರ್ಶನ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಬೋಟಿಂಗ್ ಮತ್ತು ಆಟೋ ಚಾರ್ಜಸ್ 247 ಟೂರ್ ಮ್ಯಾನೇಜರ್ ಅಸಿಸ್ಟೆನ್ಸ್ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಕೇರ್ ಕೂಡ ಇರುತ್ತೆ ಹೊರಡೋ ದಿನ 25 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಕ್ಲೀನಿಂಗ್ ಮತ್ತು ಗ್ರೇಡಿಂಗ್ ಈತರ ಸಾಫ್ಟ್ವೇರ್ ರಿಪೇರಿ ಆದಮೇಲೆ ಹಾರ್ಡ್ವೇರ್ ಕಡೆಗೆ ಮುಖ ಮಾಡ್ತಾರೆ ಸ್ಕ್ರೀನ್ ಬ್ಯಾಟರಿ ಕ್ಯಾಮೆರಾ ಹಾಳಾಗಿದ್ರೆ ಬೇರೆ ಫೋನ್ಗಳಿಂದ ಅಳವಳಿಸ್ತಾರೆ ಜೊತೆಗೆ ಮತ್ತೆ ಹೊಸದಾಗಿ ಓ ಎಸ್ ಆಪರೇಟಿಂಗ್ ಸಿಸ್ಟಮ್ ನ ಇನ್ಸ್ಟಾಲ್ ಮಾಡ್ತಾರೆ ಇಷ್ಟು ಪ್ರಕ್ರಿಯೆ ಮುಗಿದ ನಂತರ ಫೋನ್ ಹೊಸದಾಗಿರುತ್ತೆ ಆದರೆ ಫಿಸಿಕಲ್ ಕ್ಲೀನಿಂಗ್ ಧೂಳು ಗಲೀಜು ಬ್ಯಾಕ್ಟೀರಿಯಾ ಫಂಗಸ್ ಆ ಕ್ಲೀನಿಂಗ್ ಮಾಡೋದು ಬಾಕಿ ಇರುತ್ತೆ ಹೀಗಾಗಿ ಸಿಮ್ ಟ್ರೇ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಯಾವ ಯಾವ ಪಾರ್ಟ್ನ ತೆಗಿಬಹುದು ಅದೆಲ್ಲವನ್ನ ನೀಟಾಗಿ ಬೆಚ್ಚಿ ಕ್ಲೀನ್ ಮಾಡ್ತಾರೆ ಐಪಿಎ ಐಸೋಪ್ರೊಪೈಲ್ ಆಲ್ಕೋಹಾಲ್ ನಂತಹ ವಿಶೇಷ ಲಿಕ್ವಿಡ್ ಬಳಸ ಕ್ಲೀನ್ ಮಾಡಿಸ್ತಾರೆ ಕೆಲ ಸಣ್ಣ ಪಾರ್ಟ್ಗಳಿಗೆ ಅಲ್ಟ್ರಾಸೋನಿಕ್ ಬ್ಯಾತ್ ಕೂಡ ಮಾಡಿಸೋದುಂಟು ಇದಿಷ್ಟು ಆದಮೇಲೆ ಮತ್ತೆ ಫೋನ್ ನ ಟೆಸ್ಟ್ ಮಾಡ್ತಾರೆ ಈ ವೇಳೆ ಗಂಟೆಗಟ್ಟಲೆ ಆಟೋಮೇಟೆಡ್ ಸಾಫ್ಟ್ವೇರ್ ಗೆ ಒಳಪಡಿಸಿ ಫೋನ್ನ ಫಂಕ್ಷನ್ಸ್ ಅನ್ನ ಚೆಕ್ ಮಾಡಲಾಗುತ್ತೆ.
ಹಳೆ ಫೋನ್ ಮತ್ತೆ ಹೊಸ ಫೋನ್ ಆಗಿ ಬದಲಾಗುತ್ತೆ ಆದರೆ ಅಷ್ಟಕ್ಕೆ ನೇರ ಫೋನ್ನ ಮಾರಕ ಆಗಲ್ಲ ಫೋನ್ ನ ಕ್ವಾಲಿಟಿ ನೋಡ್ಕೊಂಡು ಎ ಬಿಸಿ ಅಂತ ಮೂರು ಗ್ರೇಡ್ ಆಗಿ ಮತ್ತೆ ಡಿವೈಡ್ ಮಾಡ್ತಾರೆ ಇಲ್ಲಿ ಎ ಗ್ರೇಡ್ ಅಂದ್ರೆ ಆಲ್ಮೋಸ್ಟ್ ಹೊಸ ಫೋನ್ ತರ ಆಗಿರುತ್ತೆ ಎಲ್ಲಾ ಕರೆಕ್ಟ್ ಆಗಿರುತ್ತೆ. ಬ್ಯಾಟರಿ ಹೆಲ್ತ್ 90% ಗಿಂತ ಜಾಸ್ತಿ ಇರುತ್ತೆ. ಬಿ ಅಂದ್ರೆ ಆಲ್ಮೋಸ್ಟ್ ಎ ಗ್ರೇಡ್ ಫೋನ್ ತರ ಇರುತ್ತೆ ಆದರೆ ಸಣ್ಣ ಪುಟ್ಟ ಸ್ಕ್ರಾಚ್ ಮಾರ್ಕ್ ಉಳಿದಿರುತ್ತೆ. ಅಲ್ದೆ ಬ್ಯಾಟರಿ ಹೆಲ್ತ್ 80 ಟು 90% ರೇಂಜ್ ನಲ್ಲಿ ಇರುತ್ತೆ. ಇನ್ನು ಸಿ ಅಂದ್ರೆ ಫೋನ್ ಮೇಲಿನ ಹಳ್ಳ ದಿಣ್ಣೆಗಳು ಕಣ್ಣಿಗೆ ಕಾಣೋತರ ಇರುತ್ತೆ ಡೆಂಟ್. ಜೊತೆಗೆ ಬ್ಯಾಟರಿ ಹೆಲ್ತ್ 70 ಟು 80% ರೇಂಜ್ ನಲ್ಲಿ ಇರುತ್ತೆ. ನಂತರ ಈ ಕ್ಯಾಟಗರಿಗೆ ತಕ್ಕಂತೆ ರಿಟೇಲ್ ನಲ್ಲಿ ರಿಸೇಲ್ ದರಕ್ಕಿಂತ ಒಂದು 20 30% ಕಮ್ಮಿ ದರದಲ್ಲಿ ಸೇಲ್ ಮಾಡ್ತಾರೆ. ಏರ್ತಾ ಇದೆ ಹಳೆ ಮೊಬೈಲ್ ಮಾರ್ಕೆಟ್ ಭಾರತದಲ್ಲಿ ಈ ಎಕ್ಸ್ಚೇಂಜ್ ಮಾರ್ಕೆಟ್ ಅಥವಾ ರಿಕಾಮರ್ಸ್ ರಿಕಾಮರ್ಸ್ ಮಾರ್ಕೆಟ್ ಭಾರಿ ಪ್ರಮಾಣದಲ್ಲಿ ಏರಿಕೆ ಆಗ್ತಿದೆ. ಭಾರತದಲ್ಲಿ ಪ್ರತಿವರ್ಷ 20 ರಿಂದ 40 ಮಿಲಿಯನ್ ಅಂದ್ರೆ ಎರಡರಿಂದ ನಾಲ್ಕು ಕೋಟಿ ಸೆಕೆಂಡ್ ಹ್ಯಾಂಡ್ ಫೋನ್ಗಳನ್ನ ಖರೀದಿಸಲಾಗ್ತಾ ಇದೆ. 2026 ಕ್ಕೆ ಈ ರಿಯೂಸ್ಡ್ ಸ್ಮಾರ್ಟ್ ಫೋನ್ ಮಾರ್ಕೆಟ್ ಮೌಲ್ಯ 10 ಬಿಲಿಯನ್ ಡಾಲರ್ ಗೆ ಏರಿಕೆಯಾಗಬಹುದು. 2033 ಕ್ಕೆ ಒಟ್ಟಾರೆ ರಿಫರ್ಬಿಶ್ ಮಾರ್ಕೆಟ್, ಲ್ಯಾಪ್ಟಾಪ್ ಎಲ್ಲ ಸೇರಿ 219 ಬಿಲಿಯನ್ ಡಾಲರ್ ಗೆ ಜಂಪ್ ಆಗಬಹುದು ಅಂತ ಹೇಳ್ತಿದ್ದಾರೆ. ಯಾಕೆ ಜಾಸ್ತಿ ಆಗ್ತಿದೆ? ದಿನೇ ದಿನೆ ಹೊಸ ಸ್ಮಾರ್ಟ್ ಫೋನ್ ಬೆಲೆ ಜಾಸ್ತಿ ಆಗ್ತಾ ಇದೆ. ಐಡಿಸಿ ಪ್ರಕಾರ 2020 ರಿಂದ 23ರ ನಡುವೆ ಸ್ಮಾರ್ಟ್ ಫೋನ್ ಬೆಲೆ 38% ಜಂಪ್ ಆಗಿದೆ. ಜಸ್ಟ್ ಮೂರು ವರ್ಷದಲ್ಲಿ ಹೀಗಾಗಿ ಹೊಸ ಫೋನ್ ತಗೊಳೋದೇ ಕಷ್ಟ ಆಗ್ತಾ ಇದೆ. ಹಾಗೆ ವರ್ಷದಿಂದ ವರ್ಷಕ್ಕೆ ಫೋನ್ಗಳ ಕ್ವಾಲಿಟಿ ಕೂಡ ಇಂಪ್ರೂವ್ ಆಗ್ತಿದೆ. ಈಗಂತೂ ಹೊಸ ಫೋನ್ಗೂ ಹಳೆ ಫೋನ್ಗೂ ಜಾಸ್ತಿ ವ್ಯತ್ಯಾಸನೇ ಇಲ್ಲ ಅನ್ನೋ ಹಾಗಾಗಿದೆ. ಅಲ್ದೆ ಪ್ರೀಮಿಯಂ ಫೋನ್ ಬೇಕು ಅನ್ನೋವರ ಸಂಖ್ಯೆ ಜಾಸ್ತಿಯಾಗಿದೆ. ಹೊಸ ಪ್ರೀಮಿಯಂ ಫೋನ್ ಕೊಡೋಕ್ ಆಗಲವರು ಈ ರೀತಿ ಸೆಕೆಂಡ್ ಹ್ಯಾಂಡ್ ತಗೊಳ್ತಾ ಇದ್ದಾರೆ ಅಥವಾ ರಿಫರ್ಬಿಷ್ಡ್ ತಗೊಳ್ತಾ ಇದ್ದಾರೆ ಹಾಗಾಗಿ ಸದ್ಯ ಆಪಲ್ ಈ ಮಾರ್ಕೆಟ್ನ ಡಾಮಿನೇಟ್ ಮಾಡ್ತಾ ಇದೆ ಭಾರತದಲ್ಲಿ ರಿಯೂಸ್ಡ್ ಫೋನ್ ತಗೊಳೋ ಐದರಲ್ಲಿ ಮೂರು ಜನ ಐ ಫೋನ್ನೇ ಬೇಕು ಅಂತಾರೆ ಅಂದ್ರೆ ಸೆಕೆಂಡ್ ಹ್ಯಾಂಡ್ ತಗೊಳೋಕೆ ಹೊರಟವರಲ್ಲಿ ಎರಡು ವರ್ಷ ಹಳೆದಾದ್ರೂ ಪರವಾಗಿಲ್ಲ ಕೆಲವೊಂದು ಸಲಿ ಐದು ವರ್ಷ ಹಳೇದಾದ್ರೂ ಪರವಾಗಿಲ್ಲ ಫೋನ್ ಹಿಂದೆ ಕಚ್ಚಿರೋ ಆಪ್ ಅಲ್ಲಿ ಇರಬೇಕು ನಾನು ಅದನ್ನ ಕನ್ನಡಿ ಮುಂದೆ ಹಿಂಗೆ ಇಟ್ಕೊಂಡು ಹೆಂಗೆ ಅಂತ ಹಿಂಗೆ ಹಾಕಬೇಕು ಅಷ್ಟೇ ಸೆಲ್ಫಿ ನಂದು ಫೋನ್ದು ಸೇರಿಸಿ ಸೆಲ್ಫಿ ತಗೊಂಡು ಮಿರರ್ ಅಲ್ಲಿ ತೆಗೆದು ಅದನ್ನ ಫೋಟೋ ಹಾಕಬೇಕು. ಇಲ್ಲ ಅಂದ್ರೆ ಜೀವನ ಪಾವನ ಆಗಲ್ಲ ನಂದು ಸೋ ಬೇಕು ಆ ರೀತಿ 2025ರ ಮೊದಲ ಅರ್ಧದಲ್ಲಿ Apple 62.9% ಮಾರ್ಕೆಟ್ ಶೇರ್ ಹೊಂದಿತ್ತು. ಉಳಿದಂತೆ OnePlus 10.2% Xiaomi 9.7%, Samsung 6.1% ಅಲ್ದೆ ಜನರಲ್ಲಿ ಹಳೆ ಫೋನ್ ಸಂಖ್ಯೆ ಕೂಡ ಜಾಸ್ತಿ ಆಗ್ತಾ ಇದೆ.
ಇತ್ತೀಚಿಗೆ ಒಂದು ಸರ್ವೆ ನಡೆಸಿತ್ತು ಅದರಲ್ಲಿ 10,000 ಜನರನ್ನ ಹಳೆ ಫೋನ್ ಬಗ್ಗೆ ಪ್ರಶ್ನೆ ಮಾಡಿತ್ತು. ಸುಮಾರು 70% ಜನ ಅದರಲ್ಲಿ ನಮ್ಮ ಮನೆಯಲ್ಲಿ ಎರಡರಿಂದ ಮೂರು ಬಳಸದೆ ಇರೋ ಹಳೆ ಫೋನ್ ಹಾಗೆ ಇಟ್ಕೊಂಡಿದೀವಿ ಅಂತ ಹೇಳಿದ್ದಾರೆ. ಹೀಗಾಗಿ ಈ ಮಾರ್ಕೆಟ್ ದಿನೇ ದಿನೆ ಭೂಮ ಆಗ್ತಿದೆ. ಈ ರೀತಿ ಸೆಕೆಂಡ್ ಹ್ಯಾಂಡ್ ಫೋನ್ ಬಳಕೆ ಜಾಸ್ತಿ ಆಗ್ತಿರೋದ್ರಿಂದ ಭಾರತದಲ್ಲಿ ಸ್ಮಾರ್ಟ್ ಫೋನ್ ರಿಪ್ಲೇಸ್ಮೆಂಟ್ ಸೈಕಲ್ 24 ತಿಂಗಳಿಂದ 36 ತಿಂಗಳಿಗೆ ಜಂಪ್ ಆಗಿದೆ. ಅಂದ್ರೆ ಎರಡು ವರ್ಷದಲ್ಲಿ ಹೊಸ ಫೋನ್ ತಗೋತಾ ಇದ್ದವರು ಮೂರು ವರ್ಷಗಳವರೆಗೆ ಕಾಯ್ತಾ ಇದ್ದಾರೆ. ಇದನ್ನ ನೋಡಿ ಸ್ಮಾರ್ಟ್ ಫೋನ್ ಕಂಪನಿಗಳು, ಈ-ಕಾಮರ್ಸ್ ಕಂಪನಿಗಳು ಕೂಡ ರಿಕಾಮರ್ಸ್ ಗೆ ಕೈ ಹಾಕ್ತಿವೆ. Google ಕ್ಯಾಶಿಫೈ ಜೊತೆಗೆ ಟೈ ಅಪ್ ಆಗಿದೆ. ಇವನ್ Samsung ಅಫೀಷಿಯಲ್ ವೆಬ್ಸೈಟ್ ನಲ್ಲೂ ಕೂಡ ನೀವೇನಾದರೂ ಕೂಡ ಎಕ್ಸ್ಚೇಂಜಿಗೆ ಹಾಕಿದ್ರೆ ಅವ್ರು ಬರ್ತಾರಲ್ಲ ಎಕ್ಸ್ಚೇಂಜ್ ತಗೊಂಡು ಹೋಗೋಕೆ ಅವ್ರು ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡೋದು ಯಾವ ಆಪ್ ಕ್ಯಾಶಿಫೈ ಆಪ್ ಇನ್ಸ್ಟಾಲ್ ಮಾಡ್ಕೊಂಡು ಅದನ್ನ ಡೈಗ್ನೋಸ್ ಮಾಡೋದು. ಗೊತ್ತಿಲ್ಲ ಬೇರೆ ಬೇರೆ ಕಡೆ ಬೇರೆ ಬೇರೆ ತರ ಇರಬಹುದು ನನಗಂತೂ ವೈಯಕ್ತಿಕವಾಗಿ ಆ ಎಕ್ಸ್ಪೀರಿಯೆನ್ಸ್ ಆಗಿದೆ. ಸೋ ಇಲ್ಲಿ Google ಬಗ್ಗೆ ಹೇಳ್ತಿದ್ವಲ್ಲ Google ಕ್ಯಾಶಿಫೈ ಯೊಂದಿಗೆ ಟೈ ಅಪ್ ಆಗಿ ಸರ್ಟಿಫೈಡ್ ರಿಫರ್ಬಿಷ್ಡ್ ಪಿಕ್ಸೆಲ್ ಫೋನ್ ಗಳನ್ನ ಮಾರೋಕು ನೋಡ್ತಾ ಇದ್ದಾರೆ.


