ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಆಗ್ತಾ ಇವೆ ಅದರಲ್ಲೂ ಸ್ಮಾರ್ಟ್ ಫೋನ್ ಕಂಪನಿಗಳಿಗೆ ಹಾಗೂ WhatsApp ಬಳಕೆದಾರರಿಗೆ ಬಿಗ್ ಶಾಕನ್ನ ಕೇಂದ್ರ ಸರ್ಕಾರ ನೀಡಿದೆ. ಇನ್ಮುಂದೆ ನೀವು ನಿಮ್ಮ ಫೋನ್ ಸಿಮ್ ಕಾರ್ಡ್ ತೆಗೆದ್ರೆ WhatsApp telegram ಅಥವಾ ಸಿಗ್ನಲ್ ಅಂತಹ ಆಪ್ ಗಳು ಕೆಲಸ ಮಾಡಲ್ಲ. ಕೇಂದ್ರ ಸರ್ಕಾರವು ಮೆಸೇಜಿಂಗ್ ಪ್ಲಾಟ್ಫಾರ್ಮ್ ಗಳಿಗೆ ಸಿಮ್ ಬೈಂಡಿಂಗ್ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳಲು 90 ದಿನಗಳ ಡೆಡ್ಲೈನ್ ಅನ್ನ ನೀಡಿದೆ. ಅಷ್ಟೇ ಅಲ್ಲದೆ ಹೊಸದಾಗಿ ಮಾರುಕಟ್ಟೆಗೆ ಬರುವ ಪ್ರತಿಯೊಂದು ಸ್ಮಾರ್ಟ್ ಫೋನ್ ನಲ್ಲೂ ಸರ್ಕಾರದ ಸೈಬರ್ ಸೆಕ್ಯೂರಿಟಿ ಆಪ್ ಒಂದನ್ನ ಕಡ್ಡಾಯವಾಗಿ ಇನ್ಸ್ಟಾಲ್ ಮಾಡಿರಲೇಬೇಕು. ಜೊತೆಗೆ ಅದನ್ನ ಡಿಲೀಟ್ ಮಾಡಲು ಯಾರಿಗೂ ಅವಕಾಶ ಇರಬಾರದು ಎಂಬ ಕಠಿಣ ನಿಯಮವನ್ನ ಜಾರಿಗೆ ತರಲಾಗ್ತಿದೆ. ಫೆಬ್ರವರಿ 2026 ರಿಂದ ಜಾರಿಗೆ ಬರಲಿರುವ ಈ ನಿಯಮಗಳು ಮೊಬೈಲ್ ಪ್ರಪಂಚವನ್ನೇ ಬದಲಿಸಲಿವೆ ಆದರೆ ಜನರ ಪ್ರೈವೆಸಿ ಬಗ್ಗೆ ಒಂದಿಷ್ಟು ಆತಂಕಗಳು ಕೂಡ ಇವೆ. ಹಾಗಾದರೆ ಏನಿದು ಸಿಮ್ ಬೈಂಡಿಂಗ್ ಇನ್ಮುಂದೆವಟ್ ವೆಬ್ ಇರುತ್ತಾ ಇಲ್ವಾ ಯಾವ ಆಪ್ ಅನ್ನ ಸರ್ಕಾರ ಇನ್ಸ್ಟಾಲ್ ಮಾಡಲಿದೆ apple ಕಂಪನಿ ಸರ್ಕಾರದ ವಿರುದ್ಧ ಸಿಡಿದಿದ್ದಿದ್ದು ಯಾಕೆ ಈ ಬಗ್ಗೆ ಡೀಟೇಲ್ ಆಗಿ ನೋಡೋಣ.
ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆಗಳು ಹೆಚ್ಚಾಗ್ತಿವೆ. ಇವುಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈಗ ಮೆಸೇಜಿಂಗ್ ಆಪ್ ಗಳ ಮೇಲೆ ನೇರ ಹಿಡಿತ ಸಾಧಿಸಲು ಮುಂದಾಗಿದೆ. ಟೆಲಿಕಾಂ ಇಲಾಖೆಯ ಹೊಸ ಆದೇಶದ ಪ್ರಕಾರ WhatsApp, ಟೆಲಿಗ್ರಾಮ ಸಿಗ್ನಲ್ ಮತ್ತು ಸ್ನಾಪ್ಚಾಟ್ ನಂತಹ ಆಪ್ ಗಳು ಇನ್ಮುಂದೆ ಸಿಮ್ ಬೈಂಡಿಂಗ್ ನಿಯಮವನ್ನ ಪಾಲಿಸಲೇಬೇಕು. ಪ್ರಸ್ತುತ ಈ ಆಪ್ ಗಳು ಆರಂಭದಲ್ಲಿ ಒಮ್ಮೆ ಮಾತ್ರ ಮೊಬೈಲ್ ಸಂಖ್ಯೆಯನ್ನ ಓಟಿಪಿ ಮೂಲಕ ವೆರಿಫೈ ಮಾಡ್ತಿವೆ. ಆ ಬಳಿಕ ಬಳಕೆದಾರರು ತಮ್ಮ ಫೋನಿಂದ ಸಿಮ್ ಕಾರ್ಡ್ ತೆಗೆದ್ರು ಕೂಡ ಬೇರೆ ಸಿಮ್ ಹಾಕಿದ್ರು ಅಥವಾ ಹಳೆ ಸಿಮ್ ಡಿ ಆಕ್ಟಿವೇಟ್ ಆದ್ರೂ ಕೂಡ WhatsApp ಕೆಲಸ ಮಾಡುತ್ತಲೇ ಇರ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ನಕಲಿ ದಾಖಲೆಗಳಲ್ಲಿ ಸಿಮ್ ಪಡೆದು WhatsApp ಆಕ್ಟಿವೇಟ್ ಮಾಡಿಕೊಂಡು ನಂತರ ಸಿಮ್ ಬಿಸಾಕಿ ವಿದೇಶಗಳಿಂದಲೇ ವಂಚನೆಯನ್ನ ಎಸಗುತಾ ಇದ್ರು ಅಂತ ಸರ್ಕಾರ ಹೇಳಿದೆ. ಇದೇ ಕಾರಣಕ್ಕೆ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲು ಈಗ ಮುಂದಾಗಿದೆ. WhatsApp ವೆಬ್ ಬಳಕೆದಾರರಿಗೂ ಸಂಕಷ್ಟ. ಪ್ರತಿ ಆರು ಗಂಟೆಗೊಮ್ಮೆ ಲಾಗಿನ್ ಕಡ್ಡಾಯ. ಈ ಎಲ್ಲಾ ಲೋಪದೋಷವನ್ನ ಮುಚ್ಚಲು ಇನ್ಮುಂದೆ ಆಪ್ ಗಳು ನಿರಂತರವಾಗಿ ಸಿಮ್ ಕಾರ್ಡ್ ಫೋನ್ ನಲ್ಲೇ ಇದೆಯಾ ಅಂತ ಚೆಕ್ ಮಾಡ್ತಿರಬೇಕು. ಸಿಮ್ ತೆಗೆದ ತಕ್ಷಣ ಆಪ್ ಕೆಲಸ ಮಾಡೋದನ್ನ ನಿಲ್ಲಿಸಬೇಕು ಅಂತ ಸರ್ಕಾರ ಆದೇಶವನ್ನ ನೀಡಿದೆ. ಕೇವಲ ಮೊಬೈಲ್ ಮಾತ್ರವಲ್ಲ ಕಂಪ್ಯೂಟರ್ನಲ್ಲೂ ಕೂಡ WhatsApp ವೆಬ್ ಬಳಸುವವರೆಗೂ ಹೊಸ ತಲೆನೋವು ಶುರುವಾಗಲಿದೆ. ಹೊಸ ರೂಲ್ಸ್ ಪ್ರಕಾರವ ವೆಬ್ ಅಥವಾ ಡೆಸ್ಕ್ಟಾಪ್ ಆವೃತ್ತಿ ಬಳಸುವವರು ಪ್ರತಿ ಆರು ಗಂಟೆಗೊಮ್ಮೆ ಕಡ್ಡಾಯವಾಗಿ ಲಾಗೌಟ್ ಆಗಲಿದ್ದಾರೆ. ಮತ್ತೆ ಬಳಸಬೇಕಾದರೆ ಪ್ರತಿ ಬಾರಿಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೊಸದಾಗಿ ವೆರಿಫಿಕೇಶನ್ ಆಗಲೇಬೇಕು.
ಆಫೀಸ್ಗಳಲ್ಲಿ ಫೋನ್ ದೂರವಿಟ್ಟು ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಇದು ದೊಡ್ಡ ಮಟ್ಟದ ಕಿರಿಕಿರಿ ಉಂಟನ್ನ ಮಾಡಬಹುದು. ಟೆಲಿಕಮ್ಯುನಿಕೇಶನ್ ಸೈಬರ್ ಸೆಕ್ಯೂರಿಟಿ ಅಮೆಂಡ್ಮೆಂಟ್ ರೂಲ್ಸ್ 2025 ಅಡಿಯಲ್ಲಿ ಈ ಮೆಸೇಜಿಂಗ್ ಆಪ್ ಗಳನ್ನ ಈಗ ಟೆಲಿಕಮ್ಯುನಿಕೇಶನ್ ಐಡೆಂಟಿಫಯರ್ ಯೂಸರ್ ಎಂಟಿಟೀಸ್ ಅಂತ ಡಿವೈಡ್ ಮಾಡಲಾಗಿದೆ ಇದರರ್ಥ ಇನ್ಮುಂದೆ ಕೇವಲವಟ್ ಟೆಲಿಗ್ರಾಮ ಅಷ್ಟೇ ಅಲ್ಲ ಮೊಬೈಲ್ ನಂಬರ್ ಬಳಸುವ ಯಾವುದೇ ಆಪ್ ಮೇಲು ಸರ್ಕಾರದ ನೇರ ಕಣಗಾವಲು ಇರಲಿದೆ ವಿದೇಶಿ ಪ್ರಯಾಣಿಕರಿಗೆ ಬಾರಿ ಹೊಡಿತ ಒಂದೇ ಆಪ್ ಮಲ್ಟಿಪಲ್ ಡಿವೈಸ್ ಕಷ್ಟ ಸರ್ಕಾರದ ಈ ನಿರ್ಧಾರ ವಂಚಕರನ್ನ ತಡೆಯುವ ಉದ್ದೇಶ ಹೊಂದಿದ್ರೂ ಕೂಡ ಸಾಮಾನ್ಯ ಜನರಿಗೆ ಇದರಿಂದ ದೊಡ್ಡ ಮಟ್ಟದ ತೊಂದರೆಯಾಗುವ ಸಾಧ್ಯತೆ ಇದೆ ಉದಾಹರಣೆಗೆ ವಿದೇಶಕ್ಕೆ ಹೋಗುವ ಭಾರತೀಯರು ಅಲ್ಲಿನ ಲೋಕಲ್ ಸಿಮ್ ಹಾಕಿಕೊಂಡರೆ ಅವರ ಹಳೆ ಭಾರತೀಯ ನಂಬರ್ನ WhatsApp ಇನ್ಮುಂದೆ ಕೆಲಸ ಮಾಡಲ್ಲ ಅವರು ಮತ್ತೆ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತೆ. ಟ್ಯಾಬ್ಲೆಟ್ ಗಳಲ್ಲಿ ಅಥವಾ ಒಂದೇ ಖಾತೆಯನ್ನ ಹಲವು ಡಿವೈಸ್ ಗಳಲ್ಲಿ ಬಳಸುವವರೆಗೂ ಕೂಡ ಇದು ಅಡತಡೆ ಉಂಟು ಮಾಡಲಿದೆ. ಭಾರತದಲ್ಲಿ 50 ಕೋಟಿಗೂ ಹೆಚ್ಚು ಬಳಕೆದಾರರನ್ನ ಹೊಂದಿರುವ WhatsApp ಭಾರತದ ಈ ವಿಶಿಷ್ಟ ನಿಯಮಕ್ಕಾಗಿ ತನ್ನ ಇಡೀ ತಂತ್ರಜ್ಞಾನವನ್ನೇ ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಬಗ್ಗೆ ಯಾವುದೇ ಪೂರ್ವ ಚರ್ಚೆ ಅಥವಾ ಫಿಸಿಬಿಲಿಟಿ ಸ್ಟಡಿ ನಡೆಸಿಲ್ಲ ಅಂತ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ. ಪ್ರತಿ ಫೋನ್ನಲ್ಲೂ ಸರ್ಕಾರಿ ಆಪ್ ಕಡ್ಡಾಯ ಡಿಲೀಟ್ ಮಾಡುವಂತಿಲ್ಲ ಸಂಚಾರ್ ಸಾತಿ ಇದು ಒಂದು ಕಡೆ ಆದರೆ ಸ್ಮಾರ್ಟ್ ಫೋನ್ ಹಾರ್ಡ್ವೇರ್ ವಿಚಾರದಲ್ಲೂ ಕೂಡ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರ್ತಾ ಇದೆ. ರೈಟರ್ಸ್ ವರದಿಯ ಪ್ರಕಾರ ಇನ್ಮುಂದೆ ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ಸ್ಮಾರ್ಟ್ ಫೋನ್ ನಲ್ಲೂ ಕೂಡ ಸಂಚಾರ್ ಸಾತಿ ಎಂಬ ಸೈಬರ್ ಸೆಕ್ಯೂರಿಟಿ ಆಪ್ ಮೊದಲೇ ಇನ್ಸ್ಟಾಲ್ ಆಗಿರಲೇಬೇಕು. ಮುಖ್ಯವಾದ ವಿಚಾರ ಏನಪ್ಪಾ ಅಂತಂದ್ರೆ ಫೋನ್ ಖರೀದಿಸುವ ಗ್ರಾಹಕರು ಈ ಆಪ್ ಅನ್ನ ಅನ್ ಇನ್ಸ್ಟಾಲ್ ಮಾಡಲು ಅಥವಾ ಡಿಲೀಟ್ ಮಾಡಲು ಸಾಧ್ಯವೇ ಇರುವುದಿಲ್ಲ. ಮುಂದಿನ 90 ದಿನಗಳ ಒಳಗೆ ಎಲ್ಲಾ ಮೊಬೈಲ್ ತಯಾರಕರು ಇದನ್ನ ಪಾಲಿಸಬೇಕು ಅಂತ ಕೇಂದ್ರ ಸರ್ಕಾರ ಆದೇಶವನ್ನ ಮಾಡಿದೆ. ಈಗಾಗಲೇ ತಯಾರಾಗಿ ಗೋದಾಮುಗಳಲ್ಲಿರುವ ಫೋನ್ಗಳಿಗೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಆಪ್ ಪುಶ್ ಮಾಡಬೇಕು ಅಂತ ಸೂಚಿಸಲಾಗಿದೆ. ಕದ್ದ ಫೋನ್ಗಳ ಐಎಂಈಐ ನಂಬರ್ ಬದಲಿಸಿ ವಂಚಿಸುವುದನ್ನ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಅಂತ ಸರ್ಕಾರ ಸ್ಪಷ್ಟನೆಯನ್ನ ಕೊಟ್ಟಿದೆ.
ಸರ್ಕಾರದ ವಿರುದ್ಧ ನಿಂತಪಲ್ ಕಂಪನಿ ಪ್ರವೈಸಿ ಪಾಲಿಸಿ ವರ್ಸಸ್ ಸರ್ಕಾರದ ಆದೇಶ. ಆಂಡ್ರಾಯ್ಡ್ ಫೋನ್ಗಳು ಸರ್ಕಾರದ ಈ ಆದೇಶವನ್ನ ಪಾಲಿಸುವುದು ಸುಲಭವಾದರೂ ಕೂಡ ಐಫೋನ್ ತಯಾರಕ apple ಕಂಪನಿಗೆ ಇದು ನುಂಗಲಾರದ ತುತ್ತಾಗಿದೆ. apple ತನ್ನ ಫೋನ್ಗಳಲ್ಲಿ ತಾನು ನಿರ್ಮಿಸಿದ ಆಪ್ ಗಳನ್ನ ಬಿಟ್ಟು ಬೇರೆ ಯಾವುದೇ ಥರ್ಡ್ ಪಾರ್ಟಿ ಅಥವಾ ಸರ್ಕಾರಿ ಆಪ್ ಗಳನ್ನ ಫ್ರೀ ಇನ್ಸ್ಟಾಲ್ ಮಾಡಲು ಬಿಡುವುದಿಲ್ಲ. ಇದು ಆಪಲ್ ನ ಜಾಗತಿಕ ಪಾಲಿಸಿ ಆಗಿದೆ. ಈಗ ಭಾರತ ಸರ್ಕಾರದ ಆದೇಶ ಮತ್ತು ಆಪಲ್ ನ ಆಂತರಿಕ ನಿಯಮಗಳ ನಡುವೆ ದೊಡ್ಡ ಸಂಘರ್ಷ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಭಾರತದಲ್ಲಿ ಸದ್ಯ ಆಪಲ್ ಶೇಕಡ 4.5 ರಷ್ಟು ಮಾರುಕಟ್ಟೆ ಪಾಲನ್ನ ಹೊಂದಿದೆ ಆದರೆ ಭದ್ರತೆಯ ಹೆಸರಿನಲ್ಲಿ ಪ್ರತಿಯೊಬ್ಬರ ಫೋನ್ನಲ್ಲಿ ಡಿಲೀಟ್ ಮಾಡಲಾಗದ ಸರ್ಕಾರಿ ಆಪ್ ಇರುವುದು ಪ್ರೈವೆಸಿ ಅಥವಾ ಗೌಪತಿಯ ಪ್ರಶ್ನೆಯನ್ನ ಕೂಡ ಹುಟ್ಟು ಹಾಕಿದೆ ಸಂಚಾರ್ ಸಾತಿಯಿಂದಏಳು ಲಕ್ಷ ಫೋನ್ ರಿಕವರ್ ಎರಡು ಆದೇಶದಿಂದ ಬಳಕೆದಾರರಿಗೆ ಕಿರಿಕಿರಿ ಈ ಸಂಚಾರ ಸಾತಿ ಆಪ್ ಮೂಲಕ ಇಲ್ಲಿಯವರೆಗೆಏು ಲಕ್ಷಕ್ಕೂ ಹೆಚ್ಚು ಕಳೆದು ಹೋದ ಫೋನ್ಗಳನ್ನ ಪತ್ತೆ ಹಚ್ಚಲಾಗಿದೆ ಮತ್ತು 37 ಲಕ್ಷಕ್ಕೂ ಹೆಚ್ಚು ಕದ್ದ ಫೋನ್ಗಳನ್ನ ಬ್ಲಾಕ್ ಮಾಡಲಾಗಿದೆ ಅಂತ ಸರ್ಕಾರ ಅಂಕಿ ಅಂಶವನ್ನ ಬಿಚ್ಚಿಟ್ಟಿದೆ. ಫೋನ್ ಕಳೆದು ಹೋದ್ರೆ ಅದನ್ನ ತಕ್ಷಣ ಬ್ಲಾಕ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಈ ಆಪ್ ಸಹಕಾರಿ ಆದರೆ ಇದು ಕಡ್ಡಾಯವಾಗಿ ಪ್ರತಿಯೊಬ್ಬರ ಫೋನ್ನಲ್ಲಿ ಇರುವುದರಿಂದ ಸರ್ಕಾರದ ಕಣ್ಗಾವಲು ಹೆಚ್ಚಾಗಲಿದೆ. ಜೊತೆಗೆ ಬಳಕೆದಾರರ ಖಾಸಿಗಿತನಕ್ಕೆ ದೊಡ್ಡ ಹೊಡತ ಬೀಳಲಿದೆ ಎಂಬ ಆತಂಕ ಕೂಡ ಕೇಳಿ ಬರ್ತಾ ಇದೆ. ಆದರೆ ಸರ್ಕಾರ ಈಗಾಗಲೇ ಸಂಚಾರ ಸಾಹಿತಿ ಆಪ್ ಅನ್ನ ಫ್ರೀ ಇನ್ಸ್ಟಾಲ್ ಮಾಡಬೇಕು ಅಂತ ಆದೇಶವನ್ನ ನೀಡಿರುವುದರಿಂದ ಅನಿವಾರ್ಯವಾಗಿ ಇದನ್ನ ಜಾರಿಗೆ ತರಬೇಕಾದ ಒತ್ತಡದಲ್ಲಿ ಸ್ಮಾರ್ಟ್ ಫೋನ್ ಕಂಪನಿಗಳು ಇವೆ. ಇತ್ತ ಮೆಸೇಜಿಂಗ್ ಆಪ್ ಗಳು 2026ರ ಆರಂಭದ ವೇಳೆಗೆ ಸಿಮ್ ಬೈಂಡಿಂಗ್ ನಿಯಮ ಪಾಲಿಸದಿದ್ದರೆ ನಿಯಂತ್ರಕ ಕ್ರಮಗಳನ್ನ ಎದುರಿಸಬೇಕಾಗುತ್ತೆ. ಆದ್ದರಿಂದ ಜನವರಿಯಿಂದ WhatsApp ಮತ್ತು ಟೆಲಿಗ್ರಾಮ ಬಳಕೆದಾರರು ಕಿರಿಕಿರಿ ಅನುಭವಿಸುವುದು ಖಂಡಿತ ಎನ್ನಲಾಗುತ್ತಿದೆ.
ಫೋನ್ ಅನ್ನ ಬ್ಲಾಕ್ ಮಾಡಿದ್ರೆ ಮುಗೀತು. ಇನ್ನು ಸಂಚಾರ ಸಾತಿ ಹೇಗೆ ಕೆಲಸವನ್ನ ಮಾಡುತ್ತೆ ಎಂಬುದನ್ನ ಗಮನಿಸಿದರೆ ಪ್ರತಿ ಫೋನ್ ಒಂದು ಐಎಂಈಐ ಸಂಖ್ಯೆಯನ್ನ ಹೊಂದಿರುತ್ತೆ. ಇದು 14 ರಿಂದ 17 ಅಂಕಿಗಳ ಕೋಡ್ ಆಗಿದ್ದು ನೆಟ್ವರ್ಕ್ ಗಳಲ್ಲಿ ಫೋನ್ನ್ನ ಗುರುತಿಸುತ್ತೆ. ಈ ಆಪ್ ಒಂದು ಕೇಂದ್ರೀಯ ಪೋರ್ಟಲ್ಗೆ ಸಂಪರ್ಕ ಕಲ್ಪಿಸುತ್ತೆ. ಇದು ಬಳಕೆದಾರರಿಗೆ ತಮ್ಮ ಸ್ಮಾರ್ಟ್ ಫೋನ್ ಹೊಸದ ಅಂತ ಪರಿಶೀಲಿಸಲು ಅನುವನ್ನ ಮಾಡಿಕೊಡುತ್ತೆ. ಫೋನ್ ಕಳತನವಾದರೆ ಅದರ ಬಗ್ಗೆ ತಕ್ಷಣ ವರದಿ ಮಾಡಲು ಸಹಾಯ ಮಾಡುತ್ತೆ. ಜೊತೆಗೆ ಕಳ್ಳತನವಾದ ಫೋನ್ ನೆಟ್ವರ್ಕ್ ಸಿಗದಂತೆ ಬ್ಲಾಕ್ ಮಾಡಲು ಹೆಲ್ಪ್ ಮಾಡುತ್ತೆ. ಒಮ್ಮೆ ಫೋನನ್ನ ಸಂಚಾರ ಸಾಹಿತಿ ಮೂಲಕ ಬ್ಲಾಕ್ ಮಾಡಿದ ನಂತರ ಕಳ್ಳತನವಾದ ಹ್ಯಾಂಡ್ಸೆಟ್ ಅಪರಾಧಿಗಳಿಗೆ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗುತ್ತೆ. ಸ್ಯಾಮ್ ವಂಚನೆಯ ಕರೆಗಳು ಅಥವಾ ಕಳೆದುಹೋದ ಸಾಧನಗಳ ಸಮಸ್ಯೆಯನ್ನ ಎದುರಿಸುತ್ತಿರುವ ಬಳಕೆದಾರರಿಗೆ ಈ ಆಪ್ ಒಂದು ಸುರಕ್ಷಿತ ಕವಚವಾಗಲಿದೆ. ಒಟ್ಟನಲ್ಲಿ ಭಾರತ ಸರ್ಕಾರವು ಡಿಜಿಟಲ್ ಸುರಕ್ಷತೆ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಬಳಕೆಯ ವಿಧಾನವನ್ನೇ ಅಮೂಲಗ್ರಹವಾಗಿ ಬದಲಿಸಲು ಹೊರಟಿದೆ. 2026ರ ಜನವರಿ ಬಳಿಕ ನಿಮ್ಮವಟ್ ಬಳಕೆ ಈಗಿನಂತೆ ಇರಲ್ಲ. ಮತ್ತು ನೀವು ಹೊಸ ಫೋನ್ ತಗೊಂಡರೆ ಅದರಲ್ಲಿ ಸರ್ಕಾರಿ ಆಪ್ ಡಿಫಾಲ್ಟ್ ಆಗಿರುತ್ತೆ. ಸೈಬರ್ ವಂಚನೆ ತಡೆಯಲು ಇದು ಅನಿವಾರ್ಯ ಅಂತ ಸರ್ಕಾರ ಹೇಳ್ತಾ ಇದ್ದರೆ ಇದು ಉದ್ಯಮಕ್ಕೆ ಮತ್ತು ಬಳಕೆದಾರರ ಸ್ವಾತಂತ್ರ್ಯಕ್ಕೆ ದಕ್ಕೆ ಅಂತ ಟೆಕ್ ಕಂಪನಿಗಳು ವಾದಿಸುತ್ತವೆ. ಮುಂದಿನ ಮೂರು ತಿಂಗಳಲ್ಲಿ ಈ ನಿಯಮಗಳು ಯಾವ ರೀತಿ ಜಾರಿಯಾಗಲಿವೆ ಮತ್ತುಆಪಲ್ ನಂತಹ ದಿಗ್ಗಜ ಕಂಪನಿಗಳು ಇದಕ್ಕೆ ಬಗ್ಗುತ್ತಾ ಕಾದು ನೋಡೋಣ.


