ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಶೀಘ್ರ 10 ಗ್ರಾಂ ಚಿನ್ನಕ್ಕೆ ಒಂದುವರೆ ಲಕ್ಷ ದಾಖಲೆ ಬರೆಯಲಿದೆ ಭಾರತದ ಬಂಗಾರ ದಿಕ್ಕೆಟ್ಟು ಓಡ್ತಿರೋದ್ಯಾಕೆ ಹಳದಿ ಲೋಹ ನಮಸ್ಕಾರ ಸ್ನೇಹಿತರೆ ಚಿನ್ನ ಬಂಗಾರ ಹೊನ್ನು ಹೀಗೆ ಹತ್ತು ಹಲವು ಹೆಸರಿಂದ ಕರಿಸಿಕೊಳ್ಳೋ ಗೋಲ್ಡ್ ಭಾರತೀಯರ ಅತ್ಯಂತ ಅಚ್ಚುಮೆಚ್ಚಿನ ಲೋಹ ಎಷ್ಟರ ಮಟ್ಟಿಗೆ ಅಂದ್ರೆ ಮನುಷ್ಯರನ್ನೇ ಚಿನ್ನ ಬಂಗಾರ ಅಪರಂಜಿ ಅಂತ ಕರೆಯೋಕೆ ಶುರು ಮಾಡ್ತಾರೆ ಆದರೆ ಅಂತಹ ಚಿನ್ನದ ಲೋಕದಲ್ಲಿಗ ಭಾರಿ ಸುನಾಮಿ ಎದ್ದಿದೆ ಒಂದೇ ಸಮನೆ ಚಿನ್ನದ ರೇಟು ಗಗನಕ್ಕೆರ್ತಿದೆ 10 ಗ್ರಾಂ ಚಿನ್ನದ ಬೆಲೆ ಈಗ ಒಂು ಲಕ್ಷ ರೂಪಾಯಿ ತಲುಪಿದೆ ಸಾರ್ವಕಾಲಿಕ ಗರಿಷ್ಠ ದಾಖಲೆ ಬರ್ತಿದೆ ಎರಡೇ ತಿಂಗಳಲ್ಲಿ 7000 ರೂಪಾಯಿ ಜಂಪ್ ಆಗಿದೆ ಆದರೆ ಆತಂಕಕಾರಿ ಸಂಗತಿ ಅಂದ್ರೆ ಚಿನ್ನದ ಓಟ ಇಲ್ಲಿಗೆ ನಿಲ್ಲೋದಿಲ್ಲ ಶೀಘ್ರದಲ್ಲೇ ಒಂದುವರೆ ಲಕ್ಷದ ಗಡಿ ಕೂಡ ದಾಟುತ್ತೆ ಅಂತ ಹೇಳ್ತಿದ್ದಾರೆ ಹಾಗಿದ್ರೆ ಇದಕ್ಕೆ ಕಾರಣ ಏನು ಬಂಗಾರದ ರೇಟ್ ಒಂದೇ ಸಮನೆ ಏರ್ತಿರೋದು ಯಾಕೆ 70ಸಾವಿರಕ್ಕೆ ಇಳಿಯುತ್ತೆ ಅಂದಿದ್ದ ಚಿನ್ನ ಮತ್ತೆ ಏರಿದಯಾಕೆ ಎಲ್ಲಿವರೆಗೆ ಹೀಗೆ ಏರುತ್ತೆ ಹಿಸ್ಟಾರಿಕಲ್ ಡಾಟಾ ಏನ್ ಹೇಳುತ್ತೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ ಕಡೆ ತನಕ ನೋಡಿ ಒಂದು ಲಕ್ಷ ದಾಟಿದ ಚಿನ್ನ. ಸ್ನೇಹಿತರೆ ಸದ್ಯ ಭಾರತದಲ್ಲಿ ಹಬ್ಬದ ಸೀಸನ್, ಗಣೇಶ್ ಚತುರ್ಥಿ, ದಸರಾ ಅಂತ ಮನೆಗಳೆಲ್ಲ ಸಡಗರ ಸಂಭ್ರಮದಿಂದ ಭರ್ಜರಿ ಶಾಪಿಂಗ್ ನಡೆಯುತ್ತಿದೆ. ಆದರೆ ಗೋಲ್ಡ್ ಮಾತ್ರ ಸಡನ್ ಶಾಕ್ ಕೊಟ್ಟಿದೆ. ನೀವಿಲ್ಲಿ ನೋಡ್ತಿರಬಹುದು ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 3586 ಡಾಲರ್ ಇದೆ ಒಂದು ಔನ್ಸ್ ಅಂದ್ರೆ 28ಗ್ರಾಂ ಈ ವರ್ಷದ ಆರಂಭದಲ್ಲಿ ಇದು 2700 ಡಾಲರ್ ಇತ್ತು ಈಗ ಕೇವಲಎಂಟು ತಿಂಗಳಲ್ಲಿ 1000 ನಷ್ಟು ಎದ್ದಿದೆ. ಭಾರತದಲ್ಲಿ ಕೂಡ ಸೇಮ್.
10ಗಾಂ ಶುದ್ಧ ಚಿನ್ನದ ಬೆಲೆ ಬರೋಬರಿ 1,6,000 ಆಗಿದೆ. ಜುಲೈ ಅಂತದಲ್ಲಿ 98,000 ರೂಪಾಯ ಇತ್ತು. ಎರಡು ತಿಂಗಳು ಅನ್ನುವಷ್ಟರಲ್ಲಿ 4000 ರೂಪಾಯಿ ಜಂಪ್ ಆಗಿದೆ ಏನ್ರೀ 4000 ಅಷ್ಟೇ ಅಲ್ವಾ ಅನಿಸಬಹುದು ಆದ್ರೆ ಮದುವೆ ಮನೆಯವರನ್ನ ಕೇಳಿ ತಾಳಿ ಚೈನು ಓಲೆ ನೆಕ್ಲೇಸ್ ಬ್ರೇಸ್ಲೆಟ್ ಅಂತಹೇಳಿ 30ರಿಂದ 40ಗ್ರಾಂ ಚಿನ್ನ ಖರೀದಿ ಮಾಡುವಷ್ಟರಲ್ಲೇ ನಾಲ್ಕೈದು ಲಕ್ಷ ಕಿತ್ಕೊಂಡು ಹೋಗಿರುತ್ತೆ ಹೀಗಾಗಿ ಗೋಲ್ಡ್ ಪರ್ಚೇಸ್ ಮಾಡೋದು ಕಷ್ಟ ಆಗಿದೆ ಕೇವಲ ಮದುವೆಯವರಷ್ಟೇ ಅಂತಲ್ಲ ಚಿನ್ನ ಅಡ ಇಟ್ಟು ಸಾಲ ತಗೊಂಡವರಿಗೂ ಭರ್ಜರಿ ಪೆಟ್ಟು ಬೀಳ್ತಿದೆ ಫ್ಲೋಟಿಂಗ್ ಇಂಟರೆಸ್ಟ್ ರೇಟ್ ಇರೋದ್ರಿಂದ ಇಎಂಐ ಜಾಸ್ತಿ ಕಟ್ಟಬೇಕಾಗಿದೆ. ಹಾಗಂತ ಇದು ನೆನ್ನೆ ಮೊನ್ನೆ ಜಾಸ್ತಿ ಆಗಿರೋದಲ್ಲ. ಕೆಲ ತಿಂಗಳುಗಳಿಂದ ಇದೇ ಟ್ರೆಂಡ್ ಇದೆ. ಕಳೆದ ವರ್ಷದಿಂದ ಬರೀ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬರೋಬರಿ 50% ಇನ್ಕ್ರೀಸ್ ಆಗಿದೆ. ಎಂಟೇ ತಿಂಗಳಲ್ಲಿ 24ಸ000 ರೂಪಾಯಿ ಜಂಪ್ ಆಗಿದೆ. ಸ್ನೇಹಿತರೆ ಇದು ಇತ್ತೀಚಿನ ದಶಕಗಳಲ್ಲೇ ಹೈಯೆಸ್ಟ್ ಏರಿಕೆ. ನೀವಿಲ್ಲಿ ನೋಡ್ತಿರಬಹುದು 2011 ರಲ್ಲಿ 42% ಅಥವಾ 8000 ರೂಪಾಯ ಏರಿಕೆಯಾಗಿರೋದೇ ದಾಖಲೆಯಾಗಿತ್ತು. ಆದರೀಗ ವರ್ಷ ಮುಗಿಯೋಕೆ ಇನ್ನು ನಾಲ್ಕು ತಿಂಗಳು ಬಾಕಿ ಇರುವಾಗಲೇ ಹತ್ರ 24ಸ000 ರೂಪಾಯಿ ಏರಿಕೆಯಾಗಿದೆ. ಏನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯು ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಸ್ಸಾಂ ಮೇಘಾಲಯಕ್ಕೆ ಸಿಕ್ಸ್ ನೈಟ್ ಸೆವೆನ್ ಡೇ ಟ್ರಿಪ್ ಅನ್ನ ಆಯೋಜಿಸಿದೆ. ಕಾಮಾಕ್ಯ ಶಕ್ತಿಪೀಠ ಗುವಾಹಟಿ ಮಾವಲ್ಯಾಂಗ್ ಕ್ಲೀನೆಸ್ಟ್ ವಿಲೇಜ್ ಇನ್ ಏಷ್ಯಾ ದ್ವಾಕಿ ರಿವರ್ ಶಿಲಾಂಗ್ ಚಿರಾಪುಂಜಿ ಸೆವೆನ್ ಸಿಸ್ಟರ್ ವಾಟರ್ ಫಾಲ್ಸ್ ಹಾಗೆ ಕಾಂಜಿರಂಗ ನ್ಯಾಷನಲ್ ಪಾರ್ಕ್ ಸಫಾರಿ ಎಲ್ಲ ಹೋಗೋದಿರುತ್ತೆ. ಆಫರ್ ಪ್ರೈಸ್ ಕೇವಲ 65,700ರೂ ಮಾತ್ರ ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಕೂಡ ಇರುತ್ತೆ. ಹೊರಡೋ ದಿನ ನವೆಂಬರ್ 6 2025 ಕೆಲವೇ ಸೀಟುಗಳು ಲಭ್ಯ ಇದೆ. ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನು ಕೂಡ ಬುಕ್ ಮಾಡಿ. ಬನ್ನಿ ಈಗ ವರದಿಯಲ್ಲಿ ಮುಂದುವರಿಯೋಣ. ಒಂದೂವರೆ ಲಕ್ಷ ದಾಟುತ್ತೆ. ಹೌದು ಸ್ನೇಹಿತರೆ ಜಾಗತಿಕ ಸಂಸ್ಥೆಗಳು ಇಂಥದ್ದೊಂದು ಪ್ರೊಜೆಕ್ಷನ್ ನೀಡ್ತಿವೆ. ಟ್ರಂಪ್ ಅಮೆರಿಕಾದ ಸೆಂಟ್ರಲ್ ಬ್ಯಾಂಕ್ ನ ಕಡೆಗಣಿಸಿದರೆ ಒಂದು ಟ್ರಾಯಿನ ಚಿನ್ನ 2026ರ ಮಧ್ಯದೊಳಗೆ 5000 ಡಾಲರ್ ತಲುಪಬಹುದು ಅಂತ ಪ್ರತಿಷ್ಠಿತ ಸಂಸ್ಥೆ ಗೋಲ್ಡ್ ಮನ್ ಸ್ಯಾಕ್ಸ್ ಹೇಳಿದೆ. ಸ್ನೇಹಿತರೆ ಇಲ್ಲಿ ಒಂದು ಟ್ರಾಯ್ ಅಂದ್ರೆ ಮೂರು ತೊಲೆ ಅಥವಾ 31 ಗ್ರಾಂ ಚಿನ್ನ. ಆ ಲೆಕ್ಕದಲ್ಲಿ 10 ಗ್ರಾಂ ಚಿನ್ನಕ್ಕೆ ಎಷ್ಟಾಗುತ್ತೆ ಅಂತ ನೋಡಿದ್ರೆ 1666 ಡಾಲರ್ ಆಗುತ್ತೆ. ಇದನ್ನ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದ್ರೆ 1,46,600ರೂ. ಆದರೆ ಡಾಲರ್ ರೇಟು ಹೀಗೆ ಇರಲ್ಲ. ಏರಿಕೆಯಾಗುತ್ತೆ. ಜೊತೆಗೆ ಆಮದು ಸುಂಕ ಲಾಜಿಸ್ಟಿಕ್ ಕಾರಣಗಳಿಂದ ಯಾವಾಗಲೂ ಜಾಗತಿಕ ಚಿನ್ನದ ದರಕ್ಕಿಂತ ಭಾರತದ ಚಿನ್ನದ ಬೆಲೆ 5ಸ000 ಜಾಸ್ತಿನೇ ಇರುತ್ತೆ. ಇದನ್ನೆಲ್ಲ ಪರಿಗಣಿಸುವುದಾದರೆ ಗೋಲ್ಡ್ ಮನ್ಸ್ ಆಕ್ಸ್ ರಿಪೋರ್ಟ್ ಪ್ರಕಾರ ಬಂಗಾರ ಒಂದೂವರೆ ಲಕ್ಷದ ಗಡಿ ದಾಟೋದು ಖಚಿತ. ಕೇವಲ ಗೋಲ್ಡ್ ಮನ್ ಆಕ್ಸ್ ಅಷ್ಟೇ ಅಲ್ಲ ಹೂಡಿಕೆ ಸಂಸ್ಥೆ ಜೆಪಿ ಮಾರ್ಗನ್ ಆರ್ಥಿಕ ತಜ್ಞ ಪೀಟರ್ ಶಿಫ್ ಸೇರಿದಂತೆ ಅನೇಕ ಜಾಗತಿಕ ಸಂಸ್ಥೆ ಎಕನಾಮಿಸ್ಟ್ಗಳು ಇದೇ ಪ್ರಾಜೆಕ್ಷನ್ ನೀಡ್ತಿದ್ದಾರೆ. ಚಿನ್ನದ ಓಟ ಇಲ್ಲಿಗೆ ನಿಲ್ಲಲ್ಲ. ಒಂದುವರೆ ಲಕ್ಷ ಕ್ರಾಸ್ ಆಗುತ್ತೆ ಅಂತಿದ್ದಾರೆ. ಆದರೆ ಸ್ನೇಹಿತರೆ ಎರಡು ತಿಂಗಳ ಹಿಂದೆಯಷ್ಟೇ ಚಿನ್ನದ ರೇಟು ಇಳಿಬಹುದು ಅನ್ನೋ ರಿಪೋರ್ಟ್ಸ್ ಬಂದಿದ್ವು. 10 ಗ್ರಾಂ ಚಿನ್ನ 70,000ಗೆ ಕುಸಿಯಬಹುದು ಅನ್ನೋ ನಿರೀಕ್ಷೆ ಹುಟ್ಟಿಸಿದ್ವು.
ಹಣಕಾಸು ಸಂಸ್ಥೆಗಳು ಸಹ 2025 ರಲ್ಲಿ ಚಿನ್ನದ ಬೆಲೆ ಕಮ್ಮಿಯಾಗುತ್ತೆ ಅಂತ ಹೇಳಿದ್ವು. ಆದರೆ ಚಿನ್ನ ಮಾತ್ರ ತಜ್ಞರ ಅಂದಾಜು ಮೀರಿ ಏರುತ್ತಿದೆ. ಹಾಗಿದ್ರೆ ಇದಕ್ಕೆ ಕಾರಣ ಏನು? ಎಲ್ಲಾ ಟ್ರಂಪ್ ಆಟ. ಹೌದು ಸ್ನೇಹಿತರೆ ಇಡೀ ಜಗತ್ತನ್ನೇ ತಮ್ಮ ಚಿತ್ರ ವಿಚಿತ್ರ ನೀತಿಗಳಿಂದ ಕುಣಿಸ್ತಿರೋ ಟ್ರಂಪ್ ಚಿನ್ನದ ಬೆಲೆ ಏರಿಕೆಗೂ ಕಾರಣ ಆಗಿದ್ದಾರೆ ನಿಮಗೆಲ್ಲ ಗೊತ್ತಿರೋ ಹಾಗೆ ಚಿನ್ನ ಲಿಮಿಟೆಡ್ ಸಂಪತ್ತು ಹೀಗಾಗಿ ಚಿನ್ನದ ವ್ಯಾಲ್ಯೂ ಯಾವಾಗಲೂ ಜಾಸ್ತಿ ಆಗ್ತಿರುತ್ತೆ ಈ ಚಾರ್ಟ್ ನೋಡಿ ಇದು 1960 ರ ಕಾಲದ ಚಾರ್ಟ್ ಆಗ 10 ಗ್ರಾಂ ಗೆ 63 ರೂಪಾಯಿ ಮಾತ್ರ ಇತ್ತು ಅಂದರೆ ಗ್ರಾಂ ಗೆ 6 ರೂಪಾಯಿ ಮೂರು ಪೈಸೆ ಅಷ್ಟೇ ಅದು 24 ಕ್ಯಾರೆಟ್ ಗೋಲ್ಡ್ ಗೆ ಆದ್ರೆ ಅದು ಏರ್ತಾ ಏರ್ತಾ 2000ನೇ ಇಸವಿಗೆ 10ಗ್ರಾಂ ಗೆ 4400 ರೂಪಯ ಆಗಿದೆ 2002 ರಲ್ಲಿ 4990 ರೂಪಯ ಆಯ್ತು 2003 ರಲ್ಲಿ 5600 ರೂಪಯ 2006ರ ಟೈಮ್ಗೆ 9000 ಈಗ 1 ಲಕ್ಷ ಆಗೋಗಿದೆ ಹೀಗಾಗಿ ಚಿನ್ನದಲ್ಲಿ ಹೂಡಿಕೆ ಮಾಡಿದ್ರೆ ಯಾವತ್ತೂ ಲಾಸ್ ಇರಲ್ಲ ಏನಿಲ್ಲ ಅಂದ್ರು ಪ್ರತಿವರ್ಷ 11 ರಿಂದ 12% ರಿಟರ್ನ್ಸ್ ಬರ್ತಾ ಇರುತ್ತೆ ಜೊತೆಗೆ ವಿಶ್ವದಲ್ಲಿ ಎಲ್ಲಾ ಕಡೆ ಚಿನ್ನನ ಆಕ್ಸೆಪ್ಟ್ ಮಾಡ್ತಾರೆ ಅಲ್ದೇ ರೂಪಾಯಿ ಡಾಲರ್ ತರ ಇನ್ಫ್ಲೇಷನ್ ಆದಾಗ ಚಿನ್ನ ಬೆಲೆ ಕಳ್ಕೊಳ್ಳೋದಿಲ್ಲ ಹೀಗಾಗಿ ಆರ್ಥಿಕ ಬಿಕ್ಕಟ್ಟು ಯುದ್ಧ ಮಹಾಮಾರಿ ಏನೇ ಸಂಕಷ್ಟ ಬಂದ್ರು ಜನ ಸೇಫ್ ಅಸೆಟ್ ಅಂತ ಹೇಳಿ ಗೋಲ್ಡ್ನಲ್ಲಿ ಹುಡಿಕೆ ಮಾಡ್ತಾರೆ ಸ್ಟಾಕ್ ಬಾಂಡ್ಗಳಲ್ಲಿ ಹಾಕಿದ ಹಣ ತೆಗೆದು ಚಿನ್ನದಲ್ಲಿ ಹಾಕ್ತಾರೆ ಈಗ ಕೂಡ ಹಾಗೆ ಆಗಿದೆ ಆಲ್ರೆಡಿ ರಷ್ಯಾ ಯುಕ್ರೇನ್ ಯುದ್ಧ ಗಾಜಾ ಯುದ್ಧದಿಂದ ಜನ ಚಿನ್ನಕ್ಕೆ ಮರಳೋದು ಜಾಸ್ತಿ ಆಗಿತ್ತು ಈಗ ಟ್ರಂಪ್ ಬಂದು ಅದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದ್ದಾರೆ 100ಕ್ಕೂ ಅಧಿಕ ರಾಷ್ಟ್ರಗಳ ಮೇಲೆ ಟ್ಯಾರಿಫ್ ಹಾಕಿದ್ದಾರೆ ಭಾರತದಂತಹ ಮಿತ್ರ ರಾಷ್ಟ್ರದ ಮೇಲೆ 50% ಸುಂಕ ಸಾರಿದ್ದಾರೆ ವಿಶ್ವವ್ಯಾಪಿ ವ್ಯಾಪಾರ ಯುದ್ಧ ನಡೆಸುತ್ತಿದ್ದಾರೆ ಇದರಿಂದ ಜಾಗತಿಕ ವ್ಯಾಪಾರ 10% ನಷ್ಟು ಕುಸಿಬಹುದು ಜಾಗತಿಕ ಜಿಡಿಪಿ 1% ನಷ್ಟು ಕುಗ್ಗಬಹುದು ಅನ್ನೋ ಅಂದಾಜಿದೆ ಅಲ್ದೆ ಒಂದುವರೆ ನಷ್ಟು ಇನ್ಫ್ಲೇಷನ್ ಹೆಚ್ಚಾಗಲಿದೆ ಹೀಗಾದಾಗ ಸ್ಟಾಕ್ ಬಾಂಡ್ ಗಳಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗೋದಿಲ್ಲ ಈಗಾಗಲೇ ಏಪ್ರಿಲ್ ನಲ್ಲಿ ಅಮೆರಿಕ ಕಾದ ಮಾರ್ಕೆಟ್ಗಳೇ 4% ನಷ್ಟ ಅನುಭವಿಸಿವೆ ಹುಡುಕೆದಾರರು ಸುಮಾರು 5 ಟ್ರಿಲಿಯನ್ ನಷ್ಟು ನಷ್ಟ ಅನುಭವಿಸಿದ್ದಾರೆ ಸಾಲದಂತೆ ಟ್ರಂಪ್ ಅಮೆರಿಕಾದ ಸೆಂಟ್ರಲ್ ಬ್ಯಾಂಕ್ ಮೇಲೆನೇ ದಾಳಿ ಮಾಡ್ತಿದ್ದಾರೆ ಮತ್ತೊಂದು ಕಡೆ ಅಮೆರಿಕಾದ ಡಾಲರ್ ಕೂಡ ವೀಕ್ ಆಗ್ತಿದೆ ಹೀಗಾಗಿ ವಿಶ್ವದಾದ್ಯಂತ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡೋದು ಇನ್ನಷ್ಟು ಜಾಸ್ತಿ ಮಾಡಿದ್ದಾರೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಕೇವಲ ಎಟಿಎಫ್ ಮೂಲಕನೇ ಈ ವರ್ಷದ ಮೊದಲಾರ್ಥದಲ್ಲಿ 38 ಬಿಲಿಯನ್ ನಷ್ಟು ಚಿನ್ನದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ.
ಎಷ್ಟರ ಮಟ್ಟಿಗೆ ಅಮೆರಿಕಾದ ಕಾಮೆಕ್ಸ್ ಅಂದ್ರೆ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ಹೂಡಿಕೆ ಜಾಸ್ತಿಯಾಗಿರೋದ್ರಿಂದ ಬರೋಬರಿ 393 ಮೆಟ್ರಿಕ್ ಟನ್ ನಷ್ಟು ಚಿನ್ನ ತಂದಿಡಲಾಗಿದೆಯಂತೆ. ಇದರ ಜೊತೆಗೆ ಅರ್ಧ ಸೆಂಟ್ರಲ್ ಬ್ಯಾಂಕುಗಳು ಕೂಡ ಡಾಲರ್ ಬದಲು ಚಿನ್ನದಲ್ಲಿ ತಮ್ಮ ರಿಸರ್ವ್ ನ ಇಡೋದು ಜಾಸ್ತಿ ಮಾಡಿವೆ. ಚಿನ್ನ ಖರೀದಿ ಮಾಡಿ ಇಟ್ಕೊಳ್ಳುತ್ತಿವೆ. 20232 ರಲ್ಲಿ ಸಾವಿರ ಸಾವಿರ ಟನ್ ಅಷ್ಟು ಪರ್ಚೇಸ್ ಮಾಡಿ ಇಟ್ಕೊಂಡಿದ್ವು ಈ ವರ್ಷ ಕೂಡ ಅದು ಕಂಟಿನ್ಯೂ ಆಗಿದೆ ಕಳೆದ ಎರಡು ತಿಂಗಳಲ್ಲಿ ಸೆಂಟ್ರಲ್ ಬ್ಯಾಂಕ್ಗಳು 20 ಟನ್ ಗಳಷ್ಟು ಚಿನ್ನ ಖರೀದಿ ಮಾಡಿವೆ ನಮ್ಮ ಆರ್ಬಿಐ ಕೂಡ 2021 ರಲ್ಲಿ 754 ಟನ್ ಇದ್ದ ಗೋಲ್ಡ್ ರಿಸರ್ವ್ನ ಈಗ 876 ಟನ್ಗೆ ತಂದು ನಿಲ್ಿಸಿದೆ ಇದರಿಂದ ಚಿನ್ನದ ಲಭ್ಯತೆ ಕಮ್ಮಿಯಾಗಿ ಚಿನ್ನದ ರೇಟು ಗಗನ ಮುಟ್ಟಿದೆ ಸೋ ಫ್ರೆಂಡ್ಸ್ ಇದಾಗಿತ್ತು ಚಿನ್ನ ಈ ರೀತಿ ಒಂದೇ ಸಮನೆ ಯಾಕೆ ಏರಿಕೆ ಆಗ್ತಿದೆ ಜೊತೆಗೆ ಯಾಕೆ ಆರ್ಥಿಕ ಸಂಸ್ಥೆಗಳು ಚಿನ್ನ ಒಂದುವರೆ ಲಕ್ಷ ತಲುಪಬಹುದು ಅಂತ ಹೇಳ್ತಿದ್ದಾರೆ ಅನ್ನೋದನ್ನ ತಿಳಿಸೋ ಪ್ರಯತ್ನ.