Thursday, November 20, 2025
HomeTech Tips and Tricksಗ್ಲೋಬಲ್ ಜ್ಞಾನ ಯುದ್ಧ: ವಿಕಿಪೀಡಿಯಾ ಮತ್ತು Grokipedia– ಭಾರತದ ದೃಷ್ಟಿಕೋನ

ಗ್ಲೋಬಲ್ ಜ್ಞಾನ ಯುದ್ಧ: ವಿಕಿಪೀಡಿಯಾ ಮತ್ತು Grokipedia– ಭಾರತದ ದೃಷ್ಟಿಕೋನ

ವಿಕಿಪೀಡಿಯಾದಲ್ಲಿ ಯಾವ ವಿಷಯ ಇಲ್ಲ ಹೇಳಿ ಎಲ್ಲದರ ಬಗ್ಗೆಯೂ ಡೀಟೇಲ್ ಆಗಿ ಸಂಪೂರ್ಣ ಮಾಹಿತಿ ಇರುತ್ತೆ ಅಂತಹ ವಿಕಿಪೀಡಿಯಾಗೆ ಈಗ ಸ್ಪೇಸ್ ಎಕ್ಸ್ ಮಾಲಿಕ ಎಲಾನ್ ಮಸ್ಕ್ ಸೆಡ್ಡು ಹೊಡೆದಿದ್ದಾರೆ ಜನಪ್ರಿಯ ವಿಕಿಪೀಡಿಯಾಗೆ ಆಲ್ಟರ್ನೇಟಿವ್ ಎಂಬತ್ತೆ ತಮ್ಮದೇ ಆದ ವೆಬ್ಸೈಟ್ ಗ್ರೋಕಿಪೀಡಿಯಾಗೆ ಚಾಲನೆ ನೀಡಿದ್ದಾರೆ ಇದು ಈಗ ಇಂಟರ್ನೆಟ್ ಜಗತ್ತಲ್ಲಿ ದೊಡ್ಡ ಕ್ರಾಂತಿಯನ್ನ ಸೃಷ್ಟಿಸಿದೆ ಇಂಟರ್ನೆಟ್ ನಲ್ಲಿ ಸತ್ಯ ಯಾವುದು ಅಂತ ನಿರ್ಧರಿಸುವ ಒಂದು ದೊಡ್ಡ ಮಾಹಿತಿ ಮಹಾಯುದ್ಧಕ್ಕೆ ಈಗ ವೇದಿಕೆ ಸಿದ್ಧವಾಗಿದೆ ಒಂದುಕಡೆ ಜನರ ಶಕ್ತಿ ನಡೆಯುವ ವಿಕಿಪೀಡಿಯಾ ಇದ್ರೆ ಇನ್ನೊಂದು ಕಡೆ ಎಲಾನ್ ಮಸ್ಕ್ ಅವರ ಎಐ ಸೃಷ್ಟಿತ ಗ್ರೋಕಿಪೀಡಿಯಾ ಇದೆ ವಿಕಿಪೀಡಿಯಾದಲ್ಲಿರುವಂತ ಪ್ರಪಗಂಡವನ್ನ ತೊಡೆದು ಹಾಕುವುದಾಗಿ ಮಸ್ಕ್ ಘೋಷಣೆಯನ್ನ ಮಾಡಿದ್ದಾರೆ ಹಾಗಾದರೆ ಗ್ರೋಕಿಪೀಡಿಯಾ ನಿಜವಾಗಿಯೂ ಸತ್ಯದ ಹೊಸ ಧಾರಿಗೆ ಅಥವಾ ಒಬ್ಬ ವ್ಯಕ್ತಿಯ ವಿಚಾರಗಳನ್ನ ಜಗತ್ತಿನ ಮೇಲೆ ಹೇರುವ ಪ್ರಯತ್ನವೇ ಭಾರತಕ್ಕೆ ಇದು ಅನುಕೂಲಕರವೇ.

ಚಾರ್ಟ್ ಚಿಪಿಟಿ ಮತ್ತು ಜೆಮಿನಿ ಎಐಗೆ ಗ್ರೋಕ್ ಮೂಲಕ ಸೆಡ್ಡು ಹರೆದಿದ್ದ ಮಸ್ಕ್ ಈಗ ಜಗತ್ತಿನ ಜನಪ್ರಿಯ ಜ್ಞಾನಕೋಶ ವಿಕಿಪೀಡಿಯಾ ಮೂಲಕ ಸೆಡ್ಡು ಹರೆದಿದ್ದಾರೆ. ಎಲನ್ ಮಸ್ಕ್ ಅವರ ಪ್ರಕಾರ ವಿಕಿಪೀಡಿಯಾವು ಸೈದ್ಧಾಂತಿಕವಾಗಿ ಪಕ್ಷಪಾತದಿಂದ ಕೂಡಿದ್ದು ಸತ್ಯವನ್ನ ನಿಷ್ಪಕ್ಷಪಾತವಾಗಿ ತಿಳಿಸ್ತಾ ಇಲ್ಲ. ಈ ಕೊರತೆಯನ್ನ ನೀಗಿಸಲು ಕಡಿಮೆ ಪಕ್ಷಪಾತದ ಜ್ಞಾನಕೋಶವನ್ನ ನೀಡುವುದೇ ಗ್ರೋಕಿಪೀಡಿಯಾದ ಉದ್ದೇಶವಂತೆ ಇದೆ ಅಕ್ಟೋಬರ್ 27 ರಂದು ಈ ಗ್ರೋಕಿಪೀಡಿಯಾ ಅಧಿಕೃತವಾಗಿ ಪ್ರಾರಂಭವಾಗಿದೆ ರಿಲೀಸ್ ಬಳಿಕ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು ಆದರೆ ಈಗ ಮತ್ತೆ ಓಪನ್ ಆಗಿದೆ ಸುಮಾರುಎಂಟರಿಂದ 9ು ಲಕ್ಷ ಆರ್ಟಿಕಲ್ಗಳನ್ನ ಇದು ಹೊಂದಿದೆ ಇವೆಲ್ಲವನ್ನ ಗ್ರೋಕೋಎಐ ಮಾಡೆಲ್ ನಿಂದ ಸೃಷ್ಟಿಸಲಾಗಿದೆ ಸುಮ್ಮನೆ ಮತ್ತು ಹೋಲಿಕೆಗಾಗಿ ಹೇಳುವುದಾದರೆ ಸುಮಾರು 25 ವರ್ಷಗಳಿಂದ ಇರುವ ವಿಕಿಪೀಡಿಯಾದಲ್ಲಿ 70 ಲಕ್ಷಕ್ಕೂ ಹೆಚ್ಚು ಲೇಖನಗಳನ್ನ ಮನುಷ್ಯರೇ ಬರೆದು ಎಡಿಟ್ ಮಾಡಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ವಿಕಿಪೀಡಿಯಾ ವರ್ಸಸ್ ಗ್ರೋಕಿಪೀಡಿಯಾ ಹೇಗೆ ಭಿನ್ನ ಈ ಎರಡು ವೇದಿಕೆಗಳ ನಡುವೆ ಕೇವಲ ಲೇಖನಗಳ ಸಂಖ್ಯೆಯ ವ್ಯತ್ಯಾಸವಿಲ್ಲ ಅವುಗಳ ಕಾರ್ಯವೈಕರಿಯಲ್ಲೂ ಕೂಡ ಹಲವು ಮೂಲಭೂತ ವ್ಯತ್ಯಾಸಗಳಿವೆ ಪ್ರಮುಖವಾಗಿ ಲೇಖನ ರಚನೆಯಲ್ಲಿ ಎರಡರ ಮಧ್ಯೆ ಭಾರಿ ವ್ಯತ್ಯಾಸಗಳು ಇವೆ ವಿಕಿಪೀಡಿಯಾದಲ್ಲಿ ಜಗತ್ತಿನ ಅಧ್ಯಂತ ಇರುವ ಸ್ವಯಂಸೇವ ಕರು ಆರ್ಟಿಕಲ್ಗಳನ್ನ ಬರೆಯುತ್ತಾರೆ ಈ ಎರಡು ವೇದಿಕೆಗಳ ನಡುವೆ ಕೇವಲ ಲೇಖನಗಳ ಸಂಖ್ಯೆಯ ವ್ಯತ್ಯಾಸವಿಲ್ಲ ಅವುಗಳ ಕಾರ್ಯವೈಕರಿಯಲ್ಲೂ ಕೂಡ ಹಲವು ಮೂಲಭೂತ ವ್ಯತ್ಯಾಸಗಳು ಇವೆ ಎಡಿಟ್ ಮಾಡ್ತಾರೆ ಚರ್ಚೆಯ ಮೂಲಕ ಒಂಬತ್ತಕ್ಕೆ ಬರ್ತಾರೆ ಆದರೆ ಗ್ರೋಕಿಪೀಡಿಯಾದಲ್ಲಿ ಎಲ್ಲಾ ಲೇಖನಗಳನ್ನ ಎಐ ಜನರೇಟ್ ಮಾಡುತ್ತೆ ಇದರಲ್ಲಿನ ಕೆಲವು ಲೇಖನಗಳು ವಿಕಿಪೀಡಿಯಾದಿಂದಲೇ ಕಾಪಿ ಮಾಡಿದಂತಿತ್ತು ಅವುಗಳನ್ನೇ ಆದರಿಸಿದೆ ಇನ್ನು ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಲೇಖನಗಳನ್ನ ಎಡಿಟ್ ಮಾಡಬಹುದು ಇದು ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ವಿಧಾನ ಆದರೆ ಗ್ರೋಕಿಪೀಡಿಯಾದಲ್ಲಿ ಬಳಕೆದಾರರು ನೇರವಾಗಿ ಎಡಿಟ್ ಮಾಡುವಂತಿಲ್ಲ ಅವರು ಕೇವಲ ತಪ್ಪುಗಳಿದ್ದರೆ ಸಲೇಹನ್ನ ಮಾತ್ರ ನೀಡಬಹುದು. ಆದರೆ ಫೈನಲ್ ಡಿಸಿಷನ್ ಎಐ ಮತ್ತು ಕಂಪನಿಯ ಕೈಯಲ್ಲಿರುತ್ತೆ.

ಅಂದ್ರೆ ಇದು ಜಾಸ್ತಿ ಕಂಟ್ರೋಲ್ಡ್ ಸಿಸ್ಟಮ್ ವಿಚಾರವನ್ನ ನೋಡುವುದಾದರೆ ವಿಕಿಪೀಡಿಯಾವು ಎಡಪಂತಿಯ ಅಥವಾ ಉದಾರವಾದಿ ಚಿಂತನೆಗಳಿಗೆ ಹೆಚ್ಚು ಒತ್ತನ್ನ ನೀಡುತ್ತೆ ಮತ್ತು ಸಂಪ್ರದಾಯವಾದಿ ಮಾಧ್ಯಮಗಳನ್ನ ಕಡೆಗಣಿಸುತ್ತದೆ ಎಂಬುದು ಮಸ್ಕ್ ಮತ್ತು ಅವರ ಬೆಂಬಲಿಗರ ಆರೋಪ ಉದಾಹರಣೆಗೆ ಲಿಂಗ ಪರಿವರ್ತನೆಯ ಚಿಕಿತ್ಸೆಯ ಬಗ್ಗೆ ವಿಕಿಪೀಡಿಯಾ ದಶಕಗಳ ವೈಜ್ಞಾನಿಕ ತಿಳುವಳಿಕೆ ಇದೆ ಅಂದ್ರೆ ಗ್ರೋಕಿಪೀಡಿಯಾ ಇದಕ್ಕೆ ಸೀಮಿತ ಮತ್ತು ಕಡಿಮೆ ಗುಣಮಟ್ಟದ ಪುರಾವೆಗಳಿವೆ ಅಂತ ಹೇಳುತ್ತೆ ಇದು ಮಸ್ಕ್ ಅವರ ವಯಕ್ತಿಕ ನಿಲುವಿಗೆ ಹತ್ತರವಾಗಿದೆ ಆದರೆ ಗ್ರೋಕಿಪೀಡಿಯಾ ಕೂಡ ನಿಷ್ಪಕ್ಷಪಾತವಾಗಿಲ್ಲ ಅದು ಬಲಪಂತಿಯ ಮತ್ತು ಮಸ್ಕ್ ಅವರ ಆಲೋಚನೆಗಳಿಗೆ ಸರಿಹೊಂದುವಂತೆ ಮಾಹಿತಿಯನ್ನ ನೀಡುತ್ತೆ ಎಂಬ ಗಂಭೀರ ಆರೋಪಗಳು ಇವೆ. ಇಲಾನ್ ಮಸ್ಕ್ ಅವರ ಕುರಿತಾದ ಲೇಖನದಲ್ಲಿ ಅವರ ಆಹಾರ ಪದ್ಧತಿಯ ಬಗ್ಗೆ ಅಂದರೆ ಬೆಳಗಿನ ಡೋನರ್ಸ್ ಡಯಟ್ ಕೋಕ್ ಬಗ್ಗೆ ಮಾಹಿತಿ ನೀಡಿ ಅವರನ್ನ ಹೊಸ ಯುಗದ ದಾರ್ಶನಿಕ ತರ ಬಿಂಬಿಸಲಾಗಿದೆ. ಇಂತಹ ವಿಚಾರಗಳು ವೀಕ್ಷಕರಿಗೆ ಕಿರಿಕಿರಿಯನ್ನ ಉಂಟುಮಾಡಬಹುದು.

ರೈಟ್ ವಾಯ್ಸ್ ಗೆ ಗ್ರೋಕಿಪೀಡಿಯಾ ಬಲ ಎಲಾನ್ ಮಸ್ಕ್ ಕೇವಲ ಜ್ಞಾನಕೋಶವನ್ನ ನಿರ್ಮಿಸುತ್ತಾ ಇಲ್ಲ. ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬಲಪಂತಿಯ ತ್ವನಿಗಳಿಗೆ ವೇದಿಕೆಯನ್ನ ನೀಡಿ ಸರ್ಕಾರದ ಮೇಲೆ ಒತ್ತಡ ಹೇರಲು ಅದನ್ನ ಬಳಸುತ್ತಿದ್ದಾರೆ. ಈಗ ಗ್ರೋಕಿಪೀಡಿಯಾ ಕೂಡ ಇದೇ ಆನ್ಲೈನ್ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಮ್ಯಾಸ ಚೂಸ್ ಸೈಟ್ಸ್ ವಿಶ್ವವಿದ್ಯಾಲಯದ ಸಂಶೋಧಕ ರಯಾನ್ ಮೆಕ್ ಗ್ರಾಡಿ ಹೇಳುವಂತೆ ಜ್ಞಾನವನ್ನ ನಿಯಂತ್ರಿಸುವ ಪ್ರಚೋದನೆ ಜ್ಞಾನದಷ್ಟೇ ಹಳೆಯದು ಏನು ಬರೆಯಲಾಗಿದೆ ಎಂಬುದನ್ನ ನಿಯಂತ್ರಿಸುವುದು ಅಧಿಕಾರವನ್ನ ಪಡೆಯುವ ಅಥವಾ ಉಳಿಸಿಕೊಳ್ಳುವ ಒಂದು ಮಾರ್ಗ ಎಂದಿದ್ದಾರೆ. ಇತ್ತೀಚಿಗೆ ಮಸ್ಕ್ ವಿಕಿಪೀಡಿಯಾದಲ್ಲಿನ ತಮ್ಮದೇ ಪುಟದ ಬಗ್ಗೆ ತೀವ್ರ ಆಕ್ಷೇಪವನ್ನ ವ್ಯಕ್ತಪಡಿಸಿದ್ರು. ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಮಸ್ಕ್ ತಮ್ಮ ಬಲಗೈಯನ್ನ ಮುಂದಕ್ಕೆ ಚಾಚಿದ ಬಂಗಿಯನ್ನ ಹಲವರು ನಾಜಿ ಸಲ್ಯೂಟ್ ಹೋಲಿಸಿದ್ರು. ಈ ವಿಷಯವನ್ನ ವಿಕಿಪೀಡಿಯಾ ಪುಟ್ಟದಲ್ಲಿ ಸೇರಿಸಿದಾಗ ಮಸ್ಕ್ ಕೆಂಡಾಮಂಡಲರಾಗಿ ವಿಕಿಪೀಡಿಯಾವು ಒಂದಿಷ್ಟು ಮಾಧ್ಯಮಗಳ ಪ್ರೊಪಗಂಡದ ವಿಸ್ತರಣೆಯಾಗಿದೆ ಅಂತ ಟೀಕಿಸಿದ್ರು ಅದರ ಬೆನ್ನಲೆಎಕ್ಸ್ಎಐ ಕಂಪನಿ ಮೂಲಕ ವಿಕಿಪೀಡಿಯಾಗೆ ಎದುರಾಳಿಯಾಗಿ ಗ್ರೋಕಿಪೀಡಿಯಾವನ್ನ ತಗೊಂಡು ಬಂದಿದ್ದಾರೆ.

ಭಾರತಕ್ಕೆ ಗ್ರೋಕಿಪೀಡಿಯಾ ಅನುಕೂಲವೇ ಇನ್ನು ಈಗ ಭಾರತಕ್ಕೆ ಬರೋಣ ಭಾರತಕ್ಕೆ ಸಂಬಂಧಿಸಿದಂತೆ ಈ ಎರಡು ವೇದಿಕೆಗಳಲ್ಲಿ ವ್ಯತ್ಯಾಸಗಳು ಇವೆಯಾ ಎಂಬುದನ್ನ ನೋಡಿದರೆ ಹೌದು ಭಾರತಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಈ ಎರಡು ಜ್ಞಾನಕೋಶಗಳ ನಿರೂಪಣೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ ವಿಕಿಪೀಡಿಯಾವು ಹಿಂದೂ ವಿರೋಧಿ ಅಥವಾ ಭಾರತ ವಿರೋಧಿ ಧೋರಣೆಯನ್ನ ಹೊಂದಿದೆ ಅಂತ ಕೆಲವರು ಆರೋಪಿಸುತ್ತಾರೆ ಗ್ರೋಕಿಪೀಡಿಯಾ ಈ ನಿರೂಪಣೆಯನ್ನ ಸರಿಪಡಿಸಲು ಯತ್ನಿಸುತ್ತಾ ಇದೆ ಉದಾಹರಣೆಗೆ 2020ರ ದಿಲ್ಲಿ ಗಲಬೆಗಳ ಕುರಿತು ವಿಕಿಪೀಡಿಯಾದ ಪುಟವು ಮುಸ್ಲಿಂ ಸಂತಸ್ತರನ್ನ ಹೆಚ್ಚು ಉಲ್ಲೇಖಿಸಿ ಹಿಂದೂ ಗುಂಪುಗಳನ್ನ ಆಕ್ರಮಣಕಾರರಂತ ಚಿತ್ರಿಸುತ್ತಾ ಇದೆ ಆದರೆ ಗೋಕಿಪೀಡಿಯಾದ ಲೇಖನವು ಎರಡು ಕಡೆಯ ಸಾವು ನೋವಿನ ಅಂಕಿ ಅಂಶಗಳನ್ನ ನೀಡಿ ಕಲ್ಲು ತೂರಾಟದಿಂದ ಹಿಂಸಾಚಾರ ಪ್ರಚೋದನೆಗೊಂಡಿತ್ತು ಎಂಬ ಅಂಶವನ್ನ ಸೇರಿಸುತ್ತೆ. ಇದು ವಿಕಿಪೀಡಿಯಾದಲ್ಲಿ ಇಲ್ಲದ ದೃಷ್ಟಿಕೋನವನ್ನ ನೀಡುತ್ತೆ. ಆದರೆ ಈ ಕರೆಕ್ಷನ್ ಬರದಲ್ಲಿ ಗ್ರೋಕಿಪೀಡಿಯಾ ಕೂಡ ತಪ್ಪು ಮಾಹಿತಿ ಮತ್ತು ಎಐ ಸ್ಪಷ್ಟಿತ ಅಥವಾ ಎಐ ಸೃಷ್ಟಿತ ಭ್ರಮೆಯ ಮಾಹಿತಿಯನ್ನ ನೀಡುವ ಅಪಾಯವಿದೆ ಎಂಬ ಆತಂಕ ಹಲವರನ್ನ ಕಾಡ್ತಾ ಇದೆ. ಗ್ರೋಕಿಪೀಡಿಯಾದ ಎಂಟ್ರಿ ಒಳ್ಳೆಯದೆ. ಹಾಗಾದರೆ ಗ್ರೋಕಿಪೀಡಿಯಾದ ಎಂಟ್ರಿ ನಾಲೆಡ್ಜ್ ವರ್ಡ್ ಗೆ ಒಳ್ಳೆಯದೆ ಎಂಬ ಪ್ರಶ್ನೆ ಹಲವರಿಗೆ ಮೂಡುತ್ತೆ. ಒಂದು ಕಡೆ ವಿಕಿಪೀಡಿಯಾದಂತಹ ಏಕ ಸಮಯಕ್ಕೆ ಇದು ದೊಡ್ಡ ಸವಾಲಾಗಿದ್ದು ಆನ್ಲೈನ್ ನಾಲೆಡ್ಜ್ ಕ್ವಾಲಿಟಿಯನ್ನ ಸುಧಾರಿಸಲು ಗ್ರೋಕಿಪೀಡಿಯಾ ಪ್ರೇರಿಸಬಹುದು. ಮಸ್ಕ್ ಅವರ ಬೆಂಬಲಿಕರು ಇದನ್ನ ಡಿಜಿಟಲ್ ಜ್ಞಾನವನ್ನ ಮರಳಿ ಪಡೆಯುವ ಪ್ರಯತ್ನ ಅಂತ ಹೇಳ್ತಿದ್ದಾರೆ ಆದರೆ ಇನ್ನೊಂದು ಕಡೆ ಅಪಾಯವು ಇದೆ.

ಎಐ ಮೂಲಕ ಕಂಟ್ರೋಲ್ ಮಾಡಲ್ಪಟ್ಟ ಒಬ್ಬ ವ್ಯಕ್ತಿಯ ಸಿದ್ಧಾಂತದಿಂದ ಪ್ರಭಾವಿತವಾದ ಜ್ಞಾನಕೋಶವು ತಪ್ಪು ಮಾಹಿತಿ ಪಕ್ಷಪಾತ ಮತ್ತು ಸತ್ಯದ ತಿರುಚುವಿಕೆಗೆ ಕಾರಣವಾಗಬಹುದು. ವಿಕಿಪೀಡಿಯಾದ ಸಹಸಂಸ್ಥಾಪಕ ಜಿಮ್ಮಿ ವೆಲ್ಸ್ ಹೇಳುವಂತೆ ಎಐ ವಿಕಿಪೀಡಿಯಾ ನಿಕರತೆಯನ್ನ ಬದಲಿಸಲು ಸಾಧ್ಯವಿಲ್ಲವಂತೆ ಅಷ್ಟರ ಮಟ್ಟಿಗೆ ಎರಡು ವೇದಿಕೆಗಳ ನಡುವೆ ಜಿದ್ದು ಏರ್ಪಟ್ಟಿದೆ ಇದಕ್ಕೂ ಮುನ್ನ ತಾವೇ ಕಟ್ಟಿದ ಓಪನ್ ಎಐ ಬಿಟ್ಟು ಚಾರ್ಟ್ ಜಿಪಿಟಿಗೆ ಗ್ರೋಕ್ ಮೂಲಕ ಮಸ್ಕ್ ಸೆಟ್ಟು ಹೊಡೆದಿದ್ರು ಜೆಮಿನಿ ಎಐ ಕೂಡ ಅವರ ಗುರಿಯಾಗಿತ್ತು ಈಗಾಗಲೇಟ್ ಅನ್ನ ಖರೀದಿಸಿ ಎಕ್ಸ್ ಮಾಡಿಕೊಂಡಿರುವ ಮಸ್ಕ್ ಈಗ ಗ್ರೋಕಿಪೀಡಿಯಾ ಮೂಲಕ ವಿಕಿಪೀಡಿಯಾಗೆ ಸಾವಲಾಗ್ತಾರೆ ಎಂಬುದು ಕೂಡ ಪ್ರಶ್ನೆ ಆಗ್ತಾ ಇದೆ. ಆರಂಭದಲ್ಲೇ ಮಸ್ಕ್ ಗೆ ಟಾಂಗ್ ಕೊಟ್ಟ ವಿಕ್ಕಿ. ಆದರೆ ವಿಕಿಪೀಡಿಯಾದಲ್ಲಿ ಗ್ರೋಕಿಪೀಡಿಯಾ ಬಗ್ಗೆ ಪೇಜ್ ಅನ್ನ ಕ್ರಿಯೇಟ್ ಮಾಡಿದ್ದು ಈ ಮೂಲಕ ವಿಕಿಪೀಡಿಯಾ ಮಸ್ಗೆ ಟಾಂಗ್ ಅನ್ನ ನೀಡಿದ್ದಾರೆ. ಗ್ರೋ ವಿಕಿಪೀಡಿಯಾ ಇದೆ ಅಂತ ಗೊತ್ತಾಗಬೇಕು ಅಂದ್ರು ವಿಕಿಪೀಡಿಯಾ ಬೇಕು ಅಂತ ವಿಕಿಪೀಡಿಯಾ ಫೌಂಡೇಶನ್ ವಕ್ತಾರ ಹೇಳಿದ್ದಾರೆ. ಅದಲ್ಲದೆ ಮಸ್ಕ್ ಅವರ ಆರೋಪಗಳನ್ನ ತಿರಸ್ಕರಿಸಿದ್ದಾರೆ. ಅಕ್ಟೋಬರ್ 27 ರಂದು ಗ್ರೋಕಿಪೀಡಿಯಾ ಲೈವ್ ಆದ ಕೆಲವೇ ಕ್ಷಣಗಳಲ್ಲಿ ವಿಕಿಪೀಡಿಯಾ ಪೇಜ್ ಕ್ರಿಯೇಟ್ ಆಗಿತ್ತು. ಅದರಲ್ಲಿ ಎಐ ಬೆಂಬಲಿತ ಆನ್ಲೈನ್ ಎನ್ ಸೈಕ್ಲೋಪೀಡಿಯಾ ಅಂತ ಹೇಳಿದ್ದು ಎಲಾನ್ ಮಸ್ಕ್ ಸ್ಥಾಪಿಸಿದಎಐ ಕಂಪನಿಯದ್ದಾಗಿದೆ ಅಂತ ಹೇಳಿದೆ. ಈ ಮೂಲಕ ಗ್ರೋಕಿಪೀಡಿಯಾ ಹಾಗೂ ಎಲಾನ್ ಮಸ್ಕ್ ಕಾಲೆಳೆದಿದೆ. ಒಟ್ಟನಲ್ಲಿ ಇದು ಕೇವಲ ಎರಡು ವೆಬ್ಸೈಟ್ಗಳ ನಡುವಿನ ಸ್ಪರ್ಧೆಯಲ್ಲ ಇದು ಜಗತ್ತಿನ ಮಾಹಿತಿ ಜ್ಞಾನಕೋಶದ ಮಹಾಯುದ್ಧ ಸತ್ಯವನ್ನ ಯಾರು ಹೇಳ್ತಾರೆ ಎಂಬ ಸಮರ ಜನರ ಸಾಮೂಹಿಕ ಬುದ್ಧಿವಂತಿಕೆಯೇ ಸತ್ಯವೇ ಅಥವಾ ಕೃತಕ ಬುದ್ಧಿಮತ್ತೆಯ ವೇಗ ಮತ್ತು ಶಕ್ತಿಯೇ ಸತ್ಯವೇ ಎಂಬುದು ಪ್ರಮುಖವಾಗುತ್ತೆ. ಈಗಾಗಲೇ ಹತ್ರ ಹತ್ತರ ಒಂದು ಮಿಲಿಯನ್ ಆರ್ಟಿಕಲ್ಗಳನ್ನ ಗ್ರೋ ವಿಕಿಪೀಡಿಯಾ ಹೊಂದಿದೆ. ಶೀಘ್ರದಲ್ಲೇ ವಿಕಿಪೀಡಿಯಾವನ್ನ ಕೂಡ ಬೀಟ್ ಮಾಡಬಹುದು. ಆದರೆ ನಿಖರತೆ ಇರುತ್ತಾ ಪಕ್ಷಪಾತ ಮುಕ್ತವಾಗಿ ಇರುತ್ತಾ ಎಂಬುದನ್ನ ನಾವು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments