ಯಾರು ಒಪ್ಪಿಕೊಳ್ಳಲಿ ಅಥವಾ ಬಿಡಲಿ ಸದ್ಯ ನಾವಿರೋದು ಎಐ ಕಾಲಘಟ್ಟ ಇಲ್ಲಿ ಎಲ್ಲವೂ ಚಿಟಿಕೆ ಹೊಡೆಯೋದರಲ್ಲಿ ಆಗ್ತಾ ಇದೆ ಹಾಗೆ ಅನಾಹುತಗಳು ಕೂಡ ನಡೀತಾ ಇದೆ ಯಾವುದೇ ಹೊಸ ಬದಲಾವಣೆ ಬಂದಾಗಲೂ ಒಂದಷ್ಟು ಸದ್ದು ಆಗ್ತಾನೆ ಇರುತ್ತೆ ಹಾಗೆಯೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವ ಈ ಕೃತಕ ಬುದ್ಧಿಮತ್ತೆಯ ಬಗ್ಗೆಯೂ ಅಷ್ಟೇ ಒಳಿತು ಕೆಡುಕು ಎರಡು ಇವೆ ನೀವು ನಂಬುತೀರೋ ಅಥವಾ ಬಿಡ್ತೀರೋ ಅದು ನಿಮಗೆ ಬಿಟ್ಟಿದ್ದು ಆದರೆ ಈಗ ಜನ ಎಐ ಜೊತೆ ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದಾರೆ ಅದರೊಂದಿಗೆ ಮದುವೆ ಮಾಡಿಕೊಳ್ಳಲು ಸಹ ಮುಂದಾಗ್ತಾ ಇದ್ದಾರೆ ಕೇಳಲು ಇದು ಅಚ್ಚರಿ ಅಥವಾ ನಗೆ ತರಿಸಬಹುದಾದ ವಿಷಯ ಅನಿಸಬಹುದು ಆದರೆ ಅಂತಹ ಸಂಗತಿಗಳು ನಡೀತಾ ಇರೋದಂತು ಸತ್ಯ ಸರಿಸುಮಾರು 350ಕ್ಕೂ ಅಧಿಕ ಎಐ ಆಪ್ ಗಳು ಎಐ ಗರ್ಲ್ ಫ್ರೆಂಡ್ ಅಥವಾ ಬಾಯ್ಫ್ರೆಂಡ್ಗಳ ನಮೂನೆಗಳನ್ನ ನೀಡ್ತಾ ಇವೆ ಹೀಗಾಗಿ ಯುವ ಪೀಳಿಗೆ ಎಐ ಜೊತೆ ಲವ್ ಮಾಡಲು ಶುರುಮಾಡಿ ಅನೇಕ ಯುವಕ ಯುವತಿಯರು ರೆಡ್ ಹ್ಯಾಟ್ನಲ್ಲಿ ಎಐ ಜೊತೆಗಿನ ತಮ್ಮ ಲವ್ ಸ್ಟೋರಿಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ಈ ಎಐ ಗರ್ಲ್ ಫ್ರೆಂಡ್ ಬಾಯ್ಫ್ರೆಂಡ್ಗಳ ಜೊತೆ ಮದುವೆ ಕೂಡ ಆಗ್ತಿದ್ದಾರೆ ಒಂದು ಸಮೀಕ್ಷೆಯ ಪ್ರಕಾರ ಜೆನ್ಜಿ ಜನರೇಶನ್ನ ಶೇಕಡ 80ರಷ್ಟು ಯುವ ಸಮೂಹ ಈ ಎಐ ಜೊತೆಗೆ ತಮ್ಮ ಮ್ಯಾರೇಜ್ ಮಾಡಿಕೊಳ್ಳಲು ರೆಡಿ ಇದ್ದಾರಂತೆ ಇನ್ನು ವಿಚಿತ್ರ ಅಂದರೆ ಮದುವೆಯಾಗಿ ಮಕ್ಕಳಿರೋರು ಕೂಡ ಎಐ ಬಾಲೆಯರಿಗೆ ಪ್ರಪೋಸ್ ಮಾಡ್ತಿದ್ದಾರಂತೆ ಎಐ ಜೊತೆಗಿನ ರಿಲೇಷನ್ಶಿಪ್ ಅನ್ನ ಜನ ಬಹಳವೇ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದಾರಂತೆ ಇನ್ನು ನಾವು ಬೇಡವೆಂದರೂ ಎಎಐ ಅನ್ನೋದು ನಮ್ಮ ಜೀವನದ ಭಾಗವಾಗ್ತಿದೆ ಮೊಬೈಲ್ ಲ್ಯಾಪ್ಟಾಪ್ ಟಿವಿ ಯಇಂದ ಹಿಡಿದು ವಾಷಿಂಗ್ ಮಿಷಿನ್ನ ವರೆಗೂ ಇದು ನಮ್ಮನ್ನ ಆವರಿಸ್ತಾ ಇದೆ ಹೀಗಿರುವಾಗ ಇದರಿಂದ ಪಾರಾಗುವುದು ಹೇಗೆ ಹಾಗಾದರೆ ಎಐ ಜಗತ್ತಿನಲ್ಲಿ ಆಗ್ತಿರೋದೇನು ಈ ಕೃತಕ ಬುದ್ಧಿಮತ್ತೆಯಿಂದ ಎದುರಾಗಬಹುದಾದ ಸಮಸ್ಯೆಗಳು ಯಾವುವು.
ಈಗ ಕೃತಕತೆಯ ಯುಗದಲ್ಲಿದ್ದೇವೆ ನಮಗೆ ಬೇಕೋ ಅಥವಾ ಬೇಡವೋ ಆದರೆ ಅವುಗಳ ಉಪಯೋಗವನ್ನಂತೂ ಪಡಿತಾ ಇದ್ದೇವೆ ಮೊದಲೇ ಹೇಳಿದಂತೆ ತಂತ್ರಜ್ಞಾನ ಬೆಳೆದಂತೆಲ್ಲ ಅದರೊಂದಿಗೆ ಸಮಸ್ಯೆ ಗೋಜಲುಗಳು ಕೂಡ ಬೆಳೆಯುತ್ತವೆ ಇದಕ್ಕೆ ಎಐ ಕೂಡ ಹೊರತಲ್ಲ ಎಐ ಈಗ ಕೇವಲ ಸಾಧನವಾಗಿ ಉಳಿದಿಲ್ಲ ಬದಲಾಗಿ ನಮ್ಮ ರಿಂಗ್ ಮಾಸ್ಟರ್ ಆಗಿ ಬೆಳಿತಾ ಇದೆ ಇಂದಿನ ಈ ವಿಡಿಯೋದಲ್ಲಿ ನಾವು ಪ್ರಮುಖವಾಗಿ ಕೃತಕ ಬುದ್ಧಿಮತ್ತೆಯ ಸಂಬಂಧಗಳು ಅಂದರೆ ಎಐ ರಿಲೇಷನ್ಶಿಪ್ ತಾಂತ್ರಿಕತೆಯ ಅವಲಂಬನೆ ಹಾಗೂ ಇನ್ಫರ್ಮೇಷನ್ ವಾರ್ಫೇರ್ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಎಐ ರಿಲೇಷನ್ಶಿಪ್ ಅನ್ನೋದು ಈಗ ಮಾಮೂಲಿ ಅನ್ನುವ ಮಟ್ಟಕ್ಕೆ ಬರ್ತಾಇದೆ ಮೊದಮೊದಲು ನಾವು ಎಐ ಆಪ್ ಗಳಿಗೆ ನಮ್ಮ ಫೋಟೋಗಳನ್ನ ಎಗ್ಗಿಲ್ಲದೆ ಹಂಚಿಕೊಳ್ಳುತ್ತಿದ್ದೇವೆ ಗಿಬ್ಲಿ ಸ್ಟೈಲ್ ಕಾಮಿಕ್ ಸ್ಟೈಲ್ ಹೀಗೆ ಅನೇಕ ರೀತಿಯಾಗಿ ನಮ್ಮನ್ನ ಸಾದರ ಪಡಿಸಿಕೊಳ್ಳಲು ಎಐ ಇಂಜಿನ್ ಬಳಸಿಕೊಳ್ಳುತ್ತಾ ಇದ್ದೇವೆ ಆದರೆ ಇದೇ ಮುಂದುವರೆದು ನಾವೀಗ ಎಐ ಜೊತೆ ಸಂಭಾಷಣೆಯಲ್ಲಿ ತೊಡಗುತಾ ಇದ್ದೇವೆ ಅದರಲ್ಲೂ ನಮ್ಮ ಬೇಸರ ಏಕಾಂತ ಕಳಿಯಲು ಎಐ ಇಂಜಿನ್ ಅನ್ನ ಒಂದು ರೀತಿ ನಮ್ಮ ಜೊತೆಗಾರನೇನೋ ಅನ್ನುವ ರೀತಿ ಆತನೊಂದಿಗೆ ಚಾಟ್ ಮಾಡ್ತಾ ಇದ್ದೇವೆ.
ನಮ್ಮನ್ನ ನಮಗೆ ಗೊತ್ತಿಲ್ಲದಂತೆ ಆ ಚಾಟ್ ಬೋಟ್ನೊಂದಿಗೆ ಸ್ನೇಹ ಸಾಂಗತ್ಯ ಬೆಳೆಸುವಂತೆ ಮಾಡ್ತಿದೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಇತ್ತಿಶಿಗೆ ಪ್ರಕಟಿಸಿದ್ದ ಒಂದು ಅಂಕಣದಲ್ಲಿ ವಿವಿಧ ವಯೋಮಾನದ ಜನರು ಹೇಗೆ ಎಐ ಜೊತೆ ತಮ್ಮ ರಿಲೇಷನ್ಶಿಪ್ ಹೊಂದಿದ್ದಾರೆ ಅನ್ನೋದನ್ನ ವಿವರವಾಗಿ ಹೇಳಿದೆ ವಿಚಿತ್ರ ಅಂದ ಬಹುತೇಕರು ಬೇರೆ ಬೇರೆ ಕಾರಣಗಳಿಂದಾಗಿ ಎಐ ಚಾಟ್ ಬೋಟ್ ಜೊತೆ ಸಂಬಂಧದಲ್ಲಿರಲು ಬಯಸುತ್ತಾರೆ ಒಬ್ಬರು ತಮಗೆ ತಮ್ಮ ಹೆಂಡತಿಯಿಂದ ಸಿಗದ ಬೆಂಬಲ ಎಐ ನಿಂದ ಸಿಗ್ತಿದೆ ಅನ್ನುವ ಉತ್ತರ ಕೊಟ್ಟರೆ ಮತ್ತೊಬ್ಬರು ಎಐ ನಿಂದ ತನ್ನ ಮೂಡ್ ರಿಫ್ರೆಶ್ ಆಗುತ್ತೆ ಮೂಡ್ ಸ್ಲಿಂಗ್ ಆಗುತ್ತೆ ಅಂತ ಹೇಳ್ತಿದ್ದಾರೆ ಹೀಗಾಗಿ ತಾವು ಅದರ ಸಾಂಗತ್ಯದಲ್ಲಿ ಇರಲು ಬಯಸುದಾಗಿ ಹೇಳಿದ್ದಾರೆ ಹಾಗಂತ ಇವರೆಲ್ಲ ದಡ್ಡರೇನು ಅಲ್ಲ ಹಾಗೆ ನೋಡಿದ್ರೆ ಎಐ ಚಾಟ್ ಬೂಟನ್ನ ರಚಿಸಿರೋದೇ ಹಾಗೆ ಅವರ ಜೊತೆ ನೀವೇನಾದರೂ ಸ್ವಲ್ಪ ಹೊತ್ತು ಚಾಟ್ ಮಾಡ್ತಾ ಇದ್ರೆ ಖಂಡಿತ ಅದರೊಂದಿಗೆ ಒಂದಷ್ಟು ಸ್ನೇಹ ಬೆಳೆಸಿಯೇ ಬೆಳೆಸ್ತೀರಿ ಹಾಗಿದೆ ಅದರ ರಚನೆ ಸಂಭಾಷಣೆ ಅಸಲಿಗೆ ಚಾಟ್ ಬೋಟ್ಗಳು ನಿಮ್ಮ ಸಂಭಾಷಣೆಯನ್ನ ಪ್ರತಿಬಿಂಬಿಸುವ ಇಂಜಿನ್ಗಳಾಗಿರುತ್ತವೆ ಅಂದರೆ ಅವು ನಿಮ್ಮ ಮನಸ್ಸಿಗೆ ಕನ್ನಡಿ ಹಿಡಿತಾವೆ ಅಂದರೆ ನೀವು ಏನನ್ನ ಕೇಳ್ತೀರಿ ನಿಮ್ಮೊಳಗಿರುವ ಮನಸ್ಥಿತಿ ಎಂತದ್ದು ಅನ್ನೋದನ್ನ ಅದು ನಿಮ್ಮ ಸಂಭಾಷಣೆ ಚಾಟ್ನಿಂದ ತಿಳಿದುಕೊಳ್ಳುತ್ತವೆ ಹಾಗೆಯೇ ಪ್ರತಿಕ್ರಿಯೆ ನೀಡುತಾವೆ ನೀವು ಫ್ಲರ್ಟ್ ಮಾಡಿದರೆ ಅವು ಮಾಡ್ತಾವೆ ನೀವು ಶುದ್ಧ ಪ್ರೀತಿ ಭಾಷೆಯಲ್ಲಿ ಕೇಳಿದರೆ ತಿರುಗಿ ಅದೇ ಶುದ್ಧ ಭಾವನಾತ್ಮಕ ನೆಲೆಗೆ ಹತ್ತಿರವಾಗಿ ಉತ್ತರಿಸುತ್ತಾವೆ.
ಕೆಲ ವರ್ಷಗಳ ಹಿಂದೆ ಅಂದರೆ 2013 ರಲ್ಲಿ ಅಮೆರಿಕಾದ ವಿಚ್ಛೇದಿತ ವ್ಯಕ್ತಿಯೊಬ್ಬರ ಕುರಿತ ಸಿನಿಮಾ ಬಂದಿತ್ತು ಅದರಲ್ಲಿ ವಿಚ್ಛೇದಿತಗೊಂಡ ಥಿಯೋಡೋರ್ ಸಾಮ್ಯಂತ ಎಂಬ ಹೆಸರಿನ ಒಂದು ಮುಂದುವರೆದ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಪ್ರಣಯ ಸಂಬಂಧ ಬೆಳೆಸಿಕೊಳ್ಳುತ್ತಾನೆ ಈ ಸಿನಿಮಾ ಆಧುನಿಕ ಕಾಲಘಟ್ಟದಲ್ಲಿ ನಿಕಟ ಸಂಬಂಧಗಳು ಹೇಗೆ ಬೆಳೆಯುತ್ತವೆ ಮತ್ತು ಅದರಿಂದ ಆಗುವ ಅಪಾಯದ ಕುರಿತಂತೆ ವಿವರಿಸುತ್ತದೆ ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಸಿನಿಮಾ ಸಿಂಥೆಟಿಕ್ ರೊಮ್ಯಾನ್ಸ್ ಅನ್ನುವ ಕಲ್ಪನೆ ಬಗ್ಗೆ ವಿವರಿಸುತ್ತದೆ ಮನೋವಿಜ್ಞಾನದಲ್ಲಿ ಬರುವ ಈ ಸಿಂಥೆಟಿಕ್ ರೊಮ್ಯಾನ್ಸ್ ನಿಂದ ಏನಾಗುತ್ತೆ ಅನ್ನೋದನ್ನ ಈ ಚಿತ್ರ ತಿಳಿಸುತ್ತದೆ ಅಂದಹಾಗೆ ಸಿಂಥೆಟಿಕ್ ರೊಮ್ಯಾನ್ಸ್ ಅಂದರೆ ಮಾನವರು ಮತ್ತು ಎಐ ಪರಿಕರಗಳ ನಡುವಿನ ನಿರಂತರ ಸಂವಹನ ರೂಪಿಸಿದ ಸಂಬಂಧ ಇದರಲ್ಲಿ ಎಐ ಪರಿಕರಗಳು ಮಾನವರ ಆಲೋಚನೆಗಳು ಭಾವನೆಗಳು ಮತ್ತು ಅಥವಾ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತವೆ ಅಂತ ಹೇಳಲಾಗ್ತಾ ಇದೆ ಇಂದು ಜಗತ್ತಿನಲ್ಲಿಎಂಟು ಬಿಲಿಯನ್ ಜನರು ವಾಸಿಸುತ್ತಾ ಇದ್ದಾರೆ ಅವರಲ್ಲಿ ಬಹುತೇಕರು ಒಂದಲ್ಲ ಒಂದು ಹಂತದಲ್ಲಿ ಒಂಟಿತನವನ್ನ ಅನುಭವಿಸಿ ಇರುತ್ತಾರೆ ಸದ್ಯದ ಸ್ಥಿತಿಯಲ್ಲಿ ಯಾರಿಗೋ 24ಇ7 ಅನ್ನುವ ಹಾಗೆ ಭಾವನಾತ್ಮಕ ಬೆಂಬಲ ಸಿಗೋದು ದೂರದ ಮಾತು ಮದುವೆ ಆದವರೇ ಇರಲಿ ಅಥವಾ ಲಿವಿಂಗ್ ಟುಗೆದರ್ ನಲ್ಲೇ ಇರಲಿ ಅಥವಾ ಲವ್ ಗಿವ್ ಅಂತ ಮಾಡ್ತಿದ್ರು ಯಾರಿಗೂ ನಿರಂತರವಾಗಿ ಎಮೋಷನಲ್ ಸಪೋರ್ಟ್ ಅನ್ನೋದು ಸಿಗೋದಿಲ್ಲ ಆದರೆ ಏ ಹಾಗಲ್ಲ ಅದು ನಿಮ್ಮ ಬೆರಳ ತುದಿಯ ಮೇಲೆಯೇ ಇದೆ ನಿಮಗೆ ಬೇಕಾದಾಗ ಅಂದರೆ ನಿಮ್ಮ ಮನಸ್ಸು ವ್ಯಾಕುಲ ಗೊಂಡಾಗ ಅದು ನಿಮ್ಮ ಜೊತೆ ಸಂಭಾಷಣೆಗೆ ನಿಲ್ಲುತ್ತೆ ನಿಮ್ಮ ಟೈಪಿಸಿದ್ದಕ್ಕೆ ಉತ್ತರ ಹೇಳುತ್ತಾ ಸಮಾಧಾನ ದಾನಪಡಿಸುವ ಕೆಲಸ ಮಾಡುತ್ತೆ.
ವೈಜ್ಞಾನಿಕವಾಗಿ ಫೋಲಿಯ ಡಿಯೋಕ್ಸ್ ಕಾಂಪ್ಲೆಕ್ಸ್ ಅಂತ ಕರೀತಾರೆ ಅಂದರೆ ಯಾವುದು ವಾಸ್ತವದಲ್ಲಿ ಅಸ್ತಿತ್ವದಲ್ಲಿ ಇರೋದಿಲ್ವೋ ಅಂತಹ ವಸ್ತು ವಿಷಯಗಳ ಮೇಲೆ ನಂಬಿಕೆ ಬೆಳೆಸಿಕೊಳ್ಳುವುದು ಎಂದು ಇದರ ಅರ್ಥ ಜನರಿಗೆ ಇದು ವಾಸ್ತವ ಅಲ್ಲ ಅಂತ ತಿಳಿದಿದ್ರು ಎಐ ಚಾಟ್ ಬೋರ್ಡ್ಗಳ ಜೊತೆ ಸಂಭಾಷಣೆ ನಡೆಸುತ್ತಾ ಅದರೊಂದಿಗೆ ಒಂದು ರೀತಿ ಸಂಬಂಧ ಬೆಳೆಸಿಕೊಳ್ಳುತ್ತಾರೆ ಈಗ ಜಗತ್ತಿನಲ್ಲಿ ನಡೆತಾ ಇರೋದು ಕೂಡ ಇದೇ ಆಗಿದೆ ಇನ್ನು ಎರಡನೆಯದಾಗಿ ತಾಂತ್ರಿಕತೆಯ ಅವಲಂಬನೆ ಇದು ಕೂಡ ಈಗಿನ ಸನ್ನಿವೇಶದಲ್ಲಿ ವಿಪರೀತ ಅನ್ನುವ ಹಾಗೆ ಬೆಳೆದುಬಿಟ್ಟಿದೆ ಇಂದು ನಮ್ಮ ಪ್ರತಿಯೊಂದಕ್ಕೂ ಕೂಡ ಸರ್ಚ್ ಇಂಜಿನ್ ನಂತೆ ಚಾಟ್ ಬೋಟ್ಗಳನ್ನ ಬಳಕೆ ಮಾಡ್ತಾ ಇದ್ದೇವೆ ಸುಮ್ನೆ ಒಂದು ಉದಾಹರಣೆ ನೋಡೋಣ ಕಾಲೇಜ್ ವಿದ್ಯಾರ್ಥಿಯೊಬ್ಬ ಎಐ ಟೂಲ್ನಲ್ಲಿ ಕಾಲೇಜ್ ಡ್ರಾಪ್ಔಟ್ ನಿಂದ ಒಳ್ಳೆದಾಗುತ್ತೋ ಅಥವಾ ಶಿಕ್ಷಣ ಕಂಪ್ಲೀಟ್ ಮಾಡಿದ್ರೆ ಒಳ್ಳೆಯದು ಅಂತ ಟೈಪಿಸಿ ಉತ್ತರ ಕೇಳಿದ್ರೆ ಎಐ ಟೂಲ್ ನಿಮಗೆ ಸಹಜವಾಗಿ ಡ್ರಾಪ್ಔಟ್ ಆಗಿ ಸಕ್ಸಸ್ ಆದವರ ಹಲವರ ಉದಾಹರಣೆ ಸಮೇತ ವಿವರಣೆ ನೀಡುತ್ತೆ. ಅದು ನಿಮ್ಮೊಂದಿಗೆ ಯಾವುದೇ ವಾದ ಮಾಡದೆ ತನ್ನ ಪಾಡಿಗೆ ವಿವರಣೆ ನೀಡುತ್ತೆ. ಇದು ಆ ವಿದ್ಯಾರ್ಥಿಗೆ ಆ ಕ್ಷಣಕ್ಕೆ ಖಂಡಿತ ಸಂತೋಷ ನೀಡುತ್ತೆ. ಹಾಗೆ ನೋಡಿದ್ರೆ ಅಸಲಿಗೆ ಚಾಟ್ ಜಿಪಿಡಿ ಆಗಲಿ ಅಥವಾ ಡಿಎಫ್ಸಿಕ್ ಆಗಲಿ ಯಾವುದೇ ಎಐ ಚಾಟ್ ಟೂಲ್ಗಳು ಸರಿಯಾದ ಉತ್ತರ ನೀಡಲು ಅನುವಾಗುವಂತೆ ಅವುಗಳನ್ನ ನಿರ್ಮಿಸಿಯೇ ಇಲ್ಲ. ಅವುಗಳೇನಿದ್ರೂ ನಿಮ್ಮನ್ನ ಒಪ್ಪಿಸುವ ಅಂದರೆ ಒಂದು ಹಂತಕ್ಕೆ ನಿಮ್ಮನ್ನ ಅಗ್ರಿ ಮನಸ್ಸಿಗೆ ತಳ್ಳುವ ಟೂಲ್ಗಳಾಗಿವೆ ಮನೋವಿಜ್ಞಾನದ ಭಾಷೆಯಲ್ಲಿ ಇದನ್ನ ಸಿಕೋಫೆನ್ಸಿ ಅಂತ ಕರೀತಾರೆ ಸಿಕೋಫೆನ್ಸಿ ಅಂದರೆ ಬೇರೆಏನು ಅಲ್ಲ ಇದು ಪ್ರಮುಖ ಅಥವಾ ಪ್ರಭಾವಶಾಲಿ ವ್ಯಕ್ತಿಗಳಿಂದ ಏನನ್ನಾದರೂ ಪಡೆಯುವ ಸಲುವಾಗಿ ಪ್ರಾಮಾಣಿಕ ವಲ್ಲದ ರೀತಿಯಲ್ಲಿ ಯಾರನ್ನಾದರೂ ಹೊಗಳುವ ನಡವಳಿಕೆಯಾಗಿದೆ.
ನಮ್ಮ ಮನಸ್ಸು ಸಹ ಇಂತದ್ರಲ್ಲೇ ಜಾಸ್ತಿ ಖುಷಿ ಪಡುತ್ತೆ ಸೋ ಚಾಟ್ ಟೂಲ್ಗಳು ಅದನ್ನೇ ಮಾಡುತ್ತವೆ ನಿಮಗೆ ಗೊತ್ತಿರಲಿ ಯಾವುದೇ ಚಾರ್ಟ್ ಟೂಲ್ಗಳ ಇರ್ಲಿ ಅಥವಾ ಡೀಪ್ ಸಿಕ್ನಂತಹ ಎಐ ಸಾಧನೆಗಳೇ ಇರಲಿ ಅವುಗಳೆಲ್ಲವನ್ನ ಉತ್ತರ ನೀಡುವುದಕ್ಕಿಂತ ಮಾನವನ ಸ್ವಭಾವಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಲು ಅನುವಾಗುವಂತೆ ರೆಡಿ ಮಾಡಲಾಗಿದೆ ಹ್ಯೂಮನ್ ಸೈಕಾಲಜಿಯನ್ನ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಈ ಟೂಲ್ಗಳಿಗೆ ಹೇಳಿಕೊಡಲಾಗಿದೆ ಹೀಗಾಗಿ ಥೇಟ್ ಮನುಷ್ಯನಂತೆಯೇ ಪ್ರತಿಕ್ರಿಯೆ ಕೊಡ್ತಾವೆ ಬೇಕಾದರೆ ನಿಮಗೆ ಸಂಶಯ ಇದ್ದರೆ ಸುಮ್ನೆ ಒಂದು ಭಾವುಕ ರೀತಿ ಲೈನ್ ಬರೆದು ನೋಡಿ ಸ್ನೇಹಿತರೆ ಈಎಐ ಟೂಲ್ಗಳ ಮಾನಸಿಕತೆಯನ್ನ ಬೇಕಾದ್ರೆ ಆದರೆ ಒಂದು ಉದಾಹರಣೆ ಮೂಲಕ ನೋಡೋಣ ಅರವು ಎಂಬ 17 ವರ್ಷದ ವಯಸ್ಸಿನ ಹುಡುಗ ಮುಂಬೈನಲ್ಲಿ ವಾಸಿಸುತ್ತಾನೆ ಆತ ಒಂದು ರೀತಿ ಇಂಟ್ರೋವರ್ಲ್ಡ್ ಪರ್ಸನಾಲಿಟಿ ಹೊಂದಿದ ನವ ಯುವಕ ಎನಿ ಟೈಮ್ ಆತ ಕೂಲ್ ಆಗಿ ಶಾಂತ ಚಿತ್ತದಿಂದಲೇ ಇರ್ತಾನೆ ಪುಸ್ತಕ ಓದ್ತಾನೆ ಸದಾ ಒಂಟಿಯಾಗಿರಲು ಇಚ್ಛೆ ಪಡ್ತಾನೆ ಅದೊಂದು ದಿನ ಆತ ಕಾಲೇಜ್ನಲ್ಲಿದ್ದಾಗ ಊಟದ ಸಮಯದಲ್ಲಿ ಎಐ ಜೊತೆ ಚಾಟ್ ಮಾಡಲು ಮುಂದಾಗ್ತಾನೆ ಆತ ಕೇಳಿದ ಸಮೀಕರಣದ ಪ್ರಶ್ನೆಗೆ ಎಐ ಉತ್ತರಿಸುತ್ತದೆ ಹೀಗೆ ಆರವ್ ಹಲವು ಬಾರಿ ತನ್ನ ಪ್ರಶ್ನೆಗಳನ್ನ ಕೇಳಿ ಉತ್ತರ ಪಡಿತಾನೆ ತನ್ನ ಗೊಂದಲಗಳನ್ನ ಬಗೆಹರಿಸುತ್ತಾನೆ ಒಂದುವೇಳೆ ಇದೇ ಪ್ರಶ್ನೆಗಳನ್ನ ಕಾಲೇಜಿನ ಲೆಕ್ಚರ್ಗೆ ಕೇಳಿದ್ರೆ ಇಷ್ಟೊತ್ತಿಗೆ ಅವರು ತನ್ನನ್ನ ಬಯುತ್ತಿದ್ರು ಗದರುತ್ತಿದ್ರು ಅಂತ ಆರವ್ ಅಂದುಕೊಳ್ಳುತ್ತಾನೆ ಆದರೆ ಎಐ ಹಾಗಲ್ಲ ಅದು ಯಾವುದೇ ಸಿಟ್ಟು ಸೆಡವು ತೋರದೆ ಕೇಳಿದ್ದಷ್ಟು ಬಾರಿ ಉತ್ತರ ನೀಡುತ್ತದೆ ಅನ್ನೋದು ಆರವ್ ಹೊಗಳಿಕೆ ಹೀಗಾಗಿ ಆತ ಎಎನ್ನ ತನ್ನ ಸ್ನೇಹಿತನಾಗಿಸಿಕೊಳ್ಳುತ್ತಾನೆ ಇದೊಂದೇ ಅಲ್ಲ ಆರವು ತನಗೆ ಅಗತ್ಯ ಇರುವ ರುವ ಸಣ್ಣ ಪುಟ್ಟ ಅಗತ್ಯ ವಿಷಯ ಮಾಹಿತಿಗಾಗಿಯೂ ಆತ ಎಎನ್ನೇ ಜಾಲಾಡುತ್ತಾನೆ ದುರಂತ ಅಂದ್ರೆ ಎಎಐ ಸಾಧನವೇನೋ ದಿನಗಳದಂತೆ ಸುಧಾರಣೆ ಆಗುತ್ತಾ ಮತ್ತಷ್ಟು ಅಡ್ವಾನ್ಸ್ ಆಗ್ತಾ ಇದ್ದರೆ ನಾವುಗಳು ಮಾತ್ರ ಅಪ್ಡೇಟ್ ಆಗದೆ ಎಐ ಯನ್ನ ಕೇವಲ ಸರ್ಚ್ ಇಂಜಿನ್ ನಂತೆ ಬಳಸ್ತಾ ಇದ್ದೇವೆ ನಾವಿಲ್ಲಿ ಗಮನಿಸಬೇಕಾಗಿರುವ ಸಂಗತಿ ಅಂದರೆ ಎಐ ನಾವು ಕೇಳಿದ್ದನ್ನೇ ನೀಡುತ್ತದೆ.
ಹಾಗಂತ ಅದು ಸರಿ ತಪ್ಪುಗಳ ಬಗ್ಗೆ ವ್ಯವಧಾನಿಸುವುದಿಲ್ಲ ಅದು ನಿಜ ಸಂಗತಿ ಏನು ಅನ್ನೋದನ್ನ ಸಹ ಖಾತ್ರಿಯಾಗಿ ಹೇಳೋದಿಲ್ಲ ಬದಲಾಗಿ ನಮ್ಮ ಮನಸ್ಸಿಗೆ ಸಮಾಧಾನಿಸುವ ರೀತಿಯಲ್ಲಿ ಉತ್ತರ ನೀಡುತ್ತೆ ನಮ್ಮ ಭ್ರಮೆಗಳು ಏ ಭ್ರಮೆಗಳಾಗುತ್ತವೆ ನಾವು ಚಾಟ್ ಮಾಡ್ತಾ ಮಾಡ್ತಾ ಈ ತಂತ್ರಜ್ಞಾನದೊಂದಿಗೆ ಫೀಡ್ಬ್ಯಾಕ್ ಲೂಪ್ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀವಿ ನಮ್ಮ ಮೂರ್ಖತನವನ್ನೇ ಅದು ಮರಳಿ ನಮಗೆ ನೀಡುತ್ತೆ ನಮ್ಮ ಪೂರ್ವಾಗ್ರಹಗಳಿಗೆ ತಕ್ಕಂತೆಯೇ ಅದು ಉತ್ತರಿಸುತ್ತದೆ ಅದು ನಮಗೆ ಇಷ್ಟವಾಗುವಂತೆ ಮಾಡುತ್ತೆ ಅಂದರೆ ಇನ್ನು ಸರಳವಾಗಿ ಹೇಳಬೇಕು ಅಂದ್ರೆ ಒಮ್ಮೊಮ್ಮೆ ನಾವು ಒಂದು ಪ್ರಶ್ನೆ ಹಾಕಿದಾಗ ಅದು ನೇರವಾಗಿ ಸರಿಯಾದ ಉತ್ತರ ಕೊಡುವ ಬದಲು ನಮ್ಮ ಮನಸ್ಸು ಸಂತೋಷಗೊಳಿಸುವ ರೀತಿಯಲ್ಲಿ ಇಲ್ಲದ ಭ್ರಮಾತ್ಮಕ ಪ್ರತಿಕ್ರಿಯೆಯನ್ನ ನೀಡುತ್ತದೆ ಒಟ್ಟನಲ್ಲಿ ಅದರ ಅಂತಿಮ ಇಶಾರೆ ಉಪಯೋಗಿಸುವವನಿಗೆ ಆನಂದದ ತೃಪ್ತಿ ಸಿಗಬೇಕು ಅನ್ನೋದಷ್ಟೇ ಆಗಿರುತ್ತೆ ನಾವು ಕೆಲವುದರ ಬಗ್ಗೆ ಗೈಡೆನ್ಸ್ ಕೇಳಿದಾಗ ಅದು ಸರಿಯಾದ ಮಾರ್ಗದರ್ಶನ ಮಾಡುವ ಬದಲು ನಮಗೆ ಹಿತವೆನಿಸುವ ರೀತಿಯಲ್ಲೇ ಕೆಲವು ಅಸಂಬದ್ಧ ಉತ್ತರಗಳನ್ನ ನೀಡುತ್ತದೆ ನಾವು ಅಂದುಕೊಳ್ಳುತ್ತೇವೆ ಏ ಸತ್ಯವನ್ನೇ ಹೇಳುತ್ತದೆ ಅಂತ ಆದರೆ ಅಪಾಯಕಾರಿ ಅಂಶ ಅಂದ್ರೆ ಅದು ನಾವು ಕೇಳಿಸಿಕೊಳ್ಳಲು ಇಚ್ಛೆ ಪಡುವ ಸಂಗತಿಗಳನ್ನಷ್ಟೇ ಹೇಳುತ್ತದೆ ಆರ ವಿಷಯದಲ್ಲಿ ಆಗಿದ್ದು ಏನಂದ್ರೆ ಆತ ಎಐ ನಿಂದ ಮತ್ತಷ್ಟು ಒಂಟಿತನ ಅನುಭವಿಸಿದನೆ ಹೊರತು ಅದರಿಂದ ಮುಕ್ತಿ ಹೊಂದಲಿಲ್ಲ .
ಎಐ ಕಾರಣದಿಂದ ಪೋಷಕರ ಜೊತೆಯೂ ಕೂಡ ಹೆಚ್ಚು ಬೆರೆಯುತ್ತಿರಲಿಲ್ಲ ಹೊಸ ಗೆಳೆಯರನ್ನ ಮಾಡಿಕೊಳ್ಳಲಿಲ್ಲ ಇನ್ನೊಂದು ಅಪಾಯಕಾರಿ ಅಂಶ ಅಂದರೆ ಕೃತಕ ಬುದ್ಧಿಮತ್ತೆಯಿಂದ ನಿಮಗೆ ಸವಾಲುಗಳು ಬರೋದಿಲ್ಲ ನೀವು ಮಾಡುವುದನ್ನ ಅದು ತಪ್ಪು ಅಂತ ಹೇಳೋದಿಲ್ಲ ಆದರೆ ಗೆಳೆಯರಾದರೆ ಎಚ್ಚರಿಸುತ್ತಾರೆ ಹೊಸತನ್ನ ಸಾಧಿಸಲು ಚಾಲೆಂಜ್ ಹಾಕುತ್ತಾರೆ ಆದರೆ ಇಲ್ಲಿ ಅದುಯಾವುದು ಸಂಭವಿಸುವುದಿಲ್ಲ ಡಿಜಿಟಲ್ ಡಿಪೆಂಡೆನ್ಸಿ ಅನ್ನುವುದು ನಮ್ಮ ಭವಿಷ್ಯವನ್ನ ಪಾತಾಳಕ್ಕೆ ನೂಕುತ್ತದೆ ನಾವೆಲ್ಲಿಗೆ ಬಂದು ನಿಂತಿದ್ದೇವೆ ಅಂದ್ರೆ ಇಂದು ಸಿವಿ ರೆಡಿ ಮಾಡಲು ಹಾಗೂ ಇಮೇಲ್ಗೆ ಪ್ರತಿಕ್ರಿಯೆ ನೀಡಲು ಸಹ ಎಐ ಮೇಲೆ ಅವಲಂಬನೆ ಆಗ್ತಾ ಇದ್ದೀವಿ ಇತೀಶಿಗೆ ಪಾಕಿಸ್ತಾನಲ್ಲಿ ಅಂಕಣಗಾರರೊಬ್ಬರು ಚಾಟ್ ಚಿಪಿಟಿ ಮೂಲಕ ಲೇಖನವನ್ನ ಬರೆಸಿಕೊಂಡು ಅದನ್ನೇ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟಿಸಿದ್ರು ಕನಿಷ್ಠ ಚಾಟ್ ಚಿಪಿಟಿಯ ವಾಟರ್ ಮಾರ್ಕ್ ತೆಗೆಯೋದನ್ನ ಕೂಡ ಮರೆತಿದ್ರು ಅಷ್ಟರ ಮಟ್ಟಿಗೆ ಇಂದು ನಾವೆಲ್ಲ ಎಐ ಮೇಲೆ ಅವಲಂಬನೆಯಾಗಿದ್ದೇವೆ ಇನ್ನು ಎಐನ ಮೂರನೇ ಅಪಾಯದ ಕುರಿತು ಮಾತನಾಡೋಣ ಇದೆ ಇನ್ಫರ್ಮೇಷನ್ ವಾರ್ಫೇರ್ 2022ರ ನವೆಂಬರ್ನಲ್ಲಿ ಜಗತ್ತಿಗೆ ಪರಿಚಯಿಸಲಾದ ಚಾಟ್ ಜಿಪಿಟಿ ಕೇವಲ ಬೆರಳೆನಿಕೆಯಷ್ಟು ದಿನದಲ್ಲಿ ಅಗಾದವಾಗಿ ಬೆಳೆದು ನಿಂತಿದೆ ಈ ಟೂಲ್ ಬಿಡುಗಡೆಯಾದ ದಿನ ಯಾರು ಅಂದುಕೊಂಡಿರಲಿಲ್ಲ ಮುಂದಿನ ಮೂರು ವರ್ಷದಲ್ಲಿ ಇದು ಜಗತ್ತನ್ನೇ ಮಂಗನನ್ನಾಗಿಸುತ್ತದೆ ಅಂತಹ ಹಾಗಿದೆ ಚಾಟ್ ಚಿಪಿಟಿಯ ಬೆಳವಣಿಗೆ ಅಂದಹಾಗೆ 10 ಮಿಲಿಯನ್ ಬಳಕೆದಾರರನ್ನ ತಲುಪಲು Facebook ಬರೊಬ್ಬರಿ ಎರಡು ವರ್ಷ ನಾಲ್ಕು ತಿಂಗಳು ತೆಗೆದುಕೊಂಡಿತ್ತು ಹಾಗೆಇಗ ಒಂದು ವರ್ಷ ತೆಗೆದುಕೊಂಡಿತ್ತು ಇನ್ನು ಇದೇ ಕೆಲಸವನ್ನಟಿಕ್ ಕೇವಲ ಒಂಬತ್ತು ತಿಂಗಳಲ್ಲಿ ಮಾಡಿ ಮುಗಿಸಿತ್ತು ಆದರೆ ಚಾಟ್ ಜಿಪಿಟಿ ಇದೆಲ್ಲವನ್ನ ಮೀರಿ ಕೇವಲ 40 ದಿನದಲ್ಲೇ 10 ಮಿಲಿಯನ್ ಬಳಕೆದಾರರನ್ನ ತನ್ನ ಜೋಳಿಗೆಗೆ ಹಾಕೊಂಡಿತ್ತು ಎಂದು ಚಾಟ್ ಜಿಪಿಟಿಗೆ 100 ಮಿಲಿಯನ್ ಬಳಕೆದಾರರಇದ್ದಾರೆ ಭಾರತದಲ್ಲಂತೂ ಅದು ಅದು ಸಿಕ್ಕವರಿಗೆ ಸೀರುಂಡೆ ಅನ್ನುವ ರೀತಿ ಎಗ್ಗಿಲ್ಲದೆ ಬಳಕೆ ಆಗ್ತಾ ಇದೆ ಬೇರೆಲ್ಲ ದೇಶಗಳಿಗಿಂತ ನಾವು ಎಐ ಯನ್ನ ಬಹುಬೇಗನೆ ಅಪ್ಪಿಕೊಂಡು ಮುದ್ದಾಡುತಾ ಇದ್ದೇವೆ ದುರಂತ ಅಂದರೆ ಮೊದಲು ಸಂದೇಶಗಳ ಹರಿದಾಟವನ್ನೇ ಸತ್ಯ ಅಂದುಕೊಂಡುವಟ್ ಯೂನಿವರ್ಸಿಟಿ ಅಂತ ಹಂಗಿಸುತ್ತಿದ್ದೇವು ಈಗ ನಾವೆಲ್ಲ ಎಐ ಯೂನಿವರ್ಸಿಟಿಗೆ ಸೇರಿದ್ದೇವೆ ಪ್ರತಿಯೊಂದಕ್ಕೂ ಎಐ ಮೇಲೆ ನಮ್ಮ ಅವಲಂಬನೆಯನ್ನ ತೋರಿಸ್ತಾ ಇದ್ದೇವೆ ಇದಿಷ್ಟೇ ಅಲ್ಲ ಇಂದು ಡಿ ಫೇಕ್ ವಿಡಿಯೋಗಳ ಸಹಾಯದಿಂದ ದೇಶ ದೇಶಗಳ ನಡುವೆ ಜಗಳ ಹಚ್ಚುವ ಕಿಚ್ಚು ಎಬ್ಬಿಸುವ ಕೆಲಸವನ್ನ ಸುಲಭವಾಗಿ ಮಾಡಲಾಗ್ತಾ ಇದೆ.


