ಈ ಟಾಟಾ ಗ್ರೂಪ್ಗೆ ಸೇರಿದಂತ ಜುಡಿಯೋ ಕಂಪನಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಇದು ಒಂದು ಸಾಮಾನ್ಯ ಕ್ಲಾತಿಂಗ್ ಬ್ರಾಂಡ್ ವಿಚಿತ್ರ ಅಂದ್ರೆ ಇಲ್ಲಿವರೆಗೂ ಇವರು ಯಾವುದೇ ಮಾರ್ಕೆಟಿಂಗ್ ಅನ್ನ ಮಾಡಿಲ್ಲ ಹಾಗಾದ್ರೆ ಸೆಲೆಬ್ರಿಟಿಗಳು ಪ್ರಚಾರ ಮಾಡಿದ್ದಾರೆ ಅಂದ್ರೆ ಅದು ಕೂಡ ಇಲ್ಲ ಆಸಕ್ತಿದಾಯಕ ವಿಷಯ ಏನು ಅಂದ್ರೆ ಇವರ ಬಳಿ ಸಿಗುವಂತ ಶರ್ಟ್ಗಳು ಟಿ ಶರ್ಟ್ಗಳು ಪ್ಯಾಂಟ್ಗಳು ಜೀನ್ಸ್ ಗಳು ಶೂಗಳು ಖಂಡಿತವಾಗಿಯೂ 990 ಗಿಂತನೂ ಕೂಡ ಕಡಿಮೆ ದರದಲ್ಲಿ ಇರ್ತವೆ ಆದರೆ ಇದು ಹೇಗೆ ಸಾಧ್ಯ ಜುಡಿಯೋದಲ್ಲಿ ಒಂದು ಶರ್ಟ್ನ ಬೆಲೆ ನಿಮಗೆ 200 ರೂಪಾಯಿಂದನು ಶುರುವಾಗುತ್ತೆ ಆದರೆಲಯನ್ಸ್ ನಲ್ಲಿ ಒಂದು ಶರ್ಟ್ ಗೆ 1000 ರೂಪಾಯ ಅಷ್ಟು ಇರುತ್ತೆ ಎಚ್ ಅಂಡ್ ಎಂ ನಲ್ಲಿ 2000 ದಷ್ಟ ಇರುತ್ತೆ ಒಂದು ಶರ್ಟ್ನ ಬೆಲೆ ಪ್ರತಿಯೊಂದು ಸ್ಟೋರ್ ನಲ್ಲೂ ಇಷ್ಟೊಂದು ವ್ಯತ್ಯಾಸ ಇರೋದಕ್ಕೆ ಹೇಗೆ ಸಾಧ್ಯ ಈ ಜುಡಿಯೋದಲ್ಲಿ ಇಷ್ಟು ಕಡಿಮೆ ಬೆಲೆಗೆ ಬಟ್ಟೆಗಳನ್ನ ಮಾರಾಟ ಮಾಡೋದಕ್ಕೆ ಹೇಗೆ ಸಾಧ್ಯ ಆಗುತ್ತೆ ಬೇರೆ ಎಲ್ಲಾ ಕಾಂಪಿಟೇಟರ್ಸ್ ಗಳ ಕಂಪನಿಗಳ ರೀತಿಯಲ್ಲಿ ಈ ಜುಡಿಯೋ ಕೂಡ ಒಂದು ದೊಡ್ಡ ಬ್ರಾಂಡ್ನೆ.
ಈ ಜುಡಿಯೋ ಒಂದು ದೊಡ್ಡ ಶೋರೂಮ್ಗಳು ಇದ್ದಾವೆ ಉಳಿದ ಎಲ್ಲಾ ಶೋರೂಮ್ಗಳ ರೀತಿಯಲ್ಲಿ ಇದು ಕೂಡ ಎಸಿನ ಸೇರಿದಂತೆ ಮತ್ತೆಲ್ಲ ಐಶರಾಮಿ ಸೌಲಭ್ಯಗಳನ್ನು ಕೂಡ ಇದು ಹೊಂದಿದೆ ಅದರ ರೇಟ್ನಲ್ಲಿ ಮಾತ್ರ ಇಷ್ಟೊಂದು ಒಂದು ವ್ಯತ್ಯಾಸ ಯಾಕೆ ಇವರು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡ್ತಿರೋದು ನಿಜ ಆದರೆ ಇವರಿಗೆ ಇದು ಹೇಗೆ ಸಾಧ್ಯ ಇದಕ್ಕೆ ಸ್ಪರ್ಧಿಗಳಾದಂತ ರಿಲಯನ್ಸ್ ಎಚ್ ಅಂಡ್ ಎಂ ಜರ ಸೇರಿದಂತೆ ಇವತ್ತು ಇವರಯಾರು ಕೂಡ ಸಾಧಿಸಲಾಗದನ್ನ ಈ ಜುಡಿಯೋ ಮಾತ್ರ ಸಾಧಿಸ್ತಾ ಇದೆ. ಒಂಬತ್ತು ವರ್ಷಗಳ ಹಿಂದೆ ಒಂದೇ ಒಂದು ಶೋರೂಮ್ ನಿಂದ ಶುರುವಾದಂತ ಈ ಒಂದು ಜುಡಿಯೋ ಕಂಪನಿ ಇವತ್ತು ಸುಮಾರು 700 ಶೋರೂಮ್ ಗಳೊಂದಿಗೆ ವ್ಯವಹಾರವನ್ನ ನಡೆಸ್ತಾ ಇದೆ. ವೀಕ್ಷಕರೇ ಇವರ ವಾರ್ಷಿಕ ಆದಾಯ ಎಷ್ಟು ಗೊತ್ತಾ ಬರೋಬರಿ 8300 ಕೋಟಿ ನಮ್ಮ ದೇಶದಲ್ಲಿ ಜುಡಿಯೋ ಕಂಪನಿಗೆ ಹೆಚ್ ಅಂಡ್ ಎಮ್ ರಿಲಯನ್ಸ್ ಈ ರೀತಿ ಇನ್ನೂ ಕೂಡ ಮುಂತಾದ ಕಾಂಪಿಟೇಟರ್ ಕಂಪನಿಗಳಿವೆ ಆದರೆ ಈ ಎಲ್ಲಾ ಕಂಪನಿಗಳ ಕೈಯಲ್ಲಿ ಮಾಡೋದಕ್ಕೆ ಸಾಧ್ಯ ಆಗದಂತ ಕೆಲಸವನ್ನ ಈ ಜುಡಿಯೊ ಹೇಗೆ ಸಾಧಿಸಿತು.
ಈ ಜುಡಿಯೋದ ಯಶಸ್ಸಿನ ಕಥೆ ಬಹಳ ಕುತೂಹಲಕಾರಿಯಾಗಿದೆ. ವಿಶೇಷವಾಗಿ ಈ ಐದು ಸ್ಟ್ರಾಟಜಿ ಸ್ಟೋರಿಗಳು ಜುಡಿಯೋದ ಯಶಸ್ಸಿಗೆ ಮುಖ್ಯ ಕಾರಣ ಈ ಐದು ಸ್ಟೋರಿಗಳನ್ನ ಒಂದೊಂದಾಗಿ ಈ ಮುಂದೆ ತಿಳಿಯೋಣ ಸ್ಟ್ರಾಟಜಿ ನಂಬರ್ ಒನ್ ವೀಕ್ಷಕರೇ ಒಂಬತ್ತು ವರ್ಷಗಳ ಹಿಂದೆ ಜುಡಿಯೋವನ್ನ ಕೇವಲ ಒಂದು ಶೋರೂಮ್ ನಿಂದ ಶುರು ಮಾಡ್ತಾರೆ ಆದರೆ ಈಗ ಅಂದ್ರೆ ಕೇವಲ ಒಂಬತ್ತು ವರ್ಷಗಳಲ್ಲಿ ಅವರು 700 ಶೋರೂಮ್ಗಳನ್ನ ಹೊಂದಿದ್ದಾರೆ ಅಂದ್ರೆ ಪ್ರತಿ ಐದು ದಿನಕ್ಕೆ ಒಂದು ಸಾರಿ ಒಂದು ಶೋರೂಮ್ ಅನ್ನ ಓಪನ್ ಮಾಡ್ತಿದ್ದಾರೆ ಅಂತ ಆಯ್ತು ಆದರೆ ಇವರು ಹೇಗೆ ಇಷ್ಟು ವೇಗವಾಗಿ ಹೇಗೆ ಇಷ್ಟೊಂದು ಶೋರೂಮ್ಗಳನ್ನ ಓಪನ್ ಮಾಡ್ತಿದ್ದಾರೆ ಅನ್ನೋದು ಎಲ್ಲರಲ್ಲೂ ಕೂಡ ಇರುವಂತ ಸಹಜ ಯೋಚನೆ ಇದನ್ನೆಲ್ಲ ಗಮನಿಸಿದರೆ ಇವರ ಬಳಿ ಸಾಕಷ್ಟು ಹಣ ಇರಬೇಕು ಹೀಗಾಗಿ ಇಷ್ಟೆಲ್ಲಾ ಶೋರೂಮ್ ಗಳನ್ನ ಶುರು ಮಾಡಿದ್ದಾರೆ ಅಂತ ಅನ್ಸುತ್ತೆ ಆದರೆ ವೀಕ್ಷಕರೇ ಈ ಜುಡಿಯೋ ಕಂಪನಿ ಒಂದು ಶೋರೂಮ್ ಲೊಕೇಶನ್ ಆಯ್ಕೆ ಮಾಡೋಕೆ ಖಂಡಿತವಾಗಿ ಈ ಮೂರು ಪ್ರಮುಖ ಅಂಶಗಳನ್ನ ಪಾಲಿಸುತ್ತೆ ಒಂದು ಮೈಕ್ರೋ ಮಾರ್ಕೆಟಿಂಗ್ ಎರಡನೆದು ಬಿಲ್ಡಿಂಗ್ ಸ್ಕೀಮ್ ಮೂರನೆಯದು ವರ್ತ್ ಮೇಕಿಂಗ್ ಮೊದಲಿಗೆ ಈ ಮೈಕ್ರೋ ಮಾರ್ಕೆಟಿಂಗ್ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ ಯಾವುದಾದರೂ ಒಂದು ಏರಿಯಾದಲ್ಲಿ ಶೋರೂಮ್ನ್ನ ತೆರೆಯೋದಿಕ್ಕೆ ಅವರು ಯೋಚಿಸ್ತಾ ಇದ್ದರೆ ಮೊದಲು ಆ ಒಂದು ಪ್ರದೇಶದ ಕುರಿತು ಸಂಪೂರ್ಣವಾದಂತ ವಿಶ್ಲೇಷಣೆಯನ್ನ ಮಾಡ್ತಾರೆ ಜೊತೆಗೆ ಅಲ್ಲಿರುವಂತ ಜನರ ಬಗ್ಗೆ ಕೂಡ ಅಧ್ಯಯನವನ್ನ ಮಾಡ್ತಾರೆ ಉದಾಹರಣೆಗೆ ಅವರು ಎಷ್ಟು ಆದಾಯವನ್ನು ಹೊಂದಿದ್ದಾರೆ ಆ ಒಂದು ಪ್ರದೇಶದ ಪೊಟೆನ್ಶಿಯಲ್ ಎಷ್ಟಿದೆ ಮತ್ತು ಅಲ್ಲಿನ ಜನಸಂಖ್ಯೆ ಹಾಗೂ ಅತ್ಯಂತ ಮುಖ್ಯವಾಗಿ ಪ್ರತಿ 10 ಅಡಿಗೆ ಆ ನಗರದಲ್ಲಿ ಎಷ್ಟು ಜನ ಇರ್ತಾರೆ ಎಂಬುದನ್ನ ಲೆಕ್ಕ ಹಾಕ್ತಾರೆ ಇದನ್ನ ಮೈಕ್ರೋ ಮಾರ್ಕೆಟಿಂಗ್ ಅಂತ ಕರೀತಾರೆ ಇದನ್ನ ಆದನಂತರ ಆ ಸ್ಥಳದ ಬಿಲ್ಡಿಂಗ್ ಸ್ಕೀಮ್ ಅನ್ನ ಪಾಲಿಸುತ್ತಾರೆ.
ಜುಡಿಯೋ ಯಾವಾಗಲೂನು ಒಂದು ನಿಯಮವನ್ನ ಪಾಲಿಸುತ್ತೆ ಅದೇನಪ್ಪಾ ಅಂದ್ರೆ ಕಡಿಮೆ ಮಹಡಿಗಳಲ್ಲಿ ಸರಳ ಸೌಲಭ್ಯದೊಂದಿಗೆ ಶೋರೂಮ್ ಇರಬೇಕು ಅನ್ನೋದು ಉದಾಹರಣೆಗೆ ಐದು ಮಹಡಿಗಳು ಇರುವಂತ ಒಂದು ಕಟ್ಟಡವನ್ನ ತೆಗೆದುಕೊಂಡಿದ್ದಾರೆ ಅಂತ ಅಂದಕೊಳ್ಳಿ ಅಲ್ಲಿ ಅವರು ಗ್ರಾಹಕರಿಗೆ ಒಂದು ಉತ್ತಮ ಅನುಭವ ಕೊಡೋದಕ್ಕೆ ಸಾಧ್ಯ ಇಲ್ಲ ಎಂಬುದು ಈ ಜುಡಿಯೋದ ಅಭಿಪ್ರಾಯ. ಮತ್ತು ವಿಶೇಷವಾಗಿ ಅವರು ಹೂಡಿಕೆ ಮಾಡಿರುವಂತ ಆ ಒಂದು ಲೊಕೇಶನ್ ಒಂದು ಸ್ಕ್ವೇರ್ ಫೀಟ್ ಗೆ ಎಷ್ಟು ಲಾಭ ಬರಬಹುದು ಎಂಬುದನ್ನು ಕೂಡ ಲೆಕ್ಕ ಹಾಕ್ತಾರೆ. ಸಾಮಾನ್ಯವಾಗಿ ಜುಡಿಯೋ ಕಂಪನಿ ಪ್ರತಿ ಸ್ಕ್ವೇರ್ ಫೀಟ್ ಗೆ 12000 ದಷ್ಟು ಆದಾಯವನ್ನ ಜನರೇಟ್ ಮಾಡುತ್ತೆ. ಇನ್ನು ಮೂರನೆಯದು ವರ್ತ್ ಮೇಕಿಂಗ್ ಅಂದ್ರೆ ಅಲ್ಲಿ ಅವರು ಜನರಲ್ ಅನಾಲಿಸಿಸ್ ಅನ್ನ ಮಾಡ್ತಾರೆ. ಅಂದ್ರೆ ಆ ಒಂದು ಪ್ರದೇಶದಲ್ಲಿ ಯಾವುದೇ ಕಾಂಪಿಟೇಟರ್ ಕಂಪನಿಗಳು ಇದೆಯಾ ಮತ್ತೆ ಅವರು ಅಲ್ಲಿ ವ್ಯವಹಾರ ಶುರು ಮಾಡಿದ್ರೆ ದೀರ್ಘಾವಧಿಯಲ್ಲಿ ಎಂತ ಸ್ಕೋಪ್ ಇರುತ್ತೆ ಎಂಬುದನ್ನ ವಿಶ್ಲೇಷಿಸಿ ನಿರ್ಧಾರ ಮಾಡ್ತಾರೆ. ಇದೆಲ್ಲಾ ಆದ ನಂತರ ಶೋರೂಮ್ ಅನ್ನ ಶುರು ಮಾಡ್ತಾರೆ. ಆದರೆ ಇವರು ಟಾರ್ಗೆಟ್ ಮಾಡುವಂತ ಆಡಿಯನ್ಸ್ ಯಾರು ಗೊತ್ತಾ ಇದು ತಿಳಿಬೇಕಾದ್ರೆ ನಾವು ಸ್ಟ್ರಾಟಜಿ ನಂಬರ್ ಟೂ ಗೆ ಹೋಗಬೇಕು. ವೀಕ್ಷಕರೇ ಪ್ರತಿ ಉದ್ಯಮಿ ಕೂಡ ಯಾವುದೋ ಒಂದು ಐಡಿಯಾದೊಂದಿಗೆ ಬರ್ತಾರೆ. ಅದೇ ರೀತಿ ಈ ಜುಡಿಯೋ ಕಂಪನಿ ಕೂಡ ಬಂತು. ಆದರೆ ಇವರ ಸ್ಟ್ರಾಟಜಿನೇ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಮ್ಮ ದೇಶದಲ್ಲಿ ಎರಡು ವರ್ಗದ ಜನರಿದ್ದಾರೆ.
ಒಂದು ರಿಚ್ ಪೀಪಲ್ ಅಂದ್ರೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸ ಇರೋರು ಅಂದ್ರೆ ಬೆಂಗಳೂರು ಮುಂಬೈ ದೆಹಲಿಗಳಲ್ಲಿ ಇರೋರು ಇನ್ನು ಎರಡನೆಯದು ಮಿಡಲ್ ಕ್ಲಾಸ್ ಮತ್ತು ಲೋಯರ್ ಮಿಡಲ್ ಕ್ಲಾಸ್ ಪೀಪಲ್ ಅಂದ್ರೆ ಟೈರ್ ಟು ಟೈರ್ ತ್ರೀ ಟೈರ್ ಫೋರ್ ಸಿಟಿಗಳಲ್ಲಿ ಇರೋರು ಜುಡಿಯೋ ಕಂಪನಿ ವಿಶೇಷವಾಗಿ ಈ ಎರಡನೇ ವರ್ಗದ ಜನರನ್ನ ಟಾರ್ಗೆಟ್ ಮಾಡುತ್ತೆ ಬಹಳಷ್ಟು ಫ್ಯಾಷನ್ ಬ್ರಾಂಡ್ಸ್ ತಮ್ಮ ವ್ಯವಹಾರವನ್ನ ಕೇವಲ ಟೈರ್ ಒನ್ ನಗರಗಳಲ್ಲೇ ನಡೆಸುತ್ತೆ ಅವುಗಳ ಉತ್ಪನ್ನಗಳ ಬೆಲೆಗಳು ಕೂಡ ಹೆಚ್ಚ ಇರುತ್ತವೆ ಹಾಗಾಗಿನೇ ಅವುಗಳ ಮಾರ್ಜಿನ್ಗಳು ಕೂಡ ಹೆಚ್ಚಿರುತ್ತವೆ ಆದರೆ ಈ ಜುಡಿಯೋ ಕಂಪನಿ ಟೈರ್ ಒನ್ ನಗರಗಳ ಗ್ರಾಹಕರನ್ನ ಟಾರ್ಗೆಟ್ ಮಾಡೋದಿಲ್ಲ ಅದರ ಬದಲು ಇವರು ಮಧ್ಯಮ ವರ್ಗದ ಜನರನ್ನ ಟಾರ್ಗೆಟ್ ಮಾಡ್ತಾರೆ ಅಂದ್ರೆ ಇವರೆಲ್ಲ ಟೈರ್ ಟು ತ್ರೀ ಫೋರ್ ನಗರಗಳಲ್ಲಿ ಇರ್ತಾರೆ ಅಂತವರಿಗೆ ಮಾತ್ರ ಇದು ವಿಶೇಷವಾಗಿ ಫೋಕಸ್ ಮಾಡುತ್ತೆ ಮತ್ತೆ ಟೈರ್ ಒನ್ ನಗರಗಳಲ್ಲಿ ಇರುವಂತ ಈ ಫ್ಯಾಶನ್ ಬ್ರಾಂಡಿಂಗ್ ಬಿಸಿನೆಸ್ ಗೆ ಕೇವಲ 23% ಮಾರ್ಕೆಟ್ ಶೇರ್ ಮಾತ್ರ ಇದೆ. ಉಳಿದ 77% ಮಾರ್ಕೆಟ್ ಟೈರ್ 34 ನಗರಗಳಲ್ಲಿ ಇದೆ. ಆದ್ದರಿಂದ ಜುಡಿಯೋ ಕಂಪನಿ ಈ ಒಂದು ಬಹು ದೊಡ್ಡ ಮಾರುಕಟ್ಟೆಯನ್ನ ಗುರಿಯಾಗಿಸಿಕೊಂಡು ತನ್ನ ಬ್ರಾಂಡ್ ಅನ್ನ ಬಲವಾಗಿ ಸ್ಥಾಪಿಸಿದೆ.
ಈ ಜುಡಿಯೋ ಕಂಪನಿ ಒಂದು ನಿಗದಿತ ಗುರಿಯ ಗ್ರಾಹಕರನ್ನ ಮಾತ್ರ ಸೆಳಿಬೇಕು ಅಂತ ನಿರ್ಧರಿಸಿತ್ತು. ಈ ಶ್ರೀಮಂತರಿಗೆ ಬೆಲೆ ಹೆಚ್ಚಿರುವಂತ ಉತ್ಪನ್ನಗಳನ್ನ ಖರೀದಿ ಮಾಡುವಂತ ಆನಂದಿಸುವಂತ ಸಾಮರ್ಥ್ಯ ಇರುತ್ತೆ. ಆದರೆ ನಮ್ಮಂತ ಮಧ್ಯಮ ವರ್ಗದ ಜನರು ಕೂಡ ಫ್ಯಾಷನ್ ಬ್ರಾಂಡ್ ಬಟ್ಟೆಗಳನ್ನು ಧರಿಸಬೇಕು ಅನ್ನುವಂತ ಆಸೆ ಇರುತ್ತಲ್ವಾ ಆದರೆ ಆ ಬೆಲೆಗಳನ್ನ ನೋಡಿದಾಗ ನಾವು ಹಿಂದೆ ಸರಿವಿ ಆದರೆ ಇಂತ ಸಮಯದಲ್ಲೇನೆ ಈ ಜುಡಿಯೋ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇವರು ಕಡಿಮೆ ಬೆಲೆಯಲ್ಲಿ ನಮ್ಮ ಬಜೆಟ್ ಗೆ ತಕ್ಕಂತೆ ಉತ್ತಮವಾದಂತ ಉತ್ಪನ್ನಗಳನ್ನ ಕೊಡೋದಕ್ಕೆ ಶುರು ಮಾಡಿದ್ರು. ಹೀಗಾಗಿ ಜುಡಿಯೋ ಕಂಪನಿ ಒಂದು ನಿಗದಿತ ಟಾರ್ಗೆಟ್ ಆಡಿಯನ್ಸ್ ಅನ್ನ ಗಮನದಲ್ಲಿ ಇಟ್ಟಕೊಂಡು ಆಗಸ್ಟ್ 2016 ರಲ್ಲಿ ಬೆಂಗಳೂರಲ್ಲಿ ತನ್ನ ಮೊದಲ ಶೋರೂಮ್ ಅನ್ನ ಶುರು ಮಾಡ್ತು. ಮತ್ತೆ ಅವರು ಶೋರೂಮ್ ಅನ್ನು ಕೂಡ ತುಂಬಾ ಸರಳವಾಗಿನೇ ಇಡ್ತಾರೆ. ಮತ್ತೆ ಉತ್ಪನ್ನಗಳ ವಿಷಯಕ್ಕೆ ಬಂದರೆ ಟ್ರೆಂಡಿಂಗ್ ಪ್ರೊಡಕ್ಷನ್ ಅನ್ನ ಗ್ರಾಹಕರಿಗೆ ಕೊಡಬೇಕು ಎಂಬುದನ್ನ ಈ ಸ್ಟುಡಿಯೋ ಸದಾ ನೆನಪಲ್ಲಿ ಇಟ್ಕೊಂಡಿರುತ್ತೆ. ಇನ್ನು ಸ್ಟ್ರಾಟಜಿ ನಂಬರ್ ತ್ರೀ ಲೋ ಕಾಸ್ಟ್ ಪರ್ಚೇಸಿಂಗ್ ಅಂದ್ರೆ ಈ ಸ್ಟುಡಿಯೋ ತನ್ನ ಸ್ಟೋರ್ ಗಳಿಗೆ ಬೇಕಾದಂತ ಕ್ಲಾತಿಂಗ್ ಮೆಟೀರಿಯಲ್ ಅನ್ನ ತುಂಬಾ ಕಡಿಮೆ ಬೆಲೆಗೆ ಖರೀದಿ ಮಾಡುತ್ತೆ ಅದನ್ನು ಕೂಡ ಪ್ರೈವೇಟ್ ಲೇಬಲಿಂಗ್ ಮಾಡ್ತಾರೆ ಈ ಪ್ರೈವೇಟ್ ಲೇಬಲಿಂಗ್ ಅಂದ್ರೆ ಕಂಪನಿಯ ಲೇಬೆಲಿಂಗ್ ಅನ್ನ ಶರ್ಟ್ಗಳ ಮೇಲೆ ಅಥವಾ ಬಟ್ಟೆಗಳ ಮೇಲೆ ಹಾಕೋದು ಇದನ್ನೇ ಪ್ರೈವೇಟ್ ಲೇಬೆಲಿಂಗ್ ಅಂತ ಕರೀತಾರೆ ಹೀಗೆ ಜುಡಿಯೋ ಏನ್ ಮಾಡುತ್ತೆ ಅಂದ್ರೆ ಅವರು ಔಟ್ಸೋರ್ಸ್ ಮಾಡಿದಂತ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಂದ ಶರ್ಟ್ಸ್ ಟಿ ಶರ್ಟ್ಸ್ ಜೀನ್ಸ್ ಶೂಗಳು ಹೀಗೆ ಯಾವ ಉತ್ಪನ್ನ ಬೇಕಾದರೂ ತುಂಬಾ ಕಡಿಮೆ ಬೆಲೆಗೆ ಖರೀದಿ ಮಾಡಿ ಆ ಮೆಟೀರಿಯಲ್ಗಳ ಮೇಲೆ ತಮ್ಮದೇ ಆದಂತ ಲೇಬೆಲ್ ಅನ್ನ ಅಂದ್ರೆ ಜುಡಿಯೋ ಬ್ರಾಂಡ್ ಹೆಸರಿನ ಟ್ಯಾಗ್ ಅನ್ನ ಹಾಕ್ತಾರೆ. ಆದರೆ ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ಇವರು ಕೂಡ ಮ್ಯಾನುಫ್ಯಾಕ್ಚರಿಂಗ್ ಅನ್ನ ಮಾಡಿಸ್ತಿದ್ದಾರೆ.
ಲೇಬಲಿಂಗ್ ಅನ್ನು ಕೂಡ ಮಾಡ್ತಿದ್ದಾರೆ. ಹಾಗಿದ್ರೂ ಕೂಡ ಈ ಉತ್ಪನ್ನಗಳು ಇಷ್ಟು ಕಡಿಮೆ ದರದಲ್ಲಿ ಹೇಗೆ ಸಿಗ್ತಿವೆ ಅವರ ಶರ್ಟ್, ಟಿ ಶರ್ಟ್, ಜೀನ್ಸ್ ಗಳು ಹೀಗೆ ಯಾವುದೇ ಉತ್ಪನ್ನ ಆದರೂ ಕೂಡ ಜುಡಿಯೋ ತನ್ನ ಮ್ಯಾನುಫ್ಯಾಕ್ಚರರ್ ಗಳಿಂದ ತುಂಬಾ ಕಡಿಮೆ ಬೆಲೆಗೆ ಪಡೆದುಕೊಳ್ಳುತ್ತೆ. ಆದರೆ ಅವರಿಗೆ ಅಷ್ಟು ಕಡಿಮೆ ದರದಲ್ಲಿ ಹೇಗೆ ಸಿಗುತ್ತೆ ಅಂತ ನೋಡಿದ್ರೆ ಪ್ರತಿ ಫ್ಯಾಷನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಲ್ಲಿ ಒಬ್ಬ ಸಾಮಾನ್ಯ ಡಿಸೈನರ್ ಇರ್ತಾನೆ. ಆ ಡಿಸೈನರ್ ಏನ್ ಮಾಡ್ತಾನೆ ಅಂದ್ರೆ ಅವನು ಕೆಲವೊಂದು ರಿಸರ್ಚ್ ಮಾಡಿ ಯಾವ ಕ್ಲಾತಿಂಗ್ ಪ್ರಾಡಕ್ಟ್ ಗಳು ಚೆನ್ನಾಗಿರ್ತವೆ ಯಾವೆಲ್ಲ ಟ್ರೆಂಡ್ ನಲ್ಲಿ ಇದ್ದವೋ ಅವುಗಳನ್ನ ಡಿಸೈನ್ ಮಾಡಿ ತಯಾರಿಸಿ ಆಮೇಲೆ ಮಾರ್ಕೆಟಿಂಗ್ಗೆ ಲಾಂಚ್ ಮಾಡ್ತಾನೆ ಈ ಒಂದು ಪ್ರಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತೆ ಮತ್ತೆ ಹೆಚ್ಚು ವೆಚ್ಚ ಕೂಡ ಬರುತ್ತೆ ಡಿಸೈನಿಂಗ್ ಮಾದರಿ ತಯಾರಿಕೆ ಪರೀಕ್ಷೆ ಲಾಂಚ್ ಮಾಡೋದು ಪ್ರಚಾರ ಈ ರೀತಿ ಎಲ್ಲವೂ ಕೂಡ ತುಂಬಾ ಸಮಯ ಮತ್ತು ಹಣ ಕೂಡ ತೆಗೆದುಕೊಳ್ಳುತ್ತೆ ಆದರೆ ಜುಡಿಯೋ ಹಾಗಲ್ಲ ಜುಡಿಯೋ ತನ್ನ ಮ್ಯಾನುಫ್ಯಾಕ್ಚರರ್ ಬಳಿಗೆ ನೇರವಾಗಿ ಹೋಗುತ್ತೆ ಅವರು ಈಗಾಗಲೇ ತಯಾರಿಸಿರುವಂತ ಅಥವಾ ಡಿಸೈನ್ ಮಾಡಿರುವಂತ ಟ್ರೆಂಡಿಂಗ್ ಉತ್ಪನ್ನ ಳನ್ನ ಕಾಪಿ ಮಾಡಿ ಸ್ವಲ್ಪ ಕಸ್ಟಮೈಸ್ ಮಾಡಿಸಿ ಲೇಬಲ್ ಅನ್ನ ಹಾಕಿಸಿ ಕಡಿಮೆ ಬೆಲೆಗೆ ತಗೊಂಡು ಬರ್ತಾರೆ ಇದನ್ನೆಲ್ಲ ಬಹಳ ಕಡಿಮೆ ಸಮಯದಲ್ಲಿ ಮಾಡ್ತಾರೆ ಇದರಿಂದ ಮ್ಯಾನುಫ್ಯಾಕ್ಚರಿಂಗ್ ಕಾಸ್ಟ್ ಲೇಬರ್ ಕಾಸ್ಟ್ ಡಿಸೈನ್ ಕಾಸ್ಟ್ ಎಲ್ಲವೂ ಕೂಡ ಕಡಿಮೆ ವೆಚ್ಚದಲ್ಲಿ ಆಗುತ್ತೆ ಬೇರೆ ಕಂಪನಿಗೆ ಹೋಲಿಸಿದರೆ ಜುಡಿಯೋ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡುತ್ತೆ ಈ ರೀತಿ ಇತರ ಬ್ರಾಂಡ್ ಗಳಿಗಿಂತನೂ ಕೂಡ ಕಡಿಮೆ ವೆಚ್ಚದಲ್ಲಿ ಜುಡಿಯೋ ಉತ್ಪನ್ನಗಳನ್ನ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತೆ.
ಈ ಜುಡಿಯೋ ಏನು ಮಾಡುತ್ತೆ ಅಂದ್ರೆ ಪ್ರತಿಯೊಂದು ಪ್ರಾಡಕ್ಟ್ ಗಾಗಿ ವಿಭಿನ್ನ ಮ್ಯಾನುಫ್ಯಾಕ್ಚರರ್ ಗಳನ್ನ ಉಪಯೋಗಿಸಿಕೊಳ್ಳುತ್ತಾರೆ ಉದಾಹರಣೆಗೆ ಟೀ ಶರ್ಟ್ ಶೂ ಜೀನ್ಸ್ ಶಾರ್ಟ್ಸ್ ಈ ರೀತಿ ಪ್ರತಿ ಕ್ಯಾಟಗರಿಗೂನು ಸ್ಪೆಷಲಿಸ್ಟ್ ಮ್ಯಾನುಫ್ಯಾಕ್ಚರರ್ ನ್ನ ಬಳಸಿ ಹೆಚ್ಚು ಕ್ವಾಲಿಟಿ ಕಡಿಮೆ ವೆಚ್ಚ ಮತ್ತು ವೇಗವಾದಂತ ಉತ್ಪಾದನೆಯನ್ನ ಮಾಡಿಸ್ತಾರೆ ಪ್ರತಿ ಉತ್ಪನ್ನಕ್ಕೂನು ಈ ಜುಡಿಯೋಗೆ ಒಂದು ಪ್ರತ್ಯೇಕ ಮ್ಯಾನುಫ್ಯಾಕ್ಚರರ್ ಇರ್ತಾರೆ ಇದರಿಂದ ಯಾವ ಪ್ರಾಡಕ್ಟ್ ಬೇಕಾದರೂ ಕೂಡ ಅತಿ ಕಡಿಮೆ ಸಮಯದಲ್ಲಿ ತಯಾರಿಸಿ ಮಾರಾಟ ಮಾಡಬಹುದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಏನು ಅಂದ್ರೆ ಈ ಜುಡಿಯೋ ತನ್ನ ಸ್ಟೋರ್ಗಳಲ್ಲಿ ಗ್ರಾಹಕರ ವರ್ತನೆಯನ್ನ ಬಹಳ ಅಧ್ಯಯನ ಮಾಡಿ ತಿಳಿದುಕೊಳ್ತಾರೆ ಅವರು ಪ್ರತಿ ಒಂದರಿಂದ ಎರಡು ತಿಂಗಳಲ್ಲಿ ತಮ್ಮ ಸ್ಟೋರ್ಗಳಲ್ಲಿ ಇರುವಂತ ಸ್ಟಾಕ್ ಅನ್ನ ರಿಪ್ಲೇಸ್ ಮಾಡ್ತಾರೆ ಇದನ್ನ ಕೇಳಿದ ತಕ್ಷಣ ನಿಮ್ಮ ಮನಸಲ್ಲಿ ಇನ್ನು ಒಂದು ಪ್ರಶ್ನೆ ಮೂಡಬಹುದು ಆ ಪ್ರಾಡಕ್ಟ್ ಗಳು ಅಲ್ಲೇ ಇದ್ರೂ ಕೂಡ ಗ್ರಾಹಕರು ಇನ್ನೊಂದು ಸಾರಿ ಬಂದು ಖರೀದಿ ಮಾಡ್ತಾರಲ್ವಾ ಅಂತ ಆದರೆ ಇಲ್ಲಿ ಜುಡಿಯೋ ಅದನ್ನ ಎಲಿಮಿನೇಟ್ ಮಾಡುತ್ತೆ ಇದಕ್ಕೆ ನಿಮಗೆ ಒಂದು ಉದಾಹರಣೆಯನ್ನ ಕೊಡ್ತೀನಿ ನೋಡಿ ಒಬ್ಬ ವ್ಯಕ್ತಿ ಜುಡಿಯೋ ಸ್ಟೋರ್ಗೆ ಹೋಗ್ತಾನೆ ಅವನಿಗೆ ಎರಡು ಶರ್ಟ್ಗಳು ಇಷ್ಟ ಆಗ್ತವೆ ಆದರೆ ಆತ ಅವತ್ತು ಕೇವಲ ಒಂದನ್ನ ಮಾತ್ರ ಖರೀದಿ ಮಾಡ್ತಾನೆ ಇನ್ನೊಂದು ಶರ್ಟ್ನ್ನ ಮುಂದಿನ ಸಾರಿ ಬಂದು ತಗೊಳೋಣ ಅಂತ ನಿರ್ಧರಿಸ್ತಾನೆ ಹೇಗಿದ್ರೂ ಆ ಶರ್ಟ್ ಅಲ್ಲೇ ಇರುತ್ತಲ್ವಾ ಅಂತ ಆಲೋಚಿಸ್ತಾನೆ ಆದರೆ ಪ್ರತಿ ಒಂದರಿಂದ ಎರಡು ತಿಂಗಳಲ್ಲಿ ಅವರು ಸ್ಟಾಕ್ ಅನ್ನ ರಿಪ್ಲೇಸ್ ಮಾಡ್ತಾರೆ ಅಂತ ಅಂದಕೊಳ್ಳಿ ಆಗ ಆಗ ಆ ಗ್ರಾಹಕ ಏನ್ ಮಾಡ್ತಾನೆ.
ಒಂದು ಬಟ್ಟೆಯನ್ನ ತೆಗೆದುಕೊಳ್ಳುವಂತ ಜಾಗದಲ್ಲಿ ಆತ ನಾಲ್ಕು ಬಟ್ಟೆಗಳನ್ನ ಖರೀದಿ ಮಾಡ್ತಾನೆ ಈ ರೀತಿ ಅವರು ಕಸ್ಟಮರ್ ಬಿಹೇವಿಯರ್ ಅನ್ನ ಅರ್ಥ ಮಾಡಿಕೊಂಡು ಈ ರೀತಿ ಸ್ಟ್ರಾಟಜಿಯಇಂದ ಬಿಸಿನೆಸ್ ಅನ್ನ ನಡೆಸ್ತಾರೆ ಆದರೆ ಅವರ ನಾಲ್ಕನೇ ಸ್ಟ್ರಾಟಜಿ ನೋಡಿದ್ರೆ ನೀವು ಆಶ್ಚರ್ಯ ಪಡ್ತೀರಾ ಅದೇ ಅವರ ಆಪರೇಟಿಂಗ್ ಮಾರ್ಜಿನ್ ವೀಕ್ಷಕರೇ ಪ್ರತಿ ಕಂಪನಿಯಲ್ಲಿ ಮೂರು ವಿಧದ ಮಾರ್ಕೆಟಿಂಗ್ ಮಾದರಿಗಳು ಇರುತ್ತವೆ ಅದರಲ್ಲಿ ಮೊದಲನೆದು ದಿ ಕೋಕೋ ಅಂದ್ರೆ ಕಂಪನಿ ಓನ್ಡ್ ಕಂಪನಿ ಆಪರೇಟೆಡ್ ಇನ್ನು ಎರಡನ ಎರಡನೆಯದ್ದು ದಿ ಫೋಫೋ ಅಂದ್ರೆ ಫ್ರಾಂಚೈಸಿ ಓನರ್ಡ್ ಫ್ರಾಂಚೈಸಿ ಆಪರೇಟೆಡ್ ಇನ್ನು ಮೂರನೆಯದ್ದು ಫೋಫೋ ಅಂದ್ರೆ ಫ್ರಾಂಚೈಸಿ ಓನಡ್ ಕಂಪನಿ ಆಪರೇಟೆಡ್ ಇದನ್ನೇ ಈ ಜುಡಿಯೋ ಫಾಲೋ ಮಾಡುತ್ತೆ ಒಂದು ಫ್ರಾಂಚೈಸಿ ಅಂದ್ರೆ ತೃತೀಯ ವ್ಯಕ್ತಿಯೊಬ್ಬ ಅಂದ್ರೆ ಥರ್ಡ್ ಪಾರ್ಟಿ ಪರ್ಸನ್ ಯಾರಾದ್ರೂ ಅವರು ಈ ಜುಡಿಯೋ ಸ್ಟೋರ್ ಅನ್ನ ಓನ್ ಮಾಡ್ತಾರೆ ಆದ್ರೆ ಅದನ್ನ ಆಪರೇಟ್ ಮಾಡೋದು ಮಾತ್ರ ಜುಡಿಯೋ ಕಂಪನಿ ಅರ್ಥ ಆಗುವಂತ ರೀತಿಯಲ್ಲಿ ಹೇಳ್ಬೇಕು ಅಂದ್ರೆ ಈ ಜುಡಿಯೋ ಸ್ಟೋರ್ ನ್ನ ತೆಗೆಯುವಂತ ಮೊದಲು ಈ ಜುಡಿಯೋ ಕಂಪನಿ ಒಂದು ಫ್ರಾಂಚೈಸ್ ಪಾರ್ಟ್ನರ್ ಅನ್ನ ಹುಡುಕುತ್ತೆ ಆ ಪಾರ್ಟ್ನರ್ ಸಿಕ್ದಾಗ ಅವರು ಏನು ಹೇಳ್ತಾರೆ ಅಂದ್ರೆ ಮೊದಲು ನೀವೇ ಈ ಒಂದು ಸ್ಟೋರ್ ಗಾಗಿ ಹೊಡಿಕೆಯನ್ನ ಮಾಡಬೇಕು ಉದಾಹರಣೆಗೆ ಆ ಸ್ಟೋರ್ 6000 ಸ್ಕ್ವೇರ್ ಫೀಟ್ ಇದೆ ಅಂತ ಅಂದುಕೊಳ್ಳಿ ಅದಕ್ಕಾಗಿ ಸುಮಾರು ಒಂದೂವರೆ ಕೋಟಿಯಿಂದ ಎರಡು ಕೋಟಿವರೆಗೂ ವೆಚ್ಚ ಆಗಬಹುದು. ಆ ಫ್ರಾಂಚೈಸಿ ಪಾರ್ಟ್ನರ್ ಇಷ್ಟು ಹಣವನ್ನ ಆ ಸ್ಟೋರ್ಗಾಗಿ ಹೋಡಿಕೆ ಮಾಡ್ತಾನೆ. ಹುಡಿಕೆಯನ್ನ ಮಾಡಿದ ನಂತಂದ್ರ ಈ ಜುಡಿಯೋ ಕಂಪನಿ ಅವನಿಗೆ ಏನಪ್ಪಾ ಹೇಳುತ್ತೆ ಅಂದ್ರೆ ನಿನ್ನ ಕೆಲಸ ಇಲ್ಲಿಗೆ ಮುಗಿಯುತ್ತೆ ನೀನು ಪಕ್ಕಕ್ಕೆ ಹೋಗು ಅಂತ ಹೇಳುತ್ತೆ ನಂತರ ಆ ಸಂಪೂರ್ಣ ಸ್ಟೋರ್ನ್ನ ನಡೆಸುವಂತ ಜವಾಬ್ದಾರಿಯನ್ನ ಜುಡಿಯೋ ಕಂಪನಿ ತೆಗೆದುಕೊಳ್ಳುತ್ತೆ ನಂತರ ಎಕ್ವಿಪ್ಮೆಂಟ್ ಗಳನ್ನ ತಂದು ಅವರ ಸ್ಟಾಕ್ ಎಲ್ಲವನ್ನು ಕೂಡ ಅಲ್ಲಿ ಪ್ಲೇಸ್ ಮಾಡಿ.
ಜುಡಿಯೋ ಕಂಪನಿ ಆ ಒಂದು ಸ್ಟೋರ್ನಲ್ಲಿ ವ್ಯವಹಾರ ಮಾಡುತ್ತೆ ಇಲ್ಲಿ ಆ ಪಾರ್ಟ್ನರ್ ಇದ್ದಾರಲ್ಲ ಅಂದ್ರೆ ಆ ಬ್ರಾಂಚಸ್ ಇದ್ದಾರಲ್ಲ ಅವರೇ ಓನರ್ ಆದರೆ ಇದನ್ನೆಲ್ಲ ಆಪರೇಟ್ ಮಾಡೋದು ಮಾತ್ರ ಈ ಜುಡಿಯೋ ಕಂಪನಿ ಅಂದ್ರೆ ಇದನ್ನೇ ಪ್ರೋಫೋ ಅಂತ ಕರೀತಾರೆ. ಅಂದ್ರೆ ಫ್ರಾಂಚೈಸಿ ಓನಡು ಕಂಪನಿ ಆಪರೇಟೆಡ್ ಅಂತ ಇದರಿಂದ ಕಂಪನಿಗೆ ಏನಪ್ಪಾ ಲಾಭ ಅಂದ್ರೆ ಈ ಒಂದು ಮಾದರಿಯಿಂದ ಜುಡಿಯೋ ಕಂಪನಿಗೆ ರೆಂಟ್ ಕಟ್ಟಬೇಕಾಗಿರೋದಿಲ್ಲ. ಅವರು ಕೇವಲ ತಮ್ಮ ನೌಕರರ ವೇತನ ಮತ್ತು ಇತರ ಚಿಕ್ಕ ಪುಟ್ಟ ಆಪರೇಟಿಂಗ್ ವೆಚ್ಚಗಳನ್ನ ಮಾತ್ರ ನೋಡ್ಕೊಳ್ತಾರೆ. ಈಗ ಆ ಪಾರ್ಟ್ನರ್ ಗೆ ಏನಪ್ಪಾ ಲಾಭ ಅಂದ್ರೆ ಆ ಒಂದು ಸ್ಟೋರ್ ನಲ್ಲಿ ಬರ್ತಿರುವಂತ ಪ್ರತಿ ಆದಾಯದ ಮೇಲೆ ಆತನಿಗೆ ಪರ್ಸೆಂಟೇಜ್ ಇನ್ಕಮ್ ಖಚಿತವಾಗಿ ಸಿಗುತ್ತೆ. ಹೂಡಿಕೆ ಮಾಡಿದಂತಹ ವ್ಯಕ್ತಿ ಆ ಸ್ಟೋರ್ ನಲ್ಲಿ ಹೆಚ್ಚು ಆದಾಯ ಉಂಟಾದ್ರೆ ಅವನಿಗೆ ಹೆಚ್ಚು ಲಾಭ ಬರುತ್ತೆ. ಇಷ್ಟು ಆದಾಯ ಉತ್ಪಾದನೆ ಆಗ್ತಿದೆ ಅಂದ್ರೆ ಆ ಜುಡಿಯೋ ಕಂಪನಿನೇ ಕಂಪನಿ ಓಲ್ಡ್ ಕಂಪನಿ ಆಪರೇಟ್ ಮಾಡಬಹುದಿದ್ದಾನ ಅಂತ ನೀವು ಕೇಳಬಹುದು. ಆದರೆ ನಾನು ನಿಮಗೆ ವಿಡಿಯೋದ ಶುರುನಲ್ಲೇ ಹೇಳಿದ್ದೆ ಪ್ರತಿ ಐದು ದಿನಕ್ಕೊಮ್ಮೆ ಜುಡಿಯೋ ಕಂಪನಿ ಒಂದು ಸ್ಟೋರ್ ಅನ್ನ ಓಪನ್ ಮಾಡ್ತಿದೆ ಅಂತ ಇಷ್ಟು ವೇಗವಾಗಿ ಒಂದು ಕಂಪನಿ ಬೆಳೆದು ನಿರಂತರವಾಗಿ ಹೆಚ್ಚು ಆದಾಯವನ್ನ ಪಡೆಯೋದು ಇಂತ ಸ್ಟ್ರಾಟಜಿಗಳನ್ನ ಉಪಯೋಗಿಸಿದಾಗ ಮಾತ್ರನೇ ಸಾಧ್ಯ ಆಗೋದು ಹೀಗಾಗಿ 2016 ರಲ್ಲಿ ಕೇವಲ ಒಂದು ಸ್ಟೋರ್ ಿಂದ ಶುರುವಾದಂತ ಈ ಒಂದು ಜುಡಿಯೋ ಕಂಪನಿ 2017 ರಲ್ಲಿ 10 ಸ್ಟೋರ್ 2018ರಲ್ಲಿ 20 ಸ್ಟೋರ್ 2019 ರಲ್ಲಿ 50 ಸ್ಟೋರ್ 2020ರಲ್ಲಿ 90 ಸ್ಟೋರ್ಗೆ ಹೆಚ್ಚಳಾಗಿದ್ದು 2021ರಲ್ಲಿ ಕೋವಿಡ್ ಇದ್ದಂತ ಕಾರಣ ಯಾವುದೇ ಹೊಸ ಸ್ಟೋರ್ಗಳು ಶುರುವಾಗಲಿಲ್ಲ ಆದ್ದರಿಂದ ಆ ವರ್ಷದಲ್ಲಿ 90 ಸ್ಟೋರ್ಗಳು ಅಷ್ಟೇ ಇದ್ದವು ಆದರೆ 2022 ರಲ್ಲಿ ಹಿಂದಿನ 90 ಸ್ಟೋರ್ ಗಳಿದ್ದಂತ ಒಂದೇ ಸಾರಿ ಅದು 168 ಸ್ಟೋರ್ಗಳಿಗೆ ಜಿಗಿತ ಕಾಣ್ತು 2023 ರಲ್ಲಿ 350 ಸ್ಟೋರ್ಗಳು 2024 ರಲ್ಲಿ 545 ಸ್ಟೋರ್ಗಳು ಮತ್ತೆ ಅಂತಿಮವಾಗಿ 2025ರಲ್ಲಿ 675 ರಿಂದ 700 ಸ್ಟೋರ್ಗಳ ನಡುವೆ ಜುಡಿಯೋ ಕಂಪನಿ ಬೆಳೆದಿದೆ ಹೀಗೆ ನಿಖರವಾದಂತ ಸಂಖ್ಯೆ ಹೇಳೋದು ಕಷ್ಟ.
ಪ್ರತಿ ಐದು ದಿವಸಕ್ಕೊಮ್ಮೆ ಒಂದು ಹೊಸ ಸ್ಟೋರ್ ಓಪನ್ ಆಗ್ತಾನೆ ಇದೆ. ಇನ್ನು ಇದರ ಐದನೇ ಸ್ಟ್ರಾಟಜಿ ಏನು ಗೊತ್ತಾ ಈ ಜುಡಿಯೋ ಕಂಪನಿಗೆ ಮಾರ್ಕೆಟಿಂಗ್ ಆಗಿ ಯಾವುದೇ ಖರ್ಚು ಇರೋದಿಲ್ಲ. ಉದಾಹರಣೆಗೆ ಅಂಡ್ಎಂ ರಿಲಯನ್ಸ್ ಮ್ಯಾಕ್ಸ್ ಇಂತ ಯಾವುದೇ ಫ್ಯಾಶನ್ ಬ್ಯಾಂಡ್ ಗಳನ್ನ ತೆಗೆದುಕೊಂಡರು ಕೂಡ ಅವರು ಯಾವುದಾದರೂ ಒಂದು ಹೊಸ ಪ್ರಾಡಕ್ಟ್ ಅನ್ನ ಲಾಂಚ್ ಮಾಡಿದ್ರೆ ಅದನ್ನ ಟಿವಿಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಜಾಹಿರಾತ್ ಕೊಡ್ತಾರೆ. ಮತ್ತೆ ಸೆಲೆಬ್ರಿಟಿಗಳನ್ನ ಕರಿಸಿ ಪ್ರಾಡಕ್ಟ್ ಅನ್ನ ಪ್ರಮೋಟ್ ಮಾಡಿಸ್ತಾರೆ. ಇನ್ನು ಕೆಲವರು ಕ್ರಿಯೇಟ್ ಆಟಗಾರರನ್ನ ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ತಾರೆ. ಆದರೆ ಜುಡಿಯೋ ಕಂಪನಿಗೆ ಯಾವುದೇ ಟಿವಿ ಪ್ರಮೋಷನ್ ಇಲ್ಲ. ಸೆಲೆಬ್ರಿಟಿಗಳು ಕೂಡ ಇಲ್ಲ ಕ್ರಿಕೆಟಿಗರು ಕೂಡ ಇಲ್ಲ ಅದಕ್ಕಿಂತ ಮುಖ್ಯವಾಗಿ ಅವರ ಸ್ಟೋರ್ ಔಟ್ಲೆಟ್ ಗಳಿಗೆ ಇನ್ವೆಸ್ಟ್ಮೆಂಟ್ ಕೂಡ ಇಲ್ಲ ಮತ್ತೆ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗಳು ಕೂಡ ಇಲ್ಲ ಇದು ಯಾವುದು ಕೂಡ ಇಲ್ಲದೆ ಇದ್ರೂ ಈ ಜುಡಿಯೋ ಕಂಪನಿಯ ವ್ಯಾಲ್ಯೂ ಮಾತ್ರ ಬಹಳ ಜಾಸ್ತಿ ಇದೆ ಆದ್ದರಿಂದ ಅವರು ಎಲ್ಲೆಲ್ಲಿ ಸಾಧ್ಯನೋ ಅಲ್ಲಿ ಖರ್ಚನ್ನ ಕಡಿಮೆ ಮಾಡ್ತಿದ್ದಾರೆ ಅವರ ಪಾಲಿಸಿ ಒಂದೇನೆ ಒಂದು ಉತ್ತಮ ಉತ್ಪನ್ನವನ್ನ ಕಡಿಮೆ ಬೆಲೆಯಲ್ಲಿ ಕೊಟ್ಟರೆ ಹೆಚ್ಚು ವ್ಯಾಲ್ಯೂ ಬೆಳೆಯುತ್ತೆ ಮತ್ತೆ ಕಡಿಮೆ ರೇಟಲ್ಲಿ ಉತ್ತಮ ಪ್ರಾಡಕ್ಟ್ನ್ನ ಕೊಡೋದ್ರಿಂದ ಒಬ್ಬ ಗ್ರಾಹಕ ತಾನೇನೇ ಬೇರೆಯವರಿಗೆ ಮೌತ್ ಪಬ್ಲಿಸಿಟಿಯನ್ನ ಕೊಡ್ತಾನೆ ಇವರ ಇವರ ಮಾರ್ಕೆಟಿಂಗ್ ಒಂದು ಆಟೋಮೆಟಿಕ್ ಆಗಿ ಒಂದು ರೂಪಾಯಿ ಕೂಡ ಖರ್ಚಿಲ್ಲದೆ ಉಚಿತವಾಗಿನೇ ನಡೀತಾ ಇದೆ.


